ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Ashada Aadi Friday Horoscope Today: July 31, 2026 Daily Zodiac Predictions for All 12 Rashis by Dr Basavaraj Guruji

ಇಂದು 31-07-2026ರ ಶುಕ್ರವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ಈ ಶುಭ ದಿನವು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ವಿಶೇಷವಾಗಿದೆ. ಇಂದು ಧನಿಷ್ಠ ನಕ್ಷತ್ರದಲ್ಲಿ ಚಂದ್ರ ಸಂಚಾರ ಮಾಡುತ್ತಿದ್ದು, ಇದು ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಬೆಳಗ್ಗೆ 10:49 ರಿಂದ 12:24 ತನಕ ರಾಹುಕಾಲವಿದ್ದು, 12:25 ರಿಂದ 2:01 ತನಕ ಶುಭಕಾಲವಿದೆ. ಆಷಾಢ ಮಾಸದ ‘ಆಡಿ ಶುಕ್ರವಾರ’ವಾಗಿರುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ಪಡೆಯಲು ಇದು ವಿಶೇಷ ದಿನ ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದು, 12 ರಾಶಿಗಳ ದಿನ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಹೃದಯ ವೈಶಾಲ್ಯ ಎಲ್ಲರಿಗೂ ಅರ್ಥವಾಗಲಿದೆ.. – Kannada News | Daily Horoscope for July 31, 2026: Dakshinayana Greeshma season, Ashada Masa Krishna Paksha Friday astrology Prediction

ಮೇಷ ರಾಶಿ:

ಸಲಹೆಯನ್ನು ಉಚಿತವಾಗಿ ಕೊಡಲು ಹೋಗಿ ಅಪಮಾನವಾಗಬಹುದು. ಸಿಕ್ಕಿದಷ್ಟನ್ನೇ ಸ್ವೀಕರಿಸಿ ತೃಪ್ತಿಪಡಿ. ಆಪತ್ತಿನಲ್ಲಿ ಸಹಾಯ ಮಾಡಲಿಲ್ಲ ಎಲ್ಲರನ್ನೂ ಶಪಿಸುವ ಅವಶ್ಯಕತೆ ಇಲ್ಲ ವಿದ್ಯಾಭ್ಯಾಸದಿಂದ ಲಾಭವಿದೆ ಎಂದು ಅನ್ನಿಸಿ ಶ್ರಮವಹಿಸುವಿರಿ. ವ್ಯವಹಾರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಬಹಳ ಶ್ರಮಪಡುವಿರಿ. ಪ್ರತಿಭೆಯ ಅನಾವರಣವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಕಳೆದ ಸಮಯವನ್ನು ನೀವು ಮೆಲುಕು ಹಾಕಿ ಸಮಯ ವ್ಯರ್ಥವಾಗಬಹುದು.

ವೃಷಭ ರಾಶಿ:

ದೈಹಿಕ ಮತ್ತು ಮಾನಸಿಕ ಆಯಾಸದಿಂದ ಪರಿಹಾರ.ವಸಹೋದರರ ಭಿನ್ನಾಭಿಪ್ರಾಯವನ್ನು ಮೂರನೆಯವರು ಸರಿ ಮಾಡುವರು. ಇಂದಿನ ಕೆಲಸಗಳ ಯೋಜನೆ ಬಗ್ಗೆ ಸರಿಯಾದ ದೃಷ್ಟಿ ಇರಲಿ. ದೂರಪ್ರಯಾಣ ಸುಖಕರವಾಗಿ ಇರುವುದು.‌ ಇಂದು ನಿಮಗೆ ಒಡಹುಟ್ಟಿದವರು ಸಾಕಷ್ಟು ವಿರೋಧವನ್ನು ಮಾಡಿಯಾರು. ಸ್ಥಿರಾಸ್ತಿಗೆ ಸಂಬಂಧಿಸಿದ ಸರ್ಕಾರಿ ಕಾನೂನು ತೊಡಕುಗಳು ಇಂದು ನಿವಾರಣೆಯಾಗುವುದು. ಸ್ಪರ್ಧಾತ್ಮಕ ವಿಚಾರದಲ್ಲಿ ಹಿಂದುಳಿಯಬೇಕಾಗುವುದು.

ಮಿಥುನ ರಾಶಿ:

ನಿಮ್ಮ ಮೇಲೆ ಹೆಚ್ಚಿನ ಕಣ್ಣು ಇರುವ ಕಾರಣ ಬಹಳ ಜಾಗರೂಕತೆ ಅವಶ್ಯಕ. ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಭೂಮಿಯ ವ್ಯವಹಾರದವರಿಗೆ ನಂಬಿಕೆ ದ್ರೋಹ ಆಗಬಹುದು. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಚಿಂತನೆಯ ಜೊತೆ ನಿಮ್ಮ ಮುಂದಿನ ಹೆಜ್ಜೆ ಇರಲಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ.

ಕರ್ಕಾಟಕ ರಾಶಿ:

ಭಿನ್ನಮತವನ್ನು ನೀವು ಇಂದೇ ಉಪಶಮನ ಮಾಡಿಕೊಳ್ಳುವುದು ಉತ್ತಮ. ಭೂಮಿಯ ಉತ್ಪನ್ನದ ವ್ಯವಹಾರವು ಬಹಳ ಚೆನ್ನಾಗಿ ಆಗಬಹುದು. ಸರ್ಕಾರದಿಂದ ಬರಬೇಕಾದ ಹಣವು ಬಂದು ಸಾಲದಿಂದ ನೀವು ಮುಕ್ತವಾಗುವಿರಿ. ಯಾವುದೇ ದುರಭ್ಯಾಸವು ನಿಮಗೆ ಕೆಟ್ಟ ಹೆಸರನ್ನು ತರಬಹುದು. ಸಾಹಸಪ್ರಿಯರಿಗೆ ಹೊಸ ವಿಚಾರಗಳು ಬರಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ.

ಸಿಂಹ ರಾಶಿ:

ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಗಲಿದೆ. ಉನ್ನತ ಅಧಿಕಾರಿಗಳಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಅವಸರ ಬೇಡ. ಖರ್ಚನ್ನು ನಿಭಾಯಿಸುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಉಪಕಾರವೇ ನಿಮಗೆ ಹಿಂದಿರುಗಿ ಬರಲಿದೆ. ಬಂಧುಗಳ ಚರಾಸ್ತಿಯು ಸಿಗಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳು ಹೆಚ್ಚಾಗುವುದು.‌

ಕನ್ಯಾ ರಾಶಿ:

ಇಂದು ಮಹಿಳೆಯರಿಗೆ ವೃತ್ತಿಯಲ್ಲಿ ಕಿರಿಕಿರಿ ಉಂಟಾಗಲಿದೆ. ಇಂದಿನ ನಿಮ್ಮ ಕೋಪವನ್ನು ಶಾಂತ ಮಾಡಲು ಸಂಗಾತಿಯು ಶ್ರಮಪಡಬಹುದು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಮಹಿಳೆಯರು ಸಕಾರಾತ್ಮಕ ಚಿಂತನೆಯತ್ತ ಗಮನಕೊಡುವುದು ಉತ್ತಮ. ಅತಿಯಾದ ಆಡಂಬರವು ಇತರ ಕಣ್ಣು ಕುಕ್ಕುವುದು. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ.

ತುಲಾ ರಾಶಿ:

ನಿಮ್ಮ ಕ್ಷಣಿಕ ಕೋಪವೇ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು. ಇಂದು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವ, ಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಕೃಷಿಯು ನಿಮಗೆ ಆಸಕ್ತಿಯ ವಿಷಯವಾಗಿದ್ದು ತೊಡಗಿಕೊಳ್ಳಲು ತೊಡಕುಗಳು ಇರಲಿದೆ. ನೀವು ತೆರಿಗೆಯ ವಿಚಾರದಲ್ಲಿ ಸರಿಯಾಗಿ ಇರಬೇಕಾಗಬಹುದು. ಹಿರಿಯರ ಮಾತನ್ನು ತಾತ್ಸಾರ ಮಾಡುವುದು ಬೇಡ. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ.

ವೃಶ್ಚಿಕ ರಾಶಿ:

ನಿಮ್ಮ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನೀವು ಅಂದುಕೊಂಡಿದ್ದು ಮಾತ್ರ ಸತ್ಯವಾಗಲಾರದು. ಅದಕ್ಕಿರುವ ಮುಖವನ್ನು ಗಮನಿಸಿ ತೀರ್ಮಾನಿಸಿ. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಧೈರ್ಯದಿಂದ ನಿರ್ವಹಿಸಿ. ಉದ್ಯಮಕ್ಕೆ ಆರ್ಥಿಕ ನೆರವು ಸಿಗಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿದ್ದು ಒಪ್ಪಿಕೊಳ್ಳುವಿರಿ. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕಾರದ ಬಗ್ಗೆ ವ್ಯಾಮೋಹವು ಕಡಿಮೆಯಾಗುವುದು. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ.

ಧನು ರಾಶಿ:

ವ್ಯವಹಾರದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಸಮಯ ಇದು. ಅಲ್ಪರ ಸಂಗದಿಂದ ಸ್ವಾಭಿಮಾನ ಧಕ್ಕೆ ಬರುವುದು. ಮುಜುಗರವನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಪ್ರಾಮಾಣಿಕತೆಯಿಂದ ಯಶಸ್ಸು ಸಿಗಲಿದೆ. ಎಲ್ಲ ಕೆಲಸಗಳೂ ಏಕಕಾಲಕ್ಕೆ ಬರಬಹುದು. ನಿಮ್ಮ ಮೇಲಿನ ಭರವಸೆಯು ಸುಳ್ಳಾಗದೇ ಇರಲಿದೆ. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು.

ಮಕರ ರಾಶಿ:

ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ಕಾರ್ಯಗಳಿಗೆ ನೀವು ತರಬೇತಿ ಪಡೆಯುವಿರಿ. ಹೆಚ್ಚು ಜನರ ಸಂಪರ್ಕ ಮಾಡಬೇಕಾದ ಅನಿವಾರ್ಯತೆ ಬರಬಹುದು. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಸ್ನೇಹಿತರ ತಪ್ಪು ನಿಮ್ಮ ಮೇಲೆ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಉತ್ತಮ‌ ಫಲಿತಾಂಶವನ್ನು ಪಡೆಯಬಹುದು. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಮನೋಬಲವನ್ನು ಹೆಚ್ಚು ಮಾಡಿಕೊಳ್ಳಿ.

ಕುಂಭ ರಾಶಿ:

ಇಂದು ನಿಮ್ಮನ್ನು ಕಾಳಜಿ ಮಾಡುವವರ ಜೊತೆ ಸಮಯವನ್ನು ಕಳೆಯುವುದು ಉತ್ತಮ ಎನಿಸಬಹುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಆರಂಭಿಸಿದ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯಿಂದ ಇರುವಿರಿ.‌ ಆರ್ಥಿಕತೆಯ ಗೊಂದಲಕ್ಕೆ ಪರಿಹಾರ ದೊರೆಯುವುದು. ನಿಮ್ಮ ಜಾಣತನವೇ ನಿಮಗೆ ವರವಾಗಲಿದೆ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಆಡಿದ ಮಾತಿಗೆ ಪಶ್ಚಾತ್ತಾಪಪಡಬೇಕಾದೀತು.

ಮೀನ ರಾಶಿ:

ಇಂದು ನಿಮಗೆ ದೇವರಲ್ಲಿ ಭಕ್ತಿಯ ಕೊರತೆ ಕಾಣಿಸುವುದು. ನಿಮ್ಮ ಸಂಕೋಚದ ಸ್ವಭಾವದಿಂದ ಹೇಳಬೇಕಾದ ವಿಚಾರವನ್ನು ಹೇಳದೇ ಸುಮ್ಮನಾಗುವಿರಿ.‌ ಉದ್ಯಮದ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಇಂದು ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವುದು ಕಷ್ಟವಾಗಬಹುದು.‌ ಮನಸ್ಸು ಹಾಳಾಗುವ ಸಾಧ್ಯತೆ ಇದೆ. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಅತಿಗಂಡ, ಕರಣ : ವಣಿಜ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:50 – 12:26, ಯಮಗಂಡ ಕಾಲ 15:36 – 17:11, ಗುಳಿಕ ಕಾಲ 07:41 – 09:16

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET-UG 2026 case: ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರಿಂದಲೇ ಸೋರಿಕೆ, ಸಿಬಿಐ ಸ್ಫೋಟಕ ಮಾಹಿತಿ ಬಹಿರಂಗ – Kannada News | CBI Links NEET UG 2026 question Paper Leak to Teachers who Set Paper And Did translation Work

ನವದೆಹಲಿ, (ಜುಲೈ 30): ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ನೀಟ್-ಯುಜಿ (NEET-UG) 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆಯಲ್ಲಿ ಸ್ಫೋಟಕ ಅಂಶಗಳು ಹೊರಬಂದಿವೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಮತ್ತು ಅದನ್ನು ಅನುವಾದಿಸುವ ಜವಾಬ್ದಾರಿಯನ್ನು ಹೊತ್ತಿದ್ದ ಕೆಲವು ಶಿಕ್ಷಕರೇ ಸೋರಿಕೆಗೆ ನೇರವಾಗಿ ಕಾರಣರಾಗಿದ್ದಾರೆ ಎಂದು ಸಿಬಿಐ ವರದಿ ಬಹಿರಂಗಪಡಿಸಿದೆ.

ನೀಟ್-ಯುಜಿ 2026ರ ಪರೀಕ್ಷೆಯ ಗೌಪ್ಯತೆಯನ್ನು ಕಾಪಾಡುವಲ್ಲಿ ಭಾರಿ ಲೋಪವಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಶ್ನೆ ಪತ್ರಿಕೆ ತಯಾರಿಸುವುದು ಮತ್ತು ಅದರ ಅನುವಾದದಂತಹ ಸೂಕ್ಷ್ಮ ಕೆಲಸಗಳನ್ನು ಒಂದೇ ಗುಂಪಿನ ವ್ಯಕ್ತಿಗಳಿಗೆ ವಹಿಸಿರುವುದು ಈ ಪ್ರಮಾದಕ್ಕೆ ಕಾರಣವಾಗಿದೆ ಎಂಬುದಾಗಿ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಮಿತ ಗುಂಪಿನ ಶಿಕ್ಷಕರಿಗೆ ಪ್ರಮುಖ ಕೆಲಸಗಳನ್ನು ವಹಿಸಿದ್ದು, ಅವರಿಂದಲೇ ಪ್ರಶ್ನೆಪತ್ರಿಕೆಗಳ ಸೋರಿಕೆಯಾಗಿದೆ ಎಂದು ಕೂಡ ತಿಳಿಸಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

ಪ್ರಶ್ನೆಗಳನ್ನು ರೂಪಿಸಿದ ಮತ್ತು ಅನುವಾದಿಸಿದ ಕೆಲ ಶಿಕ್ಷಕರು, ಪರೀಕ್ಷೆಯ ಪ್ರಶ್ನೆಗಳನ್ನು ಮರುಸೃಷ್ಟಿಸಿ ಕೆಲವು ಕೋಚಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸೋರಿಕೆ ಮಾಡಿಕೊಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಪತ್ತೆಹಚ್ಚಿದೆ. ಈ ಘಟನೆಯು ಪರೀಕ್ಷೆಯ ಪಾವಿತ್ರ್ಯತೆ ಹಾಗೂ ಪಾರದರ್ಶಕತೆಗೆ ಧಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಪರೀಕ್ಷಾ ವ್ಯವಸ್ಥೆ ಮತ್ತು ಪ್ರಕ್ರಿಯೆಗಳಲ್ಲಿ ಕಟ್ಟುನಿಟ್ಟಾದ ಬದಲಾವಣೆಗಳನ್ನು ತರುವಂತೆಯೂ ಸಿಬಿಐ ಶಿಫಾರಸು ಮಾಡಿದೆ.

ನೀಟ್ ಪ್ರಶ್ನೆಪತ್ರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆದ ಬಳಿಕ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 10 ವರ್ಷ ಜೈಲು ಹಾಗೂ ಭಾರಿ ದಂಡ ವಿಧಿಸುವ ವಿಧೇಯಕಕ್ಕೆ ಸಂಸತ್ತಿನಲ್ಲಿ ಅಂಗೀಕಾರವೂ ದೊರೆತಿದೆ. ಮತ್ತೊಂದೆಡೆ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಪ್ರಧಾನಿ ಮೋದಿ; ಮಾತು ಕೊಟ್ಟಂತೆ ನಡೆದಿದ್ದೇವೆಂದು ಸೆಲ್ಫೀ ವಿಡಿಯೋ – Kannada News | PM Narendra Modi Back with Selfie Video hails anti paper leak bill in New Instagram Video

ನವದೆಹಲಿ, ಜುಲೈ 30: ಇತ್ತೀಚೆಗೆ ಒಂದಾದ ನಂತರ ಒಂದರಂತೆ ಮಧ್ಯರಾತ್ರಿ ಸೆಲ್ಫೀ ವಿಡಿಯೋ ಮಾಡುವ ಮೂಲಕ ಗಮನಸೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi Video) ಇನ್​ಸ್ಟಾಗ್ರಾಮ್ ಫಾಲೋವರ್​ಗಳ ಸಂಖ್ಯೆಯೂ ಭಾರೀ ಹೆಚ್ಚಳವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಇಂದು ರಾತ್ರಿ ಪ್ರಧಾನಿ ಮೋದಿ ಮತ್ತೊಂದು ಹೊಸ ಸೆಲ್ಫೀ ವಿಡಿಯೋ ರಿಲೀಸ್ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಪ್ರಧಾನಿ ಮೋದಿ, ಪರೀಕ್ಷಾ ಅಕ್ರಮ ತಡೆ ವಿಧೇಯಕದ ಅಂಗೀಕಾರವು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾಗೆ ಕ್ಷಮೆಯೇ ಇಲ್ಲ ಎಂದಿದ್ದಾರೆ.

ಪರೀಕ್ಷಾ ವಂಚನೆ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವವರಿಗೆ ಪ್ರಧಾನಮಂತ್ರಿ ಮೋದಿ ಕಠಿಣ ಎಚ್ಚರಿಕೆಯನ್ನು ನೀಡಿದರು. “ಯಾವುದೇ ಪೇಪರ್ ಮಾಫಿಯಾ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಯಾವುದೇ ಗ್ಯಾಂಗ್ ಮತ್ತು ದೇಶದ ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಯಾವುದೇ ಪಡೆಯನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

“ವಿಕಸಿತ ಭಾರತದ ಕನಸನ್ನು ನನಸು ಮಾಡಲು ಇಡೀ ದೇಶವೇ ಒಟ್ಟಾಗಿ ಮುನ್ನಡೆಯಬೇಕಿದೆ. ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು. ದಶಕಗಳಿಂದಲೂ ಸತತವಾಗಿ ಬಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳನ್ನು ಎದುರಿಸುತ್ತಲೇ ಬಂದಿವೆ. ಹೀಗಾಗಿಯೇ ಪರೀಕ್ಷಾ ಸುಧಾರಣೆಗಳನ್ನು ತರುವುದು ಅತ್ಯಗತ್ಯವಾಗಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು

“ಇದನ್ನು ಎದುರಿಸಲು ನಮಗೆ ಕಠಿಣ ಕಾನೂನುಗಳ ಅಗತ್ಯವಿತ್ತು. ನಾವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಿದೆವು, ಮತ್ತು ನಾನು ನಿಮಗೆ ವಾಗ್ದಾನ ನೀಡಿದಂತೆ, ಸಂಸತ್ತಿನ ಎರಡೂ ಮನೆಗಳಲ್ಲಿ ಅಪಾರ ಸಂಖ್ಯೆಯ ಸಂಸದರ ಭಾಗವಹಿಸುವಿಕೆಯೊಂದಿಗೆ ಈ ಕುರಿತು ಸುದೀರ್ಘ ಚರ್ಚೆಗಳು ನಡೆದಿವೆ” ಎಂದು ಪ್ರಧಾನಿಯವರು ತಮ್ಮ 2.26 ನಿಮಿಷಗಳ ವೀಡಿಯೊದಲ್ಲಿ ತಿಳಿಸಿದ್ದಾರೆ.

“ಒಂದು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಾವು ಸತತವಾಗಿ ಒಂದರ ನಂತರ ಒಂದರಂತೆ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಫಾಸ್ಟ್-ಟ್ರ್ಯಾಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ವಿವಿಧ ಪಾಲುದಾರರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ಸಾಂಸ್ಥಿಕ ಸುಧಾರಣೆಗಳು ಮತ್ತು ರಾಜ್ಯಗಳೊಂದಿಗೆ ಹೆಚ್ಚಿನ ಸಹಕಾರದೊಂದಿಗೆ ಕೆಲಸ ಮಾಡುತ್ತಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ ನಡುವೆಯೂ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ವಿಧೇಯಕವು ಬುಧವಾರವಷ್ಟೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:37 pm, Thu, 30 July 26

Source link

ತಲೆಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಈ ಅಭ್ಯಾಸಗಳು ಸಮಸ್ಯೆಯನ್ನು ಹೆಚ್ಚಿಸಬಹುದು – Kannada News | Persistent Dandruff? Know the Causes, Prevention Tips and When to See a Doctor

ತಲೆಹೊಟ್ಟಿನ (ಡ್ಯಾಂಡ್ರಫ್) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಉತ್ತಮ ಹೇರ್ ಕೇರ್ ಮಾಡಿದರೂ ಕೆಲವರಲ್ಲಿ ಡ್ಯಾಂಡ್ರಫ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ತಲೆಯ ಚರ್ಮದ ಭಾಗದಿಂದ ಬಿಳಿ ಅಥವಾ ಹಳದಿ ಬಣ್ಣದ ಸಣ್ಣ ಪದರಗಳು ಉದುರುವುದು, ತೀವ್ರ ತುರಿಕೆ, ಒಣ ಚರ್ಮ ಇವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಅನೇಕರು ಇದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಕಾಲ ಡ್ಯಾಂಡ್ರಫ್ ಮುಂದುವರಿದರೆ ಉರಿಯೂತ, ಕೆಂಪಾಗುವುದು, ಸಣ್ಣ ಗಾಯಗಳು ಹಾಗೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಡ್ಯಾಂಡ್ರಫ್ ಕಡಿಮೆಯಾದ ತಕ್ಷಣ ಅನುಸರಿಸುತ್ತಿರುವ ಸಲಹೆಗಳನ್ನು ನಿಲ್ಲಿಸುವುದು ಅಥವಾ ಸರಿಯಾದ ಆರೈಕೆ ಮಾಡದಿರುವುದು ಸಮಸ್ಯೆ ಮತ್ತೆ ಮರುಕಳಿಸಲು ಪ್ರಮುಖ ಕಾರಣವಾಗಬಹುದು. ಆದ್ದರಿಂದ ಕೇವಲ ಡ್ಯಾಂಡ್ರಫ್ ಹೋಗುವುದಷ್ಟೇ ಅಲ್ಲ, ಸ್ಕಾಲ್ಪ್ ಆರೋಗ್ಯ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ.

ಡ್ಯಾಂಡ್ರಫ್ ಹೆಚ್ಚಾಗಲು ಕಾರಣ:

ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಬೇಗ ನಿಲ್ಲಿಸುವುದು: ಡ್ಯಾಂಡ್ರಫ್ ಕಡಿಮೆಯಾದ ಕೂಡಲೇ ಹಲವರು ಔಷಧೀಯ ಶ್ಯಾಂಪೂ ಬಳಕೆಯನ್ನು ನಿಲ್ಲಿಸುತ್ತಾರೆ. ಇದರಿಂದ ಸಮಸ್ಯೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಶ್ಯಾಂಪೂವನ್ನು ತಕ್ಷಣ ತೊಳೆಯುವುದು: ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿದ ಬಳಿಕ ಕನಿಷ್ಠ 3–5 ನಿಮಿಷ ಇರಿಸಿ ನಂತರ ತೊಳೆಯಬೇಕು. ಇದರಿಂದ ಅದರಲ್ಲಿರುವ ಔಷಧೀಯ ಅಂಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ಕೂದಲಿನ ಬುಡವನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು: ಕೂದಲನ್ನು ಮಾತ್ರ ತೊಳೆಯುವುದು ಸಾಕಾಗುವುದಿಲ್ಲ. ಅದರ ಬುಡದ ಎಣ್ಣೆ, ಧೂಳು ಹಾಗೂ ಸತ್ತ ಚರ್ಮದ ಕೋಶಗಳು ಸೇರುವುದರಿಂದ ಡ್ಯಾಂಡ್ರಫ್ ಹೆಚ್ಚಾಗಬಹುದು.

ಅತಿಯಾಗಿ ಹೇರ್ ಆಯಿಲ್ ಮತ್ತು ಸ್ಟೈಲಿಂಗ್ ಉತ್ಪನ್ನಗಳ ಬಳಕೆ: ಅತಿಯಾಗಿ ಎಣ್ಣೆ, ಹೇರ್ ಜೆಲ್, ಹೇರ್ ಸ್ಪ್ರೇ ಹಾಗೂ ಇತರ ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದರಿಂದ ತಲೆಚರ್ಮದಲ್ಲಿ ಎಣ್ಣೆ ಮತ್ತು ಕೊಳಕು ಹೆಚ್ಚಾಗಿ ಡ್ಯಾಂಡ್ರಫ್ ತೀವ್ರವಾಗಬಹುದು.

ಇದನ್ನೂ ಓದಿ: ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ

ತಲೆಯನ್ನು ಪದೇ ಪದೇ ಕೆರೆದುಕೊಳ್ಳುವುದು: ನಿರಂತರವಾಗಿ ತುರಿಕೆ ಗಾಯವಾಗಬಹುದು. ಇದರಿಂದ ಬ್ಯಾಕ್ಟೀರಿಯಾ ಸೋಂಕಿನ ಅಪಾಯವೂ ಹೆಚ್ಚಾಗಬಹುದು.

ಡ್ಯಾಂಡ್ರಫ್ ನಿಯಂತ್ರಿಸಲು ಏನು ಮಾಡಬೇಕು?

  • ವೈದ್ಯರು ಅಥವಾ ತಜ್ಞರು ಸೂಚಿಸಿದ ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಸರಿಯಾಗಿ ಬಳಸಿ.
  • ವಾರಕ್ಕೆ 2–3 ಬಾರಿ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.
  • ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ.
  • ಹೇರ್ ಆಯಿಲ್ ಮತ್ತು ಸ್ಟೈಲಿಂಗ್ ಉತ್ಪನ್ನಗಳನ್ನು ಮಿತವಾಗಿ ಬಳಸಿ.
  • ವೈಯಕ್ತಿಕ ಟವೆಲ್ ಮತ್ತು ಹಣಿಗೆಯನ್ನು ಬಳಸಿ ಮತ್ತು ಅದನ್ನು ಸ್ವಚ್ಛವಾಗಿಡಿ.
  • ಸಮತೋಲಿತ ಆಹಾರ ಸೇವಿಸಿ ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಒತ್ತಡ (Stress) ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ನಿಯಮಿತ ವ್ಯಾಯಾಮ ಮಾಡಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

  • ಹಲವು ವಾರಗಳ ಚಿಕಿತ್ಸೆಯ ಬಳಿಕವೂ ಡ್ಯಾಂಡ್ರಫ್ ಕಡಿಮೆಯಾಗದಿದ್ದರೆ
  • ತೀವ್ರ ತುರಿಕೆ ಅಥವಾ ಉರಿಯೂತ ಇದ್ದರೆ
  • ಚರ್ಮ ಕೆಂಪಾಗುವುದು ಅಥವಾ ನೋವು ಕಾಣಿಸಿಕೊಂಡರೆ
  • ಕೂದಲಿನ ಬುಡದಲ್ಲಿ ಊತ ಅಥವಾ ಕೀವು ಕಾಣಿಸಿಕೊಂಡರೆ
  • ಕೂದಲು ಅತಿಯಾಗಿ ಉದುರಲು ಆರಂಭಿಸಿದರೆ

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ ಅಥವಾ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:06 pm, Thu, 30 July 26

Source link

‘ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ’; ರಹಾನೆ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದಿದು – Kannada News | Rahane Retirement: Sachin, Kohli emotional post to India’s Dependable Test Legend

ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (Ajinkya Rahane) ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯಲು ಹೆಣಗಾಡುತ್ತಿದ್ದ ರಹಾನೆಗೆ ಯಾವುದೇ ಸ್ಥಾನ ಸಿಗಲಿಲ್ಲ. ಹೀಗಾಗಿ ರಹಾನೆ ತಮ್ಮ ಭವಿಷ್ಯವನ್ನು ಪರಿಗಣಿಸಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಅಜಿಂಕ್ಯ ರಹಾನೆ ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡಿದ ಅಜಿಂಕ್ಯ ರಹಾನೆ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ ನಂತರ ತಮ್ಮ 38 ನೇ ವಯಸ್ಸಿನಲ್ಲಿ ಕ್ರಿಕೆಟ್ ನಿಲ್ಲಿಸಲು ನಿರ್ಧರಿಸಿದ್ದಾರೆ. ರಹಾನೆ ನಿವೃತ್ತಿಯ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರು ಏನು ಹೇಳಿದ್ದಾರೆ ಎಂಬುದನ್ನು ನೋಡುವುದಾದರೆ..

ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು

ರಹಾನೆ ನಿವೃತ್ತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ‘ನಿಮ್ಮ ಗಮನಾರ್ಹ ವೃತ್ತಿಜೀವನಕ್ಕೆ ಅಭಿನಂದನೆಗಳು. ಅಜಿಂಕ್ಯ, ನಾವು ಮೊದಲ ಬಾರಿಗೆ ಮುಂಬೈ ಪರ ಬ್ಯಾಟಿಂಗ್ ಮಾಡಿದಾಗ, ಅವಕಾಶಗಳ ಹಿಂದೆ ಓಡದ ವ್ಯಕ್ತಿಯನ್ನು ನಾನು ನಿನ್ನಲ್ಲಿ ನೋಡಿದೆ. ತಂಡಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಲು ನೀವು ಸಿದ್ಧರಿದ್ದರಿಂದ ಅವಕಾಶಗಳು ನಿನ್ನನ್ನು ಅರಸಿ ಬರುತ್ತಿದ್ದವು. ತಾಳ್ಮೆ ಆಕ್ರಮಣಶೀಲತೆಗೆ ವಿರುದ್ಧವಲ್ಲ ಎಂದು ನೀನು ತೋರಿಸಿದ್ದೀಯ. ತಾಳ್ಮೆಯು ತಂಡಕ್ಕೆ ನಿರ್ಭೀತರಾಗಿರಲು ಆತ್ಮವಿಶ್ವಾಸವನ್ನು ನೀಡುವಂತದ್ದು. ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು’ ಎಂದಿದ್ದಾರೆ.

ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ

ಇತ್ತ ರಹಾನೆ ಜೊತೆ ಆಡಿದ ವಿರಾಟ್ ಕೊಹ್ಲಿ ಕೂಡ ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ‘ಜಿಂಕ್ಸ್, ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು, ಸ್ನೇಹಿತ. ನೀವು ಭಾರತೀಯ ಕ್ರಿಕೆಟ್‌ಗಾಗಿ ಅದ್ಭುತ ಕೆಲಸ ಮಾಡಿದ್ದೀರಿ, ಮತ್ತು ನಿಮ್ಮ ಪ್ರಯಾಣದ ಬಗ್ಗೆ ನೀವು ಹೆಮ್ಮೆಪಡಬೇಕು. ಸ್ಲಿಪ್ಸ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಫೀಲ್ಡರ್ ಮತ್ತು ಟೆಸ್ಟ್‌ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.

ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದಗಳು

ಬಿಸಿಸಿಐ ಕೂಡ ರಹಾನೆಯ ವೃತ್ತಿಜೀವನಕ್ಕೆ ಅಭಿನಂದನೆ ಸಲ್ಲಿಸಿದ್ದು, ‘ ಅದ್ಭುತ ವೃತ್ತಿಜೀವನ ಕೊನೆಗೊಳುತ್ತಿದೆ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಮಹತ್ವದ ಕೊಡುಗೆಗಾಗಿ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಎಲ್ಲಾ ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯಾಣಕ್ಕೆ ಶುಭಾಶಯಗಳು’ ಎಂದು ಬರೆದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಥನಾಲ್ ಮಿಶ್ರಿತ ಪೆಟ್ರೋಲ್​ ಕುರಿತ ತಪ್ಪು ಕಲ್ಪನೆಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ – Kannada News | Modi Government rebuts misconceptions on ethanol blended petrol E20

ನವದೆಹಲಿ, ಜುಲೈ 30: ಇ-20 (E20) ಇಂಧನ ಕುರಿತು ಹಬ್ಬಿರುವ ದಾರಿ ತಪ್ಪಿಸುವ ವರದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol) ಬಳಕೆಯಿಂದ ವಾಹನಗಳಿಗೆ ಹಾನಿಯಾಗುತ್ತದೆ ಎಂಬ ವದಂತಿಗಳು ಹಾಗೂ ದಾರಿ ತಪ್ಪಿಸುವ ಪ್ರಚಾರಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸುದೀರ್ಘ ಸ್ಪಷ್ಟೀಕರಣವನ್ನು ನೀಡಿದೆ. ಇ-20 ಇಂಧನ ಯೋಜನೆಯು ವೈಜ್ಞಾನಿಕ ತಪಾಸಣೆ, ತಾಂತ್ರಿಕ ಪರೀಕ್ಷೆಗಳು, ವಾಹನ ತಯಾರಕರ ಆಲೋಚನೆಗಳು ಹಾಗೂ ಕಠಿಣ ಪ್ರಯೋಗಗಳ ಆಧಾರದ ಮೇಲೆಯೇ ಜಾರಿಗೆ ಬಂದಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹಂತ ಹಂತವಾಗಿ ಹೆಚ್ಚಿದ ಎಥನಾಲ್ ಮಿಶ್ರಣ ಪ್ರಮಾಣ:

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯು ಏಕಾಏಕಿ ನಡೆದಿದ್ದಲ್ಲ, ಬದಲಾಗಿ ಹಂತ ಹಂತವಾಗಿ ಜಾರಿಗೆ ತರಲಾಗಿದೆ. 2013-14ರಲ್ಲಿ ಸರಾಸರಿ ಮಿಶ್ರಣ ಪ್ರಮಾಣ 1.53ರಷ್ಟಿತ್ತು. ಇದೀಗ 2025-26 ವೇಳೆ ಮಿಶ್ರಣದ ಪ್ರಮಾಣ ಶೇ. 20ಕ್ಕೆ ತಲುಪಿದೆ ಎಂದು ಹೇಳಿದೆ.

ಎಂಜಿನ್ ಹಾನಿಗೆ ಯಾವುದೇ ಆಧಾರವಿಲ್ಲ:

2023ಕ್ಕಿಂತ ಮೊದಲು ತಯಾರಾದ ವಾಹನಗಳಿಗೆ E20 ಪೆಟ್ರೋಲ್‌ನಿಂದ ತೊಂದರೆಯಾಗುತ್ತದೆ ಎಂಬ ಆರೋಪವನ್ನು ಸಚಿವಾಲಯ ತಳ್ಳಿಹಾಕಿದೆ. ದೇಶದಲ್ಲಿ ಕಳೆದ ಮೂರೂವರೆ ವರ್ಷಗಳಿಂದ E15ಗಿಂತ ಹೆಚ್ಚಿನ ಮಿಶ್ರಿತ ಇಂಧನ ಹಾಗೂ ಕಳೆದ ಎರಡೂವರೆ ವರ್ಷಗಳಿಂದ E19-E20 ಇಂಧನ ಚಲಾವಣೆಯಲ್ಲಿದೆ. ದೇಶಾದ್ಯಂತ ಪ್ರತಿದಿನ ಸುಮಾರು 8 ಕೋಟಿ ವಾಹನಗಳು ಇಂಧನ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಅವುಗಳಲ್ಲಿ ಶೇ. 80ಕ್ಕೂ ಹೆಚ್ಚು ಪೆಟ್ರೋಲ್ ವಾಹನಗಳಾಗಿವೆ. ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದಿಂದಾಗಿ ವಾಹನಗಳ ಎಂಜಿನ್ ಕೆಟ್ಟುಹೋದ ಅಥವಾ ಬ್ರೇಕ್‌ಡೌನ್ ಆದ ಯಾವುದೇ ದೃಢಪಟ್ಟ ಪ್ರಕರಣಗಳು ಕಂಡುಬಂದಿಲ್ಲ. ಒಂದು ವೇಳೆ ಸಿಸ್ಟಮಿಕ್ ತೊಂದರೆ ಇದ್ದಿದ್ದರೆ ಲಕ್ಷಾಂತರ ವಾರಂಟಿ ಕ್ಲೈಮ್‌ಗಳು ದಾಖಲಾಗುತ್ತಿದ್ದವು, ಆದರೆ ಅಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

ವಾಹನ ತಯಾರಿಕಾ ಸಂಸ್ಥೆಗಳ (OEMs) ಸೇವಾ ವರದಿ:

ಮಾರುತಿ ಸುಜುಕಿ 2025-26ನೇ ಹಣಕಾಸು ವರ್ಷದಲ್ಲಿ 2.84 ಕೋಟಿ ವಾಹನಗಳ ಸರ್ವಿಸಿಂಗ್ ಮಾಡಿದ್ದು, ಅದರಲ್ಲಿ ಮೂಲತಃ E20 ಸರ್ಟಿಫೈಡ್ ಇಲ್ಲದ 1.5 ಕೋಟಿಗೂ ಹೆಚ್ಚು ಹಳೆಯ ವಾಹನಗಳಿದ್ದವು. ಇವುಗಳಲ್ಲಿ ಎಥನಾಲ್‌ನಿಂದಾಗಿ ಯಾವುದೇ ತುಕ್ಕು ಹಿಡಿಯುವಿಕೆ ಅಥವಾ ಎಂಜಿನ್ ಕಾಂಪೊನೆಂಟ್‌ ಹಾಳಾದ ಉದಾಹರಣೆಗಳು ಕಂಡುಬಂದಿಲ್ಲ. ‘ಹೀರೋ ಮೋಟೋಕಾರ್ಪ್’ ಕೂಡ ಇಂತಹ ಯಾವುದೇ ಸಮಸ್ಯೆಯನ್ನು ವರದಿ ಮಾಡಿಲ್ಲ. ಎಲ್ಲಾ ವಾಹನ ತಯಾರಕ ಸಂಸ್ಥೆಗಳು E20 ಇಂಧನ ಬಳಸುವ ವಾಹನಗಳ ವಾರಂಟಿ ಬದ್ಧತೆಗಳನ್ನು ಎಂದಿನಂತೆ ಮುಂದುವರಿಸಿವೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

30 ಕೋಟಿ ವಾಹನಗಳು ನಿರುಪಯೋಗಿ ಎಂಬುದು ಸುಳ್ಳು ಆರೋಪ:

E20 ಇಂಧನದಿಂದಾಗಿ ದೇಶದ ಸುಮಾರು 30 ಕೋಟಿ ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ನಿರುಪಯೋಗಿಯಾಗುತ್ತವೆ ಎಂಬ ವದಂತಿಯನ್ನು ಸರ್ಕಾರ ತಳ್ಳಿಹಾಕಿದೆ. ಪ್ರಸ್ತುತ ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು E15 ಹಾಗೂ E20 ಇಂಧನದಲ್ಲಿ ಸುರಕ್ಷಿತವಾಗಿ ಚಲಿಸುತ್ತಿವೆ ಎಂದು ತಿಳಿಸಿದೆ.

ಜುಲೈ 4ರಂದು ಕೇಂದ್ರ ಪೆಟ್ರೋಲಿಯಂ, ಭಾರಿ ಕೈಗಾರಿಕೆಗಳು ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದವು. ‘ಟೊಯೋಟಾ ಕಿರ್ಲೋಸ್ಕರ್’, ‘ಮಾರುತಿ ಸುಜುಕಿ’, ‘ಹೀರೋ ಮೋಟೋಕಾರ್ಪ್’, ‘ಹ್ಯುಂಡೈ’, ‘ಟಿವಿಎಸ್’ ಮತ್ತು ‘ಬಾಜಾಜ್ ಆಟೋ’ ಸಂಸ್ಥೆಗಳು E20 ಜಾರಿಯನ್ನು ಸಂಪೂರ್ಣವಾಗಿ ಬೆಂಬಲಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:58 pm, Thu, 30 July 26

Source link

‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ – Kannada News | Ramayana Trailer Lara Dutta Modern look as Kaikeyi sparks debate

ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಜುಲೈ 30ರಂದು ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ (Yash) ನಟಿಸಿದ್ದಾರೆ. ಈ ಟ್ರೇಲರ್‌ನಲ್ಲಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಲಾರಾ ದತ್ತಾ (Lara Dutta) ಅವರ ಮಾಡರ್ನ್ ಲುಕ್ ಈಗ ನೆಟ್ಟಿಗರ ಟೀಕೆಗೆ ಒಳಗಾಗಿದೆ.

ದಶರಥ ಮಹಾರಾಜನ ಪತ್ನಿ ಹಾಗೂ ಶ್ರೀರಾಮನ ಮಲತಾಯಿ ಕೈಕೇಯಿಯ ಪಾತ್ರವನ್ನು ಲಾರಾ ದತ್ತಾ ನಿಭಾಯಿಸಿದ್ದಾರೆ. ಟ್ರೇಲರ್‌ನಲ್ಲಿ ಶ್ರೀರಾಮನನ್ನು 14 ವರ್ಷಗಳ ವನವಾಸಕ್ಕೆ ಕಳುಹಿಸುವ ಸನ್ನಿವೇಶದಲ್ಲಿ ಲಾರಾ ದತ್ತಾ ಧರಿಸಿರುವ ಬಾರ್ಡರ್ ಸೀರೆ ಮತ್ತು ಅವರ ಹೇರ್‌ಸ್ಟೈಲ್ ಅತ್ಯಂತ ಆಧುನಿಕವಾಗಿ ಕಾಣುತ್ತಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಯಾವ ಕಾಲದ ಪಾತ್ರ?

ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, ‘ಮಾಡರ್ನ್ ಸೀರೆ, ಸಲೂನ್‌ನಲ್ಲಿ ಮಾಡಿಸಿದ ಕೇಶವಿನ್ಯಾಸ… ಇದು ತ್ರೇತಾಯುಗವೋ ಅಥವಾ 2026ರ ಕಾಲವೋ?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ‘ನನಗೆ ಸ್ಟಾರ್ ಪ್ಲಸ್ ಸೀರಿಯಲ್ ನೋಡಿದ ಅನುಭವವಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಲಾರಾ ದತ್ತಾ ಮತ್ತು ರಣಬೀರ್ ಕಪೂರ್ ನಡುವಿನ ವಯಸ್ಸಿನ ಅಂತರವನ್ನು ಪ್ರಶ್ನಿಸಿದ್ದಾರೆ. ರಣಬೀರ್‌ಗಿಂತ ಲಾರಾ ದತ್ತಾ ಕೇವಲ 4 ವರ್ಷ ದೊಡ್ಡವರಾಗಿದ್ದರೂ ಅವರಿಗೆ ತಾಯಿಯ ಪಾತ್ರ ನೀಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ರಾಮಾಯಣ’ ಸಿನಿಮಾದ ಟ್ರೇಲರ್:

ಮೆಚ್ಚುಗೆ ಪಡೆದ ಲಾರಾ ದತ್ತಾ:

ಈ ಎಲ್ಲ ಟೀಕೆಗಳ ನಡುವೆಯೂ ಲಾರಾ ದತ್ತಾ ಅವರ ಗಂಭೀರ ನಟನೆ ಹಾಗೂ ಸ್ಕ್ರೀನ್ ಪ್ರೆಸೆಂನ್ಸ್​ಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ‘ಲಾರಾ ದತ್ತಾ ಅವರ ಗಂಭೀರ ಲುಕ್ ನೋಡಿದರೆ ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ನೆನಪಾಗುತ್ತದೆ. ಟ್ರೇಲರ್‌ನಲ್ಲಿ ಅವರ ಅಭಿನಯ ನನಗೆ ತುಂಬಾ ಇಷ್ಟವಾಯಿತು’ ಎಂದು ಕೆಲವು ಅಭಿಮಾನಿಗಳು ಬೆಂಬಲಿಸಿದ್ದಾರೆ. ಒಟ್ಟಿನಲ್ಲಿ ಈ ಪಾತ್ರದ ಬಗ್ಗೆ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ರಾಮಾಯಣ ಟ್ರೇಲರ್​ನಲ್ಲಿ ರಾವಣನ ಪಾತ್ರದ ಮೂಲಕ ಅಬ್ಬರಿಸಿ ಬೊಬ್ಬಿರಿದ ಯಶ್

ಸಾಯಿ ಪಲ್ಲವಿ ಪಾತ್ರಕ್ಕೂ ಟೀಕೆ:

‘ರಾಮಾಯಣ’ ಟ್ರೇಲರ್ ನೋಡಿದ ಪ್ರೇಕ್ಷಕರು ಹಲವು ಬಗೆಯ ಅಭಿಪ್ರಾಯ ತಿಳಿಸುತ್ತಿದ್ದಾರೆ. ರಣಬೀರ್ ಕಪೂರ್ ಮಾಡಿರುವ ರಾಮನ ಪಾತ್ರ ಹಾಗೂ ಯಶ್ ನಟಿಸಿರುವ ರಾವಣನ ಪಾತ್ರಗಳಿಗೆ ಜನರ ಮೆಚ್ಚುಗೆ ಸಿಗುತ್ತಿದೆ. ಆದರೆ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಅಲ್ಲ ಎಂದು ಜನರು ಹೇಳುತ್ತಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರಿಗೆ ಜೋಡಿ ಸರಿಯಾಗಿಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಹುಲ್‌ ಗಾಂಧಿ ವಿರುದ್ಧ ಅಸಂಸದೀಯ ಪದಬಳಕೆ ಆರೋಪ: ಕ್ಷಮೆಗೆ ಪಟ್ಟು, ಹಕ್ಕುಚ್ಯುತಿ ಮಂಡನೆ – Kannada News | Anurag Thakur Moves Privilege Notice Against Rahul Gandhi Over Lok Sabha Remarks

ನವದೆಹಲಿ, (ಜುಲೈ 30): ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur )ಅವರು ಇಂದು (ಜುಲೈ 30) ಗುರುವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಮುಂಗಾರು ಅಧಿವೇಶನದಲ್ಲಿ ಸಂಸದೀಯವಲ್ಲದ ಮತ್ತು ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿದ್ದಾರೆ. ಹಾಗೂ ಸದನದ ನಡವಳಿಕೆ ಮತ್ತು ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ. ಅಲ್ಲದೇ ಠಾಕೂರ್ ಅವರು ಈ ವಿಷಯವನ್ನು ವಿವರವಾದ ತನಿಖೆ ಮತ್ತು ಸೂಕ್ತ ಕ್ರಮಕ್ಕಾಗಿ ಹಕ್ಕುಬಾಧ್ಯತೆಗಳ ಸಮಿತಿಗೆ ಒಪ್ಪಿಸುವಂತೆ ಸ್ಪೀಕರ್  ಬಿರ್ಲಾ ಅವರಿಗೆ ವಿನಂತಿಸಿದ್ದಾರೆ.

ಕಾರ್ಯವಿಧಾನದ ನಿಯಮ 352 ಅನ್ನು ಉಲ್ಲಂಘಿಸಲಾಗಿದೆ. ಈ ನಿಯಮವು ಆಕ್ಷೇಪಾರ್ಹ ಮತ್ತು ಮಾನಹಾನಿಕರ ಅಭಿವ್ಯಕ್ತಿಗಳನ್ನು, ವ್ಯಕ್ತಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ವೈಯಕ್ತಿಕ ಹೇಳಿಕೆಗಳನ್ನ ಮತ್ತು ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಕೀಳಾಗಿಸುವ ಹೇಳಿಕೆಗಳನ್ನು ನಿಷೇಧಿಸುತ್ತದೆ. ರಾಹುಲ್ ಗಾಂಧಿಯವರ ನಡವಳಿಕೆಯು ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದೆ. ಮತ್ತು ಸ್ಪೀಕರ್ ನಿರ್ದೇಶನಗಳನ್ನು ನಿರ್ಲಕ್ಷಿಸಿದೆ ಎಂದು ಠಾಕೂರ್ ಆರೋಪಿಸಿದ್ದಾರೆ.

ಇದನ್ನೂ ನೋಡಿ: ‘ಪೆಲೆಟ್ ಗನ್ ದಾಳಿ ನಡೆದೇ ಇಲ್ಲ’; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ಬ್ರಿಜ್ ಲಾಲ್ ತಿರುಗೇಟು

ಗಾಂಧಿಯವರು ತಮ್ಮ ಭಾಷಣದ ಸಮಯದಲ್ಲಿ “ಅಸಂಸದೀಯ ಮತ್ತು ಅವಹೇಳನಕಾರಿ ಭಾಷೆ” ಬಳಸಿದ್ದಾರೆ. “ಮೂರ್ಖ” ಮತ್ತು “ಅಂಧಭಕ್ತ” ಎಂಬ ಪದಗಳನ್ನು ಉಲ್ಲೇಖಿಸಿದ್ದಾರೆ.  ನಿಯಮ 222 ರ ಅಡಿಯಲ್ಲಿ ಹಕ್ಕುಬಾಧ್ಯತೆ ನೋಟಿಸ್ ಅನ್ನು ಅಂಗೀಕರಿಸಲು, ನಿಯಮಗಳು 380 ಮತ್ತು 381 ರ ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನಡಾವಳಿಗಳಿಂದ ತೆಗೆದುಹಾಕಲು ಮತ್ತು ಸೂಕ್ತ ಕ್ರಮಕ್ಕಾಗಿ ನಿಯಮ 227 ರ ಅಡಿಯಲ್ಲಿ ಈ ವಿಷಯವನ್ನು ಹಕ್ಕುಬಾಧ್ಯತೆಗಳ ಸಮಿತಿಗೆ ಒಪ್ಪಿಸುವಂತೆ ಸಭಾಪತಿಯವರಲ್ಲಿ ವಿನಂತಿಸಿದ್ದಾರೆ.

ರಾಹುಲ್ ಗಾಂಧಿ ಬೇಷರತ್ ಕ್ಷಮೆಗೆ ಆಗ್ರಹ

ಹಾಗೇ ರಾಹುಲ್ ಗಾಂಧಿ ಅವರು ಸದನ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರಲ್ಲೂ ಬೇಷರತ್ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಲು ಕೋರಿದ್ದು, ಸಭಾಪತಿಗಳು ಅಥವಾ ಸಮಿತಿಗೆ ಅಗತ್ಯವಿದ್ದರೆ, ಜುಲೈ 29 ರ ಕಲಾಪದ ಅಧಿಕೃತ ನಡಾವಳಿಗಳು ಮತ್ತು ವಿಡಿಯೋ ರೆಕಾರ್ಡ್ ಸೇರಿದಂತೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಒದಗಿಸಲು ತಾವು ಸಿದ್ಧರಿರುವುದಾಗಿ ಠಾಕೂರ್ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ, ರಾಯಚೂರಿನ ವಸತಿ ಶಾಲೆಯಲ್ಲಿ ಪಲಾವ್, ಅವಲಕ್ಕಿ ತಿಂದಿದ್ದ ವಿದ್ಯಾರ್ಥಿಗಳು ಅಸ್ವಸ್ಥ – Kannada News | Over 50 Students from Residential Schools in Kalaburagi and Raichur Fall Ill

ಕಲಬುರಗಿ, ಜುಲೈ 30: ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai School) ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಬೆಳಗಿನ ಉಪಹಾರ ಸೇವಿಸಿದ ಬೆನ್ನಲ್ಲೇ ಮಕ್ಕಳಿಗೆ ತೀವ್ರ ಹೊಟ್ಟೆನೋವು, ತಲೆಸುಸ್ತು ಹಾಗೂ ವಾಂತಿ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಹುತೇಕ ಮಕ್ಕಳ ಆರೋಗ್ಯ ಸ್ಥಿರವಾಗಿದೆ.

ನಡೆದಿದ್ದೇನು?

ಶಾಲೆಯಲ್ಲಿ ಎಂದಿನಂತೆ ಬೆಳಗಿನ ತಿಂಡಿಗೆ ಅವಲಕ್ಕಿ ಮಾಡಲಾಗಿತ್ತು. ಆದರೆ, ಉಪಹಾರ ಸೇವಿಸುವಾಗಲೇ ಅದರಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು, ಬೇರೆ ತಿಂಡಿ ಮಾಡಿಕೊಡುವಂತೆ ಅಡುಗೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದರೆ ಸಿಬ್ಬಂದಿ ಬೇರೆ ಉಪಹಾರ ಮಾಡಲು ನಿರಾಕರಿಸಿದ ಕಾರಣ, ಅನಿವಾರ್ಯವಾಗಿ ಮಕ್ಕಳು ಅದೇ ಅವಲಕ್ಕಿಯನ್ನು ಸೇವಿಸಿದ್ದಾರೆ. ತಿಂಡಿ ತಿಂದು ತರಗತಿಗೆ ತೆರಳುತ್ತಿದ್ದಂತೆ ಏಕಾಏಕಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ: ಪ್ರತಿಭಟನೆ

ಅಸ್ವಸ್ಥಗೊಂಡ ಎಲ್ಲಾ ಮಕ್ಕಳನ್ನು ತಕ್ಷಣವೇ ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮಕ್ಕಳಿಗೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಇತ್ತ ಸಿಬ್ಬಂದಿಯ ಬೇಜವಾಬ್ದಾರಿಯನ್ನು ಖಂಡಿಸಿ ವಸತಿ ಶಾಲೆಯ ಇತರ ವಿದ್ಯಾರ್ಥಿಗಳು ಅಫಜಲಪುರ ಸರ್ಕಾರಿ ಆಸ್ಪತ್ರೆ ಮುಂಭಾಗ ರಸ್ತೆ ತಡೆದು ಪ್ರತಿಭಟಿಸಿದರು. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್​​ ಉಂಟಾಗಿತ್ತು.

ಶಾಸಕ ಎಂ.ವೈ. ಪಾಟೀಲ್ ಆಸ್ಪತ್ರೆಗೆ ಭೇಟಿ: ಅಧಿಕಾರಿಗಳ ಅಮಾನತಿಗೆ ಸೂಚನೆ

ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಂ.ವೈ. ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ, ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ ಶಾಲೆಯ ವಾರ್ಡನ್, ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಹಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಶಾಲೆ ಆರಂಭವಾಗಿ ಎರಡು ತಿಂಗಳಾದ್ರೂ ವಿದ್ಯಾರ್ಥಿಗಳಿಗಿಲ್ಲ ಶೂ ಭಾಗ್ಯ: ಬರಿಗಾಲಲ್ಲೇ ಶಾಲೆಗೆ ಬರುತ್ತಿರುವ ಮಕ್ಕಳು

ಕಲಬುರಗಿ ಜಿಲ್ಲೆಯ ವಸತಿ ಶಾಲೆಗಳಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಬೇಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ  ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಲಾವ್ ತಿಂದು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಇನ್ನು ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಹುಳ ಬಿದ್ದಿದ್ದ ಪಲಾವ್ ಸೇವನೆ ಹಿನ್ನೆಲೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ತಕ್ಷಣ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ: ಭಾನುವಾರ ಹಿನ್ನೆಲೆ ತಪ್ಪಿದ ಅನಾಹುತ

ಪಲಾವ್ ತಿಂದ ಕೆಲವೇ ಹೊತ್ತಿನಲ್ಲಿ ಮಕ್ಕಳಿಗೆ ವಾಂತಿ-ಭೇದಿ, ತಲೆನೋವು ಹಾಗೂ ತಲೆಸುತ್ತು ಕಾಣಿಸಿಕೊಂಡು ಒದ್ದಾಡಲು ಪ್ರಾರಂಭಿಸಿದ್ದು, ಆಹಾರವನ್ನು ಪರಿಶೀಲಿಸಿದಾಗ ಅದರಲ್ಲಿ ಹುಳಗಳು ಪತ್ತೆಯಾಗಿವೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ ವಸತಿ ನಿಲಯದ ವಾರ್ಡನ್ ಅಮರಗುಂಡಪ್ಪ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version