ಜೈಲಿಗೆ ತೆರಳಿ ಫ್ಯಾನ್ಸ್ ವಾರ್ ಬಗ್ಗೆ ದರ್ಶನ್​​ಗೆ ಮಾಹಿತಿ ನೀಡಿದ ವಿಜಯಲಕ್ಷ್ಮಿ: ದಾಸನ ರಿಯಾಕ್ಷನ್ ಏನು? – Kannada News | Vijayalakshmi Darshan talks with husband about fans war after Kichcha Sudeep Hubballi statement

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಿಜಯಲಕ್ಷ್ಮಿ (Vijayalakshmi Darshan) ಭೇಟಿ ಮಾಡಿ ಬಂದಿದ್ದಾರೆ. ಹುಬ್ಬಳಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ನೀಡಿದ ಹೇಳಿಕೆ ಬಳಿಕ ಶುರು ಆಗಿರುವ ಫ್ಯಾನ್ಸ್ ವಾರ್ ಕುರಿತು ದರ್ಶನ್ ಅವರಿಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸಹೋದರ ದಿನಕರ್ ತೂಗುದೀಪ ಕೂಡ ಜೊತೆಗಿದ್ದರು. ಜೈಲಿಗೆ ಭೇಟಿ ನೀಡಿ ಬಂದ ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಖುಷಿಯಿಂದ ಪೋಸ್ಟ್ ಮಾಡಿದ್ದಾರೆ. ದಚ್ಚು-ಕಿಚ್ಚ ಫ್ಯಾನ್ಸ್ ವಾರ್ ನಡುವೆ ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ.

ಮಂಗಳವಾರ (ಡಿಸೆಂಬರ್ 23) ಮಧ್ಯಾಹ್ನ 3.50ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ ಮತ್ತು ದಿನಕರ್ ತೂಗುದೀಪ ಅವರು ದರ್ಶನ್ ಭೇಟಿ ಮಾಡಿ ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ವಾರ್ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಸಿನಿಮಾ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ‘ಯುದ್ದಕ್ಕೆ ಸಿದ್ಧ’ ಎಂಬ ಹೇಳಿಕೆ ನೀಡಿದ ನಂತರ ಶುರುವಾದ ಫ್ಯಾನ್ಸ್ ವಾರ್ ಸೇರಿದಂತೆ ಹೊರಗಡೆ ಸದ್ಯಕ್ಕೆ ಇರುವ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ. ಆದರೆ ನಟ ದರ್ಶನ್ ಅವರು, ‘ಯಾವುದಕ್ಕೂ ಹೆಚ್ಚು ತಲೆ ಕೆಸಿಕೊಳ್ಳಬೇಡಿ. ನಮಗೂ ಒಳ್ಳೆಯ ಸಮಯ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು’ ಎಂದು ಶಾಂತವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.

‘ದಿ ಡೆವಿಲ್’ ಸಿನಿಮಾದ ಬಗ್ಗೆ ದರ್ಶನ್ ಅವರು ಅಪ್ಡೇಟ್ ಕೇಳಿದ್ದಾರೆ. ಸಿನಿಮಾ ಕಲೆಕ್ಷನ್‌ ಸೇರಿದಂತೆ ಫ್ಯಾನ್ಸ್ ಸಪೋರ್ಟ್ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗುದೀಪ ತಿಳಿಸಿದ್ದಾರೆ ಎನ್ನಲಾಗಿದೆ. ಪತಿ ಭೇಟಿ ಮಾಡಿ ಕೆಲ ಹೊತ್ತಿನಲ್ಲಿಯೇ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ ಭೇಟಿ ಬಳಿಕ ಮನಸ್ಸಿನ ದುಗುಡ ದೂರವಾಗಿ ಸಂತೋಷವಾಗಿರುವ ರೀತಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್

ಒಟ್ಟಿನಲ್ಲಿ ಹುಬ್ಬಳ್ಳಿಯ ಯುದ್ದಕ್ಕೆ ಸಿದ್ದ ಎಂಬ ಸಂದೇಶಕ್ಕೆ ಕಿಚ್ಚ ಸುದೀಪ್ ಸ್ಪಷ್ಟನೆ ನಡುವೆ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ದಚ್ಚು-ಕಿಚ್ಚನ ಫ್ಯಾನ್ಸ್ ವಾರ್​ಗೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ. ಡಿಸೆಂಬರ್ 25ರಂದು ಸುದೀಪ್ ಅವರ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಲಿದೆ. ಎಂದು ಫ್ಯಾನ್ಸ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಕೂಡ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:33 pm, Tue, 23 December 25

Source link

Ashes 2025: ಸತತ ಆರು ದಿನ ಮದ್ಯ ಸೇವನೆ; ಇಂಗ್ಲೆಂಡ್‌ ಆಟಗಾರರ ವಿರುದ್ಧ ತನಿಖೆಗೆ ಆದೇಶ – Kannada News | Ashes Debacle: England Cricket Team’s 6 Day Alcohol Binge Allegations

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ (England vs Australia) ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಆಶಸ್ (Ashes) ಸರಣಿ ಇದುವರೆಗೆ ಏಕಪಕ್ಷೀಯವಾಗಿ ನಡೆದಿದೆ. ನಡೆದಿರುವ 3 ಪಂದ್ಯಗಳಲ್ಲೂ ಆತಿಥೇಯ ಆಸ್ಟ್ರೇಲಿಯಾವೇ ಜಯದ ನಗೆ ಬೀರಿದೆ. ಇತ್ತ ಈ ಪ್ರವಾಸದಲ್ಲಾದರೂ ಆಸ್ಟ್ರೇಲಿಯಾವನ್ನು ಮಣಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್‌ ಸೋತು ಸುಣ್ಣವಾಗಿದೆ. ಈ ರೀತಿಯ ಅವಮಾನಕರ ಸೋಲಿನ ನಡುವೆಯೂ ಇಂಗ್ಲೆಂಡ್‌ ಆಟಗಾರರ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ಕಾಂಗರೂಗಳ ನಾಡಲ್ಲಿ ಆಂಗ್ಲ ಆಟಗಾರರು ಸತತ 6 ದಿನ ಮದ್ಯ ಸೇವನೆ ಮಾಡಿದ ಆರೋಪ ಕೇಳಿಬಂದಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ತನಿಖೆಗೆ ಆದೇಶಿಸಿದೆ.

6 ದಿನಗಳ ಕಾಲ ಮದ್ಯ ಸೇವನೆ

ಗಬ್ಬಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸೋತ ನಂತರ ಇಂಗ್ಲೆಂಡ್ ತಂಡವು ಸತತ ಆರು ದಿನಗಳ ಕಾಲ ಮದ್ಯ ಸೇವಿಸಿದೆ ಎಂದು ವರದಿಯಾಗಿದೆ. ಈ 6 ದಿನಗಳಲ್ಲಿ ಮೊದಲ 4 ದಿನಗಳನ್ನು ನೂಸಾ ಎಂಬ ಸಣ್ಣ ಪಟ್ಟಣದಲ್ಲಿ ಕಳೆದಿದ್ದ ಇಂಗ್ಲೆಂಡ್‌ ತಂಡ, ಅಲ್ಲಿ ಪಾರ್ಟಿ ಮಾಡಿರುವುದಾಗಿ ವರದಿಯಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವುದಾಗಿ ಇಂಗ್ಲಿಷ್ ತಂಡದ ನಿರ್ದೇಶಕ ರಾಬ್ ಕೀ ಹೇಳಿದ್ದಾರೆ.

ಆಟಗಾರರ ಪರ ಬ್ಯಾಟ್ ಬೀಸಿದ ರಾಬ್ ಕೀ

ಆಟಗಾರರು ಮದ್ಯ ಸೇವಿಸಿರುವ ಆರೋಪದ ಬಗ್ಗೆ ಮಾತನಾಡಿರುವ ತಂಡದ ನಿರ್ದೇಶತಕ ರಾಬ್ ಕೀ, ‘ಆಟಗಾರರು ತಮ್ಮ ಮಿತಿಯೊಳಗೆ ಇರಬೇಕೆಂದು ತಾನು ಆಶಿಸುತ್ತೇನೆ. ಆದಾಗ್ಯೂ ತಂಡದ ಆಟಗಾರರು ನೂಸಾ ಪಟ್ಟಣಕ್ಕೆ ಹೋಗಿರಲಿಲ್ಲ. ಆದರೆ ನಮ್ಮ ಆಟಗಾರರು ಹೊರಗೆ ಹೋಗಿ ಅತಿಯಾಗಿ ಕುಡಿದಿದ್ದಾರೆಂದು ವರದಿಯಾಗಿರುವುದರಿಂದ ಈ ಬಗ್ಗೆ ಖಂಡಿತವಾಗಿಯೂ ತನಿಖೆ ನಡೆಸಲಾಗುವುದು. ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರು ಅತಿಯಾಗಿ ಕುಡಿಯುವುದು ಸೂಕ್ತವಲ್ಲ. ಆದ್ದರಿಂದ, ಈ ಆರೋಪದ ಬಗ್ಗೆ ತನಿಖೆ ಮಾಡದಿದ್ದರೆ ಅದು ತಪ್ಪಾಗಲಿದೆ.

ಕಳೆದ ಎರಡು ಮೂರು ದಿನಗಳಿಂದ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ನಿಜವಾಗಿದ್ದರೆ, ಅದು ಸ್ವೀಕಾರಾರ್ಹವಲ್ಲ. ನಾನು ಮದ್ಯಪಾನ ಮಾಡುವುದಿಲ್ಲ, ಆದರೆ ಕುಡಿಯುವ ಸಂಸ್ಕೃತಿ ಯಾರಿಗೂ ಸಹಾಯ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ. ಆಟಗಾರರು ಭೋಜನದ ಜೊತೆಗೆ ಒಂದು ಲೋಟ ವೈನ್ ಸೇವಿಸುವುದು ಸರಿ, ಆದರೆ ಅದಕ್ಕಿಂತ ಹೆಚ್ಚು ಕುಡಿಯುವುದು ಸರಿಯಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Tue, 23 December 25

Source link

ಮುಸ್ಲಿಂ ದೇಶದಲ್ಲಿ 4500 ವರ್ಷ ಪ್ರಾಚೀನ ಸೂರ್ಯ ದೇವಾಲಯ ಪತ್ತೆ; ಎಲ್ಲಿದೆ ಈ ದೇವಸ್ಥಾನ? – Kannada News | 4500 Year Old Ancient Sun Temple Discovered in Egypt Viral News

ನವದೆಹಲಿ, ಡಿಸೆಂಬರ್ 23: ಈಜಿಪ್ಟ್ ದೇಶದ ರಾಜಧಾನಿ ಕೈರೋ ಬಳಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನ ನಡೆದಿದ್ದು, ಇದು ಪ್ರಪಂಚದಾದ್ಯಂತದ ಇತಿಹಾಸಕಾರರು ಮತ್ತು ವಿಜ್ಞಾನಿಗಳ ಗಮನ ಸೆಳೆದಿದೆ. ಪುರಾತತ್ತ್ವಜ್ಞರು ಸೂರ್ಯ ದೇವರಿಗೆ ಮೀಸಲಾಗಿರುವ 4,500 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು (Temple) ಕಂಡುಹಿಡಿದಿದ್ದಾರೆ. ಐದನೇ ರಾಜವಂಶದ ಫೇರೋ ರಾಜ ನೆಸೆರೆ ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಜಂಟಿ ಇಟಾಲಿಯನ್ ಮತ್ತು ಪೋಲಿಷ್ ಪುರಾತತ್ತ್ವ ಶಾಸ್ತ್ರದ ಕಾರ್ಯಾಚರಣೆಯಿಂದ ಈ ಆವಿಷ್ಕಾರವನ್ನು ಮಾಡಲಾಗಿದೆ.

ಈಜಿಪ್ಟ್ ತನ್ನ ಪಿರಮಿಡ್‌ಗಳು, ಮಮ್ಮಿಗಳು ಮತ್ತು ಸಮಾಧಿಗಳಿಗೆ ಹೆಸರುವಾಸಿಯಾಗಿದೆ. ಆದರೆ, ಈ ಸೂರ್ಯ ದೇವಾಲಯದ ಆವಿಷ್ಕಾರವು ಪ್ರಾಚೀನ ಈಜಿಪ್ಟ್‌ನಲ್ಲಿ ಜೀವನ, ಶಕ್ತಿ ಮತ್ತು ಆಕಾಶ ಶಕ್ತಿಗಳು ಎಷ್ಟು ಆಳವಾಗಿ ಮುಖ್ಯವಾಗಿದ್ದವು ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಕಳವಳ; ಯುದ್ಧ ನಿಲ್ಲಿಸುವಂತೆ ಥೈಲ್ಯಾಂಡ್, ಕಾಂಬೋಡಿಯಾಕ್ಕೆ ಒತ್ತಾಯ

ತಜ್ಞರ ಪ್ರಕಾರ, ಈ ದೇವಾಲಯವು ಈಜಿಪ್ಟ್‌ನ ಐದನೇ ರಾಜವಂಶದ (ಕ್ರಿ.ಪೂ. 2465-2323) ಕಾಲದ್ದಾಗಿದೆ. ಇದನ್ನು ಕ್ರಿ.ಪೂ. 2420ರಿಂದ 2389ರವರೆಗೆ ಆಳಿದ ದೊರೆ ಫರೋ ನೆಸೆರೆ I ನಿರ್ಮಿಸಿದ್ದಾನೆಂದು ನಂಬಲಾಗಿದೆ. ಆ ಸಮಯದಲ್ಲಿ, ಸೂರ್ಯ ದೇವರು ರಾ ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಪರಿಗಣಿಸಲಾಗಿತ್ತು. ಅದಕ್ಕಾಗಿಯೇ ಸೂರ್ಯ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ಶಕ್ತಿ ಮತ್ತು ನ್ಯಾಯಸಮ್ಮತತೆಯ ಸಂಕೇತಗಳೂ ಆಗಿದ್ದವು. ಈ ಆವಿಷ್ಕಾರವು ರಾಜಕೀಯ, ಧರ್ಮ ಮತ್ತು ದೇವರುಗಳು ಹೆಣೆದುಕೊಂಡಿವೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸುತ್ತದೆ.

ಉತ್ಖನನದ ಸಮಯದಲ್ಲಿ ದೇವಾಲಯದ ಒಳಗೆ ಕಲ್ಲಿನ ಮೇಲೆ ಕೆತ್ತಿದ ಧಾರ್ಮಿಕ ಕ್ಯಾಲೆಂಡರ್ ಕೂಡ ಕಂಡುಬಂದಿದೆ. ಇದು ಸೋಕರ್, ಮಿನ್ ಮತ್ತು ರಾ ಜೊತೆ ಸಂಬಂಧಿಸಿದ ಹಬ್ಬಗಳನ್ನು ಉಲ್ಲೇಖಿಸುತ್ತದೆ. ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ದೇವಾಲಯದ ಛಾವಣಿಯನ್ನು ನಕ್ಷತ್ರಗಳು ಮತ್ತು ಗ್ರಹಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತಿತ್ತು. ಈ ಸೂರ್ಯ ದೇವಾಲಯವು ಕೇವಲ ಧಾರ್ಮಿಕ ಸ್ಥಳವಾಗಿರಲಿಲ್ಲ. ಇದು ಪ್ರಾಚೀನ ಈಜಿಪ್ಟ್‌ನಲ್ಲಿ ಖಗೋಳಶಾಸ್ತ್ರದ ಪ್ರಮುಖ ಕೇಂದ್ರವಾಗಿತ್ತು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಈಜಿಪ್ಟಿನವರು ಆಕಾಶ, ಸಮಯ ಮತ್ತು ಹವಾಮಾನದ ಬಗ್ಗೆಯೂ ತಿಳಿದಿದ್ದರು ಎಂಬುದು ಇದರರ್ಥ.

ಇದನ್ನೂ ಓದಿ: Video: ಚೀನಾದಲ್ಲಿ ಸುಮಾರು 1500 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಬೆಂಕಿ

ಈ ದೇವಾಲಯವು ಸುಮಾರು 10,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದರ ಭವ್ಯತೆಯು ಬಿಳಿ ಸುಣ್ಣದ ಕಲ್ಲಿನ ಕೆತ್ತನೆಗಳು, ಗ್ರಾನೈಟ್ ಸ್ತಂಭಗಳು, ಉದ್ದವಾದ ಕಾರಿಡಾರ್‌ಗಳು ಮತ್ತು ಛಾವಣಿಗೆ ಕರೆದೊಯ್ಯುವ ಮೆಟ್ಟಿಲುಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಾಚೀನ ಈಜಿಪ್ಟಿನ ಸೆನೆಟ್ಕಾ ಮಡಿಕೆಗಳು, ಬಿಯರ್ ಗ್ಲಾಸ್‌ಗಳು ಮತ್ತು ಮರದ ತುಣುಕುಗಳು ಸಹ ದೇವಾಲಯದಲ್ಲಿ ಕಂಡುಬಂದಿವೆ.

4,500 ವರ್ಷಗಳಷ್ಟು ಹಳೆಯದಾದ ಈ ಸೂರ್ಯ ದೇವಾಲಯವು ಈಜಿಪ್ಟ್ ಕೇವಲ ಸಮಾಧಿಗಳ ನಾಗರಿಕತೆ ಎಂಬ ಕಲ್ಪನೆಯನ್ನು ಪ್ರಶ್ನಿಸುತ್ತದೆ. ಪ್ರಾಚೀನ ಈಜಿಪ್ಟ್ ಜೀವನ, ಶಕ್ತಿ, ವಿಜ್ಞಾನ ಮತ್ತು ಬ್ರಹ್ಮಾಂಡದ ಆಳವಾದ ತಿಳುವಳಿಕೆಯನ್ನು ಹೊಂದಿರುವ ಹೆಚ್ಚು ಅಭಿವೃದ್ಧಿ ಹೊಂದಿದ ಸಂಸ್ಕೃತಿಯಾಗಿತ್ತು ಎಂಬುದನ್ನು ಈ ಆವಿಷ್ಕಾರವು ಬಹಿರಂಗಪಡಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಾಗಲಕೋಟೆ: ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ತಾಯಿ, ಮಗು ರಕ್ಷಣೆ – Kannada News | Krishna River Suicide Attempt: Mother and Child Rescued by 112 Police in Chikpadasalgi

ಬಾಗಲಕೋಟೆ, ಡಿಸೆಂಬರ್​ 23: ಎರಡು ವರ್ಷದ ಗಂಡು ಮಗುವಿನ ಸಮೇತ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ (Suicide Attempt) ತಾಯಿಯನ್ನು 112 ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ (Chikkapadasalagi) ಬ್ರಿಡ್ಜ್ ಬಳಿ ನಡೆದಿದೆ. ಸುರೇಖಾ ಭಜಂತ್ರಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ. ಸದ್ಯ ಮಹಿಳೆಯನ್ನು ಸಾವಳಗಿ ಠಾಣೆಗೆ  ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ನಡೆದಿದ್ದೇನು?

ಸುರೇಖಾ ಭಜಂತ್ರಿ ತಮ್ಮ ಎರಡು ವರ್ಷದ ಗಂಡು ಮಗುವಿನ ಸಮೇತ ಚಿಕ್ಕಪಡಸಲಗಿ ಕೃಷ್ಣಾ ನದಿ ಬ್ರಿಡ್ಜ್​ನಿಂದ ಹಾರಲು ಮುಂದಾಗಿದ್ದರು. ಈ ವೇಳೆ ಮಲ್ಲು ಕಲ್ಯಾಣಿ ಎಂಬ ಸ್ಥಳೀಯರು ಗಮನಿಸಿ 112 ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.

ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್​ನಿಂದಲೇ​​​ ನೀಚ ಕೃತ್ಯ

ಸದ್ಯ ಮಹಿಳೆ ವಿಚಾರಣೆ ನಡೆಸಿರುವ ಪೊಲೀಸರು ಗಂಡನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಠಾಣೆಗೆ ಬಂದ ಪತಿ ತಮ್ಮ ಪತ್ನಿ ಮತ್ತು ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಕುಟುಂಬ ಕಲಹದಿಂದ ಬೇಸತ್ತು ವ್ಯಕ್ತಿ ನೇಣಿಗೆ ಶರಣು

ಕುಟುಂಬ ಕಲಹದಿಂದ ಮಾನಸಿಕವಾಗಿ ಮನನೊಂದಿದ್ದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ಳಂ ಬೆಳಿಗ್ಗೆ ಬಿರಿಯಾನಿ ತಿನ್ನಲು ಹೋದವರಿಗೆ ಭರ್ಜರಿ ಶಾಕ್​​: ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ

ಪಟ್ಟಣದ ರೇಷ್ಮೆ ಹುರಿ ಘಟಕದ ಆವರಣದಲ್ಲಿ ಚಿಂತಾಮಣಿ ಮೂಲದ ಕಲ್ಯಾಣ್ ಕುಮಾರ್ ( 35 ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಕೆಲ ದಿನಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡು ಕೌಟುಂಬಿಕ ಕಲಹದಿಂದ ಮನನೊಂದಿದ್ದು ಮೂರು ದಿನಗಳ ಹಿಂದೆ ವಿಜಯಪುರಕ್ಕೆ ಬಂದು ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಶವವನ್ನ ಕಂಡ ಸ್ಥಳಿಯರು ವಿಜಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ವಿಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಸಾಲ ತೆಗೆದುಕೊಳ್ಳುವ, ನೀಡುವ ಮೊದಲು ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ – Kannada News | Chanakya Niti: Follow these tips from Chanakya before taking a loan

 

ಆಚಾರ್ಯ ಚಾಣಕ್ಯರು (Acharya Chanakya)  ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಹಣಕಾಸು, ಆರ್ಥಿಕ ವಿಷಯಗಳ ಬಗ್ಗೆಯೂ ಸಾಕಷ್ಟು ವಿಚಾರಗಳ ಹೇಳಿಕೊಟ್ಟಿದ್ದಾರೆ.  ಹೌದು ಹಣಕ್ಕೆ ಸಂಬಂಧಿಸಿದ ಯೋಜನೆಗಳು ಹೇಗಿರಬೇಕು? ಹಣವನ್ನು ಎಲ್ಲಿ ಖರ್ಚು ಮಾಡಬೇಕು? ಹಣವನ್ನು ಎಲ್ಲಿ ಖರ್ಚು ಮಾಡಬಾರದು? ಹಣವನ್ನು ಹೇಗೆ ಉಳಿಸುವುದು? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಸಾಲ ತೆಗೆದುಕೊಳ್ಳುವಾಗ ಮತ್ತು ಸಾಲ ಕೊಡುವಾಗ ಒಂದಷ್ಟು ವಿಚಾರಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು ಎಂದಿದ್ದಾರೆ. ಅದೇನೆಂಬುದರ ಸಂಪೂರ್ಣ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಸಾಲ ತೆಗೆದುಕೊಳ್ಳುವ ಮುನ್ನ ಯೋಚಿಸಿ:

ಸಾಲ ತೆಗೆದುಕೊಳ್ಳುವ ಮೊದಲು, ನಿಮ್ಮ ಅಗತ್ಯತೆಗಳು ಮತ್ತು ಸಾಮರ್ಥ್ಯಗಳನ್ನು ನಿರ್ಣಯಿಸುವುದು ಬಹಳ ಮುಖ್ಯ. ನಿಜವಾಗಿಯೂ ಸಾಲದ ಅಗತ್ಯವಿರುವವರು ಮತ್ತು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಸಾಮರ್ಥ್ಯವಿರುವವರು ಮಾತ್ರ ಸಾಲವನ್ನು ತೆಗೆದುಕೊಳ್ಳಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅತಿಯಾದ ಖರ್ಚು ಅಥವಾ ತೆಗೆದುಕೊಂಡ ಸಾಲವನ್ನು ತೀರಿಸದೆ ಇರುವುದು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಇದಲ್ಲದೆ, ಸಾಲವನ್ನು ತೆಗೆದುಕೊಳ್ಳುವ ಮೊದಲು ಸಾಲದ ಮೂಲವನ್ನು ಪರಿಗಣಿಸುವುದು ಮುಖ್ಯ. ವಿಶ್ವಾಸಾರ್ಹ ಮೂಲಗಳಿಂದ ಸಾಲವನ್ನು ತೆಗೆದುಕೊಳ್ಳಬೇಕು. ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ವಿಶ್ವಾಸಾರ್ಹ ಸ್ನೇಹಿತರಿಂದ ಸಾಲ ಪಡೆಯುವುದು ಯಾವಾಗಲೂ ಸುರಕ್ಷಿತವಾಗಿದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಜೀವನದಲ್ಲಿ ಹಣದ ಕೊರತೆ ಬರಬಾರದೆಂದರೆ ವಿಚಾರಗಳನ್ನು ಅನುಸರಿಸಿ

ಸಾಲ ನೀಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು:

ಹಣವನ್ನು ಸಾಲ ನೀಡುವ ಮೊದಲು, ಆ ವ್ಯಕ್ತಿಯು ವಿಶ್ವಾಸಾರ್ಹ ವ್ಯಕ್ತಿಯೇ ಮತ್ತು ಸಾಲವನ್ನು ಮರು ಪಾವತಿಸಲು ಸಮರ್ಥನೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾರೆ. ಹಣವನ್ನು ಸಾಲವಾಗಿ ನೀಡುವಾಗ  ಆತುರಪಡಬಾರದು, ಭಾವನೆಗಳಿಗೆ ಬಲಿಯಾಗಬಾರದು ಬದಲಿಗೆ ಯೋಚಿಸಬೇಕು ಮತ್ತು ವಿಶ್ವಾಸಾರ್ಹ ವ್ಯಕ್ತಿಗೆ ಮಾತ್ರ ಸಾಲವನ್ನು ನೀಡಬೇಕು. ಸರಿಯಾದ ಯೋಜನೆಗಳಿಲ್ಲದೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡುವುದು ಸಂಬಂಧಗಳು ಹಾಳಾಗಲು ಮತ್ತು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು. ಇದಲ್ಲದೆ ನೀವು ನೀಡಿದ  ಸಾಲಕ್ಕೆ ಲಿಖಿತ ದಾಖಲೆಗಳನ್ನು ಹೊಂದಿಸಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ  ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

google-site-verification: google357e77c267c33613.html

W,W,W,0,W,W.. ಒಂದೇ ಓವರ್​ನಲ್ಲಿ 5 ವಿಕೆಟ್ ಉರುಳಿಸಿದ 28 ವರ್ಷದ ವೇಗಿ – Kannada News | Gede Priandana’s T20I Record: Five Wickets in One Over and Hat trick

ಅಂತರರಾಷ್ಟ್ರೀಯ ಟಿ20 (International T20) ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಏಕೆಂದರೆ ನಾಲ್ಕು ಓವರ್‌ಗಳಲ್ಲಿ ಈ ಸಾಧನೆ ಮಾಡುವುದು ಅತ್ಯಂತ ಕಷ್ಟಕರ. ಹೀಗಿರುವಾಗ ಒಂದೇ ಓವರ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆಯುವುದು ಚುಟುಕು ಕ್ರಿಕೆಟ್​ನಲ್ಲಿ ಕಂಡುಬರುವುದು ತೀರ ವಿರಳ. ಅಂತಹದರಲ್ಲಿ ಇಂಡೋನೇಷ್ಯಾದ 28 ವರ್ಷದ ಬಲಗೈ ವೇಗದ ಬೌಲರ್ ಗೆಡೆ ಪ್ರಿಯಂದನ (Gede Priandana) ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ, ಇದರಲ್ಲಿ ಹ್ಯಾಟ್ರಿಕ್ ಕೂಡ ಸೇರಿದೆ.

ಒಂದೇ ಓವರ್‌ನಲ್ಲಿ 5 ವಿಕೆಟ್‌

ಇಂಡೋನೇಷ್ಯಾ ಪ್ರಸ್ತುತ ಕಾಂಬೋಡಿಯಾ ವಿರುದ್ಧ ಎಂಟು ಪಂದ್ಯಗಳ ಟಿ20ಐ ಸರಣಿಯನ್ನು ಆಡುತ್ತಿದೆ. ಡಿಸೆಂಬರ್ 23 ರಂದು ಬಾಲಿಯಲ್ಲಿ ನಡೆದ ಈ ಸರಣಿಯ ಮೊದಲ ಟಿ20ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕಾಂಬೋಡಿಯಾ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. ತಂಡದ ಪರ ಧರ್ಮ ಕೆಸ್ಮಾ 110 ರನ್‌ಗಳ ಇನ್ನಿಂಗ್ಸ್‌ ಆಡಿದರು. ಇದರಲ್ಲಿ ಎಂಟು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳು ಸೇರಿದ್ದವು.

ಹ್ಯಾಟ್ರಿಕ್ ಜೊತೆಗೆ 5 ವಿಕೆಟ್

ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಕಾಂಬೋಡಿಯಾ 16 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರಮುಖ ಕಾರಣ ಗೆಡೆ ಪ್ರಿಯಂದನ ಅವರ ಮಾರಕ ಬೌಲಿಂಗ್. ಗೆಡೆ ಪ್ರಿಯಂದನ ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಕಾಂಬೋಡಿಯಾ ತಂಡವನ್ನು ಕಾಡಿದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 168 ರನ್‌ಗಳನ್ನು ಬೆನ್ನಟ್ಟಿದ ಕಾಂಬೋಡಿಯಾ 15 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 106 ರನ್ ಗಳಿಸಿತ್ತು. ಹೀಗಾಗಿ ಪಂದ್ಯವು ನಿರ್ಣಾಯಕ ಹಂತದಲ್ಲಿತ್ತು. ನಂತರ ದಾಳಿಗಿಳಿದ ಪ್ರಿಯಂದನ ತಮ್ಮ ಮೊದಲ ಓವರ್‌ನಲ್ಲಿಯೇ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಮೂರು ಎಸೆತಗಳಲ್ಲಿ ಸತತ ವಿಕೆಟ್‌ಗಳನ್ನು ಪಡೆದು ಹ್ಯಾಟ್ರಿಕ್ ಪೂರ್ಣಗೊಳಿಸಿದರು. ನಂತರ 4ನೇ ಎಸೆತದಲ್ಲಿ ಯಾವುದೇ ರನ್ ಆಗಲಿ ಅಥವಾ ವಿಕೆಟ್ ಆಗಲಿ ಬರಲಿಲ್ಲ. ಆದರೆ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು ಔಟ್ ಆದರು. ಹೀಗಾಗಿ ಕಾಂಬೋಡಿಯಾದ ಇನ್ನಿಂಗ್ಸ್ 107 ಕ್ಕೆ ಅಂತ್ಯವಾಯಿತು. ಅಂತಿಮವಾಗಿ ಇಂಡೋನೇಷ್ಯಾ ಪಂದ್ಯವನ್ನು 60 ರನ್‌ಗಳಿಂದ ಗೆದ್ದುಕೊಂಡಿತು.

ಆರ್​ಸಿಬಿ ಸೇರಿದಂತೆ ಈ 3 ಐಪಿಎಲ್ ತಂಡಗಳ ಆಟಗಾರರಿಗಿಲ್ಲ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ

ಟಿ20 ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ

ಟಿ20 ಕ್ರಿಕೆಟ್‌ನಲ್ಲಿ (ದೇಶೀಯ ಮಟ್ಟದಲ್ಲಿ) ಈ ಹಿಂದೆ ಎರಡು ಬಾರಿ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಘಟನೆಗಳು ನಡೆದಿವೆ. ಬಾಂಗ್ಲಾದೇಶದ ಅಲ್-ಅಮೀನ್ ಹೊಸೇನ್ 2013-14ರ ವಿಕ್ಟರಿ ಡೇ ಟಿ20 ಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ಕನ್ನಡಿಗ ಅಭಿಮನ್ಯು ಮಿಥುನ್ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮೊದಲ ಬಾರಿಗೆ ಸಂಭವಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು – Kannada News | Patanjali Ayurveda offers far less expensive medicines in its online platform

ಮೊದಲು ಅನಾರೋಗ್ಯ ಮತ್ತು ನಂತರ ಅದನ್ನು ಸರಿಪಡಿಸಲೆಂದು ಪ್ರತಿ ತಿಂಗಳು ದುಬಾರಿ ಅಲೋಪತಿ ಔಷಧಿಗಳು ನಮ್ಮ ಇಡೀ ಬಜೆಟ್ ಅನ್ನು ಹಾಳುಮಾಡುತ್ತವೆ. ಈ ವೆಚ್ಚದ ಹೊರೆಯನ್ನು ಹೇಗೆ ಕಡಿಮೆ ಮಾಡುವುದು? ಅನಾರೋಗ್ಯ ಉದ್ಭವಿಸಿದರೆ ಅದಕ್ಕೆ ಚಿಕಿತ್ಸೆಯಂತೂ ಬೇಕೇ ಬೇಕು. ದುಬಾರಿ ಔಷಧಗಳ ದಾರಿಗೆ ಹೋಗದೆ ಆಯುರ್ವೇದ ಪರ್ಯಾಯಗಳನ್ನು (Ayurvedic medicines) ಜನರು ಈಗ ಹುಡುಕತೊಡಗಿದ್ದಾರೆ. ಇವರ ಹುಡುಕಾಟಕ್ಕೆ ಸುಲಭ ಆಯ್ಕೆ ಪತಂಜಲಿ. ಸರಳವಾಗಿ ಹೇಳುವುದಾದರೆ, ಪತಂಜಲಿಯ (Patanjali) ಕಡಿಮೆ ಬೆಲೆಯ ಆಯುರ್ವೇದ ಔಷಧಗಳು ಜನರ ಬಜೆಟ್ ಮತ್ತು ಆರೋಗ್ಯ ಎರಡನ್ನೂ ‘ಫಿಟ್ ಅಂಡ್ ಫೈನ್’ ಆಗಿಡಲು ಸಹಾಯ ಮಾಡುತ್ತಿವೆ.

ಪತಂಜಲಿ ಆಯುರ್ವೇದಿಕ್ ಔಷಧಗಳು

ಪತಂಜಲಿಯು ಆಯುರ್ವೇದ ಆಧಾರಿತ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇವು ಅಲೋಪತಿ ಔಷಧಿಗಳಿಗಿಂತ ಅಗ್ಗವಾಗಿದ್ದು, ರೋಗಗಳನ್ನು ಗುಣಪಡಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಆಯುರ್ವೇದ ಔಷಧದ ಪ್ರಯೋಜನವೆಂದರೆ ಅದು ರೋಗಲಕ್ಷಣಗಳನ್ನು ನಿಗ್ರಹಿಸುವುದಷ್ಟೇ ಅಲ್ಲ, ದೇಹದಲ್ಲಿ ದೀರ್ಘಕಾಲೀನ ಸಮತೋಲನವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ.

ಇದನ್ನೂ ಓದಿ: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ

ಪತಂಜಲಿ ಸ್ಟೋರ್​ನಲ್ಲಿ ವೈದ್ಯರು

ನೀವು ಆಯುರ್ವೇದ ಔಷಧಿ ಖರೀದಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಬಯಸಿದರೆ, ಪತಂಜಲಿ ಸ್ಟೋರ್​ಗಳಲ್ಲೇ ವೈದ್ಯರು ಲಭ್ಯರಿರುತ್ತಾರೆ. ಅವರಿಗೆ ನೀವು ನಿಮ್ಮ ರೋಗದ ಬಗ್ಗೆ ಹೇಳಬಹುದು. ವೈದ್ಯರ ಸಲಹೆಯ ಮೇರೆಗೆ ಆಯುರ್ವೇದ ಔಷಧಿ ಸೇವನೆ ಪ್ರಾರಂಭಿಸಬಹುದು.

ಪತಂಜಲಿ ಆಯುರ್ವೇದ ಔಷಧ ಆನ್​ಲೈನ್​ನಲ್ಲೂ ಲಭ್ಯ

ಪತಂಜಲಿ ಆಯುರ್ವೇದ ಔಷಧಿಯನ್ನು ಆರ್ಡರ್ ಮಾಡಲು, ನೀವು ಮೊದಲು ಪತಂಜಲಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು (www.patanjaliayurved.net/). ನಂತರ, ಮೇಲ್ಭಾಗದಲ್ಲಿರುವ ಮೆಡಿಸಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Photo: patanjaliayurved.net

ನಂತರ, ನೀವು ವಿವಿಧ ಕಾಯಿಲೆಗಳಿಗೆ ವಿವಿಧ ಔಷಧಿಗಳು ನಮೂದಾಗಿರುವುದನ್ನು ನೋಡುತ್ತೀರಿ. ನಿಮಗೆ ಬೇಕಾದ ಔಷಧಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ. ಎಷ್ಟು ಬೇಕೆಂದು ಪ್ರಮಾಣವನ್ನು ಆಯ್ಕೆ ಮಾಡಿ, ನಿಮ್ಮ ವಿಳಾಸವನ್ನು ನಮೂದಿಸಿ ಮತ್ತು ಪಾವತಿ ಮಾಡಿ. ಈ ರೀತಿಯಾಗಿ, ನೀವು ನಿಮ್ಮ ಮನೆಯಿಂದಲೇ ಸುಲಭವಾಗಿ ಆರ್ಡರ್ ಮಾಡಬಹುದು. ಆ ಔಷಧಗಳನ್ನು ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.

Photo: patanjaliayurved.net

ಇದನ್ನೂ ಓದಿ: ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ

ಜನರ ಬಜೆಟ್ ಇತಿಮಿತಿಯನ್ನೂ ಸಹ ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅದಕ್ಕಾಗಿಯೇ ಔಷಧಗಳು ಕಡಿಮೆ ಬೆಲೆ ಮಾತ್ರವಲ್ಲ, ಹೆಚ್ಚುವರಿ ರಿಯಾಯಿತಿ ಕೂಡ ಹೊಂದಿವೆ. ಉದಾಹರಣೆಗೆ, ದಿವ್ಯ ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್ (Divya Madhunashini Vati Extra Power), ದಿವ್ಯ ಇಮ್ಯುನೊಗ್ರಿಟ್ (Divya Immunogrit) ಮತ್ತು ದಿವ್ಯ ಮೆಮೊರಿಗ್ರಿಟ್ (Divya Memorygrit) ಸೇರಿದಂತೆ ಇತರ ಉತ್ಪನ್ನಗಳ ಮೇಲೆ 4.13% ವರೆಗೆ ರಿಯಾಯಿತಿಗಳು ಲಭ್ಯವಿದೆ. ಅಂದರೆ ಹೆಚ್ಚುವರಿ ಉಳಿತಾಯಕ್ಕೆ ಉತ್ತಮ ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್ – Kannada News | Hubballi honor Killing Case: Mother condition also serious Says manya Husband vivekananda

ಹುಬ್ಬಳ್ಳಿ, (ಡಿಸೆಂಬರ್ 23): ಹುಬ್ಬಳ್ಳಿಯಲ್ಲಿ (Hubballi) ಪ್ರೀತಿಸಿ ಅಂತರ್ಜಾತಿ ಯುವಕನ ಜೊತೆ ವಿವಾಹವಾಗಿದ್ದ ಮಗಳನ್ನೇ ತಂದೆಯೇ ಬರ್ಬರ ಕೊಲೆ  (Hubballi Honor Killing) ಮಾಡಿದ್ದ ಪ್ರಕರಣ ಬೆಚ್ಚಿಬೀಳಿಸಿದೆ. ವಿರೋಧದ ನಡುವೆಯೂ ದಲಿತ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೆರಳಿದ್ದ ತಂದೆ, ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಎಂದು ಯೋಚಿಸದೇ ಮಗಳು ಮಾನ್ಯಗಳನ್ನ ಕೊಚ್ಚಿ ಕೊಂದಿದ್ದಾನೆ. ಅಂತರ್ಜಾತಿಯಾಗಿದ್ದರೂ ಸಹ ಮಾನ್ಯಳ ಪತಿ ವಿವೇಕಾನಂದ ಕುಟುಂಬದವರು ಚೆನ್ನಾಗಿ ನೋಡಿಕೊಂಡಿದ್ದರು. ಆದರೂ ಸಹ ತಂದೆ ಮಗಳನ್ನು ಬಲಿ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರೀತಿ ಮುಂದೆ ಜಾತಿ ಗೆದ್ದಿದೆ.

ಇದೀಗ ಮಾನ್ಯಗಳ ಜೊತೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಕಳೆದುಕೊಂಡು ಪತಿ ವಿವೇಕಾನಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ. ಇನ್ನೊಂದೆಡೆ  ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿವೇಕಾನಂದನ ತಾಯಿ ಸಹ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದು. ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಕಂಗಾಲಾಗಿದೆ. ಈ ಬಗ್ಗೆ ವಿವೇಕಾನಂದ ಕಣ್ಣೀರಿಡುತ್ತಲೇ ನೋವು ಹಂಚಿಕೊಂಡಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!

ಭೋಪಾಲ್, ಡಿಸೆಂಬರ್ 23: ಮಧ್ಯಪ್ರದೇಶದ ರಾಯ್‌ಗಾಂವ್ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ಸಚಿವೆ ಪ್ರತಿಮಾ ಬಾಗ್ರಿ ಅವರಿಗೆ ಆಘಾತ ಕಾದಿತ್ತು. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ (Viral Video) ಆಗಿದೆ. ಈ ಕಾಮಗಾರಿ ಮಾಡಿದ ಗುತ್ತಿಗೆದಾರರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಜವಾಬ್ದಾರಿಯುತ ಸಂಸ್ಥೆಯ ವಿರುದ್ಧ ಕಠಿಣ ದಂಡ ವಿಧಿಸಲು ಸಿವೆ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಮಡಗಾಂವ್‌ ನಡುವೆ ವಂದೇ ಭಾರತ್​​ ರೈಲು ಆರಂಭಕ್ಕೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಮನವಿ – Kannada News | Union Minister H.D. Kumaraswamy Writes to Railway Minister for Bengaluru–Madgaon Vande Bharat Express

ವಂದೇ ಭಾರತ್​​ ರೈಲು ಆರಂಭಕ್ಕೆ ಹೆಚ್​​ಡಿಕೆ ಮನವಿ

ಬೆಂಗಳೂರು, ಡಿಸೆಂಬರ್​​ 23: ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವಂತೆ ಆಗ್ರಹಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ರೈಲು ಸಂಚಾರ ಆರಂಭಿಸಿದಲ್ಲಿ ಪ್ರವಾಸೋದ್ಯಮ, ಆರ್ಥಿಕ, ಕೈಗಾರಿಕೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್​​ಡಿಕೆ ಬರೆದ ಪತ್ರದಲ್ಲೇನಿದೆ?

ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳ ಮಾರ್ಗವಾಗಿ ಗೋವಾ ಸಂಪರ್ಕಿಸುವ ಉತ್ತಮ ಹೈ-ಸ್ಪೀಡ್ ರೈಲು ಸಂಚಾರಕ್ಕೆ ಸಾರ್ವಜನಿಕ ವಲಯದಿಂದ ಬೇಡಿಕೆ ಇದೆ. ಘಾಟ್ ವಿಭಾಗದಲ್ಲಿ ವಿದ್ಯುತೀಕರಣ ಪೂರ್ಣಗೊಂಡ ನಂತರ, ಈ ಮಾರ್ಗವು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಿದ್ಧವಾಗಲಿದೆ. ಹೀಗಾಗಿ ಹಾಸನ, ಮಂಗಳೂರ ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಸಂಚರಿಸುವ ಬೆಂಗಳೂರು ಮತ್ತು ಮಡಗಾಂವ್‌​​ (ಗೋವಾ) ಸಂಪರ್ಕಿಸುವ ವಂದೇ ಭಾರತ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಮನವಿ ಮಾಡುತ್ತೇನೆ. ಈ ಮಾರ್ಗವು ಪ್ರವಾಸಿ, ಯಾತ್ರಿಕ, ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣಿಕರನ್ನು ಒಳಗೊಂಡಿದೆ ಎಂದು ಹೆಚ್​​ಡಿಕೆ ತಿಳಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್​ ಟ್ರೈನ್​ ಏನೇಲ್ಲ ವಿಶೇಷತೆ ಹೊಂದಿದೆ ನೋಡಿ

‘ಕರಾವಳಿ ಭಾಗಕ್ಕೆ ದೊಡ್ಡ ಶಕ್ತಿಯಾಗಲಿದೆ’

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿಯೂ ಮಾಹಿತಿ ಹಂಚಿಕೊಂಡಿರುವ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲು ಕಲ್ಪನೆ ಭಾರತೀಯ ರೈಲ್ವೆಯಲ್ಲಿ ಪರಿವರ್ತನಾತ್ಮಕ ಕ್ರಾಂತಿಯನ್ನೇ ಉಂಟು ಮಾಡಿದೆ. ಬೆಂಗಳೂರು ಮತ್ತು ನಡುವಿನ ವಂದೇ ಭಾರತ್ ರೈಲು ರಾಜ್ಯಕ್ಕೆ, ಅದರಲ್ಲಿಯೂ ಕರಾವಳಿ ಭಾಗಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂಬುದು ನನ್ನ ವಿಶ್ವಾಸ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:35 pm, Tue, 23 December 25

Source link

Exit mobile version