ಪಾಕಿಸ್ತಾನದ ಕ್ವೆಟ್ಟಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: 32 ಮಂದಿ ಸಾವು – Kannada News | Quetta Coal Mine Explosion: 32 Dead, Mine Safety Concerns Emerge in Pakistan

ಇಸ್ಲಾಮಾಬಾದ್, ಜುಲೈ 31: ಪಾಕಿಸ್ತಾನ(Pakistan)ದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು ಸಾವನ್ನಪ್ಪಿದ್ದು, 10 ಮಂದಿ ಸಿಲುಕಿಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದೆಂಬ ಭೀತಿಯ ನಡುವೆ ರಕ್ಷಣಾ ತಂಡಗಳು ಗಣಿಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಬಲೂಚಿಸ್ತಾನ್‌ನ ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿ ಸ್ಫೋಟ ಸಂಭವಿಸಿದೆ. ಸರ್ಕಾರಿ ಗಣಿ ನಿರೀಕ್ಷಕ ಘನಿ ಬಲೂಚ್ ಪ್ರಕಾರ, ಭೂಗತ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಾಮಾನ್ಯ ಆದರೆ ಮಾರಕ ಅಪಾಯವಾದ ಗಣಿ ಒಳಗೆ ಮೀಥೇನ್ ಅನಿಲ ಸಂಗ್ರಹವಾಗುವುದರಿಂದ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ.

ತುರ್ತು ತಂಡಗಳು ಆರಂಭದಲ್ಲಿ ಏಳು ಶವಗಳನ್ನು ಸ್ಥಳದಿಂದ ಹೊರತೆಗೆದವು ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇನ್ನೂ 25 ಶವಗಳನ್ನು ಪತ್ತೆಹಚ್ಚಿದವು, ಇದರಿಂದಾಗಿ ದೃಢಪಡಿಸಿದ ಸಾವಿನ ಸಂಖ್ಯೆ 32 ಕ್ಕೆ ತಲುಪಿದೆ. ರಕ್ಷಣಾ ತಂಡಗಳು ಅವರನ್ನು ತಲುಪಲು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದರಿಂದ 10 ಗಣಿಗಾರರು ಇನ್ನೂ ನೆಲದಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕಿಬಿದ್ದ ಪ್ರತಿಯೊಬ್ಬ ಕಾರ್ಮಿಕರನ್ನು ಪತ್ತೆಹಚ್ಚುವವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಮೀಥೇನ್ ಸ್ಫೋಟಗಳು ಭೂಗತ ಗಣಿಗಳಲ್ಲಿ ಆಮ್ಲಜನಕವನ್ನು ವೇಗವಾಗಿ ಸೇವಿಸುವುದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಕುಟುಂಬಗಳಿಗೆ ಹಸ್ತಾಂತರಗೊಂಡ ಮೃತದೇಹಗಳು
ಗಣಿಯಿಂದ ಹೊರತೆಗೆದ ಶವಗಳನ್ನು ಅಂತ್ಯಕ್ರಿಯೆಗಾಗಿ ಬಲಿಪಶುಗಳ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಇನ್ನೂ ಸಿಲುಕಿರುವವರ ಆತಂಕಗೊಂಡ ಸಂಬಂಧಿಕರು ರಕ್ಷಣಾ ತಂಡಗಳಿಂದ ಸಕಾರಾತ್ಮಕ ಸುದ್ದಿಗಾಗಿ ಆಶಿಸುತ್ತಾ ಸ್ಥಳದಲ್ಲಿ ಕಾಯುತ್ತಲೇ ಇದ್ದರು. ಉಳಿದ ಗಣಿಗಾರರನ್ನು ತಲುಪಲು ರಕ್ಷಣಾ ಸಿಬ್ಬಂದಿ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಲೂಚಿಸ್ತಾನದ ಗಣಿ ಮತ್ತು ಖನಿಜ ಸಚಿವ ಶೋಯೆಬ್ ನೊಶೆರ್ವಾನಿ ಹೇಳಿದರು. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ನೊಶೆರ್ವಾನಿ, ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ಗಣಿಗಾರನ ಕುಟುಂಬಕ್ಕೆ 500,000 ಪಾಕಿಸ್ತಾನಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ.

ಮತ್ತಷ್ಟು ಓದಿ: ಪಾಕಿಸ್ತಾನಿ ಕಾಶ್ಮೀರವಿಲ್ಲ, ಅದು ಪಾಕ್ ಆಕ್ರಮಿತ ಕಾಶ್ಮೀರವಷ್ಟೇ, ನ್ಯೂಯಾರ್ಕ್ ಟೈಮ್ಸ್‌ನ ದಾರಿತಪ್ಪಿಸುವ ವರದಿಗೆ ಭಾರತ ತೀವ್ರ ಆಕ್ಷೇಪ

ಸ್ಫೋಟದ ತನಿಖೆಗೆ ಆದೇಶ
ಸ್ಫೋಟದ ನಿಖರವಾದ ಕಾರಣವನ್ನು ನಿರ್ಧರಿಸಲು ಅಧಿಕಾರಿಗಳು ವಿವರವಾದ ತನಿಖೆ ನಡೆಸುತ್ತಾರೆ ಎಂದು ಸಚಿವರು ಹೇಳಿದ್ದಾರೆ. ದೋಷಗಳನ್ನು ಗುರುತಿಸಲು ಮತ್ತು ಇದೇ ರೀತಿಯ ದುರಂತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಸರ್ಕಾರವು ಅಸ್ತಿತ್ವದಲ್ಲಿರುವ ಗಣಿಗಾರಿಕೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.

ನಿರ್ಲಕ್ಷ್ಯದ ಆರೋಪ: ಕಾರ್ಮಿಕ ಸಂಘ
ಕಲ್ಲಿದ್ದಲು ಗಣಿಗಾರರ ಕಾರ್ಮಿಕ ಸಂಘವು ಈ ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಹೊಣೆಗಾರರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಪಾಕಿಸ್ತಾನ ಕೇಂದ್ರ ಗಣಿ ಕಾರ್ಮಿಕ ಒಕ್ಕೂಟವು ಹೇಳಿಕೆಯೊಂದರಲ್ಲಿ ಸರ್ಕಾರವನ್ನು ಗಣಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪಾಲಿಸಲು ವಿಫಲವಾದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಪಾಕಿಸ್ತಾನದಲ್ಲಿ, ವಿಶೇಷವಾಗಿ ಬಲೂಚಿಸ್ತಾನದಲ್ಲಿ ಮಾರಕ ಗಣಿಗಾರಿಕೆ ಅಪಘಾತಗಳು ಆಗಾಗ ಸಂಭವಿಸುತ್ತಲೇ ಇವೆ, ಅಲ್ಲಿ ಅನೇಕ ಕಲ್ಲಿದ್ದಲು ಗಣಿಗಳಲ್ಲಿ ಮೀಥೇನ್ ಅನಿಲ ಮೇಲ್ವಿಚಾರಣಾ ಉಪಕರಣಗಳು ಮತ್ತು ಇತರ ಅಗತ್ಯ ಸುರಕ್ಷತಾ ಮೂಲಸೌಕರ್ಯಗಳ ಕೊರತೆಯಿದೆ ಎಂದು ಟೀಕಿಸಲಾಗಿದೆ. ಅಪಾಯಕಾರಿ ಕೆಲಸದ ವಾತಾವರಣದ ಹೊರತಾಗಿಯೂ, ಗಣಿ ನಿರ್ವಾಹಕರು ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಕಾರ್ಮಿಕರಿಗೆ ಸಾಕಷ್ಟು ರಕ್ಷಣಾ ಸಾಧನಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ಪದೇ ಪದೇ ಆರೋಪಿಸಿವೆ.

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಅದರ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ. ಅಪಾಯಕಾರಿ ಕೆಲಸದ ಪರಿಸ್ಥಿತಿಗಳು ಮತ್ತು ತುಲನಾತ್ಮಕವಾಗಿ ಕಡಿಮೆ ವೇತನದ ಹೊರತಾಗಿಯೂ, ಸೀಮಿತ ಉದ್ಯೋಗಾವಕಾಶಗಳು ಮತ್ತು ವ್ಯಾಪಕ ಬಡತನದಿಂದಾಗಿ ಸಾವಿರಾರು ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕಲ್ಲಿದ್ದಲು ಗಣಿಗಾರಿಕೆಯನ್ನು ಅವಲಂಬಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಂಡ್ಯದಲ್ಲಿ ಕಾವೇರಿ ಹೋರಾಟ ತೀವ್ರ: ಕೆಆರ್​ಎಸ್ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ, 1500 ಪೊಲೀಸ್ ಸಿಬ್ಬಂದಿ ನಿಯೋಜನೆ – Kannada News | Cauvery Water dispute: Kaveri Protest in Mandya, 1500 Police Deployed at KRS Amid BJP Protest

ಕೆಆರ್​ಎಸ್ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆImage Credit source: tv9

ಮಂಡ್ಯ, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವ ಆದೇಶದ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡಿದ್ದು, ಬಿಜೆಪಿ ನಾಯಕರು ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಈ ಪ್ರತಿಭಟನೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮೂರುವರೆ ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಆದೇಶಿಸಿದ ನಂತರ ಮಂಡ್ಯದಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಈ ಆದೇಶದ ವಿರುದ್ಧ ಧ್ವನಿ ಎತ್ತಿರುವ ಬಿಜೆಪಿ ನಾಯಕರು, ಇಂದು ಬೆಳಗ್ಗೆ 11 ಗಂಟೆಗೆ ಕೆಆರ್​ಎಸ್ ಜಲಾಶಯದ ಬಳಿ ಪ್ರತಿಭಟನೆ ಆರಂಭಿಸಿ, ನಂತರ ಅಣೆಕಟ್ಟಿಗೆ ಮುತ್ತಿಗೆ ಹಾಕಲಿದ್ದಾರೆ.

ಮಂಡ್ಯದಾದ್ಯಂತ ಪೊಲೀಸ್ ಸರ್ಪಗಾವಲು

ಅಹಿತಕರ ಘಟನೆಗಳನ್ನು ತಡೆಯಲು ಅಧಿಕಾರಿಗಳು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಆರ್​ಎಸ್ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್‌ಪಿ, ಒಂಬತ್ತು ಡಿವೈಎಸ್‌ಪಿ, ಇಪ್ಪತ್ತೇಳು ಇನ್ಸ್‌ಪೆಕ್ಟರ್‌ಗಳು, ನಲವತ್ತೈದು ಪಿಎಸ್‌ಐ ಮತ್ತು ಎಪ್ಪತ್ತೆಂಟು ಎಎಸ್‌ಐಗಳನ್ನು ಒಳಗೊಂಡಂತೆ ಭಾರಿ ಸಂಖ್ಯೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಮಾಹಿತಿ ನೀಡಿದ್ದಾರೆ.

ಬೃಂದಾವನ ಉದ್ಯಾನವನಕ್ಕೆ ಸಾರ್ವಜನಿಕರಿಗಿಲ್ಲ ಎಂಟ್ರಿ


ಜಲಾಶಯದ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೆಆರ್​ಎಸ್‌ನ ಬೃಂದಾವನ ಉದ್ಯಾನವನಕ್ಕೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರು ಬಿಡಲು ವಿರೋಧ: ಮಂಡ್ಯದಲ್ಲಿ ರೈತರ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು

ಮಂಡ್ಯ ಜಿಲ್ಲಾದ್ಯಂತ ಕಾವೇರಿ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಬಿಜೆಪಿ ನಾಯಕರಲ್ಲದೆ, ರೈತ ಸಂಘಟನೆಗಳು ಮತ್ತು ಇತರ ವಿವಿಧ ಸಂಘಟನೆಗಳು ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಹೋರಾಟವನ್ನು ಮುಂದುವರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಯಾವುದೇ ಸಂಘರ್ಷಗಳಿಗೆ ಅವಕಾಶ ನೀಡದಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಜಿಲ್ಲೆಯಾದ್ಯಂತ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಶೋಭಾರಾಣಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರದ ನಟಿ ಕಿಯಾರಾಗೆ ಜನ್ಮದಿನ; ನಟಿಯ ಒಟ್ಟೂ ಆಸ್ತಿ ಎಷ್ಟು ಕೋಟಿ? – Kannada News | Kiara Advani Birthday: Toxic Actress and Sidharth Malhotra’s Combined Net Worth

ಬಾಲಿವುಡ್‌ನ ಸ್ಟಾರ್ ನಟಿ ಹಾಗೂ ಮುಂಬರುವ ‘ಟಾಕ್ಸಿಕ್’ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ದಾಂಪತ್ಯ ಜೀವನ ನಡೆಸುತ್ತಿರುವ ಕಿಯಾರಾ, ಇತ್ತೀಚೆಗೆ ತಾಯಿ ಆಗಿದ್ದಾರೆ. ಕಿಯಾರಾ ಹುಟ್ಟುಹಬ್ಬದ (ಜುಲೈ 31)ಹಿನ್ನೆಲೆಯಲ್ಲಿ ಈ ಸ್ಟಾರ್ ಜೋಡಿಯ ಆಸ್ತಿ ಮೌಲ್ಯ, ಐಷಾರಾಮಿ ಕಾರುಗಳು ಮತ್ತು ಅವರ ಸಂಪಾದನೆಯ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ

‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಧಮಾಕಾ

ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮೂಲಕ ಕಿಯಾರಾ ಅಡ್ವಾಣಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಿಗ್ ಬಜೆಟ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಿಯಾರಾ ಅವರು ‘ನಾಡಿಯಾ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಎದುರು ನಾಯಕಿಯಾಗಿ ನಟಿಸುತ್ತಿರುವ ಅವರ ಈ ವಿಭಿನ್ನ ಪಾತ್ರದ ಝಲಕ್ ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ.

ಕಿಯಾರಾ ಅಡ್ವಾಣಿ ಆಸ್ತಿ ವಿವರ

ವರದಿಗಳ ಪ್ರಕಾರ, ನಟಿ ಕಿಯಾರಾ ಅಡ್ವಾಣಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 40 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಪ್ರತಿ ಸಿನಿಮಾಗೆ ಅಂದಾಜು 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದರೊಂದಿಗೆ ಪ್ರಮುಖ ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಮಿಂಚುತ್ತಿರುವ ಅವರು, ಪ್ರತಿ ಜಾಹೀರಾತಿನಿಂದ 1.5 ಕೋಟಿ ರೂ. ಸಂಪಾದಿಸುತ್ತಾರೆ. ಇವರ ಗ್ಯಾರೇಜ್‌ನಲ್ಲಿ ಬಿಎಂಡಬ್ಲ್ಯೂ ಎಕ್ಸ್5, ಆಡಿ ಎ8ಎಲ್ ಮತ್ತು ಮರ್ಸಿಡಿಸ್ ಬೆಂಜ್ ಇ-ಕ್ಲಾಸ್‌ನಂತಹ ಐಷಾರಾಮಿ ಕಾರುಗಳಿವೆ.

ಸಿದ್ಧಾರ್ಥ್ ಮಲ್ಹೋತ್ರಾ ಆಸ್ತಿ ವಿವರ

ಬಾಕ್ಸ್ ಆಫೀಸ್‌ನ ನೆಚ್ಚಿನ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 105 ಕೋಟಿ ರೂಪಾಯಿ ಆಗಿದೆ. ಇವರು ಪ್ರತಿ ಚಿತ್ರಕ್ಕೆ 15 ರಿಂದ 20 ಕೋಟಿ ರೂಪಾಯಿ ತನಕ ಭಾರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ. ಕೊಕಕೋಲಾ, ಪೆಪೆ ಜೀನ್ಸ್‌ನಂತಹ ಟಾಪ್ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿರುವ ಇವರು, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮತ್ತು ಮರ್ಸಿಡಿಸ್ ಮೇಬ್ಯಾಕ್ ಎಸ್‌500 ನಂತಹ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಜಂಟಿ ಆಸ್ತಿ 145 ಕೋಟಿ ರೂಪಾಯಿ!

2023 ರ ಫೆಬ್ರವರಿಯಲ್ಲಿ ರಾಜಸ್ಥಾನದ ಸೂರ್ಯಗಢ ಅರಮನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಒಟ್ಟು ಜಂಟಿ ಆಸ್ತಿ ಮೌಲ್ಯ ಸುಮಾರು 145 ಕೋಟಿ ರೂಪಾಯಿ ದಾಟುತ್ತದೆ. ಸದ್ಯ ಬಾಲಿವುಡ್‌ನ ಶ್ರೀಮಂತ ಹಾಗೂ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ಒಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದು ನಮ್ಮ ಭೂಮಿ, ಹಾರ್ಮುಜ್ ಜಲಸಂಧಿ ಸಂಪೂರ್ಣ ನಮ್ಮ ನಿಯಂತ್ರಣದಲ್ಲಿದೆ:ಇರಾನ್ – Kannada News | Iran Reasserts Control Over Strait of Hormuz, Warns Nations Backing US

ಟೆಹ್ರಾನ್, ಜುಲೈ 31: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಜಾಗತಿಕ ಇಂಧನ ಪೂರೈಕೆಯ ನರನಾಡಿಯಂತಿರುವ ಹಾರ್ಮುಜ್ ಜಲಸಂಧಿ (Strait of Hormuz) ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಕಟಿಸಿದೆ.

ಅಮೆರಿಕದ ಮಿಲಿಟರಿ ಬೆದರಿಕೆಗಳು ಮತ್ತು ಹಸ್ತಕ್ಷೇಪ ನಿಲ್ಲುವವರೆಗೂ ಈ ನಿರ್ಣಾಯಕ ಜಲಮಾರ್ಗವನ್ನು ತೆರೆಯಲು ಸಾಧ್ಯವಿಲ್ಲ ಎಂದು ಟೆಹ್ರಾನ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ಅಮೆರಿಕಗೆ ಯಾವುದೇ ರೀತಿಯ ಸಹಾಯ ಮಾಡುವ ಪ್ರಾದೇಶಿಕ ದೇಶಗಳಿಗೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಐಆರ್‌ಜಿಸಿ ಎಚ್ಚರಿಸಿದೆ.

ಇರಾನ್ ಸೇನೆಯ (IRGC) ಖಡಕ್ ಪೋಸ್ಟರ್ ಹಾಗೂ ಹೇಳಿಕೆ
ಹಾರ್ಮುಜ್ ಜಲಸಂಧಿಯು ನಮ್ಮ ಭೂಮಿ, ಐಆರ್‌ಜಿಸಿಯ ನಾವಿಕರು ಅದರ ಮೇಲೆ ಸಂಪೂರ್ಣ ಸ್ವಾಮ್ಯ ಹೊಂದಿದ್ದಾರೆ. ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿರುವ ಅಪರಿಚಿತ ಅಮೆರಿಕನ್ನರಿಗೆ ಇಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ. ಆಕ್ರಮಣಕಾರರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಇರಾನ್ ಸೇನೆ ಹೇಳಿದೆ. ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧ ಇರಾನ್ ದಾಳಿ ನಡೆಸುತ್ತಿದ್ದು, ಅಮೆರಿಕಕ್ಕೆ ಬೆಂಬಲ ನೀಡದಂತೆ ನೆರೆಹೊರೆಯ ಅರಬ್ ದೇಶಗಳಿಗೆ ಎಚ್ಚರಿಸಿದೆ.

ಇರಾನ್‌ನ ಈ ನಿಲುವಿಗೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಸಚಿವಾಲಯ
ಇರಾನ್ ತನ್ನ ‘ಹಾರ್ಮುಜ್ ಸೇಫ್ ಮೆರೈನ್ ಸರ್ವೀಸಸ್’ ಹೆಸರಿನ ಸಂಸ್ಥೆಗಳ ಮೂಲಕ ಜಲಸಂಧಿಯಲ್ಲಿ ಸಾಗುವ ಅಂತಾರಾಷ್ಟ್ರೀಯ ಸರಕು ಹಡಗುಗಳಿಗೆ ಕೃತಕ ಅಪಾಯದ ಭೀತಿ ಒಡ್ಡಿ, ಬಲವಂತವಾಗಿ ವಿಮೆ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಮತ್ತಷ್ಟು ಓದಿ: ಮಾತುಕತೆ ವಿಫಲವಾದರೆ ಇರಾನ್ ವಿರುದ್ಧ ಮತ್ತೆ ಕಠಿಣ ಮಿಲಿಟರಿ ದಾಳಿ, ಇರಾನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

ಅಂತಾರಾಷ್ಟ್ರೀಯ ಜಲಮಾರ್ಗವನ್ನು ಇರಾನ್ ತನ್ನ ಶಸ್ತ್ರಾಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಡುವುದಿಲ್ಲ. ಜಾಗತಿಕ ವಾಣಿಜ್ಯ ಹಾಗೂ ಹಡಗುಗಳ ಮುಕ್ತ ಸಂಚಾರದ ಹಕ್ಕನ್ನು ರಕ್ಷಿಸಲು ಮಿತ್ರರಾಷ್ಟ್ರಗಳೊಂದಿಗೆ ಸೇರಿ ಕಾರ್ಯಾಚರಣೆ ನಡೆಸುವುದಾಗಿ ಅಮೆರಿಕ ತಿಳಿಸಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ರಫ್ತಿನ ಸುಮಾರು ಶೇಕಡಾ 20 ರಷ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಈ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ವಿವಿಧ ದೇಶಗಳಿಗೆ ಸಾಗುತ್ತದೆ.

ಇರಾನ್ ಈ ಜಲಮಾರ್ಗವನ್ನು ಸಂಪೂರ್ಣವಾಗಿ ದಿಗ್ಬಂಧನ ಮಾಡಿದರೆ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ದರ ಭಾರಿ ಪ್ರಮಾಣದಲ್ಲಿ ಜಿಗಿಯುವ ಹಾಗೂ ಜಾಗತಿಕ ಸರಕು ಪೂರೈಕೆ ಸರಪಳಿ ಸಂಪೂರ್ಣವಾಗಿ ಕಡಿದುಬೀಳುವ ಭೀತಿ ಎದುರಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:56 am, Fri, 31 July 26

Source link

ನೋಂದಣಿ ಆಯ್ತು ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಸಿನಿಮಾ ಟೈಟಲ್ – Kannada News | The Accidental Cockroach Party: Movie Announced on NEET Paper Leak Protest

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ನಡೆಸಿದ್ದ ಪ್ರತಿಭಟನೆ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಹಗರಣ ಮತ್ತು ಅದರ ಬೆನ್ನಲ್ಲೇ ನಡೆದ ರಾಜಕೀಯ ಹೈಡ್ರಾಮಾಗಳು ಈಗ ಬೆಳ್ಳಿಪರದೆಗೆ ಬರಲು ಸಜ್ಜಾಗಿವೆ. ಸಿಜೆಪಿ ನಡೆಸಿದ ಈ ಹಠಾತ್ ಪ್ರತಿಭಟನೆಯ ತೆರೆಮರೆಯ ಕಥೆಯನ್ನಿಟ್ಟುಕೊಂಡು ದೊಡ್ಡ ಬಜೆಟ್ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಸಿದ್ಧತೆಗಳು ಶುರುವಾಗಿವೆ. ಈ ಚಿತ್ರಕ್ಕೆ ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಎಂಬ ವಿಭಿನ್ನ ಶೀರ್ಷಿಕೆಯನ್ನು ಇಡಲಾಗಿದ್ದು, ಅದನ್ನು ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಲಾಗಿದೆ.

ಜೈಪುರ ಮೂಲದ ಗೋವಿಂದ್ ದೇವ್ ಬ್ರಹ್ಮ ಅವರು ಈ ಚಿತ್ರದ ಹಿಂದಿನ ಮಾಸ್ಟರ್ ಮೈಂಡ್. ಹಗರಣ ಮತ್ತು ಪ್ರತಿಭಟನೆಯ ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಅವರು, ಚಿತ್ರಕಥೆಯನ್ನು ಸಿದ್ಧಪಡಿಸಿ ಅಧಿಕೃತವಾಗಿ ಈ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಇಲ್ಲಿಯವರೆಗೆ ಸಾರ್ವಜನಿಕರಿಗೆ ತಿಳಿಯದ, ಪ್ರತಿಭಟನೆಯ ಹಿಂದೆ ನಡೆದ ಹಲವು ಆಘಾತಕಾರಿ ಸತ್ಯಗಳು ಮತ್ತು ಆಂತರಿಕ ರಾಜಕೀಯ ತಂತ್ರಗಳು ಈ ಸಿನಿಮಾ ಮೂಲಕ ಜಗತ್ತಿನ ಮುಂದೆ ಬರಲಿವೆ ಎಂದು ಚಿತ್ರತಂಡ ಹೇಳಿದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕಥೆ

ನೀಟ್ ಪೇಪರ್ ಲೀಕ್ ಬೆನ್ನಲ್ಲೇ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಸಾಕಷ್ಟು ಸಂಚಲನ ಮೂಡಿಸಿತ್ತು. ಆ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದು ಕೇವಲ ಮೇಲ್ನೋಟಕ್ಕೆ ಕಂಡ ರಾಜಕೀಯ ಕಥೆಯಲ್ಲ, ಬದಲಿಗೆ ಈ ಇಡೀ ಚಳುವಳಿಯ ಸ್ಕ್ರಿಪ್ಟ್ ಬರೆದದ್ದು ಯಾರು? ಇದರ ಹಿಂದಿದ್ದವರು ಯಾರು? ಎನ್ನುವ ಅಂಶಗಳನ್ನು ಸಿನಿಮಾ ಒಳಗೊಂಡಿರಲಿದೆ.

20 ಕೋಟಿ ಬಜೆಟ್, 2027ಕ್ಕೆ ರಿಲೀಸ್

ಇದು ಯಾವುದೇ ಸಣ್ಣ ಬಜೆಟ್‌ನ ಸಾಕ್ಷ್ಯಚಿತ್ರವಲ್ಲ. ಬದಲಿಗೆ ಬರೋಬ್ಬರಿ 20 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರಿ ಬಜೆಟ್‌ನ ಕಮರ್ಷಿಯಲ್ ಸಿನಿಮಾ. ಸದ್ಯ ಗೋವಿಂದ ದೇವ್ ‘ಬ್ರಹ್ಮ’ ಅವರ ನೇತೃತ್ವದಲ್ಲಿ ಚಿತ್ರಕಥೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಶೂಟಿಂಗ್ ಸ್ಪಾಟ್‌ಗಳ ಹುಡುಕಾಟ ಕೂಡ ಭರದಿಂದ ಸಾಗಿದೆ.

ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಗೆ ಲಕ್ಷ್ಮಣರೇಖೆ ಎಳೆದ ಬೆಂಗಳೂರು ಪೊಲೀಸರು, ಆಗಿದ್ದೇನು?

ಚಿತ್ರದ ನಾಯಕ ನಟರು ಹಾಗೂ ನಿರ್ದೇಶಕರ ಆಯ್ಕೆಗಾಗಿ ಮುಂಬೈನ ಪ್ರಮುಖ ಬಾಲಿವುಡ್ ನಿರ್ಮಾಪಕರೊಂದಿಗೆ ಮಾತುಕತೆ ಅಂತಿಮ ಹಂತ ತಲುಪಿದೆ. ತಾರಾಗಣದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ವೇಳೆಗೆ ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಹೈಟೆಕ್’ ಮೆಜೆಸ್ಟಿಕ್ : 4,997 ಕೋಟಿ ರೂ. ವೆಚ್ಚದ ಮೆಗಾ ಪ್ಲಾನ್‌ಗೆ ಶೀಘ್ರವೇ ಗ್ರೀನ್ ಸಿಗ್ನಲ್! – Kannada News | Rs 4,997 Crore Bengaluru Majestic Bus Station Revamp Closer to Approval

ಬೆಂಗಳೂರು, ಜುಲೈ 31: ರಾಜಧಾನಿಯ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ (ಕೆಂಪೇಗೌಡ) ಬಸ್ ನಿಲ್ದಾಣವನ್ನು 4,997 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಧುನೀಕರಣಗೊಳಿಸುವ ಬೃಹತ್ ಯೋಜನೆ ಜಾರಿಯತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯ ಯೋಜನೆಗಳಿಗಾಗಿ ಇರುವ ರಾಜ್ಯ ಮಟ್ಟದ ಏಕ ಗವಾಕ್ಷಿ ಸಂಸ್ಥೆಯು (SLSWA) ಈ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ಮುಖ್ಯಮಂತ್ರಿ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗೆ (SHLCC) ಶಿಫಾರಸು ಮಾಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 12,936.86 ಕೋಟಿ ರೂ. ಮೌಲ್ಯದ ಏಳು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಯಿತು. 500 ಕೋಟಿ ರೂ.ಗೂ ಹೆಚ್ಚು ವೆಚ್ಚದ ಬೃಹತ್ ಯೋಜನೆಗಳನ್ನು SHLCC ಪರಿಶೀಲನೆಗೆ ಕಳುಹಿಸಲಾಗಿದ್ದು, ಇದರಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯೂ ಸೇರಿದೆ.

ಯೋಜನೆಯಲ್ಲೇನಿದೆ?

  • ಆಧುನಿಕ ಮೂಲಸೌಕರ್ಯ: ಮೆಜೆಸ್ಟಿಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕ ಸೌಲಭ್ಯಗಳು, ಸುಸಜ್ಜಿತ ತಂಗುದಾಣ ಹಾಗೂ ಸುಗಮ ಸಂಚಾರ ವ್ಯವಸ್ಥೆ ನಿರ್ಮಾಣ.
  • ಖಾಸಗಿ ಹೂಡಿಕೆ: ಪಿಪಿಪಿ ಮಾದರಿಯ ಮೂಲಕ ಖಾಸಗಿ ವಲಯದ ಬಂಡವಾಳ ಆಕರ್ಷಣೆ.
  • ಉದ್ಯೋಗ ಸೃಷ್ಟಿ: ಸಾರಿಗೆ, ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗಳ ಸೃಷ್ಟಿ.

ಇದೇ ಸಭೆಯಲ್ಲಿ ಮೈಸೂರಿನಲ್ಲಿ 729.43 ಕೋಟಿ ರೂ. ವೆಚ್ಚದ ‘ಫಿಲ್ಮ್ ಸಿಟಿ’ ಹಾಗೂ ಉತ್ತರ ಕನ್ನಡದ ಮಾಂಕಿ ಬಂದರಿನಲ್ಲಿ 6,925 ಕೋಟಿ ರೂ. ವೆಚ್ಚದ ‘ಬಹುಪಯೋಗಿ ಬಂದರು’ ನಿರ್ಮಾಣ ಯೋಜನೆಗಳನ್ನೂ SHLCC ಸಮಿತಿಗೆ ಶಿಫಾರಸು ಮಾಡಲಾಗಿದೆ. ಜೊತೆಗೆ ಮಂಗಳೂರಿನ ದೀಪಸ್ತಂಭ ಪ್ರವಾಸೋದ್ಯಮ ಮತ್ತು ಊಟಿಯ ಕರ್ನಾಟಕ ಸಿರಿ ತೋಟಗಾರಿಕೆ ತೋಟದ ಅಭಿವೃದ್ಧಿ ಸೇರಿದಂತೆ 285.43 ಕೋಟಿ ರೂ. ಮೌಲ್ಯದ ನಾಲ್ಕು ಸಣ್ಣ ಯೋಜನೆಗಳಿಗೆ ನೇರ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಮಿತಿಯಿಂದ ಆಡಳಿತಾತ್ಮಕ ಒಪ್ಪಿಗೆ ದೊರೆಯುವ ನಿರೀಕ್ಷೆಯಿದ್ದು, ಬೆಂಗಳೂರಿನ ಸಾರಿಗೆ ಕ್ಷೇತ್ರಕ್ಕೆ ಹೊಸ ಕಳೆ ಬರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಗೆ ಆರೆಂಜ್ ಅಲರ್ಟ್, ಮಲೆನಾಡಿನಲ್ಲೂ ಭಾರಿ ಮಳೆ ಮುನ್ಸೂಚನೆ – Kannada News | Karnataka Weather: Heavy to Very Heavy Rain Forecast in Coastal and Interior Districts on July 31 and August 1

ಬೀದರ್​​ನ ಬಸವಕಲ್ಯಾಣದಲ್ಲಿ ಇತ್ತೀಚೆಗೆ ಸುರಿದ ಮಳೆ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನವೂ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ (Weather Forecast) ಜುಲೈ 31ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ 50-60 ಕಿ.ಮೀ ವೇಗದ ಗಾಳಿಯೊಂದಿಗೆ ವರ್ಷಧಾರೆಯಾಗುವ ಸಾಧ್ಯತೆ ಇದೆ. ಧಾರವಾಡ ಮತ್ತು ಗದಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮಳೆಯಾಗುತ್ತಾ?

ದಕ್ಷಿಣ ಒಳನಾಡಿನಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ to ಅತಿ ಭಾರಿ ಮಳೆ ಸಾಧ್ಯತೆ ಇದೆ. ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಆಗಸ್ಟ್ 1ರಂದು ಮುಂದುವರಿಯಲಿದೆ ಮಳೆ

ಆಗಸ್ಟ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಾಧ್ಯತೆ ಇದ್ದರೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್ ಹಾಗೂ ಮಲೆನಾಡಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ರಾಜ್ಯದಲ್ಲಿ ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?

ಐಎಂಡಿ ಪ್ರಕಾರ, ಗುರುವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಅಗುಂಬೆ (ಶಿವಮೊಗ್ಗ)ಯಲ್ಲಿ 8 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ (ದಕ್ಷಿಣ ಕನ್ನಡ) 6 ಸೆಂ.ಮೀ., ಚಿಂಚೋಳಿ (ಕಲಬುರಗಿ) 5 ಸೆಂ.ಮೀ., ಧರ್ಮಸ್ಥಳ (ದಕ್ಷಿಣ ಕನ್ನಡ) 5 ಸೆಂ.ಮೀ., ಜಯಪುರ (ಚಿಕ್ಕಮಗಳೂರು) 5 ಸೆಂ.ಮೀ., ಕುಂದಾಪುರ (ಉಡುಪಿ) 5 ಸೆಂ.ಮೀ., ಸಂತಪುರ (ಬೀದರ್) 5 ಸೆಂ.ಮೀ., ಶೃಂಗೇರಿ (ಚಿಕ್ಕಮಗಳೂರು) 5 ಸೆಂ.ಮೀ. ಹಾಗೂ ಉಪ್ಪಿನಂಗಡಿ (ದಕ್ಷಿಣ ಕನ್ನಡ) 5 ಸೆಂ.ಮೀ. ಮಳೆ ದಾಖಲಾಗಿದೆ.

ಇದನ್ನೂ ಓದಿ: ಆಲಮಟ್ಟಿ ಭರ್ತಿಯತ್ತ; ಏರಿಕೆಯಾಗುತ್ತಿಲ್ಲ ಕೆಆರ್‌ಎಸ್, ಕಬಿನಿ, ಹೇಮಾವತಿ ನೀರಿನ ಮಟ್ಟ

ರಾಜ್ಯದಲ್ಲಿ ಜುಲೈ 30ರಂದು ಮುಂಗಾರು ಉತ್ತರ ಒಳನಾಡಿನಲ್ಲಿ ಸಕ್ರಿಯ, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಹಾಗೂ ಕರಾವಳಿ ಕರ್ನಾಟಕದಲ್ಲಿ ದುರ್ಬಲವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಣಬೀರ್ ಇನ್ಮೇಲೆ ಅನಿಮಲ್ ರೀತಿಯ ಸಿನಿಮಾ ಮಾಡಬಾರದು’; ಹಿರಿಯ ನಟನ ಕಿವಿಮಾತು – Kannada News | Nitish Bharadwaj Says Ranbir Kapoor Should Not Do Animal type Movie 

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾದ ಟ್ರೈಲರ್ ಜುಲೈ 31ರಂದು ಬಿಡುಗಡೆಯಾಗಿದೆ. ಬಿ.ಆರ್. ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಹಿರಿಯ ನಟ ನಿತೀಶ್ ಭಾರದ್ವಾಜ್ ಹೊಸ ರಾಮಾಯಣ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ. ನಟ ರಣಬೀರ್ ಕಪೂರ್ (Ranbir Kapoor) ಅಭಿನಯಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಆಸ್ಕರ್ ಗೆಲ್ಲುವ ಸಿನಿಮಾ

ನಟ ನಿತೀಶ್ ಭಾರದ್ವಾಜ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ‘ರಾಮಾಯಣ’ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಶೇ. 100ರಷ್ಟು ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಸತ್ಯಜಿತ್ ರೇ ಮತ್ತು ಶೇಖರ್ ಕಪೂರ್ ಅವರಿಗೆ ಹೋಲಿಸಿದ್ದಾರೆ. ಚಿತ್ರದ ವಿಎಫ್‌ಎಕ್ಸ್ ಮತ್ತು ತಂತ್ರಜ್ಞಾನದ ಬಳಕೆಯನ್ನು ಕೊಂಡಾಡಿದ್ದಾರೆ.

ರಣವೀರ್ ಸಿಂಗ್‌ಗೆ ರಣಬೀರ್ ಸಮಾನ

ರಣಬೀರ್ ಕಪೂರ್ ಈಗ ರಣವೀರ್ ಸಿಂಗ್ ಅವರಷ್ಟೇ ಪ್ರತಿಭಾವಂತ ನಟ ಎಂದು ನಿತೀಶ್ ಹೊಗಳಿದ್ದಾರೆ. ಭಾರತೀಯ ಚಿತ್ರರಂಗದ ಇಬ್ಬರು ಅಜೇಯ ಧುರಂಧರರಲ್ಲಿ ರಣಬೀರ್ ಕೂಡ ಒಬ್ಬರಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ರಾವಣನ ಪಾತ್ರ ಮಾಡಿರುವ ನಟ ಯಶ್ ಅವರನ್ನು ಜಾಗತಿಕ ಚಿತ್ರರಂಗಕ್ಕೆ ಸ್ವಾಗತಿಸಿದ್ದಾರೆ. ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಸಂಗೀತದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನಿಮಲ್ ಚಿತ್ರಗಳ ಸಹವಾಸ ಬೇಡ

ನಟ ರಣಬೀರ್ ಕಪೂರ್‌ಗೆ ನಿತೀಶ್ ಭಾರದ್ವಾಜ್ ಒಂದು ಕಿವಿಮಾತು ಹೇಳಿದ್ದಾರೆ. ಇನ್ನು ಮುಂದೆ ‘ಅನಿಮಲ್’ ತರಹದ ಸಿನಿಮಾಗಳನ್ನು ಮಾಡಬೇಡಿ ಎಂದು ವಿನಂತಿಸಿದ್ದಾರೆ. ಕೋಟಿ ಕೋಟಿ ಹಣ ಸಿಕ್ಕರೂ ಇಂತಹ ಚಿತ್ರಗಳಿಂದ ದೂರವಿರಿ ಎಂದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಈಗ ರಣಬೀರ್ ಮೇಲಿದೆ ಎಂದು ನೆನಪಿಸಿದ್ದಾರೆ. ನಟಿ ಸಾಯಿ ಪಲ್ಲವಿ ಅವರನ್ನು ಪ್ರೇಕ್ಷಕರು ಸೀತೆಯಾಗಿ ಸ್ವೀಕರಿಸಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಧೂಮ್ ವದಂತಿಗಳಿಗೆ ಕೊನೆಗೂ ಬ್ರೇಕ್ ಹಾಕಿದ ರಣಬೀರ್ ಕಪೂರ್

ಟೀಕೆಗಳಿಗೆ ರಣಬೀರ್ ಕಪೂರ್ ಉತ್ತರ

ಶ್ರೀರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ರಣಬೀರ್ ಉತ್ತರ ನೀಡಿದ್ದಾರೆ. ‘ಶ್ರೀರಾಮನ ಪಾತ್ರ ಮಾಡಲು ನಾನು ಯೋಗ್ಯನೇ ಎಂಬ ಪ್ರಶ್ನೆ ನನಗೂ ಕಾಡಿತ್ತು. 4,000 ವರ್ಷಗಳ ಇತಿಹಾಸವಿರುವ ಕಥೆಯನ್ನು ಬೆಳ್ಳಿತೆರೆಗೆ ತರುವುದು ದೊಡ್ಡ ಜವಾಬ್ದಾರಿ. ಶ್ರೀರಾಮನ ಪಾತ್ರಕ್ಕೆ ಸೂಕ್ತ ಉದ್ದೇಶ ಮತ್ತು ನಂಬಿಕೆ ಇರುವ ಯಾವುದೇ ನಟನಾದರೂ ಹೊಂದಿಕೆಯಾಗುತ್ತಾನೆ’ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಪ್ರಶ್ನೆ:ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ

ಪ್ರಶ್ನೆ: ರಾಮಾಯಣ ನಿರ್ದೇಶಕ ಯಾರು?
ಉತ್ತರ: ನಿತೇಶ್ ತಿವಾರಿ

ಪ್ರಶ್ನೆ: ರಾಮಾಯಣ ಸಿನಿಮಾದಲ್ಲಿ ರಣಬೀರ್ ಪಾತ್ರವೇನು?
ಉತ್ತರ: ರಾಮನ ಪಾತ್ರ

Published On – 7:38 am, Fri, 31 July 26

Source link

Shiva Puja: ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಈ ತಪ್ಪು ಮಾಡಬೇಡಿ; ಪಾಲಿಸಬೇಕಾದ ಸರಿಯಾದ ನಿಯಮ ಇಲ್ಲಿದೆ! – Kannada News | Rules for Offering Bel Patra to Lord Shiva: Common Mistakes to Avoid as per Shiva Purana

ಶಿವನಿಗೆ ಬಿಲ್ವಪತ್ರೆImage Credit source: Getty Images

ಶಿವಪೂಜೆಯಲ್ಲಿ ಬಿಲ್ವಪತ್ರೆಗೆ (ಬೇಲ್ಪತ್ರ) ಅತ್ಯಂತ ಪವಿತ್ರವಾದ ಸ್ಥಾನವಿದೆ. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನು ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುದು ನಂಬಿಕೆ. ಆದರೆ, ಶಿವ ಮಹಾಪುರಾಣದ ಪ್ರಕಾರ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಕೆಲವು ವಿಶೇಷ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸರಿಯಾದ ವಿಧಾನದಲ್ಲಿ ಅರ್ಪಿಸದಿದ್ದರೆ ಪೂಜೆಯ ಸಂಪೂರ್ಣ ಫಲ ಸಿಗುವುದಿಲ್ಲ. ಶಿವನ ಪೂರ್ಣ ಆಶೀರ್ವಾದ ಪಡೆಯಲು ಯಾವ ಏನು ತಪ್ಪಿಸಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಸೋಮವಾರ ಅಥವಾ ಚತುರ್ದಶಿಯಂದು ಬಿಲ್ವಪತ್ರೆ ಕೀಳಬೇಡಿ:

ಶಿವ ಪುರಾಣದ ಪ್ರಕಾರ, ಸೋಮವಾರ ಅಥವಾ ಚತುರ್ದಶಿ ತಿಥಿಯಂದು ಬಿಲ್ವಪತ್ರೆಯನ್ನು ಗಿಡದಿಂದ ಕೀಳಬಾರದು. ಈ ದಿನಗಳಲ್ಲಿ ಎಲೆಗಳನ್ನು ಕೀಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸೋಮವಾರ ಅಥವಾ ಚತುರ್ದಶಿಯಂದು ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕಿದ್ದರೆ, ಒಂದು ದಿನ ಮುಂಚಿತವಾಗಿ (ಅಂದರೆ ಭಾನುವಾರ ಅಥವಾ ತ್ರಯೋದಶಿಯಂದು) ಎಲೆಗಳನ್ನು ಕಿತ್ತು ಕಾಯ್ದಿರಿಸಿಕೊಳ್ಳಬೇಕು. ಒಂದು ದಿನ ಮುಂಚಿತವಾಗಿ ಕಿತ್ತಿಟ್ಟ ಬಿಲ್ವಪತ್ರೆಯು ಪೂಜೆಗೆ ಅಷ್ಟೇ ಪರಿಣಾಮಕಾರಿ ಹಾಗೂ ಪವಿತ್ರವಾಗಿರುತ್ತದೆ.

ಶಿವಲಿಂಗಕ್ಕೆ ಅರ್ಪಿಸಲು ಸರಿಯಾದ ಬಿಲ್ವಪತ್ರೆಯನ್ನು ಹೀಗೆ ಆಯ್ಕೆ ಮಾಡಿ:

ಬಿಲ್ವಪತ್ರೆಯನ್ನು ಕೀಳುವಾಗ ಯಾವಾಗಲೂ ಮೂರು ಎಲೆಗಳು ಒಂದೇ ತೊಟ್ಟಿನಲ್ಲಿ ಜೋಡಣೆಯಾಗಿರುವ ಎಲೆಯನ್ನೇ ಆರಿಸಿಕೊಳ್ಳಬೇಕು. ಈ ಮೂರು ಎಲೆಗಳು ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಹಾಗೂ ಶಿವನ ತ್ರಿಶೂಲದ ಸಂಕೇತವಾಗಿವೆ. ಹರಿದುಹೋದ, ಕೀಟಗಳು ತಿಂದ ಅಥವಾ ಕೇವಲ ಎರಡು ಎಲೆಗಳಿರುವ ಬಿಲ್ವಪತ್ರೆಯನ್ನು ಪೂಜೆಗೆ ಬಳಸಬಾರದು. ಹಾಗೆಯೇ, ಎಲೆಗಳನ್ನು ಕೀಳುವಾಗ ಮರದ ಕೊಂಬೆಗಳನ್ನು ಮುರಿಯಬಾರದು; ಕೊಂಬೆ ಮುರಿಯುವುದು ಶಿವನಿಗೆ ಅಗೌರವ ತೋರಿದಂತೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಶಿವಲಿಂಗಕ್ಕೆ ಎಷ್ಟು ಬಿಲ್ವಪತ್ರೆಗಳನ್ನು ಅರ್ಪಿಸಬೇಕು?

ಶಿವ ಪೂಜೆಯಲ್ಲಿ ಬಿಲ್ವಪತ್ರೆಗಳ ಸಂಖ್ಯೆಗೂ ವಿಶೇಷ ಮಹತ್ವವಿದೆ. ಶಿವ ಮಹಾಪುರಾಣದ ಪ್ರಕಾರ, ಶಿವಲಿಂಗಕ್ಕೆ ಯಾವಾಗಲೂ ಬೆಸ ಸಂಖ್ಯೆಯಲ್ಲಿ (Odd Numbers) ಬಿಲ್ವಪತ್ರೆಗಳನ್ನು ಅರ್ಪಿಸಬೇಕು. ಅಂದರೆ 3, 5, 7, 11, 21, 51 ಅಥವಾ 101 ರ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುವುದು ಅತ್ಯಂತ ಶುಭ. ಜೊತೆಗೆ, ಶಿವಲಿಂಗಕ್ಕೆ ಅರ್ಪಿಸುವ ಮುನ್ನ ಬಿಲ್ವಪತ್ರೆಯನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕೊಳಕಾಗಿರುವ ಅಥವಾ ತೊಳೆಯದ ಎಲೆಗಳನ್ನು ಎಂದಿಗೂ ಅರ್ಪಿಸಬಾರದು.

ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸುವ ಸರಿಯಾದ ವಿಧಾನ:

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಇಡುವ ವಿಧಾನವೂ ಅತ್ಯಂತ ಮುಖ್ಯವಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸುವಾಗ ಅದರ ನಯವಾದ (ಮೃದುವಾದ) ಭಾಗವು ಶಿವಲಿಂಗಕ್ಕೆ ಸ್ಪರ್ಶಿಸುವಂತೆ ಅಂದರೆ ಕೆಳಮುಖವಾಗಿ ಇಡಬೇಕು. ಎಲೆಯ ಒರಟಾದ ಭಾಗವು ಮೇಲ್ಮುಖವಾಗಿರಬೇಕು. ಈ ರೀತಿ ಸರಿಯಾದ ಕ್ರಮದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ವಿಶೇಷ ಅನುಗ್ರಹ ಲಭಿಸುತ್ತದೆ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:35 am, Fri, 31 July 26

Source link

ಭಿವಂಡಿಯಲ್ಲಿ ಭಾರಿ ಮಳೆಗೆ ಕುಸಿದ 4 ಅಂತಸ್ತಿನ ಕಟ್ಟಡ: 8-10 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ – Kannada News | Heavy Rains Trigger Partial Collapse of Four Storey Building in Bhiwandi, Rescue Efforts Continue

ಭಿವಂಡಿ, ಜುಲೈ 31: ಮಹಾರಾಷ್ಟ್ರದ ಭಿವಂಡಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ(Rain)ಯ ನಡುವೆ ಗುರುವಾರ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸುಮಾರು 8 ರಿಂದ 10 ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಭಿವಂಡಿ ಮಹಾನಗರ ಪಾಲಿಕೆ, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ (NDRF) ಪಡೆಯು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳ ಅಡಿಯಲ್ಲಿದ್ದ ಮಹಿಳೆಯೊಬ್ಬರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಯಶಸ್ವಿಯಾಗಿ ಜೀವಂತವಾಗಿ ಹೊರತೆಗೆದಿದ್ದು, ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಟ್ಟಡವನ್ನು ಆಡಳಿತ ಮಂಡಳಿಯು ಈಗಾಗಲೇ ಖಾಲಿ ಮಾಡಿಸಿತ್ತಾದರೂ, ನೆಲ ಮಹಡಿಯಲ್ಲಿ ಕೆಲವು ಕಾರ್ಮಿಕರು ದುರಸ್ತಿ ಕೆಲಸ ಮಾಡುತ್ತಿದ್ದರು. ಸುಮಾರು 6 ರಿಂದ 7 ಕಾರ್ಮಿಕರು ಮತ್ತು ಒಂದೆರಡು ನಿವಾಸಿಗಳು ಪ್ರಸ್ತುತ ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಿವಂಡಿ ಪಶ್ಚಿಮ ಕ್ಷೇತ್ರದ ಶಾಸಕ ಮಹೇಶ್ ಚೌಗುಲೆ ಮಾತನಾಡಿ, “ನಾರ್ಪೋಲಿಯ ಭಂಡಾರಿ ಕಾಂಪೌಂಡ್‌ನಲ್ಲಿರುವ ಈ ಕೊಹಿನೂರ್ ಕಟ್ಟಡವನ್ನು ಪುರಸಭೆಯು ‘ಸಿ-ಕ್ಯಾಟಗರಿ’ ಎಂದು ವರ್ಗೀಕರಿಸಿ ಸ್ಥಳಾಂತರಿಸಲು ಸೂಚಿಸಿತ್ತು. ಹೆಚ್ಚಿನ ಕುಟುಂಬಗಳು ಖಾಲಿ ಮಾಡಿದ್ದವು, ಆದರೆ ದುರಸ್ತಿ ಕೆಲಸಕ್ಕಾಗಿ ಇದ್ದ ಕೆಲವು ಕಾರ್ಮಿಕರು ಈ ದುರಂತಕ್ಕೆ ಸಿಲುಕಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ

ಈ ದುರಂತವು ಸ್ಥಳೀಯ ಆಡಳಿತದ ಭದ್ರತಾ ಮಾನದಂಡಗಳ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ, ಪುರಸಭೆಯು ಅತ್ಯಂತ ಅಪಾಯಕಾರಿ ಎಂದು ಘೋಷಿಸಿದ ಕಟ್ಟಡದೊಳಗೆ ದುರಸ್ತಿ ಕೆಲಸಕ್ಕೆ ಯಾರು ಅನುಮತಿ ನೀಡಿದರು? ನಾಲ್ಕು ಬಾರಿ ಅಧಿಕೃತ ನೋಟಿಸ್ ನೀಡಿದ್ದರೂ ಕಟ್ಟಡ ಸಂಪೂರ್ಣವಾಗಿ ಖಾಲಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಏಕೆ ವಿಫಲರಾದರು ಎನ್ನುವ ಪ್ರಶ್ನೆ ಎದ್ದಿದೆ.

ಮತ್ತಷ್ಟು ಓದಿ: Karnataka Weather Forecast: ನಾಳೆ 4 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​, ತಿಂಗಳಾಂತ್ಯದವರೆಗೂ ಮಳೆ ಮುನ್ಸೂಚನೆ

ಮಹಾರಾಷ್ಟ್ರದ ಕೊಂಕಣ ಕರಾವಳಿ ಹಾಗೂ ಠಾಣೆ-ಭಿವಂಡಿ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಭಾರಿ ಮಳೆಯಾಗುತ್ತಿದ್ದು, ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳು ಕುಸಿಯುವ ಅಪಾಯ ಹೆಚ್ಚಾಗಿದೆ.

ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಡಿ ‘ಸಿ-ಕ್ಯಾಟಗರಿ’ ಎಂದರೆ ತಕ್ಷಣವೇ ಕೆಡವಬೇಕಾದ ಅಥವಾ ಸಂಪೂರ್ಣವಾಗಿ ಖಾಲಿ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಲಕ್ಷ್ಯ ವಹಿಸಿದ ಮನೆ ಮಾಲೀಕರು ಹಾಗೂ ಕಾಂಟ್ರಾಕ್ಟರ್‌ಗಳ ವಿರುದ್ಧ ಸೈಬರ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version