Chanakya Niti: ಜೀವನದಲ್ಲಿ ಹಣದ ಕೊರತೆ ಬರಬಾರದೆಂದರೆ ಈ ವಿಚಾರಗಳನ್ನು ಅನುಸರಿಸಿ – Kannada News | Chanakya Niti: Follow these tips to avoid financial shortage in life

ಆದಾಯ ಕಡಿಮೆ ಇದ್ದರೂ ಪರವಾಗಿಲ್ಲ ಆದರೆ ಜೀವನದಲ್ಲಿ ಎಂದಿಗೂ ಆರ್ಥಿಕ ಸಂಕಷ್ಟ (financial difficulties) ಬರಬಾರದು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಂದು ಅಭ್ಯಾಸಗಳ ಕಾರಣ ಹಣದ ಕೊರತೆ ಎದುರಾಗುತ್ತದೆ. ಹೌದು ಆದಾಯಕ್ಕಿಂತ ಖರ್ಚು ಹೆಚ್ಚಾದಾಗ, ದುಂದುವೆಚ್ಚ, ಕೆಟ್ಟವರ ಸಹವಾಸ ಇತ್ಯಾದಿ ಕಾರಣಗಳಿಂದ ಸಂಪಾದಿಸಿ ಹಣವೆಲ್ಲಾ ಖಾಲಿಯಾಗುತ್ತದೆ, ಆರ್ಥಿಕ ಸಂಕಷ್ಟ ಎದುರಾಗುತ್ತವೆ. ಹೀಗಿರುವಾಗ ಆದಾಯ ಕಡಿಮೆ ಇದ್ದರೂ ಹಣದ ಸಮಸ್ಯೆ ಕಾಣಿಸಿಕೊಳ್ಳಬಾರದು ಈ ಕೆಲವೊಂದು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆ ಸಲಹೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಣದ ಕೊರತೆ ಕಾಣಿಸಿಕೊಳ್ಳಬಾರದೆಂದರೆ ಈ ಸಲಹೆಗಳನ್ನು ಪಾಲಿಸಿ:

ಹೂಡಿಕೆ ಮಾಡಿ: ನಿಮ್ಮಲ್ಲಿರುವ ಹಣ ಹೆಚ್ಚಾಗಬೇಕೆಂದರೆ, ಗಳಿಸಿದ ಹಣವನ್ನು ಒಂದೇ ಕಡೆ ಕೂಡಿಡುವುದಕ್ಕಿಂತ ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದನ್ನು ಕಲಿಯಬೇಕು ಎನ್ನುತ್ತಾರೆ ಚಾಣಕ್ಯ. ನೀವು ಸರಿಯಾದ ಸಲಹೆಯೊಂದಿಗೆ ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ, ಅದು ಹೆಚ್ಚಾಗುತ್ತದೆ. ಹೂಡಿಕೆ ಮಾಡುವುದು ತಿಳಿದಿದ್ದರೆ ಕಡಿಮೆ ಆದಾಯವಿದ್ದರೂ ಶ್ರೀಮಂತಿಕೆಯನ್ನು ಗಳಿಸಬಹುದು.

ಯೋಜನೆ ಅತ್ಯಗತ್ಯ: ನೀವು ಶ್ರೀಮಂತರಾಗಲು ಬಯಸಿದರೆ, ಹಣದ ಕೊರತೆ ಕಾಣಿಸಿಕೊಳ್ಳಬಾರದು ಎಂದಾದರೆ ಹಣದ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸಿ. ಆ ಯೋಜನೆಯ ಪ್ರಕಾರ ಹಣವನ್ನು ಉಳಿಸಿ ಮತ್ತು ಖರ್ಚು ಮಾಡಿ. ಸಾಧ್ಯವಾದಷ್ಟು ವ್ಯರ್ಥ ಖರ್ಚು ಮಾಡುವುದನ್ನು ತಪ್ಪಿಸಿ. ಈ ರೀತಿಯಾಗಿ, ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ವ್ಯಕ್ತಿಗೆ ಹಣದ ಸಮಸ್ಯೆ ಇರುವುದಿಲ್ಲ.

ಅನುಪಯುಕ್ತ ವಸ್ತುಗಳಿಗೆ ಖರ್ಚು ಮಾಡಬೇಡಿ: ನಿಮ್ಮ ಬಳಿ ಹಣವಿದ್ದರೆ, ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅನುಪಯುಕ್ತ ವಸ್ತುಗಳಿಗೆ ಖರ್ಚು ಮಾಡಬಾರದು. ಆದ್ದರಿಂದ, ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಭವಿಷ್ಯಕ್ಕಾಗಿ ದೊಡ್ಡ ಭಾಗವನ್ನು ಹೂಡಿಕೆ ಮಾಡಿ.

ಸರಳ ಜೀವನ ನಡೆಸಿ: ಸರಳ ಜೀವನ ನಡೆಸುವವರು ತಮ್ಮ ಸಂಪತ್ತನ್ನು ಎಂದಿಗೂ ವ್ಯರ್ಥ ಮಾಡುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಅಗತ್ಯವಿರುವಷ್ಟು ಮಾತ್ರ ಖರ್ಚು ಮಾಡಲು ಕಲಿತರೆ, ನಿಮ್ಮ ಖಜಾನೆ ಎಂದಿಗೂ ಖಾಲಿಯಾಗುವುದಿಲ್ಲ. ನಿಮ್ಮ ಜೀವನ ಸರಳವಾದಷ್ಟೂ, ನಿಮ್ಮ ಅಗತ್ಯಗಳು ಕಡಿಮೆಯಾಗುತ್ತವೆ ಮತ್ತು ನಿಮ್ಮ ಸಂಪತ್ತು ವೃದ್ಧಿಯಾಗುತ್ತಲೇ ಇರುತ್ತದೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಗುಣಗಳಿರುವ ಹೆಣ್ಣು ಮನೆಯ ನಿಜವಾದ ಶಕ್ತಿ

ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ: ಚಾಣಕ್ಯ ನೀತಿಯ ಪ್ರಕಾರ, ಸಮಯಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ, ಆದ್ದರಿಂದ ನೀವು ಅದನ್ನು ಯಾವಾಗಲೂ ಬುದ್ಧಿವಂತಿಕೆಯಿಂದ ಬಳಸಬೇಕು. ನೀವು ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿದರೆ, ಹಣವು ಯಾವಾಗಲೂ ನಿಮ್ಮ ಕಡೆಗೆ ಸೆಳೆಯಲ್ಪಡುತ್ತದೆ. ಮತ್ತು ಸ್ವಲ್ಪ ಸಂಪಾದಿಸಿದರೂ  ನಿಮ್ಮ ಖಜಾನೆಯು ಎಂದಿಗೂ ಖಾಲಿಯಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಕುರ್ಚಿ ಕಿತ್ತಾಟ ತಾರಕಕ್ಕೆ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ – Kannada News | Power Tussle In Karnataka Congress: AICC President Mallikarjun Kharge Passed message to Siddaramaiah And DK Shivakumar

ಕಲಬುರಗಿ, (ಡಿಸೆಂಬರ್ 21): ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಕುರ್ಚಿ ಕದನ ದಿನೇ ದಿನೇ ತಾರಕಕ್ಕೇರುತ್ತಿದೆ. ಸಿಎಂ-ಡಿಸಿಎಂ ಬಣದ ನಾಯಕರು ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಕುರ್ಚಿ ಕದನವನ್ನೂ ಜೀವಂತವಾಗಿಟ್ಟಿದ್ದಾರೆ. ನಾನೇ 5 ವರ್ಷ ಸಿಎಂ, ಎರಡೂವರೆ ವರ್ಷಕ್ಕೆ ನಾಯಕತ್ವ ಬದಲಾಗುತ್ತೆ ಅಂತ ಎಲ್ಲೂ ಒಪ್ಪಂದ ಆಗಿಲ್ಲ. ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಅಂತ ಸಿದ್ದರಾಮಯ್ಯ (Siddaramaiah)  ಅಧಿವೇಶನದಲ್ಲೇ ಹೇಳಿಕೆ ಕೊಟ್ಟ ಬೆನ್ನಲ್ಲೇ ಸಿಎಂ ಆಪ್ತರ ಭೇಟಿಗೆ ಡಿಕೆಶಿ ಮುಂದಾಗಿದ್ದಾರೆ. ಈ ನಡುವೆ ಸ್ಥಳೀಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಕ್ಷ್ಮ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ಇಲ್ಲಿನ ಸಮಸ್ಯೆಯನ್ನ ಇಲ್ಲೇ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರದ ಬಗ್ಗೆಇಂದು (ಡಿಸೆಂಬರ್ 21) ಕಲಬುರಗಿಯಲ್ಲಿ ಮಾತನಾಡಿರುವ ಖರ್ಗೆ. ಗೊಂದಲವನ್ನ ಹೈಕಮಾಂಡ್‌ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ ಅಂತ ಹೇಳಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳಿದಿದ್ದಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷದ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​ಸಿಬಿ ಸೇರಿದಂತೆ ಈ 3 ಐಪಿಎಲ್ ತಂಡಗಳ ಆಟಗಾರರಿಗಿಲ್ಲ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ – Kannada News | 2026 T20 World Cup India Squad: IPL Team Breakdown, RCB, LSG, RR Players Miss Out

2026 ರ ಟಿ20 ವಿಶ್ವಕಪ್‌ಗಾಗಿ (T20 World Cup 2026) ಹಾಲಿ ಚಾಂಪಿಯನ್ ಟೀಂ ಇಂಡಿಯಾವನ್ನು ಘೋಷಿಸಲಾಗಿದೆ. ಡಿಸೆಂಬರ್ 20 ರಂದು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮತ್ತು ಆ ನಂತರ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಸದಸ್ಯರ ಬಲಿಷ್ಠ ತಂಡವನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಪ್ರಕಟಿಸಿದೆ. ಆಯ್ಕೆಯಾದ ತಂಡದಲ್ಲಿ ಭಾಗಶಃ ಎಲ್ಲರೂ ನಿರೀಕ್ಷಿಸಿದ್ದ ಆಟಗಾರರೇ ಇದ್ದು, ಈ ಬಾರಿಯೂ ಭಾರತವೇ ಚಾಂಪಿಯನ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಆದಾಗ್ಯೂ ಈ ಟೂರ್ನಿಗೆ ಆಯ್ಕೆಯಾದ ಆಟಗಾರರಲ್ಲಿ ಆರ್‌ಸಿಬಿ (RCB) ಸೇರಿದಂತೆ ಮೂರು ಐಪಿಎಲ್ ತಂಡಗಳ ಆಟಗಾರರು ಆಯ್ಕೆಯಾಗದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಇದರರ್ಥ 10 ಐಪಿಎಲ್ (IPL) ತಂಡಗಳಲ್ಲಿ, ಏಳು ತಂಡಗಳ ಆಟಗಾರರು ಮಾತ್ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯಾವ ಐಪಿಎಲ್ ತಂಡಗಳ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ?

ಆ ಮೂರು ತಂಡಗಳಲ್ಲಿ ಆರ್‌ಸಿಬಿ, ಲಕ್ನೋ ಸೂಪರ್​ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಂದ ಒಬ್ಬರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಈ ಮೂರು ತಂಡಗಳನ್ನು ಹೊರತುಪಡಿಸಿ ಉಳಿದ 7 ತಂಡಗಳಲ್ಲಿ ಒಬ್ಬರಾದರೂ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯಾವ ತಂಡದಿಂದ ಹೆಚ್ಚಿನ ಆಟಗಾರರ ಆಯ್ಕೆ?

2026 ರ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಪಾರುಪತ್ಯ ಮೇರೆದಿದ್ದಾರೆ. ಈ ತಂಡದಿಂದ ನಾಲ್ವರು ಆಟಗಾರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದಾರೆ.

ಮುಂಬೈ ಇಂಡಿಯನ್ಸ್ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮೂವರು ಆಟಗಾರರು ಆಯ್ಕೆಯಾಗಿದ್ದಾರೆ. ಅವರಲ್ಲಿ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ರಿಂಕು ಸಿಂಗ್ ಸೇರಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಂದ ತಲಾ ಇಬ್ಬರು ಆಟಗಾರರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ನಿಂದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಆಯ್ಕೆಯಾಗಿದ್ದರೆ, ಸಿಎಸ್‌ಕೆ ತಂಡದಿಂದ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಆಯ್ಕೆಯಾಗಿದ್ದಾರೆ.

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ 2026 ರ ಟಿ20 ವಿಶ್ವಕಪ್‌ನಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಇವರೆಲ್ಲರ ಹೊರತಾಗಿ, ಪಂಜಾಬ್ ಕಿಂಗ್ಸ್‌ ತಂಡದಿಂದ ಅರ್ಷದೀಪ್ ಸಿಂಗ್ ಮತ್ತು ಗುಜರಾತ್ ಟೈಟಾನ್ಸ್‌ ತಂಡದಿಂದ ವಾಷಿಂಗ್ಟನ್ ಸುಂದರ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2026 ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅಕ್ಷರ್ ಪಟೇಲ್ (ಉಪನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:18 pm, Sun, 21 December 25

Source link

ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ – Kannada News | South Africa, gunmen kills several people near Johannesburg

ಜೋಹಾನ್ಸ್​ಬರ್ಗ್, ಡಿಸೆಂಬರ್ 21: ಜಗತ್ತಿನ ವಿವಿಧೆಡೆ ಭಯೋತ್ಪಾದನೆ ಮತ್ತು ಅಪರಾಧ ದಾಳಿಗಳು ಹೆಚ್ಚುತ್ತಲೇ ಇವೆ. ಆಸ್ಟ್ರೇಲಿಯಾದಲ್ಲಿ ಉಗ್ರರು ಸಾರ್ವಜನಿಕರ ಮೇಲೆ ಗುಂಡಿನ ದಾಳಿ ಎಸಗಿದ ಘಟನೆ ಮರೆಯಾಗುವ ಮುನ್ನವೇ ಸೌತ್ ಆಫ್ರಿಕಾದಲ್ಲಿ ಬಂದೂಕುದಾರಿಗಳಿಂದ ಭೀಕರ ದಾಳಿಯಾಗಿದೆ. ಜೋಹಾನ್ಸ್​ಬರ್ಗ್​ನ ಹೊರವಲಯದ ಚಿನ್ನದ ಗಣಿ ಸಮೀಪ ಇರುವ ಬೆಕ್ಕೆರ್ಸ್​ಡನ್ ಟೌನ್​ಶಿಪ್ ಬಳಿ ಆಗಂತುಕ ಬಂದೂಕುದಾರಿಗಳು ಸಾರ್ವಜನಿಕರ ಮೇಲೆ ದಾಳಿ (gunmen attack) ಎಸಗಿದ್ದಾರೆ. ಈ ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. ಹತ್ತು ಜನರು ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಬೆಕ್ಕೆರ್ಸ್ಡಲ್ ಬಾರ್ ಮೇಲೆ ದಾಳಿಕೋರರು ನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ಎಸಗಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 1 ಗಂಟೆಯಲ್ಲಿ ಈ ಘಟನೆ ನಡೆದಿದೆ. ಭಾರತೀಯ ಕಾಲಮಾನ ಬೆಳಗ್ಗೆ 4:30ರ ಸಮಯ ಆಗಿರಬಹುದು. ಈ ಗುಂಡಿನ ದಾಳಿಯಲ್ಲಿ ಬಲಿಯಾದ ಒಂಬತ್ತು ಮಂದಿಯಲ್ಲಿ ಮೂವರು ಬಾರ್​ನ ಒಳಗೆಯೇ ಅಸು ನೀಗಿದ್ಧಾರೆ. ಇನ್ನುಳಿದವರು ಹೊರಗೆ ತಪ್ಪಿಸಿಕೊಳ್ಳಲು ಹೋಗುವಾಗ ಗುಂಡೇಟು ತಿಂದು ಸತ್ತಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ; ಯೂನಸ್ ಸರ್ಕಾರದಿಂದ 7 ಜನರ ಬಂಧನ

ಬಾರ್ ಮೇಲೆ ದಾಳಿ ನಡೆಸಿದವರು ಎಷ್ಟು ಮಂದಿ ಇದ್ದರು ಎಂಬುದು ಗೊತ್ತಾಗಿಲ್ಲ. ಆದರೆ, ಹೆಚ್ಚಿನವರ ಬಳಿ ಪಿಸ್ತೂಲ್ ಗನ್​ಗಳಿದ್ದವು. ಒಬ್ಬನ ಬಳಿ ಎಕೆ-47 ರೈಫಲ್ ಕೂಡ ಇತ್ತು. ಇವರು ಬಾರ್​ಗೆ ನುಗ್ಗಿ, ವಿನಾಕಾರಣ ಕಂಡ ಕಂಡವರ ಮೇಲೆ ಗುಂಡಿನ ದಾಳಿ ಎಸಗಿರುವುದು ಗೊತ್ತಾಗಿದೆ.

ಈ ಆಗಂತುಕ ದಾಳಿಕೋರರು ತಮ್ಮ ಗುಂಡೇಟಿನಿಂದ ಸತ್ತಾದ ಜನರಿಂದ ಸೆಲ್ ಫೋನ್ ಇತ್ಯಾದಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಕಾರಣಕ್ಕೆ, ದಾಳಿಕೋರರು ಕ್ರಿಮಿನಲ್​ಗಳಾಗಿದ್ದಿರಬಹುದು, ಇದು ಪೂರ್ಣ ಅಪರಾಧ ಕೃತ್ಯವಾಗಿದೆ ಎಂಬುದು ಪೊಲೀಸರ ಆರಂಭಿಕ ಸಂದೇಹವಾಗಿದೆ.

ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

ಇದೇ ಡಿಸೆಂಬರ್ 6ರಂದು ಸೌತ್ ಆಫ್ರಿಕಾದ ಪ್ರಿಟೋರಿಯಾ ನಗರದ ಬಳಿಯೂ ಪಬ್​ವೊಂದರ ಮೇಲೆ ಕ್ರಿಮಿನಲ್​ಗಳು ದಾಳಿ ಎಸಗಿ ಹಲವರನ್ನು ಬಲಿಪಡೆದಿದ್ದರು. ಆವತ್ತಿನ ದಾಳಿಯಲ್ಲಿ ಮೂವರು ಮಕ್ಕಳೂ ಬಲಿಯಾಗಿದ್ದರು. ಅವರಲ್ಲಿ ಮೂರು ವರ್ಷದ ಮಗುವೂ ಸೇರಿದೆ. ವಲಸೆ ಕಾರ್ಮಿಕರ ಹಾಸ್ಟೆಲ್​ನೊಳಗೆ ಇದ್ದ ಪಬ್ ಮೇಲೆ ಆ ದಾಳಿಯಾಗಿತ್ತು.

ಆಫ್ರಿಕಾ ಖಂಡದಲ್ಲೇ ಹೆಚ್ಚು ಮುಂದುವರಿದ ದೇಶವಾಗಿರುವ ಸೌತ್ ಆಫ್ರಿಕಾದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಶೆಡ್‌, ಶೀಟ್‌ ಮನೆಗಳು ನೆಲಸಮ: ಸಿಡಿದೆದ್ದ ಸ್ಥಳೀಯರು

ಬೆಂಗಳೂರು, (ಡಿಸೆಂಬರ್ 21) : ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 150ಕ್ಕೂ ಅಧಿಕ ಶೆಡ್‌ ಹಾಗೂ ಶೀಟ್‌ ಮನೆಗಳನ್ನು ಶನಿವಾರ ತೆರವುಗೊಳಿಸಲಾಗಿದೆ.ಹೌದು.. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಕೋಗಿಲು 14.36 ಎಕರೆ ಜಮೀನಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಅನಿಮಲ್ ಇನ್ಸಿನರೇಷನ್, ಎಳನೀರು ಬುರುಡೆ ಸಂಸ್ಕರಣಾ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿತ್ತು. ಈ ಪ್ರದೇಶದಲ್ಲಿ ಸುಮಾರು 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ತಾತ್ಕಾಲಿಕ 150 ಕ್ಕೂ ಹೆಚ್ಚು ಶೆಡ್, ಮನೆಗಳನ್ನು 9 ಟ್ರ್ಯಾಕ್ಟರ್, 9 ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಲಾಗಿದೆ.

ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಯಾವುದೇ ನೋಟಿಸ್ ನೀಡಿದ ಏಕಾಏಕಿ ಬಂದು ಮನೆ ಕೆಡವಿದ್ದಾರೆ ಎಂದು ಆಕ್ರೋಶಗೊಂಡಿದ್ದು, ಇಂದು (ಡಿಸೆಂಬರ್ 21) ಸಹಕಾರ ನಗರ ಬಳಿ ಇರುವ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮನೆ ಕಳೆದುಕೊಂಡ ನಿವಾಸಿಗಳಿಂದ ಸ್ಥಳೀಯ ಕೃಷ್ಣಬೈರೇಗೌಡ ಮನೆ ಬಳಿ ಜಮಾಯಿಸಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಣ ಮಾಡಲು ಪೊಲೀಸರ ಹರಸಾಹಸಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಆಹಾರಗಳನ್ನು ಸೇವನೆ ಮಾಡುವುದರಿಂದ ಸುಲಭವಾಗಿ ಒತ್ತಡದಿಂದ ಮುಕ್ತಿ ಪಡೆಯಬಹುದು – Kannada News | Foods to eat to relieve stress

ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಒತ್ತಡದ (stress) ಜೀವನವನ್ನು ನಡೆಸುತ್ತಿದ್ದಾರೆ. ಕೆಲಸ, ವೈಯಕ್ತಿಕ ಚಿಂತೆ, ಕುಟುಂಬದ ಜವಾಬ್ದಾರಿ ಮಾತ್ರವಲ್ಲ ಜೀವನಶೈಲಿ, ಆಹಾರ ಪದ್ಧತಿಗಳು ನಮ್ಮನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುತ್ತವೆ. ಈ ಒತ್ತಡದ ಕಾರಣದಿಂದ ಖುಷಿ ಖುಷಿಯಿಂದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಈ ಅತಿಯಾದ ಒತ್ತಡ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಒತ್ತಡದಿಂದ ಮುಕ್ತಿ ಪಡೆದು, ನೆಮ್ಮದಿಯ ಜೀವನ ನಡೆಸಲು ಇಂದಿನಿಂದಲೇ ಈ ಕೆಲವು ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಆ ಆಹಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಒತ್ತಡದಿಂದ ಮುಕ್ತಿ ಪಡೆಯಲು ನೀವು ಸೇವನೆ ಮಾಡಬೇಕಾದ ಆಹಾರಗಳಿವು:

ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದರಲ್ಲಿ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳು ಸಹ ಇರುತ್ತವೆ. ಹೆಚ್ಚು ಡಾರ್ಕ್ ಚಾಕೊಲೇಟ್ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಹಾಗಾಗಿ ಇದನ್ನು ಮಿತವಾಗಿ ಸೇವಿಸಿ.

ಬಾಳೆಹಣ್ಣು: ಬಾಳೆಹಣ್ಣುಗಳು ಸುಲಭವಾಗಿ ಜೀರ್ಣವಾಗುವ ಹಣ್ಣು. ಅಲ್ಲದೆ ಅವು ವಿಟಮಿನ್ ಬಿ6, ಪೊಟ್ಯಾಸಿಯಮ್ ಮತ್ತು ಟ್ರಿಪ್ಟೊಫಾನ್ ಅಂಶವನ್ನು ಒಳಗೊಂಡಿರುತ್ತವೆ, ಇದು ಮನಸ್ಸನ್ನು ಶಾಂತಗೊಳಿಸಲು, ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಬಾಳೆಹಣ್ಣನ್ನು ಸಹ ಸೇವನೆ ಮಾಡಬಹುದು.

ಬಾದಾಮಿ ಮತ್ತು ವಾಲ್ನಟ್ಸ್: ನಟ್ಸ್‌ಗಳು ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಅವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಾಲ್ನಟ್ಸ್ ಮಾನಸಿಕ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ. ಹಾಗಾಗಿ ನೀವು ಪ್ರತಿನಿತ್ಯ ಬೆಳಗ್ಗೆ ಬಾದಾಮಿ, ವಾಲ್ನಟ್‌ ಸೇವನೆ ಮಾಡಿ.

ಬೆರ್ರಿ  ಹಣ್ಣು: ಬೆರ್ರಿ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣು. ಅವು ದೇಹವನ್ನು ಒತ್ತಡಗಳಿಂದ ರಕ್ಷಿಸುತ್ತವೆ, ಸಂತೋಷದ ಹಾರ್ಮೋನುಗಳನ್ನು ಸಹ ಬಿಡುಗಡೆ ಮಾಡುತ್ತವೆ. ಆದ್ದರಿಂದ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡಿ.

ಇದನ್ನೂ ಓದಿ: ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ನಾಲ್ಕು ಕೆಲಸಗಳನ್ನು ಮಾಡಿ

ಸಿಹಿ ಗೆಣಸು: ಸಿಹಿ ಗೆಣಸಿನಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಇದ್ದು, ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ: ಗ್ರೀನ್‌ ಟೀ ಎಲ್-ಥಿಯಾನೈನ್ ಎಂಬ ವಿಶಿಷ್ಟ ಸಂಯುಕ್ತವನ್ನು ಹೊಂದಿರುತ್ತದೆ. ಇದು ಮನಸ್ಸನ್ನು ವಿಶ್ರಾಂತಿಗೊಳಿಸಲು ಮತ್ತು ಒತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ಕೆಫೀನ್ ಕೂಡ ಕಡಿಮೆ ಇದ್ದು, ಇದು ನಿಮಗೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುದೀಪ್ ಎಚ್ಚರಿಕೆ ಕೊಟ್ಟಿದ್ದು ಯಾರಿಕೆ ಮತ್ತು ಏಕೆ? – Kannada News | Did Sudeep warns Darshan fans in Hubli program

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಬೆಂಗಳೂರು, ಚೆನ್ನೈ ಇನ್ನೂ ಕೆಲವೆಡೆ ಪ್ರಚಾರ ಮುಗಿಸಿರುವ ಸುದೀಪ್ ನಿನ್ನೆ ಹುಬ್ಭಳ್ಳಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದರು. ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ಸಿನಿಮಾ ತಂಡವನ್ನು ಕೊಂಡಾಡುವ ಜೊತೆಗೆ ಕೆಲವರಿಗೆ ಎಚ್ಚರಿಕೆ ಸಹ ನೀಡಿದರು. ನಾವು ಸಿನಿಮಾ ಬಿಡುಗಡೆ ಮಾಡುವ ಜೊತೆಗೆ ಯುದ್ಧವೊಂದನ್ನು ಸಹ ಮಾಡಬೇಕಿದೆ, ಹೊರಗೆ ಪಡೆ ಒಂದು ಯುದ್ಧಕ್ಕೆ ರೆಡಿ ಆಗುತ್ತಿದೆ. ನಾನು ಮಾತನಾಡಬಾರದು ಎಂದು ಸುಮ್ಮನಿದ್ದೆ, ಆದರೆ ಕೆರಳಿಸಿದರೆ ಸುಮ್ಮನಿರಲ್ಲ’ ಎಂದಿದ್ದಾರೆ.

ಸುದೀಪ್ ಅವರ ಈ ಮಾತುಗಳು ಸಖತ್ ವೈರಲ್ ಆಗಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸುದೀಪ್ ಅವರ ಈ ಮಾತುಗಳಿಗೆ ಅರ್ಥ ಕಲ್ಪಿಸುತ್ತಿದ್ದಾರೆ. ಸುದೀಪ್ ಅವರು ‘45’ ಸಿನಿಮಾದ ಕುರಿತು ಮಾತನಾಡಿದ್ದಾರೆ ಎಂದು ಸಹ ಕೆಲವರು ಹೇಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣ ಗಮನಿಸಿದರೆ ಸುದೀಪ್ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬ ಸುಳಿವು ಸಿಗುತ್ತದೆ.

‘ಮಾರ್ಕ್’ ಸಿನಿಮಾದ ಪ್ರಚಾರ ಆರಂಭವಾದಾಗಿನಿಂದಲೂ ದರ್ಶನ್ ಅಭಿಮಾನಿಗಳು ಸಿನಿಮಾದ ವಿರುದ್ಧ ಕಿತಾಪತಿ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ‘ಮಾರ್ಕ್’ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ, ‘ಕಾವೇರಿ ತಮಿಳಿಗೆ ಸೇರಬೇಕು’ ಎಂದು ಹೇಳಿದ್ದಾರೆಂದು ನಕಲಿ ಪೋಸ್ಟ್ ತಯಾರಿಸಿ ಹಂಚಿಕೊಂಡು ಸುಳ್ಳು ಸುದ್ದಿ ಹಬ್ಬುವ ಯತ್ನ ಮಾಡಿದ್ದರು. ‘ಡೆವಿಲ್’ ಸಿನಿಮಾದ ಒಂಬತ್ತು ಸಾವಿರ ಪೈರಸಿ ಲಿಂಕ್​​ಗಳನ್ನು ತೆಗೆದು ಹಾಕಿದ್ದೇವೆ, ಈಗ ನಿಮಗೂ ನಾವು ಇದೇ ರೀತಿ ಮಾಡಲಿದ್ದೇವೆ ಎನ್ನುವ ಮೂಲಕ ಪೈರಸಿ ಮಾಡುವ ಬೆದರಿಕೆ ಹಾಕಿದ್ದರು. ಬುಕ್​​ಮೈ ಶೋನಲ್ಲಿ ಸಹ ರೇಟಿಂಗ್ ಕಡಿಮೆ ಮಾಡುವ ಪ್ರಯತ್ನವೂ ನಡೆದಿತ್ತು.

ಇದನ್ನೂ ಓದಿ:ಸುದೀಪ್ ಎದುರೇ ಧ್ರುವಂತ್​​ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ

ಇದೆಲ್ಲವನ್ನೂ ಗಮನಿಸಿದ ಸುದೀಪ್ ಅವರು ಬಹುಷಃ ಹುಬ್ಬಳ್ಳಿಯಲ್ಲಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಸುದೀಪ್ ಅವರ ಮಾತುಗಳನ್ನೇ ಇರಿಸಿಕೊಂಡು ದರ್ಶನ್ ಅಭಿಮಾನಿಗಳು ಇದೀಗ ಇನ್ನಷ್ಟು ನೆಗೆಟಿವ್ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ‘ಮಾರ್ಕ್’ ಸಿನಿಮಾಕ್ಕೆ ಹಾನಿ ಮಾಡಿಯೇ ಸಿದ್ಧ ಎಂದು ಕೆಲವು ಕಿಡಿಗೇಡಿ ದರ್ಶನ್ ಅಭಿಮಾನಿಗಳು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ.

Darshan

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳು 11 ರಂದು ಬಿಡುಗಡೆ ಆಗಿತ್ತು. ಮೊದಲ ದಿನ ಉತ್ತಮ ಗಳಿಕೆ ಮಾಡಿದ ‘ಡೆವಿಲ್’ ಆ ನಂತರ ತುಸು ಮಂಕಾಯ್ತು. ಇದೀಗ ಡಿಸೆಂಬರ್ 25ರಂದು ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬುದ್ಧಿಮಾಂದ್ಯ ಮಕ್ಕಳಿಗೆ ಟಾರ್ಚರ್ ಕೊಟ್ಟ ದಂಪತಿ ಅರೆಸ್ಟ್; ಲೈಸನ್ಸ್ ಇಲ್ಲದೆ ಶಾಲೆ ನಡೆಸಿದ್ದ ಶಿಕ್ಷಕರು – Kannada News | Bagalkote: Mentally Challenged Student Assaulted, Divya Jyothi School Teacher Couple arrested

ಬುದ್ದಿಮಾಂದ್ಯ ಮಕ್ಕಳಿಗೆ ಟಾರ್ಚರ್ ಕೊಟ್ಟ ದಂಪತಿ ಅಂದರ್

ಬಾಗಲಕೋಟೆ, ಡಿಸೆಂಬರ್ 21: ಬಾಗಲಕೋಟೆ ನವನಗರದ 54ನೇ ಸೆಕ್ಟರ್​​ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ (Mentally Challenged Student Assaulted) ಬಾಲಕನ ಮೇಲೆ ಶಿಕ್ಷಕ ದಂಪತಿ ಹಲ್ಲೆ ನಡೆಸಿದ ಘಟನೆ ಎಲ್ಲೆಡೆ ಆಕ್ರೋಶ ಹುಟ್ಟಿಹಾಕಿತ್ತು. ದೀಪಕ್ ರಾಠೋಡ್​​(16) ಎಂಬ ಹುಡುಗನ ಮೇಲೆ ಅಕ್ಷಯ್ ಇಂಗಳಕರ್ ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದರೆ, ಅವರ ​​ಪತ್ನಿ ಆನಂದಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯವೆಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನ ಬಂಧಿಸಿರುವ ಪೊಲೀಸರು, ಸಹ ಶಿಕ್ಷಕರರಾದ ವಿಠಲ್‌ ಮತ್ತು ವಿಶಾಲ್‌ನನ್ನೂ ವಶಕ್ಕೆ ಪಡೆದಿದ್ದಾರೆ.

ದಂಪತಿ ಮೇಲೆ FIR

ಬುದ್ಧಿಮಾಂದ್ಯ ಮಕ್ಕಳ ಮೇಲೆ ಹಿಂಸೆ ನಡೆಸಿ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆ ದಿವ್ಯಜ್ಯೋತಿ ಬುದ್ಧಿಮಾಂದ್ಯ ರೆಸಿಡೆನ್ಶಿಯಲ್ ಸ್ಕೂಲ್ ಫಾರ್ ಮೆಂಟಲ್ ಚಾಲೆಂಜ್ಡ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನವನಗರ ಪೊಲೀಸ್ ಠಾಣೆಯಲ್ಲಿ ಅಕ್ಷಯ ಹಿಂದೂಲಕರ್, ರವಿಕಾಂತ ಬೂದಿಹಾಳ, ಅಕ್ಷಯ ಪತ್ನಿ ಆನಂದಿ ಹಿಂದೂಲಕರ್ ಹಾಗೂ ವಿಶಾಲ ಬಾಬುರಾವ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಹಲ್ಲೆಗೆ ಒಳಗಾದ ಬುದ್ಧಿಮಾಂದ್ಯ ಬಾಲಕ ದೀಪಕ್ ಅಶೋಕ ರಾಠೋಡನ ತಂದೆ ಅಶೋಕ ರಾಠೋಡ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ-2023, ಜೆಜೆ ಕಾಯ್ದೆ, ಆರ್‌ಪಿಡಬ್ಲ್ಯುಡಿ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಮೂರು ತಿಂಗಳ ಹಿಂದೆ ನಡೆದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಡಿವೈಎಸ್‌ಪಿ ಗಜಾನನ ಸುತಾರ್ ನೇತೃತ್ವದಲ್ಲಿ ಸ್ಥಳ ಮಹಜರು ಹಾಗೂ ಹಲ್ಲೆಗೆ ಬಳಸಿದ ಸಾಮಗ್ರಿಗಳ ಸೀಜ್ ಕಾರ್ಯ ಕೈಗೊಳ್ಳಲು ಕ್ರಮವಹಿಸಿದ್ದಾರೆ. ಆರೋಪಿಗಳನ್ನು ವಸತಿ ಶಾಲೆಗೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ.

ಪರವಾನಗಿ ಇಲ್ಲದೆ ವಸತಿಶಾಲೆ ನಡೆಸುತ್ತಿದ್ದ ದಂಪತಿ

ಈ ಹೇಯ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಲೆಗೆ ವಿಕಲಚೇತನ ಕಲ್ಯಾಣಾಧಿಕಾರಿ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿದ್ದಾರೆ.ಈ ವೇಳೆ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ‌ನಡೆಸಲು ಪರವಾನಗಿ ಪಡೆದಿಲ್ಲವೆಂಬುದು ಗೊತ್ತಾಗಿದೆ. ಶಾಲೆಯಲ್ಲಿ 40 ಮಕ್ಕಳಿದ್ದು ಸದ್ಯ ಎಲ್ರನ್ನೂ ಬಾಲಮಂದಿರಕ್ಕೆ ಶಿಫ್ಟ್‌ ಮಾಡಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ

ತಕ್ಷಣವೇ ವಸತಿ ಶಾಲೆ ಮುಚ್ಚಿ- ಲಕ್ಷ್ಮೀ ಹೆಬ್ಬಾಳ್ಕರ್

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದು ಅತ್ಯಂತ ಅಮಾನವೀಯ ಹಾಗೂ ಸಮಾಜಕ್ಕೆ ಕಳಂಕ ತರುವ ಘಟನೆ ಎಂದು ಹೇಳಿದ್ದಾರೆ. ಸರ್ಕಾರದ ಅನುಮತಿ ಇಲ್ಲದೇ ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದ್ದು, ತಕ್ಷಣವೇ ವಸತಿ ಶಾಲೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಕ್ಕಳ ರಕ್ಷಣಾ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಪೋಷಕರ ಅನುಮತಿ ಮೇರೆಗೆ ಮಕ್ಕಳನ್ನು ಸರ್ಕಾರಿ ಅನುದಾನಿತ ರಕ್ಷಣಾ ನಿಲಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಕ್ಕಳನ್ನು ಕರೆದೊಯ್ದ ಪೋಷಕರು

ಶಿಕ್ಷಕ ದಂಪತಿಗಳ ರಾಕ್ಷಸಿ ಕೃತ್ಯ ಬಹಿರಂಗವಾಗುತ್ತಿದ್ದಂತೆ ಶಾಲೆಯಲ್ಲಿದ್ದ ಇತರೆ ಬುದ್ಧಿಮಾಂದ್ಯ ಮಕ್ಕಳ ಪೋಷಕರು ವಿವಿಧ ಊರುಗಳಿಂದ ಆಗಮಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಒಟ್ಟು 32 ಮಕ್ಕಳಿರುವ ಈ ವಸತಿ ಶಾಲೆಯಿಂದ ಈವರೆಗೆ 11 ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗಿದೆ. ಶಾಲೆ ಎದುರು ಜಮಾಯಿಸಿದ ಪೋಷಕರು ಕಣ್ಣೀರು ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:47 pm, Sun, 21 December 25

Source link

ಮಹಾರಾಷ್ಟ್ರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿಗೆ ಅಮೋಘ ಮುನ್ನಡೆ – Kannada News | BJP led Mahayuti win big in Maharashtra local bodies elections

ಮುಂಬೈ, ಡಿಸೆಂಬರ್ 21: ಮಹಾರಾಷ್ಟ್ರದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಪಡೆದಿದೆ. ಒಟ್ಟು 246 ನಗರ ಪಾಲಿಕೆ ಹಾಗೂ 42 ನಗರ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ (Maharashtra Urban Local Bodies Elections) ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿವೆ. ಮಹಾಯುತಿ ಮೈತ್ರಿಕೂಟ (Mahayuti) 214 ಸ್ಥಳೀಯ ಸಂಸ್ಥೆಗಳಲ್ಲಿ ಮುನ್ನಡೆ ಹೊಂದಿದೆ. ವಿಪಕ್ಷಗಳ ಕೂಟವಾದ ಮಹಾ ವಿಕಾಸ್ ಆಘಾಡಿ (MVA) ಮುನ್ನಡೆ ಹೊಂದಿರುವುದು ಕೇವಲ 52 ಸ್ಥಳೀಯ ಸಂಸ್ಥೆಗಳಲ್ಲಿ.

ವಿವಿಧ ನಗರ ಸಂಸ್ಥೆಗಳಲ್ಲಿನ 6,859 ಕ್ಷೇತ್ರಗಳಿಗೆ ಡಿಸೆಂಬರ್ 2 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಇವತ್ತು ಮತ ಎಣಿಕೆ ನಡೆಯುತ್ತಿದ್ದು ಆರಂಭದಿಂದಲೂ ಬಿಜೆಪಿ ನೇತೃತ್ವದ ಮೈತ್ರಿಕೂಟ ಹೆಚ್ಚು ಮುನ್ನಡೆ ಕಾಯ್ದುಕೊಂಡಿದೆ. 6,859 ಸ್ಥಾನಗಳ ಪೈಕಿ 3,120 ಕ್ಷೇತ್ರಗಳಲ್ಲಿ ಬಿಜೆಪಿಯೊಂದೇ ಮುನ್ನಡೆಯಲ್ಲಿದೆ. ಅದರ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಎನ್​ಸಿಪಿ ಕ್ರಮವಾಗಿ 600 ಮತ್ತು 200 ಸ್ಥಾನಗಳಲ್ಲಿ ಮುನ್ನಡೆ ಹೊಂದಿವೆ. ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮಹಾಯುತಿ ಮೇಲುಗೈ ಸಾಧಿಸಿದೆ.

ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

ಇನ್ನು, ವಿಪಕ್ಷಗಳಾದ ಶಿವಸೇನಾ (ಉದ್ಭವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್​ಸಿಪಿ (ಶರದ್ ಪವಾರ್ ಬಣ) ಕ್ರಮವಾಗಿ 145, 105 ಮತ್ತು 122 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಗಿವೆ.

2024ರ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮಹಾಯುತಿಯ ಸರ್ಕಾರವು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದಕ್ಕೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ

ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಉದ್ಭವಿಸಿದೆ ಎಂಬುದು, ಹಾಗೂ ಮಹಿಳೆಯರು ಮತ್ತು ರೈತರ ಕಲ್ಯಾಣ ಯೋಜನೆಗಳಿಗೆ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಸಹಾಯ ಧನ ಬಿಡುಗಡೆ ಆಗುತ್ತಿಲ್ಲ ಎನ್ನುವ ಆರೋಪಗಳು ಸರ್ಕಾರದ ಜನಪ್ರಿಯತೆಯನ್ನು ಕುಂದಿಸಿರಬಹುದು ಎನ್ನುವ ಭಾವನೆ ಇತ್ತು. ವಿಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದವು. ಹೀಗಾಗಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಾ ವಿಕಾಸ್ ಆಘಾಡಿ ಪೂರಕ ಗೆಲುವನ್ನು ನಿರೀಕ್ಷಿಸಿತ್ತು. ಆದರೆ, ಈ ನಿರೀಕ್ಷೆ ಈಡೇರಿಲ್ಲ. ಮತದಾರರು ಮತ್ತೊಮ್ಮೆ ಮಯಾಯುತಿ ಕೈಹಿಡಿದಿರುವಂತೆ ಫಲಿತಾಂಶದ ಟ್ರೆಂಡ್ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆನೇಕಲ್ ಸರಣಿ ಅಪಘಾತ: 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ – Kannada News | Anekal Container Truck Serial Accident: Drunk Driver Hits more than 20 Vehicles

ಆನೇಕಲ್, ಡಿಸೆಂಬರ್ 21: ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಪೊಲೀಸರಿಂದ 14 ಕಿಮೀ ತಪ್ಪಿಸಿಕೊಂಡು ಹೋದ ಲಾರಿ ಚಾಲಕ, ಚಂದಾಪುರದಲ್ಲಿ ಸಾರ್ವಜನಿಕ ಕೈಗೆ ಸಿಕ್ಕಿಬಿದಿದ್ದಾನೆ. ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version