ಪ್ರಧಾನಿ ಮೋದಿ ಪೋಸ್ಟ್​ಗೆ ನಿರ್ಬಂಧ; ಅಲ್ಗಾರಿದಮ್‌ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್ – Kannada News | Meta summons Indian Government to question Meta team over algorithmic bias after PM Modi Facebook Post row

ನವದೆಹಲಿ, ಜುಲೈ 31: ಸಾಮಾಜಿಕ ಜಾಲತಾಣ ಸಂಸ್ಥೆಯಾದ ಮೆಟಾ (Meta) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಫೇಸ್‌ಬುಕ್ ಪೋಸ್ಟ್ ಅನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಮನ್ಸ್ ನೀಡಿದ್ದು, ಮೆಟಾದ ಜಾಗತಿಕ ತಂಡವನ್ನು ಅಲ್ಗಾರಿದಮ್ ಪಕ್ಷಪಾತ ಹಾಗೂ ಸಾರ್ವಜನಿಕ ಸುವ್ಯವಸ್ಥೆಯಲ್ಲಿ ಅವರ ಪಾತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಪೋಸ್ಟ್ ಅನ್ನು ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೆಟಾಗೆ ಸಂಸದೀಯ ಸಮಿತಿಯೂ ಸಮನ್ಸ್ ನೀಡಿದ್ದು, ಹೈದರಾಬಾದ್‌ನಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥರ ವಿರುದ್ಧ ಸೈಬರ್ ದೂರು ಕೂಡ ದಾಖಲಾಗಿದೆ. ಮೆಟಾದ ಜಾಗತಿಕ ತಂಡವು ಮುಂದಿನ ವಾರದ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಮೆಟಾ ಅಲ್ಗಾರಿದಮ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅಲ್ಗಾರಿದಮ್‌ನಲ್ಲಿ ಪಕ್ಷಪಾತ ಇದೆಯೇ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಕಂಪನಿಯ ಪಾತ್ರವೇನು ಎಂಬುದರ ಕುರಿತು ಮೆಟಾದ ಜಾಗತಿಕ ತಂಡದಿಂದ ಖಚಿತವಾದ ಸ್ಪಷ್ಟೀಕರಣವನ್ನು ಸರ್ಕಾರ ಕೋರಲಿದೆ. ಜೊತೆಗೆ ಈ ತಂಡವು ಸಂಸದೀಯ ಸಮಿತಿಯ ಮುಂದೆಯೂ ಹಾಜರಾಗಲಿದೆ.

ಪ್ರಧಾನಿ ಮೋದಿ ಪೋಸ್ಟ್ ನಿರ್ಬಂಧದ ಹಿನ್ನೆಲೆ:

ಭಾರತದ ಯುವಜನತೆಯನ್ನು ಉದ್ದೇಶಿಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಸ್ವಲ್ಪ ಸಮಯದವರೆಗೆ ನಿರ್ಬಂಧಿಸಲಾಗಿತ್ತು. ಈ ಘಟನೆಯ ನಂತರ ಕೇಂದ್ರ ಸರ್ಕಾರವು ಮೆಟಾದ ಹಿರಿಯ ಅಧಿಕಾರಿಗೆ ಸಮನ್ಸ್ ನೀಡಿದ್ದರಿಂದ ಈ ಬೆಳವಣಿಗೆಯೂ ತೀವ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ

ಅಮೆರಿಕ ಮೂಲದ ಈ ಸೋಶಿಯಲ್ ಮೀಡಿಯಾ ಸಂಸ್ಥೆ ಈ ಘಟನೆಯು ತಾಂತ್ರಿಕ ದೋಷದಿಂದ (Technical glitch) ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿತ್ತು. ಆದರೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾದ ಈ ಸ್ಪಷ್ಟನೆಯನ್ನು ಅಪೂರ್ಣ ಮತ್ತು ಅಸಮರ್ಪಕ ಎಂದು ತಳ್ಳಿಹಾಕಿತ್ತು.

ಈ ವಿವಾದದ ಬೆನ್ನಲ್ಲೇ ಮೆಟಾ ಸಂಸ್ಥೆಯು ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪ್ರಧಾನಮಂತ್ರಿಯವರು ಹಾಗೂ ದೇಶದ ಕೆಲವು ಪ್ರಮುಖ ವ್ಯಕ್ತಿಗಳ ಖಾತೆಗಳಿಂದ ಪೋಸ್ಟ್ ಆಗುವ ವಿಷಯಗಳ ಮೇಲೆ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 5,000 ಕೋಟಿ ವೆಚ್ಚದ ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ

ಪ್ರಧಾನಿ ಮೋದಿ ಹಾಗೂ ಇತರ ಪ್ರಮುಖ ಖಾತೆಗಳ ಪೋಸ್ಟ್‌ಗಳ ಸುರಕ್ಷತೆಗಾಗಿ ಜಾರಿಗೆ ತರಲಾದ ಬಿಗಿಯಾದ ಹಾಗೂ ಹೆಚ್ಚುವರಿ ಸುರಕ್ಷತಾ ಕ್ರಮಗಳ ವಿವರಗಳನ್ನು ಮೆಟಾ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.

ಹೈದರಾಬಾದ್‌ನಲ್ಲಿ ಕೇಸ್ ದಾಖಲು:

ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಎಐ ತಂತ್ರಜ್ಞಾನದಿಂದ ರೂಪಿಸಲಾದ ಹಾಗೂ ತಿರುಚಲಾದ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಕ್ಕಾಗಿ ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನ ಕೆಲವು ಖಾತೆಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರವು ಈ ಕೆಳಗಿನ ಪ್ರಮುಖ ಅಂಶಗಳ ಕುರಿತು ಮೆಟಾದಿಂದ ಉತ್ತರಗಳನ್ನು ಕೋರುವ ಸಾಧ್ಯತೆಯಿದೆ.

  • ರಾಜಕೀಯ ಪೋಸ್ಟ್‌ಗಳನ್ನು ಹೇಗೆ ಪರಿಶೀಲಿಸಲಾಗುತ್ತದೆ?
  • ಸ್ವಯಂಚಾಲಿತ ವ್ಯವಸ್ಥೆಗಳು (Automated systems) ಯಾವುದೇ ರೀತಿಯ ತಾರತಮ್ಯ ತೋರಿಸುತ್ತವೆಯೇ?
  • ತಪ್ಪಾಗಿ ವಿಧಿಸಲಾದ ನಿರ್ಬಂಧಗಳನ್ನು ಹೇಗೆ ಹಿಂಪಡೆಯಲಾಗುತ್ತದೆ?
  • ಸಾರ್ವಜನಿಕ ಪ್ರತಿಭಟನೆಗಳು ಮತ್ತು ಗಲಭೆಗಳ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳು ಹೇಗೆ ವ್ಯವಹರಿಸುತ್ತವೆ?
  • ನಿಯಮಗಳನ್ನು ಉಲ್ಲಂಘಿಸಿದಾಗ ಹೊಣೆಗಾರಿಕೆಯನ್ನು ಹೇಗೆ ನಿಗದಿಪಡಿಸಲಾಗುತ್ತದೆ?

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ಲಕ್ಷ ಸಾಲಬಾಧೆಯಿಂದ ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ – Kannada News | HD Kumaraswamy Visits Mandya Family After Farmer Couple Dies Over Rs 12 Lakh Debt

ಮಂಡ್ಯ, ಜುಲೈ 31: ತಾಲೂಕಿನ ಬಿ.ಹಟ್ನ ಗ್ರಾಮದಲ್ಲಿ ಸಾಲಬಾಧೆಯಿಂದ ಬೇಸತ್ತ ರೈತ ದಂಪತಿ ಮೀಸೆ ಪುಟ್ಟಸ್ವಾಮಿ (58) ಮತ್ತು ನಾಗಮ್ಮ (55) ಪ್ರಾಣ ಕಳೆದುಕೊಂಡಿರುವ ಘಟನೆ ನಡೆದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೃತ ದಂಪತಿಯ ನಿವಾಸಕ್ಕೆ ಭೇಟಿ ನೀಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ರೈತ ದಂಪತಿ 11 ರಿಂದ 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 90,000 ರೂ. ಸಾಲವಿದ್ದು, ಇತರೆ ಬ್ಯಾಂಕ್‌ಗಳಲ್ಲಿ, ಮುಖ್ಯವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲೂ ಸಾಲವಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಕೃಷಿ ಉದ್ದೇಶಗಳಿಗಾಗಿ ಈ ಸಾಲವನ್ನು ಪಡೆಯಲಾಗಿತ್ತು ಎನ್ನಲಾಗಿದೆ. ಸಾಲದ ನೋಟಿಸ್‌ಗಳಿಂದ ಮನನೊಂದು ದಂಪತಿ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ್ಚರಿಕೆ – Kannada News | Police Recruitment Exam: KEA Warns of Legal Action Over False Social Media Posts

ಬೆಂಗಳೂರು, ಜುಲೈ 31: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಅಭ್ಯರ್ಥಿಗಳು ಸಣ್ಣಪುಟ್ಟ ಎಡವಟ್ಟುಗಳನ್ನು ಮಾಡಿಕೊಳ್ಳದಂತೆ’ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ. ಟಿವಿ9 ಜೊತೆಗೆ ಮಾತನಾಡಿದ ಅವರು, ‘ಈ ಬಾರಿ ಪರೀಕ್ಷೆ ಮುಗಿದ ತಕ್ಷಣವೇ ಕಲಬುರಗಿ, ರಾಯಚೂರು, ಧಾರವಾಡ, ದಾವಣಗೆರೆ ಹಾಗೂ ಮೈಸೂರು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಓಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿ, ಮಧ್ಯರಾತ್ರಿಯೊಳಗಾಗಿ ವೆಬ್‌ಸೈಟ್‌ನಲ್ಲಿ ಲೈವ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ನಲ್ಲಿ ತಂದೆಯ ಹಾಗೂ ತಮ್ಮ ಆಧಾರ್ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿ, ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಇಎ ಮೇಲೆ ಸುಳ್ಳು ಆರೋಪ ಮಾಡಬಾರದು, ಅಂತಹವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು’ ಎಂದರು. ‘ಅಭ್ಯರ್ಥಿಗಳು ಪರೀಕ್ಷೆಗೆ ಮುನ್ನ ಹಾಲ್ ಟಿಕೆಟ್‌ನಲ್ಲಿರುವ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ, ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ’ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನಟಿ ರಶ್ಮಿಕಾ ಮಂದಣ್ಣಗೆ ಗಂಭೀರ ಗಾಯ: ಮುಂದಿನ 6 ವಾರಗಳ ಕಾಲ ವಿಶ್ರಾಂತಿ ಅಗತ್ಯ – Kannada News | Rangabali actress Rashmika Mandanna suffers severe hip Injury Doctors advise 6 Weeks Bed Rest

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಶೂಟಿಂಗ್ ವೇಳೆ ತೀವ್ರ ಸ್ವರೂಪದ ಗಾಯಕ್ಕೆ ಒಳಗಾಗಿದ್ದಾರೆ. ಆ್ಯಕ್ಷನ್ ಹಾಗೂ ಡ್ಯಾನ್ಸ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ಅವರ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ವೈದ್ಯರು ಬರೋಬ್ಬರಿ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಗಾಯದ (Injury) ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. ರಶ್ಮಿಕಾ ಮಂದಣ್ಣ ಅವರ ಹೆಲ್ತ್ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಕ್ರೀಡಾಪಟುಗಳಿಗೆ ಆಗುವಂತಹ ಗಂಭೀರ ಗಾಯ:

ರಶ್ಮಿಕಾ ಮಂದಣ್ಣ ಪ್ರಸ್ತುತ ‘ರಣಬಾಲಿ’ ಹಾಗೂ ‘ಮೈಸಾ’ ಸಿನಿಮಾಗಳ ಶೂಟಿಂಗ್‌ನಲ್ಲಿ ಸಕ್ರಿಯರಾಗಿದ್ದರು. ಈ ಚಿತ್ರಗಳ ಕಠಿಣ ಆ್ಯಕ್ಷನ್ ಸನ್ನಿವೇಶಗಳು ಮತ್ತು ಡ್ಯಾನ್ಸ್ ಸೀನ್‌ಗಳಿಗಾಗಿ ಸತತವಾಗಿ ಶ್ರಮಿಸುತ್ತಿದ್ದ ವೇಳೆ ಅವರಿಗೆ ಈ ಗಾಯ ಆಗಿದೆ. ಇದರಿಂದಾಗಿ ಅವರು ಚಿತ್ರೀಕರಣಕ್ಕೆ ಹಾಗೂ ಇತರೆ ಕೆಲಸಗಳಿಗೆ ಬ್ರೇಕ್ ನೀಡಬೇಕಿದೆ. ಗುಣಮುಖರಾದ ಬಳಿಕವೇ ಶೂಟಿಂಗ್ ಮುಂದುವರಿಸಬೇಕಿದೆ.

ರಶ್ಮಿಕಾಗೆ ಆರು ವಾರ ಬೆಡ್ ರೆಸ್ಟ್:

ವೈದ್ಯರ ಪ್ರಕಾರ, ರಶ್ಮಿಕಾ ಅವರ ಸೊಂಟದ ಭಾಗದಲ್ಲಿ ಟೆಂಡನ್ ಡಿಟ್ಯಾಚ್ ಆಗಿದೆ. ಸಾಮಾನ್ಯವಾಗಿ ಭಾರಿ ಪ್ರಮಾಣದ ಕಠಿಣ ಶಾರೀರಿಕ ಶ್ರಮ ವಹಿಸುವ ವೃತ್ತಿಪರ ಕ್ರೀಡಾಪಟುಗಳಲ್ಲಿ ಇಂತಹ ಗಾಯಗಳು ಕಂಡುಬರುತ್ತವೆ. ಗಾಯದ ತೀವ್ರತೆಯನ್ನು ಪರಿಶೀಲಿಸಿದ ವೈದ್ಯಕೀಯ ತಂಡ, ಅವರಿಗೆ ಕನಿಷ್ಠ 6 ವಾರಗಳ ಕಾಲ ಯಾವುದೇ ಕೆಲಸ ಮಾಡದೇ ಸಂಪೂರ್ಣ ಬೆಡ್ ರೆಸ್ಟ್ ಪಡೆಯಲು ಸಲಹೆ ನೀಡಿದೆ.

ಸ್ಥಗಿತಗೊಳ್ಳಲಿವೆ ಶೂಟಿಂಗ್ ಶೆಡ್ಯೂಲ್‌ಗಳು:

ರಶ್ಮಿಕಾ ಅವರ ಕೈಯಲ್ಲಿ ಪ್ರಸ್ತುತ ಹಲವು ದೊಡ್ಡ ಬಜೆಟ್ ಸಿನಿಮಾಗಳಿವೆ. ಆದರೆ ಈಗ ದಿಢೀರ್ ಗಾಯಗೊಂಡಿರುವ ಕಾರಣ ಅವರು ಕೆಲ ಕಾಲ ಶೂಟಿಂಗ್‌ನಿಂದ ದೂರ ಉಳಿಯಬೇಕಾಗಿದೆ. ಇದರಿಂದಾಗಿ ಅವರು ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಒಟ್ಟಾರೆ ರಶ್ಮಿಕಾ ಅವರಿಗೆ ಗಾಯ ಆಗಿದೆ ಎಂಬ ಸುದ್ದಿ ತಿಳಿದು ಅಭಿಮಾನಿಗಳಿಗೆ ಆತಂಕ ಆಗಿದೆ.

ಇದನ್ನೂ ಓದಿ: ‘ಮೈಸಾ’ ಚಿತ್ರಕ್ಕಾಗಿ ನೀರಿನಾಳದೊಳಗೆ ಇಳಿದು ಫೈಟ್ ಮಾಡಿದ ರಶ್ಮಿಕಾ ಮಂದಣ್ಣ

ಮದುವೆ ಬಳಿಕವೂ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ ಗಾಯ ಆಗಿರುವುದರಿಂದ ಬ್ರೇಕ್ ತೆಗೆದುಕೊಳ್ಳುವುದು ಅನಿವಾರ್ಯ ಆಗಿದೆ. ಆದರೆ ಸೂಕ್ತ ಚಿಕಿತ್ಸೆ ಮತ್ತು ವಿಶ್ರಾಂತಿಯ ನಂತರ ಅವರು ಬೇಗನೆ ಗುಣಮುಖರಾಗಿ ಮತ್ತೆ ಕ್ಯಾಮೆರಾ ಎದುರಿಸಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಿಗೆ ಇದೆ. ಅವರ ಆರೋಗ್ಯದ ಬಗ್ಗೆ ಇನ್ನಷ್ಟೇ ಅಪ್​ಡೇಟ್ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆಟ್​​ಫ್ಲಿಕ್ಸ್​ ವಿರುದ್ಧ ದಾವೆ, 1000 ಕೋಟಿ ಪರಿಹಾರಕ್ಕೆ ನಿರ್ಮಾಪಕ ಬೇಡಿಕೆ – Kannada News | Producer sues Netflix for $105 million over missing his movie

ನೆಟ್​​ಫ್ಲಿಕ್ಸ್ (Netflix)​, ವಿಶ್ವದ ದೊಡ್ಡ ಒಟಿಟಿಗಳಲ್ಲಿ ಒಂದು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳನ್ನೇ ತಾಳಕ್ಕೆ ತಕ್ಕಂತೆ ಕುಣಿಸುವ ಶಕ್ತಿಯನ್ನು ಹೊಂದಿದೆ ಈ ಒಟಿಟಿ ದೈತ್ಯ. ಆದರೆ ನಿರ್ಮಾಪಕರೊಬ್ಬರು ಇದೀಗ ನೆಟ್​​ಫ್ಲಿಕ್ಸ್​​ ಮೇಲೆ ದಾವೆ ಹೂಡಿದ್ದಾರೆ. ಮಾತ್ರವಲ್ಲದೆ, ನೆಟ್​ಫ್ಲಿಕ್ಸ್ ತಮಗೆ ಬರೋಬ್ಬರಿ 1000 ಕೋಟಿ ರೂಪಾಯಿ ಪರಿಹಾರ ಮೊತ್ತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಏನಿದು ಪ್ರಕರಣ? ನಿರ್ಮಾಪಕ ದೂರು ದಾಖಲಿಸಿರುವುದು ಏಕೆ? ಮಾಹಿತಿ ಇಲ್ಲಿದೆ…

ನೆಟ್‌ಫ್ಲಿಕ್ಸ್ ಸ್ಟುಡಿಯೋಸ್‌ನಿಂದ ತಮ್ಮ ಬಿಡುಗಡೆಯಾಗದ ಚಲನಚಿತ್ರದ ಪ್ರತಿಯೊಂದು ಹಾರ್ಡ್ ಡ್ರೈವ್ ಕಳುವಾಗಿದೆ ಎಂದು ಆರೋಪಿಸಿ ಚಲನಚಿತ್ರ ನಿರ್ಮಾಪಕರೊಬ್ಬರು ನೆಟ್‌ಫ್ಲಿಕ್ಸ್ ವಿರುದ್ಧ 105 ಮಿಲಿಯನ್ ಡಾಲರ್ (1003 ಕೋಟಿ ರೂಪಾಯಿ) ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಆರೋಪ ಗಂಭೀರವಾಗಿದ್ದು, ದೂರು ದಾಖಲಿಸಿರುವ ನಿರ್ಮಾಪಕರು ಸಹ ಹಿರಿಯ, ಅನುಭವಿ ನಿರ್ಮಾಪಕರೇ ಆಗಿದ್ದಾರೆ.

ನಿರ್ಮಾಪಕ ಸೈಮನ್ ಅಫ್ರಮ್ ಅವರು ಹಾಲಿವುಡ್​​ ಸ್ಟಾರ್ ನಟ ನಿಕೊಲಸ್ ಕೇಜ್ ಅವರನ್ನು ಹಾಕಿಕೊಂಡು ‘ಪೋರ್ಟಿಟ್ಯೂಡ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಎರಡನೇ ವಿಶ್ವಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಫೋರ್ಟಿಟ್ಯೂಡ್’ ಚಿತ್ರದ ಎನ್‌ಕ್ರಿಪ್ಟ್ ಮಾಡದ ಮಾಸ್ಟರ್ ಪ್ರತಿಯನ್ನು ನೆಟ್​​ಫ್ಲಿಕ್ಸ್​ ಕೋರಿಕೆ ಮೇರೆಗೆ ಜೂನ್‌ನಲ್ಲಿ ಸ್ಟುಡಿಯೋಕ್ಕೆ ತಲುಪಿಸಲಾಗಿತ್ತು. ಈಗ ಆ ಪ್ರತಿ ಕಾಣೆ ಆಗಿದೆ. ನಿರ್ಮಾಪಕ ಸೈಮನ್ ಅಫ್ರಮ್ ಈ ಚಿತ್ರದ ನಿರ್ಮಾಣಕ್ಕಾಗಿ 7 ವರ್ಷ ಸಮಯ ವ್ಯವಯಿಸಿದ್ದು ಸುಮಾರು 45 ಮಿಲಿಯನ್ ಡಾಲರ್‌ಗಿಂತ (ಸುಮಾರು 500 ಕೋಟಿ) ಅಧಿಕ ಹಣವನ್ನು ಹೂಡಿಕೆ ಮಾಡಿದ್ದರು ಮತ್ತು ಅದನ್ನು ನೆಟ್‌ಫ್ಲಿಕ್ಸ್ ಅಥವಾ ಇನ್ಯಾವುದೇ ವಿತರಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು.

ಇದನ್ನೂ ಓದಿ:‘ಧುರಂಧರ್’ ವಿಷಯದಲ್ಲಿ ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತ ನೆಟ್​​ಫ್ಲಿಕ್ಸ್?

ಕಳೆದ ವಾರ ನೆಟ್​​ಫ್ಲಿಕ್ಸ್​​ನವರು ನಿರ್ಮಾಪಕರಿಗೆ ಮೇಲ್ ಮಾಡಿ ನಮ್ಮ ಮೇಜುಗಳಿಂದ ಯಾರೋ ದೊಡ್ಡ ಪ್ರಮಾಣದ ಡ್ರೈವ್‌ಗಳನ್ನು ಕಳವು ಮಾಡಿದ್ದಾರೆ. ಇದರಲ್ಲಿ ‘ಫೋರ್ಟಿಟ್ಯೂಡ್’ ಚಿತ್ರವಿರುವ ಡ್ರೈವ್ ಕೂಡ ಸೇರಿದೆ ಎಂದು ಮಾಹಿತಿ ನೀಡಿದ್ದರು. ಡ್ರೈವ್ ಕಳುವಾದ ಕಾರಣ ಚಲನಚಿತ್ರವು ಪೈರಸಿ ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ವಿತರಕರು ಅದನ್ನು ಖರೀದಿಸಲು ಮುಂದಾಗುವುದಿಲ್ಲ ಎಂಬ ಕಾರಣಕ್ಕಾಗಿ ಚಿತ್ರದ ಮೌಲ್ಯವು ನಾಶವಾಗಿದೆ ಎಂದು ನಿರ್ಮಾಪಕರು ವಾದಿಸಿದ್ದಾರೆ.

‘ಯಾವುದೇ ಪರಿಣಿತ ಖರೀದಿದಾರನು ಹತ್ತು ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿ ಚಿತ್ರವನ್ನು ಪಡೆದುಕೊಳ್ಳಲು ಅಥವಾ ಅದರ ಪ್ರಚಾರಕ್ಕಾಗಿ ಮತ್ತೆ ಹತ್ತು ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಲು ಮುಂದಾಗುವುದಿಲ್ಲ, ಏಕೆಂದರೆ ಆ ಚಿತ್ರವು ಯಾವುದೇ ಕ್ಷಣದಲ್ಲಿ ಆನ್‌ಲೈನ್‌ನಲ್ಲಿ ಉಚಿತವಾಗಿ ಕಾಣಿಸಿಕೊಳ್ಳುವ ನಿರಂತರ ಅಪಾಯವಿರುತ್ತದೆ’ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ. ಈ ಮೊಕದ್ದಮೆಯ ಮೂಲಕ ಕನಿಷ್ಠ 105 ಮಿಲಿಯನ್ ಡಾಲರ್ (1003 ಕೋಟಿ ರೂಪಾಯಿ) ಹಾನಿ ಪರಿಹಾರವನ್ನು ಕೋರಲಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನೆಟ್‌ಫ್ಲಿಕ್ಸ್, ‘ನಮಗೆ ‘ಫೋರ್ಟಿಟ್ಯೂಡ್’ ಚಿತ್ರದ ಹಕ್ಕುಗಳಿಲ್ಲದಿದ್ದರೂ, ನಾವು ಕಂಟೆಂಟ್ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಚಲನಚಿತ್ರ ನಿರ್ಮಾಪಕ ಹಾಗೂ ಅವರ ತಂಡಕ್ಕೆ ಬೆಂಬಲ ನೀಡಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದೇವೆ, ಕಳುವಿನ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದೇವೆ’ ಎಂದು ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:35 pm, Fri, 31 July 26

Source link

Jolly Review: ಟ್ವಿಸ್ಟ್ ಜೊತೆಗೊಂದು ಪ್ರೇಮಕಥೆ ತೋರಿಸಿದ ಹೊಸ ಪ್ರತಿಭೆಗಳ ‘ಜಾಲಿ’ ಸಿನಿಮಾ – Kannada News | Jolly Kannada Movie review ft Tarush Krishna and Padmashree C Jain

  • Time – 118 Minutes
  • Released – July 31, 2026
  • Language – Kannada
  • Genre – Action, Drama, Romantic

Cast – ತಾರುಷ್, ತಾರುಷ್, ಪದ್ಮಶ್ರೀ ಸಿ. ಜೈನ್, ಶೋಭರಾಜ್, ಕೃಷ್ಣಪ್ಪ ವೇಣುಗೋಪಾಲ್, ರೇಖಾ ದಾಸ್, ಅಭಿ ಸಾಮ್ರಾಟ್ ಮುಂತಾದವರು.

Director – ತಾರುಷ್

ಚಿತ್ರರಂಗಕ್ಕೆ ಪ್ರತಿವಾರ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಒಂದಲ್ಲಾ ಒಂದು ವಿಭಾಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊಸ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸುತ್ತಾರೆ. ಈಗ ‘ಜಾಲಿ’ ಸಿನಿಮಾ ಮೂಲಕ ಹೊಸ ನಟ ತಾರುಷ್ (Tarush) ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ನಟನೆ ಮಾತ್ರವಲ್ಲದೇ ನಿರ್ದೇಶನದಲ್ಲೂ ಅವರು ರಂಗಪ್ರವೇಶ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜಾಲಿ’ ಸಿನಿಮಾ (Jolly Kannada Movie) ಜುಲೈ 31ರಂದು ರಿಲೀಸ್ ಆಗಿದೆ. ಸಿನಿಮಾದ ವಿಮರ್ಶೆ ಇಲ್ಲಿದೆ..

‘ಜಾಲಿ’ ಸಿನಿಮಾದಲ್ಲಿ ತಾರುಷ್ ಅವರು ಜಾಲಿ ಎಂಬ ಪಾತ್ರವನ್ನೇ ನಿಭಾಯಿಸಿದ್ದಾರೆ. ಹೀರೋ ಆಗಿ ಅವರು ಮೊದಲ ಚಿತ್ರದಲ್ಲೇ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆ್ಯಕ್ಷನ್, ಡ್ಯಾನ್ಸ್, ಕಾಮಿಡಿ ಹೀಗೆ ಹಲವು ರೀತಿಯಲ್ಲಿ ತಮ್ಮ ಪ್ರತಿಭೆ ತೋರಿಸಲು ಬಂದಿದ್ದಾರೆ. ನಾಯಕ ನಟನಾಗಲು ಅವರು ನಡೆಸಿದ ತಯಾರಿ ಏನೆಂಬುದು ತೆರೆಮೇಲೆ ಕಾಣುತ್ತದೆ. ಅವರಿಗೆ ಜೋಡಿಯಾಗಿ ಹೊಸ ನಟಿ ಪದ್ಮಶ್ರೀ ಜೈನ್ ಅವರು ಅಭಿನಯಿಸಿದ್ದಾರೆ.

ಜಾಲಿ ಸಿನಿಮಾದ ಕಥೆ ಹೇಗಿದೆ?

ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ‘ಜಾಲಿ’ ಸಿನಿಮಾ ಮಾಡಲಾಗಿದೆ. ಎರಡು ಹೃದಯಗಳ ಲವ್ ಸ್ಟೋರಿ, ತಂದೆ-ಮಗಳ ಬಾಂಧವ್ಯ, ಅಪ್ಪ-ಮಗನ ವೈಮನಸ್ಸು, ಸ್ನೇಹಿತರ ತರಲೆ, ತಮಾಷೆ, ಖಳರ ಕಿರಿಕ್ ಸೇರಿದಂತೆ ಹಲವು ಅಂಶಗಳು ಈ ಕಥೆಯಲ್ಲಿದೆ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು ತಾರುಷ್ ಅವರು ಈ ಸಿನಿಮಾ ಮಾಡಿದ್ದಾರೆ.

ತಾಯಿ ಇಲ್ಲದೇ ಒಂಟಿಯಾಗಿ ಬೆಳೆದ ಹೀರೋ ಜಾಲಿ (ತಾರುಷ್) ಒಂದು ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ ಜಾನು (ಪದ್ಮಶ್ರೀ ಸಿ. ಜೈನ್) ಮೇಲೆ ಪ್ರೀತಿ ಚಿಗುರುತ್ತದೆ. ಇವರಿಬ್ಬರ ಪ್ರೀತಿಗೆ ಪೋಷಕರು ಅಡ್ಡಿ ಆಗುತ್ತಾರೆ. ಆದರೆ ಅದನ್ನೂ ಮೀರಿ ತಮ್ಮ ಪ್ರೀತಿ ಪಡೆಯಲು ಜಾನು ಮತ್ತು ಜಾಲಿ ಪ್ರಯತ್ನಿಸುತ್ತಾರೆ. ಇನ್ನೇನು ಎಲ್ಲವೂ ಸರಿಹೋಯಿತು ಎಂಬಷ್ಟರಲ್ಲಿ ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.

ಸೀರಿಯಸ್ ದೃಶ್ಯಗಳ ನಡುವೆ ಕಾಮಿಡಿ:

ಮಧ್ಯಂತರದ ವೇಳೆ ಗಂಭೀರ ಎನಿಸಿಕೊಳ್ಳುವ ಕಥೆಯು ನಂತರ ಮತ್ತೆ ಕಾಮಿಡಿ ಟ್ರ್ಯಾಕ್​ಗೆ ಹೊರಳುತ್ತದೆ. ಕಾಲೇಜು ದಿನಗಳ ಫ್ಲ್ಯಾಶ್​ಬ್ಯಾಕ್ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಸಿನಿಮಾದ ಮೊದಲಾರ್ಧದಲ್ಲಿ ಬರುವ ಕಾಮಿಡಿ ದೃಶ್ಯಗಳು ಪೇಲವ ಎನಿಸಿಕೊಂಡಿವೆ. ಶೋಭರಾಜ್, ರೇಖಾದಾಸ್ ಅವರಂತಹ ಹಿರಿಯ ಕಲಾವಿದರಿಂದಾಗಿ ದೃಶ್ಯಗಳು ಕೊಂಚ ಸುಧಾರಿಸಿವೆ.

ಆ್ಯಕ್ಷನ್ ಮತ್ತು ಡ್ಯಾನ್ಸ್ ವಿಚಾರದಲ್ಲಿ ತಾರುಷ್ ಅವರು ಹಿಂದೆ ಬಿದ್ದಿಲ್ಲ. ಹೊಡಿಬಡಿ ದೃಶ್ಯಗಳನ್ನು ಬಯಸುವ ಪ್ರೇಕ್ಷಕರಿಗೆ ಅವರು ಮನರಂಜನೆ ನೀಡಿದ್ದಾರೆ. ಆದರೆ ಎಮೋಷನಲ್ ದೃಶ್ಯಗಳನ್ನು ನಿಭಾಯಿಸಲು ಅವರು ಇನ್ನಷ್ಟು ಮಾಗಬೇಕಿದೆ. ನಟಿ ಪದ್ಮಶ್ರೀ ಸಿ. ಜೈನ್ ಅವರು ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಕೃಷ್ಣಪ್ಪ ವೇಣುಗೋಪಾಲ್ ಅವರು ಗಂಭೀರವಾದ ಅಭಿನಯ ನೀಡಿದ್ದಾರೆ.

ಇದನ್ನೂ ಓದಿ: Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

‘ಜಾಲಿ’ ಸಿನಿಮಾದ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಎಲ್ಲ ಗೀತೆಯನ್ನು ಕಲರ್​ಫುಲ್ ಆಗಿ ಚಿತ್ರಿಸಲಾಗಿದೆ. ಒಟ್ಟಾರೆ ಕಥೆಯನ್ನು ಗಮನಿಸಿದರೆ ಇಲ್ಲಿ ಲಾಜಿಕ್ ಕಣ್ಮರೆ ಆಗಿರುವುದು ಸ್ಪಷ್ಟವಾಗುತ್ತದೆ. ಆ ಬಗ್ಗೆ ಗಮನ ಹರಿಸಿದ್ದರೆ ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿಸಬಹುದಿತ್ತು. ಈ ರೀತಿಯ ಕೆಲವು ಲೋಪಗಳ ನಡುವೆಯೂ ಹೊಸಬರ ಪ್ರಯತ್ನವಾದ ಈ ಚಿತ್ರವು ಟ್ವಿಸ್ಟ್ ಭರಿತ ಕಥೆಯಿಂದಾಗಿ ನೋಡಿಸಿಕೊಂಡು ಸಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿವಿ9 ವರದಿಯಿಂದ ಎಚ್ಚತ್ತುಗೊಂಡು ಆಹಾರ ಇಲಾಖೆ, ನ್ಯಾಯ ಬೆಲೆ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟಕ್ಕೆ ಬ್ರೇಕ್ – Kannada News | Food Department cancelled sale movie Tickets In sarkari nyayabele angadi

ಹಾವೇರಿ, (ಜುಲೈ 31): ಚಿತ್ರಮಂದಿರಗಳ ಬಳಿ ಮತ್ತು ಚಿತ್ರಮಂದಿರದ ಕೌಂಟರ್​ನಲ್ಲಿ ನೀಡುವ ಟಿಕೆಟ್​ಗಳನ್ನು ಹಾವೇರಿಯ ಪಡಿತರ ಅಂಗಡಿಯಲ್ಲಿ ”ಸರ್ಕಾರಿ ನ್ಯಾಯ ಬೆಲೆ ಅಂಗಡಿ”ಯ ಸಿನಿಮಾ ಟಿಕೆಟ್ (movie Tickets) ಮಾರಾಟ ಮಾಡಲಾಗಿದ್ದು, ಇದಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗಿವೆ. ಹೌದು…ಹಾವೇರಿಯ (Haveri) ಪಡಿತರ ಅಂಗಡಿಯಲ್ಲಿ `ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡಿಲಾಗಿದ್ದು, ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟಿವಿ9 ವಿಸೃತ ವರದಿ ಬೆನ್ನಲ್ಲೇ ಇದೀಗ ಎಚ್ಚೆತ್ತ ಆಹಾರ ಇಲಾಖೆ ನ್ಯಾಯಬೆಲೆ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟಕ್ಕೆ ಬ್ರೇಕ್ ಹಾಕಿದೆ. ಈ ಬಗ್ಗೆ ಹಾವೇರಿ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಡಿ.ಜೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಾವೇರಿ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಡಿ.ಜೆ,
ಸರ್ಕಾರಿ ನ್ಯಾಯ ಬೆಲೆ ಅಂಗಡಿ ಸಿನಿಮಾ ಟಿಕೆಟ್ ಮಾರಾಟ ಮಾಡಲು ಆದೇಶ ನೀಡಲಾಗಿತ್ತು.
ಅಂಗಡಿ ಮಾಲೀಕರಿಗೆ ಮೊದಲೇ ಹೇಳಿದ್ವಿ ಬಲವಂತವಾಗಿ ನೀಡಬಾರದು ಅಂತ. ಬಲವಂತವಾಗಿ ನೀಡಿದ ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಅಲ್ಲದೇ ಟಿಕೆಟ್ ವಾಪಸು ಪಡೆದು ಗ್ರಾಹಕರಿಗೆ ಹಣ ನೀಡಲು ಸೂಚನೆ ನೀಡಿದೆ. ಈ ಕುರಿತು ಆಯುಕ್ತರಿಗೆ ವರದಿ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪಡಿತರ ಅಂಗಡಿಗಳಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಟಿಕೆಟ್​​ ಮಾರಾಟ: ಆಹಾರ ಇಲಾಖೆ ನಿರ್ಧಾರಕ್ಕೆ ಆಕ್ಷೇಪ

ಪ್ರತಿಯೊಂದು ಪಡಿತರ ಅಂಗಡಿಯಲ್ಲಿ 50 ರಿಂದ100 ಟಿಕೆಟ್ ತೆಗೆದುಕೊಂಡಿದ್ದರು. 150 ರೂಪಾಯಿ ದರಕ್ಕೆ ಗ್ರಾಹಕರಿಗೆ ಮಾರಾಟ ‌ಮಾಡಿದ್ದರು. ಸುದ್ದಿ ಬಂದ ನಂತರ ಪಡಿತರ ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಗ್ರಾಹಕರಿಗೆ ಸಿನಿಮಾ ಟಿಕೆಟ್ ಮಾರಾಟ ಮಾಡಬಾರದು ಅಂತಾ ಹೇಳಿದ್ದೇವೆ. ಕುಟುಂಬ ಸದಸ್ಯರಿಗೆ ಮತ್ತು ಪರಿಚಯಸ್ಥರಿಗೆ ಕೊಡಲು ಹೇಳಿತ್ತು. ಅದರೆ ಅಂಗಡಿ ಮಾಲೀಕರ ಬಲವಂತವಾಗಿ ಮರಾಟ ಮಾಡಿದ್ದರು. ಈಗ ಟಿಕೆಟ್ ಪಡೆದುಕೊಂಡು ಗ್ರಾಹಕರಿಗೆ ಹಣ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಜಾಗೃತಿ ಗೊಳಿಸುವ ಸಂಬಂಧ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಲನಚಿತ್ರವನ್ನು ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ಹಾಗೂ ಕುಟುಂಬ ವರ್ಗದವರಿಗೆ ಹಾಗೂ ರಾಜ್ಯದ ಕಾರ್ಡುದಾರರಿಗೆ ಪ್ರದರ್ಶಿಸುವ ಸಲುವಾಗಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಚಲನಚಿತ್ರದ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಕೋರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಆಯುಕ್ತರು ಅದಾಗಲೇ ಆದೇಶಿಸಿತ್ತು. ಪಡಿತರ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್​​ ಮಾರಾಟ ಸಂಬಂಧ ಆಹಾರ ಇಲಾಖೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

Source link

ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ – Kannada News | Hold Pakistan Accountable For Violence In PoK Indian Government Urges International Community

ನವದೆಹಲಿ, ಜುಲೈ 31: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಸಾರ್ವಜನಿಕರ ಮೇಲಿನ ಕ್ರೂರ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಹೊಣೆಗಾರರನ್ನಾಗಿ ಮಾಡಬೇಕೆಂದು ಭಾರತ ಸರ್ಕಾರ ಬಲವಾಗಿ ಆಗ್ರಹಿಸಿದೆ. ಪಿಒಕೆಯಲ್ಲಿ ನಡೆಯುತ್ತಿರುವ ನಿಯಂತ್ರಣವಿಲ್ಲದ ಹಿಂಸಾಚಾರ, ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಮತ್ತು ಅಲ್ಲಿನ ಸ್ಥಳೀಯ ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕಿಸ್ತಾನಿ ಸರ್ಕಾರದ ನಡೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಖಂಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಒಕೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ವಿರುದ್ಧ ಪಾಕಿಸ್ತಾನ ಸರ್ಕಾರ ಕ್ರೂರ ಬಲಪ್ರಯೋಗ ಮಾಡುತ್ತಿದ್ದು, ಇದರಿಂದಾಗಿ 40ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಪಿಒಕೆ ಪ್ರತಿಭಟನಾಕಾರರು ಭಾರತದಂತೆಯೇ ನಮ್ಮ ಶತ್ರುಗಳು’; ಹತ್ಯೆಯನ್ನು ಸಮರ್ಥಿಸಿಕೊಂಡ ಪಾಕಿಸ್ತಾನದ ಸಚಿವ

“ಪಿಒಕೆಯ ಮುಗ್ಧ ಜನರ ಬಗ್ಗೆ ಪಾಕಿಸ್ತಾನಕ್ಕೆ ಇರುವ ತೀವ್ರ ನಿರ್ಲಕ್ಷ್ಯವು ಅವರ ರಕ್ಷಣಾ ಸಚಿವರೇ ಪ್ರತಿಭಟನಾನಿರತ ನಾಗರಿಕರನ್ನು ಶತ್ರುಗಳು ಎಂದು ಕರೆದ ಮೇಲೆ ಸಂಪೂರ್ಣವಾಗಿ ಬಯಲಾಗಿದೆ” ಎಂದು ರಣಧೀರ್ ಜೈಸ್ವಾಲ್ ಹೇಳಿದರು. ಭಾರತದಲ್ಲಿ ರಕ್ತ ಹರಿಸಲು ಪಾಕಿಸ್ತಾನಿ ಸರ್ಕಾರ ತರಬೇತಿ ನೀಡಿ, ಶಸ್ತ್ರಸಜ್ಜಿತಗೊಳಿಸಿದ್ದ ಮುಜಾಹಿದ್ದೀನ್ ಉಗ್ರರು ಈಗ ಅವರ ಮೇಲೆಯೇ ದಾಳಿ ನಡೆಸುತ್ತಿದ್ದಾರೆ, ಸರ್ಕಾರದ ವಿರುದ್ಧವೇ ಅಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿಯವರ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದೂ ಜೈಸ್ವಾಲ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪಿಒಕೆಯ ಪ್ರಧಾನಿಯಾಗುವೆ, ಹೊಸ ಇಚ್ಛೆ ವ್ಯಕ್ತಪಡಿಸಿದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್

ಪಿಒಕೆ ಪ್ರತಿಭಟನೆ:

ಕಳೆದ 4 ದಿನಗಳಿಂದ ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಕ್ರೂರ ದೌರ್ಜನ್ಯಕ್ಕೆ 40ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತರಲ್ಲಿ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ಕೇಂದ್ರ ಸಮಿತಿ ಸದಸ್ಯ ಉಮರ್ ನಜೀರ್ ಅವರ ಸಹೋದರ ಉಸ್ಮಾನ್ ನಜೀರ್ ಕೂಡ ಸೇರಿದ್ದಾರೆ. ಕಳೆದ ತಿಂಗಳಿನಿಂದ ಈ ಪ್ರದೇಶದಲ್ಲಿ ಅತಿಯಾದ ಬೆಲೆ ಏರಿಕೆ, ರಾಜಕೀಯ ತಾರತಮ್ಯ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ

ತಮಿಳುನಾಡು ಸಿಎಂ ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕಳೆದ ವಾರ ಕರ್ನಾಟಕ ಸೇರಿ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಒಂದು ವಾರದ ಬಳಿಕವೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ನಡುವೆ ಕಾವೇರಿ ವಿವಾದ ಉಲ್ಬಣಗೊಂಡಿದ್ದು, ಕನ್ನಡಪರ ಸಂಘಟನೆಗಳು ‘ಜನ ನಾಯಗನ್’ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಇಂದು (ಜುಲೈ 31) ಊರ್ವಶಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿದ್ದು, ವಿಜಯ್ ಅವರ ಕಟೌಟ್, ಬ್ಯಾನರ್​​ಗಳನ್ನು ಸಹ ತೆಗೆದು ಹಾಕಲಾಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಐಬಿಎಂ ಜೊತೆ ಸರ್ವಂ ಹೊಂದಾಣಿಕೆ; ಭಾರತ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಎಐ ಪರಿಹಾರಗಳು – Kannada News | Sarvam partners with IBM to provide Sovereign AI solutions for Indian govt and regulated entities

ಸರ್ವಂ ಎಐ, ಐಬಿಎಂImage Credit source: Omar Marques/Thomas Fuller/SOPA Images/LightRocket via Getty Images

ನವದೆಹಲಿ, ಜುಲೈ 31: ಭಾರತೀಯ ಎಐ ಸ್ಟಾರ್ಟ್‌ಅಪ್ ಸರ್ವಂ ಎಐ (Sarvam AI) ಮತ್ತು ಅಮೆರಿಕದ ಟೆಕ್ ದೈತ್ಯ ಐಬಿಎಂ ಸಂಸ್ಥೆಗಳು (IBM) ಜೊತೆಗೂಡಿ ಭಾರತ ಸರ್ಕಾರಿ ಇಲಾಖೆಗಳು ಹಾಗೂ ನಿಯಂತ್ರಿತ ವಲಯಗಳಿಗಾಗಿ (Regulated Sectors) “ಸಾವರಿನ್ ಎಐ” (Sovereign AI) ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಒಪ್ಪಂದ ಮಾಡಿಕೊಂಡಿವೆ.

ಎಐ ಸಿಸ್ಟಂಗಳನ್ನು ನಿರ್ವಹಿಸಲು ಬೇಕಾದ IBM Sovereign Core ಸಾಫ್ಟ್‌ವೇರ್ ಮತ್ತು ಮಿಡಲ್​ವೇರ್ ನೆರವನ್ನು ಐಬಿಎಂ ನೀಡುತ್ತದೆ. ಸರ್ವಂ ಎಐನಿಂದ ಬಹುಭಾಷಾ ಧ್ವನಿ (Multilingual Voice) ಮತ್ತು ಭಾಷಾ ತಂತ್ರಜ್ಞಾನಗಳು ಹಾಗೂ ರೀಸನಿಂಗ್ ಮಾಡಲ್​ಗಳನ್ನು ಒದಗಿಸಿ ಈ ಎಐ ಪರಿಹಾರಗಳನ್ನು ನಿರ್ಮಿಸಲಾಗುತ್ತದೆ.

ಸರ್ಕಾರ ಹಾಗೂ ನಿಯಂತ್ರಿತ ಸಂಸ್ಥೆಗಳು ತಮ್ಮ ಡೇಟಾ (Data), ಮೂಲಸೌಕರ್ಯ ಮತ್ತು ನಿಯಮಾವಳಿಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಾಯ್ದುಕೊಳ್ಳಲು ಈ ‘ಸಾವರಿನ್ ಎಐ’ ನೆರವಾಗುತ್ತದೆ.

ಇದನ್ನೂ ಓದಿ: ಮಿನಿಮಮ್ ಬ್ಯಾಲನ್ಸ್ ದಂಡದಿಂದಲೇ ಬ್ಯಾಂಕುಗಳ ಖಜಾನೆಗೆ 7,100 ಕೋಟಿ ರೂ ಭರ್ತಿ

ಸಾವರಿನ್ ಎಐನ ಪ್ರಮುಖ ಬಳಕೆಯ ಕ್ಷೇತ್ರಗಳು

ಸಾರ್ವಜನಿಕ ಸೇವೆಗಳು ಮತ್ತು ಕುಂದುಕೊರತೆ ನಿವಾರಣೆ (Grievance Redressal): ನಾಗರಿಕರು ಫೋನ್ ಕರೆಯ ಮೂಲಕ ತಮ್ಮದೇ ಮಾತೃಭಾಷೆಯಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಮತ್ತು ದೂರುಗಳನ್ನು ಸಲ್ಲಿಸಲು ಇದು ಅವಕಾಶ ನೀಡುತ್ತದೆ.

ದಾಖಲೆಗಳ ಪ್ರಕ್ರಿಯೆ (Document Processing) ಹಾಗೂ ಆಡಳಿತಾತ್ಮಕ ಕೆಲಸಗಳು: ಸರ್ಕಾರಿ ಇಲಾಖೆಗಳಲ್ಲಿನ ದೈನಂದಿನ ದಾಖಲೆ ಮತ್ತು ಕಡತಗಳ ನಿರ್ವಹಣೆಯನ್ನು ಸುಲಭಗೊಳಿಸಲು ಇದು ನೆರವಾಗುತ್ತದೆ.

ಲಖನೌನಲ್ಲಿ AI ಇನ್ನೋವೇಶನ್ ಸೆಂಟರ್

ಉತ್ತರಪ್ರದೇಶದ ಲಖನೌನಲ್ಲಿರುವ ‘IBM GovTech AI Innovation Center’ ಈ ಎಐ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಲು ಹಾಗೂ ಅವುಗಳ ತಾಂತ್ರಿಕ ಮತ್ತು ಭದ್ರತಾ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡಲು ಮುಖ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ

ಇತ್ತೀಚೆಗಷ್ಟೇ HCLTech ನೇತೃತ್ವದ ಹೂಡಿಕೆ ಸುತ್ತಿನಲ್ಲಿ ಸರ್ವಂ ಎಐ $234 ಮಿಲಿಯನ್ ಫಂಡಿಂಗ್ ಸಂಗ್ರಹಿಸಿತ್ತು. ಇದಲ್ಲದೆ, ಒಡಿಶಾ ಸರ್ಕಾರ ಮತ್ತು HCLTech ಜೊತೆಗೂಡಿ ಒಡಿಶಾದಲ್ಲಿ ₹14,257 ಕೋಟಿ ವೆಚ್ಚದ ಎಐ ಡೇಟಾ ಸೆಂಟರ್ ಸ್ಥಾಪಿಸಲು ಸರ್ವಂ ಒಪ್ಪಂದ ಮಾಡಿಕೊಂಡಿದೆ.

ಶತಕೋಟಿ ಪ್ಯಾರಾಮೀಟರ್ ಎಐ ಮಾಡಲ್

ಸರ್ವಂ ಎಐ ಸಂಸ್ಥೆಯು ಸಂಪೂರ್ಣ ಸ್ವಂತವಾಗಿ ಒಂದು ಟ್ರಿಲಿಯನ್ ಪ್ಯಾರಾಮೀಟರ್​ನ ಎಐ ಫೌಂಡೇಶನ್ ಮಾಡಲ್ ನಿರ್ಮಿಸುತ್ತಿರುವುದಾಗಿ ತಿಳಿಸಿದೆ. ಫೌಂಡೇಶನ್ ಮಾಡಲ್​ನ ಆಚೆ ಭಾರತದಲ್ಲಿ ಎಐ ಇನ್​ಫ್ರಾಸ್ಟ್ರಕ್ಚರ್ ನಿರ್ಮಿಸುವ ಹೆಬ್ಬಯಕೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ. ಇದರಿಂದ ಭಾರತವು ಎಐ ವಿಚಾರದಲ್ಲಿ ವಿದೇಶಿಗರ ಮೇಲೆ ಅವಲಂಬಿತವಾಗುವುದು ತಪ್ಪಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version