CWG 2026: ನೀರಜ್​ ಚೋಪ್ರಾ ಜೊತೆ ಪದಕ ಗೆದ್ದ ಯಶ್ ವೀರ್ ಸಿಂಗ್ – Kannada News | Neeraj Chopra won the silver medal in Commonwealth Games 2026

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಉದಯೋನ್ಮುಖ ತಾರೆ ಯಶ್ ವೀರ್ ಸಿಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಡಬಲ್ ಸಂಭ್ರಮ ತಂದುಕೊಟ್ಟಿದ್ದಾರೆ.

ರೋಚಕ ಹಣಾಹಣಿ:

ಗ್ಲ್ಯಾಸ್ಗೋನ ಸ್ಕಾಟ್‌ಸ್ಟೌನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿತ್ತು. ತೀವ್ರ ಚಳಿ ಮತ್ತು ಬೀಸುತ್ತಿದ್ದ ವೇಗದ ಗಾಳಿಯ ನಡುವೆ ಕಣಕ್ಕಿಳಿದ ನೀರಜ್ ಚೋಪ್ರಾ, ತಮ್ಮ ಎರಡನೇ ಯತ್ನದಲ್ಲಿ 85.83 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಈ ವರ್ಷದ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದರು.

ಭಾರತಕ್ಕೆ ಡಬಲ್ ಧಮಾಕ:

ಶ್ರೀಲಂಕಾದ ರುಮೇಶ್ ತರಂಗ ಪತಿರಾಗೆ ಈ ಪಂದ್ಯಾವಳಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು. ಅವರು 89.75 ಮೀಟರ್ ದೂರ ಎಸೆಯುವ ಮೂಲಕ ತಮ್ಮ ವೈಯಕ್ತಿಕ ಗರಿಷ್ಠ ಸಾಧನೆಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಭಾರತದ ಯಶ್ ವೀರ್ ಸಿಂಗ್ 85.41 ಮೀಟರ್ ದೂರ ಎಸೆದು ವೈಯಕ್ತಿಕ ದಾಖಲೆಯೊಂದಿಗೆ ಕಂಚಿನ ಪದಕ ಗೆದ್ದು ಶ್ರೇಷ್ಠ ಸಾಧನೆ ಮಾಡಿದರು.

ಹಾಲಿ ಚಾಂಪಿಯನ್​ಗೆ ಆಘಾತ:

ಈ ಬಾರಿಯ ಫೈನಲ್ ಪಂದ್ಯವು ಜಾಗತಿಕ ಮಟ್ಟದಲ್ಲಿ ದೊಡ್ಡ ಅಚ್ಚರಿಯೊಂದಕ್ಕೆ ಸಾಕ್ಷಿಯಾಯಿತು. ಒಲಿಂಪಿಕ್ ಚಾಂಪಿಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ ಹಾಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ತೀವ್ರ ನಿರಾಶೆ ಅನುಭವಿಸಿದರು. ಕೇವಲ 77.41 ಮೀಟರ್ ಮಾತ್ರ ಎಸೆಯಲಷ್ಟೇ ಶಕ್ತರಾದ ಅವರು, ಅಗ್ರ 8ರ ಹಂತಕ್ಕೂ ಅರ್ಹತೆ ಪಡೆಯಲಾಗದೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಕೂಟದಿಂದ ಹೊರಬಿದ್ದರು.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

ನೀರಜ್ ಪದಕದ ಬೇಟೆ:

ನೀರಜ್ ಚೋಪ್ರಾ ಚಿನ್ನದ ಪದಕ ಕೈತಪ್ಪಿಸಿಕೊಂಡರೂ, ಈ ಕಠಿಣ ಪರಿಸ್ಥಿತಿಯಲ್ಲಿ ಅವರು ಪ್ರದರ್ಶಿಸಿದ ಸ್ಥಿರತೆ ಭಾರತೀಯ ಕ್ರೀಡಾಲೋಕದ ಹೆಮ್ಮೆಯನ್ನು ಹೆಚ್ಚಿಸಿದೆ. ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಗೇಮ್ಸ್ ಬಳಿಕ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಭಾರತದ ಪದಕದ ಖಾತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಜೊತೆಗೆ ಯಶ್ ವೀರ್ ಸಿಂಗ್ ಅವರ ಕಂಚಿನ ಪದಕವು ಮುಂಬರುವ ದಿನಗಳಲ್ಲಿ ಭಾರತೀಯ ಜಾವೆಲಿನ್ ರಂಗಕ್ಕೆ ಹೊಸ ಭರವಸೆ ನೀಡಿದೆ.

ಕಾಮನ್‌ವೆಲ್ತ್ ಗೇಮ್ಸ್‌ ಜಾವೆಲಿನ್ ಥ್ರೋ ಫೈನಲ್ ಪಂದ್ಯದ  ಫಲಿತಾಂಶಗಳ ಪಟ್ಟಿ:

ಸ್ಥಾನ (Rank) ಅಥ್ಲೀಟ್ (Athlete) ದೇಶ (Country) ಗರಿಷ್ಠ ದೂರ (Mark)
🥇 1 ರುಮೇಶ್ ತರಂಗ ಪತಿರಾಗೆ ಶ್ರೀಲಂಕಾ 89.75 ಮೀ.
🥈 2 ನೀರಜ್ ಚೋಪ್ರಾ ಭಾರತ 85.83 ಮೀ.
🥉 3 ಯಶ್ ವೀರ್ ಸಿಂಗ್ ಭಾರತ 85.41 ಮೀ.
4 ಆಂಡರ್ಸನ್ ಪೀಟರ್ಸ್  ಗ್ರೆನಡಾ 83.88 ಮೀ.
5 ಡೌವ್ ಸ್ಮಿತ್ ಸೌತ್ ಆಫ್ರಿಕಾ 82.88 ಮೀ.
6 ಕೇಶೋರ್ನ್ ವಾಲ್ಕಾಟ್ ಟ್ರಿನಿಡಾಡ್ ಮತ್ತು ಟೊಬಾಗೊ 82.55 Ble.
7 ರೋಹಿತ್ ಯಾದವ್ ಭಾರತ 81.56 ಮೀ.
8 ಬೆನ್ ಈಸ್ಟ್ ಇಂಗ್ಲೆಂಡ್ 81.12 ಮೀ.
9 ಅರ್ಷದ್ ನದೀಮ್ ಪಾಕಿಸ್ತಾನ್ 77.41 ಮೀ.
10 ಚಿನೆಚೆರೆಮ್ ನ್ ನಾಮ್ಡಿ  ನೈಜೀರಿಯಾ 76.29 ಮೀ.
11 ಕ್ಯಾಮರೂನ್ ಮೆಕ್ಇಂಟೈರ್ ಆಸ್ಟ್ರೇಲಿಯಾ 72.34 ಮೀ.
12 ಕೀಶಾನ್ ಸ್ಟ್ರಾಚನ್ ಬಹಾಮಾಸ್ 70.39 ಮೀ.

ಫೈನಲ್​ನಲ್ಲಿ ಕಾಣಿಸಿಕೊಂಡ 12 ಸ್ಪರ್ಧಿಗಳಲ್ಲಿ ಮೊದಲ 3 ಸುತ್ತುಗಳ ಬಳಿಕ ಅಗ್ರ 8 ಸ್ಪರ್ಧಿಗಳು ಮಾತ್ರ ಮುಂದಿನ ಅಂತಿಮ 3 ಎಸೆತಗಳ ಸುತ್ತಿಗೆ ಅರ್ಹತೆ ಪಡೆದರು. ಅರ್ಷದ್ ನದೀಮ್ ಸೇರಿದಂತೆ ಕೊನೆಯ 4 ಸ್ಪರ್ಧಿಗಳು 3ನೇ ಸುತ್ತಿನಲ್ಲೇ ಹೊರಬಿದ್ದಿದ್ದರು.

Source link

ಭಾರತದಲ್ಲಿ ‘ಸ್ಪೈಡರ್ ಮ್ಯಾನ್’ ಹೊಸ ದಾಖಲೆ; ಎರಡು ದಿನಕ್ಕೆ 130 ಕೋಟಿ ಗಳಿಕೆ – Kannada News | ‘Spider Man: Brand New Day’ box office collection Day 2: Movie crosses Rs 130 crore at Indian box office 

ಭಾರತೀಯ ಚಿತ್ರರಂಗದಲ್ಲಿ ಹಾಲಿವುಡ್‌ ಸಿನಿಮಾಗಳ ಕ್ರೇಜ್ ಎಂದಿಗೂ ಕಮ್ಮಿ ಇಲ್ಲ. ಇದಕ್ಕೆ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿರುವುದೇ ಸಾಕ್ಷಿ. ಬಿಡುಗಡೆಯಾದ ಎರಡೇ ದಿನಕ್ಕೆ ಈ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ. ಟಾಮ್ ಹಾಲೆಂಡ್ ಮತ್ತು ಝೆಂಡಾಯಾ ನಟನೆಯ ಈ ಸಿನಿಮಾ ಭಾರತೀಯ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈಗ ಸ್ಪೈಡರ್ ಮ್ಯಾನ್ ಹವಾ ಜೋರಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್ ಜಾದೂ

‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಎರಡನೇ ದಿನ (ಜುಲೈ 31) ಈ ಚಿತ್ರ ಒಟ್ಟು 49.35 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಎರಡನೇ ದಿನದ ಗ್ರಾಸ್ ಕಲೆಕ್ಷನ್ 59.03 ಕೋಟಿ ರೂಪಾಯಿಗೆ ತಲುಪಿದೆ. ಮೊದಲ ದಿನಕ್ಕೆ ಹೋಲಿಸಿದರೆ ಕಲೆಕ್ಷನ್‌ನಲ್ಲಿ ಶೇಕಡಾ 18.6 ರಷ್ಟು ಇಳಿಕೆ ಕಂಡಿದೆ. ಆದರೂ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸ್ಪೈಡರ್ ಮ್ಯಾನ್’ ದಾಖಲೆ; ಭಾರತದಲ್ಲಿ ಮೊದಲ ದಿನವೇ 72 ಕೋಟಿ ರೂ. ಗಳಿಕೆ

ಹಿಂದಿ ಮತ್ತು ಇಂಗ್ಲಿಷ್ ವರ್ಷನ್‌ಗಳ ಅಬ್ಬರ

ಭಾರತದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇಂಗ್ಲಿಷ್ ವರ್ಷನ್ ಶುಕ್ರವಾರ 28 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇನ್ನು ಹಿಂದಿ ಡಬ್ಬಿಂಗ್ ವರ್ಷನ್ ಬರೋಬ್ಬರಿ 17 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಚಿತ್ರಮಂದಿರಗಳಲ್ಲಿ ಶೇಕಡಾ 90 ರಷ್ಟು ಸೀಟುಗಳು ಭರ್ತಿಯಾಗಿದ್ದವು. ದಕ್ಷಿಣ ಭಾರತದ ಭಾಷೆಗಳ ಪೈಕಿ ತಮಿಳಿನಲ್ಲಿ 2.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ತೆಲುಗಿನಲ್ಲಿ 2 ಕೋಟಿ ರೂಪಾಯಿ ಗಳಿಕೆಯಾಗಿದೆ. ಮಲಯಾಳಂ ಮತ್ತು ಕನ್ನಡ ಆವೃತ್ತಿಗಳು ಕ್ರಮವಾಗಿ 7 ಲಕ್ಷ ಮತ್ತು 3 ಲಕ್ಷ ರೂಪಾಯಿ ಗಳಿಸಿವೆ.

ಎರಡೇ ದಿನಕ್ಕೆ 130 ಕೋಟಿ ದಾಟಿದ ಗಳಿಕೆ

ಕೇವಲ ಎರಡು ದಿನಗಳಲ್ಲಿ ಈ ಸಿನಿಮಾ ಭಾರತದಲ್ಲಿ ದಾಖಲೆಯ ಮುನ್ನಡೆ ಸಾಧಿಸಿದೆ. ಒಟ್ಟು 34,152 ಶೋಗಳಿಂದ ಚಿತ್ರ ಬರೋಬ್ಬರಿ 131.46 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರ ನೆಟ್ ಕಲೆಕ್ಷನ್ 109.95 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ ಅತಿ ಹೆಚ್ಚು ಓಪನಿಂಗ್ ಪಡೆದ ಮೊದಲ ಭಾರತೀಯೇತರ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಡೆಸ್ಟಿನ್ ಡೇನಿಯಲ್ ಕ್ರೆಟ್ಟನ್ ನಿರ್ದೇಶನದ ಈ ಚಿತ್ರದಲ್ಲಿ ಟಾಮ್ ಹಾಲೆಂಡ್, ಝೆಂಡಾಯಾ, ಸ್ಯಾಡಿ ಸಿಂಕ್ ಮತ್ತು ಮಾರ್ಕ್ ರುಫಾಲೋ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಶ್ನೆ: ‘ಸ್ಪೈಡರ್ ಮ್ಯಾನ್’ ಸಿನಿಮಾ ರಿಲೀಸ್ ಆಗಿದ್ದು ಯಾವಾಗ?
ಉತ್ತರ: ಜುಲೈ 30

ಪ್ರಶ್ನೆ: ‘ಸ್ಪೈಡರ್ ಮ್ಯಾನ್’ ಸಿನಿಮಾದ ಎರಡು ದಿನದ ಕಲೆಕ್ಷನ್ ಎಷ್ಟು?
ಉತ್ತರ: 131.46 ಕೋಟಿ ರೂಪಾಯಿ

ಪ್ರಶ್ನೆ: ‘ಸ್ಪೈಡರ್ ಮ್ಯಾನ್’ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ?
ಉತ್ತರ: ಟಾಮ್ ಹಾಲೆಂಡ್, ಝೆಂಡಾಯಾ, ಸ್ಯಾಡಿ ಸಿಂಕ್ ಮತ್ತು ಮಾರ್ಕ್ ರುಫಾಲೋ

Published On – 7:04 am, Sat, 1 August 26

Source link

‘ನಿಂದನೆಯಿಂದ ಏನೂ ಪರಿಹಾರವಾಗಲ್ಲ’: ನೋಯ್ಡಾ ಮಹಿಳೆಯ ಹೇಳಿಕೆ ವಿವಾದದ ನಡುವೆ ತಡರಾತ್ರಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ – Kannada News | PM Modi Shares Late Night Video Message Amid Noida Woman’s Viral video

ನವದೆಹಲಿ, ಆಗಸ್ಟ್ 01: ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಲವು ಯುವಕರು ಅವಾಚ್ಯ ಪದಗಳನ್ನು ಬಳಸಿದ್ದರು. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದಲ್ಲದೆ, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ದೇಶದ ಪ್ರಧಾನಿಯ ಬಗ್ಗೆಯೇ ಯುವಜನತೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವಿಷಯವಾಗಿ ಶುಕ್ರವಾರ ವೀಡಿಯೋವೊಂದನ್ನು ಹಂಚಿಕೊಂಡಿರುವ ನರೇಂದ್ರ ಮೋದಿ, ಯುವಜನರನ್ನು ಶಿಕ್ಷಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ಸರಿಯಾದ ಹಾದಿ ತೋರಿಸಬೇಕು ಎಂದಿದ್ದಾರೆ.

ತಡರಾತ್ರಿ ವಿಡಿಯೋ ಸಂದೇಶ; ಮೋದಿ ಹೇಳಿದ್ದೇನು?

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರಲ್ಲಿ ಉಂಟಾದ ಆಕ್ರೋಶವನ್ನು ಅರ್ಥೈಸಿಕೊಂಡ ಅವರು, ‘ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶ ಮತ್ತು ಜಗತ್ತು ಕಣ್ಣಾರೆ ಕಂಡಿದೆ. ಕೆಲವು ಹಾದಿ ತಪ್ಪಿದ ಯುವಕರು ಅತ್ಯಂತ ಕೀಳು ಮಟ್ಟದ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದರು. ಈ ಪದಗಳು ಯಾವುದೇ ಸುಸಂಸ್ಕೃತ ಸಮಾಜಕ್ಕೆ ಶೋಭೆ ತರುವುದಿಲ್ಲ. ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಯಿತು. ಅಷ್ಟೇ ಅಲ್ಲದೆ, ನನ್ನ ಸ್ವರ್ಗಸ್ಥ ತಾಯಿಯನ್ನೂ ಸಹ ನಿಂದನೆಗೆ ಗುರಿಪಡಿಸಲಾಯಿತು. ಅದು ನಿಜಕ್ಕೂ ಒಂದು ಅಸಹ್ಯಕರ ದೃಶ್ಯವಾಗಿತ್ತು. ಆದಾಗ್ಯೂ, ಬಾಲ್ಯದಲ್ಲಿ ತಪ್ಪುಗಳು ಸಹಜ ಮತ್ತು ಆ ತಪ್ಪುಗಳನ್ನು ತಿದ್ದುಕೊಳ್ಳುವ ಅವಕಾಶವನ್ನೂ ಬಾಲ್ಯವೇ ನೀಡುತ್ತದೆ’ ಎಂದಿದ್ದಾರೆ.

‘ಈ ಯುವಕರು ದಾರಿ ತಪ್ಪಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯವಾಗಿದೆ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯದ ಕಲಾಪಗಳಿಗೆ ಎಳೆಯುವುದು ಮತ್ತು ಸಮಾಜದಲ್ಲಿ ಅವರಿಗೆ ಕಿರುಕುಳ ನೀಡುವುದು, ಇವು ಯಾವುದರಿಂದಲೂ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಕೆಲವೊಮ್ಮೆ ನಮ್ಮ ನಾಲಿಗೆ ಹಲ್ಲುಗಳ ನಡುವೆ ಸಿಕ್ಕಿಬಿದ್ದು ರಕ್ತ ಬರುತ್ತದೆ. ಹಾಗೆಂದು ನಾವು ನಮ್ಮ ಹಲ್ಲುಗಳನ್ನು ಮುರಿದುಕೊಳ್ಳುವುದಿಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಈ ಮಕ್ಕಳೂ ನಮ್ಮವರೇ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು ನಮ್ಮ ಕರ್ತವ್ಯ. ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡುವುದು ಕಷ್ಟ. ಆದ್ರೆ, ಇದು ನಾವು ಕೈಗೊಳ್ಳಬೇಕಾದ ಕಾರ್ಯವಾಗಿದೆ. ಆದ್ದರಿಂದ ಬನ್ನಿ, ನಾನು ಈ ಮಕ್ಕಳಿಗೆ ಕರೆ ನೀಡುತ್ತೇನೆ, ದೇಶದ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. ಹೊಸದನ್ನು ಕಲಿಯೋಣ ಮತ್ತು ನಮ್ಮ ತಪ್ಪುಗಳಿಂದಲೂ ಪಾಠ ಕಲಿಯೋಣ. ನಮ್ಮ ಕನಸುಗಳನ್ನು ಬೆನ್ನಟ್ಟಲು ಹೊರಡೋಣ. ದೇಶವು ಮುನ್ನಡೆಯುತ್ತಿದೆ ಮತ್ತು ಮತ್ತಷ್ಟು ಪ್ರಗತಿಗೆ ಸಜ್ಜಾಗಿದೆ. ನೀವು ಸಹ ಮುನ್ನಡೆಯಬೇಕೆಂಬುದು ನನ್ನ ಕನಸಾಗಿದೆ. ನಾನು ನಿಮಗಾಗಿ ಬದುಕುತ್ತಿದ್ದೇನೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ನಾನು ಮುಡುಪಾಗಿಟ್ಟಿದ್ದೇನೆ’ ಎಂದು ಮೋದಿ ತಮ್ಮ ವೀಡಿಯೋದಲ್ಲಿ ತಿಳಿಸಿದ್ದಾರೆ.

ನೋಯ್ಡಾ ಯುವತಿಯ ಮೇಲೆ ಎಫ್‌ಐಆರ್ ಹಿನ್ನೆಲೆ ವೀಡಿಯೋ

ನೋಯ್ಡಾ ನಿವಾಸಿ, 25 ವರ್ಷದ ರುಚಿಕಾ ಸಿಂಗ್ ಎಂಬುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಸಂದೇಶ ಹೊರಬಿದ್ದಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರುಚಿಕಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಾಜಿಯಾಬಾದ್ ಮೂಲದ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ, ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:54 am, Sat, 1 August 26

Source link

LPG Cylinder price: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ – Kannada News | Commercial LPG Cylinder Price Cut by Over Rs 200 in Bengaluru, Delhi and Kolkata: Check Latest LPG Rates here

ನವದೆಹಲಿ, ಆಗಸ್ಟ್ 1: ವಾಣಿಜ್ಯ ಬಳಕೆಯ ಅಡುಗೆ ಅನಿಲ ಬಳಸುವವರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 19 ಕೆಜಿ ಕಮರ್ಷಿಯಲ್ LPG ಸಿಲಿಂಡರ್ (LPG Cylinder) ಬೆಲೆಯನ್ನು 200 ರೂಪಾಯಿಗೂ ಹೆಚ್ಚು ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಎನ್​​ಐ’ ಸುದ್ದಿಸಂಸ್ಥೆ ವರದಿ ಮಾಡಿದೆ. ಸದ್ಯ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ LPG ಸಿಲಿಂಡರ್ ದರ202 ರೂ. ಕಡಿತಗೊಳಿಸಲಾಗಿದೆ. ಕೋಲ್ಕತ್ತಾದಲ್ಲಿ 209 ರೂ. ಬೆಲೆ ಇಳಿಕೆಯಾಗಿದೆ. ಬೆಲೆ ಪರಿಷ್ಕರಣೆಯ ಬಳಿಕ ಕೋಲ್ಕತ್ತಾದಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2,872.50 ರೂ. ಆಗಿದೆ.

ಗೃಹ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ – Kannada News | Horoscope Today August 1, 2026: Daily Predictions for All 12 Zodiac Signs

ಇಂದು ಆಗಸ್ಟ್ 1, 2026, ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷದ ತದಿಗೆಯ ಈ ಶುಭ ದಿನದ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಇಂದು ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯ ಶತಭಿಷಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಗ್ರಹಗಳ ಸ್ಥಾನಗಳು ಪ್ರತಿದಿನದ ಘಟನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ರಾಹುಕಾಲವು ಬೆಳಗ್ಗೆ 9:15 ರಿಂದ 10:50 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾರ್ಯಗಳಿಗೆ ಮಧ್ಯಾಹ್ನ 2:01 ರಿಂದ 3:36 ರವರೆಗೆ ಶುಭಕಾಲವಿದೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಕೆಲವನ್ನು ಪ್ರತ್ಯಕ್ಷವಾಗಿ ಕಂಡರೂ ಪರಿಶೀಲನೆ ಮಾಡುವುದು ಮುಖ್ಯ… – Kannada News | Daily Horoscope for August 01, 2026: Dakshinayana Greeshma season, Ashada Masa Krishna Paksha Satursday astrology Prediction

ಮೇಷ ರಾಶಿ:

ಇಂದು ನಿಮಗೆ ಪ್ರಭಾವಿಗಳ ಭೇಟಿಯಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ದಿನ ಇತರರಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಇಂದು ಒಂದುರೀತು ಆತಂಕ ಮತ್ತು ಉದ್ವೇಗ ಇರಲಿದೆ. ಅಪಾಯಗಳನ್ನು ತೆಗೆದುಕೊಳ್ಳಬೇಡ. ಅಮೂಲ್ಯವಾದ ನಿಮ್ಮ ವಸ್ತುವು ಕಾಣಿಸದೇ ಇದ್ದೀತು ಅಥವಾ ಕಳ್ಳತನವೂ ಆಗಬಹುದು. ಮಕ್ಕಳಿಂದ ನಿಮಗೆ ಪ್ರಶಂಸೆಯು ಸಿಗಬಹುದು. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ.

ವೃಷಭ ರಾಶಿ:

ತಾವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಸೃಜನಶೀಲ ಕೆಲಸದಿಂದ ಯಶಸ್ಸು ಸಿಗಲಿದೆ‌. ರಪ್ತು ಕಾರ್ಯದಿಂದ ಲಾಭವನ್ನು ಪಡೆಯುವಿರಿ. ಕೆಲಸದಲ್ಲಿ ತಾಳ್ಮೆಯಿಂದ ವರ್ತಿಸುವುದರಿಂದ ಯಶಸ್ಸು ಸಿಗುತ್ತದೆ. ನಿಮ್ಮ ತಲೆಯಲ್ಲಿ ನೂರಾರು ಆಲೋಚನೆಗಳು ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಸಮಯವು ಹಿಡಿಯಬಹುದು. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು.

ಮಿಥುನ ರಾಶಿ:

ಪರೀಕ್ಷೆಗಾಗಿ ನಿಮ್ಮ ಶ್ರಮ ಸಾಲದಾಗುವುದು. ಹಿರಿಯರು ನಿಮಗೆ ಕಾಲಕ್ಕೆ ಬೇಕಾದುದನ್ನು ಹೇಳಿಕೊಟ್ಟಾರು. ಸರಳತೆಯನ್ನು ರೂಢಿಸಿಕೊಳ್ಳಲು ನಿಮಗೆ ಇಷ್ಟವಿದ್ದರೂ ನಿಮ್ಮವರು ಅದನ್ನು ಬಿಡರು. ಉಪಯುಕ್ತವಾದ ತಂತ್ರಾಂಶವನ್ನು ನೀವು ಪಡೆಯುವಿರಿ. ನಿಮ್ಮ ಸಮಯವನ್ನು ಇತರರಿಗೆ ನೀಡುವುದು ಅಪ್ರಯೋಜಕ ಎನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ.

ಕರ್ಕಾಟಕ ರಾಶಿ:

ಆತುರವು ಕೆಲಸವು ದಿನವನ್ನು ಹಾಳುಮಾಡಿಕೊಳ್ಳಲು ಸಾಕು. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಇಂದು ಪ್ರೇಮ ಸಂಬಂಧಗಳು ಹೊಂದಾಣಿಕೆಯ ಅಗತ್ಯವಿದೆ. ಸರ್ಕಾರಿ ಕೆಲಸಗಳು ಅಂದುಕೊಂಡಂತೆ ವೇಗವಾಗಿ ಮುಂದುವರಿಯುವುದು. ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚುಗಳು ಸಮವಾಗಿರಲಿದೆ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ.

ಸಿಂಹ ರಾಶಿ:

ಮಕ್ಕಳಿಗೆ ನಿಮ್ಮ ಪ್ರೀತಿ ಹೆಚ್ಚಾಗುವುದು. ನಿಮ್ಮ ಕೆಲಸದ ಸಮಯವನ್ನು ಸರಿಮಾಡಿಕೊಳ್ಳಿ. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆಯಾಗುವುದು.‌ ಹೊಸತನ್ನು ಕಲಿಯುವ ಬಯಕೆ ಇದ್ದರೂ ಸಮಯ, ವ್ಯವಸ್ಥೆಯು ಕಷ್ಟವಾದೀತು. ಯಾವ ಒತ್ತಡವೂ ನಿಮ್ಮನ್ನು ಏನೂ ಮಾಡಲಾಗದು. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ.

ಕನ್ಯಾ ರಾಶಿ:

ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುತ್ತದೆ. ರಾಜಕೀಯ ವ್ಯಕ್ತಿಗಳಿಂದ ಉದ್ಯಮಕ್ಕೆ ಬಂದ ಅಡೆತಡೆಗಳು ನಿವಾರಣೆಯಾಗಲಿವೆ. ನಿಮ್ಮ ಬುದ್ಧಿವಂತಿಕೆಯಿಂದ ಯಶಸ್ಸಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಪ್ರಯಾಣವು ನೋವಿನಿಂದ ಕೂಡಿದೆ, ಹಾಗಾಗಿ ಬಿಟ್ಟುಬಿಡಿ. ವ್ಯಾಪಾರ ಲಾಭದಾಯಕ ಆಗಬಹುದು‌. ಅಧಿಕಾರದ ಆಸೆಯಿಂದ ಅವ್ಯವಹಾರವನ್ನು ಮಾಡಲು ಪ್ರೇರಣೆ ಸಿಗಬಹುದು. ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ಕೇವಲ ಕಲ್ಪನೆಯಿಂದ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ.

ತುಲಾ ರಾಶಿ:

ದೂರ ಪ್ರಯಾಣವು ನಿಮ್ಮ ಇಚ್ಛೆಯಾಗಲಿದೆ. ಯಾವುದೇ ತೊಂದರೆಗೆ ಸಿಲುಕದೇ ಇರುವಂತೆ ನೋಡಿಕೊಳ್ಳಿ. ನಿಮ್ಮ ಶತ್ರುಗಳನ್ನು ಅನ್ಯರಿಂದ ತಿಳಿದುಕೊಳ್ಳುವಿರಿ. ನಿಮ್ಮ ನಿಖರತೆಯ ಅಂಕಿ ಅಂಶಗಳು ಅಚ್ಚರಿ ಕೊಡಬಹುದು. ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಿ. ಆಪ್ತ ಬಂಧುವನ್ನು ನೀವು ಕಳೆದುಕೊಳ್ಳುವಿರಿ. ಮಕ್ಕಳಿಗೆ ಹಣವನ್ನು ಕೊಟ್ಟು ತಪ್ಪು ದಾರಿಗೆ ಕಳುಹಿಸುವಿರಿ. ನಿಮ್ಮ ಬಗೆಗಿನ ಪೊಳ್ಳು ಹೇಳಿಕೆಗಳು ನಿಲ್ಲದೇ ಹೋಗಬಹುದು.

ವೃಶ್ಚಿಕ ರಾಶಿ:

ವ್ಯವಸ್ಥಿತ ವ್ಯಾಪಾರವು ನಿಮಗೆ ಆದಾಯಕ್ಕಿಂತ ಹೆಚ್ಚಾಗಿ ನೆಮ್ಮದಿ ಕೊಡುವುದು. ಇದರಿಂದ ಆದಾಯೂ ಹೆಚ್ಚಲಿದೆ. ಹೊರಗೂ ನೀವು ಸಂತೋಷವಾಗಿರಲಿ ಮುಕ್ತವಾಗಿ ಮಾತನಾಡಲು ಇಷ್ಟಪಡುವಿರಿ. ಬಹಳ‌ ದಿನಗಳ ಸಂಬಂಧವು ಹಳಸಿಹೋಗುವ ಸಾಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳು ಉದ್ಯೋಗಕ್ಕೆ ಒತ್ತಾಯ ಮಾಡಬಹುದು. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟುಕೊಂಡಿದ್ದರೆ ಸ್ವಲ್ಪ ಸಮಯ ಕಾಯಬೇಕಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು.

ಧನು ರಾಶಿ:

ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ನಿಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುವುದು. ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುವುದು. ಮೊಂಡು ವಾದವನ್ನು ಹಿರಿಯರ ಜೊತೆ ಮಾಡಬೇಡಿ. ಸರಿಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ಗೆಳೆತನಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗಬಹುದು. ಆರೋಗ್ಯದ ಮೇಲೆ ಗಮನವಿರಲಿ. ಆಧಿಕ ಖರ್ಚನ್ನು ಮಾಡಿಕೊಳ್ಳುವುದು ಬೇಡ.

ಮಕರ ರಾಶಿ:

ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳು ಪ್ರಯತ್ನಗಳು ಸಫಲವಾಗಲಿದೆ. ನೀವು ನಿಮ್ಮನ್ನು ಇಷ್ಟಪಡುವವರಿಂದ ಉಡುಗೊರೆ ಬರಲಿದೆ. ಹೂಡಿಕೆಯಲ್ಲಿ ನಿಮ್ಮ ಬುದ್ಧಿ ಚಂಚಲವಾಗಲಿದೆ. ಇಂದಿನ ಪ್ರಮುಖ ಕೆಲಸವು ವ್ಯತ್ಯಾಸ ಆಗಬಹುದು. ಇನ್ನೊಬ್ಬರ ಮೇಲೆ‌ಕರುಣೆ ಬರಬಹುದು. ಆಪ್ತರಿಗೆ ಧನಸಹಾಯವನ್ನು ಮಾಡುವಿರಿ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಸಂಗಾತಿಯಿಂದ ನೀವು ಎಲ್ಲದಕ್ಕೂ ಬೆಂಬಲ ಪಡೆಯುವಿರಿ.

ಕುಂಭ ರಾಶಿ:

ಬಹಳ ದಿನಗಳಿಂದ ಮರೆತುಹೋದ ಸ್ನೇಹಿತರನ್ನು ಅನಿರೀಕ್ಷೀತ ಭೇಟಿಯಾಗುವಿರಿ. ನೀವು ಜೀವನಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ನಿಮ್ಮ ವೇತನದ ಮೌಲ್ಯ ಹೆಚ್ಚಾಗಲಿದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ಹಳೆಯ ನೋವಿನಿಂದ ನೀವು ಬಳಲಬಹುದು. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು.

ಮೀನ ರಾಶಿ:

ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡಬೇಕಾಗಬಹುದು. ಕಳೆದುದರ ಬಗ್ಗೆ ನಿಮಗೆ ಚಿಂತೆ ಇರದಿದ್ದರೂ ಅದು ನಿಮ್ಮನ್ನು ಕಾಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮ ಕೆಲಸವನ್ನು ವ್ಯತ್ಯಾಸ ಮಾಡೀತು. ಭೂಮಿಯ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನೀವು ಹಾಕಿಕೊಂಡ ಕಾರ್ಯವು ಆಗದೇಹೋಗುವುದು. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರಾ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:51, ಯಮಗಂಡ ಕಾಲ 14:01 – 15:36, ಗುಳಿಕ ಕಾಲ 06:06 – 07:41

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:37 am, Sat, 1 August 26

Source link

ಕೈ ತೊಳೆಯುವ ಸರಿಯಾದ ವಿಧಾನ? ಸೋಂಕು ತಡೆಯಲು ಈ ನಿಯಮಗಳನ್ನು ಪಾಲಿಸಿ – Kannada News | Hand Washing Mistakes That Increase Infection Risk

ದಿನನಿತ್ಯದ ಜೀವನದಲ್ಲಿ ಕೈಗಳು ಅತ್ಯಂತ ಹೆಚ್ಚು ಬಳಸುವ ದೇಹದ ಭಾಗಗಳಲ್ಲಿ ಒಂದಾಗಿದೆ. ಮೊಬೈಲ್ ಫೋನ್ ಬಳಸುವುದು, ಹಣದ ವ್ಯವಹಾರ ಮಾಡುವುದು, ಬಾಗಿಲಿನ ಹ್ಯಾಂಡಲ್ ಹಿಡಿಯುವುದು, ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳನ್ನು ಸ್ಪರ್ಶಿಸುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಕೈಗಳು ವಿವಿಧ ಮೇಲ್ಮೈಗಳ ಸಂಪರ್ಕಕ್ಕೆ ಬರುತ್ತವೆ. ಈ ವೇಳೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಇತರ ಸೂಕ್ಷ್ಮಜೀವಿಗಳು ಕೈಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಕಲುಷಿತ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ ಅಥವಾ ಕೈ ತೊಳೆಯದೇ ಆಹಾರ ಸೇವಿಸಿದರೆ, ಈ ಸೂಕ್ಷ್ಮಜೀವಿಗಳು ದೇಹದೊಳಗೆ ಪ್ರವೇಶಿಸಿ ಶೀತ, ಜ್ವರ, ಫ್ಲೂ, ಅತಿಸಾರ (ಡಯೇರಿಯಾ), ಹೊಟ್ಟೆಯ ಸೋಂಕು ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಕೈ ತೊಳೆಯುವುದು ಆರೋಗ್ಯಕ್ಕೆ ಏಕೆ ಅತ್ಯಗತ್ಯ?

ಸಾಮಾನ್ಯವಾಗಿ ಕೈ ತೊಳೆಯುವುದು ಸಣ್ಣ ಅಭ್ಯಾಸವೆನಿಸಿದರೂ, ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಸರಿಯಾದ ರೀತಿಯಲ್ಲಿ ಕೈ ತೊಳೆಯುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಬಹುದು. ವಿಶೇಷವಾಗಿ ಮಕ್ಕಳಲ್ಲಿ, ವೃದ್ಧರಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೈಗಳ ಸ್ವಚ್ಛತೆ ಜೀವ ರಕ್ಷಕ ಅಭ್ಯಾಸವಾಗಬಹುದು.

ಕೈ ತೊಳೆಯುವ ಸರಿಯಾದ ವಿಧಾನ ಯಾವುದು?

CDC ಮಾರ್ಗಸೂಚಿಗಳ ಪ್ರಕಾರ ಕೈ ತೊಳೆಯುವ ವಿಧಾನ ಹೀಗಿದೆ:

  • ಮೊದಲು ಸ್ವಚ್ಛವಾದ ಹರಿಯುವ ನೀರಿನಲ್ಲಿ ಕೈಗಳನ್ನು ಒದ್ದೆ ಮಾಡಿಕೊಳ್ಳಿ.
  • ನಂತರ ಸಾಬೂನು ಹಚ್ಚಿ.
  • ಎರಡೂ ಅಂಗೈಗಳು, ಕೈಗಳ ಹಿಂಭಾಗ, ಬೆರಳುಗಳ ಮಧ್ಯಭಾಗ, ಹೆಬ್ಬೆರಳು, ಉಗುರುಗಳ ಕೆಳಭಾಗ ಸೇರಿದಂತೆ ಎಲ್ಲಾ
  • ಭಾಗಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ.
  • ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಿರಿ.
  • ನಂತರ ಹರಿಯುವ ನೀರಿನಲ್ಲಿ ಸಾಬೂನನ್ನು ಸಂಪೂರ್ಣವಾಗಿ ತೊಳೆಯಿರಿ.
  • ಸ್ವಚ್ಛವಾದ ಟವೆಲ್ ಅಥವಾ ಏರ್ ಡ್ರೈಯರ್ ಬಳಸಿ ಕೈಗಳನ್ನು ಒಣಗಿಸಿಕೊಳ್ಳಿ.

ಸಾಬೂನು ಇಲ್ಲದಿದ್ದರೆ ಏನು ಮಾಡಬೇಕು?

ಸಾಮಾನ್ಯವಾಗಿ ಸಾಬೂನು ಮತ್ತು ನೀರು ಲಭ್ಯವಿಲ್ಲದಿದ್ದರೆ ಕನಿಷ್ಠ 60% ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಬಹುದು. ಆದರೆ ಕೈಗಳ ಮೇಲೆ ಗೋಚರಿಸುವ ಮಣ್ಣು, ಎಣ್ಣೆ ಅಥವಾ ಕೊಳಕು ಇದ್ದರೆ ಸ್ಯಾನಿಟೈಸರ್ ಸಾಕಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದೇ ಅತ್ಯುತ್ತಮ ವಿಧಾನ. ಈ ಸಂದರ್ಭಗಳಲ್ಲಿ ಕೈ ತೊಳೆಯುವುದು ಕಡ್ಡಾಯ

ಇದನ್ನೂ ಓದಿ: ಪಿರಿಯಡ್ಸ್ ವೇಳೆ ಸ್ಯಾನಿಟರಿ ಪ್ಯಾಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಗೈನಕಾಲಜಿಸ್ಟ್ ಸಲಹೆ

ಈ ಸಂದರ್ಭಗಳಲ್ಲಿ ಕೈ ತೊಳೆಯುವುದನ್ನು ಎಂದಿಗೂ ಮರೆಯಬಾರದು:

  • ಅಡುಗೆ ಮಾಡುವ ಮೊದಲು ಮತ್ತು ನಂತರ
  • ಊಟ ಮಾಡುವ ಮೊದಲು
  • ಶೌಚಾಲಯ ಬಳಸಿದ ನಂತರ
  • ಮಗುವಿನ ಡಯಾಪರ್ ಬದಲಿಸಿದ ನಂತರ
  • ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಆರೈಕೆಗೆ ಮೊದಲು ಹಾಗೂ ನಂತರ
  • ಕೆಮ್ಮಿದ ಅಥವಾ ಸೀನಿದ ನಂತರ
  • ಮೂಗು ಶುಚಿಗೊಳಿಸಿದ ನಂತರ
  • ಕಸ ಮುಟ್ಟಿದ ನಂತರ
  • ಸಾಕುಪ್ರಾಣಿಗಳು ಅಥವಾ ಅವುಗಳ ಆಹಾರವನ್ನು ಮುಟ್ಟಿದ ನಂತರ
  • ಗಾಯಕ್ಕೆ ಡ್ರೆಸ್ಸಿಂಗ್ ಮಾಡುವ ಮೊದಲು ಮತ್ತು ನಂತರ
  • ಸಾರ್ವಜನಿಕ ಸ್ಥಳಗಳಿಂದ ಮನೆಗೆ ಬಂದ ತಕ್ಷಣ

ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ಕಲಿಸುವುದು ಏಕೆ ಮುಖ್ಯ?

ಶಾಲೆಗೆ ಹೋಗುವ ಮಕ್ಕಳು ಆಟದ ಮೈದಾನ, ತರಗತಿ ಕೊಠಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಅವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ಸರಿಯಾದ ಕೈ ತೊಳೆಯುವ ಅಭ್ಯಾಸ ಬೆಳೆಸಿದರೆ, ಶೀತ, ಜ್ವರ, ಹೊಟ್ಟೆ ಸೋಂಕು ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಹಾಯವಾಗುತ್ತದೆ.

ಕೈ ತೊಳೆಯುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳು:

  • ಕೇವಲ ನೀರಿನಿಂದ ಕೈ ತೊಳೆಯುವುದು
  • 20 ಸೆಕೆಂಡುಗಳಿಗಿಂತ ಕಡಿಮೆ ಸಮಯ ಕೈ ತೊಳೆಯುವುದು
  • ಉಗುರುಗಳ ಕೆಳಭಾಗವನ್ನು ಸ್ವಚ್ಛಗೊಳಿಸದಿರುವುದು
  • ಕೈ ತೊಳೆದ ನಂತರ ಕೊಳಕು ಟವೆಲ್ ಬಳಸುವುದು
  • ಸ್ಯಾನಿಟೈಸರ್ ಹಚ್ಚಿದ ತಕ್ಷಣ ಕೈ ತೊಳೆಯುವುದು
  • ಕೈಗಳನ್ನು ಸಂಪೂರ್ಣ ಒಣಗಿಸದೆ ಆಹಾರ ಮುಟ್ಟುವುದು

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಸೋಂಕಿನ ಲಕ್ಷಣಗಳು ಅಥವಾ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ದಾಳಿ; ಓರ್ವ ಸಾವು, ಒಬ್ಬರ ಸ್ಥಿತಿ ಗಂಭೀರ – Kannada News | Terrorist attack in Jammu and Kashmir’s Kulgam Migrant labourer dead another injured

ಕುಲ್ಗಾಂ, ಜುಲೈ 31: ಜಮ್ಮು ಕಾಶ್ಮೀರದ ಕುಲ್ಗಾಮ್ (Kulgam Terror Attack) ಜಿಲ್ಲೆಯಲ್ಲಿ ಇಂದು ಸಂಜೆ ಭಯೋತ್ಪಾದಕರು ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಕುಲ್ಗಾಮ್‌ನ ಕೆಲ್ಲಂ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಕಾರ್ಮಿಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದಾಗ ಈ ಘಟನೆ ಸಂಭವಿಸಿದೆ.

ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಉಪ-ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ದಾಳಿಕೋರರನ್ನು ಮಟ್ಟಹಾಕುವಂತೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ‘ವಾಣಿಜ್ಯ ಹಡಗು, ನಾವಿಕರ ಮೇಲಿನ ದಾಳಿ ತಡೆಯಿರಿ’; ಇರಾನ್ ವಿದೇಶಾಂಗ ಸಚಿವರ ಜೊತೆ ಭಾರತ ಮಾತುಕತೆ

ಕಳೆದ ವಾರವಷ್ಟೇ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದರು. ಕಳೆದ 2 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಹೊರರಾಜ್ಯದ ವಲಸೆ ಕಾರ್ಮಿಕರನ್ನು ಮತ್ತು ಯಾತ್ರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದಾಳಿಗಳು ಭದ್ರತಾ ವ್ಯವಸ್ಥೆಯ ಕುರಿತು ತೀವ್ರ ಕಳವಳ ಮೂಡಿಸಿವೆ.

ಸಂತ್ರಸ್ತರನ್ನು ಛತ್ತೀಸ್‌ಗಢ ನಿವಾಸಿಗಳಾದ ದೀಪಕ್ ಮತ್ತು ಭೂಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ದೀಪಕ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ. ಭೂಪೇಂದರ್ ಕುಮಾರ್ ಗಾಯಗೊಂಡಿದ್ದು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರ ಪತ್ತೆಗಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ಇದನ್ನೂ ಓದಿ: ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್ ನಿವಾಸದ ಹೊರಗೆ ಭಾರಿ ಗುಂಡಿನ ದಾಳಿ: ಇಬ್ಬರು ಯುವಕರಿಗೆ ಗಂಭೀರ ಗಾಯ

ಇದಕ್ಕೂ ಮುನ್ನ ಗುರುವಾರ, ರಾಜೌರಿ ಜಿಲ್ಲೆಯ ಭಂಗಾಯಿ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಶಂಕಿತ ಅಡಗುದಾಣವೊಂದನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದು, ಉಗ್ರರು ಬಳಸುತ್ತಿದ್ದರೆನ್ನಲಾದ ಪಡಿತರ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸಂಜೆ ತಾನಮಂಡಿ ವಲಯದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಈ ಅಡಗುದಾಣ ಪತ್ತೆಯಾಗಿತ್ತು. ದಟ್ಟವಾದ ಅರಣ್ಯದ ಪೊದೆಗಳ ನಡುವೆ ಇದನ್ನು ಮರೆಮಾಚಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ – Kannada News | Vinay Kulkarni Released from Parappana Agrahara Jail After Bail in Yogish Gowda Murder Case

ಆನೇಕಲ್​, ಜುಲೈ 31: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಇಂದು ಹೈಕೋರ್ಟ್​ನಿಂದ ಜಾಮೀನು ಮಂಜೂರು ಮಾಡಲಾಗಿದೆ. ಈ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ನಗುನಗುತ್ತಲೇ ಕಾಣಿಸಿಕೊಂಡರು. ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ನಂತರ ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿಗೆ ಅಭಿಮಾನಿಗಳು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಇನ್ನು ಈ ವೇಳೆ ಅಲ್ಲಿ ನೆರೆದಿದ್ದ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ವಿನಯ್ ಕುಲಕರ್ಣಿ ನಿರಾಕರಿಸಿದರು. ವಿನಯ್ ಕುಲಕರ್ಣಿ ಬಿಡುಗಡೆಗೊಂಡಿರುವುದು ಧಾರವಾಡ ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊನೆಯ ಓವರ್​ನಲ್ಲಿ 22 ರನ್ ಗುರಿ; ಒಂದೇ ಒಂದು ರನ್ ಬಾರಿಸದ ವಿಜಯ್ ಶಂಕರ್ – Kannada News | LPL Match 18: Jaffna Kings Beat Kandy Royals by 21 Runs; Vijay Shankar’s Last Over Drama

ಲಂಕಾ ಪ್ರಿಮೀಯರ್ ಲೀಗ್​ನ (Lanka Premier League) 18ನೇ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ರಾಯಲ್ಸ್ (Jaffna Kings vs Kandy Royals) ತಂಡಗಳು ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಜಾಫ್ನಾ ಕಿಂಗ್ಸ್ 21 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ, ಗುರಿ ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 200 ರನ್‌ ಕಲೆಹಾಕಲಷ್ಟೇ ಶಕ್ತವಾಗಿ 21 ರನ್​ಗಳಿಂದ ಸೋತಿತು. ಇದು ಪಂದ್ಯದ ಫಲಿತಾಂಶವಾದರೆ ಈ ಪಂದ್ಯದ ಮತ್ತೊಂದು ಹೈಲೇಟ್ಸ್ ಎಂದರೆ, ಕೊನೆಯ ಓವರ್​ನಲ್ಲಿ ಒಂದೇ ಒಂದು ರನ್ ಬಾರಿಸದೆ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಭಾರತದ ವಿಜಯ್ ಶಂಕರ್ ಅವರ ಬ್ಯಾಟಿಂಗ್.

221 ರನ್ ಕಲೆಹಾಕಿದ ಜಾಫ್ನಾ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಕಮಿಲ್ ಮಿಶಾರ ಮತ್ತು ಅವಿಷ್ಕಾ ಫರ್ನಾಂಡೊ ಉತ್ತಮ ಆರಂಭ ನೀಡಿದರು. ಮಿಶಾರ ಕೇವಲ 26 ಎಸೆತಗಳಲ್ಲಿ 5 ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿದರೆ, ಫರ್ನಾಂಡೊ 22 ಎಸೆತಗಳಲ್ಲಿ 36 ರನ್‌ಗಳ ಕಾಣಿಕೆ ನೀಡಿದರು. ನಂತರ ಕ್ರೀಸ್‌ಗೆ ಬಂದ ಚಾಮಿಂದು ವಿಕ್ರಮಸಿಂಘೆ ಕೇವಲ 15 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳ ಸಹಾಯದಿಂದ 43 ರನ್‌ಗಳ ವಿಧ್ವಂಸಕ ಇನ್ನಿಂಗ್ಸ್ ಆಡಿದರು. ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಹೃದಯ್ಡಾಯ್ ಕೂಡ ಉಪಯುಕ್ತ ರನ್‌ಗಳ ಕೊಡುಗೆ ನೀಡಿದರು. ಇತ್ತ ಕ್ಯಾಂಡಿ ರಾಯಲ್ಸ್ ಪರ ಮೊಯಿನ್ ಅಲಿ ಮತ್ತು ವನಿಂಡು ಹಸರಂಗ ತಲಾ ಎರಡು ವಿಕೆಟ್ ಪಡೆದರು.

ಕ್ಯಾಂಡಿ ರಾಯಲ್ಸ್​ಗೆ ಉತ್ತಮ ಆರಂಭ

222 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್ ಕೂಡ ಉತ್ತಮ ಆರಂಭ ಪಡೆಯಿತು. ಪವನ್ ಸಂದೇಶ್ 21 ಎಸೆತಗಳಲ್ಲಿ 48 ರನ್ ಗಳಿಸಿದರೆ, ಲಹಿರು ಇಗಲಗಮಗೆ 15 ಎಸೆತಗಳಲ್ಲಿ 30 ರನ್​ಗಳ ಇನ್ನಿಂಗ್ಸ್ ಆಡಿದರು. ನಂತರ ವನಿಂದು ಹಸರಂಗ ಮತ್ತು ಶಾಹೀನ್ ಶಾ ಅಫ್ರಿದಿ ತಲಾ 24 ರನ್ ಗಳಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಜಾಫ್ನಾ ಬೌಲರ್‌ಗಳು ನಿಯಮಿತವಾಗಿ ವಿಕೆಟ್ ಪಡೆಯುತ್ತಿದ್ದರೂ, ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದರಿಂದ ಪಂದ್ಯ ಕ್ಯಾಂಡಿ ರಾಯಲ್ಸ್ ಪರವಾಗಿ ವಾಲಿತು.

20ನೇ ಓವರ್ ಆರಂಭವಾಗುವುದಕ್ಕೂ ಮುನ್ನ ವಿಜಯ್ ಶಂಕರ್ 15 ಎಸೆತಗಳಲ್ಲಿ 25 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಹೀಗಾಗಿ ಅಂತಿಮ ಓವರ್‌ನಲ್ಲಿ ಕ್ಯಾಂಡಿ ರಾಯಲ್ಸ್ ತಂಡದ ಗೆಲುವಿಗೆ 22 ರನ್‌ಗಳ ಅಗತ್ಯತೆ ಇದ್ದಾಗ ವಿಜಯ್ ಶಂಕರ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಓವರ್ ಆರಂಭವಾದ ಬಳಿಕ ಎಲ್ಲರ ನಿರೀಕ್ಷೆ ಹುಸಿಯಾಯಿತು.

20ನೇ ಓವರ್​ನಲ್ಲಿ ವಿಜಯ್ ವಿಫಲ

ಜಾಫ್ನಾ ತಂಡದ ಪರ ಕೊನೆಯ 20 ನೇ ಓವರ್ ಎಸೆಯಲು ದಿಲ್ಶನ್ ಮಧುಶಂಕ ಬಂದರೆ, ಇತ್ತ ಸ್ಟ್ರೈಕ್​ನಲ್ಲಿ ವಿಜಯ್ ಶಂಕರ್ ಇದ್ದರು. ಈ ಪಂದ್ಯವನ್ನು ಕ್ಯಾಂಡಿ ರಾಯಲ್ಸ್ ಗೆಲ್ಲಬೇಕಾದರೆ, ವಿಜಯ್ ಶಂಕರ್ ಕನಿಷ್ಠ ಪಕ್ಷ 3 ಸಿಕ್ಸರ್‌ಗಳನ್ನು ಬಾರಿಸಬೇಕಿತ್ತು. ಆದರೆ ದಿಲ್ಶನ್ ಮಧುಶಂಕ ಎಸೆದ ನಿಖರವಾದ ಯಾರ್ಕರ್​ಗಳ ಮುಂದೆ ವಿಜಯ್ ಶಂಕರ್ ಆಟ ನಡೆಯಲಿಲ್ಲ. ಸತತ 5 ಎಸೆತಗಳು ಡಾಟ್ ಆದವು. ಅಂದರೆ ಈ 5 ಎಸೆತಗಳಲ್ಲಿ ವಿಜಯ್ ಶಂಕರ್​ಗೆ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಇನ್ನು ಓವರ್‌ನ ಕೊನೆಯ ಎಸೆತದಲ್ಲಿ ರನ್ ಗಳಿಸುವ ಪ್ರಯತ್ನದಲ್ಲಿ ವಿಜಯ್ ಶಂಕರ್ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ, ಮಧುಶಂಕ ಕೊನೆಯ ಓವರ್ ಅನ್ನು ವಿಕೆಟ್ ಮೇಡನ್ ಮಾಡಿ ಜಾಫ್ನಾ ಕಿಂಗ್ಸ್‌ಗೆ ಅಭೂತಪೂರ್ವ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version