ಭಾರತ vs ಬ್ರೆಝಿಲ್ ಪಂದ್ಯಕ್ಕೆ ಡೇಟ್ ಫಿಕ್ಸ್​! – Kannada News | India vs Brazil Football Friendly: Date and Venue Officially Locked

India vs Brazil (ಸಾಂದರ್ಭಿಕ ಚಿತ್ರ)Image Credit source: cricketxpert

ಭಾರತೀಯ ಫುಟ್‌ಬಾಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಐತಿಹಾಸಿಕ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವ ಫುಟ್‌ಬಾಲ್‌ನ ದೈತ್ಯ ತಂಡ ಬ್ರೆಝಿಲ್, ಇದೇ ಮೊದಲ ಬಾರಿಗೆ ಭಾರತ ರಾಷ್ಟ್ರೀಯ ತಂಡದ ವಿರುದ್ಧ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಹೈ-ವೋಲ್ಟೇಜ್ ಸೌಹಾರ್ದ ಪಂದ್ಯವು ಅಕ್ಟೋಬರ್ 3 ರಂದು ನಡೆಯಲಿದ್ದು, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣವು ಈ ಮಹಾ ಕದನಕ್ಕೆ ಆತಿಥ್ಯ ವಹಿಸಲಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಮತ್ತು ಬ್ರೆಝಿಲಿಯನ್ ಫುಟ್‌ಬಾಲ್ ಕಾನ್ಫೆಡರೇಶನ್ (CBF) ಜಂಟಿಯಾಗಿ ಈ ಪಂದ್ಯವನ್ನು ಅಧಿಕೃತಗೊಳಿಸಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

  • ಪಂದ್ಯದ ದಿನಾಂಕ: ಅಕ್ಟೋಬರ್ 3, 2026 (ಶನಿವಾರ)
  • ಕ್ರೀಡಾಂಗಣ: ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ (ಸಾಲ್ಟ್ ಲೇಕ್ ಸ್ಟೇಡಿಯಂ), ಕೋಲ್ಕತ್ತಾ.
  • ಸಮಯ: ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪಂದ್ಯ ಆರಂಭವಾಗುವ ಸಾಧ್ಯತೆಯಿದೆ.

ಬ್ರೆಝಿಲ್ ತಂಡವು ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್ 25 ಮತ್ತು 29 ರಂದು ಎರಡು ಪಂದ್ಯಗಳನ್ನು ಆಡಲಿದ್ದು, ಅಲ್ಲಿಂದ ನೇರವಾಗಿ ಕೋಲ್ಕತ್ತಾಗೆ ಬರಲಿದೆ. 2026ರ ಫಿಫಾ ವಿಶ್ವಕಪ್ ಮುಕ್ತಾಯದ ನಂತರ ಬ್ರೆಝಿಲ್ ಆಡಲಿರುವ ಮೊದಲ ಪ್ರಮುಖ 3 ಅಂತರರಾಷ್ಟ್ರೀಯ ಪಂದ್ಯ ಇದಾಗಿರಲಿದೆ.

ಸ್ಟಾರ್ ಆಟಗಾರರ ದಂಡು:

ಒಪ್ಪಂದದ ಪ್ರಕಾರ ಬ್ರೆಝಿಲ್ ತಂಡವು ತನ್ನ ಪ್ರಮುಖ ಮತ್ತು ಸ್ಟಾರ್ ಆಟಗಾರರನ್ನೊಳಗೊಂಡ ‘ಬಲಿಷ್ಠ’ ಪಡೆಯನ್ನೇ ಕಣಕ್ಕಿಳಿಸಲಿದೆ. ಅದರಂತೆ ತಂಡದಲ್ಲಿ ವಿನೀಸಿಯಸ್ ಜೂನಿಯರ್, ರೋಡ್ರಿಗೋ, ಎಂಡ್ರಿಕ್, ರಾಫಿನ್ಹಾ ಮತ್ತು ಕ್ಯಾಸೆಮಿರೊ ಅವರಂತಹ ವಿಶ್ವದರ್ಜೆಯ ಆಟಗಾರರು ಸಾಲ್ಟ್ ಲೇಕ್ ಮೈದಾನದಲ್ಲಿ ಕಣಕ್ಕಿಳಿಯುವುದು ಖಚಿತ. ಇನ್ನು ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿರುವ ನೇಮರ್ ಜೂನಿಯರ್ ಈ ಸೌಹಾರ್ದ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ಇದೇ ದಿನ ಭಾರತಕ್ಕೆ ಮತ್ತೊಂದು ಪ್ರಮುಖ ಟೂರ್ನಿಯಾದ ‘ಫಿಫಾ ಆಸಿಯಾನ್ ಕಪ್’ ಫೈನಲ್ ಪಂದ್ಯವೂ ಇರುವುದರಿಂದ, AIFF ಎರಡು ಪ್ರತ್ಯೇಕ ತಂಡಗಳನ್ನು ಮ್ಯಾನೇಜ್ ಮಾಡುವ ಸಾಧ್ಯತೆಯಿದೆ.

ಕುತೂಹಲಕಾರಿ ಅಂಶಗಳು:

  • ಫಿಫಾ ರ‍್ಯಾಂಕಿಂಗ್: ಬ್ರೆಝಿಲ್ ಪ್ರಸ್ತುತ 5ನೇ ಸ್ಥಾನದಲ್ಲಿದ್ದರೆ, ಭಾರತ 138ನೇ ಸ್ಥಾನದಲ್ಲಿದೆ. ಭಾರತದ ಫುಟ್‌ಬಾಲ್ ಇತಿಹಾಸದಲ್ಲೇ ಇಷ್ಟು ದೊಡ್ಡ ರ‍್ಯಾಂಕಿಂಗ್‌ನ ತಂಡದ ವಿರುದ್ಧ ಆಡುತ್ತಿರುವುದು ಇದೇ ಮೊದಲು.
  • ಐತಿಹಾಸಿಕ ಹಿನ್ನೆಲೆ: ಬ್ರೆಝಿಲ್‌ನ ಸೀನಿಯರ್ ತಂಡ ಭಾರತಕ್ಕೆ ಬರುತ್ತಿರುವುದು ಇದೇ ಮೊದಲು. 1977 ರಲ್ಲಿ ಬ್ರೆಝಿಲ್‌ನ ದಂತಕಥೆ ಪೀಲೆ ಅವರು ನ್ಯೂಯಾರ್ಕ್ ಕಾಸ್ಮೋಸ್ ತಂಡದ ಪರವಾಗಿ ಕೋಲ್ಕತ್ತಾದಲ್ಲಿ ಆಡಿದ್ದರು.

ಇನ್ನು ಈ ಮೆಗಾ ಈವೆಂಟ್ ಆಯೋಜಿಸಲು ಸುಮಾರು ₹60 ರಿಂದ ₹70 ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಪಂದ್ಯದ ಟಿಕೆಟ್ ದರಗಳು ಸಾಮಾನ್ಯಕ್ಕಿಂತ ಹೆಚ್ಚಿರಲಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ 10 ತಂಡಗಳು ನೇರ ಆಯ್ಕೆ

ಒಟ್ಟಾರೆಯಾಗಿ ಹೇಳುವುದಾದರೆ, ಅಕ್ಟೋಬರ್ 3 ರಂದು ನಡೆಯಲಿರುವ ಭಾರತ ಮತ್ತು ಬ್ರೆಝಿಲ್ ನಡುವಿನ ಈ ಮುಖಾಮುಖಿ ಕೇವಲ ಒಂದು ಫುಟ್‌ಬಾಲ್ ಪಂದ್ಯವಲ್ಲ, ಇದು ಭಾರತೀಯ ಕ್ರೀಡಾ ಇತಿಹಾಸದ ಸುವರ್ಣ ಅಧ್ಯಾಯ. ಸಾಂಬಾ ಮ್ಯಾಜಿಕ್ ವರ್ಸಸ್ ಬ್ಲೂ ಟೈಗರ್ಸ್ ನಡುವಿನ ಈ ರೋಚಕ ಕದನವನ್ನು ಕಣ್ಣುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದು, ಈ ಪಂದ್ಯದ ಮೂಲಕ ಭಾರತ ತಂಡ ಹೊಸ ಇತಿಹಾಸ ಬರೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Source link

Railway Group D PET 2026: ರೈಲ್ವೆ ಗ್ರೂಪ್ ಡಿ ನೇಮಕಾತಿ; ಪಿಸಿಕಲ್‌ ಟೆಸ್ಟ್‌ನಲ್ಲಿ ಶೇ.40ರಷ್ಟು ಅಭ್ಯರ್ಥಿಗಳು ಅನುತ್ತೀರ್ಣ – Kannada News | Railway Group D PET Exam: 40 percentage Candidates Fail; Special Rules for Pregnant Women

ರೈಲ್ವೆ ಗ್ರೂಪ್ ಡಿ PET ಪರೀಕ್ಷೆImage Credit source: youtube

ಪ್ರಯಾಗ್‌ರಾಜ್: ರೈಲ್ವೆ ಇಲಾಖೆಯ 32,438 ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ನಡೆಯುತ್ತಿರುವ ದೈಹಿಕ ದಕ್ಷತೆ ಪರೀಕ್ಷೆಯಲ್ಲಿ (PET) ಅಭ್ಯರ್ಥಿಗಳಿಗೆ ಕಠಿಣ ಸವಾಲು ಎದುರಾಗಿದೆ. ಪ್ರಯಾಗ್‌ರಾಜ್‌ನ ಡಿಎಸ್‌ಎ (DSA) ಮೈದಾನದಲ್ಲಿ ನಡೆದ ಪರೀಕ್ಷೆಯ ಮೊದಲ ಐದು ದಿನಗಳಲ್ಲಿ ಹಾಜರಾದ ಅಭ್ಯರ್ಥಿಗಳ ಪೈಕಿ ಸುಮಾರು ಶೇಕಡಾ 40 ರಷ್ಟು ಮಂದಿ ನಿಗದಿತ ಮಾನದಂಡಗಳನ್ನು ಪೂರೈಸಲು ವಿಫಲರಾಗಿದ್ದಾರೆ.

ಕಠಿಣ ಓಟ ಮತ್ತು ಆಮೆಗತಿಯ ವಾತಾವರಣ:

ಮೈದಾನದಲ್ಲಿ ಕಂಡುಬಂದ ವಿಪರೀತ ಆರ್ದ್ರತೆ (Humidity) ಮತ್ತು ಉಷ್ಣಾಂಶವು ಅಭ್ಯರ್ಥಿಗಳನ್ನು ಹೈರಾಣಾಗಿಸಿದೆ. 1,000 ಮೀಟರ್‌ಗಳ ಕಠಿಣ ಓಟವನ್ನು ಪೂರ್ಣಗೊಳಿಸಿದ ತಕ್ಷಣವೇ ಅನೇಕ ಅಭ್ಯರ್ಥಿಗಳು ಆಯಾಸದಿಂದ ಮೈದಾನದಲ್ಲೇ ಕುಸಿದುಬೀಳುವ ದೃಶ್ಯಗಳು ಕಂಡುಬಂದವು. ಆದಾಗ್ಯೂ, 35 ಕೆಜಿ ತೂಕ ಹೊತ್ತು ಸಾಗುವ ಪರೀಕ್ಷೆಯಲ್ಲಿ ಹೆಚ್ಚಿನ ಪುರುಷ ಅಭ್ಯರ್ಥಿಗಳು ಸುಲಭವಾಗಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಯ ಫಲಿತಾಂಶದ ವಿವರಣೆ:

ಮೊದಲ ಐದು ದಿನಗಳಲ್ಲಿ ಒಟ್ಟು 2,814 ಅಭ್ಯರ್ಥಿಗಳು ಪಿಇಟಿ ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 1,693 ಮಂದಿ (ಶೇ. 60.16) ಉತ್ತೀರ್ಣರಾಗಿದ್ದಾರೆ ಹಾಗೂ 1,121 ಮಂದಿ (ಶೇ. 39.84) ನಿಗದಿತ ಮಾನದಂಡ ಪೂರೈಸಲಾಗದೆ ಅನುತ್ತೀರ್ಣರಾಗಿದ್ದಾರೆ. ಮೊದಲ ನಾಲ್ಕು ದಿನಗಳಿಗೆ 3,733 ಅಭ್ಯರ್ಥಿಗಳನ್ನು ಕರೆಯಲಾಗಿದ್ದು, ಕೇವಲ 2,564 ಮಂದಿ ಮಾತ್ರ ಹಾಜರಾಗಿ ಅವರಲ್ಲಿ 1,521 ಜನರು ಅರ್ಹತೆ ಪಡೆದಿದ್ದರು. ಐದನೇ ದಿನ ಹಾಜರಾದ 250 ಅಭ್ಯರ್ಥಿಗಳಲ್ಲಿ 172 ಮಂದಿ ಉತ್ತೀರ್ಣರಾಗಿದ್ದು, ಮಳೆಯಿಂದಾಗಿ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಶುಕ್ರವಾರ ಮರುಅವಕಾಶ ನೀಡಲಾಯಿತು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ದೈಹಿಕ ದಕ್ಷತೆಯ ಮಾನದಂಡಗಳು:

ಪರೀಕ್ಷೆಯ ನಿಯಮಾವಳಿಗಳ ಪ್ರಕಾರ, ಪುರುಷ ಅಭ್ಯರ್ಥಿಗಳು 35 ಕೆಜಿ ತೂಕವನ್ನು ಎತ್ತಿಕೊಂಡು 100 ಮೀಟರ್‌ ದೂರವನ್ನು 2 ನಿಮಿಷಗಳಲ್ಲಿ ಕ್ರಮಿಸಬೇಕು ಹಾಗೂ 1,000 ಮೀಟರ್ ಓಟವನ್ನು 4 ನಿಮಿಷ 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು ಮಹಿಳಾ ಅಭ್ಯರ್ಥಿಗಳು 20 ಕೆಜಿ ತೂಕವನ್ನು ಎತ್ತಿಕೊಂಡು 100 ಮೀಟರ್‌ ದೂರವನ್ನು 2 ನಿಮಿಷಗಳಲ್ಲಿ ಕ್ರಮಿಸಬೇಕಿದ್ದು, 1,000 ಮೀಟರ್ ಓಟವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಗರ್ಭಿಣಿ ಅಭ್ಯರ್ಥಿಗಳಿಗೆ ರೈಲ್ವೆಯ ವಿಶೇಷ ವಿನಾಯಿತಿ:

ಪರೀಕ್ಷೆಯ ವೇಳೆ ಬಿಹಾರ ಮೂಲದ ಗರ್ಭಿಣಿ ಮಹಿಳೆಯೊಬ್ಬರು ಹಾಜರಾಗಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಗರ್ಭಧಾರಣೆ ದೃಢಪಟ್ಟ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಆಕೆಗೆ ಓಟದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ರೈಲ್ವೆ ನಿಯಮಾವಳಿಗಳ ಪ್ರಕಾರ, ಇಂತಹ ಗರ್ಭಿಣಿ ಅಭ್ಯರ್ಥಿಗಳಿಗೆ ಹೆರಿಗೆಯಾದ ಆರು ತಿಂಗಳ ನಂತರ ದೈಹಿಕ ದಕ್ಷತೆ ಪರೀಕ್ಷೆಗೆ ಹಾಜರಾಗಲು ವಿಶೇಷ ಅವಕಾಶ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಕಾವೇರಿ ಕಿಚ್ಚಿಗೆ ‘ಜನ ನಾಯಗನ್’ ತತ್ತರ; ರಾಜ್ಯಾದ್ಯಂತ ಥಿಯೇಟರ್‌ಗಳಿಂದ ಹಲವು ಪ್ರದರ್ಶನ ರದ್ದು – Kannada News | Cauvery Water Dispute Impact: Tamil Movie Jana Nayagan Shows Cancelled in Karnataka Theatres

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ವಿವಾದದ ಕಾವು ಈಗ ಚಿತ್ರರಂಗಕ್ಕೂ ತಟ್ಟಿದೆ. ತಮಿಳಿನ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ (Jana Nayagan Movie) ಕಾವೇರಿ ವಿವಾದದ ಬಿಸಿ ಜೋರಾಗಿಯೇ ತಟ್ಟಿದ್ದು, ರಾಜ್ಯದ ಹಲವು ಥಿಯೇಟರ್‌ಗಳಿಂದ ಸಿನಿಮಾ ಎತ್ತಂಗಡಿಯಾಗುತ್ತಿದೆ. ಬೆಂಗಳೂರಿನಲ್ಲಿ ಶೋಗಳ ಸಂಖ್ಯೆ ತೀವ್ರ ಕುಸಿತ ಕಂಡಿದೆ. ಏಕಪರದೆ ಚಿತ್ರಮಂದಿರಗಳಲ್ಲಿ ಹೆಚ್ಚಿನ ಶೋ ತೆಗೆಯಲಾಗುತ್ತಿದೆ.

ಅಂಜನ್ ಥಿಯೇಟರ್‌ನಿಂದ ಸಿನಿಮಾ ಎತ್ತಂಗಡಿ

ಕನ್ನಡ ಪರ ಸಂಘಟನೆಗಳು ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮಿಳು ಸಿನಿಮಾ ಪ್ರದರ್ಶನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನವನ್ನು ರದ್ದುಗೊಳಿಸುತ್ತಿದ್ದಾರೆ. ನಿನ್ನೆವರೆಗೂ ಬೆಂಗಳೂರಿನ ಪ್ರಸಿದ್ಧ ಅಂಜನ್ ಥಿಯೇಟರ್‌ನಲ್ಲಿ ‘ಜನನಾಯಗನ್’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಎಚ್ಚರಿಕೆಯ ಬೆನ್ನಲ್ಲೇ ಥಿಯೇಟರ್‌ನಲ್ಲಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ. ಇಂದು ಚಿತ್ರದ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಈ ಗಲಾಟೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂಜನ್ ಥಿಯೇಟರ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

500ರಿಂದ 100ಕ್ಕೆ ಕುಸಿದ ಶೋಗಳು

ತಮಿಳು ಸಿನಿಮಾದ ಪ್ರದರ್ಶನವನ್ನು ರದ್ದುಗೊಳಿಸಿರುವ ಚಿತ್ರಮಂದಿರಗಳು ಈಗ ಪರ್ಯಾಯ ಮಾರ್ಗವನ್ನು ಕಂಡುಕೊಂಡಿವೆ. ಅಂಜನ್ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಇಂದು ‘ಜನನಾಯಗನ್’ ಬದಲಿಗೆ ಇಂಗ್ಲಿಷ್ ಹಾಗೂ ತೆಲುಗು ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ನಿನ್ನೆ ಬೆಂಗಳೂರು ನಗರದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಜನ ನಾಯಗನ್’ ಚಿತ್ರದ 500ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಕಾವೇರಿ ಪ್ರತಿಭಟನೆಯ ತೀವ್ರತೆಯಿಂದಾಗಿ ಇಂದು ಶೋಗಳ ಸಂಖ್ಯೆ ಕೇವಲ 100ಕ್ಕೆ ಇಳಿದಿದೆ. ಎಲ್ಲಾ ಚಿತ್ರಮಂದಿರಗಳಿಂದಲೂ ಸದ್ದಿಲ್ಲದೆ ತಮಿಳು ಸಿನಿಮಾದ ಶೋಗಳನ್ನು ತೆಗೆದುಹಾಕಲಾಗುತ್ತಿದೆ.

ಇದನ್ನೂ ಓದಿ: ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ

ಕಾವೇರಿ ನದಿ ನೀರಿನ ವಿವಾದವೇ ಪ್ರಮುಖ ಕಾರಣ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ. ಈ ಹಿನ್ನೆಲೆಯಲ್ಲಿ ತಮಿಳು ಭಾಷೆಯ ಸಿನಿಮಾಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸಬಾರದು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಕಾವೇರಿ ಕಿಚ್ಚು ಹೆಚ್ಚಾಗುತ್ತಿರುವುದರಿಂದ ಚಿತ್ರಮಂದಿರಗಳ ಮೇಲೆ ದಾಳಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ಮಾಲೀಕರು ಸ್ವಯಂಪ್ರೇರಿತರಾಗಿ ತಮಿಳು ಚಿತ್ರದ ಪ್ರದರ್ಶನವನ್ನು ನಿಲ್ಲಿಸುತ್ತಿದ್ದಾರೆ. ಇದಲ್ಲದೆ ಕಾವೇರಿ ಕೊಳ್ಳದ ಭಾಗದಲ್ಲೂ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಎಂಎಫ್ ಪಶು ಆಹಾರ ಘಟಕದಲ್ಲಿ ಗೋಲ್ಮಾಲ್: ಕಳಪೆ ಆಹಾರದಿಂದ 1,600 ಹಸುಗಳ ಸಾವಿನ ಶಂಕೆ! – Kannada News | KMF Cattle Feed Scam Alleged: Poor Quality Feed Linked to Cow Deaths in Karnataka

ಬೆಂಗಳೂರು, ಆಗಸ್ಟ್ 01: ಹಾಲು ನೀಡಿ ರೈತರ ಬದುಕಿಗೆ ಆಸರೆಯಾಗಿದ್ದ ಜಾನುವಾರುಗಳಿಗೆ ಕರ್ನಾಟಕ ಹಾಲು ಮಹಾಮಂಡಳ (KMF) ಕಳಪೆ ಪಶು ಆಹಾರ ನೀಡಿ ವಿಷವುಣಿಸುತ್ತಿದೆಯಾ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ. ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸುತ್ತಿರುವುದು ಅಷ್ಟೇ ಅಲ್ಲದೆ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಕಳಪೆ ಆಹಾರ ಸೇವಿಸಿ ಕಳೆದ ಎರಡು ತಿಂಗಳಿನಲ್ಲಿ ಬರೋಬ್ಬರಿ 1,600 ಹಸುಗಳು ಸಾವನ್ನಪ್ಪಿದ್ದು, ಸಾವಿರಾರು ಜಾನುವಾರುಗಳು ರೋಗರುಜಿನದಿಂದ ನರಳುತ್ತಿವೆ.

ರಾಜಾನುಕುಂಟೆ ಘಟಕದಲ್ಲಿ ಕೋಟ್ಯಂತರ ರೂ. ವಂಚನೆ, ಲ್ಯಾಬ್ ವರದಿ ಬಹಿರಂಗ!

ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿಯಲ್ಲಿ ಕೆಎಂಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾರಿ ಗೋಲ್ಮಾಲ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಶು ಆಹಾರಕ್ಕೆ ಅಗತ್ಯವಿರುವ ಕಾಕಂಬಿ (Molasses) ಖರೀದಿ ವೇಳೆಯಲ್ಲಿ ಅತಿ ಕಡಿಮೆ ಗುಣಮಟ್ಟದ TRS (Total Reducing Sugars) ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಅದನ್ನು ಖರೀದಿಸಿದ್ದಾರೆ.

ನಿಯಮಗಳ ಪ್ರಕಾರ ಲ್ಯಾಬ್ ಪರೀಕ್ಷೆ ನಡೆಸಿ ಗುಣಮಟ್ಟ ದೃಢಪಟ್ಟ ಮೇಲಷ್ಟೇ ಪಶು ಆಹಾರ ತಯಾರಿಸಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬರೋಬ್ಬರಿ 86,000 ಮೆಟ್ರಿಕ್ ಟನ್ ಕಳಪೆ ಪಶು ಆಹಾರ ಉತ್ಪಾದನೆಯಾಗಿದೆ. ಈ ಕಳಪೆ ಕಚ್ಚಾ ವಸ್ತುಗಳ ಸತ್ಯಾಸತ್ಯತೆಯ ಲ್ಯಾಬ್ ರಿಪೋರ್ಟ್ (Lab Report) ‘ಟಿವಿ9’ ಗೆ ಲಭ್ಯವಾಗಿದೆ.

ಹಾಲಿನ ಇಳುವರಿ ಕುಸಿತ, ಗರ್ಭ ಧರಿಸದೆ ನರಳುತ್ತಿರುವ ಹಸುಗಳು!

ಕಳಪೆ ಗುಣಮಟ್ಟದ ‘ನಂದಿನಿ ಪಶು ಆಹಾರ’ ಸೇವನೆಯಿಂದ ಜಾನುವಾರುಗಳ ಆರೋಗ್ಯ ಸಂಪೂರ್ಣ ಕ್ಷೀಣಿಸಿದೆ. ಕೆಟ್ಟ ವಾಸನೆ ಹಾಗೂ ಕಳಪೆ ಮಟ್ಟದ ಕಾರಣಕ್ಕಾಗಿ ಹಸುಗಳು ಪಶು ಆಹಾರ ತಿನ್ನಲು ನಿರಾಕರಿಸುತ್ತಿವೆ. ಆಹಾರ ಸೇವಿಸದ ಕಾರಣ ಹಸುಗಳು ಗರ್ಭ ಧರಿಸದೆ, ಬಡಕಲಾಗಿ ಅನಾರೋಗ್ಯದಿಂದ ನರಳುತ್ತಿದ್ದು, 1,600 ಜಾನುವಾರುಗಳು ಅಸಹಜವಾಗಿ ಮೃತಪಟ್ಟಿವೆ. ಜಾನುವಾರುಗಳು ಕಾಯಿಲೆಗೆ ಬಿದ್ದಿರುವುದರಿಂದ ಹಾಲಿನ ಇಳುವರಿ ತೀವ್ರವಾಗಿ ಕುಸಿದಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ರೈತರ ಮೇಲೆ ನಂದಿನಿ ಪಶು ಆಹಾರ ಖರೀದಿಗೆ ಒತ್ತಡ!

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ, ರಾಮನಗರ ಮತ್ತು ಚನ್ನಪಟ್ಟಣ ಭಾಗದ ಹೈನುಗಾರರಲ್ಲಿ ತೀವ್ರ ಆತಂಕ ಆವರಿಸಿದೆ. ಪ್ರತಿಯೊಂದು ಡೈರಿ ಸೊಸೈಟಿಯಲ್ಲೂ ಸಣ್ಣ ಪ್ರಮಾಣದ ವ್ಯತ್ಯಾಸವಿದ್ದರೂ ಹಾಲನ್ನು ತಿರಸ್ಕರಿಸುವ ಅಧಿಕಾರಿಗಳು, ರೈತರಿಗೆ ಅನಿವಾರ್ಯವಾಗಿ ನಂದಿನಿ ಪಶು ಆಹಾರವನ್ನೇ ಖರೀದಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಬಮೂಲ್ (BAMUL) ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 14,500 ಮೆಟ್ರಿಕ್ ಟನ್ ಪಶು ಆಹಾರ ಮಾರಾಟವಾಗುತ್ತಿದ್ದು, ಆಹಾರ ಸೇವಿಸದೆ ಹಸುಗಳು ಸಾಯುತ್ತಿರುವುದರಿಂದ ಆಕ್ರೋಶಗೊಂಡ ರೈತರು ಟನ್‌ಗಟ್ಟಲೆ ಪಶು ಆಹಾರವನ್ನು ರಾಜಾನುಕುಂಟೆ ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ರೈತ ಕುಟುಂಬಗಳು ಈಗ ಕಂಗಾಲಾಗಿದ್ದು, ಈ ಹಗರಣದ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:30 am, Sat, 1 August 26

Source link

ಕೇರಳದಲ್ಲಿ ಭಾರೀ ಮಳೆ, ಭೂಕುಸಿತ – ಪ್ರವಾಹಕ್ಕೆ ಮೂವರ ಸಾವು: ಇಡುಕ್ಕಿ ಸೇರಿ ಹಲವು ಜಿಲ್ಲೆಗಳಲ್ಲಿ ಅವಾಂತರ – Kannada News | Kerala Heavy Rain: 3 Killed in Landslides, Floods Worsen Across Several Districts

ಕೇರಳದಲ್ಲಿ ಭಾರೀ ಮಳೆ, ಭೂಕುಸಿತ – ಪ್ರವಾಹಕ್ಕೆ ಮೂವರು ಬಲಿImage Credit source: TV9 Network

ಇಡುಕ್ಕಿ, ಆಗಸ್ಟ್ 1: ಕೇರಳದಲ್ಲಿ ಮಳೆ (Kerala Rains) ಅಬ್ಬರ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತಗಳಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಮಣ್ಣಿನಡಿ ಸಿಲುಕಿಕೊಂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಡುಕ್ಕಿ ಜಿಲ್ಲೆಯ ಕೂಡಯತ್ತೂರು ಸಮೀಪದ ಆದೂರ್ಮಲ ಪ್ರದೇಶದಲ್ಲಿ ಶನಿವಾರ ಮುಂಜಾನೆ ಭೂಕುಸಿತ ಸಂಭವಿಸಿ ಸುಮತಿ ಎಂಬುವವರು ಮೃತಪಟ್ಟಿದ್ದಾರೆ. ಭೂಕುಸಿತದ ಅವಶೇಷಗಳು ಮನೆಯ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಅವರ ಪತಿ ಹಾಗೂ ಪುತ್ರನನ್ನು ರಕ್ಷಿಸಿದ್ದು, ಇಬ್ಬರಿಗೂ ಗಾಯಗಳಾಗಿವೆ. ಅವರನ್ನು ತೊಡುಪುಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎನ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ, ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಮತಿ ಅವರ ಮೃತದೇಹ ಪತ್ತೆಯಾಗಿದೆ. ಭೂಕುಸಿತದಿಂದ ಕುಟುಂಬದ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

ಕೊಟ್ಟಾಯಂನಲ್ಲೂ ಭಾರೀ ಭೂಕುಸಿತ

ಇದೇ ವೇಳೆ ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತೊಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಹ್ನಿ ಅವರ ಪುತ್ರ ಜೋಸೆಫ್ ಮೃತಪಟ್ಟಿದ್ದಾರೆ. ಭೂಕುಸಿತದ ಅವಶೇಷಗಳಡಿ ಅವರ ತಾಯಿ ಸಿಲುಕಿರುವ ಶಂಕೆಯಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೋಸೆಫ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಗಳಿಂದ ಮೃತಪಟ್ಟಿದ್ದಾರೆ.

ಇಡುಕ್ಕಿಯ ವಾಗಮನ್​ನಲ್ಲಿ ಭೂಕುಸಿತ

ಇಡುಕ್ಕಿ ಜಿಲ್ಲೆಯ ವಾಗಮನ್ ಪ್ರದೇಶದಲ್ಲೂ ಮತ್ತೊಂದು ಭೂಕುಸಿತ ಸಂಭವಿಸಿದ್ದು, ವೈಕಂ ಮೂಲದ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯಲ್ಲಿ ಮಲಗಿದ್ದ ವೇಳೆ ಭೂಕುಸಿತ ಸಂಭವಿಸಿದ್ದು, ಹಲವು ಗಂಟೆಗಳ ಶೋಧದ ಬಳಿಕ ಅವರ ಮೃತದೇಹ ಪತ್ತೆಯಾಗಿದೆ.

ಪ್ರವಾಹ, ಭೂಕುಸಿತದಿಂದ ಸಂಚಾರ ಅಸ್ತವ್ಯಸ್ತ

ಇಡುಕ್ಕಿಯ ಹಲವು ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಉಪ್ಪುತಾರದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್ ಭೂಕುಸಿತಕ್ಕೆ ಸಿಲುಕಿ ಹಾನಿಯಾಗಿದೆ. ಪುಲ್ಲಕಯಾರ್ ನದಿ ಉಕ್ಕಿ ಹರಿದ ಪರಿಣಾಮ ಕೊಕ್ಕಯಾರ್‌ನ ತಗ್ಗು ಸೇತುವೆ ಮುಳುಗಿದ್ದು, ಸುತ್ತಮುತ್ತಲಿನ ಸುಮಾರು ಆರು ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕಟ್ಟಪ್ಪನ-ವಳವಾಡ ರಸ್ತೆಯಲ್ಲೂ ಭೂಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ. ವಂಡಿಪೆರಿಯಾರ್‌ನ ಚೊಟ್ಟೂಪಾರ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ 183ರ ಕೆಲ ಭಾಗಗಳು ಜಲಾವೃತಗೊಂಡಿವೆ. ನೆಲ್ಲಿಮಲದಲ್ಲೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ಕೊಟ್ಟಾಯಂ, ಪತ್ತನಂತಿಟ್ಟದಲ್ಲೂ ಪ್ರವಾಹ

ಕೊಟ್ಟಾಯಂ ಜಿಲ್ಲೆಯ ಎರಟ್ಟೂಪೆಟ್ಟ, ಕಂಜಿರಪ್ಪಳ್ಳಿ, ಕೂಟ್ಟಿಕ್ಕಲ್​ನಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಎರಟ್ಟೂಪೆಟ್ಟ ಪಟ್ಟಣದಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ರಕ್ಷಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಮನೆಗಳ ಮೇಲಂತಸ್ತಿನಲ್ಲಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಕೂಟ್ಟಿಕ್ಕಲ್ ಮತ್ತು ಮುಂಡಕ್ಕಯಂನಲ್ಲಿ ಮಣಿಮಲ ಹಾಗೂ ಪುಲ್ಲಕಯಾರ್ ನದಿಗಳು ಉಕ್ಕಿ ಹರಿದ ಪರಿಣಾಮ ತಗ್ಗು ಸೇತುವೆಗಳು ಮುಳುಗಿವೆ. ಪತ್ತನಂತಿಟ್ಟ ಜಿಲ್ಲೆಯ ರನ್ನಿ ಸೇರಿದಂತೆ ಹಲವು ಪ್ರದೇಶಗಳಲ್ಲೂ ಪ್ರವಾಹದ ಆತಂಕ ಎದುರಾಗಿದೆ. ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡಿವೆ. ರಕ್ಷಣಾ ಕಾರ್ಯಾಚರಣೆಗೆ ದೋಣಿಗಳನ್ನು ನಿಯೋಜಿಸಲಾಗಿದ್ದು, ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.

ಕೇಂದ್ರ ಕೇರಳದ ಹೊರತಾಗಿಯೂ ಕೊಲ್ಲಂ, ಕೋಝಿಕ್ಕೋಡ್, ಮಲಪ್ಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ಸಣ್ಣ ಪ್ರಮಾಣದ ಭೂಕುಸಿತ ವರದಿಯಾಗಿದೆ.

ಕೇರಳದ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್

ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೇರಳದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಳಂ, ತ್ರಿಶೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates 01 Aug: ಚಿನ್ನದ ಬೆಲೆ ಗ್ರಾಮ್​ಗೆ 35 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 1st August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 1: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಗ್ರಾಮ್​ಗೆ 35 ರೂ ಕಡಿಮೆಗೊಂಡಿದೆ. ಇದರೊಂದಿಗೆ ಬಂಗಾರ ದರದಲ್ಲಿ (Gold Price) ಕಳೆದ ನಾಲ್ಕು ತಿಂಗಳಿಂದ ಆಗುತ್ತಿರುವ ನಿರಂತರ ಏರಿಳಿತಗಳು ಮುಂದುವರಿಯುತ್ತಿದೆ. ವಿದೇಶಗಳಲ್ಲೂ ಇವತ್ತು ಇದರ ಬೆಲೆ ಅಲ್ಪಸ್ವಲ್ಪ ವ್ಯತ್ಯಯಗೊಂಡಿದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆಯಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 1ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,816 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,220 ರೂ
  • ಚೆನ್ನೈ: 13,220 ರೂ
  • ಮುಂಬೈ: 13,220 ರೂ
  • ದೆಹಲಿ: 13,235 ರೂ
  • ಕೋಲ್ಕತಾ: 13,220 ರೂ
  • ಕೇರಳ: 13,220 ರೂ
  • ಅಹ್ಮದಾಬಾದ್: 13,225 ರೂ
  • ಜೈಪುರ್: 13,235 ರೂ
  • ಲಕ್ನೋ: 13,235 ರೂ
  • ಭುವನೇಶ್ವರ್: 13,220 ರೂ

ಇದನ್ನೂ ಓದಿ: LPG Cylinder price: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 550 ರಿಂಗಿಟ್ (12,819 ರುಪಾಯಿ)
  • ದುಬೈ: 495.50 ಡಿರಾಮ್ (12,866 ರುಪಾಯಿ)
  • ಅಮೆರಿಕ: 135 ಡಾಲರ್ (12,874 ರುಪಾಯಿ)
  • ಸಿಂಗಾಪುರ: 179 ಸಿಂಗಾಪುರ್ ಡಾಲರ್ (13,295 ರುಪಾಯಿ)
  • ಕತಾರ್: 495.50 ಕತಾರಿ ರಿಯಾಲ್ (12,961 ರೂ)
  • ಸೌದಿ ಅರೇಬಿಯಾ: 509 ಸೌದಿ ರಿಯಾಲ್ (12,927 ರುಪಾಯಿ)
  • ಓಮನ್: 52.50 ಒಮಾನಿ ರಿಯಾಲ್ (13,003 ರುಪಾಯಿ)
  • ಕುವೇತ್: 41.34 ಕುವೇತಿ ದಿನಾರ್ (12,812 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 235 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 235 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಂಜಯ್ ದತ್‌ಗೆ ಗಟ್ಟಿಯಾಗಿ ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸಿದ ಸಲ್ಮಾನ್ ಖಾನ್ – Kannada News | Salman Khan Gets Emotional As He Gives A Tight Hug To Bada Bhai Sanjay Dutt: I Love You

ಬಾಲಿವುಡ್‌ನ ಇಬ್ಬರು ಸ್ಟಾರ್ ನಟರ ಸ್ನೇಹಕ್ಕೆ ದಶಕಗಳ ಇತಿಹಾಸವಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಆಪ್ತ ಸ್ನೇಹಿತ ಸಂಜಯ್ ದತ್ ಅವರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ. ಶನಿವಾರ ಮುಂಜಾನೆ ಇವರಿಬ್ಬರ ಅಪರೂಪದ ಭೇಟಿಯ ಸುಂದರ ಫೋಟೋಗಳು ಹೊರಬಂದಿವೆ. ಸಲ್ಮಾನ್ ಖಾನ್ ತಮ್ಮ ಈ ಅಣ್ಣನಂತಹ ಸ್ನೇಹಿತನಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ಸಂಜು ಬಾಬಾ ಅವರನ್ನು ತಬ್ಬಿ ಮುದ್ದಾಡಿದ ಸಲ್ಲು ಭಾಯ್

ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂಜಯ್ ದತ್ ಜೊತೆಗಿನ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂಜಯ್ ದತ್ ಅವರ ನಿವಾಸದಲ್ಲಿ ಈ ಇಬ್ಬರು ನಟರು ಪರಸ್ಪರ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ ಸಲ್ಮಾನ್ ಖಾನ್ ಒಂದು ಸುಂದರ ಸಂದೇಶವನ್ನು ಬರೆದಿದ್ದಾರೆ. ಸಂಜು ಬಾಬಾ ಎಂದಿಗೂ ನಮ್ಮೆಲ್ಲರ ಬಾಬಾ ಎಂದು ಅವರು ಬಣ್ಣಿಸಿದ್ದಾರೆ. ನನ್ನ ಹಿರಿಯ ಅಣ್ಣನಂತಿರುವ ಸಂಜಯ್ ದತ್ ಅವರನ್ನು ದೇವರು ಯಾವಾಗಲೂ ಖುಷಿಯಾಗಿಟ್ಟಿರಲಿ ಎಂದು ಹಾರೈಸಿದ್ದಾರೆ. ಕೊನೆಯಲ್ಲಿ ಐ ಲವ್ ಯೂ ಬಾಬಾ ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ದಶಕಗಳ ಹಳೆಯ ಬಾಲಿವುಡ್ ಬ್ರದರ್ಸ್ ಸ್ನೇಹ

ಸಲ್ಮಾನ್ ಖಾನ್ ಅವರ ಈ ಪೋಸ್ಟ್‌ಗೆ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರು ಜೀವನ ಪೂರ್ತಿ ಹೀಗೆಯೇ ಅಣ್ಣ-ತಮ್ಮಂದಿರಂತೆ ಇರಲಿ ಎಂದು ಕಮೆಂಟ್ ಮಾಡಿದ್ದಾರೆ. ಸಂಜಯ್ ದತ್ ಪುತ್ರಿ ತ್ರಿಶಾಲಾ ದತ್ ಕೂಡ ಹಾರ್ಟ್ ಎಮೋಜಿಗಳನ್ನು ಹಾಕಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಮತ್ತು ಸಂಜಯ್ ದತ್ ಬಾಲಿವುಡ್‌ನ ಅತ್ಯಂತ ಆಪ್ತ ಸ್ನೇಹಿತರಾಗಿದ್ದಾರೆ. ಇವರಿಬ್ಬರು ಒಟ್ಟಿಗೆ ನಟಿಸಿದ 1991 ರ ‘ಸಾಜನ್’ ಮತ್ತು 2000 ರ ‘ಚಲ್ ಮೇರೆ ಭಾಯಿ’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.

ಇದನ್ನೂ ಓದಿ: ಬಿರಿಯಾನಿ ತಿನ್ನುತ್ತಾ ಹಣೆಗೆ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದ ಸಲ್ಮಾನ್ ಖಾನ್

ಖ್ಯಾತ ಕುಟುಂಬದ ಹಿನ್ನೆಲೆ ಮತ್ತು ಮುಂದಿನ ಚಿತ್ರಗಳು

ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇಬ್ಬರೂ ಬಾಲಿವುಡ್‌ನ ಪ್ರತಿಷ್ಠಿತ ಕುಟುಂಬದಿಂದ ಬಂದವರಾಗಿದ್ದಾರೆ. ಸಲ್ಮಾನ್ ಖಾನ್ ಅವರು ಪ್ರಖ್ಯಾತ ಚಿತ್ರಕಥೆಗಾರ ಸಲೀಂ ಖಾನ್ ಅವರ ಪುತ್ರನಾಗಿದ್ದಾರೆ. ಇನ್ನು ಸಂಜಯ್ ದತ್ ಅವರು ದಂತಕಥೆಗಳಾದ ಸುನಿಲ್ ದತ್ ಮತ್ತು ನರ್ಗಿಸ್ ಅವರ ಪುತ್ರನಾಗಿದ್ದಾರೆ. ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾಗಳ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಅವರು ಮುಂದಿನ ದಿನಗಳಲ್ಲಿ 2020ರ ಗಲ್ವಾನ್ ವ್ಯಾಲಿ ಸಂಘರ್ಷದ ಆಧಾರಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ದಶಕಗಳ ಹಳೆಯ ಆಪ್ತ ಸ್ನೇಹಿತ ಸಂಜಯ್ ದತ್ ಅವರನ್ನು ಭೇಟಿಯಾಗಿ ಭಾವುಕರಾಗಿದ್ದಾರೆ. ಸಂಜು ಬಾಬಾ ಅವರನ್ನು ತಮ್ಮ ಹಿರಿಯ ಅಣ್ಣ ಎಂದು ಕರೆದಿರುವ ಸಲ್ಮಾನ್, ಪರಸ್ಪರ ಗಟ್ಟಿಯಾಗಿ ತಬ್ಬಿಕೊಂಡಿರುವ ಅಪರೂಪದ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬೇರೆಯವರ ಮಕ್ಕಳನ್ನು ಹಾದಿ ತಪ್ಪಿಸಿದರೆ, ನಿಮ್ಮ ಮಕ್ಕಳಿಗೂ ಅದೇ ಪರಿಸ್ಥಿತಿ ಬರುತ್ತದೆ’; ಕಂಗನಾ ರಣಾವತ್ – Kannada News | Kangana Ranaut fires back at trolls using examples of her film roles against her Do not mislead the youth  

ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ಭಾರಿ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಯುವ ಜನತೆಯ ಪ್ರತಿಭಟನೆ ಹಾಗೂ ಸಂಸ್ಕೃತಿಯ ಬಗ್ಗೆ ಕಂಗನಾ ನೀಡಿದ್ದ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದನ್ನೇ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅವರ ಹಳೆಯ ಸಿನಿಮಾಗಳ ಪಾತ್ರಗಳ ಫೋಟೋಗಳನ್ನು ಹಂಚಿಕೊಂಡು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈಗ ಕಂಗನಾ ರಣಾವತ್ ತಮಗೆ ಟ್ರೋಲ್ ಮಾಡಿದವರಿಗೆ ಇನ್‌ಸ್ಟಾಗ್ರಾಮ್ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

ಸಿನಿಮಾ ಪಾತ್ರಗಳು ಮತ್ತು ನೈಜ ಜೀವನ ಒಂದಲ್ಲ

‘ಸಿನಿಮಾದಲ್ಲಿ ನಟಿಸಲು ತಮಗೆ ಕೋಟಿಗಟ್ಟಲೆ ಸಂಭಾವನೆ ಸಿಗುತ್ತದೆ. ಗ್ಲಾಮರ್ ಪ್ರಪಂಚದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಈವೆಂಟ್ ಪ್ಲಾನರ್‌ಗಳ ನಡುವೆ ನಾನು ಇರುತ್ತೇನೆ. ಈ ಸಿನಿಮಾ ಪಾತ್ರಗಳನ್ನು ನೋಡಿ ಶಾಲಾ-ಕಾಲೇಜು ಅಥವಾ ಕ್ಲಬ್‌ಗಳಲ್ಲಿ ಅದೇ ರೀತಿ ಮಾಡಲು ಯುವತಿಯರಿಗೆ ಪ್ರೇರೇಪಿಸುವುದು ತಪ್ಪು. ನೈಜ ಜೀವನಕ್ಕೂ ಮತ್ತು ಸಿನಿಮಾಗೂ ತುಂಬಾ ವ್ಯತ್ಯಾಸವಿದೆ. ಇವತ್ತು ಬೇರೆಯವರ ಮಕ್ಕಳನ್ನು ಹಾದಿ ತಪ್ಪಿಸಿದರೆ ನಾಳೆ ನಿಮ್ಮ ಮಕ್ಕಳಿಗೂ ಇದೇ ಪರಿಸ್ಥಿತಿ ಬರುತ್ತದೆ’ ಎಂದು ಎಚ್ಚರಿಸಿದ್ದಾರೆ.

ಯುವ ಪೀಳಿಗೆಯ ಪ್ರತಿಭಟನೆಗೆ ಕಂಗನಾ ಆಕ್ರೋಶ

ಇತ್ತೀಚಿನ ಜೆನ್​ಜಿ ಪ್ರತಿಭಟನೆಗಳ ವಿಡಿಯೋಗಳು ತಮಗೆ ಅಸಹ್ಯ ಹುಟ್ಟಿಸಿವೆ ಎಂದು ಕಂಗನಾ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಯುವಕರು ಬಳಸುತ್ತಿರುವ ಭಾಷೆ ಮತ್ತು ವರ್ತನೆ ಭಾರತೀಯ ಸಂಸ್ಕೃತಿಗೆ ತಕ್ಕದಲ್ಲ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ಬಗ್ಗೆ ಕೆಟ್ಟ ಪದಗಳನ್ನು ಬಳಸಿರುವುದನ್ನು ಅವರು ಖಂಡಿಸಿದ್ದಾರೆ. ತಾವು ಕೂಡ ವಿದ್ಯಾರ್ಥಿ ದಿನಗಳಲ್ಲಿ ಪ್ರತಿಭಟನೆ ಮಾಡಿದ್ದಾಗಿ ಕಂಗನಾ ನೆನಪಿಸಿಕೊಂಡಿದ್ದಾರೆ. ಆದರೆ ಇಂದಿನ ಯುವಕರಲ್ಲಿ ಯಾವುದೇ ಸಂಸ್ಕಾರ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್

ಚಿತ್ರರಂಗದಲ್ಲಿ 20 ವರ್ಷ ಹಾಗೂ ರಾಜಕೀಯ ಜರ್ನಿ

ಕಂಗನಾ ರಣಾವತ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಈ ವರ್ಷಕ್ಕೆ ಬರೋಬ್ಬರಿ 20 ವರ್ಷಗಳು ಕಳೆದಿವೆ. 2006 ರಲ್ಲಿ ಬಿಡುಗಡೆಯಾದ ‘ಗ್ಯಾಂಗ್‌ಸ್ಟರ್’ ಚಿತ್ರದ ಮೂಲಕ ಅವರು ತಮ್ಮ 18 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಅತ್ಯುತ್ತಮ ನಟನೆಗಾಗಿ ಅವರು ಇದುವರೆಗೆ ಒಟ್ಟು ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಫ್ಯಾಷನ್, ಕ್ವೀನ್ ಚಿತ್ರಗಳು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದವು. ಸದ್ಯ ಅವರು ತಮ್ಮ ತವರು ಕ್ಷೇತ್ರವಾದ ಮಂಡಿಯಿಂದ ಬಿಜೆಪಿ ಟಿಕೆಟ್ ಪಡೆದು ಲೋಕಸಭಾ ಸಂಸದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:31 am, Sat, 1 August 26

Source link

Karnataka Dam Water Level: ಹೇಮಾವತಿಗೆ 11 ಟಿಎಂಸಿ ನೀರು ಸೇರ್ಪಡೆ, ಆಲಮಟ್ಟಿ, ತುಂಗಾ ಜಲಾಶಯಗಳು ಭರ್ತಿ! – Kannada News | Karnataka Dam Water Level Update: Hemavathi Storage Rises, Tunga and Alamatti Dams Full

ಬೆಂಗಳೂರು, ಆಗಸ್ಟ್ 01: ಹಾಸನ ಜಿಲ್ಲೆಯಲ್ಲಿ ಬರಗಾಲದ ಭೀತಿಯ ನಡುವೆಯೂ ಕಳೆದ ಒಂದೂವರೆ ತಿಂಗಳಿನಿಂದ ಸುರಿದ ಸಾಧಾರಣ ಮಳೆಗೆ ಗೊರೂರಿನ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 11 ಟಿಎಂಸಿ (TMC) ನೀರು ಜಲಾಶಯವನ್ನು ಸೇರಿದ್ದು, ಜೂನ್ ಆರಂಭದಲ್ಲಿದ್ದ ನೀರಿನ ಮಟ್ಟಕ್ಕೆ ಹೋಲಿಸಿದರೆ ಪ್ರಸ್ತುತ ಜಲಾಶಯದ ನೀರು 19 ಅಡಿಗಳಷ್ಟು ಏರಿಕೆಯಾಗಿದೆ.

1. ಕಬಿನಿ ಜಲಾಶಯ (ಮೈಸೂರು)

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.

  • ಇಂದಿನ ನೀರಿನ ಮಟ್ಟ: 80.08 ಅಡಿ (ಕಳೆದ ವರ್ಷ: 81.51 ಅಡಿ)
  • ಒಟ್ಟು ನೀರು ಸಂಗ್ರಹ: 17.09 ಟಿಎಂಸಿ (ಬಳಕೆಗೆ ಲಭ್ಯ: 7.28 ಟಿಎಂಸಿ)
  • ಒಳಹರಿವು: 11,747 ಕ್ಯೂಸೆಕ್
  • ಹೊರಹರಿವು (ನದಿಗೆ):500 ಕ್ಯೂಸೆಕ್

ಕಳೆದ 24 ಗಂಟೆಗಳಲ್ಲಿ ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ 60 ಮಿ.ಮೀ. ಮಳೆ ದಾಖಲಾಗಿದೆ.

2. ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಭರ್ತಿ ಹಂತ ತಲುಪಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 519.00 ಮೀಟರ್
  • ಒಳಹರಿವು: 92,500 ಕ್ಯೂಸೆಕ್
  • ಹೊರಹರಿವು: 1,11,308 ಕ್ಯೂಸೆಕ್ (ನದಿಗೆ ನೀರು ಬಿಡುಗಡೆ)

3. ತುಂಗಾ ಜಲಾಶಯ (ಶಿವಮೊಗ್ಗ – ಗಾಜನೂರು)

ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಾಜನೂರಿನ ತುಂಗಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂನ 22 ಕ್ರಸ್ಟ್ ಗೇಟ್‌ಗಳನ್ನು ತೆಗೆದು 55,000 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ. ಕೃಷಿ ಚಟುವಟಿಕೆಗೆ ಮಳೆ ಕೊರತೆಯಿಂದ ಆತಂಕದಲ್ಲಿದ್ದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಯ ರೈತರಿಗೆ ಜಲಾಶಯ ಭರ್ತಿಯಾಗಿರುವುದು ಬೃಹತ್ ನೆಮ್ಮದಿ ತಂದಿದೆ.

4. ಹೇಮಾವತಿ ಜಲಾಶಯ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ 11,686 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದ ನೀರಿನ ಮಟ್ಟ 2,890 ಅಡಿಯಿಂದ 2,909 ಅಡಿಗೆ ಏರಿಕೆಯಾಗಿದೆ. ಒಟ್ಟು 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 25.986 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಶೇ 65 ರಷ್ಟು ಭರ್ತಿಯಾಗಿದೆ. ಕಾವೇರಿ ಜಲವಿವಾದದ ನಡುವೆಯೂ ಗೊರೂರು ಜಲಾಶಯಕ್ಕೆ ನೀರು ಸಮೃದ್ಧವಾಗಿ ಹರಿದುಬರುತ್ತಿರುವುದು ಹಾಸನದ ಜನತೆ ಹಾಗೂ ರೈತರಲ್ಲಿ ಸಂತಸ ತಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:35 am, Sat, 1 August 26

Source link

ಏಕದಿನ ವಿಶ್ವಕಪ್​ಗೆ 10 ತಂಡಗಳು ನೇರ ಆಯ್ಕೆ – Kannada News | ODI World Cup 2027: 10 Teams Secure Direct Qualification

ಇನ್ನುಳಿದ 4 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಅಲ್ಲಿಂದ ಒಟ್ಟು ನಾಲ್ಕು ತಂಡಗಳು ವಿಶ್ವಕಪ್ ಮುಖ್ಯ ಟೂರ್ನಿಗೆ ಲಗ್ಗೆ ಇಡಲಿವೆ. ಆ ಬಳಿಕ ಆರಂಭವಾಗುವ ವಿಶ್ವಕಪ್‌ನ ಒಟ್ಟು 14 ತಂಡಗಳಲ್ಲಿ, ಕೊನೆಯ 3 ಶ್ರೇಯಾಂಕದ ತಂಡಗಳು ಮಾತ್ರ ಮೊದಲ ಹಂತದಲ್ಲಿ ‘ಸೂಪರ್ ಸಿರೀಸ್’ ಪಂದ್ಯಗಳನ್ನಾಡಲಿವೆ. ಇವುಗಳಲ್ಲಿ 2 ತಂಡಗಳು ಹೊರಬಿದ್ದು, ಅಗ್ರಸ್ಥಾನ ಪಡೆಯುವ ಕೇವಲ 1 ತಂಡ ಮಾತ್ರ ಮುಂದಿನ ಮುಖ್ಯ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಇದಾದ ಬಳಿಕ ಒಟ್ಟು 12 ತಂಡಗಳ ನಡುವಣ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇನ್ನು ವಿಶ್ವಕಪ್​ಗೆ ನೇರ ಅರ್ಹತೆ ಪಡೆದಿರುವ 10 ತಂಡಗಳ ಪಟ್ಟಿ ಈ ಕೆಳಗಿನಂತಿದೆ… (PC: ICC)

Source link

Exit mobile version