ಬೆಂಗಳೂರಿನಲ್ಲಿ ಹೆಚ್ಚಾಯ್ತು ಹಾವುಗಳ ಸಂಖ್ಯೆ! ದಿನಕ್ಕೆ 100 ಕರೆಗಳು ಬರುತ್ತಿವೆ ಎಂದ ಉರಗ ರಕ್ಷಕರು – Kannada News | Bengaluru Snake Hatching Season: 100 rescue calls per day, Shortage of Rescuers Leaves City Vulnerable to Venomous Reptiles
ಬೆಂಗಳೂರು, ಜುಲೈ 01: ಜೂನ್ನಿಂದ ಆಗಸ್ಟ್ವರೆಗಿನ ಅವಧಿಯು ಹಾವುಗಳ (Snakes) ಸಂತಾನೋತ್ಪತ್ತಿ ಮತ್ತು ಮೊಟ್ಟೆಯೊಡೆದು ಮರಿ ಹೊರಬರುವ (Hatching Season) ಸಮಯವಾಗಿದೆ. ಈ ಸಮಯದಲ್ಲಿ ಮನೆಗಳ ಒಳಗೆ, ಸುತ್ತಮುತ್ತ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಬೆಂಗಳೂರಿನಲ್ಲೂ ಹಾವುಗಳ ಸಂತತಿ ಹೆಚ್ಚಾಗಿದ್ದು, ಉರಗ ರಕ್ಷಕರು ಪರದಾಡುವಂತಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಲಯಗಳಿಗೆ ಕೇವಲ 7 ಮಂದಿ ಉರಗ ರಕ್ಷಕರಿದ್ದು, ಸಾರ್ವಜನಿಕರಿಂದ ದಿನಕ್ಕೆ ಬರುವ 100ಕ್ಕೂ ಹೆಚ್ಚು ಕರೆಗಳಲ್ಲಿ (Rescue calls) ಕೇವಲ 10-15 ಕರೆಗಳಿಗೆ ಮಾತ್ರ ಸ್ಪಂದಿಸಲು…