Daily Devotional: ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ? – Kannada News | Daily Devotional: The Divine Parijatha, Benefits of Growing This Auspicious Plant Near Your Home
ಬೆಂಗಳೂರು, ಫೆಬ್ರುವರಿ 09: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಹತ್ತಿರ ಸಣ್ಣ ಪುಟ್ಟ ಗಿಡಗಳನ್ನು ಬೆಳೆಸುವುದು ಸಾಮಾನ್ಯ. ಆದರೆ ಕೆಲವು ಗಿಡಗಳು ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ವಿಶೇಷ ಮಹತ್ವವನ್ನು ಹೊಂದಿವೆ. ಅವುಗಳಲ್ಲಿ ಪಾರಿಜಾತ ಗಿಡವು ಅತಿ ಪ್ರಮುಖವಾದುದು. ಪಾರಿಜಾತವನ್ನು ದೇವಲೋಕದ ಗಿಡ ಎಂದು ಕರೆಯಲಾಗುತ್ತದೆ. ಇದರ ಹೂವುಗಳು ರಾತ್ರಿಯ ಸಮಯದಲ್ಲಿ ಸುಗಂಧವನ್ನು ಬೀರುತ್ತವೆ. ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸಬಹುದೇ ಎಂಬ ಪ್ರಶ್ನೆಗೆ ಉತ್ತರ ಹೌದು….