Video: ನೋಡ ನೋಡುತ್ತಿದ್ದಂತೆ ಮಹಿಳೆಯ ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ ಆನೆ – Kannada News | Woman makes a request to an elephant who threw her hat

ಆನೆಗಳ (elephants) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ. ಕೆಲವೊಮ್ಮೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದೀಗ ಇಂತಹದ್ದೇ ತಮಾಷೆಯೆನಿಸುವ ವಿಡಿಯೋ ವೈರಲ್ ಆಗಿದೆ. ಆನೆಯೊಂದು ಮಹಿಳೆಯ (woman) ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ್ದು, ಆಮೇಲೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಗಜರಾಜನ ಈ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಎನಿವೇ ಮನ್ಯವಿ (Anyway Manyawi) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆನೆಯ ತುಂಟಾಟವನ್ನು ನೋಡಬಹುದು. ಆನೆಯೊಂದು ಮಹಿಳೆಯ ಹಿಂಬದಿಯಲ್ಲಿ ನಿಂತುಕೊಂಡ ಆಕೆಯ ತಲೆಯಲ್ಲಿದ್ದ ಟೋಪಿಯನ್ನು ಸೊಂಡಿಲಿನಿಂದ ಮೆಲ್ಲನೆ  ಎಗರಿಸಿದೆ. ಆ ಬಳಿಕ ತಾನು ಏನು ಮಾಡಿಲ್ಲ ಎಂಬಂತೆ ಗಂಭೀರವಾಗಿ ನಿಂತು ಕೊಂಡಿದೆ. ಅಲ್ಲೇ ಇದ್ದವರು ಈ ಗಜರಾಜನ ತುಂಟಾಟ ಕಂಡು ನಕ್ಕಿದ್ದಾರೆ. ತನ್ನ ಟೋಪಿಯನ್ನು ಎಗರಿಸಿದ ಆನೆಯ ಬಳಿ ಮಹಿಳೆಯೂ ಟೋಪಿ ಕೊಡುವಂತೆ ಮನವಿ ಮಾಡಿದ್ದಾಳೆ. ಮಹಿಳೆಯ ಮಾತಿಗೆ ಕರಗಿದ ಆನೆಯೂ ಮೆಲ್ಲನೆ ಟೋಪಿಯನ್ನು ಹಿಂದಿರುಗಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಮೂಕ ಜೀವಿಗಳ ಶುದ್ಧ ಗೆಳೆತನ; ತನ್ನ ಸ್ನೇಹಿತ ಡಾಲಿಯೊಂದಿಗೆ ತುಂಟಾಟಕ್ಕೆ ಇಳಿದ ಆನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಖತರ್ನಾಕ್ ಆನೆ ಎಂದರೆ, ಮತ್ತೊಬ್ಬರು, ತುಂಬಾನೇ ಮುದ್ದಾಗಿದೆ, ಆನೆ ನೋಡಲು ಗಂಭೀರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬುದ್ದಿವಂತ ಗಜರಾಜ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Astrological Guide: ಮನೆ ನಿರ್ಮಾಣದ ಸಮಯದಲ್ಲಿ ಗ್ರಹಗಳ ಗೋಚಾರ ಪರಿಗಣಿಸುವುದು ಏಕೆ ಮುಖ್ಯ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Unlocking Your Homes Lifespan: An Astrological Guide to House Longevity

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆಗೆ ಎಷ್ಟು ಆಯಸ್ಸು ಇರುತ್ತದೆ ಮತ್ತು ಅದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬ ವಿಷಯದ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. ಪ್ರತಿಯೊಂದಕ್ಕೂ ಆದಿ ಅಂತ್ಯ ಇರುವಂತೆ, ಮನೆಗೂ ಒಂದು ನಿರ್ದಿಷ್ಟ ಆಯಸ್ಸು ಇರುತ್ತದೆ ಎಂಬುದು ಜ್ಯೋತಿಷ್ಯ ಮತ್ತು ವಾಸ್ತು ನಂಬಿಕೆಯಾಗಿದೆ. ಮನೆ ಕಟ್ಟಲು ಪ್ರಾರಂಭಿಸುವಾಗ ಜಾತಕದ ಶುಭಯೋಗಗಳು, ವಾಸ್ತುಪುರುಷನ ಸ್ಥಾನಮಾನ, ಮತ್ತು ಧ್ವಜಾಯ, ಧೂಮ್ರಾಯ, ಕಾಕಾಯ, ಸಿಂಹಾಯ, ವೃಷಭಾಯ, ಗಜಾಯ, ಖರಾಯ ಎಂಬ ಎಂಟು ಆಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಈ ಆಯಗಳು ಮನೆಯ ದೀರ್ಘಾಯುಷ್ಯದ ಬಗ್ಗೆ ಸೂಚನೆ ನೀಡುತ್ತವೆ ಎಂದು ಹೇಳಲಾಗುತ್ತದೆ.

ಆದರೆ, ಕೇವಲ ಜಾತಕ ಅಥವಾ ಆಯಗಳ ಆಧಾರದ ಮೇಲೆ ಮನೆಯ ಆಯಸ್ಸನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟಕರ. ಅನೇಕ ಸಂದರ್ಭಗಳಲ್ಲಿ, ಜನರು ಒಂದೇ ವರ್ಷದಲ್ಲಿ ಮನೆ ಖಾಲಿ ಮಾಡುವುದು, ಐದು ವರ್ಷಗಳಲ್ಲಿ ಮನೆ ಮಾರಾಟ ಮಾಡುವುದು ಅಥವಾ ಮನೆ ಬಿಟ್ಟು ಹೋಗುವುದು ಸಂಭವಿಸುತ್ತದೆ. ಇವೆಲ್ಲವನ್ನು ಗಮನಿಸಿದಾಗ, ಮನೆಯ ನಿಜವಾದ ಆಯಸ್ಸು ನಿರ್ಧಾರವಾಗುವುದು ಕೇವಲ ಜಾತಕ ಮತ್ತು ಆಯಗಳಿಂದಲ್ಲ, ಬದಲಾಗಿ ಮನೆ ನಿರ್ಮಾಣವನ್ನು ಪ್ರಾರಂಭಿಸುವಾಗ ಗ್ರಹಗಳ ಗೋಚಾರದ ಪ್ರಭಾವವನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗಿದೆ. ಈಗಲೂ ಸಹ, 200, 400, ಅಥವಾ 500 ವರ್ಷಗಳ ಹಿಂದೆ ನಿರ್ಮಿಸಲಾದ ಮನೆಗಳು ಸುಭದ್ರವಾಗಿರುವುದು, ಅಂದು ಕಟ್ಟಿದವರು ಜಾತಕದ ಜೊತೆಗೆ ಗೋಚಾರದಲ್ಲಿರುವ ಗ್ರಹಗಳ ಪ್ರಭಾವವನ್ನು ಸರಿಯಾಗಿ ಪರಿಗಣಿಸಿದ್ದರೆ ಎಂಬುದನ್ನು ಸೂಚಿಸುತ್ತದೆ.

ಅಪಾರ್ಟ್‌ಮೆಂಟ್‌ಗಳ ವಿಷಯಕ್ಕೆ ಬಂದಾಗ, ಅವುಗಳ ಆಯಸ್ಸನ್ನು ನಿರ್ಧರಿಸುವುದು ಮತ್ತಷ್ಟು ಸಂಕೀರ್ಣವಾಗುತ್ತದೆ. ಏಕೆಂದರೆ ಒಂದೇ ಪಾಯದ ಮೇಲೆ ಹಲವಾರು ಫ್ಲ್ಯಾಟ್‌ಗಳು ಇರುತ್ತವೆ. ಹಾಗಾಗಿ ಒಂದು ನಿರ್ದಿಷ್ಟ ಫ್ಲ್ಯಾಟ್‌ನ ಆಯಸ್ಸನ್ನು ಪ್ರತ್ಯೇಕವಾಗಿ ಹೇಳುವುದು ಕಷ್ಟ. ಇಡೀ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಆಯಸ್ಸು ಅನ್ವಯವಾಗುತ್ತದೆ. ಫ್ಲ್ಯಾಟ್‌ಗಳಿಗೆ ಪೂರ್ಣಾಯುಸ್ಸು (120 ವರ್ಷ) ಇರುವುದು ಕಷ್ಟಸಾಧ್ಯ. ಅವುಗಳಿಗೆ ಹೆಚ್ಚೆಂದರೆ 60 ವರ್ಷಗಳವರೆಗೆ ಆಯಸ್ಸು ಇರಬಹುದು ಎಂದು ಹೇಳಲಾಗುತ್ತದೆ. ಭೂಮಿಯ ಬಲ ಮತ್ತು ಆಕಾಶದ ಬಲವನ್ನು ಫ್ಲ್ಯಾಟ್‌ಗಳಿಗೆ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯ ದೀರ್ಘಾಯುಷ್ಯವನ್ನು ಜ್ಯೋತಿಷ್ಯದ ಮೂಲಕ ತಿಳಿಯಲು ಕೆಲವು ಗ್ರಹ ಸ್ಥಾನಗಳನ್ನು ಪರಿಗಣಿಸಲಾಗುತ್ತದೆ. ಲಗ್ನದಲ್ಲಿ ಬುಧ ಗ್ರಹವಿದ್ದರೆ ಆ ಮನೆಗೆ 50 ವರ್ಷಗಳ ಆಯಸ್ಸು ಇರುತ್ತದೆ. ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಗ್ರಹ ಮತ್ತು 11ನೇ ಮನೆಯಲ್ಲಿ ಚಂದ್ರ ಗ್ರಹವಿದ್ದರೆ ಆ ಮನೆಗೆ 80 ವರ್ಷಗಳ ಆಯಸ್ಸು ಇರುತ್ತದೆ ಎಂದು ಹೇಳಲಾಗುತ್ತದೆ. ಪೂರ್ಣಾಯುಸ್ಸು, ಅಂದರೆ 120 ವರ್ಷಗಳ ದೀರ್ಘಾಯುಷ್ಯಕ್ಕಾಗಿ, ಲಗ್ನದಲ್ಲಿ ಗುರು, ನಾಲ್ಕನೇ ಮನೆಯಲ್ಲಿ ಶುಕ್ರ ಮತ್ತು ಆರನೇ ಮನೆಯಲ್ಲಿ ರವಿ ಗ್ರಹಗಳು ಇರಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ. ಇದಲ್ಲದೆ, ಲಗ್ನದಿಂದ 1, 4, 7, 10ನೇ ಸ್ಥಾನಗಳಲ್ಲಿ ಶುಭ ಗ್ರಹಗಳು ಇದ್ದು, ಅವುಗಳ ಶುಭ ದೃಷ್ಟಿ ಇದ್ದರೆ, ಅಂತಹ ಮನೆಗೂ ಪೂರ್ಣಾಯುಸ್ಸು ಇರುತ್ತದೆ. ಆದ್ದರಿಂದ, ಕೇವಲ ಜಾತಕ ಮತ್ತು ಆಯಗಳ ಮೇಲೆ ಅವಲಂಬಿತವಾಗದೆ, ಗೋಚಾರವನ್ನು ಆಧರಿಸಿ ಮನೆ ನಿರ್ಮಿಸುವುದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:33 am, Thu, 19 February 26

Source link

ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕ ಸನ್ನದ್ಧ, ಟ್ರಂಪ್ ಓಕೆ ಅನ್ನೋದೊಂದೇ ಬಾಕಿ – Kannada News | US Military Ready: Trump’s Iran War Decision Looms, Middle East on Edge

ವಾಷಿಂಗ್ಟನ್, ಫೆಬ್ರವರಿ 19: ಇರಾನ್(Iran) ಮೇಲಿನ ದಾಳಿಗೆ ಅಮೆರಿಕದ ಮಿಲಿಟರಿ ಸಿದ್ಧತೆಗಳು ಪೂರ್ಣಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.  ಮಧ್ಯಪ್ರಾಚ್ಯದಲ್ಲಿ, ಅಮೆರಿಕದ ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಇಂಧನ ತುಂಬುವ ವಿಮಾನಗಳು ಇರಾನ್ ವಿರುದ್ಧದ ಯುದ್ಧಕ್ಕೆ ಸಿದ್ಧವಾಗಿವೆ. ಈ ವಾರದ ಕೊನೆಯಲ್ಲಿ ಅಮೆರಿಕದ ಮಿಲಿಟರಿ ಇರಾನ್ ಮೇಲೆ ದಾಳಿ ನಡೆಸಬಹುದು ಎಂದು ವರದಿಗಳು ಹೇಳುತ್ತಿವೆ.

ಅಮೆರಿಕದ ದಾಳಿಯು ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದಾಗ್ಯೂ, ಇರಾನ್ ಮೇಲಿನ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಮೆರಿಕದ ಆಡಳಿತದ ಮೂಲವನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್, ಮುಂಬರುವ ವಾರದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾಗುವ ಸಾಧ್ಯತೆ 90 ಪ್ರತಿಶತ ಎಂದು ಹೇಳಿಕೊಂಡಿದೆ.

ಈ ವಾರದ ಕೊನೆಯಲ್ಲಿ ಅಮೆರಿಕದ ದಾಳಿ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ. ಇಸ್ರೇಲಿ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರು ಮುಂದಿನ ಕೆಲವು ದಿನಗಳಲ್ಲಿ ಇರಾನ್ ಮೇಲೆ ಅಮೆರಿಕದ ದಾಳಿ ನಡೆಯಲಿದೆ, ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿದ್ದಾರೆ.

ಮತ್ತಷ್ಟು ಓದಿ: Iran Protests: ‘ಮುಲ್ಲಾಗಳೇ ದೇಶಬಿಟ್ಟು ತೊಲಗಿ’- ಇರಾನ್​ನಲ್ಲಿ ಜನಘೋಷ; ತೀವ್ರ ಪ್ರತಿಭಟನೆಯಲ್ಲಿ 7 ಬಲಿ

ಮಿಲಿಟರಿ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಟ್ರಂಪ್ ಖಾಸಗಿಯಾಗಿ ಚರ್ಚಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಈ ವಿಷಯದ ಬಗ್ಗೆ ಟ್ರಂಪ್ ತಮ್ಮ ಸಲಹೆಗಾರರು ಮತ್ತು ಸಹಾಯಕರೊಂದಿಗೆ ಸಮಾಲೋಚಿಸಿದ್ದಾರೆ. ಈಗ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವುದು ಟ್ರಂಪ್ ಅವರ ಮೇಲಿದೆ. ಈ ಪ್ರದೇಶದಲ್ಲಿ ಅಮೆರಿಕದ ಯುದ್ಧನೌಕೆಗಳು ಮತ್ತು ಫೈಟರ್ ಜೆಟ್‌ಗಳ ದೊಡ್ಡ ಪಡೆಯನ್ನು ನಿಯೋಜಿಸುವುದನ್ನು ಅವರು ಭೀಕರ ಯುದ್ಧದ ಸಂಕೇತವೆಂದೇ ಹೇಳಬಹುದು.

ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತನ್ನ ಸಕ್ರಿಯ ನೌಕಾ ಪಡೆಯ ದೊಡ್ಡ ಭಾಗವನ್ನು ನಿಯೋಜಿಸಿದೆ. ಇದರಲ್ಲಿ ನೂರಾರು ಫೈಟರ್ ಜೆಟ್‌ಗಳು, ಎರಡು ವಿಮಾನವಾಹಕ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತ 150 ಕ್ಕೂ ಹೆಚ್ಚು ಸರಕು ವಿಮಾನಗಳು ಸೇರಿವೆ. ಈ ವಾರ, ಇರಾನ್‌ನ ಸುತ್ತಮುತ್ತಲ ಪ್ರದೇಶದಲ್ಲಿ 50 ಕ್ಕೂ ಹೆಚ್ಚು F-35, F-22 ಮತ್ತು F-16 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಸ್ವಿಟ್ಜರ್​​ಲ್ಯಾಂಡ್​ನ ಜಿನೀವಾದಲ್ಲಿ ಅಮೆರಿಕ ಮತ್ತು ನಿರಾನಿನ ನಿಯೋಗಗಳು ಉನ್ನತ ಮಟ್ಟದ ಪರಮಾಣು ಒಪ್ಪಂದದ ಕುರಿತು ಚರ್ಚಿಸಲು ಸಭೆ ಸೇರಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲ ಬಾರಿಗೆ ಮಗಳ ಪರಿಚಯಿಸಿದ ನೀನಾಸಂ ಸತೀಶ್ – Kannada News | Ninasam Satish Introduce Her Daughter To fans video goes viral

ನೀನಾಸಂ ಸತೀಶ್ ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್, ದುನಿಯಾ ವಿಜಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೇದಿಕೆ ಮೇಲೆ ಮತ್ತೋರ್ವ ವಿಶೇಷ ವ್ಯಕ್ತಿ ಗಮನ ಸೆಳೆಯುತ್ತಿದ್ದರು. ಅವರೇ ನೀನಾಸಂ ಸತೀಶ್ ಅವರ ಮಗಳು. ಇಷ್ಟು ದಿನ ಸತೀಶ್ ಅವರು ವೇದಿಕೆ ಮೇಲೆ ಮಗಳನ್ನು ಪರಿಚಯ ಮಾಡಿಸಿಲ್ಲ. ಈಗ ಅವರು ಮಗಳನ್ನು ವೇದಿಕೆ ಮೇಲೆ ಕರೆದರು. ಆ ಸಂದರ್ಭದಲ್ಲಿ ಮಗಳು ಭಾವುಕಳಾದಳು. ಅಪ್ಪನಿಗೆ ಆಲ್ ದಿ ಬೆಸ್ಟ್ ಅನ್ನುತ್ತಾ ಅತ್ತು ಬಿಟ್ಟಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs PAK: ಹೀಗೆ ಗೆದ್ದರೆ ಮಾತ್ರ ಭಾರತ vs ಪಾಕಿಸ್ತಾನ್ ಮತ್ತೆ ಮುಖಾಮುಖಿ – Kannada News | How India vs Pakistan Could Meet Again in Semi Final?

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಈ ಎಂಟು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳಿರುವುದು ವಿಶೇಷ. ಅಂದರೆ ಗ್ರೂಪ್-ಎ ಯಿಂದ ಉಭಯ ತಂಡಗಳು ಸೂಪರ್-8 ಸುತ್ತಿಗೆ ಪ್ರವೇಶಿಸಿದೆ. ಇದಾಗ್ಯೂ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗುವುದಿಲ್ಲ.

ಏಕೆಂದರೆ ಉಭಯ ತಂಡಗಳು ಬೇರೆ ಬೇರೆ ಗ್ರೂಪ್​ಗಳಲ್ಲಿ ಸ್ಥಾನ ಪಡೆದಿದೆ. ಅಂದರೆ ಸೂಪರ್-8 ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಆ ಗ್ರೂಪ್​ಗಳಲ್ಲಿರುವ ತಂಡಗಳು…

  • ಗ್ರೂಪ್ 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
  • ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.

ಸೂಪರ್-8 ಪಂದ್ಯಗಳು ನಡೆಯುವುದು ಗ್ರೂಪ್​ಗಳಲ್ಲಿರುವ ತಂಡಗಳ ನಡುವೆ. ಅಂದರೆ ಭಾರತ ತಂಡವು ತನ್ನ ಗ್ರೂಪ್​ನಲ್ಲಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ತಲಾ ಒಂದೊಂದು ಪಂದ್ಯಗಳನ್ನಾಡಲಿದೆ.

ಅತ್ತ ಗ್ರೂಪ್-2 ನಲ್ಲಿರುವ ಪಾಕಿಸ್ತಾನ್ ತಂಡವು ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್​ ಮುಖಾಮುಖಿಗೆ ಯಾವುದೇ ಅವಕಾಶವಿಲ್ಲ. ಇದಾಗ್ಯೂ ಮುಂದಿನ ಹಂತಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎದುರಾಗಬಹುದು.

ನಾಕೌಟ್​ನಲ್ಲಿ ಮುಖಾಮುಖಿ:

ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್​ಗಳಿಗೂ ಪ್ರತ್ಯೇಕ ಪಾಯಿಂಟ್ಸ್ ಟೇಬಲ್​ ಇರಲಿದೆ. ಈ ಅಂಕ ಪಟ್ಟಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಟಾಪ್-2 ನಲ್ಲಿ ಕಾಣಿಸಿಕೊಂಡರೆ ಮಾತ್ರ ಸೆಮಿಫೈನಲ್​ಗೆ ಪ್ರವೇಶಿಸಲಿದೆ. ಅದರಂತೆ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬಹುದು.

ಆದರೆ ಇಲ್ಲಿ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬೇಕಿದ್ದರೆ ಪಾಯಿಂಟ್ಸ್ ಟೇಬಲ್​ನಲ್ಲಿ ಉಭಯ ತಂಡಗಳ ಸ್ಥಾನಗಳು ಬದಲಾಗಬೇಕು. ಅದರ ವಿವರಗಳು ಈ ಕೆಳಗಿನಂತಿದೆ…

  •  ಸೂಪರ್-8 ಸುತ್ತಿನಲ್ಲಿ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಪಾಕಿಸ್ತಾನ್ ದ್ವಿತೀಯ ಸ್ಥಾನ ಪಡೆಯಬೇಕು. ಹೀಗಾದಲ್ಲಿ ಮಾತ್ರ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.
  • ಸೂಪರ್-8 ಸುತ್ತಿನಲ್ಲಿ ಗ್ರೂಪ್-2ರ ಪಾಯಿಂಟ್ಸ್​​ ಟೇಬಲ್​ನಲ್ಲಿ ಪಾಕಿಸ್ತಾನ್ ತಂಡ ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದರೂ ಸಹ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಎದುರು ಬದುರಾಗಲಿದೆ.

ಫೈನಲ್​ನಲ್ಲಿ ಮುಖಾಮುಖಿ:

ಭಾರತ ಮತ್ತು ಪಾಕಿಸ್ತಾನ್ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳನ್ನು ಅಥವಾ ಎರಡನೇ ಸ್ಥಾನಗಳನ್ನು ಪಡೆದರೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಗೆದ್ದರೆ ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: T20 World Cup 2026: ಸೂಪರ್-8 ಸುತ್ತಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಂದರೆ ಉಭಯ ತಂಡಗಳು ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ ಅಥವಾ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರೆ ಸೆಮಿಫೈನಲ್​ನಲ್ಲಿ ಬೇರೆ ತಂಡಗಳ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿ ಭಾರತ ಮತ್ತು ಪಾಕಿಸ್ತಾನ್ ಫೈನಲ್​ಗೇರಿದರೆ ಮಾತ್ರ ಮತ್ತೊಮ್ಮೆ ಇಂಡೊ-ಪಾಕ್ ಕ್ರಿಕೆಟ್ ಕದನ ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರೆಯಲಿದೆ.

Source link

AI Impact Summit: ಎಐ ಪ್ರಯೋಜನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್ – Kannada News | Ashwini Vaishnaw Calls for Collective Action to Tackle AI Risks at India AI Impact Summit 2026

ನದೆಹಲಿ, ಫೆಬ್ರವರಿ 19:ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ ಆರಂಭಗೊಂಡಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಗೆ ಸಾಕ್ಷಿಯಾಗಿದ್ದಾರೆ. ಈ ಸದರ್ಭದಲ್ಲಿ ಕೇಂದ್ರಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಎಐನಿಂದ ಪ್ರಯೋನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯವನ್ನು ಕೂಡ ಕಂಡುಕೊಳ್ಳಬೇಕೆಂದರು. ತಂತ್ರಜ್ಞಾನದ ಿಜಾದ ಮೌಲ್ಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪುವುದರಲ್ಲಿದೆ.

ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು, ಅದನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸುವುದು ಮತ್ತು ಅದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಸರ್ಕಾರದ ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು.ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ನಾವು ಸಾಮಾನ್ಯ ಕಂಪ್ಯೂಟ್ ಪ್ಲಾಟ್‌ಫಾರ್ಮ್ ಅನ್ನು ರಚಿಸಿದ್ದೇವೆ, ಅಲ್ಲಿ ನಾವು ನಮ್ಮ ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ 38,000 GPU ಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದೇವೆ.

ಈ ಸಾಮಾನ್ಯ ಕಂಪ್ಯೂಟ್ ಪ್ಲಾಟ್‌ಫಾರ್ಮ್‌ಗೆ ನಾವು ಇನ್ನೂ 20,000 GPU ಗಳನ್ನು ಸೇರಿಸುತ್ತೇವೆ ಎಂದರು. 2026 ರ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ 110 ಕ್ಕೂ ಹೆಚ್ಚು ದೇಶಗಳು, 20 ರಾಷ್ಟ್ರಗಳು, 30 ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು 500ಕ್ಕೂ ಅಧಿಕ ಜಾಗತಿಕ ನಾಯಕರು ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಎಐ ಇಂಪ್ಯಾಕ್ಟ್​ ಶೃಂಗಸಭೆ: ವಿಶ್ವನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆ – Kannada News | Narendra Modi Engages With Global Leaders at India AI Impact Summit 2026

ನವದೆಹಲಿ, ಫೆಬ್ರವರಿ 19: ಇಂದು ದೆಹಲಿಯಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಜತೆ ಕುಳಿತು ಚರ್ಚಿಸುತ್ತಿರುವ ವಿಡಿಯೋ ಇಲ್ಲಿದೆ.  ಸಿಇಒಗಳು, ಸಿಎಕ್ಸ್‌ಒಗಳು ಸೇರಿದಂತೆ 500 ಕ್ಕೂ ಹೆಚ್ಚು ಜಾಗತಿಕ ಎಐ ನಾಯಕರು, ಸುಮಾರು 100 ಸಿಇಒಗಳು ಮತ್ತು ಸಂಸ್ಥಾಪಕರು, 150 ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಮತ್ತು 400 ಸಿಟಿಒಗಳು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದು 20 ಕ್ಕೂ ಹೆಚ್ಚು ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಮತ್ತು ಸುಮಾರು 60 ಮಂತ್ರಿಗಳು, ಉಪಮಂತ್ರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ.

ಮತ್ತೊಂದೆಡೆ, ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಎಐ ಶೃಂಗದಲ್ಲಿ ಇದೀಗ ಗಿನ್ನೆಸ್‌ ವಿಶ್ವದಾಖಲೆ ಬರೆಯಲು ಸಿದ್ಧವಾಗಿದೆ. ಈ ಶೃಂಗದಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಪ್ರತಿಜ್ಞೆ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

‘ದಿ ರೈಸ್ ಆಫ್​ ಅಶೋಕ’ ಮೂಲಕ ಮತ್ತೆ ಮಿಂಚಲು ರೆಡಿ ಆದ ಸತೀಶ್; ಗಮನ ಸೆಳೆದ ಟ್ರೇಲರ್ – Kannada News | Ninasam Satish’s ‘The Rise of Ashoka’: Action Packed Social Drama Trailer Creates Buzz

ನೀನಾಸಂ ಸತೀಶ್ (Sathish Ninasam) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗ ‘ದಿ ರೈಸ್ ಆಫ್ ಅಶೋಕ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಜಾತಿ ತಾರತಮ್ಯದ ವಿರುದ್ಧ ಸಿಡಿದೇಳುವ ಅಶೋಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ.

ಅಶೋಕ ಓರ್ವ ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು. ಆತ ನಗರಕ್ಕೆ ಹೋಗಿ ಓದಿ ಮರಳಿ ಊರಿಗೆ ಬರುತ್ತಾನೆ. ಆತ ರೆವೆನ್ಯೂ ಡಿಪಾರ್ಟ್​​ಮೆಂಟ್ ಸೇರುವ ಪ್ರಯತ್ನ ಮಾಡುತ್ತಾನೆ. ಆಗ ಶುರುವಾಗುತ್ತೆ ಊರ ಪಾಳೇಗಾರನ ದಬ್ಬಾಳಿಕೆ. ಈ ವ್ಯವಸ್ಥೆಯ ವಿರುದ್ಧ ಅಶೋಕ ಸಿಡಿದೇಳುತ್ತಾನೆ. ಇದಿಷ್ಟು ವಿಷಯ ಟ್ರೇಲರ್​​ನಲ್ಲಿ ತೋರಿಸಲಾಗಿದೆ.

ಸತೀಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಒಂದಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ. ಅವರೆಲ್ಲರೂ ಆಗಮಿಸಿ, ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ಲಾಂಚ್ ಈವೆಂಟ್​​ಗೆ ಸಾತ್ ಕೊಟ್ಟರು. ರವಿಚಂದ್ರನ್​, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್ ಮೊದಲಾದವರು ಟ್ರೇಲರ್ ಲಾಂಚ್ ಈವೆಂಟ್​​ನಲ್ಲಿ ಇದ್ದರು.

ಇದನ್ನೂ ಓದಿ: ನನಗಿಂತ ಸಪ್ತಮಿ ಪಾತ್ರಕ್ಕೆ ಒಳ್ಳೆಯ ಡೈಲಾಗ್ ಇದೆ ಎಂದ ನೀನಾಸಂ ಸತೀಶ್

ಟ್ರೇಲರ್ ನೋಡಿದವರಿಗೆ ನಿರೀಕ್ಷೆ ಮೂಡಿದೆ. ‘ಇದು ರೈಸ್ ಆಫ್ ಅಶೋಕ ಅಲ್ಲ, ರೈಸ್ ಆಫ್ ಸತೀಶ ಆಗಲಿ, ಆಗುತ್ತೆ’ ಎಂದು ಬಂದ ಸೆಲೆಬ್ರಿಟಿಗಳು ಹಾರೈಸಿದರು. ಸಪ್ತಮಿ ಗೌಡ, ಸಂಪತ್, ರವಿಶಂಕರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿನೋದ್ ದೊಂಡಾಲೆ ನಿರ್ದೇಶನ ಮಾಡಿದ್ದಾರೆ. ಅವರು ನಿಧನ ಹೊಂದಿದ ಬಳಿಕ ಸತೀಶ್ ಅವರು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಸತೀಶ್ ಕೂಡ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಹಂತ ತಲುಪಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಯಮಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಬಿಗ್​​​​ ಟ್ವಿಸ್ಟ್​: ಜೈಲಿನಲ್ಲಿರುವ ಖೈದಿಯಿಂದಲ್ಲೇ ಕನ್ನ! – Kannada News | Parole Convict’s Masterplan: Byadarahalli Robbery Unravels, Family Link Suspected

ಬೆಂಗಳೂರು, ಫೆ.19: ಪೊಲೀಸ್ ಸಮವಸ್ತ್ರ ಧರಿಸಿ ಬಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯವರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು (Byadarahalli robbery) ಯಶಸ್ವಿಯಾಗಿದ್ದಾರೆ. ಈ ದರೋಡೆಯ ಹಿಂದೆ ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಕೈದಿಯ ಕೈವಾಡ ಇರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬಾಳೆಗೌಡ ಎಂಬುವವರ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಗ್ಯಾಂಗ್, ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಮನೆಯಲ್ಲಿದ್ದ 20 ಲಕ್ಷ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ.

ಈ ಕಳ್ಳತನ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸೋಕೋ (SOCO) ತಂಡ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿರುವ ಒಬ್ಬ ಖೈದಿಯ ಬೆರಳಚ್ಚಿಗೆ ತಾಳೆಯಾಗಿದೆ. ಇದು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಜೈಲಿನಲ್ಲಿರುವ ವ್ಯಕ್ತಿ ದರೋಡೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿತ್ತು. ನಂತರದಲ್ಲಿ ಈ ಬಗ್ಗೆ ತನಿಖೆ ಮಾಡಿದಾಗ ಅಚ್ಚರಿಯ ವಿಚಾರವೊಂದು ಸಿಕ್ಕಿದೆ.

ಇದನ್ನೂ ಓದಿ: ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ

ಹೆಚ್ಚಿನ ತನಿಖೆ ನಡೆಸಿದಾಗ ಖೈದಿಯು ಪೆರೋಲ್ (Parole) ಮೇಲೆ ಜೈಲಿನಿಂದ ಹೊರಬಂದಿರುವುದು ಗೊತ್ತಾಗಿದೆ. ದರೋಡೆ ನಡೆದ ಮರುದಿನವೇ ಆತ ಪುನಃ ಜೈಲಿಗೆ ವಾಪಸ್ ಹೋಗಿರುವುದು ತಿಳಿದುಬಂದಿದೆ. ಅಂದರೆ, ಜೈಲಿನಿಂದ ಹೊರಬಂದು ದರೋಡೆ ಸ್ಕೆಚ್ ಹಾಕಿ, ಕಳ್ಳತನ ಮಾಡಿ ಯಾರಿಗೂ ಅನುಮಾನ ಬಾರದಂತೆ ಮತ್ತೆ ಜೈಲು ಸೇರಿಕೊಂಡಿದ್ದ.ಹೊಂಬಾಳೆಗೌಡ ಅವರು ಇತ್ತೀಚೆಗಷ್ಟೇ ಜಮೀನು ಮಾರಾಟ ಮಾಡಿದ್ದು, ಮನೆಯಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ನಗದು ಇತ್ತು ಎನ್ನಲಾಗಿದೆ. ಈ ವಿಚಾರ ದರೋಡೆಕೋರರಿಗೆ ಗೊತ್ತಾಗಿದ್ದು ಹೇಗೆ ಎಂಬುದು ಈಗ ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆ. ಮನೆಯಲ್ಲಿ ದೊಡ್ಡ ಮೊತ್ತದ ಹಣ ಇರುವ ಬಗ್ಗೆ ಕುಟುಂಬದವರಿಗೇ ತಿಳಿದಿದ್ದರಿಂದ, ಕುಟುಂಬದ ಸದಸ್ಯರ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಜೈಲಿನಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:06 am, Thu, 19 February 26

Source link

T20 World Cup 2026: ಸೂಪರ್-8 ಸುತ್ತಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ – Kannada News | T20 World Cup 2026 Super 8 Full schedule

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದರೆ, 12 ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಝಿಂಬಾಬ್ವೆ, ಪಾಕಿಸ್ತಾನ್, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ.

ಸೂಪರ್-8 ಸ್ವರೂಪ:

  • ಗುಂಪುಗಳ ವಿಂಗಡಣೆ: ಸೂಪರ್-8ಕ್ಕೆ ಅರ್ಹತೆ ಪಡೆದ 8 ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ (Group 1 ಮತ್ತು Group 2) ವಿಂಗಡಿಸಲಾಗುತ್ತದೆ.
  • ಪಂದ್ಯಗಳ ಸಂಖ್ಯೆ: ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಉಳಿದ ಮೂರು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡುತ್ತದೆ. ಅಂದರೆ ಪ್ರತಿ ತಂಡಕ್ಕೆ ಒಟ್ಟು 3 ಪಂದ್ಯಗಳು ಇರುತ್ತವೆ.
  • ಪಾಯಿಂಟ್ಸ್ ಸಿಸ್ಟಮ್: ಪ್ರತಿ ಗೆಲುವಿಗೆ 2 ಪಾಯಿಂಟ್ಸ್, ಯಾವುದೇ ಫಲಿತಾಂಶ ಬಾರದಿದ್ದರೆ (No Result) 1 ಪಾಯಿಂಟ್ ಮತ್ತು ಸೋಲಿಗೆ 0 ಪಾಯಿಂಟ್ ನೀಡಲಾಗುತ್ತದೆ.
  • ಸೆಮಿಫೈನಲ್ ಅರ್ಹತೆ: ಸೂಪರ್-8ರ ಪ್ರತಿ ಗುಂಪಿನಿಂದ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು (ಒಟ್ಟು 4 ತಂಡಗಳು) ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ.

ಸೂಪರ್-8 ಗುಂಪುಗಳು:

  • ಗ್ರೂಪ್ 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
  • ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಆರಂಭಿಕರ ವಿಶ್ವ ದಾಖಲೆಯ ಚೇಸಿಂಗ್

ಸೂಪರ್ 8 ಸುತ್ತಿನ ಸಂಪೂರ್ಣ ವೇಳಾಪಟ್ಟಿ:

ಫೆಬ್ರವರಿ 21 ನ್ಯೂಝಿಲೆಂಡ್ vs ಪಾಕಿಸ್ತಾನ್ ಆರ್‌ಪಿಎಸ್, ಕೊಲಂಬೊ ಸಂಜೆ 7:00 ಕ್ಕೆ
ಫೆಬ್ರವರಿ 22 ಇಂಗ್ಲೆಂಡ್ vs ಶ್ರೀಲಂಕಾ  ಕ್ಯಾಂಡಿ ಮಧ್ಯಾಹ್ನ 3:00
ಫೆಬ್ರವರಿ 22 ಭಾರತ vs ಸೌತ್ ಆಫ್ರಿಕಾ ಅಹಮದಾಬಾದ್ ಸಂಜೆ 7:00 ಕ್ಕೆ
ಫೆಬ್ರವರಿ 23 ವೆಸ್ಟ್ ಇಂಡೀಸ್ vs ಝಿಂಬಾಬ್ವೆ  ಮುಂಬೈ ಸಂಜೆ 7:00 ಕ್ಕೆ
ಫೆಬ್ರವರಿ 24 ಇಂಗ್ಲೆಂಡ್ vs ಪಾಕಿಸ್ತಾನ್ ಕ್ಯಾಂಡಿ ಸಂಜೆ 7:00 ಕ್ಕೆ
ಫೆಬ್ರವರಿ 25 ನ್ಯೂಝಿಲೆಂಡ್ vs ಶ್ರೀಲಂಕಾ ಆರ್‌ಪಿಎಸ್, ಕೊಲಂಬೊ ಸಂಜೆ 7:00 ಕ್ಕೆ
ಫೆಬ್ರವರಿ 26 ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ ಅಹಮದಾಬಾದ್ ಮಧ್ಯಾಹ್ನ 3:00
ಫೆಬ್ರವರಿ 26 ಭಾರತ vs ಝಿಂಬಾಬ್ವೆ ಚೆನ್ನೈ ಸಂಜೆ 7:00 ಕ್ಕೆ
ಫೆಬ್ರವರಿ 27 ಇಂಗ್ಲೆಂಡ್ vs ನ್ಯೂಝೀಲೆಂಡ್ ಆರ್‌ಪಿಎಸ್, ಕೊಲಂಬೊ ಸಂಜೆ 7:00 ಕ್ಕೆ
ಫೆಬ್ರವರಿ 28 ಶ್ರೀಲಂಕಾ vs ಪಾಕಿಸ್ತಾನ್ ಕ್ಯಾಂಡಿ ಸಂಜೆ 7:00 ಕ್ಕೆ
ಮಾರ್ಚ್ 1 ಸೌತ್ ಆಫ್ರಿಕಾ vs ಝಿಂಬಾಬ್ವೆ ದೆಹಲಿ ಮಧ್ಯಾಹ್ನ 3:00
ಮಾರ್ಚ್ 1 ಭಾರತ vs ವೆಸ್ಟ್ ಇಂಡೀಸ್ ಕೋಲ್ಕತ್ತಾ ಸಂಜೆ 7:00 ಕ್ಕೆ

Source link

Exit mobile version