ENG vs NEP: ಕ್ರಿಕೆಟ್ ಜನಕ ಇಂಗ್ಲೆಂಡ್ಗೆ ಸೋಲಿನ ಭಯ ಹುಟ್ಟಿಸಿ ಸೋತ ಕ್ರಿಕೆಟ್ ಶಿಶು ನೇಪಾಳ – Kannada News | Nepal’s Heroic T20 World Cup Fight: England Scrapes 4 Run Win in Wankhede Thriller
ಮುಂಬೈನ ವಾಂಖೆಡೆ ಮೈದಾನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. 2026 ರ ಟಿ20 ವಿಶ್ವಕಪ್ನ ಎರಡನೇ ದಿನದಂದು ಬಲಿಷ್ಠ ಇಂಗ್ಲೆಂಡ್ ಹಾಗೂ ನೇಪಾಳ ಮುಖಾಮುಖಿಯಾಗಿದ್ದವು. ಎರಡು ತಂಡಗಳ ಬಲಾಬಲವನ್ನು ನೋಡಿದರೆ, ಇಂಗ್ಲೆಂಡ್ ತಂಡವೇ ಗೆಲುವಿನ ಫೇವರೇಟ್ ಎನಿಸಿತ್ತು. ಆದರೆ ಇಡೀ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ನೇಪಾಳ ಕೊನೆಯ ಓವರ್ನಲ್ಲಿ 10 ರನ್ ಹೊಡೆಯಲು ಸಾಧ್ಯವಾಗದೆ 4 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ನೇಪಾಳ ಸೋತಿತ್ತಾದರೂ ಕ್ರಿಕೆಟ್ ಜನಕರಾದ ಆಂಗ್ಲರ ಮುಖದಲ್ಲಿ ಸೋಲಿನ ಭಯ ಎದ್ದು ಕಾಣುವಂತೆ…