ಕಾಶಿಯಿಂದ ಬರುತ್ತಿದ್ದಂತೆಯೇ ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ – Kannada News | Kodi mutt Dr Shivananda Shivayogi Rajendra Swamiji prediction about Karnataka CM Change

ದೇವನಹಳ್ಳಿ, (ಫೆಬ್ರವರಿ 18): ಕಾಲಜ್ಞಾನದ ಮೂಲಕ ಭಯಾನಕ ಭವಿಷ್ಯ ನುಡಿಯುವ ಕೋಡಿಮಠದ (Kodi Math) ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿಶ್ರೀ) (Dr. Shivananda Shivayogi Rajendra Swamiji) ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಶಿವರಾತ್ರಿ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥನ ದರ್ಶನ ಮಾಡಿಕೊಂಡು ಇಂದು (ಫೆಬ್ರವರಿ 18) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಮಾಧ್​ಯಮಗಳ ಜೊತೆ ಮಾತನಾಡಿದ ಕೋಡಿಶ್ರೀ, ಸಿಎಂ ಸಿದ್ದರಾಮಯ್ಯ (CM Siddaramaiah), ಡಿಕೆ ಶಿವಕುಮಾರ್ (DK Shivakuamr) ಸೇರಿದಂತೆ ಕರ್ನಾಟಕ ರಾಜ್ಯ ರಾಜಕೀಯ, ರಾಜ್ಯ ಕಾಂಗ್ರೆಸ್ ಪಕ್ಷದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ.

ಇನ್ನು ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ನಾನು ಈ ಮೊದಲೇ ಹೇಳಿದ್ದೆ ಸಂಕ್ರಾಂತಿ ನಂತರ ಬಜೆಟ್ ಆಗುತ್ತೆ ಅಂತ. ಯುಗಾದಿ ನಂತರ ಅವರಾಗೆ ಅಧಿಕಾರ ಬಿಟ್ಟರೆ ಬದಲಾವಣೆ ಆಗುತ್ತೆ. ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಪ್ರಾಬ್ಲಮ್ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.

ನಾನು ಶಿವರಾತ್ರಿಗೆ ಕಾಶಿ ವಿಶ್ವನಾಥನ ದರ್ಶನಕ್ಕೆ ಹೋಗಿದ್ದೆ. ಪ್ರಯಾಗಕ್ಕೆ ಹೋಗಿದ್ದು, ಕರ್ನಾಟಕಕ್ಕೆ ಸುಖ ಶಾಂತಿ ಮಳೆ ಬೆಳೆಯಾಗಲಿ ಅಂತ ಪ್ರಾರ್ಥನೆ ಮಾಡಿದೆ. ಈ ವರ್ಷದಲ್ಲಿ ಕರ್ನಾಟಕ ರಾಜ್ಯಕ್ಕೆ ಮಳೆ ಬೆಳೆಯಲ್ಲಿ ಯಾವುದೇ ತೊಂದರೆ ಇಲ್ಲ. ಜಗತ್ತಿನಾದ್ಯಂತೆ ಸಮಸ್ಯೆ ಇರಲಿದೆ. ಈ ಹಿಂದೆ ಆದಂತಹ ಅವಾಂತರಗಳಿಗಿಂತ ಹೆಚ್ಚಿನ ಹಾನಿ ಆಗುತ್ತೆ. ಯುದ್ಧ ಆಗುವ ಲಕ್ಷಣಗಳು ಸಹ ಇವೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು – Kannada News | India AI Impact Summit 2026 PM Modi and world leaders enjoys cultural displays at Bharat Mandapam

ನವದೆಹಲಿ, ಫೆಬ್ರವರಿ 18: ಪ್ರಧಾನಿ ನರೇಂದ್ರ ಮೋದಿ (PM Modi) ಅವರು AI ಶೃಂಗಸಭೆ ನಡೆಯುವ ಸ್ಥಳವಾದ ದೆಹಲಿಯ ಭಾರತ್ ಮಂಟಪಕ್ಕೆ ಆಗಮಿಸಿದ ವಿಶ್ವ ನಾಯಕರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಅವರು ಭಾರತ್ ಮಂಟಪದಲ್ಲಿ ಭಾರತೀಯ ಕಲೆ, ಸಂಸ್ಕೃತಿಯನ್ನು ಬಿತ್ತರಿಸುವ ಸಾಂಸ್ಕೃತಿಕ ಪ್ರದರ್ಶನಗಳನ್ನು ಆನಂದಿಸಿದ್ದಾರೆ. ಪ್ರಧಾನಿ ಮೋದಿಯವರೇ ಖುದ್ದಾಗಿ ಬೇರೆ ದೇಶಗಳ ನಾಯಕರನ್ನು ಕರೆದುಕೊಂಡು ಹೋಗಿ ಸಾಂಸ್ಕೃತಿಕ ಕಲೆಯನ್ನು ವಿವರಿಸಿದ್ದಾರೆ. ಭಾರತವು ಫೆಬ್ರವರಿ 20ರವರೆಗೆ AI ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ನಾಳೆ ಪ್ರಧಾನಿ ಮೋದಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AI ಶೃಂಗಸಭೆಗೆ ಆಗಮಿಸಿದ ಜಾಗತಿಕ ನಾಯಕರನ್ನು ಸ್ವಾಗತಿಸಿದ ಪ್ರಧಾನಿ ಮೋದಿ – Kannada News | PM Narendra Modi welcomes world leaders at Bharat Mandapam in Delhi during AI Impact Summit

ನವದೆಹಲಿ, ಫೆಬ್ರವರಿ 18: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಭಾರತ್ ಮಂಟಪದಲ್ಲಿ ಹಲವಾರು ವಿಶ್ವ ನಾಯಕರನ್ನು ಸ್ವಾಗತಿಸಿದರು. ಕೃತಕ ಬುದ್ಧಿಮತ್ತೆ (AI) ಕುರಿತು ನಡೆಯುತ್ತಿರುವ ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026ಗಾಗಿ (AI Summit 2026) ಜಗತ್ತಿನ ಹಲವು ದೇಶಗಳ ನಾಯಕರು, ಮುಖ್ಯಸ್ಥರು ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಎಲ್ಲ ಜಾಗತಿಕ ನಾಯಕರನ್ನೂ ಆತ್ಮೀಯವಾಗಿ ಬರಮಾಡಿಕೊಂಡರು. ಈ ಗಣ್ಯರಲ್ಲಿ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಪೆರೆಜ್-ಕ್ಯಾಸ್ಟೆಜಾನ್, ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ, ಕಝಕಿಸ್ತಾನ್ ಪ್ರಧಾನಿ ಓಲ್ಜಾಸ್ ಬೆಕ್ಟೆನೋವ್, ಫಿನ್ಲ್ಯಾಂಡ್ ಪ್ರಧಾನಿ ಪೆಟ್ಟೇರಿ ಓರ್ಪೊ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ, ಎಸ್ಟೋನಿಯಾ ಅಧ್ಯಕ್ಷ ಅಲರ್ ಕರಿಸ್ ಸೇರಿದ್ದಾರೆ.

ಪ್ರಧಾನಿ ಮೋದಿ ಮಾರಿಷಸ್ ಪ್ರಧಾನಿ ನವೀನ್​ಚಂದ್ರ ರಾಮ್ಗೂಲಮ್, ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೆ, ಸೀಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಳ್ಳೆ, ನೆದರ್ಲ್ಯಾಂಡ್ಸ್ ಪ್ರಧಾನಿ ಡಿಕ್ ಸ್ಕಫ್, ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಮತ್ತು ಕ್ರೊಯೇಷಿಯಾದ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರನ್ನು ಕೂಡ ಸ್ವಾಗತಿಸಿದರು.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟ್ ಪ್ರದರ್ಶನ; ವಿವಾದಕ್ಕೆ ಕ್ಷಮೆ ಯಾಚಿಸಿದ ಗಾಲ್ಗೋಟಿಯಾಸ್ ವಿವಿ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ, ಉಪಾಧ್ಯಕ್ಷರಾದ ಗಯಾನಾದ ಭರತ್ ಜಗದಿಯೊ ಮತ್ತು ಬೊಲಿವಿಯಾದ ಎಡ್ಮಂಡ್ ಲಾರಾ ಮೊಂಟಾನೊ ಜಾಗತಿಕ ಸಂಸ್ಥೆಗಳ ಪ್ರತಿನಿಧಿಯಾಗಿ ಆಗಮಿಸಿದ್ದರು.

ಭಾರತ್ ಮಂಟಪದಲ್ಲಿ ನಡೆದ ಉನ್ನತ ಮಟ್ಟದ ಸ್ವಾಗತಗಳ ಸರಣಿಯು ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಡಿಜಿಟಲ್ ರೂಪಾಂತರದ ಕುರಿತು ಜಾಗತಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಭಾರತದ ನಾಯಕತ್ವವನ್ನು ಎತ್ತಿ ತೋರಿಸಿತು. ಈ ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರು AI-ಚಾಲಿತ ಪರಿಹಾರಗಳು, ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ಭಾರತವು ಫೆಬ್ರವರಿ 20ರವರೆಗೆ AI ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಸೋಮವಾರ ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರಧಾನ ಮಂತ್ರಿ ಮೋದಿ ಇಂಡಿಯಾ AI ಇಂಪ್ಯಾಕ್ಟ್ ಎಕ್ಸ್‌ಪೋ 2026 ಅನ್ನು ಉದ್ಘಾಟಿಸಿದರು.

ಜಾಗತಿಕ ದಕ್ಷಿಣದಲ್ಲಿ ಆಯೋಜಿಸಲಾದ ಮೊದಲ ಜಾಗತಿಕ AI ಸಭೆಯಾದ ಶೃಂಗಸಭೆಯಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, 60 ಮಂತ್ರಿಗಳು ಮತ್ತು 500 ಜಾಗತಿಕ ನಾಯಕರು ಪಾಲ್ಗೊಂಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ಫೆಬ್ರವರಿ 19ರಂದು ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:05 pm, Wed, 18 February 26

Source link

ಪ್ರತಿಭಟನೆಗೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಗುಡ್​​ ನ್ಯೂಸ್: ಹಿಂಬಾಕಿ, ವೇತನ ಪರಿಷ್ಕರಣೆಗೆ ಆದೇಶ – Kannada News | Karnataka Government orders Hikes transport employees salary after bengaluru Chalo

ಬೆಂಗಳೂರು, (ಫೆಬ್ರವರಿ 18): ವಿವಿಧ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ಸಾರಿಗೆ ನೌಕರರು (Karnataka Transport employees)  ನಾಳೆ (ಫೆಬ್ರವರಿ 18) ಬೆಂಗಳೂರು ಚಲೋ (Bengaluru Chalo) ಕೈಗೊಂಡಿದ್ದು, ಈ ಬಾರಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ನೌಕರರ ಬೇಡಿಕೆ ಈಡೇರಿಸಲು ಮುಂದಾಗಿದೆ. ಹೌದು…ಈವರೆಗೂ ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,239 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ.

ನಾಳೆ(ಫೆಬ್ರವರಿ 18) ಪ್ರತಿಭಟನೆ ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಸಿಎಂ ಹಾಗೂ ಹಣಕಾಸು ಇಲಾಖೆ ಜೊತೆ ಸುದೀರ್ಘ ಚರ್ಚೆ ನಡೆಸಿದ್ದು, ಅಂತಿಮವಾಗಿ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿದೆ.

ಇದನ್ನೂ ನೋಡಿ: KSRTC BMTC Employees Strike: ನಾಳೆ ಸಾರಿಗೆ ಬಸ್ ಇರೋದಿಲ್ವಾ? ಹೇಗಿರುತ್ತೆ ಮುಷ್ಕರ?

ಸಾರಿಗೆ ನಿಗಮಗಳ ಸಿಬ್ಬಂದಿಗೆ 26 ತಿಂಗಳ ಹಿಂಬಾಕಿ ನೀಡಲು ನಿರ್ಧಾರ ಮಾಡಿದೆ. ಹಾಗೇ 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಿದೆ. ಇನ್ನು 2024ರ ಜನವರಿ 1ರಿಂದ ವೇತನ ಪರಿಷ್ಕೃತ ಆಗಬೇಕಿತ್ತು. ಆದ್ರೆ, 2025ರ ಮಾರ್ಚ್ 1ರಿಂದ ವೇತನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ 1271.92 ಕೋಟಿ ರೂಪಾಯಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಆದೇಶದಲ್ಲೇನಿದೆ?

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ 01.01.2021ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ. ಮುಂದುವರೆದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) ಮೂಲವೇತನವನ್ನು ದಿನಾಂಕ 01.04.2025 ರಿಂದ ಜಾರಿಗೆ ಬರುವಂತೆ ಶೇಕಡಾವಾರು ಎಷ್ಟು ಪ್ರಮಾಣದಲ್ಲಿ ಪರಿಷ್ಕರಿಸುವ ಕುರಿತು ಕಾರ್ಮಿಕ ಸಂಘಟನೆಗಳ ಜೊತೆ ಚರ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಹ ಆದೇಶಿಸಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ:ಆಇ 135 ವೆಚ್ಚ-11/2023, ದಿನಾಂಕ:18.02.2026 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:55 pm, Wed, 18 February 26

Source link

ರಾತ್ರಿ 11 ಆದ್ರೂ ನಿದ್ದೆ ಬರಲ್ವಾ? ಹಾಗಿದ್ರೆ ಡಯಟ್, ವ್ಯಾಯಾಮ ಏನು ಮಾಡ್ಬೇಡಿ ಎಲ್ಲಾ ವ್ಯರ್ಥ! – Kannada News | How Late Sleep Affects Your Weight

ತೂಕ ಇಳಿಸಿಕೊಳ್ಳುವುದೆಂದರೆ ಕೇವಲ ಕ್ಯಾಲೊರಿಗಳನ್ನು ಲೆಕ್ಕಹಾಕಿ, ಬೆವರು ಸುರಿಸಿ ವ್ಯಾಯಾಮ ಮಾಡುವುದು ಮಾತ್ರವಲ್ಲ. ನಮ್ಮ ದೇಹವು ಜೈವಿಕ ಗಡಿಯಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಹೌದು, ಹಲವರಿಗೆ ಈ ಬಗ್ಗೆ ತಿಳಿದಿಲ್ಲ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೇ ನೀವು ಯಾವುದೇ ರೀತಿಯ ಡಯಟ್, ವ್ಯಾಯಾಮ ಮಾಡಿದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಸಾಮಾನ್ಯವಾಗಿ ರಾತ್ರಿ 11 ಗಂಟೆಯವರೆಗೂ ಎಚ್ಚರವಾಗಿರುವುದು ಅಥವಾ ನಿದ್ರೆಯನ್ನು (Sleep) ಒಂದೇ ಸಮಯಕ್ಕೆ ಮಾಡದಿರುವುದು ನಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಸಮಯ ಮತ್ತು ತೂಕದ ನಡುವಿನ ಸಂಬಂಧದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿದ್ದರೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ತಮ್ಮ ದಿನಚರಿಯನ್ನು ಯಾವ ರೀತಿ ಇಟ್ಟುಕೊಳ್ಳಬೇಕು, ಯಾವ ಸಮಯದಲ್ಲಿ ಮತ್ತು ಎಷ್ಟು ಹೊತ್ತು ನಿದ್ರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ರಾತ್ರಿ 10:30 ರ ನಂತರ, ನಮ್ಮ ದೇಹದ ಜೀರ್ಣಕ್ರಿಯೆ ನಿಧಾನಗತಿಗೆ ಪ್ರವೇಶಿಸುತ್ತದೆ. ಈ ಸಮಯದಲ್ಲಿ ನಾವು ಎಚ್ಚರವಾಗಿದ್ದರೆ, ದೇಹ ಒತ್ತಡಕ್ಕೆ ಒಳಗಾಗುತ್ತದೆ, ಆಗ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ರಕ್ತದಲ್ಲಿ ಇದ್ದಾಗ, ದೇಹವು ಕೊಬ್ಬನ್ನು ಕರಗಿಸುವುದನ್ನು ನಿಲ್ಲಿಸುತ್ತದೆ ಮಾತ್ರವಲ್ಲ ಅದನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ನೀವು ಎಷ್ಟೇ ಆರೋಗ್ಯಕರ ಆಹಾರವನ್ನು ಅನುಸರಿಸಿದರೂ, ಕಾರ್ಟಿಸೋಲ್ ಮಟ್ಟಗಳು ಹೆಚ್ಚಿದ್ದರೆ, ತೂಕ ಇಳಿಸುವುದು ತುಂಬಾ ಕಷ್ಟಕರವಾಗುತ್ತದೆ. ದೇಹದ ಜೀವಕೋಶಗಳ ದುರಸ್ತಿ ಕೆಲಸ ರಾತ್ರಿ 11 ರಿಂದ ಬೆಳಗಿನ ಜಾವ 3 ರ ನಡುವೆ ನಡೆಯುತ್ತದೆ. ಈ ಸಮಯದಲ್ಲಿ ನೀವು ನಿದ್ರೆ ಮಾಡದಿದ್ದರೆ, ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಜೊತೆಗೆ ಇದು ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಅಡ್ಡಿಪಡಿಸುತ್ತದೆ. ಇದಲ್ಲದೆ, ರಾತ್ರಿ ಬೇಗನೆ ಮಲಗದವರು ಹೆಚ್ಚಿನ ಇನ್ಸುಲಿನ್ ಸ್ಪೈಕ್‌ಗಳನ್ನು ಹೊಂದಿರುತ್ತಾರೆ, ಇದು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ.

ಇದನ್ನೂ ಓದಿ: ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ

ನಾವು ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡದಿದ್ದರೆ, ನಾವು ಸೇವಿಸುವ ಎಲ್ಲಾ ಡಿಟಾಕ್ಸ್ ಪಾನೀಯಗಳು ಮತ್ತು ಆಹಾರಗಳು ವ್ಯರ್ಥವಾಗುತ್ತದೆ. ರಾತ್ರಿ 11 ಗಂಟೆಯ ನಂತರ ಎಚ್ಚರವಾಗಿದ್ದರೆ, ದೇಹದ ನೈಸರ್ಗಿಕ ತ್ಯಾಜ್ಯ ನಿರ್ವಿಶೀಕರಣ ಪ್ರಕ್ರಿಯೆಯು ನಿಲ್ಲುತ್ತದೆ. ಇದು ಅಜೀರ್ಣ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಜೀರ್ಣಕ್ರಿಯೆ ದುರ್ಬಲಗೊಂಡರೆ, ಚಯಾಪಚಯ ಕ್ರಿಯೆ ಕಡಿಮೆಯಾಗುತ್ತದೆ ಮತ್ತು ದೇಹವು ಹೆಚ್ಚು ಹೆಚ್ಚು ಕೊಬ್ಬನ್ನು ಸಂಗ್ರಹಿಸುತ್ತದೆ.

ಈ ಸಮಸ್ಯೆ ತಡೆಯಲು ಸಲಹೆಗಳು:

  • ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ 11ರ ಮೊದಲು ನಿದ್ರೆ ಮಾಡಬೇಕು.
  • ಪ್ರತಿದಿನ ನಿಗದಿತ ಸಮಯಕ್ಕಿಂತ 15- 20 ನಿಮಿಷ ಮುಂಚಿತವಾಗಿ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
  • ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಮತ್ತು ಲ್ಯಾಪ್‌ಟಾಪ್ ದೂರ ಇಡುವುದನ್ನು ಮರೆಯಬೇಡಿ.
  • ಮಲಗುವ ಸಮಯಕ್ಕೆ ಕನಿಷ್ಠ ಮೂರು ಗಂಟೆಗಳ ಮೊದಲು ನಿಮ್ಮ ಊಟವನ್ನು ಮುಗಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ – Kannada News | Vin Diesel compares Priyanka Chopra to Nelson Mandela

ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್​ ಮಾತ್ರವಲ್ಲದೆ ಹಾಲಿವುಡ್​​ನಲ್ಲೂ ಸ್ಟಾರ್ ನಟಿ. ಕೆಲ ವರ್ಷಗಳ ಹಿಂದೆ ಬಾಲಿವುಡ್​ನಿಂದ ದೂರಾಗಿ ಹಾಲಿವುಡ್​​ಗೆ ಹಾರಿದ್ದ ಪ್ರಿಯಾಂಕಾರನ್ನು ಹಲವರು ಅಣಕಿಸಿದ್ದರು. ಆರಂಭದಲ್ಲಿ ಪ್ರಿಯಾಂಕಾಗೆ ಹಾಲಿವುಡ್​​ನಲ್ಲಿ ಗಟ್ಟಿ ಪಾತ್ರಗಳು ಸಿಗದಿದ್ದಾಗ ಟೀಕೆ ಮಾಡಿದ್ದರು. ಆದರೆ ಈಗ ಪ್ರಿಯಾಂಕಾ ಚೋಪ್ರಾ, ಹಾಲಿವುಡ್​ನ ಸ್ಟಾರ್ ನಟರು, ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಮಾತ್ರವಲ್ಲದೆ ಹಾಲಿವುಡ್​​ನಲ್ಲಿ ತಮ್ಮದೇ ಆದ ಪ್ರತ್ಯೇಕ ಗುರುತನ್ನು ಸಂಪಾದಿಸಿಕೊಂಡಿದ್ದಾರೆ. ಹಾಲಿವುಡ್​​ನ ಸ್ಟಾರ್ ನಟ ವಿನ್ ಡೀಸೆಲ್ ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಯೊಬ್ಬರಿಗೆ ಹೋಲಿಕೆ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ (The Bluff) ಹೆಸರಿನ ಆಕ್ಷನ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ತಾಯಿಯೊಬ್ಬಾಕೆ ತನ್ನ ಕುಟುಂಬವನ್ನು ವಿಲನ್​​ಗಳಿಂದ ಉಳಿಸಲು ಮಾಡುವ ಹೋರಾಟದ ಕತೆಯನ್ನು ಸಿನಿಮಾ ಒಳಗೊಂಡಿದೆ. ‘ದಿ ಬ್ಲಫ್’ ಸಿನಿಮಾದ ಪ್ರೀಮಿಯರ್ ಶೋ ಇತ್ತೀಚೆಗಷ್ಟೆ ಆಯೋಜನೆಗೊಂಡಿತ್ತು, ಪ್ರೀಮಿಯರ್ ಶೋಗೆ ಹಲವಾರು ಹಾಲಿವುಡ್ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಿದ್ದರು. ಅವರನ್ನು ‘ತ್ರಿಬಲ್ ಎಕ್ಸ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’ ಖ್ಯಾತಿಯ ವಿನ್ ಡೀಸೆಲ್ ಸಹ ಒಬ್ಬರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿನ್ ಡೀಸೆಲ್ ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ಮಾನವತಾವಾದಿ ನೆಲ್ಸನ್ ಮಂಡೆಲಾಗೆ ಹೋಲಿಕೆ ಮಾಡಿದರು. ‘ಪ್ರಿಯಾಂಕಾ ಕೇವಲ ಅದ್ಭುತ ನಟಿ ಮಾತ್ರವಲ್ಲ, ಬದಲಾಗಿ ಜಗತ್ತನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವ ಶಕ್ತಿ ಎಂದು ಬಣ್ಣಿಸಿದರು. ಕೆಲವು ವ್ಯಕ್ತಿಗಳು ಜಗತ್ತನ್ನು ಬದಲಿಸಲು ಹುಟ್ಟಿರುತ್ತಾರೆ. ಅಂತಹವರ ಸಾಲಿನಲ್ಲಿ ನಾನು ನೆಲ್ಸನ್ ಮಂಡೇಲಾ ಅವರನ್ನು ನೋಡುತ್ತೇನೆ. ಇಂದು ಪ್ರಿಯಾಂಕಾ ಚೋಪ್ರಾ ಅವರಲ್ಲಿ ನನಗೆ ಅಂತಹದ್ದೇ ಗುಣಗಳು ಕಾಣಿಸುತ್ತಿವೆ. ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗದೆ, ಸಾಮಾಜಿಕ ಕಳಕಳಿಯ ಮೂಲಕ ಜಗತ್ತನ್ನು ಸುಂದರಗೊಳಿಸಲು ಶ್ರಮಿಸುತ್ತಿದ್ದಾರೆ’ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನೆಲ್ಸನ್ ಮಂಡೇಲ ಅವರಂಥಹಾ ಮಹಾನ್ ನಾಯಕರಿಗೆ ಪ್ರಿಯಾಂಕಾರನ್ನು ಹೋಲಿಸಿರುವುದು ನಿಜಕ್ಕೂ ಬಹುದೊಡ್ಡ ಹೊಗಳಿಕೆಯಾಗಿದೆ.

ಇದನ್ನೂ ಓದಿ:ದೋಸೆ ತಿನ್ನುತ್ತಾ ಪತ್ನಿ ಪ್ರಿಯಾಂಕಾ ಚೋಪ್ರಾ ಸಿನಿಮಾ ಹಾಡು ಕೇಳಿದ ನಿಕ್ ಜೋನಸ್

ಪ್ರಿಯಾಂಕಾ ಅವರ ಮಾನವೀಯ ಕಾರ್ಯಗಳು ಮತ್ತು ಯುನಿಸೆಫ್ (UNICEF) ರಾಯಭಾರಿಯಾಗಿ ಅವರು ಮಾಡುತ್ತಿರುವ ಕೆಲಸಗಳನ್ನು ವಿನ್ ಡೀಸೆಲ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಭಾರತೀಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಲವು ವರ್ಷಗಳಿಂದಲೂ ಯುನೆಸೆಫ್ ಜೊತೆಗೆ ಗುರುತಿಸಿಕೊಂಡಿದ್ದು ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಬ್ಲಫ್’ ಆಕ್ಷನ್ ಮತ್ತು ಸಾಹಸಮಯ ಕಥೆಯನ್ನು ಹೊಂದಿದೆ. ಈ ಚಿತ್ರದ ಮೂಲಕ ಪ್ರಿಯಾಂಕಾ ಮತ್ತೊಮ್ಮೆ ಹಾಲಿವುಡ್‌ನಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಈ ಸಿನಿಮಾವನ್ನು ಫ್ರ್ಯಾಂಕ್ ಇ ಫ್ಲವರ್ಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪ್ರಿಯಾಂಕಾ ಜೊತೆಗೆ ಖ್ಯಾತ ನಟ ಕಾರ್ಲ್ ಅರ್ಬಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಖಾಲಿ ಟ್ರಂಕ್ ಹಿಡಿದು ಬಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಸಂಕಷ್ಟ – Kannada News | Tejasvi Surya Metro Protest: Court Notice for Empty Trunk Rally Against Fare Hike

ಮೆಟ್ರೋ, ಸಂಸದ ತೇಜಸ್ವಿ ಸೂರ್ಯImage Credit source: google

ಬೆಂಗಳೂರು, ಫೆಬ್ರವರಿ 18: ನಮ್ಮ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ವಿಚಾರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಇತ್ತೀಚೆಗೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು. ಕೊನೆಗೆ ಮೆಟ್ರೋ ಟಿಕೆಟ್ ಪ್ರಯಾಣ ದರಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿತ್ತು. ಆದರೆ ರಾಜ್ಯ ಸರ್ಕಾರವೇ ದರ ಏರಿಕೆಗೆ ಒತ್ತಾಯಿಸ್ತಿದೆ ಅಂತಾ ಆರೋಪಿಸಿ ಖಾಲಿ ಟ್ರಂಕ್ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಇದೀಗ ಪೊಲೀಸರಿಂದ ಖಾಸಗಿ ದೂರು ದಾಖಲಾಗಿದೆ. ಈ ಸಂಬಂಧ ತೇಜಸ್ವಿ ಸೂರ್ಯ ಸೇರಿ ಒಂಭತ್ತು ಜನರಿಗೆ 42ನೇ ಎಸಿಜೆಎಂ ಕೋರ್ಟ್​ನಿಂದ ನೋಟಿಸ್ ಜಾರಿ ಮಾಡಲಾಗಿದೆ.

9 ಜನರಿಗೆ ನೋಟಿಸ್ 

ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿರುದ್ಧ ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸಿದ್ದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಠಾಣೆ ಇನ್ಸ್​ಪೆಕ್ಟರ್ ಆರ್.ದೀಪಕ್​ರಿಂದ ಖಾಸಗಿ ದೂರು ನೀಡಲಾಗಿದೆ. ಖಾಸಗಿ ದೂರು ಸಂಬಂಧ ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಸೇರಿ 9 ಜನರಿಗೆ 42ನೇ ಎಸಿಜೆಎಂ ಕೋರ್ಟ್​ನಿಂದ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ

ಮೆಟ್ರೋ ಟಿಕೆಟ್ ಪ್ರಯಾಣ ದರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ರಾಜ್ಯ ಸರ್ಕಾರವೇ ದರ ಏರಿಕೆಗೆ ಒತ್ತಾಯಿಸಿದೆ ಅಂತಾ ಆರೋಪಿಸಿರುವ ಸಂಸದ ತೇಜಸ್ವಿ ಸೂರ್ಯ, ಇತ್ತೀಚೆಗೆ ವಿಭಿನ್ನವಾಗಿ ಪ್ರತಿಭಟನೆಗೆ ಮುಂದಾಗಿದ್ದರು. ಬೆಂಗಳೂರಿನ ಆರ್‌.ವಿ ರೋಡ್ ಮೆಟ್ರೋ ಸ್ಟೇಷನ್ ಬಳಿ ಖಾಲಿ ಟ್ರಂಕ್ ಪ್ರದರ್ಶಿಸಿದ್ದರು. ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರವೇ ದರ ಏರಿಕೆ ಸಮಿತಿಗೆ ಒತ್ತಾಯಿಸಿದೆ ಅಂತಾ ಕಿಡಿಕಾರಿದ್ದರು.

ಇದನ್ನೂ ಓದಿ: ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ, ನಮ್ಮ ಏರಿಯಾದಲ್ಲೇ ಹೆದರಿಸ್ತೀರಾ? ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

ಇನ್ನೂ ಪ್ರತಿಭಟನೆ ಮಾಡದಂತೆ ತೇಜಸ್ವಿ ಸೂರ್ಯಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ಕಿಡಿಕಾರಿದ್ದ ಸಂಸದ, ನಾನು ಪ್ರತಿಭಟನೆ ಮಾಡಿಲ್ಲ. ಖಾಲಿ ಟ್ರಂಕ್ ಹಿಡಿದುಕೊಂಡು ಮೆಟ್ರೋದಲ್ಲಿ ಹೋಗುತ್ತಿದ್ದೆ. ನನಗೆ ನೋಟಿಸ್ ಕೊಡುತ್ತೀರಾ ಅಂತಾ ಗುಡುಗಿದ್ದರು. ಬಳಿಕ ತೇಜಸ್ವಿ ಸೂರ್ಯರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಬ್ಬಂಟಿಯಾದೆ ನಾ: ‘ಲವ್ ಮಾಕ್ಟೇಲ್ 3’ ಸಿನಿಮಾದ ಹೊಸ ಹಾಡು ರಿಲೀಸ್ – Kannada News | Darling Krishna starrer Love Mocktail 3 movie new song Obbantiyaade Naa released

ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರಿಗೆ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ ‘ಲವ್ ಮಾಕ್ಟೇಲ್’. ಆ ಸಿನಿಮಾದ ಸೀಕ್ವೆಲ್ (ಲವ್ ಮಾಕ್ಟೇಲ್ 2) ಕೂಡ ಜನಮೆಚ್ಚುಗೆ ಪಡೆಯಿತು. ಈಗ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ಸಹ ಬಿಡುಗಡೆಗೆ ಸಿದ್ಧವಾಗಿದೆ. ಹಾಡುಗಳ ಮೂಲಕ ಈ ಚಿತ್ರ ನಿರೀಕ್ಷೆ ಮೂಡಿಸಿದೆ. ಪ್ರೇಮಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಮೂಡಿಬಂದಿದ್ದ ಎರಡು ಸಿನಿಮಾಗಳ ರೀತಿಯೇ ಮೂರನೇ ಪಾರ್ಟ್​ ಕೂಡ ಸಿದ್ಧವಾಗಿದೆ ಎಂಬುದಕ್ಕೆ ಹಾಡುಗಳು ಸಾಕ್ಷಿಯಾಗಿವೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ‘ಒಬ್ಬಂಟಿಯಾದೆ ನಾ’ (Obbantiyaade Naa) ಹಾಡು ಇತ್ತೀಚೆಗೆ ರಿಲೀಸ್ ಆಯಿತು.

ಈ ಬಾರಿ ಕೂಡ ಡಾರ್ಲಿಂಗ್ ಕೃಷ್ಣ ಅವರೇ ‘ಲವ್ ಮಾಕ್ಟೇಲ್ 3’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ನಾಯಕನಾಗಿ ನಟಿಸಿದ್ದಾರೆ ಕೂಡ. ಇತ್ತೀಚೆಗಷ್ಟೇ ತಂದೆ-ಮಗಳ ಬಾಂಧವ್ಯ ತಿಳಿಸುವ ಹಾಡೊಂದು ಬಿಡುಗಡೆ ಆಗಿತ್ತು. ಅದರ ಬೆನ್ನಲ್ಲೇ ‘ಒಬ್ಬಂಟಿಯಾದೆ ನಾ’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಜನರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಪ್ರೇಕ್ಷಕರು ‘ಲವ್ ಮಾಕ್ಟೇಲ್ 3’ ಸಿನಿಮಾದ ಟ್ರೇಲರ್ ನೋಡಲು ಕಾದಿದ್ದಾರೆ. ಅದಕ್ಕೂ ಮುನ್ನ, ಪ್ರೇಮಿಗಳ ದಿನದ ಸಲುವಾಗಿ ‘ಒಬ್ಬಂಟಿಯಾದೆ ನಾ’ ಹಾಡನ್ನು ರಿಲೀಸ್ ಮಾಡಿತು ಚಿತ್ರತಂಡ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಒಬ್ಬಂಟಿಯಾದೆ ನಾ’ ಹಾಡಿಗೆ ಅವರೇ ಧ್ವನಿ ನೀಡಿದ್ದಾರೆ. ‘ಮಾತು ಮೌನವಾಗಿದೆ, ಶೋಕ ಭಾವ ಮೂಡಿದೆ..’ ಎಂದು ಆರಂಭ ಆಗುವ ಈ ಗೀತೆಯನ್ನು ರಾಘವೇಂದ್ರ ಕಾಮತ್ ಅವರು ಬರೆದಿದ್ದಾರೆ.

‘ಲವ್ ಮಾಕ್ಟೇಲ್ 3’ ಸಿನಿಮಾ ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ‘ಕ್ರಿಸ್‌ಮಿ’ ಬ್ಯಾನರ್ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗಾರ್, ಮಿಲನಾ ನಾಗರಾಜ್, ಸಂವೃತಾ, ರೇಚಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು

ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಆ ಸಿನಿಮಾಗಳ ಗೆಲುವಿನಲ್ಲಿ ಹಾಡುಗಳ ಕೊಡುಗೆ ದೊಡ್ಡದಿತ್ತು. ಈಗ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಕೂಡ ಹಾಡುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೈಲಿನಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಬೇಕು: ರಾಜ್​ಪಾಲ್ ಯಾದವ್ ಬೇಡಿಕೆ – Kannada News | Actor Rajpal Yadav wants designated smoking area inside jail

ಬಾಲಿವುಡ್ ನಟ ರಾಜ್​ಪಾಲ್ ಯಾದವ್ (Rajpal Yadav) ಅವರು ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದಾರೆ. 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತು. ಈಗ ಅವರು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಜೈಲಿನ ಅನುಭವದ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿ ಧೂಮಪಾನ ಮಾಡಲು ಪ್ರತ್ಯೇಕ ಜಾಗದ (Smoking Area) ವ್ಯವಸ್ಥೆ ಮಾಡಬೇಕು ಎಂದು ರಾಜ್​ಪಾಲ್ ಯಾದವ್ ಅವರು ಬೇಡಿಕೆ ಇಟ್ಟಿದ್ದಾರೆ.

ಹಲವು ವರ್ಷಗಳ ಹಿಂದೆ ರಾಜ್​ಪಾಲ್ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ಸಾಲ ಮಾಡಿದ್ದರು. ಆದರೆ ಅವರು ಮಾಡಿದ ಸಿನಿಮಾ ಗೆಲ್ಲಲಿಲ್ಲ. ಅದರಿಂದ ಅವರಿಗೆ ಸಾಲ ಮರುಪಾವತಿ ಮಾಡುವುದು ಕಷ್ಟ ಆಯಿತು. ದಿನದಿಂದ ದಿನಕ್ಕೆ ಬಡ್ಡಿ ಹೆಚ್ಚಿತು. ಒಟ್ಟು 9 ಕೋಟಿ ರೂಪಾಯಿ ಸಾಲ ಅವರ ಮೇಲಿದೆ. ಪದೇ ಪದೇ ಚೆಕ್ ಬೌನ್ಸ್ ಆಗಿದ್ದರಿಂದ ಅವರನ್ನು ಜೈಲಿಗೆ ಕಳಿಸಲಾಯಿತು.

‘ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಇರುವಂತೆ ಜೈಲಿನ ಒಳಗೆ ಧೂಮಪಾನ ಮಾಡಲು ಪ್ರತ್ಯೇಕವಾದ ಜಾಗ ಇರಬೇಕು. ಜೈಲುಗಳನ್ನು ಬದಲಾವಣೆಯ ಕೇಂದ್ರದ ರೀತಿ ಪರಿಗಣಿಸಬೇಕು. ತಮ್ಮನ್ನು ಬದಲಾಯಿಸಿಕೊಳ್ಳಲು ಖೈದಿಗಳಿಗೆ ಅವಕಾಶ ನೀಡಬೇಕು’ ಎಂದು ರಾಜ್​ಪಾಲ್ ಯಾದವ್ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗದೆ.

ಸಂಬಂಧಿಕರ ಮದುವೆಯ ಕಾರಣ ನೀಡಿ ರಾಜ್​ಪಾಲ್ ಯಾದವ್ ಅವರು ಸದ್ಯಕ್ಕೆ ಜಾಮೀನು ಪಡೆದಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಪಾವತಿ ಮಾಡಿದ ನಂತರ ಅವರಿಗೆ ಜಾಮೀನು ಸಿಕ್ಕಿತು. ಮಾರ್ಚ್ 18ರವರೆಗೂ ಜಾಮೀನಿನ ಮೇಲೆ ಅವರು ಹೊರಗೆ ಇರಲಿದ್ದಾರೆ. ಬಳಿಕ ಮತ್ತೆ ವಿಚಾರಣೆ ನಡೆಯಲಿದೆ. ಅಷ್ಟರಲ್ಲಿ ಅವರು ಇನ್ನುಳಿದ ಹಣ ಹೊಂದಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?

ರಾಜ್​ಪಾಲ್ ಯಾದವ್ ಅವರು ಮತ್ತೆ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಇನ್ನುಳಿದ ಸಾಲವನ್ನು ಮರುಪಾವತಿ ಮಾಡಲು ಹಣ ಹೊಂದಿಸಿಕೊಳ್ಳಬೇಕಿದೆ. ಈಗಾಗಲೇ ಸೋನು ಸೂದ್, ಮಿಕಾ ಸಿಂಗ್ ಮುಂತಾದವರು ರಾಜ್​ಪಾಲ್ ಯಾದವ್ ಅವರ ನೆರವಿಗೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ: ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರು – Kannada News | Honor killing attempts In Koppal: Brother Try to Kill Sister Over Love marriage

ಕೊಪ್ಪಳ, (ಫೆಬ್ರವರಿ 18): ಕೊಪ್ಪಳ (Koppal) ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಯತ್ನ (honor killing) ನಡೆದಿರುವ ಘಟನೆ ನಡೆದಿದೆ. ಸಹೋದರಿ ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಹೋದರ ಆಕೆಯನ್ನು ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ನಾಲ್ಕು ತಿಂಗಳು ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 23 ವರ್ಷದ ಮೀನಾಕ್ಷಿ ಕಳೆದ ಎರಡು ವರ್ಷಗಳ ಹಿಂದೆ ST ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದು, ಸದ್ಯ ಮೀನಾಕ್ಷಿ ನಾಲ್ಕು ತಿಂಗಳು ಗರ್ಭಿಣಿ. ಇದನ್ನು ಲೆಕ್ಕಿಸದ ಸಹೋದರ ಮಂಜುನಾಥ್ ಎನ್ನುವಾತ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ,

ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಚಿತ್ತಾಪೂರದ ಕುರುಬ ಸಮುದಾಯದ ಮೀನಾಕ್ಷಿ ಕುಟುಂಬದ ವಿರೋಧದ ನಡುವೆಯೂ ಎರಡು ವರ್ಷಗಳ ಹಿಂದೆ ಹಂದ್ರಾಳ ಗ್ರಾಮದ ಉದಯ ಎನ್ನುವ ST ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಮೀನಾಕ್ಷಿ ಸಹೋದರ ಮಂಜುನಾಥ್ ಕೆರಳಿದ್ದು, ಸಿಟ್ಟಿನಲ್ಲೇ ಇದ್ದ. ಆದ್ರೆ, ಇಂದು (ಫೆಬ್ರವರಿ 18) ಮೀನಾಕ್ಷಿ ಪತಿ ಉದಯ ಸಹೋದರನ ಮದುವೆ ಇದ್ದರಿಂದ ಹಂದ್ರಾಳ ಗ್ರಾಮಕ್ಕೆ ಬಂದಿದ್ದರು.

ಇದನ್ನೂ ಓದಿ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ

ಮತ್ತೊಂದೆಡೆ ಮೀನಾಕ್ಷಿ ಸಹೋದರ ಮಂಜುನಾಥ್ ಸಿಟ್ಟಿನಲ್ಲಿದ್ದ. ಯಾವಾಗ ಸಹೋದರಿ ಮೀನಾಕ್ಷಿ ಹಂದ್ರಾಳ ಬಂದಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಂಜುನಾಥ್, ಮದುವೆ ಸಮಯದಲ್ಲಿ ಕಾದು ಕೊಡಲಿಯಿಂದ ಸಹೋದರಿಗೆ ಮೀನಾಕ್ಷಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಡಲಿ ಏಟಿನಿಂದ ಗಾಯಗೊಂಡಿರುವ ಮೀನಾಕ್ಷಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಳವಂಡಿ ಪೊಲೀಸರು ದೌಡಾಯಿಸಿ, ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಸಹೋದರ ಮಂಜುನಾಥನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕುಟುಂಬದ ವಿರೋಧದ ನಡುವೆ ಅನ್ಯ ಜಾತಿ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡು ಸಹೋದರಿಯನ್ನು ಹತ್ಯೆಗೆ ಯತ್ನಿಸಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version