ಸಮಂತಾ ಫಿಟ್ ಆಗಿರಲು ಇದೇ ಕಾರಣ; ಈ ಟಿಪ್ಸ್ ಅನುಸರಿಸಿ

ಸಮಂತಾ ಮೊದಲಿನಷ್ಟು ವೇಗವಾಗಿ ಸಿನಿಮಾ ಮಾಡುತ್ತಿಲ್ಲವಾದರೂ ಅವರ ಬಗೆಗಿನ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಅವರು ಸುಮಾರು 16 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಚಲನಚಿತ್ರಗಳ ಜೊತೆಗೆ, ಮೊದಲಿನಿಂದಲೂ ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ, ಮೈಯೋಸಿಟಿಸ್ ಇರುವುದು ಪತ್ತೆಯಾದ ನಂತರ, ಅವರು ಫಿಟ್‌ನೆಸ್ ಅನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಲ್ಲದೆ, ಸ್ವತಃ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದರು.

ಸಮಂತಾ ಅವರು ಪಾಡ್‌ಕ್ಯಾಸ್ಟ್‌ಗಳನ್ನು ಮಾಡುತ್ತಿದ್ದಾರೆ. ಅವರು ಇತರ ಜನರ ಪಾಡ್‌ಕ್ಯಾಸ್ಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಫಿಟ್‌ನೆಸ್‌ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈಗ ಸಮಂತಾ ಫಿಟ್ ಆಗಿರಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಮಾಡುವ ಎಂಟು ಕೆಲಸಗಳನ್ನು ವಿವರಿಸಿದ್ದಾರೆ. ಸ್ಯಾಮ್ ‘ಪವರ್ ಮಾರ್ನಿಂಗ್’ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಪ್ರತಿದಿನ ಮಾಡುವ ಎಂಟು ಕೆಲಸಗಳು

  1. ಬೆಳಿಗ್ಗೆ ಎದ್ದ ನಂತರ ಮೊದಲ ಒಂದು ಗಂಟೆ ಮೊಬೈಲ್ ಫೋನ್, ಇಮೇಲ್ ಅಥವಾ ಸುದ್ದಿಗಳಿಂದ ದೂರವಿರಿ. ಇದು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
  2. ಎಚ್ಚರವಾದ ನಂತರ, ಕನಿಷ್ಠ ಐದು ನಿಮಿಷಗಳ ಕಾಲ ಶಾಂತವಾಗಿ ಕುಳಿತು ಆಳವಾಗಿ ಉಸಿರಾಡಿ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ದೇಹವು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.
  3. ಬೆಳಿಗ್ಗೆ ಎದ್ದ 10 ನಿಮಿಷಗಳ ಒಳಗೆ ನಿಮ್ಮ ಮುಖವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ. ಇದು ದೇಹಕ್ಕೆ ಹಲವು ಪ್ರಯೋಜನಗಳನ್ನು ಹೊಂದಿದೆ.
  4. ಬೆಳಿಗ್ಗೆ ಎದ್ದು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ, ಅರಿಶಿನ, ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿ ಕುಡಿಯಿರಿ. ಇದು ದೇಹದಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.
  5. ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವ ಉಪಾಹಾರ ಸೇವಿಸಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಇದು ಜಂಕ್ ಫುಡ್‌ನ ಹಂಬಲವನ್ನು ಕಡಿಮೆ ಮಾಡುತ್ತದೆ. ಜಂಕ್ ಫುಡ್ ಅನ್ನು ಎಂದಿಗೂ ತಿನ್ನಬೇಡಿ ಎಂಬುದು ಸಮಂತಾ ಅವರ ಮನವಿ.
  6. ಬೆಳಿಗ್ಗೆ 11 ಗಂಟೆಯೊಳಗೆ ನಿಮ್ಮ ವ್ಯಾಯಾಮಗಳನ್ನು ಪೂರ್ಣಗೊಳಿಸಿ. ಇವು ನಿಮ್ಮ ದೇಹವನ್ನು ಫಿಟ್ ಆಗಿ ಇಡುತ್ತವೆ. ಸಮಂತಾ ಪ್ರತಿದಿನ ಎರಡು ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಾರೆ.
  7. ಬೆಳಗಿನ ಉಪಾಹಾರದ ನಂತರವೇ ಕಾಫಿ ಅಥವಾ ಟೀ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದನ್ನು ತಪ್ಪಿಸಿ. ಆ ದಿನ ನೀವು ಪೂರ್ಣಗೊಳಿಸಬೇಕಾದ ಕೆಲಸಗಳನ್ನು ಮೊದಲೇ ನಿರ್ಧರಿಸಿ ಬರೆಯಿರಿ. ಇದು ನಿಮ್ಮ ಮನಸ್ಸನ್ನು ಅನಗತ್ಯ ವಿಷಯಗಳಿಗೆ ಅಲೆದಾಡದಂತೆ ತಡೆಯುತ್ತದೆ ಮತ್ತು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  8. ಕನಿಷ್ಠ 21 ದಿನಗಳ ಕಾಲ ನಿಯಮಿತವಾಗಿ ಈ ವಿಧಾನಗಳನ್ನು ಅನುಸರಿಸಲು ಸಮಂತಾ ಸಲಹೆ ನೀಡುತ್ತಾರೆ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ನಿಮ್ಮ ಮಾನಸಿಕ ಆರೋಗ್ಯ ಮತ್ತು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಎಂದು ಅವರು ಹೇಳುತ್ತಾರೆ.ಗಮನಿಸಿ : ಇದು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಕಂಪನಿಯು ಇದಕ್ಕೆ ಜವಾಬ್ದಾರನಾಗಿರುವುದಿಲ್ಲ. ಈ ಲೇಖನದ ವಿಷಯವು ಆರೋಗ್ಯ ತಜ್ಞರ ಸಲಹೆ ಮತ್ತು ಲಭ್ಯವಿರುವ ಸಂಶೋಧನೆಯನ್ನು ಆಧರಿಸಿದೆ. ಆರೋಗ್ಯ ಕಾಳಜಿ ಇರುವವರು ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಟರ್ಕಿಯ ಹೈಸ್ಕೂಲ್ ಒಳಗೆ ಗುಂಡಿನ ದಾಳಿ, 16 ಮಂದಿಗೆ ಗಂಭೀರ ಗಾಯ, ಶಾಲಾ ಅಂಗಳದಲ್ಲೇ ದಾಳಿಕೋರ ಆತ್ಮಹತ್ಯೆ – Kannada News | Gunman opens fire at high school in S. Türkiye, injures 16

ಟರ್ಕಿ, ಏಪ್ರಿಲ್ 15: ಆಗ್ನೇಯ ಟರ್ಕಿಯ ಶಾನ್ಲಿಯುರ್ಫಾ ಪ್ರಾಂತ್ಯದ ಪ್ರೌಢಶಾಲೆಯೊಂದು ಮಂಗಳವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಉದ್ದನೆಯ ಬ್ಯಾರೆಲ್ ಆಯುಧ ಹಿಡಿದು ಶಾಲೆಗೆ ನುಗ್ಗಿದ ಯುವಕನೊಬ್ಬ ನಡೆಸಿದ ಮನಬಂದಂತೆ ಗುಂಡಿನ ದಾಳಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಜನರು ಗಾಯಗೊಂಡಿದ್ದಾರೆ. ಸಿವೆರೆಕ್ ಜಿಲ್ಲೆಯ ಅಹ್ಮೆತ್ ಕೊಯುಂಕು ವೃತ್ತಿಪರ ಮತ್ತು ತಾಂತ್ರಿಕ ಅನಟೋಲಿಯನ್ ಪ್ರೌಢಶಾಲೆಯಲ್ಲಿ ಬೆಳಗ್ಗೆ ತರಗತಿಗಳು ಆರಂಭವಾಗುವ ಹೊತ್ತಿಗೆ ಈ ಘಟನೆ ನಡೆದಿದೆ.

ಸುಮಾರು 17-18 ವರ್ಷದ ಅಪರಿಚಿತ ಯುವಕನೊಬ್ಬ ಮಾರಕಾಸ್ತ್ರದೊಂದಿಗೆ ಶಾಲಾ ಆವರಣಕ್ಕೆ ನುಗ್ಗಿದ್ದಾನೆ. ಮೊದಲು ಅಂಗಳದಲ್ಲಿ ಯಾದೃಚ್ಛಿಕವಾಗಿ ಗುಂಡು ಹಾರಿಸಿದ ಆತ, ನಂತರ ಕಿರುಚುತ್ತಾ ಶಾಲಾ ಕಟ್ಟಡದೊಳಗೆ ನುಗ್ಗಿದ್ದಾನೆ. ಇದರಿಂದ ಭಯಭೀತರಾದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ದಾಳಿಕೋರ ಯುವಕ ತನ್ನ ಆಯುಧದಿಂದ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗವರ್ನರ್ ದೃಢಪಡಿಸಿದ್ದಾರೆ. ಸಣ್ಣ ವಯಸ್ಸಿನ ಹುಡುಗ ಇಂಥಾ ದೊಡ್ಡ ದಾಳಿ ನಡೆಸಿದ್ದೇಕೆ, ಆಯುದ್ಧ ಸಿಕ್ಕಿದ್ದೆಲ್ಲಿಂದ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ರಣ್​​ಬೀರ್ ಕಪೂರ್ ಜೊತೆ ನಟನೆ, ಯಶ್ ಹೇಳಿದ್ದೇನು? – Kannada News | Yash talks about chemistry with Ranbir Kapoor in Ramayana movie

ರಾಮಾಯಣ’ (Ramayana) ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್​​ನ ಸಿನಿಮಾ ಎನಿಸಿಕೊಂಡಿದ್ದು. ವಿಶ್ವ ಚಿತ್ರರಂಗಕ್ಕಾಗಿ ಭಾರತದಿಂದ ನಿರ್ಮಾಣ ಆಗಿರುವ ಸಿನಿಮಾ ಇದಾಗಿದೆ. ಸಿನಿಮಾವನ್ನು ಭಾರತದಲ್ಲಿ ಮಾತ್ರವಲ್ಲದೆ ಹಾಲಿವುಡ್​​ನಲ್ಲೂ ಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ನಟ ಯಶ್ ಅವರು ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026 ನಲ್ಲಿ ಭಾಗಿ ಆಗಿದ್ದರು. ಅಲ್ಲಿ ಹಾಲಿವುಡ್ ಟಿವಿ ಒಂದಕ್ಕೆ ಸಂದರ್ಶನ ನೀಡಿರುವ ನಟ ಯಶ್ ಅವರು, ‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.

‘ಆಸಕ್ತಿಕರ ವಿಷಯವೆಂದರೆ ಈ ಸಿನಿಮಾನಲ್ಲಿ ನಾನು ಹಾಗೂ ರಣ್​​ಬೀರ್ ಕಪೂರ್ ತೆರೆಯ ಮೇಲೆ ಎದುರಾಗುವುದೇ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಇದು ಎರಡು ಪಾರ್ಟ್​​ಗಳಲ್ಲಿ ಬರಲಿರುವ ಸಿನಿಮಾ. ಮೊದಲ ಭಾಗದಲ್ಲಿ ‘ರಾವಣ’ನಾನಿ ನನಗೆ ಪ್ರತ್ಯೇಕ ಸಾಮ್ರಾಜ್ಯ ಇರುತ್ತದೆ, ರಾಮನಿಗೆ ಪ್ರತ್ಯೇಕ ಸಾಮ್ರಾಜ್ಯ ಇರುತ್ತದೆ. ಆದರೆ ಕತೆ ಮುಂದುವರೆದಂತೆ ಪರಿಸ್ಥಿತಿಗಳು ನಮ್ಮಿಬ್ಬರನ್ನು ಎದುರು-ಬದುರು ಮಾಡುತ್ತವೆ’ ಎಂದಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು

‘ರಣ್​​ಬೀರ್ ಕಪೂರ್ ಹಾಗೂ ನಾನು ಹಲವು ಭಾರಿ ಭೇಟಿ ಆಗಿದ್ದೇವೆ. ಅವರು ಅದ್ಭುತ ನಟ, ಇಬ್ಬರ ನಡುವೆ ಪರಸ್ಪರರ ಬಗ್ಗೆ ಇರುವ ಗೌರವ, ಪ್ರೀತಿ ನಮ್ಮ ಕೆಲಸವನ್ನು ಹೆಚ್ಚು ಸುಲಭ ಮಾಡಿದೆ. ನಾವು ‘ರಾಮಾಯಣ’ದಂಥಹಾ ಒಂದು ಅದ್ಭುತವನ್ನು ಸೃಷ್ಟಿ ಮಾಡುವಾಗ ಎಲ್ಲ ಗಮನ ಅದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಎಲ್ಲರಿಗೂ ಸಹ ಒಂದೇ ಗುರಿ ಇದ್ದಿದ್ದು, ನಾವು ಅದ್ಭುತವಾಗಿ ‘ರಾಮಾಯಣ’ ಮಾಡಬೇಕು ಎಂಬುದು. ನಮ್ಮ ಅತ್ಯುತ್ತಮವಾದುದನ್ನು ಈ ಸಿನಿಮಾಕ್ಕೆ ನೀಡಬೇಕು ಎಂಬುದು ನಮ್ಮ ಗುರಿ ಆಗಿತ್ತು. ನಮ್ಮ ಎಲ್ಲರ ದೃಷ್ಟಿಕೋನಗಳು ಒಟ್ಟಿಗೆ ಬೆರೆತು ಈಗ ‘ರಾಮಾಯಣ’ ಸಿನಿಮಾ ನಾವಂದುಕೊಂಡಂತೆ ಅದ್ಭುತವಾಗಿ ರೆಡಿಯಾಗಿದೆ. ಇಬ್ಬರ ನಡುವಿನ ಕೆಮಿಸ್ಟ್ರಿ ದೊಡ್ಡ ಪ್ರಶ್ನೆಯೇ ಆಗಲಿಲ್ಲ, ಏಕೆಂದರೆ ಸಿನಿಮಾ ನಿರ್ಮಾಣದ ಪ್ರತಿ ಹಂತವನ್ನೂ ನಾವು ಎಂಜಾಯ್ ಮಾಡಿದ್ದೇವೆ’ ಎಂದಿದ್ದಾರೆ ಯಶ್.

‘ರಾಮಾಯಣ’ ಸಿನಿಮಾನಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು, ಅವರ ಜೊತೆಗೆ ಯಶ್ ಅವರು ಸಹ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಯಚೂರು, ಕೊಪ್ಪಳ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಾಯ್ತು ಬಿಸಿಲ ಧಗೆ! 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Karnataka Weather Forecast: Heat wave alert all over Karnataka, Yellow alert for 9 districts

ರಾಯಚೂರು, ಕೊಪ್ಪಳ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಾಯ್ತು ಬಿಸಿಲ ಧಗೆ!

ಬೆಂಗಳೂರು, ಏಪ್ರಿಲ್ 15: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ ಶುಷ್ಕ  (Weather Forecast) ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯ ಜೊತೆಗೆ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಒಟ್ಟಾರೆ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ಯಾದಗಿರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣ ಅಲೆ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

ಎಲ್ಲೆಲ್ಲಿ ಹೀಟ್​ ವೇವ್, ಒಣ ಹವೆ?

ಕರಾವಳಿಯಲ್ಲಿಂದು ಬಿಸಿ ವಾತಾವರಣದ ಜೊತೆ ಒಣ ಹವೆಯೂ ಇರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: SRH ತಂಡಕ್ಕೆ ಎಡಗೈ ವೇಗಿ ಎಂಟ್ರಿ..!

Source link

Karnataka SSLC Results: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಇಂದು ಬರುತ್ತಾ? ವಿದ್ಯಾರ್ಥಿಗಳಿಗೆ KSEAB ಹೇಳಿದ್ದೇನು? – Kannada News | Karnataka SSLC Results 2026: Official Update and Expected Release Date

ಬೆಂಗಳೂರು, ಏ.15: ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಮಂಡಳಿ ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಇಂದು ಫಲಿತಾಂಶ ಪ್ರಕಟ ಮಾಡಲ್ಲ ಎಂದು ಮಂಡಳಿ ಹೇಳಿದೆ. ಇನ್ನು ಫಲಿತಾಂಶ ತಯಾರಿಗಳು ನಡೆಯುತ್ತಿದೆ ಎಂದು ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಬಿಡುತ್ತಿರುವ ಸುಳ್ಳು ಸುದ್ದಿಗಳಿಗೆ ಮಂಡಳಿ ಅಧಿಕೃತವಾಗಿ ತೆರೆ ಎಳೆದಿದೆ. ಇಂದು ಯಾವುದೇ ಫಲಿತಾಂಶ ಪ್ರಕಟವಾಗುತ್ತಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಈಗಷ್ಟೇ ಆರಂಭವಾಗಿದ್ದು, ಪೂರ್ಣಗೊಳ್ಳಲು ಕಾಲಾವಕಾಶ ಬೇಕಿದೆ.

ಇದನ್ನೂ ಓದಿ: ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ; ಮೇ.29ರಿಂದ ಶಾಲೆ ಆರಂಭ, ಈ ಬಾರಿ ದಸರಾ ರಜೆ ಎಷ್ಟು ಗೊತ್ತಾ?

ಮಂಡಳಿಯ ಮಾಹಿತಿಯ ಪ್ರಕಾರ, ಮುಂದಿನ ವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಬಹುಶಃ ಏಪ್ರಿಲ್ 23ರ ನಂತರ ಅಧಿಕೃತವಾಗಿ ಫಲಿತಾಂಶ ಹೊರಬೀಳಬಹುದು ಎಂದು ಅಂದಾಜಿಸಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಮಂಡಳಿಯ ಪ್ರಕಟಣೆಗಳನ್ನು ಮಾತ್ರ ನಂಬಬೇಕು. ಕಿಡಿಗೇಡಿಗಳ ಹಾದಿತಪ್ಪಿಸುವ ಸುದ್ದಿಗಳ ಬಗ್ಗೆ ಎಚ್ಚರವಿರಲಿ ಎಂದು ಮಂಡಳಿ ತಿಳಿಸಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

ವೆಬ್‌ಸೈಟ್‌ಗೆ ಭೇಟಿ ನೀಡಿ: ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ results.cbse.nic.in ಅಥವಾ cbse.gov.in ಗೆ ಲಾಗ್ ಇನ್ ಆಗಿ.

ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ‘Secondary School Examination (Class X) Results 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿವರಗಳನ್ನು ಭರ್ತಿ ಮಾಡಿ: ನಿಮ್ಮ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School Number) ಮತ್ತು ಅಡ್ಮಿಟ್ ಕಾರ್ಡ್ ಐಡಿ (Admit Card ID) ಅನ್ನು ನಿಖರವಾಗಿ ನಮೂದಿಸಿ.

ಸಬ್ಮಿಟ್ ನೀಡಿ: ವಿವರಗಳನ್ನು ಸಲ್ಲಿಸಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ.

ಡೌನ್‌ಲೋಡ್: ಭವಿಷ್ಯದ ಬಳಕೆಗಾಗಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:08 am, Wed, 15 April 26

Source link

Horoscope Today: ಇಂದು ಈ ರಾಶಿಯವರಿಗೆ ಅನಾರೋಗ್ಯ ಕಾಡಬಹುದು!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 15, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಪೂರ್ವಭಾದ್ರ ನಕ್ಷತ್ರ, ಬ್ರಹ್ಮಯೋಗ ಮತ್ತು ಗರಜಕರಣಗಳಿಂದ ಕೂಡಿದ ಈ ದಿನದ ರಾಹುಕಾಲ ಮಧ್ಯಾಹ್ನ 12:29 ರಿಂದ 1:52ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ, ಶುಭಕಾಲ ಬೆಳಗ್ಗೆ 10:46 ರಿಂದ 12:19ರವರೆಗೆ ಇದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ದೆಹಲಿಯ ಗೋದಾಮಿನಲ್ಲಿ ಅಗ್ನಿ ದುರಂತ, ಪಕ್ಕದ ಗುಡಿಸಲುಗಳಿಗೆ ತಗುಲಿದ ಬೆಂಕಿ, ಒಂದು ಮಗು ಸೇರಿ ಮೂವರು ಸಜೀವದಹನ – Kannada News | Blaze Turns Deadly in Rohini: Three Killed as Fire Sweeps Through Shanties

ನವದೆಹಲಿ, ಏಪ್ರಿಲ್ 15: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅಗ್ನಿ ದುರಂತ(Fire Accident) ಸಂಭವಿಸಿದೆ. ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, ಅಲ್ಲಿಯೇ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಆಹುತಿ ಪಡೆದಿದೆ. ಈ ಘೋರ ಘಟನೆಯಲ್ಲಿ ಮಗುವೂ ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ.

ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜಗಳಷ್ಟು ವಿಸ್ತೀರ್ಣದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅದರ ಪಕ್ಕದಲ್ಲೇ ಕಾರ್ಮಿಕರು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಬೆಳಗಿನ ಜಾವ ಸುಮಾರು 1.25 ರ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಜ್ವಾಲೆಗಳು ಕ್ಷಣಾರ್ಧದಲ್ಲಿ ವ್ಯಾಪಿಸಿ ಇಡೀ ಪ್ರದೇಶವನ್ನು ಆವರಿಸಿಕೊಂಡಿವೆ.

ಕಾರ್ಯಾಚರಣೆಗೆ ಅಡ್ಡಿಯಾದ ಕಿರಿದಾದ ರಸ್ತೆಗಳು
ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಈ ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದರಿಂದ ದೊಡ್ಡ ವಾಹನಗಳು ಘಟನಾ ಸ್ಥಳವನ್ನು ತಲುಪಲು ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ಅಧಿಕಾರಿ ಅಜಯ್ ಶರ್ಮಾ ನೇತೃತ್ವದಲ್ಲಿ ದೀರ್ಘಕಾಲದ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ದುರದೃಷ್ಟವಶಾತ್, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವಷ್ಟರಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದರು.

ಮತ್ತಷ್ಟು ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ

ಸಾವನ್ನಪ್ಪಿದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವಶೇಷಗಳಡಿಯಿಂದ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. “ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಬೆಂಕಿ ಸಂಪೂರ್ಣ ನಿಯಂತ್ರಣದಲ್ಲಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು (CATS) ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.

ರಾಜ್‌ಘಾಟ್ ಬಳಿಯೂ ಬೆಂಕಿ ಅವಘಡ
ದೆಹಲಿಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ಅಗ್ನಿ ಅವಘಡಗಳ ಸರಣಿ ಮುಂದುವರೆಯುತ್ತಿದೆ. ಇದೇ ಏಪ್ರಿಲ್ 12 ರಂದು ರಾಜ್‌ಘಾಟ್ ಬಸ್ ಡಿಪೋ ಬಳಿಯ ಪೊದೆಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಒಣಗಿದ ಗಿಡಗಂಟಿಗಳು ಮತ್ತು ಕಸಕ್ಕೆ ಹತ್ತಿದ ಬೆಂಕಿ ವೇಗವಾಗಿ ಹರಡಿ ಆತಂಕ ಮೂಡಿಸಿತ್ತು. ಅಗ್ನಿಶಾಮಕ ದಳದ ಎಡಿಒ ಭೂಪೇಂದ್ರ ಪ್ರಕಾಶ್ ನೇತೃತ್ವದಲ್ಲಿ ಹಲವಾರು ಘಟಕಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದವು. ಅದೃಷ್ಟವಶಾತ್ ಆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಬೇಸಿಗೆಯ ಆರಂಭದ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ರೋಹಿಣಿಯ ಈ ಘಟನೆ ರಾಜಧಾನಿಯ ಕೊಳೆಗೇರಿಗಳಲ್ಲಿನ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಎತ್ತುವಂತೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

RCB vs LSG ಪಂದ್ಯಕ್ಕೆ 4 ಆಟಗಾರರು ಅಲಭ್ಯ..!

Source link

ಇರಾನ್ ಜತೆ ಅಮೆರಿಕ ಮಾತುಕತೆ: ಮತ್ತೆ ಪಾಕಿಸ್ತಾನವೇ ಅಂಗಳ, 48 ಗಂಟೆಗಳಲ್ಲಿ ನಿರ್ಣಾಯಕ ಬೆಳವಣಿಗೆ – Kannada News | US Iran Peace Talks: Pakistan Hosts Crucial Next Round in 48 Hours, Trump Confident

ಇಸ್ಲಾಮಾಬಾದ್, ಏಪ್ರಿಲ್ 15: ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆಯನ್ನು ಆರಿಸಲು ವಿಶ್ವದ ದೊಡ್ಡಣ್ಣ ಅಮೆರಿಕ ಈಗ ಮತ್ತೊಂದು ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಗಳು ಅನಿರೀಕ್ಷಿತವಾಗಿ ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಈಗ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ.”ಮುಂದಿನ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ಪುನರಾರಂಭಗೊಳ್ಳಲಿವೆ” ಎಂದು ಟ್ರಂಪ್ ಘೋಷಿಸಿದ್ದು, ಇಡೀ ಜಗತ್ತಿನ ಗಮನ ಈಗ ಪಾಕಿಸ್ತಾನದತ್ತ ನೆಟ್ಟಿದೆ.

ಯುರೋಪ್ ಬೇಡ, ಪಾಕಿಸ್ತಾನವೇ ಸಾಕು
ನ್ಯೂಯಾರ್ಕ್ ಪೋಸ್ಟ್ ಜೊತೆಗಿನ ವಿಶೇಷ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಆರಂಭದಲ್ಲಿ ಎರಡನೇ ಸುತ್ತಿನ ಮಾತುಕತೆಗಳನ್ನು ಯುರೋಪ್‌ನಲ್ಲಿ ನಡೆಸುವ ಬಗ್ಗೆ ಚಿಂತಿಸಲಾಗಿತ್ತು ಎಂದು ಒಪ್ಪಿಕೊಂಡರು. ಆದರೆ, ಕೇವಲ ಅರ್ಧ ಗಂಟೆಯ ನಂತರ ತಮ್ಮ ನಿರ್ಧಾರ ಬದಲಿಸಿದ ಅವರು, ಸ್ಥಳ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಗಳೇ ದಟ್ಟವಾಗಿವೆ. ನಮಗೆ ಸಂಬಂಧವೇ ಇಲ್ಲದ ದೇಶಕ್ಕೆ ನಾವು ಏಕೆ ಹೋಗಬೇಕು?” ಎಂದು ಪ್ರಶ್ನಿಸುವ ಮೂಲಕ ಪಾಕಿಸ್ತಾನದ ಮೇಲಿನ ತಮ್ಮ ಒಲವನ್ನು ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಮುನೀರ್ ಕಾರ್ಯವೈಖರಿಗೆ ಟ್ರಂಪ್ ಫಿದಾ
ಟ್ರಂಪ್ ಅವರ ಈ ನಿರ್ಧಾರದ ಹಿಂದೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಪಾತ್ರ ದೊಡ್ಡದಿದೆ. ಮುನೀರ್ ಅವರನ್ನು ‘ಫೀಲ್ಡ್ ಮಾರ್ಷಲ್’ ಎಂದು ಸಂಬೋಧಿಸಿದ ಟ್ರಂಪ್, “ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ವಿಶ್ವಾಸದಿಂದಲೇ ನಾವು ಮತ್ತೆ ಇಸ್ಲಾಮಾಬಾದ್‌ಗೆ ಹೋಗಲು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆ ಮತ್ತು ಭದ್ರತಾ ವ್ಯವಸ್ಥೆಯು ಅಮೆರಿಕದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ.

ಮಾತುಕತೆಯ ಉದ್ದೇಶ?
ಕಳೆದ ಏಳು ವಾರಗಳಿಂದ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷವು ಭೀಕರ ರೂಪ ಪಡೆದಿದೆ. ಇರಾನ್ ನಾಯಕತ್ವದ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಉದ್ವಿಗ್ನತೆ ಮಿತಿಮೀರಿದೆ. ಈ ಯುದ್ಧವನ್ನು ಕೊನೆಗೊಳಿಸಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪಿಸುವುದು ಈ ಮಾತುಕತೆಯ ಮುಖ್ಯ ಅಜೆಂಡಾ.
ಏಪ್ರಿಲ್ 10 ರಿಂದ 12 ರವರೆಗೆ ಇಸ್ಲಾಮಾಬಾದ್‌ನ ಸೆರೆನಾ ಹೋಟೆಲ್‌ನಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಅದು ಯಶಸ್ವಿಯಾಗದಿದ್ದರೂ, ಎರಡನೇ ಪ್ರಯತ್ನದಲ್ಲಿ ಒಪ್ಪಂದಕ್ಕೆ ಬರಲು ಎರಡೂ ದೇಶಗಳು ಉತ್ಸುಕವಾಗಿವೆ.

ಮತ್ತಷ್ಟು ಓದಿ: ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡೋಂಟ್ ಕೇರ್: ಡೊನಾಲ್ಡ್​ ಟ್ರಂಪ್

ಅನಿಶ್ಚಿತತೆಯ ನಡುವೆಯೂ ನಿರೀಕ್ಷೆ
ಎರಡನೇ ಸುತ್ತಿನ ಈ ಸಭೆಯಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಮೊದಲ ಸುತ್ತಿನಲ್ಲಿದ್ದ ನಾಯಕರೇ ಇರುತ್ತಾರೋ ಅಥವಾ ಹೊಸ ರಾಜತಾಂತ್ರಿಕರು ಸೇರ್ಪಡೆಯಾಗುತ್ತಾರೋ ಎಂಬುದು ಕುತೂಹಲ ಮೂಡಿಸಿದೆ. ಸ್ಥಳ ಮತ್ತು ಸಮಯದ ಬಗ್ಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಒಮ್ಮತ ಮೂಡಿದ ತಕ್ಷಣ ಅಧಿಕೃತ ಘೋಷಣೆ ಹೊರಬೀಳಲಿದೆ.

ಒಟ್ಟಾರೆಯಾಗಿ, ಮುಂದಿನ 48 ಗಂಟೆಗಳು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಪಾಕಿಸ್ತಾನದ ನೆಲದಲ್ಲಿ ಜಾಗತಿಕ ಶಾಂತಿಯ ಹೊಸ ಹಾದಿ ತೆರೆಯುತ್ತದೆಯೇ ಎಂದು ಕಾದು ನೋಡಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version