ಇನ್ನುಳಿದ 4 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಅಲ್ಲಿಂದ ಒಟ್ಟು ನಾಲ್ಕು ತಂಡಗಳು ವಿಶ್ವಕಪ್ ಮುಖ್ಯ ಟೂರ್ನಿಗೆ ಲಗ್ಗೆ ಇಡಲಿವೆ. ಆ ಬಳಿಕ ಆರಂಭವಾಗುವ ವಿಶ್ವಕಪ್‌ನ ಒಟ್ಟು 14 ತಂಡಗಳಲ್ಲಿ, ಕೊನೆಯ 3 ಶ್ರೇಯಾಂಕದ ತಂಡಗಳು ಮಾತ್ರ ಮೊದಲ ಹಂತದಲ್ಲಿ ‘ಸೂಪರ್ ಸಿರೀಸ್’ ಪಂದ್ಯಗಳನ್ನಾಡಲಿವೆ. ಇವುಗಳಲ್ಲಿ 2 ತಂಡಗಳು ಹೊರಬಿದ್ದು, ಅಗ್ರಸ್ಥಾನ ಪಡೆಯುವ ಕೇವಲ 1 ತಂಡ ಮಾತ್ರ ಮುಂದಿನ ಮುಖ್ಯ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಇದಾದ ಬಳಿಕ ಒಟ್ಟು 12 ತಂಡಗಳ ನಡುವಣ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇನ್ನು ವಿಶ್ವಕಪ್ಗೆ ನೇರ ಅರ್ಹತೆ ಪಡೆದಿರುವ 10 ತಂಡಗಳ ಪಟ್ಟಿ ಈ ಕೆಳಗಿನಂತಿದೆ… (PC: ICC)
