ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್ – Kannada News | Relative Talks about Kunigal Man Killed Who Loves 19 Year old Young Woman at Magadi

ರಾಮನಗರ, (ಡಿಸೆಂಬರ್ 19): ಹರಿಹರೆಯದ 19 ವರ್ಷದ ಯುವತಿಯ ಪ್ರೇಮಲೋಕದಲ್ಲಿ ಬಿದ್ದಿದ್ದ 40 ವರ್ಷದ ವ್ಯಕ್ತಿ ಹೆಣವಾಗಿದ್ದಾನೆ. ಬಣ್ಣ ಬಣ್ಣದ ಮಾತುಗಳನ್ನ ಆಡಿ ಮಗಳನ್ನ ಬಲೆಗೆ ಬೀಳಿಸಿಕೊಂಡಿದ್ದ ಪ್ರೀಯಕರನೊಬ್ಬನನ್ನ ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ‌ಬಳಿ ನಡೆದಿದೆ. ಮೂಲತಃ ಮಾಗಡಿ (Magadi) ತಾಲೂಕಿನ ದೋಣಕುಪ್ಪೆ ಗ್ರಾಮದ ಹಾಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿರುವ ಚಲುವ (40) ಹತ್ಯೆಯಾದ ವ್ಯಕ್ತಿ. ಇನ್ನು ಕೊಲೆಯಾದ ಚಲುವ ಬಗ್ಗೆ ಸಂಬಂಧಿಗಳು ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: 40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!

Source link

ನಿಮಗೂ ಗೂಗಲ್, ಯೂಟ್ಯೂಬ್ ಪೇಜ್ ಲೋಡ್ ಆಗುತ್ತಿಲ್ಲವೇ? – Kannada News | YouTube and Google Not Working India and US Users Hit By Major Outage

ನವದೆಹಲಿ, ಡಿಸೆಂಬರ್ 19: ನಿಮಗೂ ಗೂಗಲ್​ನಲ್ಲಿ (Google) ಸರ್ಚ್ ಮಾಡಲು ಕಷ್ಟವಾಗುತ್ತಿದೆಯೇ? ಯೂಟ್ಯೂಬ್ ವಿಡಿಯೋ ಪ್ಲೇ ಆಗುತ್ತಿಲ್ಲವೇ? ಇದು ನಿಮ್ಮ ಸಮಸ್ಯೆ ಮಾತ್ರ ಅಲ್ಲ. ಭಾರತ ಹಾಗೂ ಅಮೆರಿಕದಾದ್ಯಂತ ಬಳಕೆದಾರರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಬಳಕೆದಾರರು ಯೂಟ್ಯೂಬ್, ಗೂಗಲ್ ಸರ್ಚ್ ಮುಂತಾದ ಸೇವೆಗಳಲ್ಲಿ ವ್ಯಾಪಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಯುಎಸ್ ಮೂಲದ ಸರ್ಚ್ ಎಂಜಿನ್ ಗೂಗಲ್ ಸಿಕ್ಕಾಪಟ್ಟೆ ಡೌನ್ ಆಗಿದೆ. ಅನೇಕ ಬಳಕೆದಾರರು ಗೂಗಲ್ ಸರ್ಚ್, ಯೂಟ್ಯೂಬ್ ಮತ್ತು ಯೂಟ್ಯೂಬ್ ಟಿವಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್ ಪ್ರಕಾರ, ಇಲ್ಲಿಯವರೆಗೆ 11,000ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಲಾಗಿದೆ. ಬಳಕೆದಾರರಿಗೆ ತಮಗೆ ಬೇಕಾದ ಮಾಹಿತಿ ಸರ್ಚ್ ಮಾಡಲು, ವಿಡಿಯೋಗಳನ್ನು ಲೋಡ್ ಮಾಡಲು ಅಥವಾ ಲೈವ್ ಟಿವಿ ಸ್ಟ್ರೀಮ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಗೂಗಲ್​ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ

ಭಾರತದ ಬಗ್ಗೆ ಹೇಳುವುದಾದರೆ, ಯೂಟ್ಯೂಬ್ ಸಮಸ್ಯೆಯ ಬಗ್ಗೆ ಬಂದ ರಿಪೋರ್ಟ್​ಗಳು ಸುಮಾರು 3,336. ಅದರಲ್ಲಿ, ಶೇ. 53ರಷ್ಟು ಬಳಕೆದಾರರು ಸರ್ವರ್ ಸಂಪರ್ಕವನ್ನು ವರದಿ ಮಾಡಿದ್ದಾರೆ. ಶೇ. 34ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಅವರಲ್ಲಿ ಶೇ. 13ರಷ್ಟು ಜನರು ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಸ್ಟ್ರೀಮಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Youtube Down: ಯೂಟ್ಯೂಬ್ ಡೌನ್: ಸರಿಯಾಗಿ ಪ್ಲೇ ಆಗದ ವಿಡಿಯೋಗಳು, ಬಳಕೆದಾರರಿಂದ ದೂರು

ಡೌನ್‌ಡೆಕ್ಟರ್ ಡೇಟಾವು ಸುಮಾರು ಶೇ. 73ರಷ್ಟು ಬಳಕೆದಾರರು ವೆಬ್‌ಸೈಟ್ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ತೋರಿಸುತ್ತದೆ. ಸುಮಾರು ಶೇ. 18ರಷ್ಟು ಜನರು ವಿಡಿಯೋ ಸ್ಟ್ರೀಮಿಂಗ್ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಉಳಿದ ಶೇ. 9ರಷ್ಟು ಜನರು ಯೂಟ್ಯೂಬ್ ಅಪ್ಲಿಕೇಶನ್‌ನಿಂದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ವರದಿಗಳು ಬಳಕೆದಾರರು ಪುಟಗಳನ್ನು ಸರಿಯಾಗಿ ಲೋಡ್ ಮಾಡಲು ಅಥವಾ ವಿಳಂಬವಿಲ್ಲದೆ ವೀಡಿಯೊಗಳನ್ನು ಪ್ಲೇ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SA: 1000, 8000..! ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಶೋ – Kannada News | Ind vs SA Sanju Samson Crosses 1000 T20I Runs, 8000 T20 Runs

ಭಾರತದ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ (4,231) ಹೆಸರಿನಲ್ಲಿದೆ. ಅವರ ನಂತರ ವಿರಾಟ್ ಕೊಹ್ಲಿ (4,188) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ನಾಯಕ ಸೂರ್ಯಕುಮಾರ್ ಯಾದವ್ (2,783) ಮೂರನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ (2,265) ನಾಲ್ಕನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ (1,939) ಐದನೇ ಸ್ಥಾನದಲ್ಲಿದ್ದಾರೆ.

Source link

ಡಿಕೆ ಶಿವಕುಮಾರ್​​ಗೆ ಬಯಕೆ ಈಡೇರಿಸುವ ಭರವಸೆ ನೀಡಿದ ಜಗದೀಶ್ವರಿ ದೇವಿ: ಅರ್ಚಕರು ಹೇಳಿದ್ದಿಷ್ಟು – Kannada News | DK Shivakumar seeks divine blessings at Andle Jagadeeshwari Temple amid CM speculation

ಕಾರವಾರ, ಡಿಸೆಂಬರ್​ 19: ರಾಜ್ಯ ಕಾಂಗ್ರೆಸ್​​ನಲ್ಲಿ ಕುರ್ಚಿ ಕಾಳಗದ ಮಧ್ಯೆ ಇಂದು ಡಿಸಿಎಂ ಡಿಕೆ ಶಿವಕುಮಾರ್​, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿರುವ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಡಿಕೆ ಶಿವಕುಮಾರ್​ ಪೂಜೆ ಸಲ್ಲಿಸಿದ ಬಗ್ಗೆ ಅರ್ಚಕ ಗಣೇಶ್ ನಾಯಕ್​ ಟವಿ9 ಜೊತೆಗೆ ಮಾತನಾಡಿದ್ದು, ದೇವಿ ಡಿ.ಕೆ. ಶಿವಕುಮಾರ್‌ಗೆ ಮೂರು ರೀತಿಯ ಸೂಚನೆಗಳನ್ನು ನೀಡಿದ್ದಾಳೆ. ಹಿಂದೆ ತಿಹಾರ್ ಜೈಲಿನಿಂದ ಬಿಡುಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯುವ ಕುರಿತು ದೇವಿ ಮುನ್ಸೂಚನೆ ನೀಡಿದ್ದಳು. ಈ ಬಾರಿಯೂ ಡಿ.ಕೆ. ಶಿವಕುಮಾರ್ ಅವರು ಕೇಳಿದ ದಿನಾಂಕದೊಳಗೆ ಅವರ ಬಯಕೆ ಈಡೇರುತ್ತದೆ ಎಂದು ದೇವಿ ಭರವಸೆ ನೀಡಿದ್ದಾಳೆ ಎಂದು ಅರ್ಚಕರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SA: ಯುವಿ ದಾಖಲೆ ಜಸ್ಟ್ ಮಿಸ್; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ – Kannada News | Hardik Pandya Smashes 16 Ball Fifty vs SA: India’s 2nd Fastest T20 Record

ನಾಯಕ ಸೂರ್ಯಕುಮಾರ್ ಯಾದವ್ ಔಟಾದ ಬಳಿಕ ಕ್ರೀಸ್​ಗೆ ಬಂದ ಹಾರ್ದಿಕ್, ಮೊದಲ ಎಸೆತದಿಂದಲೇ ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಲು ಶುರು ಮಾಡಿದರು. ಇದರ ಪರಿಣಾಮವಾಗಿ ಪಾಂಡ್ಯ, ಕೇವಲ 16 ಎಸೆತಗಳಲ್ಲಿ 50 ರನ್​ಗಳ ಗಡಿ ದಾಟಿದರು. ಇನ್ನೊಂದು ವಿಶೇಷವೆಂದರೆ, ಬೌಂಡರಿಯೊಂದಿಗೆ ತಮ್ಮ ಇನ್ನಿಂಗ್ಸ್ ಆರಂಭಿಸಿದ ಪಾಂಡ್ಯ, ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

Source link

ಚೈತ್ರಾ ಡಿಬಾರ್ ಆಗಿದ್ದಳು: ಮಗಳ ಕಿರುಕುಳಕ್ಕೆ ನೊಂದು ಎಲ್ಲ ವಿಷಯ ಹೇಳಿದ ಬಾಲಕೃಷ್ಣ – Kannada News | Chaithra Kundapura was debarred in 1st PUC says her Father Balakrishna Naik

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವಿರುದ್ಧ ನ್ಯಾಯಾಲಯ ಆದೇಶ ನೀಡಿದೆ. ತಂದೆ ಬಾಲಕೃಷ್ಣ ನಾಯ್ಕ್ ಅವರು ಚೈತ್ರಾ ಮೇಲೆ ಕೇಸ್ ಹಾಕಿದ್ದರು. ಕೋರ್ಟ್ ಆದೇಶದ ಬಳಿಕ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚೈತ್ರಾ (Chaithra Kundapura) ಅವರ ಇತಿಹಾಸವನ್ನು ಅವರು ತೆರೆದಿಟ್ಟಿದ್ದಾರೆ. ‘ನನಗೆ ನ್ಯಾಯಾಲಯದ ರಕ್ಷಣೆ ಸಿಕ್ಕಿದ್ದು ತುಂಬ ಅನುಕೂಲ ಆಗಿದೆ. ಇನ್ಮುಂದೆ ನನಗೆ ಮಕ್ಕಳಿಂದ, ಹೆಂಡತಿಯಿಂದ ತೊಂದರೆ ಆಗಬಾರದು. ವಿದ್ಯಾಭ್ಯಾಸ ಮಾಡುವಾಗಲೇ ಚೈತ್ರಾ ಪೋಕರಿ ಕೆಲಸ ಮಾಡುತ್ತಿದ್ದಳು. ಪ್ರಥಮ ವರ್ಷ ಪಿಯುಸಿ ಓದುವಾಗಲೇ ಡಿಬಾರ್ ಆಗಿದ್ದಳು. ನನ್ನ ಬುದ್ಧಿವಾದ ಕೇಳುತ್ತಿರಲಿಲ್ಲ’ ಎಂದು ಬಾಲಕೃಷ್ಣ ನಾಯ್ಕ್ (Balakrishna Naik) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಂಡವಪುರದಲ್ಲಿ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್ – Kannada News | Pandavapura railway Station Master saved a passenger falling from moving Train

ಪಾಂಡವಪುರ, ಡಿಸೆಂಬರ್ 19: ರೈಲನ್ನು ಇಳಿಯುವ ಭರದಲ್ಲಿ ರೈಲು (Train Video) ನಿಲ್ಲುವ ಮೊದಲೇ ಪ್ರಯಾಣಿಕರು ರೈಲಿನಿಂದ ಕೆಳಗೆ ಹಾರಿಬಿಡುತ್ತಾರೆ. ಇದರಿಂದ ಕೆಲವೊಮ್ಮೆ ಕೆಲವರು ರೈಲಿನಡಿ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು ಕೆಲವು ಜನರು ಕಾಲು ಮುರಿದುಕೊಂಡಿದ್ದಾರೆ. ಪಾಂಡವಪುರದಲ್ಲಿ ಡಿಸೆಂಬರ್ 13ರಂದು ಪಾಂಡವಪುರದ ಸ್ಟೇಷನ್ ಮಾಸ್ಟರ್ ಅಭಿಜಿತ್ ಸಿಂಗ್ ಅವರು ಚಲಿಸುವ ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕರೊಬ್ಬರನ್ನು ರಕ್ಷಿಸುವ ಮೂಲಕ ದಿಟ್ಟತನ ತೋರಿದ್ದಾರೆ. ರೈಲ್ವೆ ಇಲಾಖೆ ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಸಂಜು ತೋಳ್ಬಲಕ್ಕೆ ಸಿಲುಕಿ ಮೈದಾನದಲ್ಲೇ ಬಿದ್ದು ಒದ್ದಾಡಿದ ಅಂಪೈರ್; ವಿಡಿಯೋ ನೋಡಿ – Kannada News | IND vs SA: Umpire Rohan Pandit Injured by Sanju Samson’s Fierce Shot

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಅಂಪೈರ್ ಕಾಲಿಗೆ ರಬಸವಾಗಿ ಬಡಿಯಿತು. ಇದರಿಂದಾಗಿ ಅಂಪೈರ್ ಕೆಲಕಾಲ ಮೈದಾನದಲ್ಲಿ ನೋವಿನಿಂದ ನರಳುವಂತ್ತಾಯಿತು.

ಭಾರತದ ಇನ್ನಿಂಗ್ಸ್​ನ 9ನೇ ಓವರ್​ನಲ್ಲಿ ಈ ಘಟನೆ ನಡೆಯಿತು. ಆಫ್ರಿಕಾ ಸ್ಪಿನ್ನರ್ ಫರ್ನಾಂಡಿಸ್ ಬೌಲ್ ಮಾಡಿದ ನಾಲ್ಕನೇ ಎಸೆತವನ್ನು ಸ್ಯಾಮ್ಸನ್ ನೇರವಾಗಿ ಹೊಡೆದರು. ಇತ್ತ ಆ ಹೊಡೆತ ಸೀದ ಬೌಲರ್ ಕೈಗೆ ಹೋಯಿತು. ಆದರೆ ಫರ್ನಾಂಡಿಸ್​ಗೆ ಆ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಬೌಲರ್​ ಕೈಗೆ ಬಡಿದು, ಬೌಲರ್ಸ್​ ಎಂಡ್​ನಲ್ಲಿ ಅಂಪೈರಿಂಗ್ ಮಾಡುತ್ತಿದ್ದ ರೋಹನ್ ಪಂಡಿತ್ ಅವರ ಬಲ ಮೊಣಕಾಲಿಗೆ ಬಡಿಯಿತು.

ಚೆಂಡಿನ ರಬಸ ಎಷ್ಟಿತ್ತೆಂದರೆ, ಅಂಪೈರ್ ರೋಹನ್ ಪಂಡಿತ್ ನಡೆಯಲು ಸಾಧ್ಯವಾಗದೆ ನೋವಿನಿಂದ ಮೈದಾನದಲ್ಲೇ ಮಲಗಿದರು. ಕೂಡಲೇ ಮೈದಾನಕ್ಕೆ ಬಂದ ಪಿಸಿಯೋ, ರೋಹನ್ ಪಂಡಿತ್ ಅವರನ್ನು ಪರೀಕ್ಷಿಸಿದರು. ಸ್ವಲ್ಪ ಸಮಯದ ನಂತರ ಕೊಂಚ ಸುಧಾರಿಸಿಕೊಂಡ ರೋಹನ್ ಪಂಡಿತ್ ಮತ್ತೆ ಅಂಪೈರಿಂಗ್ ಮುಂದುವರೆಸಿದರು.
ಇನ್ನು ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 37 ರನ್ ಬಾರಿಸಿದರು. ಸ್ಯಾಮ್ಸನ್ ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಸ್ಯಾಮ್ಸನ್ 21 ಎಸೆತಗಳಲ್ಲಿ ತಿಲಕ್ ಅವರೊಂದಿಗೆ 34 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಈಶಾನ್ಯ ರಾಜ್ಯಗಳ ಅತಿದೊಡ್ಡ ವಿಮಾನ ನಿಲ್ದಾಣ – Kannada News | PM Modi To Inaugurate Guwahati Lokapriya Gopinath Bordoloi International Airport New Terminal Tomorrow

ಗುವಾಹಟಿ, ಡಿಸೆಂಬರ್ 19: ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಡಿಸೆಂಬರ್ 20) ಈಶಾನ್ಯ ರಾಜ್ಯದ ಅತಿದೊಡ್ಡ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಈ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ (ಎಲ್‌ಜಿಬಿಐ) ವಿಮಾನ ನಿಲ್ದಾಣ ಅಸ್ಸಾಂ ಮತ್ತು ಈಶಾನ್ಯದ ವಾಯುಯಾನ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಈಶಾನ್ಯ ರಾಜ್ಯಗಳ ಪ್ರವಾಸೋದ್ಯಮದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ.

ಇದು ಅಸ್ತಿತ್ವದಲ್ಲಿರುವ ಟರ್ಮಿನಲ್‌ಗಿಂತ 7 ಪಟ್ಟು ದೊಡ್ಡದಾಗಿದೆ. “ನಾನು ನಾಳೆ ಅಸ್ಸಾಂನ ಗುವಾಹಟಿಯನ್ನು ತಲುಪುತ್ತೇನೆ. ಅಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಾಗುವುದು. ಇದು ಅಸ್ಸಾಂನ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುತ್ತದೆ” ಎಂದು ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದು ನನಗೆ ಗೊತ್ತಿದೆ: ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ – Kannada News | CM economic adviser and Yelburga MLA Basavaraj Rayareddy Talks about two months gruha Lakshmi Money Pending

ಕೊಪ್ಪಳ, (ಡಿಸೆಂಬರ್ 19): ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಮತ್ತು ವಿವಾದ ಮುಂದುವರಿದಿದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಹಾಕಿಲ್ಲ. ಆದ್ರೆ, ಆಗಸ್ಟ್​ ವರೆಗೂ ಹಾಕಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸದನದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದು, ಇದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ಬಿಜೆಪಿ, ಏಕೆ ಸದನಕ್ಕೆ ತಪ್ಪು ನೀಡಿದ್ರು? ಕೂಡಲೇ ಸಚಿವರು ಕ್ಷಮೆ ಕೇಳಿಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಎರಡು ತಿಂಗಳ 5 ಸಾವಿರ ಕೋಟಿ ರೂಪಾಯಿ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಇದು ಕೋಲಾಹಲ ಸೃಷ್ಟಿಸಿಸುತ್ತಿದ್ದಂತೆಯೇ ಸಚಿವ ಹೆಬ್ಬಾಳ್ಕರ್, ಸದನದಲ್ಲಿ ತಮ್ಮಿಂದಾಗಿರುವ ತಪ್ಪನ್ನು ಒಪ್ಪಿಕೊಂಡರು. ಆರ್ಥಿಕ ಇಲಾಖೆಯಿಂದ ಎಡವಟ್ಟಾಗಿದೆ ಎಂದು ಸಿಎಂ ಬಳಿ ಇರುವ ಇಲಾಖೆ ಮೇಲೆ ಆರೋಪಿಸಿದ್ದರು. ಆಗ ಯಾವ ಆರ್ಥಿಕ ಇಲಾಖೆ ಅಧಿಕಾರಿಗಳು ಮಾತನಾಡಿಲ್ಲ.

ಆದ್ರೆ, ಇದೀಗ ಅಧಿವೇಶನ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು,  2024ರ ಫೆಬ್ರವರಿ, ಮಾರ್ಚ್​​​ ತಿಂಗಳ ಹಣ ಹಾಕಿಲ್ಲ. ಅದು ನಿಜ ನನಗೆ ಗೊತ್ತಿದೆ. ಆದ್ರೆ ಮಾಹಿತಿ ಕೊರತೆಯಿಂದ ಕಣ್ತಪ್ಪಿನಿಂದ ಸಚಿವರು ಕೊಟ್ಬಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಅದನ್ನ ಸಚಿವರು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸೌಜನ್ಯಯುತವಾಗಿ ಒಪ್ಪಿಕೊಂಡೊದ್ದಾರೆ. ಅದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ವೇಳೆ 2024ರ ಆರ್ಥಿಕ ವರ್ಷ ಮುಕ್ತಾಯ ಆಗಿದೆ ವಾಪಸ್ ಹಣ ಕೊಡೊಕೆ ಬರತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಹೋದರು. ಹಾಗಾದ್ರೆ, ಎರಡು ತಿಂಗಳ ಗೃಹಲಕ್ಷ್ಮೀ ಹಣ ಮನ್ನಾ ಆಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಇದನ್ನೂ ನೋಡಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕ್ಷಮೆಗೆ ಪ್ರತಿಪಕ್ಷ ಪಟ್ಟು

Source link

Exit mobile version