‘ಪೆಲೆಟ್ ಗನ್ ದಾಳಿ ನಡೆದೇ ಇಲ್ಲ’; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ಬ್ರಿಜ್ ಲಾಲ್ ತಿರುಗೇಟು – Kannada News | It is not a pellet gun Rahul Gandhi is lying BJP MP Brij Lal hits back

ನವದೆಹಲಿ, ಜುಲೈ 30: ದೆಹಲಿಯ ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿ ದಾಳಿ ನಡೆಸಲಾಗಿತ್ತು ಎಂದು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದರು. ಇಂದು ದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮಾಜಿ ಡಿಜಿಪಿ ಹಾಗೂ ಬಿಜೆಪಿ ಸಂಸದ ಬ್ರಿಜ್ ಲಾಲ್, “ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ನಾನು 37 ವರ್ಷಗಳ ಕಾಲ ಪೊಲೀಸ್ ಸೇವೆಯಲ್ಲಿದ್ದಿದ್ದೇನೆ. ಜನಸಂದಣಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಜನಸಂದಣಿ ಹತೋಟಿ ಮೀರಿದಾಗ, ರಬ್ಬರ್ ಬುಲೆಟ್ ಸೇರಿದಂತೆ ಪ್ರಾಣಾಪಾಯವಿಲ್ಲದ ಅಸ್ತ್ರಗಳನ್ನು ಬಳಸಲಾಗುತ್ತದೆ. ಅದು ಪೆಲೆಟ್ ಗನ್ ಅಲ್ಲ, ಬದಲಾಗಿ ಬೋರ್ ಗನ್” ಎಂದು ವಾಗ್ದಾಳಿ ನಡೆಸಿದ್ದಾರೆ.

“ನಾನು ಅವರಿಗೆ 1966ರ ನವೆಂಬರ್ 7ರ ಘಟನೆಯನ್ನು ನೆನಪಿಸಲು ಬಯಸುತ್ತೇನೆ. ಗೋಹತ್ಯೆ ವಿರುದ್ಧ ಸಾಧುಗಳು ಗೋವುಗಳೊಂದಿಗೆ ಇದೇ ಸಂಸತ್ತಿನ ಮುಂದೆ ಬಂದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲೆ ನೇರವಾಗಿ ಗುಂಡು ಹಾರಿಸಲು ಆದೇಶಿಸಿದ್ದರು. ಕಾಂಗ್ರೆಸ್ ಸರ್ಕಾರ ಮಾಡಿದಂತೆ ಬಿಜೆಪಿ ಸರ್ಕಾರ ಮಾಡಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಅವರು ಭಾರಿ ದೊಡ್ಡ ಸುಳ್ಳುಗಾರ. ಲಾಠಿಗಳಲ್ಲಿ ಮೊಳೆಗಳು ಇದ್ದುದನ್ನು ಅವರು ಎಲ್ಲಿ ನೋಡಿದರು?ಇದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ” ಎಂದು ಬ್ರಿಜ್ ಲಾಲ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ – Kannada News | Day after Lok Sabha Today Rajya Sabha passes anti paper leak bill to become Law after President assent

ನವದೆಹಲಿ, ಜುಲೈ 30: ಲೋಕಸಭೆಯಲ್ಲಿ ಅಂಗೀಕಾರಗೊಂಡ ಮರುದಿನವೇ ಅಂದರೆ ಇಂದು (ಗುರುವಾರ) ವಿರೋಧ ಪಕ್ಷಗಳ ಗದ್ದಲ ಮತ್ತು ಸಭಾತ್ಯಾಗದ ನಡುವೆಯೂ ರಾಜ್ಯಸಭೆಯು ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ’ವನ್ನು (Anti-Paper Leak Bill) ಅಂಗೀಕರಿಸಿದೆ. ಈ ವಿಧೇಯಕವನ್ನು ಈಗ ಅಂತಿಮ ಅಂಕಿತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲಾಗುತ್ತದೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಇದು ದೇಶದ ವಿದ್ಯಾರ್ಥಿಗಳು ಮತ್ತು ಯುವಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸರ್ಕಾರದ ಅತ್ಯುನ್ನತ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದರು.

ಈ ವಿಧೇಯಕವನ್ನು ಮಂಡಿಸುತ್ತಾ ಮಾತನಾಡಿದ ಜಿತೇಂದ್ರ ಸಿಂಗ್, “ಪ್ರತಿಯೊಬ್ಬರಿಗೂ ತಿಳಿದಿರುವಂತೆ ಈ ವಿಧೇಯಕವು ಕೆಳಮನೆಯಲ್ಲಿ ಅಂಗೀಕಾರಗೊಂಡಿದೆ. ಅಲ್ಲಿ ಸುಮಾರು 10 ಗಂಟೆಗಳ ಕಾಲ ಚರ್ಚೆಗೆ ಸಮಯ ಮೀಸಲಿಡಲಾಗಿತ್ತು. ಗದ್ದಲದ ನಡುವೆಯೂ ಅಲ್ಲಿ ಚರ್ಚೆ ನಡೆದಿದೆ. ಈಗ ಈ ವಿಧೇಯಕವು ಮೇಲ್ಮನೆಗೆ ಅಂದರೆ ಹಿರಿಯರ, ಜ್ಞಾನಿಗಳ ಮತ್ತು ಪರಿಣತರ ಮನೆಗೆ ಬಂದಿದೆ” ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ದೆಹಲಿ ಸರ್ಕಾರ; ಪ್ರತಿಭಟನಾಕಾರರ ಮೇಲಿನ ಕೇಸ್ ಕೈಬಿಡಲು ನಿರ್ಧಾರ

ಪರೀಕ್ಷಾ ಅಕ್ರಮ ತಡೆ ಕಾಯ್ದೆಗೆ ತಿದ್ದುಪಡಿ ತಂದಿದ್ದೇಕೆ?:

ನೀಟ್ (NEET-UG 2024) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ಭಾರಿ ಜನಾಕ್ರೋಶ ವ್ಯಕ್ತವಾದ ನಂತರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024’ ಅನ್ನು ಜಾರಿಗೆ ತರಲಾಗಿತ್ತು. ಈ ಕಾನೂನು ಪರೀಕ್ಷಾ ವಂಚನೆಗಳನ್ನು ಅಪರಾಧ ಎಂದು ಘೋಷಿಸಿತ್ತಾದರೂ, ಕಾಯ್ದೆ ಜಾರಿಯಲ್ಲಿದ್ದರೂ ಈ ವರ್ಷ ಕೂಡ ನೀಟ್ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಯ ನಂತರ ಈ ವಿಷಯವು 2026ರಲ್ಲಿ ಮತ್ತಷ್ಟು ತೀವ್ರರೂಪಕ್ಕೆ ತಿರುಗಿತು.

ಇದನ್ನೂ ಓದಿ: ‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಪದೇಪದೆ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಯು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಿದೆ ಹಾಗೂ ಹಲವರನ್ನು ಆತ್ಮಹತ್ಯೆಗೆ ತಳ್ಳಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ವಿದ್ಯಾರ್ಥಿಗಳು ವ್ಯವಸ್ಥಿತ ಸುಧಾರಣೆಗಳು, ಹೊಣೆಗಾರಿಕೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಯಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳೊಂದಿಗೆ ಈ ಚಳವಳಿಯು ತೀವ್ರಗೊಂಡಿತ್ತು. ಸಾರ್ವಜನಿಕರ ಹೆಚ್ಚುತ್ತಿರುವ ಒತ್ತಡದ ನಡುವೆ ಕೇಂದ್ರ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ಸಂಸತ್ತಿನಲ್ಲಿ ಮಂಡಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟೀಫನ್ ಫ್ಲೆಮಿಂಗ್ ಬದಲಿಗೆ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ – Kannada News | Albie Morkel Named Joburg Super Kings Head Coach for SA20, Replacing Fleming

ಜುಲೈ 30 ರಂದು ಫ್ರಾಂಚೈಸಿ ಅಧಿಕೃತವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, SA20 ಯ ಐದನೇ ಸೀಸನ್‌ನಲ್ಲಿ ಮಾರ್ಕೆಲ್ ಮೊದಲ ಬಾರಿಗೆ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದಿದೆ. ಆದಾಗ್ಯೂ, ತಂಡ ಮತ್ತು ಸೂಪರ್ ಕಿಂಗ್ಸ್ ಕುಟುಂಬದೊಂದಿಗಿನ ಅವರ ಸಂಬಂಧ ಹೊಸದಲ್ಲ. ಅವರು ಲೀಗ್‌ನ ಮೊದಲ ಸೀಸನ್‌ನಿಂದ ಜೋಬರ್ಗ್ ಸೂಪರ್ ಕಿಂಗ್ಸ್ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ ಮತ್ತು ತಂಡದ ಕಾರ್ಯತಂತ್ರ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ(PC-PTI).

Source link

ಗ್ವಾಲಿಯರ್‌ನಲ್ಲಿ ಭಾರತದ ಮೊದಲ ಟೆಲಿಕಾಂ ಉತ್ಪಾದನಾ ವಲಯ ಸ್ಥಾಪನೆ; ಮೊದಲ ಹಂತದಲ್ಲಿ 2,000 ಕೋಟಿ ರೂ. ಹೂಡಿಕೆ – Kannada News | Indias first Telecom Manufacturing Zone to be set up in Gwalior with Rs 2,000 Crore Investment

ನವದೆಹಲಿ, ಜುಲೈ 30: ಗ್ವಾಲಿಯರ್‌ನಲ್ಲಿ ಸ್ಥಾಪನೆಯಾಗಲಿರುವ ಭಾರತದ ಮೊದಲ ಟೆಲಿಕಾಂ ತಯಾರಿಕಾ ವಲಯಕ್ಕೆ ‘ಡಿಕ್ಸನ್ ಟೆಕ್ನಾಲಜೀಸ್’, ‘ಎಚ್‌ಎಫ್‌ಸಿಎಲ್’, ‘ವಿವಿಡಿಎನ್ ಟೆಕ್ನಾಲಜೀಸ್’, ‘ಸಿರ್ಮಾ ಎಸ್‌ಜಿಎಸ್’ ಮತ್ತು ಕೈಗಾರಿಕಾ ಸಂಘಟನೆ ‘ಎಲ್ಸಿನಾ’ ಮುಂತಾದ ಸಂಸ್ಥೆಗಳಿಂದ 2,000 ಕೋಟಿ ರೂ.ಗಳ ಆರಂಭಿಕ ಹೂಡಿಕೆ ದೊರೆತಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಎರಡನೇ ಹಂತದಲ್ಲಿ 10,000 ಕೋಟಿ ಹೂಡಿಕೆಯ ಗುರಿ ಹೊಂದಲಾಗಿದ್ದು, ಒಟ್ಟು ಇದು 35,000 ಕೋಟಿಗಳವರೆಗೆ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಗ್ವಾಲಿಯರ್‌ನಲ್ಲಿ ದೇಶದ ಮೊದಲ ಟೆಲಿಕಾಂ ಉತ್ಪಾದನಾ ವಲಯ ಸ್ಥಾಪನೆಯು ಮಧ್ಯಪ್ರದೇಶ ಮತ್ತು ದೇಶ ಎರಡಕ್ಕೂ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸ್ವಾವಲಂಬಿ ಭಾರತ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಅಭಿವೃದ್ಧಿ ಹೊಂದಿದ ಭಾರತ 2047ರ ಸಂಕಲ್ಪಕ್ಕೆ ಹೊಸ ಪ್ರಚೋದನೆಯನ್ನು ನೀಡುತ್ತದೆ. ಇದು ಜಾಗತಿಕ ಟೆಲಿಕಾಂ ಉತ್ಪಾದನಾ ವಲಯದಲ್ಲಿ ದೇಶಕ್ಕೆ ಹೊಸ ಗುರುತನ್ನು ನೀಡುತ್ತದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಲ್ಲಿ ಮಧ್ಯಪ್ರದೇಶ ಕೈಗಾರಿಕಾ ಅಭಿವೃದ್ಧಿ ಮತ್ತು ಸ್ವಾವಲಂಬನೆಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ದೆಹಲಿ ಸರ್ಕಾರ; ಪ್ರತಿಭಟನಾಕಾರರ ಮೇಲಿನ ಕೇಸ್ ಕೈಬಿಡಲು ನಿರ್ಧಾರ

14 ಸಾವಿರ ಉದ್ಯೋಗ ಸೃಷ್ಟಿ:

ಈ ಯೋಜನೆಯು ಮಧ್ಯಪ್ರದೇಶದಲ್ಲಿ ಒಟ್ಟು 35,000 ಕೋಟಿ ರೂ. ಹೂಡಿಕೆ ತರುವ ನಿರೀಕ್ಷೆಯಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಇದು 14,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಮೊದಲ ಹಂತದಲ್ಲಿಯೇ, ಡಿಕ್ಸನ್ ಟೆಕ್ನಾಲಜೀಸ್, HFCL ಮತ್ತು ತೇಜಸ್ ನೆಟ್‌ವರ್ಕ್ಸ್‌ನಂತಹ ಪ್ರಮುಖ ಕಂಪನಿಗಳು ಸುಮಾರು 2,000 ಕೋಟಿ ರೂ. ಹೂಡಿಕೆ ಮಾಡುತ್ತಿವೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಕಾರ್ಯಗತಗೊಳಿಸಲು, ಮಧ್ಯಪ್ರದೇಶ ಸರ್ಕಾರದಿಂದ ಶೇ.51ರಷ್ಟು ಮತ್ತು ದೂರಸಂಪರ್ಕ ಇಲಾಖೆಯಿಂದ ಶೇ.49ರಷ್ಟು ಭಾಗವಹಿಸುವಿಕೆಯೊಂದಿಗೆ ವಿಶೇಷ ಉದ್ದೇಶದ ವಾಹನವನ್ನು ರಚಿಸಲಾಗುವುದು.

ವಿಸ್ತೀರ್ಣ ಮತ್ತು ಮಾದರಿ:

ಟೆಲಿಕಾಂ ಇಲಾಖೆಯ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಗ್ವಾಲಿಯರ್‌ನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ‘ಪ್ಲಗ್-ಆ್ಯಂಡ್-ಪ್ಲೇ’ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯ ಮೊದಲ ಹಂತದಲ್ಲಿ ಕೋರ್ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರತ ಸರ್ಕಾರವು 500 ಕೋಟಿ ರೂ.ಗಳ ಶೇ. 100ರಷ್ಟು ಹಣಕಾಸಿನ ನೆರವನ್ನು ಅನುಮೋದಿಸಿದೆ.

ಇದನ್ನೂ ಓದಿ: ಐಐಟಿ ಪ್ರಾಧ್ಯಾಪಕರನ್ನು ಗೋಮೂತ್ರ ತಜ್ಞ ಎಂದಿದ್ದ ಪ್ರಿಯಾಂಕಾ ಗಾಂಧಿ; 215ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ತೀವ್ರ ಖಂಡನೆ

ಈ ಸಮಗ್ರ ಕ್ಯಾಂಪಸ್ ಮೊಬೈಲ್ ಫೋನ್‌ಗಳು, ನೆಟ್‌ವರ್ಕ್ ಉಪಕರಣಗಳು, ಫೈಬರ್ ಆಪ್ಟಿಕ್ಸ್, ಸೆಮಿಕಂಡಕ್ಟರ್‌ಗಳು ಮತ್ತು ಮುಂದಿನ ಪೀಳಿಗೆಯ 5ಜಿ ಹಾಗೂ 6ಜಿ ತಂತ್ರಜ್ಞಾನಗಳ ಸಂಶೋಧನೆ, ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಮತ್ತು ತಯಾರಿಕೆಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ – Kannada News | Frequent Gas Problem? These Daily Habits Could Be the Real Reason

ಇತ್ತೀಚಿನ ದಿನಗಳಲ್ಲಿ ಅನೇಕರು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ, ಆಗಾಗ ಡಕ್ಕು ಬರುವುದು ಹಾಗೂ ಹೊಟ್ಟೆ ಭಾರವಾದ ಅನುಭವದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣವಾಗದೇ ಇದ್ದರೂ, ನಮ್ಮ ದಿನನಿತ್ಯದ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕೆಲವು ಅಭ್ಯಾಸಗಳಿಂದಲೇ ಈ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಗ್ಯಾಸ್ ಸಮಸ್ಯೆ ಪದೇ ಪದೇ ಕಂಡುಬಂದರೆ, ತೀವ್ರ ಹೊಟ್ಟೆನೋವು ಅಥವಾ ಇತರ ಲಕ್ಷಣಗಳೊಂದಿಗೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಹೊಟ್ಟೆಯಲ್ಲಿ ಗ್ಯಾಸ್ ಏಕೆ ಉಂಟಾಗುತ್ತದೆ?

ಜೀರ್ಣಕ್ರಿಯೆ ನಡೆಯುವ ವೇಳೆ ಆಹಾರ ವಿಭಜನೆಯಾಗುವಾಗ ಸ್ವಾಭಾವಿಕವಾಗಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಜೊತೆಗೆ ಆಹಾರ ಸೇವಿಸುವಾಗ ಅಥವಾ ನೀರು ಕುಡಿಯುವಾಗ ಗಾಳಿ ಹೊಟ್ಟೆಯೊಳಗೆ ಸೇರಿದರೂ ಗ್ಯಾಸ್ ಉಂಟಾಗಬಹುದು. ಕೆಲವು ಆಹಾರ ಪದಾರ್ಥಗಳ ಸೇವನೆ ವಿಧಾನವೂ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಈ ಅಭ್ಯಾಸಗಳು ಗ್ಯಾಸ್ ಸಮಸ್ಯೆಗೆ ಪ್ರಮುಖ ಕಾರಣ

ಆಹಾರವನ್ನು ತುಂಬಾ ವೇಗವಾಗಿ ತಿನ್ನುವುದು: ಆಹಾರವನ್ನು ಸರಿಯಾಗಿ ಜಗಿಯದೇ ಬೇಗನೆ ತಿಂದರೆ ಹೆಚ್ಚು ಗಾಳಿ ಹೊಟ್ಟೆಗೆ ಸೇರುತ್ತದೆ. ಇದರಿಂದ ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಉಂಟಾಗಬಹುದು.

ಊಟ ಮಾಡುವಾಗ ಹೆಚ್ಚು ಮಾತನಾಡುವುದು: ಊಟದ ವೇಳೆ ಮಾತನಾಡುವುದರಿಂದ ಗಾಳಿ ಒಳಗೆ ಹೋಗುವ ಪ್ರಮಾಣ ಹೆಚ್ಚುತ್ತದೆ. ಇದು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.

ಕೋಲ್ಡ್ ಡ್ರಿಂಕ್ಸ್ ಮತ್ತು ಕಾರ್ಬೊನೇಟೆಡ್ ಪಾನೀಯಗಳು: ಸೋಡಾ, ಸಾಫ್ಟ್ ಡ್ರಿಂಕ್ಸ್ ಹಾಗೂ ಕಾರ್ಬೊನೇಟೆಡ್ ಪಾನೀಯಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಇರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಬಹುದು.

ಚ್ಯೂಯಿಂಗ್ ಗಮ್ ಅಥವಾ ಸ್ಟ್ರಾ ಬಳಕೆ: ಚ್ಯೂಯಿಂಗ್ ಗಮ್ ಜಗಿಯುವುದು ಅಥವಾ ಸ್ಟ್ರಾ ಮೂಲಕ ಪದೇ ಪದೇ ನೀರು ಅಥವಾ ಇನ್ನಿತರ ಪಾನೀಯಗಳ ಸೇವನೆಯಿಂದ ಗಾಳಿ ಹೊಟ್ಟೆಗೆ ಸೇರುತ್ತದೆ.

ಕೆಲವು ಆಹಾರಗಳಿಂದ ಗ್ಯಾಸ್ ಹೆಚ್ಚಾಗಬಹುದು: ಕೆಲವರಿಗೆ ಬೀನ್ಸ್, ಎಲೆಕೋಸು, ಬ್ರೊಕೊಲಿ, ಈರುಳ್ಳಿ, ಸೇಬು, ಪಿಯರ್ ಹಣ್ಣು, ಹಾಲು ಮತ್ತು ಹಾಲಿನ ಉತ್ಪನ್ನಗಳು (ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಲ್ಲಿ) ಗ್ಯಾಸ್ ಸಮಸ್ಯೆ ಕಾಣಿಸಬಹುದು. ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರುವುದರಿಂದ ಯಾವ ಆಹಾರದಿಂದ ಸಮಸ್ಯೆಯಾಗುತ್ತಿದೆ ಎಂಬುದನ್ನು ಗಮನಿಸುವುದು ಉತ್ತಮ.

ಇದನ್ನೂ ಓದಿ: ಮಕ್ಕಳಲ್ಲಿ ನಿದ್ರೆಯ ಕೊರತೆ ಆರೋಗ್ಯಕ್ಕೆ ಅಪಾಯ! ಉತ್ತಮ ನಿದ್ರೆಗೆ ಪೋಷಕರು ಪಾಲಿಸಬೇಕಾದ ಸಲಹೆಗಳು

ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಏನು ಮಾಡಬೇಕು?

  • ಆಹಾರವನ್ನು ನಿಧಾನವಾಗಿ ಹಾಗೂ ಚೆನ್ನಾಗಿ ಜಗಿದು ಸೇವಿಸಿ.
  • ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ.
  • ಊಟದ ಬಳಿಕ 10-15 ನಿಮಿಷ ನಡೆಯಿರಿ.
  • ಕಾರ್ಬೊನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಿ.
  • ಫೈಬರ್ ಇರುವ ಆಹಾರವನ್ನು ನಿಧಾನವಾಗಿ ಆಹಾರದಲ್ಲಿ ಸೇರಿಸಿ.
  • ಒಂದೇ ಬಾರಿ ಹೆಚ್ಚು ತಿನ್ನುವ ಬದಲು ಸಣ್ಣ ಪ್ರಮಾಣದಲ್ಲಿ ಹಲವಾರು ಬಾರಿ ಆಹಾರ ಸೇವಿಸಿ.
  • ನಿಯಮಿತ ವ್ಯಾಯಾಮ ಮತ್ತು ಯೋಗ ಅಭ್ಯಾಸ ಮಾಡಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

  • ತೀವ್ರ ಹೊಟ್ಟೆನೋವು
  • ನಿರಂತರ ಹೊಟ್ಟೆ ಉಬ್ಬರ
  • ಮಲಬದ್ಧತೆ ಅಥವಾ ಅತಿಸಾರ
  • ಮಲದಲ್ಲಿ ರಕ್ತ
  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
  • ವಾಂತಿ
  • ಆಹಾರ ನುಂಗಲು ಕಷ್ಟವಾಗುವುದು

ಪ್ರತಿದಿನ 25–30 ಗ್ರಾಂ ಫೈಬರ್ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಆದರೆ ಫೈಬರ್ ಅನ್ನು ನಿಧಾನವಾಗಿ ಹೆಚ್ಚಿಸಬೇಕು, ಇಲ್ಲದಿದ್ದರೆ ಆರಂಭದಲ್ಲಿ ಗ್ಯಾಸ್ ಹೆಚ್ಚಾಗಬಹುದು. ಮೊಸರು, ಮಜ್ಜಿಗೆ ಮತ್ತು ಪ್ರೋಬಯೋಟಿಕ್ ಆಹಾರಗಳು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಶುಂಠಿ, ಜೀರಿಗೆ, ಸೋಂಪು ಹಾಗೂ ಓಮ (ಅಜ್ವೈನ್) ಮುಂತಾದ ಸಾಂಪ್ರದಾಯಿಕ ಮಸಾಲೆಗಳು ಕೆಲವರಲ್ಲಿ ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡಲು ನೆರವಾಗಬಹುದು.

ಗಮನಿಸಿ: ಈ ಲೇಖನವು ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆಯಂತೆ ಮಾತ್ರ ಆಹಾರ ಬದಲಾವಣೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಭೆ ಬಳಿಕ ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು – Kannada News | Congress High command Leaders Reacts about Karnataka Cabinet Expansion after Rahul Gandhi Meeting In delhi

ನವದೆಹಲಿ, (ಜುಲೈ 30): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಂತಿಮ ಘಟ್ಟ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂದು (ಜುಲೈ 30) ರಾಹುಲ್ ಗಾಂಧಿ ರಾಜ್ಯ ನಾಯಕರ ಜೊತೆ ಸಭೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ಕೆಸಿ ವೇಣುಗೋಪಾಲ್, ಸುರ್ಜೆವಾಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗಿಯಾಗಿದ್ದು, ನೂತನ ಸಚಿವರ ಪಟ್ಟಿ ಬಗ್ಗೆ ಚರ್ಚಿಸಿದ್ದು, ಇದೀಗ ರಾಜ್ಯ ನಾಯಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು ಸಭೆ ಬಳಿಕ ವೇಣುಗೋಪಾಲ್ ಹಾಗೂ ಸುರ್ಜೆವಾಲ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವನ ದೇವಾಲಯದಲ್ಲಿ ಸನ್‌ಗ್ಲಾಸ್ ಧರಿಸಿ ಪೂಜೆ: ನಟಿ ಭೂಮಿ ಪೆಡ್ನೇಕರ್ ವಿರುದ್ಧ ನೆಟ್ಟಿಗರ ಆಕ್ರೋಶ – Kannada News | Actress Bhumi Pednekar Trolled for wearing Sunglasses Inside Shiv Temple

ಖ್ಯಾತ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ (Bhumi Pednekar) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ. ಶಿವನ ದೇವಾಲಯದ ಒಳಗೆ ಕಪ್ಪು ಕೂಲಿಂಗ್ ಗ್ಲಾಸ್ (Sunglasses) ಧರಿಸಿ ಪೂಜೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ. ಶ್ರಾವಣ ಮಾಸದ ಆರಂಭದ ಅಂಗವಾಗಿ ಭೂಮಿ ಪೆಡ್ನೇಕರ್ ಅವರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅವು ವೈರಲ್ ಆಗಿದ್ದು, ಜನರು ಕಮೆಂಟ್ ಮಾಡುತ್ತಿದ್ದಾರೆ.

ಬ್ಲ್ಯಾಕ್ ಟಾಪ್ ಮತ್ತು ನೀಲಿ ಡೆನಿಮ್ ಜೀನ್ಸ್ ಧರಿಸಿದ್ದ ಭೂಮಿ ಪೆಡ್ನೇಕರ್ ಅವರು ಕಣ್ಣಿಗೆ ಕಪ್ಪು ಸನ್‌ಗ್ಲಾಸ್ ಧರಿಸಿ ಶಿವಲಿಂಗದ ಮುಂದೆ ಕೈಮುಗಿದು ನಿಂತಿರುವುದು ಕಂಡುಬಂದಿದೆ. ಈ ಫೋಟೋಗಳ ಜೊತೆಗೆ, ‘ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ, ನಾನು ಸರಳ ಜೀವನಕ್ಕಾಗಿ ಪ್ರಾರ್ಥಿಸುವುದಿಲ್ಲ. ಬದಲಿಗೆ ಅದನ್ನು ಗೌರವ ಮತ್ತು ಶಕ್ತಿಯಿಂದ ಎದುರಿಸುವ ಸಾಮರ್ಥ್ಯ ನೀಡುವಂತೆ ಕೋರುತ್ತೇನೆ. ಹರ ಹರ ಮಹಾದೇವ್’ ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

ತರಾಟೆಗೆ ತೆಗೆದುಕೊಂಡ ನೆಟ್ಟಿಗರು:

ಆದರೆ, ದೇವಾಲಯದ ಆವರಣದಲ್ಲಿ ನಟಿಯ ಈ ರೀತಿಯ ಆಧುನಿಕ ಉಡುಪು ಮತ್ತು ಸನ್‌ಗ್ಲಾಸ್ ಧರಿಸಿ ಪೂಜೆ ಸಲ್ಲಿಸಿದ್ದಕ್ಕೆ ಅನೇಕ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಪೂಜೆ ಮಾಡುವಾಗ ಆ ಸನ್‌ಗ್ಲಾಸ್ ತೆಗೆಯಬಹುದಿತ್ತು ಅಲ್ಲವೇ?’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ‘ಸನ್‌ಗ್ಲಾಸ್ ಹಾಕಿಕೊಂಡು ಪೂಜೆ ಮಾಡುವುದನ್ನು ನಾನು ಎಲ್ಲೂ ನೋಡಿಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಟೀಕೆಗೆ ಉತ್ತರ ನೀಡದ ನಟಿ:

ಕಮೆಂಟ್ ಮಾಡಿರುವ ಇನ್ನು ಕೆಲವರು ‘ಇದು ದೇವಸ್ಥಾನದಲ್ಲಿ ದೇವರ ಭಕ್ತಿಯೋ ಅಥವಾ ಫೋಟೋಶೂಟ್‌ ಮಾಡುವ ಜಾಗವೋ?’ ಎಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಯಾವುದೇ ಟೀಕೆಗಳಿಗೆ ಭೂಮಿ ಪೆಡ್ನೇಕರ್ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ಸಿನಿಮಾಗೆ ಬಾಲಿವುಡ್ ನಟಿ ಎಂಟ್ರಿ: ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್

ಬೆಳವಡಿ ಮಲ್ಲಮ್ಮನಾಗಿ ಭೂಮಿ:

ಸಿನಿಮಾ ಬಗ್ಗೆ ಹೇಳುವುದಾದರೆ, ಭೂಮಿ ಪೆಡ್ನೇಕರ್ ಅವರು ಶೀಘ್ರದಲ್ಲೇ ಬಹುನಿರೀಕ್ಷಿತ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಅವರು ಕರ್ನಾಟಕದ ವೀರರಾಣಿ ಬೆಳವಡಿ ಮಲ್ಲಮ್ಮನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಸಂದೀಪ್ ಸಿಂಗ್ ನಿರ್ಮಿಸುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಂಗಭದ್ರಾ ಜಲಾಶಯದ ಮಣ್ಣು ಲೂಟಿ: ಟಿಪ್ಪರ್ ತಡೆದ ಬಿಜೆಪಿ MLCಗೆ ‘ನಾನೇ ದಂಡ ಕಟ್ಟುತ್ತೇನೆಂದ’ ಸಿಪಿಐ – Kannada News | Tungabhadra Reservoir Soil Loot: CPI Tells BJP MLC Who Stopped Tipper, I’ll Pay the Fine Myself

ಕೊಪ್ಪಳ, ಜುಲೈ 30: ತೀವ್ರ ಬರಗಾಲದ ನಡುವೆ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ (Illegal soil transportation) ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೊಪ್ಪಳ (koppal) ತಾಲೂಕಿನ ಕರ್ಕಿಹಳ್ಳಿ ಸಮೀಪ ತಡರಾತ್ರಿ ಸ್ವತಃ ಸ್ಥಳಕ್ಕೆ ತೆರಳಿದ ಬಿಜೆಪಿ ಎಂಎಲ್​​ಸಿ ಹೇಮಲತಾ ನಾಯಕ್, ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಡೆಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದರೆ ‘ಮಣ್ಣು ನಮ್ಮ ಜಮೀನಿಗೆ ಬೇಕು ಹಾಗೂ ದಂಡವನ್ನು ನಾನು ಕಟ್ಟುತ್ತೇನೆ’ ಎಂದಿರುವ ಪೊಲೀಸ್ ಅಧಿಕಾರಿಯ ಅದೊಂದು ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುವಂತೆ ಗೃಹ ಸಚಿವರಿಗೆ ಒತ್ತಾಯಿಸಲಾಗಿದೆ.

ತಡರಾತ್ರಿ ದಾಳಿ: ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್​​ಗಳನ್ನ ತಡೆದ ಬಿಜೆಪಿ ಎಂಎಲ್​​ಸಿ

ಸದ್ಯ ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆ ಜನರು ನೀರಿಗಾಗಿ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಸಮೀಪ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ತಡರಾತ್ರಿ ದಾಳಿ ನಡೆಸುವ ಮೂಲಕ ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಹಲವು ಟಿಪ್ಪರ್‌ಗಳನ್ನು ತಡೆದಿದ್ದಾರೆ.

ಮಣ್ಣು ನಮ್ಮ ಜಮೀನಿಗೆ ಬೇಕು ಎಂದ ಸಿಪಿಐ 

‘ಮಣ್ಣು ಎಲ್ಲಿಂದ ಸಾಗಿಸಲಾಗುತ್ತಿದೆ’ ಎಂದು ಚಾಲಕರನ್ನು ಪ್ರಶ್ನಿಸಿದ್ದಾರೆ. ಬಳಿಕ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ ಹೇಮಲತಾ ನಾಯಕ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಜಯಪ್ರಕಾಶ್​​ರೊಂದಿಗೆ ಫೋನ್​​ನಲ್ಲಿ ಮಾತನಾಡಿದ್ದಾರೆ. ಮಾತುಕತೆ ವೇಳೆ ‘ಮಣ್ಣು ನಮ್ಮ ಜಮೀನಿಗೆ ಬೇಕು ಹಾಗೂ ದಂಡವನ್ನು ನಾನು ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೂಡಲೇ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಮಲತಾ ನಾಯಕ್ ಒತ್ತಾಯಿಸಿದ್ದಾರೆ.

ಊಟ ಮಾಡುವುದಕ್ಕೂ ಕಷ್ಟವಾಗುತ್ತಿದೆ: ಸಾರ್ವಜನಿಕರು ಬೇಸರು

ಇನ್ನು ಇದೇ ವೇಳೆ ಸಾರ್ವಜನಿಕರು ಕೂಡ ಅಕ್ರಮ ಮಣ್ಣು ಸಾಗಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡೀ ಟಿಪ್ಪರ್‌ಗಳು ಓಡಾಡುತ್ತವೆ. ‘ನೆಮ್ಮದಿಯಾಗಿ ಬದುಕುವುದಲ್ಲ, ಊಟ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಅಷ್ಟೊಂದು ವಾಹನಗಳು ಸಂಚರಿಸುತ್ತವೆ’ ಎಂದು ಅಳಲು ತೋಡಿಕೊಂಡರು.

ಸಿಪಿಐ ವಿರುದ್ಧ ಎಸ್​ಪಿ ತನಿಖೆಗೆ ಸೂಚನೆ

ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಿರುವ ಹೇಮಲತಾ ನಾಯಕ್, ‘ತುಂಗಭದ್ರಾ ಹಿನ್ನೀರಿನ ಪ್ರದೇಶದ ಸಂಪತ್ತನ್ನು ರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಇತ್ತ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ವಿರುದ್ಧ ಎಸ್​ಪಿ ತನಿಖೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು

ಇನ್ನು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಟ ಗೊತ್ತಿದ್ದರು ಅಧಿಕಾರಿಗಳು ಇಷ್ಟು ದಿನ ಸುಮ್ಮನಿದ್ದರಾ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಗಣಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕೂಳಿತಿದ್ದು ಏಕೆ? ಪೊಲೀಸ್ ಅಧಿಕಾರಿ ಜಯಪ್ರಕಾಶ್​​ಗೂ ದಂಧೆಕೋರರಿಗೂ ಏನು ಸಂಬಂಧ ಎನ್ನುವುದು ತಿನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ – Kannada News | Indian Hockey Jersey Color Change: Orange Sparks Controversy; Rasquinha vs Hockey India

2026 ರ ಹಾಕಿ ವಿಶ್ವಕಪ್‌ಗೆ (2026 Hockey World Cup) ಮುಂಚಿತವಾಗಿ, ಭಾರತೀಯ ಹಾಕಿ ತಂಡದ (Indian Hockey) ಜೆರ್ಸಿ ಬಣ್ಣವನ್ನು ನೀಲಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ಬದಲಾಯಿಸಲಾಗಿದೆ. ಹಾಕಿ ಇಂಡಿಯಾ ಜುಲೈ 27 ರಂದು ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಿದ್ದು, ಜೆರ್ಸಿ ಬಣ್ಣವನ್ನು ಬದಲಾಯಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವುದಕ್ಕೆ ಅಸಮಾಧಾನ ಹೊರಹಾಕಿರುವ ತಂಡದ ಮಾಜಿ ನಾಯಕ ವೀರೆನ್ ರಸ್ಕ್ವಿನ್ಹಾ, ನೀಲಿ ಜೆರ್ಸಿ ನಮ್ಮ ಗುರುತು ಅದನ್ನು ಬದಲಿಸಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೊಬ್ಬ ಮಾಜಿ ನಾಯಕ ಪಟ್ಗಟ್ ಸಿಂಗ್ ಕೂಡ ಜೆರ್ಸಿ ಬಣ್ಣ ಬದಲಾವಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡೆ ನಾಚಿಕೆಗೇಡಿನ ಸಂಗತಿ

ಹಾಕಿ ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್​ಗಳನ್ನು ಮಾಡಿರುವ ವೀರೆನ್, ‘ಹಾಕಿ ಇಂಡಿಯಾ ಖಂಡಿತವಾಗಿಯೂ ಬಹಳಷ್ಟು ಒಳ್ಳೆಯ ಕೆಲಸ ಮಾಡಿದೆ. ಆದರೆ ಜೆರ್ಸಿ ಬಣ್ಣವನ್ನು ಬದಲಿಸುವ ಈ ನಡೆ ನಾಚಿಕೆಗೇಡಿನ ಸಂಗತಿ. ನೀಲಿ ಬಣ್ಣವು ಯಾವಾಗಲೂ ಭಾರತೀಯ ತಂಡದ ಗುರುತು ಮತ್ತು ಪರಂಪರೆಯಾಗಿದೆ. ನಾನು ಹಲವು ವರ್ಷಗಳಿಂದ ನೀಲಿ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ನಮ್ಮ ಭಾರತೀಯ ತಂಡವನ್ನು ನೀಲಿ ಬಣ್ಣದಲ್ಲಿ ನೋಡಲು ಬಯಸುತ್ತಾರೆ. ಹಾಗಾದರೆ ಕೇಸರಿ ಬಣ್ಣದ ಹಿಂದಿನ ತರ್ಕವೇನು?’ ಎಂದು ಬರೆದುಕೊಂಡಿದ್ದಾರೆ.

ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿರುವ ವೀರೆನ್, ‘ತಮ್ಮ ಪೋಸ್ಟ್‌ನಲ್ಲಿ ಅನೇಕ ಅನಗತ್ಯ ರಾಜಕೀಯ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ, ನನ್ನ ಪ್ರಶ್ನೆಯು ತಂಡದ ಹೆಮ್ಮೆ, ಗುರುತು ಮತ್ತು ಪರಂಪರೆಯ ಬಗ್ಗೆ ಮಾತ್ರ ಎಂದಿದ್ದಾರೆ.

ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ

ವೀರೆನ್ ರಸ್ಕ್ವಿನ್ಹಾ ಅವರ ಪ್ರಶ್ನೆಗೆ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರತಿಕ್ರಿಯೆ ನೀಡಿದ್ದು, ‘ಟೀಮ್ ಇಂಡಿಯಾ ನೀಲಿ ಜೆರ್ಸಿ ಧರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ . ಆದರೆ ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ. 2014 ರಲ್ಲಿ ತಂಡವು ಹಳದಿ ಬಣ್ಣವನ್ನು ಧರಿಸಿ 2018 ರಲ್ಲಿ ತಿಳಿ ನೀಲಿ ಬಣ್ಣವನ್ನು ಅಳವಡಿಸಿಕೊಂಡಿದ್ದು ನನಗೆ ನೆನಪಿದೆ. ಈ ಬಾರಿ ತಂಡದ ಜೆರ್ಸಿ ಬಣ್ಣವನ್ನು ಬದಲಾಯಿಸುವ ಸಲಹೆಯು ತರಬೇತುದಾರರು, ಸಹಾಯಕ ಸಿಬ್ಬಂದಿ, ನಾಯಕ ಮತ್ತು ಆಟಗಾರರಿಂದ ಬಂದಿದೆ.

ಹಾಕಿ ಟರ್ಫ್ ನೀಲಿ ಬಣ್ಣದ್ದಾಗಿರುವುದರಿಂದ ಮತ್ತು ಆಟಗಾರರ ಕಿಟ್‌ಗಳು ಸಹ ನೀಲಿ ಬಣ್ಣದ್ದಾಗಿರುವುದರಿಂದ, ಪಂದ್ಯಗಳ ಸಮಯದಲ್ಲಿ ಗೊಂದಲ ಉಂಟಾಗುತ್ತಿತ್ತು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೂಚಿಸಿದ್ದರು. ಅಂತಿಮವಾಗಿ, ನಾವು ಕಿತ್ತಳೆ ಬಣ್ಣವನ್ನು ಆರಿಸಿಕೊಂಡಿದ್ದೇವೆ ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು – Kannada News | PM Narendra Modi chairs CCS meeting on West Asia crisis in Delhi

ನವದೆಹಲಿ, ಜುಲೈ 30: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಭಾರತದ ಮೇಲಾಗುವ ಪ್ರಭಾವವನ್ನು ತಗ್ಗಿಸಲು ವಿವಿಧ ಸಚಿವಾಲಯಗಳು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಭದ್ರತಾ ಸಂಪುಟ ಸಮಿತಿಯ (CCS) ನಾಲ್ಕನೇ ವಿಶೇಷ ಸಭೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಉದ್ವಿಗ್ನತೆಗೆ ಸಂಬಂಧಿಸಿದಂತೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೂ ಇದೇ ರೀತಿಯ ಸಿಸಿಎಸ್ ಸಭೆಗಳು ನಡೆದಿದ್ದವು.

ಇಂದಿನ ಸಭೆಯಲ್ಲಿ ಪ್ರಚಲಿತ ಭೂ ರಾಜಕೀಯ ಪರಿಸ್ಥಿತಿಯ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಸಮಿತಿಗೆ ವಿವರಣೆ ನೀಡಿದರು. ದೇಶದ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (LNG), ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು ರಸಗೊಬ್ಬರಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಡಚಣೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳನ್ನು ಅವರು ವಿವರಿಸಿದರು.

ಈ ಸಭೆಯ ವೇಳೆ ಭಾರತೀಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು. ಅಲ್ಲದೆ, ಭಾರತೀಯ ನಾವಿಕರ ಕುಟುಂಬಗಳಿಗೆ ಅವರ ಕುರಿತು ಸೂಕ್ತ ಮಾಹಿತಿ, ತುರ್ತು ನೆರವು ಮತ್ತು ಆಪ್ತಸಮಾಲೋಚನೆ ಒದಗಿಸಲು ವಿಶೇಷ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.

ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ

ಸಭೆಯಲ್ಲಿ ಚರ್ಚೆಯಾದ ವಿಷಯಗಳು:

ಸಾಕಷ್ಟು ತೈಲ ಲಭ್ಯತೆ ಮತ್ತು ದಾಸ್ತಾನು:

ಎಲ್‌ಪಿಜಿ ಆಮದಿಗಾಗಿ ಭಾರತವು ವಿವಿಧ ಮೂಲಗಳನ್ನು ಬಳಸಿಕೊಳ್ಳುತ್ತಿದ್ದು, ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಮತ್ತು ಪೂರೈಕೆ ಪರ್ಯಾಪ್ತವಾಗಿದೆ. ಸಾಕಷ್ಟು ಪ್ರಮಾಣದ ಕಚ್ಚಾ ತೈಲ ಲಭ್ಯವಿರುವುದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಶೇಕಡಾ 100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೆಟ್ರೋಲ್, ಡೀಸೆಲ್ ಮುಂತಾದ ಅತ್ಯಗತ್ಯ ಇಂಧನಗಳ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ.

ಪಿಎನ್‌ಜಿ (PNG) ಜಾಲದ ವಿಸ್ತರಣೆ:

ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ನ್ಯಾಷನಲ್ ಗ್ಯಾಸ್ ಗ್ರಿಡ್ ವಿಸ್ತರಣೆ, ಎಲ್‌ಎನ್‌ಜಿ ಆಮದು ಸಾಮರ್ಥ್ಯ ಹೆಚ್ಚಳ, ‘ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್’ ಜಾಲ ವಿಸ್ತರಣೆ ಹಾಗೂ ಪೈಪ್‌ಲೈನ್ ಮೂಲಸೌಕರ್ಯ ಆದೇಶ, 2026ರ ಅಡಿಯಲ್ಲಿ ಕೊನೆಯ ಹಂತದ ಸಂಪರ್ಕಗಳಿಗೆ ತ್ವರಿತ ಅನುಮೋದನೆ ನೀಡಲಾಗುತ್ತಿದ್ದು, ದೇಶಾದ್ಯಂತ ಪಿಎನ್‌ಜಿ ಸಂಪರ್ಕಗಳು ಗಮನಾರ್ಹವಾಗಿ ಹೆಚ್ಚಾಗಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ: ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

ರಸಗೊಬ್ಬರ ಪೂರೈಕೆ:

ಮುಂಬರುವ ರಬಿ ಕೃಷಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಲಭ್ಯತೆಯ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ನಿರೀಕ್ಷಿತ ಬೇಡಿಕೆಯನ್ನು ಈಡೇರಿಸಲು ಹಾಗೂ ಪರ್ಯಾಯ ಮೂಲಗಳಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಸಚಿವಾಲಯಗಳ ನಡುವೆ ಸಂಘಟನೆ:

ಸಂಘರ್ಷದ ಪ್ರಭಾವದಿಂದ ದೇಶದ ನಾಗರಿಕರನ್ನು ಹಾಗೂ ಅನಿವಾಸಿ ಭಾರತೀಯರನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ಎಲ್ಲಾ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ನಿರಂತರ ಸಂಯೋಜನೆ ಮತ್ತು ಸಹಕಾರ ಇರಬೇಕೆಂದು ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version