Video: ಚಿತ್ತೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಮಗುಚಿ ಬಿದ್ದ ಲಾರಿ, ಟೆಕ್ಕಿ ಸಾವು – Kannada News | Software Engineer Dies After Container Topples Onto Car on Chittoor Bengaluru Highway

ಚಿತ್ತೂರು, ಫೆಬ್ರವರಿ 15: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಕಾರಿನ ಮೇಲೆ ಲಾರಿ ಮಗುಚಿ ಬಿದ್ದ ಪರಿಣಾಮ ಟೆಕ್ಕಿ ಸಾವನ್ನಪ್ಪಿದ್ದಾರೆ. ಚಿತ್ತೂರು-ಬೆಂಗಳೂರು ಹೈವೇಯಲ್ಲಿ ಘಟನೆ ನಡೆದಿದೆ. ಗುಡಿಪಾಲ ಮಂಡಲದ ರಾಮಪುರಂ ಗ್ರಾಮದ ನಿವಾಸಿ ಡಿ ಅನುದೀಪಕ್ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೈಕ್​ಗೆ ಆಗುತ್ತಿದ್ದ ಡಿಕ್ಕಿ ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಲಾರಿ ಕಾರಿನ ಮೇಲೆ ಮಗುಚಿ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೆಲಮಂಗಲ ಬಳಿ ಬಸ್​​ಗೆ ಕಾರು ಗುದ್ದಿ ಐವರ ಸಾವು: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ – Kannada News | Horrific Nelamangala Car Bus Collision Claims Lives; Bus Driver Describes Traumatic Incident

ಬೆಂಗಳೂರು, ಫೆಬ್ರವರಿ 15: ನೆಲಮಂಗಲದ ಜಿಂದಾಲ್ ಬಳಿ ಸಂಭವಿಸಿದ ಬಸ್​​ ಮತ್ತು ಕಾರು ನಡುವಿನ ಅಪಘಾತದಲ್ಲಿ ಐವರು ಅಸುನೀಗಿರುವ ಘಟನೆಯ ಭೀಕರತೆಯನ್ನು ಕೆಎಸ್​ಆರ್​ಟಿಸಿ ಬಸ್ ಚಾಲಕ ಕೆಂಪರಾಜು ವಿವರಿಸಿದ್ದಾರೆ. ಕಾರು ಅತಿ ವೇಗದಲ್ಲಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಾಗ ಜೋರಾದ ಸದ್ದು ಕೇಳಿಸಿತು. ಅಪಘಾತದ ತೀವ್ರತೆಗೆ ಬಸ್‌ನ ಗಾಜುಗಳು ಒಡೆದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿ 43 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅಪಘಾತವಾದ ಕಾರಿನಲ್ಲಿ ಐವರು ಇದ್ದರು. ಆ ಪೈಕಿ ಎಲ್ಲರೂ ಮೃತಪಟ್ಟಿದ್ದಾರೆ. ಬಸ್ ಅಪಘಾತಕ್ಕೀಡಾದ ನಂತರ, ಪ್ರಯಾಣಿಕರನ್ನು ಹುಬ್ಬಳ್ಳಿಗೆ ತೆರಳುತ್ತಿದ್ದ ಸಂಸ್ಥೆಯ ಬೇರೆ ಬಸ್‌ಗಳಲ್ಲಿ ಕಳುಹಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕ್ಯಾಲಿಫೋರ್ನಿಯಾದಲ್ಲಿ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ – Kannada News | Saketh Srinivasayya: Missing Karnataka Student Found Dead in California, Indian Student Safety Concerns

ಕ್ಯಾಲಿಫೋರ್ನಿಯಾ, ಫೆಬ್ರವರಿ 15: ಅಮೆರಿಕದಲ್ಲಿ ಓದುವ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿ(Student)ಗಳಿಗೆ ಮತ್ತೊಮ್ಮೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ.ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿದ್ದಾರೆ. ಭಾರತೀಯ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದು ಅವರ ಕುಟುಂಬವನ್ನು ಮಾತ್ರವಲ್ಲದೆ ಇಡೀ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಆಘಾತಗೊಳಿಸಿದೆ.

ಕರ್ನಾಟಕದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಫೆಬ್ರವರಿ 9 ರಂದು ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಅವರನ್ನು ಕೊನೆಯ ಬಾರಿಗೆ ನೋಡಲಾಯಿತು, ಮತ್ತು ಅಂದಿನಿಂದ ಅವರ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.

ಸಾಕೇತ್ ಕಣ್ಮರೆಯಾದ ನಂತರ, ಲೇಕ್ ಅಂಜಾ, ಬರ್ಕ್ಲಿ ಹಿಲ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿಯ ಮನೆಯ ಬಳಿ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾಗಿತ್ತು. ಇದು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿತ್ತು.

ಮತ್ತಷ್ಟು ಓದಿ: ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆ

ಸಾಕೇತ್ ಅವರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸವು ದೃಢಪಡಿಸಿದೆ. ಮೃತದೇಹವನ್ನು ಭಾರತಕ್ಕೆ ತ್ವರಿತವಾಗಿ ತಲುಪಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬದೊಂದಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸುವುದಾಗಿ ದೂತಾವಾಸವು ಹೇಳಿಕೆ ನೀಡಿದೆ.

ಸಾಕೇತ್ ಈ ಹಿಂದೆ ಐಐಟಿ ಮದ್ರಾಸ್‌ನಲ್ಲಿ ಅಧ್ಯಯನ ಮಾಡಿದ್ದರು ಮತ್ತು ಹೈಪರ್‌ಲೂಪ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೇಟೆಂಟ್‌ನ ಭಾಗವಾಗಿದ್ದರು. ಈ ಘಟನೆಯು ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ. ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಈ ವಿಷಯವನ್ನು ಪ್ರಸ್ತಾಪಿಸಿದರು, ಇದಕ್ಕೆ ವಿದೇಶಾಂಗ ಸಚಿವಾಲಯವು ಭಾರತೀಯ ರಾಯಭಾರ ಕಚೇರಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ ಮತ್ತು ಅಪಾಯಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುತ್ತಿವೆ ಎಂದು ಹೇಳಿದೆ.

ಇದು ಅಪಘಾತವೋ, ಮಾನಸಿಕ ಒತ್ತಡದ ಪ್ರಕರಣವೋ ಅಥವಾ ಇನ್ನಾವುದೇ ಕಾರಣವೋ? ತನಿಖೆ ಪೂರ್ಣಗೊಳ್ಳುವವರೆಗೆ ಸತ್ಯ ಬಹಿರಂಗಗೊಳ್ಳುವುದಿಲ್ಲ, ಆದರೆ ಈ ಘಟನೆಯು ವಿದೇಶದಲ್ಲಿ ಕಲಿಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಎಚ್ಚರಿಕೆ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಂಗ್ಲಾದೇಶದಲ್ಲಿ ಫೆ.17ರಂದು ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ, ಪ್ರಧಾನಿ ಮೋದಿಗೆ ಆಹ್ವಾನ – Kannada News | Tarique Rahman PM: BNP Victory and Bangladesh’s New Era; Modi Invited for Feb 17 Oath

ಢಾಕಾ, ಫೆಬ್ರವರಿ 15: ಬಾಂಗ್ಲಾದೇಶ(Bangladesh)ದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್​ಪಿ ಭರ್ಜರಿ ಜಯಗಳಿಸಿದೆ. ಬಿಎನ್​ಪಿ ನಾಯಕ ತಾರಿಕ್ ರೆಹಮಾನ್ ಫೆ.17ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೊಸ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ತೀವ್ರಗೊಂಡಿದ್ದು, ಭಾರತ, ಪಾಕಿಸ್ತಾನ ಸೇರಿ 13 ದೇಶಗಳನ್ನು ಆಹ್ವಾನಿಸಲಾಗಿದೆ.

ಆಹ್ವಾನಿತ ದೇಶಗಳಲ್ಲಿ ಭಾರತ, ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್​, ಕತಾರ್, ಮಲೇಷ್ಯಾ, ಬ್ರೂನಿ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್​​ ಮತ್ತು ಭೂತಾನ್ ಸೇರಿದೆ. ಫೆಬ್ರವರಿ 17 ರಂದು ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಢಾಕಾಗೆ ಭೇಟಿ ನೀಡುವ ಸಾಧ್ಯತೆ ಕಡಿಮೆ. ಮ್ಯಾಕ್ರನ್ ಮುಂದಿನ ವಾರ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಭಾರತವು ಬಾಂಗ್ಲಾದೇಶದೊಂದಿಗೆ ರಾಜಿ ಮಾಡಿಕೊಳ್ಳಲು ಆತುರಪಡುತ್ತಿಲ್ಲ, ಆದರೂ ಕೆಳಮಟ್ಟಕ್ಕೆ ತಲುಪಿರುವ ಸಂಬಂಧಗಳನ್ನು ಸರಿಪಡಿಸುವುದು ಆದ್ಯತೆಯಾಗಿದೆ. ಭಾರತದ ಕಡೆಯಿಂದ ಉಪರಾಷ್ಟ್ರಪತಿ ಅಥವಾ ವಿದೇಶಾಂಗ ಸಚಿವರು ಭಾಗವಹಿಸಬಹುದು. ಶುಕ್ರವಾರದಂದು ಪ್ರಧಾನಿ ಮೋದಿ ಅವರು ರೆಹಮಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷದ ಅದ್ಭುತ ಗೆಲುವಿಗೆ ಅವರನ್ನು ಅಭಿನಂದಿಸಿದರು.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಬಿಎನ್​ಪಿಗೆ ಭರ್ಜರಿ ಜಯ, 35 ವರ್ಷಗಳ ಬಳಿಕ ಪುರುಷರಿಗೆ ಪ್ರಧಾನಿ ಗಾದಿ, ತಾರಿಕ್ ರೆಹಮಾನ್​​ಗೆ ಮೋದಿ ಶುಭಾಶಯ

ಬಾಂಗ್ಲಾದೇಶದ 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಿಗೆ ಗುರುವಾರ 13ನೇ ಸಂಸತ್ ಚುನಾವಣೆ ನಡೆದಿದ್ದು, ಎರಡು ಸ್ಥಾನಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಬಿಎನ್‌ಪಿ ಭರ್ಜರಿ ಜಯ ಸಾಧಿಸಿ, ಘೋಷಿತ 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದು, ಸುಮಾರು ಎರಡು ದಶಕಗಳ ಅಂತರದ ನಂತರ ಅಧಿಕಾರಕ್ಕೆ ಮರಳಲು ದಾರಿ ಮಾಡಿಕೊಟ್ಟಿತು.

ಪಾಕಿಸ್ತಾನಕ್ಕೆ ಹತ್ತಿರವೆಂದು ಪರಿಗಣಿಸಲಾದ ಬಲಪಂಥೀಯ ಜಮಾತ್-ಇ-ಇಸ್ಲಾಮಿ 68 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿತು. ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿತ್ತು.

ರಾಜಕೀಯ ಅನಿಶ್ಚಿತತೆ ಮತ್ತು ದುರ್ಬಲ ಭದ್ರತಾ ಪರಿಸ್ಥಿತಿಗಳ ದೀರ್ಘಕಾಲದ ಹಂತದ ನಡುವೆ ಚುನಾವಣೆಗಳು ನಡೆದಿದ್ದರಿಂದ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳಿಂದ ಉಂಟಾದ ತಿಂಗಳುಗಳ ಅಸ್ಥಿರತೆಯ ನಂತರ ಮತದಾನ ನಡೆಯಿತು, ಇದು ಆಗಸ್ಟ್ 2024 ರಲ್ಲಿ ಹಸೀನಾ ಅವರ 15 ವರ್ಷಗಳ ಆಳ್ವಿಕೆಯ ಅಂತ್ಯದಲ್ಲಿ ಕೊನೆಗೊಂಡಿತು, ಈ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿಗಳ ವರದಿಗಳು ಬಂದವು, ಇದು ಬಾಂಗ್ಲಾದೇಶದ ರಾಜಕೀಯ ಪರಿವರ್ತನೆಯ ಬಗ್ಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಳವಳವನ್ನು ಹೆಚ್ಚಿಸಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಜನ ನಾಯಗನ್’ ಸಿನಿಮಾಗಾಗಿ ಕಾದಿದ್ದ ದಳಪತಿ ವಿಜಯ್ ಅಭಿಮಾನಿಗಳಿಗೆ ದೊಡ್ಡ ಶಾಕ್ – Kannada News | Thalapathy Vijay last movie Jana Nayagan will not release before April 2026

ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರು ನಟಿಸಿದ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ‘ಜನ ನಾಯಗನ್’ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಆದರೆ ಈ ಸಿನಿಮಾದ ಬಿಡುಗಡೆಗೆ ಹಲವು ವಿಘ್ನಗಳು ಎದುರಾಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವರ್ಷದ ಆರಂಭದಲ್ಲೇ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಯಿತು. ಬಳಿಕ ಈ ವಿವಾದ ಕೋರ್ಟ್ ಮೆಟ್ಟಿಲು ಏರಿತು. ಇದರಿಂದ ರಿಲೀಸ್ ದಿನಾಂಕ ಮುಂದೂಡಿಕೆ ಆಗುತ್ತಲೇ ಹೋಯಿತು. ಈಗ ವಿದೇಶಿ ವಿತರಕರಿಂದ ಒಂದು ಶಾಕಿಂಗ್ ಅಪ್​ಡೇಟ್ ಸಿಕ್ಕಿದೆ.

ಅಮೆರಿಕದಲ್ಲಿ ‘ಜನ ನಾಯಗನ್’ ಸಿನಿಮಾವನ್ನು ವಿತರಣೆ ಮಾಡುತ್ತಿರುವ ‘ಯಾರ್ಕ್ ಸಿನಿಮಾಸ್’ ಸಂಸ್ಥೆಯು ಒಂದು ಪ್ರಕಟಣೆ ಬಿಡುಗಡೆ ಮಾಡಿದೆ. ಅದರಲ್ಲಿ ಅಭಿಮಾನಿಗಳಿಗೆ ಬೇಸರ ಆಗುವ ಸುದ್ದಿ ಇದೆ. ಏಪ್ರಿಲ್ 30ರ ತನಕ ಈ ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಅಂದರೆ, ಈ ಸಿನಿಮಾ ನೋಡಲು ಅಭಿಮಾನಿಗಳು ಇನ್ನೂ ಹಲವು ದಿನ ಕಾಯಬೇಕು.

‘ಜನ ನಾಯಗನ್ ಸಿನಿಮಾ ಏಪ್ರಿಲ್ 30ಕ್ಕಿಂತ ಮೊದಲು ರಿಲೀಸ್ ಆಗಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಈಗಾಗಲೇ ನೀವು ಖರೀದಿಸಿದ ಟಿಕೆಟ್​ಗಳಿಗೆ ಇನ್ನೂ ಹಣ ಮರುಪಾವತಿ ಆಗದೇ ಇದ್ದಲ್ಲಿ ಆದಷ್ಟು ಬೇಗ ನಮ್ಮ ಚಿತ್ರಮಂದಿರಗಳಿಗೆ ಬಂದು ಪಡೆದುಕೊಳ್ಳಿ. ನಿಮ್ಮ ತಾಳ್ಮೆಗಾಗಿ, ಬೆಂಬೆಲಕ್ಕಾಗಿ, ಅರ್ಥ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು’ ಎಂದು ‘ಯಾರ್ಕ್ ಸಿನಿಮಾಸ್’ ಮ್ಯಾನೇಜ್​ಮೆಂಟ್ ತಿಳಿಸಿದೆ.

ಸದ್ಯದಲ್ಲೇ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ದಳಪತಿ ವಿಜಯ್ ಅವರು ಕೂಡ ತಮ್ಮದೇ ಪಕ್ಷ ಕಟ್ಟಿಕೊಂಡಿದ್ದಾರೆ. ‘ಜನ ನಾಯಗನ್’ ಸಿನಿಮಾದಲ್ಲಿ ರಾಜಕೀಯದ ಕಥಾಹಂದರ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವ ತನಕ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಅವಕಾಶ ಸಿಗುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಮದುವೆ ಫಂಕ್ಷನ್​​ಗೆ ಅಟೆಂಡ್ ಆಗಿದ್ದಕ್ಕೂ ಟೀಕೆ ಎದುರಿಸಿದ ದಳಪತಿ ವಿಜಯ್

‘ಜನ ನಾಯಗನ್’ ಸಿನಿಮಾಗೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ನಿರ್ಮಾಪಕರಿಂದಲೇ ಅಧಿಕೃತ ಮಾಹಿತಿ ಹೊರಬರಲಿ ಎಂದು ದಳಪತಿ ವಿಜಯ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅವರು ನಾಯಕಿಯಾಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಲೇ ಬಟ್ಲರ್… ಅತೀ ಕಡಿಮೆ ಎಸೆತಗಳಲ್ಲಿ ವಿಶ್ವ ದಾಖಲೆ..! – Kannada News | Jos Buttler Creates New World Record in T20I Cricket

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಇಂಗ್ಲೆಂಡ್​ನ ಜೋಸ್ ಬಟ್ಲರ್ (Jos Buttler). ಅದು ಸಹ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

Source link

Maha Shivratri Shloka: ಜೀವನದ ಸಂಕಷ್ಟವೆಲ್ಲಾ ದೂರವಾಗಲು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಈ ಮಂತ್ರಗಳನ್ನು ಪಠಿಸಿ – Kannada News | Maha Shivratri 2026: Chant these Powerful Shiva mantra’s on the auspicious occasion of Shivaratri

ಮಹಾಶಿವರಾತ್ರಿಯು (Maha Shivratri) ಶಿವನ ಆರಾಧನೆಗೆ ಮೀಸಲಾಗಿರುವ ವಿಶೇಷ ಹಬ್ಬವಾಗಿದೆ. ಈ ದಿನದಂದು ಪ್ರಾಮಾಣಿಕ, ನಿಷ್ಕಲ್ಮಶ ಹೃದಯದಿಂದ ಶಿವನನ್ನು ಪೂಜಿಸುವುದು, ಉಪವಾಸ ವ್ರತ ಆಚರಿಸುವುದು ಮತ್ತು ಮಂತ್ರಗಳನ್ನು ಪಠಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.  ಅಲ್ಲದೆ  ಶಿವನನ್ನು ಮೆಚ್ಚಿಸಲು ಮತ್ತು ಮಹಾದೇವನ ಆಶೀರ್ವಾದವನ್ನು ಪಡೆಯಲು ಈ ದಿನವನ್ನು ಶುಭವೆಂದು ಪರಿಗಣಿಸಲಾಗಿದೆ. ಸಂಕಷ್ಟವೆಲ್ಲಾ ದೂರವಾಗಿ ನಿಮ್ಮ ಜೀವನದಲ್ಲೂ ಸಕಾರಾತ್ಮಕತೆ ನೆಲೆಗೊಳ್ಳಬೇಕು ಎಂದರೆ ಮಹಾ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಶಿವನಿಗೆ ಸಮರ್ಪಿತವಾಗಿರುವ ಈ ಕೆಲವೊಂದು ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ.

ಶಿವರಾತ್ರಿಯಂದು ಭಕ್ತರು ಪಠಿಸಬೇಕಾದ ಶಿವ ಮಂತ್ರಗಳು:

ಮಹಾಮೃತ್ಯುಂಜಯ ಮಂತ್ರ: “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ. ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತತ್” ಮಹಾಶಿವರಾತ್ರಿಯ ದಿನ ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.

ಪಂಚಾಕ್ಷರಿ ಮಂತ್ರ: ಶಿವನಿಗೆ ಸಂಬಂಧಿಸಿದ ಅತ್ಯಂತ ಪ್ರಸಿದ್ಧ ಮತ್ತು ಸರಳ ಮಂತ್ರವೆಂದರೆ ಓಂ ನಮಃ ಶಿವಾಯ” ಇದನ್ನು ಪಂಚಾಕ್ಷರಿ ಮಂತ್ರ ಎಂದೂ ಕರೆಯುತ್ತಾರೆ. ಮಹಾಶಿವರಾತ್ರಿಯಂದು ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಜೀವನದಲ್ಲಿನ ದುಃಖಗಳು ಕಡಿಮೆಯಾಗುತ್ತವೆ. ಇದು ಮಾನಸಿಕ ಶಾಂತಿಯನ್ನು ತರುತ್ತದೆ ಮತ್ತು ಶಿವನ ಆಶೀರ್ವಾದವೂ ಲಭಿಸುತ್ತದೆ.

ರುದ್ರ ಮಂತ್ರ: “ಓಂ ನಮೋ ಭಗವತೇ ರುದ್ರಾಯ” ಮಹಾಶಿವರಾತ್ರಿಯಂದು ಈ ಮಂತ್ರವನ್ನು ಪಠಿಸುವುದರಿಂದ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯಂದು ಇದನ್ನು ಪಠಿಸುವುದರಿಂದ ಮಾನಸಿಕ ಶಕ್ತಿ ದೊರೆಯುತ್ತದೆ.

ಓಂ ನಮೋ ಭಗವತೇ ರುದ್ರಾಯ ನಮಃ” ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಂತ್ರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶಿವನ ರುದ್ರ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಮಹಾಶಿವರಾತ್ರಿಯಂದು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಖಂಡಿತವಾಗಿಯೂ ಈಡೇರುತ್ತವೆ. ಈ ಮಂತ್ರವು ಆಸೆಗಳನ್ನು ಈಡೇರಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದ್ಯಾತ್” ಈ ಮಂತ್ರವು ಆತ್ಮಬಲವನ್ನು ಹೆಚ್ಚಿಸುತ್ತದೆ, ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಜ್ಞಾನದ ಮಾರ್ಗವನ್ನು ತೆರೆಯುತ್ತದೆ.

“ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮ್ಹಿತನ್ನೋ ರುದ್ರ: ಪ್ರಚೋದಯಾತ್” ಈ ಮಂತ್ರವನ್ನು ಸಂತೋಷ ಮತ್ತು ಸಮೃದ್ಧಿಗಾಗಿ ಜಪಿಸಬಹುದು. ಶಿವನಿಗೆ ಅರ್ಪಿತವಾದ ಈ ಗಾಯತ್ರಿ ಮಂತ್ರವನ್ನು ಸರ್ವಶಕ್ತ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ನಿಯಮಿತವಾಗಿ ಜಪಿಸುವವರಿಗೆ ಅವರ ಜೀವನದಲ್ಲಿ ಎಲ್ಲಾ ಸಂತೋಷ ಮತ್ತು ಶಾಂತಿ ದೊರೆಯುತ್ತದೆ.

ಓಂ ಐಂ ಹ್ರೀಂ ಸರಸ್ವತ್ಯೈ ನಮಃ” ಮಹಾಶಿವರಾತ್ರಿಯಂದು ವಿದ್ಯಾರ್ಥಿಗಳು ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಶಿಕ್ಷಣ ಮತ್ತು ವೃತ್ತಿ ಎರಡರಲ್ಲೂ ಯಶಸ್ಸು ಲಭಿಸಲು ನೀವು ಈ ಮಂತ್ರವನ್ನು ಜಪಿಸಬಹುದು.

ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪುಷ್ಟಿವರ್ಧನಂ. ಉರ್ವಾರುಕಮಿವ್ ಬನ್ಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್” ತೊಂದರೆಗಳಿಂದ ಪರಿಹಾರ ಪಡೆಯಲು, ಮಹಾಶಿವರಾತ್ರಿಯಂದು ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಈ ಮಂತ್ರವು ಅಹಿತಕರ ಘಟನೆಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೆ ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅಕಾಲಿಕ ಮರಣದ ಭಯದಿಂದ ಮುಕ್ತರಾಗಬಹುದು.

ಇದನ್ನೂ ಓದಿ: ಶಿವರಾತ್ರಿಯಂದು ಮಹಾದೇವನನ್ನು ಮೆಚ್ಚಿಸಲು ನೈವೇದ್ಯಗಳನ್ನು ಅರ್ಪಿಸಿ

ಮಂತ್ರ ಪಠಣದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳೇನು?

ಮಂತ್ರ ಪಠಣೆ ಮಾಡುವಾಗ ಉತ್ಪತ್ತಿಯಾಗುವ ಶಕ್ತಿ ತರಂಗಗಳು ಮನಸ್ಸು ಮತ್ತು ದೇಹವನ್ನು ಸಕಾರಾತ್ಮಕತೆಯತ್ತ ಕೊಂಡೊಯ್ಯುತ್ತವೆ ಮತ್ತು  ಆರೋಗ್ಯವನ್ನು ಸುಧಾರಿಸುತ್ತವೆ ಎಂದು ವಿವಿಧ ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಮಹಾಶಿವರಾತ್ರಿಯ ಪವಿತ್ರ ದಿನದಂದು ಈ ಜಪಗಳನ್ನು ಪಠಿಸಿದರೆ, ಅದರ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ. ‘ಓಂ ನಮಃ ಶಿವಾಯ’ ಎಂಬ ಮಹಾಮಂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಪಠಿಸುವವರಿಗೆ ಬೇರೆ ಯಾವುದೇ ಮಂತ್ರಗಳು, ತೀರ್ಥಯಾತ್ರೆಗಳು, ತಪಸ್ಸುಗಳು ಅಥವಾ ಯಜ್ಞಗಳ ಅಗತ್ಯವಿಲ್ಲ ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಈ ಮಂತ್ರವು ಮೋಕ್ಷವನ್ನು ನೀಡುತ್ತದೆ ಮತ್ತು ಪಾಪಗಳನ್ನು ನಾಶಪಡಿಸುತ್ತದೆ ಎಂಬ ನಂಬಿಕೆಯಿದೆ.

 ಮಂತ್ರಗಳನ್ನು ಪಠಿಸಲಿರುವ ನಿಯಮಗಳೇನು?

  • ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಮಾಡಿ ಮಂತ್ರಗಳನ್ನು ಪಠಿಸಬೇಕು.
  • ಶಿವ ದೇವಾಲಯ, ಪುಣ್ಯಸ್ಥಳ ಅಥವಾ ಮನೆಯಲ್ಲಿ ಸ್ವಚ್ಛ, ಶಾಂತ ಮತ್ತು ಏಕಾಂತ ಸ್ಥಳದಲ್ಲಿ ಕುಳಿತು ಜಪಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.
  • ರುದ್ರಾಕ್ಷ ಮಾಲೆಯೊಂದಿಗೆ ಪ್ರತಿದಿನ ಕನಿಷ್ಠ 108 ಬಾರಿ ಜಪ ಮಾಡಬೇಕು, ಏಕೆಂದರೆ ರುದ್ರಾಕ್ಷ ಶಿವನಿಗೆ ತುಂಬಾ ಪ್ರಿಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:53 am, Sun, 15 February 26

Source link

ಏಕೈಕ ವೇಗಿ, ಮೂವರು ಸ್ಪಿನ್ನರ್​: ಹೀಗಿರಲಿದೆ ಟೀಮ್ ಇಂಡಿಯಾದ ರಣತಂತ್ರ – Kannada News | T20 World Cup 2026: India will make spin puzzle against Pakistan

T20 World Cup 2026: ಟಿ20 ವಿಶ್ವಕಪ್​​ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ನಡೆಯಲಿರುವ ಟಿ20 ವಿಶ್ವಕಪ್​​ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಕೊಲಂಬೊದ ಆರ್​​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ಮುನ್ಸೂಚನೆ ಸಿಕ್ಕಿದೆ. ಅದರಂತೆ ಭಾರತ ತಂಡದ ಆಡುವ ಬಳಗದಲ್ಲಿ 2 ಬದಲಾವಣೆಯಾಗುವುದು ಬಹುತೇಕ ಖಚಿತ.

ಈ ಬದಲಾವಣೆಯೊಂದಿಗೆ ಸ್ಫೋಟಕ ದಾಂಡಿಗ ಅಭಿಷೇಕ್ ಶರ್ಮಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಾರೋಗ್ಯದ ಕಾರಣ ನಮೀಬಿಯ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಅಭಿಷೇಕ್ ಸಂಪೂರ್ಣ ಚೇತರಿಸಿಕೊಂಡಿದ್ದು, ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ದೃಢಪಡಿಸಿದ್ದಾರೆ.

ಹಾಗೆಯೇ ಕುಲ್ದೀಪ್ ಯಾದವ್ ಅವರನ್ನು ಸಹ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಚೈನಾಮನ್ ಬೌಲರ್ ಆಗಿರುವ ಕುಲ್ದೀಪ್ ಇಂತಹ ಪಿಚ್‌ಗಳಲ್ಲಿ ಹೆಚ್ಚು ಪರಿಣಾಮಕಾರಿ. ಹೀಗಾಗಿ ಅವರು ಸಹ ಪ್ಲೇಯಿಂಗ್ ಇಲೆವೆನ್​​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಪಾಕ್ ವಿರುದ್ಧ ಕುಲ್ದೀಪ್ ದಾಖಲೆ ಹೇಗಿದೆ?

2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಕುಲ್ದೀಪ್ ಯಾದವ್ ಪಾಕಿಸ್ತಾನ್ ವಿರುದ್ಧ 30 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಲ್ಲದೆ ಆ ಟೂರ್ನಿಯಲ್ಲಿ ಒಟ್ಟು 17 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಹಾಗೆಯೇ ಪಾಕಿಸ್ತಾನ್ ವಿರುದ್ಧ ಈವರೆಗೆ 10 ಪಂದ್ಯಗಳನ್ನಾಡಿರುವ ಕುಲ್ದೀಪ್ ಯಾದವ್ 12.56 ಸರಾಸರಿಯಲ್ಲಿ ಒಟ್ಟು 23 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಕೊಲಂಬೊ ಪಿಚ್​​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಕುಲ್ದೀಪ್ ಯಾದವ್ ಟ್ರಂಪ್ ಕಾರ್ಡ್ ಆಗಿ ಪರಿಣಮಿಸಬಹುದು.

ಏಕೈಕ ವೇಗಿ?

ಕುಲ್ದೀಪ್ ಯಾದವ್ ಅವರನ್ನು ಕಣಕ್ಕಿಳಿಸುವುದರಿಂದ ಟೀಮ್ ಇಂಡಿಯಾ ಏಕೈಕ ವೇಗಿಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾ ಪರ ಪ್ರಮುಖ ವೇಗಿಯಾಗಿ ಜಸ್​​ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹೆಚ್ಚುವರಿ ವೇಗದ ಬೌಲರ್​​​ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಸಾಥ್ ನೀಡಲಿದ್ದಾರೆ. ಅಂದರೆ ಕುಲ್ದೀಪ್ ಯಾದವ್​ಗೆ ಚಾನ್ಸ್ ನೀಡಲು ಅರ್ಷದೀಪ್ ಸಿಂಗ್ ಅವರನ್ನು ಕೈ ಬಿಡಬಹುದು.

ಸ್ಪಿನ್ನಿಂಗ್ ತಂತ್ರ:

ಶ್ರೀಲಂಕಾದ ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿರುವುದರಿಂದ, ಭಾರತ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಇಲ್ಲಿನ ಪಿಚ್ ಸಾಂಪ್ರದಾಯಿಕವಾಗಿ ಕಪ್ಪು ಮಣ್ಣಿನಿಂದ ಕೂಡಿದ್ದು, ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಚೆಂಡು ಪಿಚ್‌ನಲ್ಲಿ ಸ್ವಲ್ಪ ಹಿಡಿತ ಪಡೆಯುವುದರಿಂದ ಬ್ಯಾಟರ್‌ಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಸವಾಲಾಗಬಹುದು.

ಇದನ್ನೂ ಓದಿ: ಮೂರೇ 3 ಎಸೆತಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಸೌತ್ ಆಫ್ರಿಕಾ

ಇದಾಗ್ಯೂ ಆರಂಭದಲ್ಲಿ ವೇಗಿಗಳು ಹೊಸ ಚೆಂಡಿನಲ್ಲಿ ಸ್ವಲ್ಪ ಸ್ವಿಂಗ್ ಮಾಡಬಲ್ಲರು. ಹೀಗಾಗಿ ಟೀಮ್ ಇಂಡಿಯಾ ಆರಂಭದಲ್ಲಿ ಬುಮ್ರಾ ಹಾಗೂ ಹಾರ್ದಿಕ್​ನಿಂದ ಬೌಲಿಂಗ್ ಮಾಡಿಸಿ ಆ ಬಳಿಕ ಸ್ಪಿನ್ನರ್​​​ಗಳ ಮೂಲಕ ರಣತಂತ್ರ ರೂಪಿಸುವ ಸಾಧ್ಯತೆಯಿದೆ.

5+3+3 ಸಂಯೋಜನೆ:

ಪಾಕಿಸ್ತಾನ್ ವಿರುದ್ಧದ ಈ ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ 5+3+3 ಸಂಯೋಜನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಅಂದರೆ ಇಲ್ಲಿ ಐವರು ಬ್ಯಾಟರ್​ಗಳು + ಮೂವರು ಆಲ್​ರೌಂಡರ್​ಗಳು + ಮೂವರು ಬೌಲರ್​ಗಳು ಇರಲಿದ್ದಾರೆ.

ಬ್ಯಾಟರ್​ಗಳಾಗಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಕಣಕ್ಕಿಳಿದರೆ, ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬೌಲರ್​​ಗಳಾಗಿ ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.  ಅದರಂತೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಇಶಾನ್ ಕಿಶನ್ (ವಿಕೇಟ್ ಕೀಪರ್)
  • ತಿಲಕ್ ವರ್ಮಾ
  • ಸೂರ್ಯಕುಮಾರ್ ಯಾದವ್ (ನಾಯಕ)
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ರಿಂಕು ಸಿಂಗ್
  • ಅಕ್ಷರ್ ಪಟೇಲ್
  • ವರುಣ್ ಚಕ್ರವರ್ತಿ
  • ಕುಲ್ದೀಪ್ ಯಾದವ್
  • ಜಸ್ಪ್ರೀತ್ ಬುಮ್ರಾ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಏರುತ್ತಿದೆ ಗರಿಷ್ಠ ತಾಪಮಾನ, ಕರಾವಳಿ ಜಿಲ್ಲೆಗಳಲ್ಲಿ ಸೆಕೆ ಸೆಕೆ – Kannada News | Karnataka Weather Updates, Coastal Districts on Yellow Alert as Temperatures Soar

ಬೆಂಗಳೂರು, ಫೆಬ್ರವರಿ 15: ಕರ್ನಾಟಕ(Karnataka)ದಾದ್ಯಂತ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗುತ್ತಿದೆ, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಸೆಕೆ ವಿಪರೀತವಾಗಿದ್ದು, ಸೆಕೆಯ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸೆಕೆ ಹೆಚ್ಚಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಕೂಡ ಗರಿಷ್ಠ ಉಷ್ಣಾಂಶ ಹೆಚ್ಚಾಗುತ್ತಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಯಿಲ್ಲದಿದ್ದರೂ ಉಷ್ಣಾಂಶದಲ್ಲಿ ಏರಿಕೆ ಇದೆ.

ದಾವಣಗೆರೆಯಲ್ಲಿ 12. ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಶುಭ್ರ ಆಕಾಶ ಇರಲಿದ್ದು, ಕೆಲವೆಡೆ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣವಿರಲಿದೆ. ಬೆಂಗಳೂರಿನ ಎಚ್​ಎಎಲ್​ನಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 35.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 37.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್​ಪೋರ್ಟ್​​ನಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 34.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಶುಷ್ಕ ವಾತಾವರಣ

ಬೆಳಗಾವಿ ಏರ್​​ಪೋರ್ಟ್​​ನಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್​​ನಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 31.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,12.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಧಾರವಾಡದಲ್ಲಿ 31.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 12.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 32.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 34.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 32.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಹಾಸನದಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 12.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಚಿಂತಾಮಣಿಯಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 11.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Maha Shivratri Shloka: ಜೀವನದ ಸಂಕಷ್ಟವೆಲ್ಲಾ ದೂರವಾಗಲು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಈ ಮಂತ್ರಗಳನ್ನು ಪಠಿಸಿ – Kannada News | Maha Shivratri 2026: Chant these Powerful Shiva mantra’s on the auspicious occasion of Shivaratri

ಮಹಾಶಿವರಾತ್ರಿಯು (Maha Shivratri) ಶಿವನ ಆರಾಧನೆಗೆ ಮೀಸಲಾಗಿರುವ ವಿಶೇಷ ಹಬ್ಬವಾಗಿದೆ. ಈ ದಿನದಂದು ಪ್ರಾಮಾಣಿಕ, ನಿಷ್ಕಲ್ಮಶ ಹೃದಯದಿಂದ ಶಿವನನ್ನು ಪೂಜಿಸುವುದು, ಉಪವಾಸ ವ್ರತ ಆಚರಿಸುವುದು ಮತ್ತು ಮಂತ್ರಗಳನ್ನು ಪಠಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.  ಅಲ್ಲದೆ  ಶಿವನನ್ನು ಮೆಚ್ಚಿಸಲು ಮತ್ತು ಮಹಾದೇವನ ಆಶೀರ್ವಾದವನ್ನು ಪಡೆಯಲು ಈ ದಿನವನ್ನು ಶುಭವೆಂದು ಪರಿಗಣಿಸಲಾಗಿದೆ. ಸಂಕಷ್ಟವೆಲ್ಲಾ ದೂರವಾಗಿ ನಿಮ್ಮ ಜೀವನದಲ್ಲೂ ಸಕಾರಾತ್ಮಕತೆ ನೆಲೆಗೊಳ್ಳಬೇಕು ಎಂದರೆ ಮಹಾ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಶಿವನಿಗೆ ಸಮರ್ಪಿತವಾಗಿರುವ ಈ ಕೆಲವೊಂದು ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ.

ಶಿವರಾತ್ರಿಯಂದು ಭಕ್ತರು ಪಠಿಸಬೇಕಾದ ಶಿವ ಮಂತ್ರಗಳು:

ಮಹಾಮೃತ್ಯುಂಜಯ ಮಂತ್ರ: “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ. ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತತ್” ಮಹಾಶಿವರಾತ್ರಿಯ ದಿನ ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.

ಪಂಚಾಕ್ಷರಿ ಮಂತ್ರ: ಶಿವನಿಗೆ ಸಂಬಂಧಿಸಿದ ಅತ್ಯಂತ ಪ್ರಸಿದ್ಧ ಮತ್ತು ಸರಳ ಮಂತ್ರವೆಂದರೆ ಓಂ ನಮಃ ಶಿವಾಯ” ಇದನ್ನು ಪಂಚಾಕ್ಷರಿ ಮಂತ್ರ ಎಂದೂ ಕರೆಯುತ್ತಾರೆ. ಮಹಾಶಿವರಾತ್ರಿಯಂದು ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಜೀವನದಲ್ಲಿನ ದುಃಖಗಳು ಕಡಿಮೆಯಾಗುತ್ತವೆ. ಇದು ಮಾನಸಿಕ ಶಾಂತಿಯನ್ನು ತರುತ್ತದೆ ಮತ್ತು ಶಿವನ ಆಶೀರ್ವಾದವೂ ಲಭಿಸುತ್ತದೆ.

ರುದ್ರ ಮಂತ್ರ: “ಓಂ ನಮೋ ಭಗವತೇ ರುದ್ರಾಯ” ಮಹಾಶಿವರಾತ್ರಿಯಂದು ಈ ಮಂತ್ರವನ್ನು ಪಠಿಸುವುದರಿಂದ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯಂದು ಇದನ್ನು ಪಠಿಸುವುದರಿಂದ ಮಾನಸಿಕ ಶಕ್ತಿ ದೊರೆಯುತ್ತದೆ.

ಓಂ ನಮೋ ಭಗವತೇ ರುದ್ರಾಯ ನಮಃ” ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಂತ್ರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶಿವನ ರುದ್ರ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಮಹಾಶಿವರಾತ್ರಿಯಂದು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಖಂಡಿತವಾಗಿಯೂ ಈಡೇರುತ್ತವೆ. ಈ ಮಂತ್ರವು ಆಸೆಗಳನ್ನು ಈಡೇರಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದ್ಯಾತ್” ಈ ಮಂತ್ರವು ಆತ್ಮಬಲವನ್ನು ಹೆಚ್ಚಿಸುತ್ತದೆ, ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಜ್ಞಾನದ ಮಾರ್ಗವನ್ನು ತೆರೆಯುತ್ತದೆ.

“ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮ್ಹಿತನ್ನೋ ರುದ್ರ: ಪ್ರಚೋದಯಾತ್” ಈ ಮಂತ್ರವನ್ನು ಸಂತೋಷ ಮತ್ತು ಸಮೃದ್ಧಿಗಾಗಿ ಜಪಿಸಬಹುದು. ಶಿವನಿಗೆ ಅರ್ಪಿತವಾದ ಈ ಗಾಯತ್ರಿ ಮಂತ್ರವನ್ನು ಸರ್ವಶಕ್ತ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ನಿಯಮಿತವಾಗಿ ಜಪಿಸುವವರಿಗೆ ಅವರ ಜೀವನದಲ್ಲಿ ಎಲ್ಲಾ ಸಂತೋಷ ಮತ್ತು ಶಾಂತಿ ದೊರೆಯುತ್ತದೆ.

ಓಂ ಐಂ ಹ್ರೀಂ ಸರಸ್ವತ್ಯೈ ನಮಃ” ಮಹಾಶಿವರಾತ್ರಿಯಂದು ವಿದ್ಯಾರ್ಥಿಗಳು ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಶಿಕ್ಷಣ ಮತ್ತು ವೃತ್ತಿ ಎರಡರಲ್ಲೂ ಯಶಸ್ಸು ಲಭಿಸಲು ನೀವು ಈ ಮಂತ್ರವನ್ನು ಜಪಿಸಬಹುದು.

ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪುಷ್ಟಿವರ್ಧನಂ. ಉರ್ವಾರುಕಮಿವ್ ಬನ್ಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್” ತೊಂದರೆಗಳಿಂದ ಪರಿಹಾರ ಪಡೆಯಲು, ಮಹಾಶಿವರಾತ್ರಿಯಂದು ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಈ ಮಂತ್ರವು ಅಹಿತಕರ ಘಟನೆಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೆ ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅಕಾಲಿಕ ಮರಣದ ಭಯದಿಂದ ಮುಕ್ತರಾಗಬಹುದು.

ಇದನ್ನೂ ಓದಿ: ಶಿವರಾತ್ರಿಯಂದು ಮಹಾದೇವನನ್ನು ಮೆಚ್ಚಿಸಲು ನೈವೇದ್ಯಗಳನ್ನು ಅರ್ಪಿಸಿ

ಮಂತ್ರ ಪಠಣದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳೇನು?

ಮಂತ್ರ ಪಠಣೆ ಮಾಡುವಾಗ ಉತ್ಪತ್ತಿಯಾಗುವ ಶಕ್ತಿ ತರಂಗಗಳು ಮನಸ್ಸು ಮತ್ತು ದೇಹವನ್ನು ಸಕಾರಾತ್ಮಕತೆಯತ್ತ ಕೊಂಡೊಯ್ಯುತ್ತವೆ ಮತ್ತು  ಆರೋಗ್ಯವನ್ನು ಸುಧಾರಿಸುತ್ತವೆ ಎಂದು ವಿವಿಧ ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಮಹಾಶಿವರಾತ್ರಿಯ ಪವಿತ್ರ ದಿನದಂದು ಈ ಜಪಗಳನ್ನು ಪಠಿಸಿದರೆ, ಅದರ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ. ‘ಓಂ ನಮಃ ಶಿವಾಯ’ ಎಂಬ ಮಹಾಮಂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಪಠಿಸುವವರಿಗೆ ಬೇರೆ ಯಾವುದೇ ಮಂತ್ರಗಳು, ತೀರ್ಥಯಾತ್ರೆಗಳು, ತಪಸ್ಸುಗಳು ಅಥವಾ ಯಜ್ಞಗಳ ಅಗತ್ಯವಿಲ್ಲ ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಈ ಮಂತ್ರವು ಮೋಕ್ಷವನ್ನು ನೀಡುತ್ತದೆ ಮತ್ತು ಪಾಪಗಳನ್ನು ನಾಶಪಡಿಸುತ್ತದೆ ಎಂಬ ನಂಬಿಕೆಯಿದೆ.

 ಮಂತ್ರಗಳನ್ನು ಪಠಿಸಲಿರುವ ನಿಯಮಗಳೇನು?

  • ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಮಾಡಿ ಮಂತ್ರಗಳನ್ನು ಪಠಿಸಬೇಕು.
  • ಶಿವ ದೇವಾಲಯ, ಪುಣ್ಯಸ್ಥಳ ಅಥವಾ ಮನೆಯಲ್ಲಿ ಸ್ವಚ್ಛ, ಶಾಂತ ಮತ್ತು ಏಕಾಂತ ಸ್ಥಳದಲ್ಲಿ ಕುಳಿತು ಜಪಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.
  • ರುದ್ರಾಕ್ಷ ಮಾಲೆಯೊಂದಿಗೆ ಪ್ರತಿದಿನ ಕನಿಷ್ಠ 108 ಬಾರಿ ಜಪ ಮಾಡಬೇಕು, ಏಕೆಂದರೆ ರುದ್ರಾಕ್ಷ ಶಿವನಿಗೆ ತುಂಬಾ ಪ್ರಿಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version