Video: ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ – Kannada News | Partial Railway Bridge Collapse on National Highway 45 Sparks Safety Concerns in MP

ಜಬಲ್ಪುರ, ಫೆಬ್ರವರಿ 23: ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿ 45 ರಲ್ಲಿರುವ ಶಹಪುರ ಸೇತುವೆಯ ದೊಡ್ಡ ಭಾಗ ಭಾನುವಾರ ಕುಸಿದಿದೆ. ಅದೃಷ್ಟವಶಾತ್, ಸೇತುವೆ ಕುಸಿದಾಗ ಸ್ಥಳದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಮೇಲ್ಸೇತುವೆ ಕುಸಿದ ಸ್ಥಳದ ಬಳಿ ರೈಲ್ವೆ ಕ್ರಾಸಿಂಗ್ ಇದೆ. ಈ ಸೇತುವೆಯನ್ನು ರೈಲ್ವೆ ಕ್ರಾಸಿಂಗ್ ಮೇಲೆಯೇ ನಿರ್ಮಿಸಲಾಗಿದೆ. ಡಿಸೆಂಬರ್‌ನಲ್ಲಿ, ಇದೇ ಸೇತುವೆಯ ಮತ್ತೊಂದು ಭಾಗವೂ ಕುಸಿದಿತ್ತು. ಈ ಸೇತುವೆ ಜಬಲ್‌ಪುರದಿಂದ ಕೇವಲ 30-35 ಕಿಲೋಮೀಟರ್ ದೂರದಲ್ಲಿದೆ. ಸೇತುವೆ ತುಂಬಾ ಹಳೆಯದಲ್ಲ, ಇದು ಸುಮಾರು ಐದು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಆಂಧ್ರಮುಖ ಬೈಪಾಸ್‌ನಿಂದ ಹಿರಣ್ ನದಿಯವರೆಗಿನ 54 ಕಿಲೋಮೀಟರ್ ಉದ್ದದ ರಸ್ತೆಯನ್ನು ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮದ (MPRDC) ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಗಿದೆ. ಪ್ಯಾಕೇಜ್ 1 ರ ಅಡಿಯಲ್ಲಿ ರಸ್ತೆ ಮತ್ತು ಫ್ಲೈಓವರ್‌ಗೆ ಸುಮಾರು 628.45 ಕೋಟಿ ರೂ. ಖರ್ಚು ಮಾಡಲಾಗಿದೆ. ನಿರ್ಮಾಣವು ನವೆಂಬರ್ 2015 ರಲ್ಲಿ ಪ್ರಾರಂಭವಾಯಿತು ಮತ್ತು ಜನವರಿ 2020 ರಲ್ಲಿ ಪೂರ್ಣಗೊಂಡಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮದುವೆಗೆ ಎರಡು ವಾರ ಇರುವಾಗಲೇ ಅಲ್ಲು ಮನೆಯಲ್ಲಿ ಸಂಭ್ರಮ ಆರಂಭ; ಅದ್ದೂರಿ ಪಾರ್ಟಿ – Kannada News | Allu Sirish and Nayaniika Wedding: Grand Pre Wedding Bash by Allu Arjun and Sneha Reddy

ಅಲ್ಲು ಅರ್ಜುನ್ (Allu Arjun) ಸಹೋದರು ಅಲ್ಲು ಸಿರಿಶ್ ಅವರು ಮಾರ್ಚ್ 6ರಂದು ವಿವಾಹ ಆಗುತ್ತಿದ್ದಾರೆ. ತಾವು ಪ್ರೀತಿಸುತ್ತಿದ್ದ ನಯಾನಿಕಾ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಸದ್ಯ ಸಂಭ್ರಮ ಜೋರಾಗಿದೆ. ಈ ಮೊದಲು ದುಬೈನಲ್ಲಿ ಕುಟುಂಬದವರು ಯಾಚ್​ ಪಾರ್ಟಿ ಮಾಡಿದ್ದರು. ಈಗ ಹೈದರಾಬಾದ್​​ನಲ್ಲಿ ದೊಡ್ಡ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿ ಇದನ್ನು ಹೋಸ್ಟ್ ಮಾಡಿದ್ದರು. ವಿವಾಹಕ್ಕೆ ಎರಡು ವಾರ ಇರುವಾಗಲೇ ಪಾರ್ಟಿ ಜೋರಾಗಿದೆ.

ಅಲ್ಲು ಅರ್ಜುನ್ ದಂಪತಿ ಆಯೋಜನೆ ಮಾಡಿದ ಪಾರ್ಟಿಗೆ ರಾಮ್ ಚರಣ್, ಉಪಾಸನಾ ಕೊನಿಡೆಲಾ, ಶ್ರೀಲೀಲಾ, ಮಿಹೀಕಾ ಬಜಾಜ್ ಹಾಗೂ ಇತರರು ಭಾಗಿ ಆಗಿದ್ದರು. ಈಗ ಅಲ್ಲು ಸಿರಿಶ್ ಅವರು ಪಾರ್ಟಿ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಇದನ್ನು ಮ್ಯಾಡ್ ಪಾರ್ಟಿ ಎಂದು ಅವರು ಕರೆದಿದ್ದಾರೆ.  ಅಲ್ಲು  ಸಿರಿಶ್ ಅವರು ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆಯೋಜನೆ ಮಾಡಿದ ಪಾರ್ಟಿಯ ಡೆಕೋರೇಷನ್ ಅದ್ಭುತವಾಗಿತ್ತು.

ಅಲ್ಲು ಸಿರಿಶ್ ಅವರು ಭಾವಿ ಪತ್ನಿ ನಯಾನಿಕಾ ಜೊತೆ ಸ್ಟನ್ನಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್ ಹಾಗೂ ಸ್ನೆಹಾ ರೆಡ್ಡಿ ನನಗೆ ಹಾಗೂ ನಯಾನಿಕಾಗಾಗಿ ಎಂತಹ ಮ್ಯಾಡ್ ಪಾರ್ಟಿ ಆಯೋಜನೆ ಮಾಡಿದ್ದರು. ಎಲ್ಲರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದವು. ಸೆಟ್ ಕೂಡ ಅದ್ಭುತವಾಗಿದ್ದವು’ ಎಂದು ಅಲ್ಲು ಸಿರಿಶ್ ಹೇಳಿದ್ದಾರೆ. ಈ ಪಾರ್ಟಿಯನ್ನು ಅದ್ಭುತವಾಗಿ ಹೋಸ್ಟ್ ಮಾಡಿದ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಅಲ್ಲು ಸಿರಿಶ್ ಹಾಗೂ ನಯಾನಿಕಾ ಅವರು ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬ ಇದರಲ್ಲಿ ಭಾಗಿ ಆಯಿತು. ಈಗ ಮಾರ್ಚ್ 6ರಂದು ಈ ಜೋಡಿ ವಿವಾಹ ಆಗುತ್ತಿದೆ. ಅಲ್ಲು ಅರ್ಜುನ್ ಕೂಡ ಇದೇ ದಿನಾಂಕದಂದು ಮದುವೆ ಆಗಿದ್ದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ – Kannada News | Biggest defeat for India in T20 World Cups

T20 World Cup 2026: ಟಿ20 ವಿಶ್ವಕಪ್ ಶುರುವಾಗಿ 19 ವರ್ಷಗಳಾಗಿವೆ. ಈ ಹತ್ತೊಂಬತ್ತು ವರ್ಷಗಳಲ್ಲಿ 10 ಟಿ20 ವಿಶ್ವಕಪ್ ಟೂರ್ನಿ ನಡೆದಿದೆ. ಈ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ 50 ಕ್ಕಿಂತ ಹೆಚ್ಚಿನ ರನ್ ಗಳ ಅಂತರದಿಂದ ಸೋತಿರಲಿಲ್ಲ. ಆದರೆ ಈ ಬಾರಿ ಭಾರತ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ.

Source link

ಮದುವೆ ಮುಗಿಸಿ ಹಿಂದಿರುವಾಗ ಪತಿ ಹಣೆಗೆ ಗನ್ ಇಟ್ಟು ನವ ವಧುವನ್ನು ಅಪಹರಿಸಿದ ಮಾಜಿ ಪ್ರೇಮಿ – Kannada News | Odisha: Ex Lover Abducts New Bride at Gunpoint After Wedding Ceremony

ಒಡಿಶಾ, ಫೆಬ್ರವರಿ 23: ಮದುವೆ ಮುಗಿಸಿಕೊಂಡು ಪತಿಯೊಂದಿಗೆ ಮನೆಗೆ ತೆರಳುತ್ತಿದ್ದ ನವ ವಧುವನ್ನು ಮಾಜಿ ಪ್ರೇಮಿ ಅಪಹರಿಸಿರುವ ಘಟನೆ ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ಇದ್ದ ಕಾರಿಗೆ ಮೂವರು ಅಡ್ಡ ಬಂದು, ಇಬ್ಬರನ್ನೂ ಕಾರಿಂದ ಇಳಿಸಿ ಆಕೆಯ ಪತಿಯ ಹಣೆಗೆ ಗನ್ ಇಟ್ಟು ಆಕೆಯನ್ನು ಅಪಹರಣ(Kidnap) ಮಾಡಿದ್ದಾನೆ. ಬೋಲಂಗಿರ್ ಜಿಲ್ಲೆಯ ನಿವಾಸಿ ಹರಿಬಂಧು ಪಟೇಲ್ ಎಂಬ ವರ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದ, ಮದುವೆಯ ವಿಧಿವಿಧಾನಗಳು ಮುಗಿದ ನಂತರ, ವಧು-ವರರು ಕುಟುಂಬ ಸದಸ್ಯರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಅವರ ವಾಹನವನ್ನು ಕೆಲವರು ಅಡ್ಡಗಟ್ಟಿದ್ದರು.

ಆರೋಪಿಯು ಇತರ ಇಬ್ಬರೊಂದಿಗೆ ಬಂದು ತರ್ಭಾ ರಸ್ತೆಯಲ್ಲಿ ವರನಿಗೆ ಬಂದೂಕಿನಿಂದ ಬೆದರಿಕೆ ಹಾಕಿ ವಧುವನ್ನು ಬಲವಂತವಾಗಿ ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ವರ ಮತ್ತು ಅವನ ಸಹಚರರು ಸಿಲುಕಿಕೊಂಡು ಅಸಹಾಯಕರಾಗಿದ್ದರು.

ಘಟನೆಯ ನಂತರ, ವರ ತರ್ಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ, ತನ್ನ ಹೆಂಡತಿಯನ್ನು ಅಪಹರಿಸಿದಾಗ ತನೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ. ತರ್ಭಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ (ಐಐಸಿ) ಅನಿತಾ ಕಿಡೋ ಮಾತನಾಡಿ, ಹರಿಬಂಧು ಪಟೇಲ್ ತಮ್ಮ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದರು.

ಮತ್ತಷ್ಟು ಓದಿ: ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು

ಸಮಾರಂಭದ ನಂತರ, ದಂಪತಿ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಮೂವರು ವ್ಯಕ್ತಿಗಳು ಅವರ ವಾಹನವನ್ನು ಅಡ್ಡಗಟ್ಟಿ, ಬಂದೂಕು ತೋರಿಸಿ ಬೆದರಿಸಿ ವಧುವನ್ನು ಅಪಹರಿಸಿದ್ದಾರೆ ಎಂದು ಅವರು ಹೇಳಿದರು.
ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಮಹಿಳೆಯನ್ನು ರಕ್ಷಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು? – Kannada News | Daily Devotional: The Significance of Your Wallet, What to Keep and Avoid for Prosperity

ಬೆಂಗಳೂರು, ಫೆಬ್ರವರಿ​ 23​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದುಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಪರ್ಸ್ ಅಥವಾ ವಾಲೆಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೇವಲ ಹಣ ಸಂಗ್ರಹಿಸುವ ಸಾಧನವಾಗಿ ನೋಡದೆ, ನಮ್ಮ ಆರ್ಥಿಕ ಸ್ಥಿತಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪರ್ಸ್ ಇಟ್ಟುಕೊಳ್ಳುವುದು ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತ ಎಂದಿದ್ದಾರೆ.

ಪರ್ಸ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹರಿದಿರುವ ಅಥವಾ ತೂತಾಗಿರುವ ಪರ್ಸ್ ಅನ್ನು ಎಂದಿಗೂ ಬಳಸಬಾರದು. ಇದು ಧನಾಕರ್ಷಣೆಯನ್ನು ಕುಗ್ಗಿಸುತ್ತದೆ. ಅಲ್ಲದೆ, ಪರ್ಸ್‌ನಲ್ಲಿ ಔಷಧಗಳು, ಹೋಟೆಲ್ ಬಿಲ್‌ಗಳು, ಸಾಲದ ಪಟ್ಟಿಗಳು ಅಥವಾ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಯಾವುದೇ ಕಾಗದಪತ್ರಗಳನ್ನು ಇಡಬಾರದು. ಹಣವನ್ನು ಮಡಚದೆ ನೇರವಾಗಿ ಇಡುವುದು ಸೂಕ್ತ. ಒಂದು ಅಥವಾ ಎರಡು ನಾಣ್ಯಗಳು ಮತ್ತು ಉಪಯೋಗಿಸದ ನೂರು ರೂಪಾಯಿ ನೋಟನ್ನು ಪರ್ಸ್‌ನಲ್ಲಿ ಕಡ್ಡಾಯವಾಗಿ ಇಡುವುದು ಶುಭಕರ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today 23 February​: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 23, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಷಷ್ಠಿ ಮತ್ತು ಭರಣಿ ನಕ್ಷತ್ರದ ವಿಶೇಷ ದಿನವಾಗಿದೆ.

ಇಂದಿನ ಪ್ರಮುಖ ಗ್ರಹಗಳ ಸಂಚಾರವೆಂದರೆ ಕುಜ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿರುವುದು. ಇದು ಏಪ್ರಿಲ್ 2ರ ತನಕ ಕುಂಭ ರಾಶಿಯಲ್ಲಿರುತ್ತದೆ. ಈ ಕುಜ ಗ್ರಹದ ಪ್ರಭಾವವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ಗುರೂಜಿ ತಿಳಿಸಿದ್ದಾರೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಮೇಷ ರಾಶಿಯಲ್ಲಿ ಸಂಚರಿಸುತ್ತಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

‘ಟಾಕ್ಸಿಕ್’ ಚಿತ್ರದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಆರ್​​ಜಿವಿ; ಚಳಿಬಿಡಿಸಿದ ಕನ್ನಡಿಗರು ‘ಟಾಕ್ಸಿಕ್’ ಚಿತ್ರದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಆರ್​​ಜಿವಿ; ಸರಿಯಾಗಿ ಚಳಿಬಿಡಿಸಿದ ಕನ್ನಡಿಗರು  – Kannada News | RGV vs. Toxic: Kannada Fans Troll Ram Gopal Varma Over Controversial Movie Comments

ರಾಮ್​ ಗೋಪಾಲ್ ವರ್ಮ (RGV) ಒಂದು ಕಾಲದಲ್ಲಿ ಒಳ್ಳೊಳ್ಳೆಯ ಸಿನಿಮಾ ನೀಡಿದವರು. ಆದರೆ, ಈಗ ಅವರ ಬಳಿ ಅದು ಸಾಧ್ಯವಾಗುತ್ತಿಲ್ಲ. ಅವರ ಬತ್ತಳಿಕೆಯಿಂದ ಚೆನ್ನಾಗಿರೋ ಸಿನಿಮಾ ಬರದೆ ಯಾವುದೋ ಕಾಲವೇ ಆಗಿ ಹೋಗಿದೆ. ಆದರೆ, ಇದಕ್ಕೆಲ್ಲ ಅವರು ತಲೆಕೆಡಿಸಿಕೊಂಡಿಲ್ಲ. ಸಿನಿಮಾ ಮಾಡದೆ ಇದ್ದರೂ ಸದಾ ಪ್ರಚಾರದಲ್ಲಿ ಇರೋದು ಹೇಗೆ ಎಂಬುದನ್ನು ಅವರು ಕಂಡು ಹಿಡಿದುಕೊಂಡಿದ್ದಾರೆ. ಈಗ ಅದೇ ರೀತಿ ಮಾಡಲು ಹೋಗಿ ಟ್ರೋಲ್ ಆಗಿದ್ದಾರೆ. ಆ ಬಳಿಕ ಅದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ಈ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಸಹಜವಾಗಿ ಒಂದು ಸಿನಿಮಾಗೆ ನಷ್ಟ ಆಗುತ್ತದೆ ಎಂಬ ನಂಬಿಕೆ ಅನೇಕರದ್ದು. ಆರ್​​ಜಿವಿ ಕೂಡ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಪ್ರಮುಖವಾಗಿ ಅವರಿಗೆ ‘ಟಾಕ್ಸಿಕ್’ ಬಗ್ಗೆ ದ್ವೇಷ ಇದ್ದಂತೆ ಇದೆ. ಅವರು ಮೊದಲಿನಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ವಿಷಯ ಸ್ಪ್ರೆಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.

‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ರಿಲೀಸ್ ಆಗುತ್ತಿದೆ. ‘ಧುರಂದರ್’ ಕಲೆಕ್ಷನ್ ಎದುರು ‘ಕೆಜಿಎಫ್ 2’ ಕಲೆಕ್ಷನ್ ತುಂಬಾನೇ ಸಣ್ಣದಾಗಿ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ‘ಧುರಂಧರ್ 2’ ಎದುರು ‘ಟಾಕ್ಸಿಕ್’ ಬಂದರೆ ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಿ ಎಂಬುದು ಅವರ ಮಾತಿನ ಅರ್ಥ.

‘ಈಗ ರಿಲೀಸ್ ಆಗುತ್ತಿರುವ ಸಿನಿಮಾಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಧುರಂಧರ್ ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸುತ್ತದೆ ಮತ್ತು ಟಾಕ್ಸಿಕ್ ಜನರ ಮೂರ್ಖತನವನ್ನು ಊಹಿಸುತ್ತದೆ. ಕೆಜಿಎಫ್ 2 ಒಂದು ಸ್ಥಳೀಯ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿನ ಮೂರ್ಖತನವನ್ನು ಟಾರ್ಗೆಟ್ ಮಾಡಿತ್ತು. ಧುರಂಧರ್ ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಟಾರ್ಗೆಟ್ ಮಾಡಿತ್ತು’ ಎಂದಿದ್ದಾರೆ. ಈ ಮೊದಲು ಆರ್​​ಜಿವಿ ‘ಕೆಜಿಎಫ್ 2’ ಚಿತ್ರವನ್ನು ಹೊಗಳಿ ಮಾಡಿದ ಟ್ವೀಟ್​ನ ತೋರಿಸಿ ಅವರಿಗೆ ಪಾಠ ಹೇಳಿಕೊಡಲಾಗಿದೆ.

ಈಗ ಈ ವಿಷಯದಲ್ಲಿ ಆರ್​​ಜಿವಿಯನ್ನು ಟ್ರೋಲ್ ಮಾಡಲಾಗಿದೆ. ಆ ಬಳಿಕ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಅರ್ಥವಾಗದ ಎಲ್ಲಾ ಡಂಬೋಗಳಿಗೆ, ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ‘2 ಬಿಡುಗಡೆಗಳ ಸಂದರ್ಭದಲ್ಲಿ, ನಾನು ಸಿನಿಮಾದ ಶೈಲಿಗಳ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು ನಿರ್ದಿಷ್ಟವಾಗಿ ಒಂದು ಚಿತ್ರದ ಬಗ್ಗೆ ಅಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:02 am, Mon, 23 February 26

Source link

ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ: ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಬಾಣ! – Kannada News | Only Congress Can Make a Dalit CM’: Siddaramaiah’s Statement Sparks Fresh Leadership Debate in Karnataka

ಬೆಂಗಳೂರು, ಫೆಬ್ರವರಿ 23: ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿದ್ದ ಸರಣಿ ಎಕ್ಸ್ ಸಂದೇಶಗಳ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ನಡೆದಿತ್ತು. ವಿಪಕ್ಷ ನಾಯಕರಂತೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಉದ್ದೇಶಿಸಿಯೇ ಸಿದ್ದರಾಮಯ್ಯ ಸರಣಿ ಸಂದೇಶಗಳನ್ನು ಪ್ರಕಟಿಸಿದ್ದಾರೆ ಎಂದು ತಿರುಗು ಬಾಣ ಬಿಟ್ಟಿದ್ದರು. ಇದರಿಂದ ಅಲರ್ಟ್ ಆದ ಸಿದ್ದರಾಮಯ್ಯ, ಎಕ್ಸ್ ಸಂದೇಶಗಳ ಬಗ್ಗೆ ತಾವೇ ಸಮರ್ಥನೆ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡುತ್ತಾ, ದಲಿತ ಸಿಎಂ ದಾಳ ಉರುಳಿಸಿದ್ದಾರೆ. ಕುಮಾರಸ್ವಾಮಿ ಹಾಗೂ ಅವರ ತಂದೆ ಹೆಚ್​ಡಿ ದೇವೇಗೌಡರು, ಸ್ವಜಾತಿ ವಿರೋಧಿಗಳು. ಕುಟುಂಬವಾದಿಗಳು ಎಂದು ಎಕ್ಸ್ ಸಂದೇಶ ಪ್ರಕಟಿಸಿರುವ ಸಿಎಂ, ಮುಂದೆ ದಲಿತರು ಮುಖ್ಯಮಂತ್ರಿ ಆದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ಜೆಡಿಎಸ್‌ನವರು ದಲಿತರನ್ನು ಸಿಎಂ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಆದರೆ, ಸಿದ್ದರಾಮಯ್ಯ ಎಕ್ಸ್ ಸಂದೇಶಕ್ಕೆ ಮತ್ತೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ದಾಳ ಉರುಳಿಸಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಸಿದ್ದರಾಮಯ್ಯ ಎಕ್ಸ್ ಸಂದೇಶಗಳ ಬಗ್ಗೆ ಬಿಜೆಪಿ ನಾಯಕರು ಕೂಡ ವ್ಯಂಗ್ಯವಾಡಿದ್ದು, ಕಾಂಗ್ರೆಸ್​ ಪಕ್ಷದೊಳಗಿನ ಬೆಳವಣಿಗೆ ಬಗ್ಗೆಯೇ ಉಲ್ಲೇಖಿಸಿದ್ದಾರೆ ಎಂದು ಕಾಲೆಳೆದಿದ್ದಾರೆ.

ದಲಿತರು ಕಾಂಗ್ರೆಸ್ ಬೆನ್ನೆಲುಬು, ದಲಿತರು ಸಿಎಂ ಆಗ್ಬೇಕು: ಮಹದೇವಪ್ಪ

ದಲಿತ ಸಿಎಂ ದಾಳ ಉರುಳಿಸಿದ ಸಿದ್ದರಾಮಯ್ಯ ಬಾಣಕ್ಕೆ, ಅವರ ಆಪ್ತ ಸಚಿವ ಮಹದೇವಪ್ಪ ದನಿಗೂಡಿಸಿದ್ದಾರೆ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮುಂದೆ ದಲಿತರು ಸಿಎಂ ಆಗಬೇಕು. ಇದು ಹೈಕಮಾಂಡ್ ಗಮನದಲ್ಲಿದೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಬಜೆಟ್ ಆದಮೇಲೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದಿದ್ದಾರೆ.

ಕುಮಾರಸ್ವಾಮಿ, ಪರಮೇಶ್ವರ್ ಭೇಟಿ

ಏತನ್ಮಧ್ಯೆ, ಗೃಹ ಸಚಿವ ಪರಮೇಶ್ವರ್ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕೇಂದ್ರ ಸಚಿವ ಕು‌ಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆಶಿವಕುಮಾರ್, ಕ್ಷೇತ್ರದ ಕೆಲಸಗಳ ಬಗ್ಗೆ ಚರ್ಚಿಸಲು ಭೇಟಿ ಮಾಡಿರಬೇಕು ಎಂದಿದ್ದಾರೆ.

ಇದನ್ನೂ ಓದಿ: ವಿವಾದದ ಬೆನ್ನಲ್ಲೇ ಸರಣಿ ಎಕ್ಸ್​​ ಪೋಸ್ಟ್​​ ಬಗ್ಗೆ ಸಿಎಂ ಸ್ಪಷ್ಟನೆ: ಹೆಚ್​​ಡಿಕೆಗೂ ತಿವಿದ ಸಿದ್ದರಾಮಯ್ಯ

ಒಟ್ಟಿನಲ್ಲಿ, ಕಾಂಗ್ರೆಸ್ ಕೋಟೆಯಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಕಾವೇರಿದೆ. ಸಿಎಂ ಹಾಗೂ ಡಿಸಿಎಂ ಬಣಗಳ ನಡುವೆ ತಂತ್ರ, ರಣತಂತ್ರ ಜೋರಾಗಿ ನಡೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಏನು ಪಡೆದರೂ ಸಂತೋಷ, ಲಾಭ – Kannada News | Horoscope 23 Monday 2026; Dina Rashi Bhavishya Today, Checkout the details here

ಮೇಷ ರಾಶಿ:

ಮಹತ್ತ್ವದ ಯೋಜನೆಯು ಮಸುಕಾಗಿದ್ದು ಮುಂದಿನ ದಾರಿ ಸರಿಯಾಗಿ ಗೊತ್ತಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಗೊಂದಲಗಳಿಂದ ಏನನ್ನೂ ಮಾಡಲಾಗದ ಸ್ಥಿತಿಯು ಬರಲಿದೆ. ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭವಾಗಲಿದೆ. ಮಾತುಗಳನ್ನು ಕಡಿಮೆ ಆಡುವಿರಿ. ಸಂಪತ್ತಿನ ನಿರ್ವಹಣೆಯಲ್ಲಿ ಸೋಲಬಹುದು.

ವೃಷಭ ರಾಶಿ:

ಕಾರ್ಯ ಮಾಡುವ ಸುಲಭದ ಉಪಾಯಗಳು ನಿಮ್ಮ ಬುದ್ಧಿಗೆ ತೋಚದೇ ಹೋಗಬಹುದು. ಒಂದಕ್ಕಿಂತಲೂ ಹೆಚ್ಚು ಕಾರ್ಯವನ್ನು ಒಮ್ಮೆಲೇ ಮಾಡುವ ಸಂದರ್ಭವು ಬರಬಹುದು. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಮನಸ್ಸಿನಲ್ಲಿ ಯಾವುದೋ ಆತಂಕವು ಇರಲಿದ್ದು ಹೊರಹಾಕಲು ಪ್ರಯತ್ನಿಸುವಿರಿ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು.

ಮಿಥುನ ರಾಶಿ:

ಮನೆಯ ಖರೀದಿಗೆ ಹಣ ಒಟ್ಟಾಗುವುದು ಕಷ್ಟ. ಕಲಿಕೆಯ ಬಗ್ಗೆ ಆಸಕ್ತಿ ಉಂಟಾಗಬಹುದು. ಒಂದೇ ರೀತಿಯ ಕೆಲಸವನ್ನು ಮಾಡಿ ಬೇಸರವಾದೀತು. ಹೊಸ ವಸ್ತುಗಳನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ಸೌಜನ್ಯದಿಂದ ಮಾತನಾಡಿ, ಸಂತೋಷಪಡಿಸುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು.

ಕರ್ಕಾಟಕ ರಾಶಿ:

ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರಲಿದ್ದು ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದೀತು. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು.

ಸಿಂಹ ರಾಶಿ:

ಆಪ್ತರ‌ ಜೊತೆ ಮಾಡುವ ಸಮಾಲೋಚನೆಯಿಂದ ಅನೇಕ ವಿಚಾರಕ್ಕೆ ತೆರೆಬೀಳುವುದು. ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರ ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇರದು. ಸಹೋದರನ ಕುಟುಂಬದಲ್ಲಿ ನಿಮ್ಮ ಮಧ್ಯಪ್ರವೇಶವು ಆಗಬೇಕಾಗಬಹುದು. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ತೊಡಗುವಿಕೆ ಹೆಚ್ಚಿರುವುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಧಾರ್ಮಿಕ ಮುಖಂಡರಿಗೆ ಅಪವಾದ ಬರುವ ಸಾಧ್ಯತೆ ಇದೆ. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು.

ಕನ್ಯಾ ರಾಶಿ:

ನಿಮ್ಮ ನೆಚ್ಚಿನ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗುವುದು. ಮನೆಯ ಖರ್ಚನ್ನು ಕಡಿಮೆ ಮಾಡುವ ಚಿಂತನೆಯಲ್ಲಿ ಇರುವಿರಿ. ಸರಳತೆಯೇ ನಿಮ್ಮ ಪ್ರಶಂಸೆಗೆ ಕಾರಣವಾಗುವುದು. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ತಿಳಿಯಿರಿ. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ. ಮನಸ್ಸಿನಲ್ಲಿ ಹತಾಶೆಯ ಭಾವವು ಪುನಃ ಪುನಃ ಬರಲಿದೆ.

ತುಲಾ ರಾಶಿ:

ಚಿಂತನೆ ವಿಶಾಲವಾಗಲು ಸಣ್ಣ ತಪ್ಪುಗಳನ್ನು ಪಾಠವಾಗಿಸಿಕೊಳ್ಳುವಿರಿ. ಹಿತಮಿತವಾದ ಮಾತುಗಾರಿಕೆಯಿಂದ ಎಲ್ಲರಿಗೂ ಹಿತವಾಗುವುದು. ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಸಮಯಪ್ರಜ್ಞೆಯಿಂದ ಆಗುವ ತಪ್ಪನ್ನು ಸರಿ ಮಾಡಿಕೊಳ್ಳುವಿರಿ. ಬೇಕಾದಷ್ಟು ಇದ್ದರೂ ಅದನ್ನು ವ್ಯಯಿಸಲು ದಾರಿ ಕಾಣದು. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು.

ವೃಶ್ಚಿಕ ರಾಶಿ:

ವಿವಾದಗಳಿಂದ ದೂರವಿರಬೇಕೆಂದರೂ ಅದು ನಿಮ್ಮನ್ನೇ ಬಂದು ಸೇರುವುದು. ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಮತ್ತು ದೀರ್ಘ ಕಾಲದಿಂದ ಬಾಕಿ ಉಳಿದಂತಹ ಯೋಜನೆ ಪೂರ್ಣಗೊಳ್ಳುವುವು. ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವಿರಿ. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು. ನಿಮ್ಮನ್ನು ಅನುಕರಣೆ ಮಾಡಬಹುದು.

ಧನು ರಾಶಿ:

ಇಂದು ಮನೆಯ ಹಿರಿಯರನ್ನು ಕಳೆದುಕೊಳ್ಳಬೇಕಾದೀತು. ವ್ಯವಹಾರದಲ್ಲಿ ಅಸಾಧ್ಯವನ್ನು ಸಾಧಿಸುವ ಛಲ ಬೇಡ. ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಯಾರಿಂದಲಾದರೂ ಪಡೆಯುವರು. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು.

ಮಕರ ರಾಶಿ:

ನಿಮ್ಮ ಪ್ರೀತಿ ಮತ್ತು ವಿಶ್ವಾಸ ಭದ್ರವಾಗಿರುವುದು. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು. ಸಹೋದರಿಯ ನಡುವೆ ವಾಗ್ವಾದ ಮಾಡುವಿರಿ. ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಉದ್ಯೋಗವನ್ನು ಉತ್ಸಾಹದಿಂದ ಮಾಡುವಿರಿ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.

ಕುಂಭ ರಾಶಿ:

ನಿಮ್ಮ ವಿವಾಹದ ಕುರಿತು ಬಂಧುಗಳಲ್ಲಿ ಚರ್ಚೆಯಾಗುವುದು. ಆಪ್ತರಿಗಾಗಿ ಸಮಯವನ್ನು ಇಡುವಿರಿ. ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಇಂದು ನಡೆಯುವ ತಪ್ಪಿಗೆ ನೀವೇ ಕಾರಣರಾಗುವಿರಿ. ನಿಮ್ಮ ಒರಟಾದ ಮಾತು ಇನ್ನೊಬ್ಬರಿಗೆ ಬೇಸರವನ್ನು ಕೊಡುವುದು. ವಸ್ತುಗಳ ಖರೀದಿಗೆ ಹಣವನ್ನು ಖರ್ಚು ಮಾಡಬಹುದು. ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ.

ಮೀನ ರಾಶಿ:

ಶ್ರಮ‌ ಮಾತ್ರ ನಿಮ್ಮದು, ಫಲವು ತಾನಾಗಿಯೇ ಬರುತ್ತದೆ. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆದಾಯದ ಮೂಲವು ಬದಲಾಗಬಹುದು. ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಓಡಾಟವಾಗಬಹುದು. ಆಸ್ತಿ ವ್ಯವಹಾರದಲ್ಲಿ ಹಿನ್ನಡೆಯಾದಂತೆ ಅನ್ನಿಸಬಹುದು. ನ್ಯೂನತೆಗಳನ್ನು ಮರೆತು ಮುಂದಡಿ ಇಡಬೇಕು‌. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಭರಣೀ, ಯೋಗ : ಬ್ರಹ್ಮ, ಕರಣ :ತೈತಿಲ, ಸೂರ್ಯೋದಯ – 06 – 45 am, ಸೂರ್ಯಾಸ್ತ – 06 – 20 pm, ಇಂದಿನ ಶುಭಾಶುಭ ಕಾಲ : ರಾಹು 08:14 – 09:42, ಯಮಗಂಡ ಕಾಲ 11:10 – 12:38, ಗುಳಿಕ ಕಾಲ 14:06 – 15:34

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 23ರ ದಿನಭವಿಷ್ಯ

ಸಾಯಿ ಬಾಬ ಮಂದಿರಕ್ಕೆ ತೆರಳಿ ದರ್ಶನವನ್ನು ಮಾಡಿ. ಶಿಕ್ಷಣ, ಉದ್ಯೋಗ ಹೀಗೆ ಯಾವುದಾದರೂ ಉದ್ದೇಶದಿಂದ ನೀವಿರುವ ಸ್ಥಳದಿಂದ ಬೇರೆ ಕಡೆಗೆ ಹೋಗಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಅಡೆತಡೆಗಳು ದೂರ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ. ಅಲಂಕಾರದ ದೃಷ್ಟಿಯಿಂದ ಏನೇನು ಬದಲಾವಣೆ ಮಾಡಬೇಕು ಅಂದುಕೊಂಡಿರುತ್ತೀರೋ ಆ ಎಲ್ಲವನ್ನು ಮಾಡಲು ಸಾಧ್ಯ ಆಗಲಿದೆ. ನಿಮಗೆ ಇರುವಂಥ ಬದ್ಧತೆಯನ್ನು ಸಾಬೀತು ಮಾಡಿಸಿಕೊಳ್ಳಲು ಅವಕಾಶಗಳು ಉದ್ಭವ ಆಗಲಿವೆ. ಕೆಲವು ಹಣಕಾಸಿನ ವಿಚಾರದ ನಿರ್ಧಾರಗಳು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಮೆಡಿಕಲ್ ಶಾಪ್ ನಡೆಸುತ್ತಾ ಇರುವವರು ಇದಕ್ಕೆ ಪೂರಕವಾಗಿ ಕೆಲವು ಹೊಸ ವ್ಯವಹಾರ ನಡೆಸುವ ಚಿಂತನೆ ನಡೆಸುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಉದ್ಯೋಗ ಸ್ಥಳದಲ್ಲಿ ನೀವು ಯಾವುದನ್ನು ಕೊನೆ ಆಯ್ಕೆ ಎಂದು ಭಾವಿಸಿರುತ್ತೀರೋ ಅದನ್ನೇ ಆರಿಸಿಕೊಳ್ಳುವಂತೆ ಆಗಲಿದೆ. ನಾಲಗೆ ಹುಣ್ಣು, ಗಂಟಲು ನೋವಿನ ಸಮಸ್ಯೆ ಈ ದಿನ ವಿಪರೀತ ಬಾಧಿಸಬಹುದು. ಆಹಾರ ಪಥ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಆಕಸ್ಮಿಕವಾಗಿ ನಿಮಗೆ ಸಿಗುವಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಪಾಲಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿದ್ದರ ಉತ್ತಮ ಫಲಿತವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿದರಕ್ಕೆ ತಂದಿದ್ದ ಸಾಲವನ್ನು ಹಿಂತಿರುಗಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮಿನರಲ್ ವಾಟರ್ ವಿತರಣೆಯ ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಸವಾಲು ಎನಿಸಿದಂ ಕೆಲವು ಕೆಲಸಗಳನ್ನು ನೀವಾಗಿಯೇ ಮುಂದೆ ಹೋಗಿ ವಹಿಸಿಕೊಳ್ಳಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

Exit mobile version