ಗೋವಾ ಕಾಂಗ್ರೆಸ್‌ನ ಭರವಸೆಯ ನಾಯಕ ಕೇತನ್ ಭಾಟಿಕರ್ ನಿಧನ: ದಾಂಡೇಲಿಗೆ ತೆರಳುತ್ತಿದ್ದಾಗ ಹಾವು ಕಚ್ಚಿ ಘೋರ ದುರಂತ – Kannada News | Goa Congress Leader Ketan Bhatikar Dies of Snakebite Near Karnataka Border
ಕೇತನ್ ಭಾಟಿಕರ್ (ಚಿತ್ರ: ಕೇತನ್ ಭಾಟಿಕರ್ ಅವರ ಫೇಸ್ಬುಕ್ ಖಾತೆಯಿಂದ)Image Credit source: Facebook ಪಣಜಿ, ಮೇ 15: ಗೋವಾ ಕಾಂಗ್ರೆಸ್ (Congress) ನಾಯಕ ಕೇತನ್ ಭಾಟಿಕರ್ (38) (Ketan Bhatikar) ಹಾವಿನ ಕಡಿತದಿಂದ ಮೃತಪಟ್ಟಿದ್ದಾರೆ. ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಕರ್ಮಲ್ ಘಾಟ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಕೇತನ್ ಭಾಟಿಕರ್ ದಾಂಡೇಲಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪಕ್ಷದ ಉದಯೋನ್ಮುಖ ನಾಯಕನ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಾಂಶಗಳು ಗೋವಾ-ಕರ್ನಾಟಕ ಗಡಿಯ ಕರ್ಮಲ್…