Headlines

ಎಥನಾಲ್ ಮಿಶ್ರಿತ ಪೆಟ್ರೋಲ್​ ಕುರಿತ ತಪ್ಪು ಕಲ್ಪನೆಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ – Kannada News | Modi Government rebuts misconceptions on ethanol blended petrol E20

ನವದೆಹಲಿ, ಜುಲೈ 30: ಇ-20 (E20) ಇಂಧನ ಕುರಿತು ಹಬ್ಬಿರುವ ದಾರಿ ತಪ್ಪಿಸುವ ವರದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol) ಬಳಕೆಯಿಂದ ವಾಹನಗಳಿಗೆ ಹಾನಿಯಾಗುತ್ತದೆ ಎಂಬ ವದಂತಿಗಳು ಹಾಗೂ ದಾರಿ ತಪ್ಪಿಸುವ ಪ್ರಚಾರಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸುದೀರ್ಘ ಸ್ಪಷ್ಟೀಕರಣವನ್ನು ನೀಡಿದೆ. ಇ-20 ಇಂಧನ ಯೋಜನೆಯು ವೈಜ್ಞಾನಿಕ ತಪಾಸಣೆ, ತಾಂತ್ರಿಕ ಪರೀಕ್ಷೆಗಳು, ವಾಹನ ತಯಾರಕರ ಆಲೋಚನೆಗಳು ಹಾಗೂ ಕಠಿಣ ಪ್ರಯೋಗಗಳ ಆಧಾರದ ಮೇಲೆಯೇ ಜಾರಿಗೆ…

Read More

‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ – Kannada News | Ramayana Trailer Lara Dutta Modern look as Kaikeyi sparks debate

ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಜುಲೈ 30ರಂದು ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ (Yash) ನಟಿಸಿದ್ದಾರೆ. ಈ ಟ್ರೇಲರ್‌ನಲ್ಲಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಲಾರಾ ದತ್ತಾ (Lara Dutta) ಅವರ ಮಾಡರ್ನ್ ಲುಕ್ ಈಗ ನೆಟ್ಟಿಗರ ಟೀಕೆಗೆ ಒಳಗಾಗಿದೆ. ದಶರಥ ಮಹಾರಾಜನ ಪತ್ನಿ ಹಾಗೂ ಶ್ರೀರಾಮನ…

Read More

ರಾಹುಲ್‌ ಗಾಂಧಿ ವಿರುದ್ಧ ಅಸಂಸದೀಯ ಪದಬಳಕೆ ಆರೋಪ: ಕ್ಷಮೆಗೆ ಪಟ್ಟು, ಹಕ್ಕುಚ್ಯುತಿ ಮಂಡನೆ – Kannada News | Anurag Thakur Moves Privilege Notice Against Rahul Gandhi Over Lok Sabha Remarks

ನವದೆಹಲಿ, (ಜುಲೈ 30): ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur )ಅವರು ಇಂದು (ಜುಲೈ 30) ಗುರುವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಮುಂಗಾರು ಅಧಿವೇಶನದಲ್ಲಿ ಸಂಸದೀಯವಲ್ಲದ ಮತ್ತು ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿದ್ದಾರೆ. ಹಾಗೂ ಸದನದ ನಡವಳಿಕೆ ಮತ್ತು ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ. ಅಲ್ಲದೇ ಠಾಕೂರ್ ಅವರು ಈ ವಿಷಯವನ್ನು…

Read More

ಕಲಬುರಗಿ, ರಾಯಚೂರಿನ ವಸತಿ ಶಾಲೆಯಲ್ಲಿ ಪಲಾವ್, ಅವಲಕ್ಕಿ ತಿಂದಿದ್ದ ವಿದ್ಯಾರ್ಥಿಗಳು ಅಸ್ವಸ್ಥ – Kannada News | Over 50 Students from Residential Schools in Kalaburagi and Raichur Fall Ill

ಕಲಬುರಗಿ, ಜುಲೈ 30: ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai School) ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಬೆಳಗಿನ ಉಪಹಾರ ಸೇವಿಸಿದ ಬೆನ್ನಲ್ಲೇ ಮಕ್ಕಳಿಗೆ ತೀವ್ರ ಹೊಟ್ಟೆನೋವು, ತಲೆಸುಸ್ತು ಹಾಗೂ ವಾಂತಿ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಹುತೇಕ ಮಕ್ಕಳ ಆರೋಗ್ಯ ಸ್ಥಿರವಾಗಿದೆ. ನಡೆದಿದ್ದೇನು? ಶಾಲೆಯಲ್ಲಿ ಎಂದಿನಂತೆ ಬೆಳಗಿನ ತಿಂಡಿಗೆ ಅವಲಕ್ಕಿ ಮಾಡಲಾಗಿತ್ತು. ಆದರೆ, ಉಪಹಾರ ಸೇವಿಸುವಾಗಲೇ ಅದರಿಂದ…

Read More

‘ಪೆಲೆಟ್ ಗನ್ ದಾಳಿ ನಡೆದೇ ಇಲ್ಲ’; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ಬ್ರಿಜ್ ಲಾಲ್ ತಿರುಗೇಟು – Kannada News | It is not a pellet gun Rahul Gandhi is lying BJP MP Brij Lal hits back

ನವದೆಹಲಿ, ಜುಲೈ 30: ದೆಹಲಿಯ ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿ ದಾಳಿ ನಡೆಸಲಾಗಿತ್ತು ಎಂದು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದರು. ಇಂದು ದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮಾಜಿ ಡಿಜಿಪಿ ಹಾಗೂ ಬಿಜೆಪಿ ಸಂಸದ ಬ್ರಿಜ್ ಲಾಲ್, “ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ನಾನು 37 ವರ್ಷಗಳ ಕಾಲ ಪೊಲೀಸ್ ಸೇವೆಯಲ್ಲಿದ್ದಿದ್ದೇನೆ. ಜನಸಂದಣಿಯನ್ನು ಹೇಗೆ ನಿಯಂತ್ರಿಸಬೇಕು…

Read More

ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ – Kannada News | Day after Lok Sabha Today Rajya Sabha passes anti paper leak bill to become Law after President assent

ನವದೆಹಲಿ, ಜುಲೈ 30: ಲೋಕಸಭೆಯಲ್ಲಿ ಅಂಗೀಕಾರಗೊಂಡ ಮರುದಿನವೇ ಅಂದರೆ ಇಂದು (ಗುರುವಾರ) ವಿರೋಧ ಪಕ್ಷಗಳ ಗದ್ದಲ ಮತ್ತು ಸಭಾತ್ಯಾಗದ ನಡುವೆಯೂ ರಾಜ್ಯಸಭೆಯು ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ’ವನ್ನು (Anti-Paper Leak Bill) ಅಂಗೀಕರಿಸಿದೆ. ಈ ವಿಧೇಯಕವನ್ನು ಈಗ ಅಂತಿಮ ಅಂಕಿತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲಾಗುತ್ತದೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಇದು ದೇಶದ ವಿದ್ಯಾರ್ಥಿಗಳು…

Read More

ಸ್ಟೀಫನ್ ಫ್ಲೆಮಿಂಗ್ ಬದಲಿಗೆ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ – Kannada News | Albie Morkel Named Joburg Super Kings Head Coach for SA20, Replacing Fleming

ಜುಲೈ 30 ರಂದು ಫ್ರಾಂಚೈಸಿ ಅಧಿಕೃತವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, SA20 ಯ ಐದನೇ ಸೀಸನ್‌ನಲ್ಲಿ ಮಾರ್ಕೆಲ್ ಮೊದಲ ಬಾರಿಗೆ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದಿದೆ. ಆದಾಗ್ಯೂ, ತಂಡ ಮತ್ತು ಸೂಪರ್ ಕಿಂಗ್ಸ್ ಕುಟುಂಬದೊಂದಿಗಿನ ಅವರ ಸಂಬಂಧ ಹೊಸದಲ್ಲ. ಅವರು ಲೀಗ್‌ನ ಮೊದಲ ಸೀಸನ್‌ನಿಂದ ಜೋಬರ್ಗ್ ಸೂಪರ್ ಕಿಂಗ್ಸ್ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ ಮತ್ತು ತಂಡದ ಕಾರ್ಯತಂತ್ರ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ(PC-PTI). Source link

Read More

ಗ್ವಾಲಿಯರ್‌ನಲ್ಲಿ ಭಾರತದ ಮೊದಲ ಟೆಲಿಕಾಂ ಉತ್ಪಾದನಾ ವಲಯ ಸ್ಥಾಪನೆ; ಮೊದಲ ಹಂತದಲ್ಲಿ 2,000 ಕೋಟಿ ರೂ. ಹೂಡಿಕೆ – Kannada News | Indias first Telecom Manufacturing Zone to be set up in Gwalior with Rs 2,000 Crore Investment

ನವದೆಹಲಿ, ಜುಲೈ 30: ಗ್ವಾಲಿಯರ್‌ನಲ್ಲಿ ಸ್ಥಾಪನೆಯಾಗಲಿರುವ ಭಾರತದ ಮೊದಲ ಟೆಲಿಕಾಂ ತಯಾರಿಕಾ ವಲಯಕ್ಕೆ ‘ಡಿಕ್ಸನ್ ಟೆಕ್ನಾಲಜೀಸ್’, ‘ಎಚ್‌ಎಫ್‌ಸಿಎಲ್’, ‘ವಿವಿಡಿಎನ್ ಟೆಕ್ನಾಲಜೀಸ್’, ‘ಸಿರ್ಮಾ ಎಸ್‌ಜಿಎಸ್’ ಮತ್ತು ಕೈಗಾರಿಕಾ ಸಂಘಟನೆ ‘ಎಲ್ಸಿನಾ’ ಮುಂತಾದ ಸಂಸ್ಥೆಗಳಿಂದ 2,000 ಕೋಟಿ ರೂ.ಗಳ ಆರಂಭಿಕ ಹೂಡಿಕೆ ದೊರೆತಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಎರಡನೇ ಹಂತದಲ್ಲಿ 10,000 ಕೋಟಿ ಹೂಡಿಕೆಯ ಗುರಿ ಹೊಂದಲಾಗಿದ್ದು, ಒಟ್ಟು ಇದು 35,000 ಕೋಟಿಗಳವರೆಗೆ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸಚಿವ…

Read More

ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ – Kannada News | Frequent Gas Problem? These Daily Habits Could Be the Real Reason

ಇತ್ತೀಚಿನ ದಿನಗಳಲ್ಲಿ ಅನೇಕರು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ, ಆಗಾಗ ಡಕ್ಕು ಬರುವುದು ಹಾಗೂ ಹೊಟ್ಟೆ ಭಾರವಾದ ಅನುಭವದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣವಾಗದೇ ಇದ್ದರೂ, ನಮ್ಮ ದಿನನಿತ್ಯದ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕೆಲವು ಅಭ್ಯಾಸಗಳಿಂದಲೇ ಈ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಗ್ಯಾಸ್ ಸಮಸ್ಯೆ ಪದೇ ಪದೇ ಕಂಡುಬಂದರೆ, ತೀವ್ರ ಹೊಟ್ಟೆನೋವು ಅಥವಾ ಇತರ ಲಕ್ಷಣಗಳೊಂದಿಗೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಹೊಟ್ಟೆಯಲ್ಲಿ ಗ್ಯಾಸ್ ಏಕೆ ಉಂಟಾಗುತ್ತದೆ? ಜೀರ್ಣಕ್ರಿಯೆ ನಡೆಯುವ…

Read More

ಸಭೆ ಬಳಿಕ ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು – Kannada News | Congress High command Leaders Reacts about Karnataka Cabinet Expansion after Rahul Gandhi Meeting In delhi

ನವದೆಹಲಿ, (ಜುಲೈ 30): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಂತಿಮ ಘಟ್ಟ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂದು (ಜುಲೈ 30) ರಾಹುಲ್ ಗಾಂಧಿ ರಾಜ್ಯ ನಾಯಕರ ಜೊತೆ ಸಭೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ಕೆಸಿ ವೇಣುಗೋಪಾಲ್, ಸುರ್ಜೆವಾಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗಿಯಾಗಿದ್ದು, ನೂತನ ಸಚಿವರ ಪಟ್ಟಿ ಬಗ್ಗೆ ಚರ್ಚಿಸಿದ್ದು, ಇದೀಗ ರಾಜ್ಯ ನಾಯಕರು ಬೆಂಗಳೂರಿನತ್ತ…

Read More