ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಬಂದ ಅಭಿಮಾನಿ; ಫೋಟೋ ಕಸಿದುಕೊಂಡ ಪೋಲೀಸರು – Kannada News | Police Seize Darshan Photo from Fan Screaming Slogans During Ashadha Pooja At Chamundi Hills

ಆಷಾಢ ಪೂಜೆಯ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಭಕ್ತರ ಸರತಿ ಸಾಲಿನಲ್ಲಿ ನಿಂತಿದ್ದ ಅಭಿಮಾನಿಯೊಬ್ಬ ನಟ ದರ್ಶನ್ ಅವರ ದೊಡ್ಡ ಭಾವಚಿತ್ರವನ್ನು ಹಿಡಿದುಕೊಂಡು ಬಂದಿದ್ದನು. ದೇವಿಯ ದರ್ಶನಕ್ಕಾಗಿ ಕಾಯುವಾಗ ಆತ ಸಾಲಿನಲ್ಲಿ ನಿಂತೇ ‘ಡಿ ಬಾಸ್’ ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದನು. ಗದ್ದಲ ಎಬ್ಬಿಸುತ್ತಾ ತನ್ನ ಅಭಿಮಾನವನ್ನು ಪ್ರದರ್ಶಿಸುತ್ತಿದ್ದ ಆತನ ನಡೆ ಅಲ್ಲಿದ್ದ ಇತರೆ ಭಕ್ತರಿಗೆ ಮುಜುಗರ ಉಂಟುಮಾಡಿತ್ತು.

ಭಾವಚಿತ್ರ ಕಸಿದುಕೊಂಡ ಪೊಲೀಸರು

ಸರತಿ ಸಾಲಿನಲ್ಲಿ ಭಕ್ತರು ದೇವಿಯ ನಾಮಸ್ಮರಣೆ ಮಾಡುವ ಬದಲು ನಟನ ಜೈಕಾರ ಕೂಗುತ್ತಿರುವುದನ್ನು ಗಮನಿಸಿದ ಭದ್ರತಾ ನಿರತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಆತನ ಬಳಿ ಧಾವಿಸಿದ ಪೊಲೀಸರು, ಆತನ ಕೈಯಲ್ಲಿದ್ದ ದರ್ಶನ್ ಅವರ ಭಾವಚಿತ್ರವನ್ನು ಕಸಿದುಕೊಂಡಿದ್ದಾರೆ.

ಬರಿಗೈಯಲ್ಲಿ ಕಳುಹಿಸಿದ ಖಾಕಿ

ಅಭಿಮಾನಿಯಿಂದ ಫೋಟೋವನ್ನು ವಶಪಡಿಸಿಕೊಂಡ ಪೊಲೀಸರು, ಆತನನ್ನು ಬರಿಗೈಯಲ್ಲಿಯೇ ದೇವಸ್ಥಾನದ ಒಳಗೆ ದರ್ಶನಕ್ಕಾಗಿ ಕಳುಹಿಸಿಕೊಟ್ಟಿದ್ದಾರೆ. ಪವಿತ್ರ ಕ್ಷೇತ್ರಕ್ಕೆ ಬರುವಾಗ ದೇವಸ್ಥಾನದ ಶಿಸ್ತು ಮತ್ತು ನಿಯಮಗಳನ್ನು ಪಾಲಿಸಬೇಕು. ಇತರ ಭಕ್ತರಿಗೆ ತೊಂದರೆ ಕೊಡುವ ಸಾರ್ವಜನಿಕ ಪ್ರದರ್ಶನಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

TV9 Kannada News Live: ರಾಜ್ಯದಲ್ಲಿ ಹೆಚ್ಚಾಯ್ತು ಕಾವೇರಿ ಕಿಚ್ಚು! ಕೆಆರ್‌ಎಸ್‌ ಮುತ್ತಿಗೆ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 31 July 2026 Cauvery Water Dispute Farmers Protest, Karnataka Tamil Nadu CM Meet Politics Cinema Latest Updates Online

Breaking News Today Live Updates in Kannada: ತಮಿಳುನಾಡಿಗೆ 3,500 ಕ್ಯೂಸೆಕ್ಸ್ ನೀರು ಹರಿಸುವ CWRC ಆದೇಶ ಖಂಡಿಸಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಇಂದು ಕೆಆರ್‌ಎಸ್ ಜಲಾಶಯ ಮುತ್ತಿಗೆ ಚಳವಳಿ ನಡೆಸುತ್ತಿದ್ದು, ಮಂಡ್ಯದಲ್ಲಿ ಹೋರಾಟ ತೀವ್ರಗೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟಿಗೆ ತೆರೆಬಿದ್ದಿದ್ದು, ರಾಹುಲ್ ಗಾಂಧಿ ಪಟ್ಟಿಗೆ ಅಂತಿಮ ಅಂಕಿತ ಹಾಕಿದ್ದಾರೆ. ಸೋಮವಾರ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹೊಸ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರವನ್ನು ಐತಿಹಾಸಿಕ ಕ್ಷಣ ಎಂದು ಕರೆದಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ಪ್ರಧಾನಿ ಮೋದಿ ವೀಡಿಯೊ ಬ್ಲಾಕ್ ಮಾಡಿದ್ದ ಮೆಟಾಗೆ ಸರ್ಕಾರದ ಬಿಸಿ – Kannada News | Meta Faces Govt Heat: PM Modi Video Block Sparks VIP Account Security Overhaul

ನವದೆಹಲಿ, ಜುಲೈ 31: ಕಾಕ್ರೋಚ್ ಜನತಾ ಪಕ್ಷದ (CJP) ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಹಾಗೂ ಮಾರ್ಫ್ ಮಾಡಿದ ವೀಡಿಯೊಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮೆಟಾ ಇಂಡಿಯಾ (Meta India) ಸಂಸ್ಥೆಯ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಹೈದರಾಬಾದ್ ಸೈಬರ್ ಕ್ರೈಮ್ ಪೋಲಿಸರು ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಸೇರಿದಂತೆ ಹಲವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಧಾನಿಯವರ ನಕಲಿ, ಅಶ್ಲೀಲ ಮತ್ತು ದಾರಿತಪ್ಪಿಸುವ ವೀಡಿಯೊಗಳನ್ನು ಸೃಷ್ಟಿಸಿ ಹರಿಬಿಡಲಾಗಿತ್ತು. ಕೃತಕ ಬುದ್ಧಿಮತ್ತೆ (AI) ಬಳಸಿ ಈ ವಿಡಿಯೋಗಳನ್ನು ಮಾರ್ಫ್ ಮಾಡಲಾಗಿದೆ ಎಂದು ಇಬ್ಬರು ದೂರುದಾರರು ಆರೋಪಿಸಿದ್ದಾರೆ.

ಈ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳಲ್ಲಿ ಅವಹೇಳನಕಾರಿ ಹಾಗೂ ಅಸಭ್ಯ ಭಾಷೆಯನ್ನು ಬಳಸಲಾಗಿದ್ದು, ಸಾರ್ವಜನಿಕರಲ್ಲಿ ದ್ವೇಷ ಮತ್ತು ಅಶಾಂತಿಯನ್ನು ಪ್ರಚೋದಿಸುವ ಸಾಮರ್ಥ್ಯ ಹೊಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಜೆಪ ವಿದ್ಯಾರ್ಥಿ ಪ್ರತಿಭಟನೆಯ ನೆಪದಲ್ಲಿ ಇಂತಹ ನಿಂದನೀಯ ಪೋಸ್ಟ್‌ಗಳನ್ನು ವೈರಲ್ ಮಾಡಲಾಗಿತ್ತು. ಈ ವಾರದ ಆರಂಭದಲ್ಲಿ ಪ್ರಧಾನಿ ಮೋದಿ ಅವರ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದ ವೀಡಿಯೊ ಒಂದನ್ನು ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಇದರಿಂದ ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಯ ನಡವಳಿಕೆಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿತ್ತು.

ಮತ್ತಷ್ಟು ಓದಿ:
ಮೋದಿ ಕಾಲು ತೊಳೆದು ನೀರು ಕುಡಿಯುತ್ತೇನೆ: ಪ್ರಧಾನಿಯನ್ನು ವಿಷ್ಣು ಅವತಾರ ಎಂದ ನಟ ಸುದೇಶ್ ಬೇರಿ

ಸರ್ಕಾರದ ಖಂಡನೆಯ ಬೆನ್ನಲ್ಲೇ ಮೆಟಾ ಸಂಸ್ಥೆಯು ಪ್ರಧಾನ ಮಂತ್ರಿಯವರ ಖಾತೆಯ ಸುರಕ್ಷತೆಗೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಇನ್ಮುಂದೆ ಪ್ರಧಾನಿ ಖಾತೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಕಂಪನಿಯ ಕನಿಷ್ಠ ಇಬ್ಬರು ಹಿರಿಯ ಅಧಿಕಾರಿಗಳು ಪರಿಶೀಲಿಸಿದ ನಂತರವೇ ನಿರ್ಧಾರ ಕೈಗೊಳ್ಳಲಿದ್ದಾರೆ. ವಿಷಯ ನಿಯಂತ್ರಣ ಮತ್ತು ಸೈಬರ್ ಸುರಕ್ಷತೆಯ ಕುರಿತು ಚರ್ಚಿಸಲು ಮೆಟಾ ಸಂಸ್ಥೆಯ ಉನ್ನತ ಮಟ್ಟದ ತಂಡವು ಈ ವಾರದ ಕೊನೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಹೋಟೆಲ್ ಮಾಲೀಕರಿಂದ ‘ಸ್ವಿಗ್ಗಿ’ಗೆ ಶಾಕ್: ಆ.15 ರ ನಂತರ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ – Kannada News | Swiggy Under Fire: Bengaluru Hotels Plan Aug 15 Boycott Over Unfair Practices

ಬೆಂಗಳೂರು, ಜು.31: ದೇಶದ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ (Swiggy) ಗೆ ಬೆಂಗಳೂರಿನಲ್ಲಿ ದೊಡ್ಡ ಆಘಾತ ಎದುರಾಗುವ ಸಾಧ್ಯತೆಯಿದೆ. ಅನಗತ್ಯ ಕಮಿಷನ್, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಅನುಮತಿಯಿಲ್ಲದೆ ಹಣ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಹೋಟೆಲ್‌ಗಳ ಸಂಘ (BHA) ಸೇರಿದಂತೆ ವಿವಿಧ ಹೋಟೆಲ್ ಮಾಲೀಕರ ಸಂಘಟನೆಗಳು ಆಗಸ್ಟ್ 15ರಿಂದ ಸ್ವಿಗ್ಗಿ ಮೂಲಕ ಆರ್ಡರ್ ಸ್ವೀಕರಿಸುವುದನ್ನು ಪೂರ್ಣವಾಗಿ ಸ್ಥಗಿತಗೊಳಿಸಲು (Boycott) ಗಂಭೀರ ತೀರ್ಮಾನ ಕೈಗೊಂಡಿವೆ.

ಕಳೆದ 10 ತಿಂಗಳಿನಿಂದ ನಿರಂತರವಾಗಿ ಮಾತುಕತೆ ನಡೆಸಿದರೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಸಮಸ್ಯೆಗಳನ್ನು ಸರಿಪಡಿಸಲು ಸ್ವಿಗ್ಗಿಗೆ 15 ದಿನಗಳ ಅಂತಿಮ ಗಡುವು (ಆಗಸ್ಟ್ 15) ನೀಡಲಾಗಿದೆ.

ಹೋಟೆಲ್ ಮಾಲೀಕರ ಆರೋಪಗಳೇನು?

ಹೋಟೆಲ್ ಮಾಲೀಕರ ಅನುಮತಿಯಿಲ್ಲದೆ ಪ್ರಚಾರ ವೆಚ್ಚಗಳು, ಕ್ಲಿಕ್ ವೆಚ್ಚ, ಕಸ್ಟಮರ್ ಅಕ್ವಿಸಿಷನ್ (CPA) ಹಾಗೂ ಜಾಹೀರಾತು ಶುಲ್ಕಗಳ ಹೆಸರಿನಲ್ಲಿ ಹಣ ಕಡಿತಗೊಳಿಸಲಾಗುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ. ರಾವ್, “ನಮಗೆ ಸ್ವಿಗ್ಗಿಯ ಸಾಮಾನ್ಯ ಸೇವಾ ಶುಲ್ಕಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಸೇವಾ ಶುಲ್ಕ, ಪೇಔಟ್ ಶುಲ್ಕ, ಮ್ಯಾಪ್-ಅಪ್ ಶುಲ್ಕ ಎಂದು ಹೇಳಿ 1 ಲಕ್ಷ ರೂಪಾಯಿ ಆರ್ಡರ್ ಹಣದಲ್ಲಿ ಹೋಟೆಲ್ ಮಾಲೀಕರಿಗೆ ಕೇವಲ 40,000 ದಿಂದ 50,000 ಮಾತ್ರ ನೀಡಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.

ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಮೊತ್ತಕ್ಕೂ ಸ್ವಿಗ್ಗಿ ಸೇವಾ ಶುಲ್ಕ ವಿಧಿಸುತ್ತಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.

ಹೋಟೆಲ್‌ ಸಂಘಟನೆಗಳ ಪ್ರಮುಖ ಬೇಡಿಕೆಗಳು

  1. ಪ್ರತಿಯೊಂದು ಆರ್ಡರ್‌ನ ಕಮಿಷನ್, ಜಿಎಸ್‌ಟಿ, ಜಾಹೀರಾತು ವೆಚ್ಚ ಹಾಗೂ ರಿಯಾಯಿತಿಗಳನ್ನು ಪ್ರತ್ಯೇಕವಾಗಿ ಸ್ಪಷ್ಟಪಡಿಸುವ ಬಿಲ್ ನೀಡಬೇಕು.
  2. ಅನಗತ್ಯ ಜಾಹೀರಾತು ಹಾಗೂ ಪ್ರಚಾರ ಅಭಿಯಾನಗಳಿಂದ ಹೋಟೆಲ್‌ಗಳು ಹೊರಬರಲು ಸುಲಭವಾದ ‘ಒನ್-ಕ್ಲಿಕ್’ ಆಯ್ಕೆ ನೀಡಬೇಕು.
  3. ಹೋಟೆಲ್ ಮಾಲೀಕರ ಡಿಜಿಟಲ್ ಅಥವಾ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಪ್ರಚಾರ ವೆಚ್ಚಗಳನ್ನು ಕಡಿತಗೊಳಿಸಬಾರದು.

ಇದನ್ನೂ ಓದಿ: ಹೊಟ್ಟೆನೋವೆಂದು ಬಿದ್ದಿದ್ದಾಗ ಸಂಪಾದನೆ ಕದ್ದ ಕಳ್ಳರು: ಬೀದಿಬದಿ ವ್ಯಾಪಾರಿಯ ಕಣ್ಣೀರು ಒರೆಸಿದ ಅಪರಿಚಿತ

ಆಗಸ್ಟ್ 15 ರವರೆಗೆ ಮಾತುಕತೆಗೆ ಅವಕಾಶ

ಸಂಘಟನೆಯು ಬಾಯ್‌ಕಾಟ್ ಎಚ್ಚರಿಕೆ ನೀಡಿದ್ದರೂ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಬಾಗಿಲು ತೆರೆದಿದೆ. “ಸ್ವಿಗ್ಗಿ ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡರೆ ನಾವು ಸೇವೆ ಮುಂದುವರಿಸುತ್ತೇವೆ. ಇಲ್ಲವಾದಲ್ಲಿ ನಮಗೆ ಬಾಯ್‌ಕಾಟ್ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ. ಅಲ್ಲದೆ, ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿಯೂ ಸಂಘ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ SIR: ರಾಜ್ಯದ ASDDO ಮತದಾರರ ಪೈಕಿ ಅರ್ಧದಷ್ಟು ಬೆಂಗಳೂರಿನಲ್ಲೇ! – Kannada News | Karnataka SIR: Bengaluru Accounts for 46.7 percent of State’s ASDDO Voters, Whats is ASDDO Voters? Know here

ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಒಟ್ಟು 5.54 ಕೋಟಿ ನೋಂದಾಯಿತ ಮತದಾರರಿದ್ದು, ಇವರ ಪೈಕಿ ಸುಮಾರು ಒಂದು ಕೋಟಿ ಮತದಾರರು ಬೆಂಗಳೂರಿನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ, ರಾಜ್ಯದ 84 ಲಕ್ಷ ಮತದಾರರನ್ನು ಎಸ್​​ಡಿಡಿಒ (ASDDO) ವರ್ಗದಲ್ಲಿ ಗುರುತಿಸಲಾಗಿದ್ದು, ಈ ಹೆಸರುಗಳು ಆಗಸ್ಟ್ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ವರದಿಯಾಗಿದೆ.

ಎಸ್​​ಡಿಡಿಒ ಮತದಾರರು ಎಂದರೆ ಯಾರು?

ASDDO ಎಂದರೆ Absent (ಗೈರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate and Others (ನಕಲಿ ಹೆಸರುಗಳು ಅಥವಾ ಇತರ ಕಾರಣಗಳಿಂದ ಕೈಬಿಟ್ಟವರು) ಆಗಿದ್ದಾರೆ.

ಎಸ್​​ಡಿಡಿಒ ಪಟ್ಟಿಯಲ್ಲಿ ಬೆಂಗಳೂರಿನಲ್ಲೇ 36.75 ಲಕ್ಷ!

ರಾಜ್ಯದ ಒಟ್ಟು 84 ಲಕ್ಷ ಎಸ್​​ಡಿಡಿಒ ಮತದಾರರ ಪೈಕಿ ಬೆಂಗಳೂರೊಂದರಲ್ಲೇ 36.75 ಲಕ್ಷ ಮತದಾರರು ಇದ್ದಾರೆ. ಇದು ರಾಜ್ಯದ ಒಟ್ಟು ಎಸ್​​ಡಿಡಿಒ ಸಂಖ್ಯೆಯ ಶೇ 46.7ರಷ್ಟಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಬೆಂಗಳೂರು ನಗರದಲ್ಲಿ 13.55 ಲಕ್ಷ, ಬೆಂಗಳೂರು ಉತ್ತರದಲ್ಲಿ 9 ಲಕ್ಷ, ಬೆಂಗಳೂರು ಕೇಂದ್ರದಲ್ಲಿ 7.40 ಲಕ್ಷ ಹಾಗೂ ಬೆಂಗಳೂರು ದಕ್ಷಿಣದಲ್ಲಿ 9.35 ಲಕ್ಷ ಮತದಾರರನ್ನು ಎಸ್​​ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ.

ಆಗಸ್ಟ್ 8ರೊಳಗೆ ಫಾರಂ ಸಲ್ಲಿಸಲು ಮನವಿ

ಗೈರುಹಾಜರಾಗಿರುವ ಅಥವಾ ತಪ್ಪಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲ್ಪಟ್ಟಿರುವ ನಿಜವಾದ ಮತದಾರರು ಆಗಸ್ಟ್ 8ರೊಳಗೆ ತಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸಿ ಅಗತ್ಯ ಫಾರಂ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮನವಿ ಮಾಡಿದ್ದಾರೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (BLA) ತಮ್ಮೊಂದಿಗೆ ಹಂಚಿಕೊಳ್ಳಲಾಗಿರುವ ಎಸ್​​ಡಿಡಿಒ ಪಟ್ಟಿಯನ್ನು ಪ್ರತಿದಿನ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

16.52 ಲಕ್ಷ ಫಾರಂಗಳ ಡಿಜಿಟಲೀಕರಣ ಬಾಕಿ

ಬೆಂಗಳೂರಿನಲ್ಲಿ SIR ಪ್ರಕ್ರಿಯೆಯಡಿ ಸಲ್ಲಿಕೆಯಾಗಿರುವ ಫಾರಂಗಳ ಡಿಜಿಟಲೀಕರಣವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಒಟ್ಟು 16.52 ಲಕ್ಷ ಫಾರಂಗಳು ಇನ್ನೂ ಡಿಜಿಟಲೀಕರಣಕ್ಕೆ ಬಾಕಿ ಇವೆ. ಬೆಂಗಳೂರು ನಗರದಲ್ಲಿ ಶೇ 48.8, ಉತ್ತರದಲ್ಲಿ ಶೇ 46.2, ಕೇಂದ್ರದಲ್ಲಿ ಶೇ 44.6 ಹಾಗೂ ದಕ್ಷಿಣದಲ್ಲಿ ಶೇ 42.6ರಷ್ಟು ಮಾತ್ರ ಫಾರಂಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ವರದಿ ತಿಳಿಸಿದೆ.

ಮನೆ ಮನೆಗೆ ತೆರಳಿ ಜಾಗೃತಿ

ಮತದಾರರಿಗೆ ನೆರವಾಗಲು ಬಿಎಲ್​​ಒ ಹಾಗೂ ಇತರರ ತಂಡಗಳನ್ನು ನಿಯೋಜಿಸಲಾಗಿದೆ. ಬೆಳಗಿನ ಹಾಗೂ ಸಂಜೆ ವೇಳೆಯಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಲಾಗುತ್ತಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.

SIR 2002ರ ಮಾಹಿತಿಯೊಂದಿಗೆ ಮ್ಯಾಪ್ ಆಗದಿದ್ದರೂ ಮತದಾರರು ಫಾರಂ ಸಲ್ಲಿಸಬಹುದು. ಈಗಾಗಲೇ ಮ್ಯಾಪ್ ಆಗದ 29 ಲಕ್ಷಕ್ಕೂ ಹೆಚ್ಚು ಮತದಾರರು ಫಾರಂ ಸಲ್ಲಿಸಿದ್ದು, ಇದರಿಂದ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲೇ ಎಸ್​​ಡಿಡಿಒ ಪ್ರಕರಣಗಳು ಹೆಚ್ಚಾಗಲು ಕಾರಣವೇನು?

2002ರ ಹಳೆಯ ಮತದಾರರ ದಾಖಲೆಗಳನ್ನು ಪತ್ತೆಹಚ್ಚುವಲ್ಲಿ ಎದುರಾಗುತ್ತಿರುವ ಸಮಸ್ಯೆ ಬೆಂಗಳೂರಿನಲ್ಲಿ SIR ಪ್ರಕ್ರಿಯೆ ನಿಧಾನವಾಗಲು ಪ್ರಮುಖ ಕಾರಣವಾಗಿದೆ. 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ವಿಧಾನಸಭಾ ಕ್ಷೇತ್ರಗಳು ಹಾಗೂ ಮತಗಟ್ಟೆಗಳಲ್ಲಿ ಬದಲಾವಣೆಗಳಾಗಿರುವುದರಿಂದ ಹಳೆಯ ದಾಖಲೆಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಇದರ ಜೊತೆಗೆ ಎಸ್​ಐಆರ್ 2002ರ ಮಾಹಿತಿಯನ್ನು ತಾಂತ್ರಿಕವಾಗಿ ಪತ್ತೆಹಚ್ಚುವಲ್ಲಿನ ಸಮಸ್ಯೆಗಳೂ ಬೆಂಗಳೂರಿನಲ್ಲಿ ಎಸ್​​ಡಿಡಿಒ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Friday Lakshmi Puja: ಶುಕ್ರವಾರ ತಪ್ಪಿಯೂ ಈ ಕೆಲಸ ಮಾಡಬೇಡಿ; ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬಹುದು! – Kannada News | Friday Lakshmi Puja Rules: Things You Should Never Do on Friday to Avoid Poverty

ಶುಕ್ರವಾರ ಲಕ್ಷ್ಮಿ ಪೂಜೆImage Credit source: Getty Images

ಸನಾತನ ಧರ್ಮದಲ್ಲಿ ವಾರದ ಪ್ರತಿದಿನವೂ ಯಾವುದಾದರೂ ಒಂದು ದೇವತೆಗೆ ಮೀಸಲಾಗಿರುತ್ತದೆ. ಅದರಲ್ಲಿಯೂ ಶುಕ್ರವಾರವು ಸಂತೋಷ, ಸೌಭಾಗ್ಯ ಮತ್ತು ಸಮೃದ್ಧಿಯನ್ನು ಕರುಣಿಸುವ ಲಕ್ಷ್ಮಿ ದೇವಿಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ಈ ಪವಿತ್ರ ದಿನದಂದು ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ ಹಾಗೂ ಭಕ್ತಿಯಿಂದ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಶುಕ್ರವಾರದಂದು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಉಪವಾಸ ಆಚರಿಸುವ ಭಕ್ತರ ಜೀವನದಲ್ಲಿ ಎಂದಿಗೂ ದುಃಖ-ದೌರ್ಭಾಗ್ಯಗಳು ಸುಳಿಯುವುದಿಲ್ಲ ಎಂಬುದು ಸನಾತನ ಧರ್ಮದ ದೃಢ ನಂಬಿಕೆಯಾಗಿದೆ.

ಶುಕ್ರವಾರದ ಪೂಜೆ ಮತ್ತು ದಾನದ ಮಹತ್ವ:

ಲಕ್ಷ್ಮಿ ದೇವಿಯ ಅಪಾರ ಆಶೀರ್ವಾದದಿಂದ ಮನೆಯು ಸಂಪತ್ತು, ಧಾನ್ಯ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಭಕ್ತರಿಗೆ ಜೀವನದ ಎಲ್ಲಾ ರೀತಿಯ ಭೌತಿಕ ಸೌಕರ್ಯಗಳು ಮತ್ತು ಐಷಾರಾಮಿ ಜೀವನ ಲಭಿಸುತ್ತದೆ. ಜೊತೆಗೆ, ಈ ದಿನವನ್ನು ನವಗ್ರಹಗಳಲ್ಲಿ ಶುಕ್ರ ಗ್ರಹಕ್ಕೂ ಸಮರ್ಪಿಸಲಾಗಿದ್ದು, ಶುಕ್ರನಿಗೆ ಸಂಬಂಧಿಸಿದ ದೈವಿಕ ಆಚರಣೆಗಳನ್ನು ಸಹ ನೆರವೇರಿಸಲಾಗುತ್ತದೆ. ಪೂಜೆ ಮತ್ತು ಉಪವಾಸಗಳ ಜೊತೆಗೆ ಶುಕ್ರವಾರದಂದು ಸೂಕ್ತ ವಸ್ತುಗಳನ್ನು ದಾನ ಮಾಡುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ಧರ್ಮಶಾಸ್ತ್ರಗಳಲ್ಲಿ ನಿಷೇಧಿಸಲಾಗಿದ್ದು, ಅಂತಹ ತಪ್ಪುಗಳನ್ನು ಮಾಡಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಶುಕ್ರವಾರ ತಪ್ಪದೇ ನೆನಪಿನಲ್ಲಿಡಬೇಕಾದ ನಿಷೇಧಗಳು:

ಶುಕ್ರವಾರದಂದು ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಮತ್ತು ಮನೆಯಲ್ಲಿ ಶಾಂತಿ ಉಳಿಯಲು ಕೆಲವು ಪ್ರಮುಖ ಕೆಲಸಗಳಿಂದ ಸಂಪೂರ್ಣವಾಗಿ ದೂರವಿರಬೇಕು:

ಮಾಂಸಾಹಾರಿ ಆಹಾರ ಸೇವನೆ:

ಶುಕ್ರವಾರದಂದು ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಮನೆಯಲ್ಲಾಗಲಿ ಅಥವಾ ಹೊರಗಡೆಯಾಗಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ. ಈ ಕಟ್ಟುಪಾಡನ್ನು ನಿರ್ಲಕ್ಷಿಸಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಹುಳಿ ಆಹಾರ ಸೇವನೆ:

ಶುಕ್ರವಾರದ ಪವಿತ್ರ ದಿನದಂದು ಹುಳಿಯಾದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ಈ ದಿನ ಹುಳಿ ತಿನ್ನುವುದರಿಂದ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ.

ಹಣದ ವಹಿವಾಟುಗಳು:

ಶುಕ್ರವಾರದಂದು ಹಣ ಸಾಲ ಕೊಡುವುದು ಅಥವಾ ಯಾವುದೇ ಪ್ರಮುಖ ಹಣಕಾಸಿನ ವಹಿವಾಟು ಮಾಡುವುದನ್ನು ತಡೆಯಬೇಕು. ಏಕೆಂದರೆ ಈ ದಿನ ನೀಡಿದ ಸಾಲದ ಹಣವು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಬೆಳ್ಳಿ ಮತ್ತು ಸಕ್ಕರೆ ದಾನ:

ಧರ್ಮದಲ್ಲಿ ದಾನ ಕಾರ್ಯಗಳು ಅತ್ಯಂತ ಶ್ರೇಷ್ಠವಾದರೂ, ಶುಕ್ರವಾರ ಬೆಳ್ಳಿಯನ್ನು ದಾನ ಮಾಡುವುದನ್ನು ಶಾಸ್ತ್ರಗಳು ಒಪ್ಪುವುದಿಲ್ಲ. ಅಲ್ಲದೆ, ಈ ದಿನ ಸಕ್ಕರೆಯನ್ನು ದಾನ ಮಾಡುವುದರಿಂದ ಜಾತಕದಲ್ಲಿ ಶುಕ್ರ ಗ್ರಹವು ದುರ್ಬಲಗೊಳ್ಳುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊಟ್ಟೆನೋವೆಂದು ಬಿದ್ದಿದ್ದಾಗ ಸಂಪಾದನೆ ಕದ್ದ ಕಳ್ಳರು: ಬೀದಿಬದಿ ವ್ಯಾಪಾರಿಯ ಕಣ್ಣೀರು ಒರೆಸಿದ ಅಪರಿಚಿತ – Kannada News | Stranger Restores Hope After Distressed Ice Cream Vendor Loses Day’s Earnings

ಗುವಾಹಟಿ, ಜುಲೈ 31: ಅಸ್ಸಾಂನಲ್ಲಿ ನಡೆದ ಅತ್ಯಂತ ಭಾವುಕ  ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿದ್ದು, ನೆಟ್ಟಿಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ಕಷ್ಟಪಟ್ಟು ದುಡಿಯುತ್ತಿದ್ದ ಬಡ ಐಸ್ ಕ್ರೀಮ್ ಮಾರಾಟಗಾರನೊಬ್ಬ ಹೊಟ್ಟೆ ನೋವೆಂದು ಮಲಗಿದ್ದಾಗ ಐಸ್​ಕ್ರೀಂ ಜತೆಗೆ ಜೇಬಿನಲ್ಲಿದ್ದ 500 ರೂ. ಕೂಡಾ ಕಳ್ಳತನ(Theft)ವಾಗಿತ್ತು. ನೋವಿನಿಂದ ಕಣ್ಣೀರಿಡುತ್ತಿದ್ದಾಗ, ಪಂಕಜ್ ಗೊಗೊಯ್ ಎಂಬುವವರು ತಕ್ಷಣವೇ ಆಸರೆಯಾಗಿ ನಿಂತು ಸಹಾಯ ಮಾಡಿರುವ ವೀಡಿಯೊ ಈಗ ವೈರಲ್ ಆಗಿದೆ.

ಐಸ್ ಕ್ರೀಮ್ ಮಾರಾಟಗಾರ ಇಡೀ ದಿನ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ಗಾಡಿಯನ್ನು ತಳ್ಳಿಕೊಂಡು ವ್ಯಾಪಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ತಡೆಯಲಾಗದೆ ಆತ ಬಂಡಿಯನ್ನು ರಸ್ತೆಬದಿಯಲ್ಲೇ ನಿಲ್ಲಿಸಿ ಸ್ವಲ್ಪ ಹೊತ್ತು ನೆಲದ ಮೇಲೆ ವಿಶ್ರಾಂತಿ ಪಡೆದಿದ್ದಾರೆ. ಎಚ್ಚರಗೊಂಡು ನೋಡಿದಾಗ, ಕರುಣೆಯಿಲ್ಲದ ಕಳ್ಳರು ಆತನ ಬಂಡಿಯಲ್ಲಿದ್ದ ಎಲ್ಲಾ ಐಸ್ ಕ್ರೀಮ್‌ಗಳು ಹಾಗೂ ಆ ದಿನದ ಸಂಪೂರ್ಣ ದುಡಿಮೆಯಾಗಿದ್ದ 500 ರೂ.ವನ್ನು ಕದ್ದೊಯ್ದಿದ್ದರು.

ತನ್ನ ಇಡೀ ದಿನದ ಶ್ರಮ ಹಾಗೂ ಬಂಡವಾಳವೆಲ್ಲವೂ ಕಳೆದುಹೋಯಿತಲ್ಲಾ ಎಂದು ಆತ ರಸ್ತೆಬದಿಯಲ್ಲೇ ಕುಳಿತು ಕಣ್ಣೀರು ಸುರಿಸಲಾರಂಭಿಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಕಂಟೆಂಟ್ ಕ್ರಿಯೇಟರ್ ಪಂಕಜ್ ಗೊಗೊಯ್ ಅವರು ಕಣ್ಣೀರಿಡುತ್ತಿದ್ದ ವ್ಯಾಪಾರಿಯನ್ನು ಕಂಡು ಹತ್ತಿರ ಹೋಗಿ ವಿಚಾರಿಸಿದ್ದಾರೆ. ವ್ಯಾಪಾರಿ ತನಗಾದ ಅನ್ಯಾಯ ಮತ್ತು ಕಷ್ಟವನ್ನು ವಿವರಿಸಿದಾಗ, ಪಂಕಜ್ ತಕ್ಷಣವೇ ಸ್ಪಂದಿಸಿದ್ದಾರೆ. ಮೊದಲು ಆತನನ್ನು ಹೊಟೇಲ್‌ಗೆ ಕರೆದೊಯ್ದು ಹೊಟ್ಟೆತುಂಬ ಬಿಸಿ ಊಟ ಮಾಡಿಸಿದ್ದಾರೆ.
ವ್ಯಾಪಾರಿಯ ಕುಟುಂಬಕ್ಕೆ ನೆರವಾಗಲು ಅಕ್ಕಿ, ಹಾಲು, ಬಿಸ್ಕತ್ತು ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ಖರೀದಿಸಿಕೊಟ್ಟು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ವಿಡಿಯೋ

ಇನ್‌ಸ್ಟಾಗ್ರಾಮ್ ಹಾಗೂ ‘ಎಕ್ಸ್’ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಡಿಯೊ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಸುಡುವ ಬಿಸಿಲಿನಲ್ಲಿ 10 ರೂ. ಗಳಿಸಲು ಎಷ್ಟು ಶ್ರಮ ಪಡಬೇಕು ಎಂಬುದು ಈ ಬಡ ವ್ಯಾಪಾರಿಗೆ ಮಾತ್ರ ಗೊತ್ತು. ಇಂತಹವರ ಹೊಟ್ಟೆಗೆ ಹೊಡೆಯುವ ಕಳ್ಳರಿಗೆ ಕರುಣೆಯಿಲ್ಲ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ಹಾಸನ: ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಗೆ ಕನ್ನ ಹಾಕಿದ ಸೊಸೆ; ಸಿಕ್ಕಿಬಿದ್ದಿದ್ಹೇಗೆ?

ಪಂಕಜ್ ಅವರ ಈ ಸಣ್ಣ ಸಹಾಯ ಇಡೀ ಸಮಾಜಕ್ಕೆ ಪ್ರೇರಣೆ. ಒಬ್ಬರಿಗೊಬ್ಬರು ಸಹಾಯ ಮಾಡುವ ಇಂತಹ ಮಾನವೀಯ ಗುಣಗಳು ಜಗತ್ತಿನಲ್ಲಿ ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ನೆಟ್ಟಿಗರು ಪಂಕಜ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಯ್​​ಫ್ರೆಂಡ್ ಪರಿಚಯಿಸಿದ ನಟಿ ಅಮೂಲ್ಯ ಗೌಡ; ಹೊಸ ವೆಂಚರ್ ಶುರು – Kannada News | Kamali Serial Fame Amulya Gowda Introduces Boyfriend Niranjan and Announces New YouTube Channel

ನಟಿ ಅಮೂಲ್ಯ ಗೌಡ (Amulya Gowda) ಸಾಕಷ್ಟು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ. ಸದ್ಯ ಅವರು ಉದಯ ಟಿವಿಯಲ್ಲಿ ‘ಮಹಾಲಕ್ಷ್ಮಿ ಮದುವೆ’  ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಈಗ ಅವರು ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಯನ್ನು ಅಮೂಲ್ಯ ನಿಜ ಎಂದು ಒಪ್ಪಿಕೊಂಡಿದ್ದಾರೆ.

2018ರಿಂದ 2022ರವರೆಗೆ ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಕಮಲಿ’ ಧಾರಾವಾಹಿಯಲ್ಲಿ ಅಮೂಲ್ಯ ನಟಿಸಿದ್ದರು. ಇವರಿಗೆ ಜೊತೆಯಾಗಿ ನಿರಂಜನ್ ಬಣ್ಣ ಹಚ್ಚಿದ್ದರು. ಆ ಸಮಯದಲ್ಲೇ ಇವರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಅವರು ಎಂದಿಗೂ ನೇರವಾಗಿ ಒಪ್ಪಿಕೊಂಡಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ. ಹೊಸ ಯೂಟ್ಯೂಬ್ ಚಾನೆಲ್ ಮಾಡಿರೋ ಅಮೂಲ್ಯ ಗೌಡ ಅವರು, ಪ್ರೀತಿ ವಿಷಯವನ್ನು ಅಧಿಕೃತ ಮಾಡಿದ್ದಾರೆ.

ಇದನ್ನೂ ಓದಿ: ‘ಸನ್‌ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’

ಈ ಮೊದಲು ‘ನಿರಂಜನ್ ಅವರೇನಾ ನಿಮ್ಮ ಬಾಯ್​ಫ್ರೆಂಡ್’ ಎಂದು ಕೇಳಿದಾಗ ಅಮೂಲ್ಯ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ‘ನಾನು ಈಗಲೇ ಏನೂ ಹೇಳೋಲ್ಲ’ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಅವರು ಪ್ರೀತಿ ವಿಷಯವನ್ನು ಒಪ್ಪಿಕೊಂಡೂ ಇರಲಿಲ್ಲ, ನಿರಾಕರಿಸಿಯೂ ಇರಲಿಲ್ಲ. ಈಗ ಪ್ರೀತಿ ವಿಷಯವನ್ನು ಅಧಿಕೃತಮಾಡಿದ್ದಾರೆ.

ಬಾಯ್​​ಫ್ರೆಂಡ್ ರಿವೀಲ್ ವಿಡಿಯೋ ಹಂಚಿಕೊಂಡಿರೋ ಅಮೂಲ್ಯ ಗೌಡ, ಅದರಲ್ಲಿ ನಿರಂಜನ್ ಅವರನ್ನೂ ಕರೆತಂದಿದ್ದಾರೆ. ಇಬ್ಬರೂ ಮೊದಲು ಭೇಟಿ ಆಗಿದ್ದು ಎಲ್ಲಿ, ಯಾವ ಗುಣ ಇಷ್ಟ ಆಯಿತು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆ ಬಳಿಕ ಇಬ್ಬರೂ ಪ್ರೀತಿ ವಿಷಯ ಒಪ್ಪಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಯೂಟ್ಯೂಬ್ ಚಾನೆಲ್ ನಡೆಸೋದಾಗಿ ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಇವರು ಮದುವೆ ಆಗೋ ಸೂಚನೆ ನೀಡಿದ್ದಾರೆ. ನಿರಂಜನ್ ಅವರು ಸ್ಟಾರ್ ಸುವರ್ಣದಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Solar Eclipse 2026: ಆಗಸ್ಟ್ 12 ರಂದು ಸೂರ್ಯಗ್ರಹಣ; ಈ 3 ರಾಶಿಯವರಿಗೆ ಒಲಿಯಲಿದೆ ಅಪಾರ ಅದೃಷ್ಟ! – Kannada News | Solar Eclipse August 12, 2026: Impact on India and Lucky Zodiac Signs

ಆಗಸ್ಟ್ 12 ಸೂರ್ಯಗ್ರಹಣImage Credit source: Getty Images

ಆಗಸ್ಟ್ 12 ರಂದು ಅತ್ಯಂತ ಅಪರೂಪದ ಸಂಪೂರ್ಣ ಸೂರ್ಯಗ್ರಹಣ (Total Solar Eclipse) ಸಂಭವಿಸಲಿದೆ. ಆಕಾಶದಲ್ಲಿ ನಡೆಯುವ ಈ ಅದ್ಭುತ ಘಟನೆಯು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಗೂ ಖಗೋಳ ಆಸಕ್ತರಿಗೆ ಅತ್ಯಂತ ಮಹತ್ವದ ದಿನವಾಗಿದೆ. ಈ ಆಕಾಶ ವಿದ್ಯಮಾನವು ಜಗತ್ತಿನಾದ್ಯಂತ ಹೊಸ ಭರವಸೆ ಹಾಗೂ ಕುತೂಹಲಗಳನ್ನು ಮೂಡಿಸಿದೆ.

ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

ಈ ಖಗೋಳ ವಿದ್ಯಮಾನವು ಪ್ರಮುಖವಾಗಿ ಆರ್ಕ್ಟಿಕ್, ಗ್ರೀನ್‌ಲ್ಯಾಂಡ್, ಐಸ್ಲ್ಯಾಂಡ್, ಸ್ಪೇನ್ ಮತ್ತು ಅಟ್ಲಾಂಟಿಕ್ ಮಹಾಸಾಗರದ ವಿಶಾಲ ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಪ್ರದೇಶಗಳಲ್ಲಿ ಇರುವ ಜನರು ಪೂರ್ಣ ಸೂರ್ಯಗ್ರಹಣದ ಅದ್ಭುತ ದೃಶ್ಯವನ್ನು ಕಣ್ಣುಂಬಿಕೊಳ್ಳಬಹುದು.

ಭಾರತದಲ್ಲಿ ಗ್ರಹಣ ಗೋಚರಿಸುತ್ತದೆಯೇ ಮತ್ತು ಸೂತಕ ನಿಯಮಗಳು ಅನ್ವಯಿಸುತ್ತವೆಯೇ?

ಆದಾಗ್ಯೂ, ಈ ಅದ್ಭುತ ಆಕಾಶ ವಿದ್ಯಮಾನವು ಭಾರತದಲ್ಲಿ ಗೋಚರಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಗ್ರಹಣ ನಡೆಯುವ ಸಮಯದಲ್ಲಿ ಭಾರತದಲ್ಲಿ ರಾತ್ರಿಯ ಸಮಯವಾಗಿರುತ್ತದೆ ಮತ್ತು ಸೂರ್ಯನು ದಿಗಂತದ ಕೆಳಗಿರುತ್ತಾನೆ. ಗ್ರಹಣದ ಮಾರ್ಗವು ಮುಖ್ಯವಾಗಿ ಉತ್ತರ ಗೋಳಾರ್ಧ ಮತ್ತು ಯುರೋಪ್‌ ಮೂಲಕ ಹಾದುಹೋಗುವುದರಿಂದ, ಇದು ಏಷ್ಯಾ ಖಂಡದ ದಕ್ಷಿಣ ಭಾಗಗಳಲ್ಲಿ ಗೋಚರವಾಗುವುದಿಲ್ಲ. ಆದ್ದರಿಂದ, ಗ್ರಹಣ ಸ್ಪರ್ಶಿಸದೇ ಇರುವ ಕಾರಣ ಭಾರತದಲ್ಲಿ ಯಾವುದೇ ರೀತಿಯ ಸೂತಕದ ನಿಯಮಗಳು ಅನ್ವಯಿಸುವುದಿಲ್ಲ.

ಮೇಷ ರಾಶಿಗೆ ಒಲಿಯುವ ಭಾರಿ ಧನಲಾಭ:

ಭಾರತದಲ್ಲಿ ಗ್ರಹಣ ಕಾಣಿಸದಿದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣವು ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಹಿಂದೆ ಮಾಡಿದ ಹಳೆಯ ಹೂಡಿಕೆಗಳಿಂದ ಭಾರಿ ಲಾಭವನ್ನು ಪಡೆಯಲಿದ್ದಾರೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಬಡ್ತಿ ಸಿಗುವ ಸ್ಪಷ್ಟ ಸಾಧ್ಯತೆಗಳಿವೆ. ಇನ್ನು ಉದ್ಯಮಿಗಳಿಗೆ ಹೊಸ ಯೋಜನೆಗಳು ಕೈಸೇರಲಿದ್ದು, ಸಮಾಜದಲ್ಲಿ ಅವರ ಗೌರವ ಮತ್ತು ಪ್ರತಿಷ್ಠೆ ಗಣನೀಯವಾಗಿ ಹೆಚ್ಚಾಗಲಿದೆ.

ಸಿಂಹ ರಾಶಿಗೆ ಸಿಗಲಿದೆ ಅಸಾಧಾರಣ ಶಕ್ತಿ ಮತ್ತು ಅವಕಾಶಗಳು:

ಸಿಂಹ ರಾಶಿಯವರಿಗೆ ಸೂರ್ಯನು ಅಧಿಪತಿಯಾಗಿರುವುದರಿಂದ, ಈ ಗ್ರಹಣವು ಅವರಿಗೆ ಅಸಾಧಾರಣ ಶಕ್ತಿ ಮತ್ತು ಹೊಸ ಅವಕಾಶಗಳನ್ನು ತಂದುಕೊಡಲಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಆಸ್ತಿ ಸಂಬಂಧಿತ ವಿವಾದಗಳು ಈ ಅವಧಿಯಲ್ಲಿ ಸಂಪೂರ್ಣವಾಗಿ ಬಗೆಹರಿಯಲಿವೆ. ಆರ್ಥಿಕ ತೊಂದರೆಗಳಿಂದ ಬಳಲುತ್ತಿದ್ದವರಿಗೆ ಉತ್ತಮ ಪರಿಹಾರ ದೊರೆಯಲಿದ್ದು, ನಿರುದ್ಯೋಗಿಗಳಿಗೆ ಅವರು ಬಯಸಿದ ಕನಸಿನ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಧನು ರಾಶಿಯವರಿಗೆ ಶುಭ ಯೋಗ ಮತ್ತು ಸುಖ-ಸಂತೋಷ:

ಈ ಸೂರ್ಯಗ್ರಹಣದ ಸಮಯವು ಧನು ರಾಶಿಯವರಿಗೂ ಸಹ ಅತ್ಯಂತ ಶುಭ ತರಲಿದೆ. ಈ ಸಮಯದಲ್ಲಿ ಅವರಿಗೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವಿದೇಶ ಪ್ರಯಾಣ ಮಾಡುವ ಬಯಕೆ ಹೊಂದಿದ್ದವರ ಕನಸು ಈ ಸಮಯದಲ್ಲಿ ನನಸಾಗಲಿದೆ. ಅಲ್ಲದೆ, ಕುಟುಂಬದಲ್ಲಿ ವಿವಿಧ ಮಂಗಳಕರ ಶುಭ ಘಟನೆಗಳು ಜರುಗಲಿದ್ದು, ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ವೃಷಭ ಮತ್ತು ವೃಶ್ಚಿಕ ರಾಶಿಯವರು ವಹಿಸಬೇಕಾದ ಮುನ್ನೆಚ್ಚರಿಕೆಗಳು:

ಕೆಲವು ರಾಶಿಚಕ್ರ ಚಿಹ್ನೆಗಳು ಅದೃಷ್ಟಶಾಲಿಯಾಗಿದ್ದರೂ, ವೃಷಭ ಮತ್ತು ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಈ ಗ್ರಹಣದ ಅವಧಿಯಲ್ಲಿ ಯಾವುದೇ ರೀತಿಯ ದೊಡ್ಡ ಹೂಡಿಕೆಗಳನ್ನು ಮಾಡುವುದು ಅಥವಾ ಯಾರಿಂದಲಾದರೂ ಸಾಲ ತೆಗೆದುಕೊಳ್ಳುವುದು ಸೂಕ್ತವಲ್ಲ. ಕೌಟುಂಬಿಕ ಹಾಗೂ ವೃತ್ತಿ ಜೀವನದಲ್ಲಿ ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ನಿಮ್ಮ ಶಾಂತಿಗೆ ಒಳ್ಳೆಯದು.

ಗ್ರಹಣ ದೋಷನಿವಾರಣೆಗೆ ಅನುಸರಿಸಬೇಕಾದ ಜ್ಯೋತಿಷ್ಯ ಸಲಹೆಗಳು:

ಗ್ರಹಣದ ಋಣಾತ್ಮಕ ಪರಿಹಾರಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಶುಭ ಫಲಿತಾಂಶಗಳನ್ನು ದ್ವಿಗುಣಗೊಳಿಸಲು ಕೆಲವು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು. ಗ್ರಹಣದ ಸಮಯದಲ್ಲಿ ಸೂರ್ಯ ಮಂತ್ರಗಳನ್ನು ಅಥವಾ “ಓಂ ನಮಃ ಶಿವಾಯ” ಮಂತ್ರವನ್ನು ನಿರಂತರವಾಗಿ ಪಠಿಸಬೇಕು. ಗ್ರಹಣ ಮುಗಿದ ನಂತರ, ಪವಿತ್ರ ನೀರಿನಿಂದ ಸ್ನಾನ ಮಾಡಿ ಶ್ರೀ ವಿಷ್ಣು ಅಥವಾ ಶಿವನನ್ನು ಪೂಜಿಸಬೇಕು. ಬಡವರಿಗೆ ಗೋಧಿ, ಬೆಲ್ಲ, ಕೆಂಪು ಬಟ್ಟೆ ಅಥವಾ ತಾಮ್ರದ ಪಾತ್ರೆಗಳನ್ನು ದಾನ ಮಾಡುವುದರಿಂದ ಸೂರ್ಯಗ್ರಹಣದ ದೋಷಗಳು ಸಂಪೂರ್ಣವಾಗಿ ದೂರವಾಗುತ್ತವೆ.

ಆಗಸ್ಟ್ 2026 ರ ಸೂರ್ಯಗ್ರಹಣವು ಅನೇಕ ರಾಶಿಗಳಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದೆ. ನೀವು ಸರಿಯಾದ ಯೋಜನೆ, ಧನಾತ್ಮಕ ಆಲೋಚನೆ, ಆತ್ಮವಿಶ್ವಾಸ ಮತ್ತು ದೈವಿಕ ಚಿಂತನೆಗಳೊಂದಿಗೆ ಮುನ್ನಡೆದರೆ, ಈ ಗ್ರಹಣದ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಟ್ಟಿ ಚಿನ್ನದ ಗಣಿ ಕಂಪನಿ ವಿರುದ್ಧ ಸಿಡಿದೆದ್ದ ರೈತರು; ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ! – Kannada News | Raichur Farmers Protest Against Hutti Gold Mines Over Land Rights Compensation

ಹಟ್ಟಿ ಚಿನ್ನದ ಗಣಿ ಕಂಪನಿ ವಿರುದ್ಧ ಸಿಡಿದೆದ್ದ ರೈತರು

ರಾಯಚೂರು, ಜುಲೈ 31: ದೇಶಕ್ಕೆ ಪ್ರಸಿದ್ಧ ಚಿನ್ನವನ್ನು ನೀಡುವ ಹಟ್ಟಿ ಚಿನ್ನದ ಗಣಿ ಕಂಪನಿಯ (HGML) ವಿರುದ್ಧವೇ ರಾಯಚೂರು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಭೂ ಹಕ್ಕಿಗಾಗಿ ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಗಣಿ ಕಂಪನಿಯ ಮುಖ್ಯ ದ್ವಾರದ ಎದುರು ‘ಹಟ್ಟಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಯುತ್ತಿದೆ.

ವಂಚನೆ ಆರೋಪ ಮತ್ತು ರೈತರ ಸಂಕಷ್ಟ

ಗಣಿ ಅಭಿವೃದ್ಧಿ ಹೆಸರಿನಲ್ಲಿ ಹಟ್ಟಿ-ಕೋಠಾ ಸೀಮಾಂತರದ ಒಟ್ಟು 1,305 ಎಕರೆ ಜಮೀನನ್ನು ಗುತ್ತಿಗೆ ಪಡೆಯಲಾಗಿತ್ತು. ಈ ಪೈಕಿ 915 ಎಕರೆ ಭೂಮಿಯನ್ನು ಮಾತ್ರ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಲಾಗಿದೆ. ಇನ್ನುಳಿದ 390 ಎಕರೆ ಜಮೀನನ್ನು ಕಂಪನಿಯು ಸ್ವಾಧೀನಪಡಿಸಿಕೊಳ್ಳದೇ, ರೈತರ ಗಮನಕ್ಕೂ ತರದೆ ಅವರ ಜಮೀನಿನ ಋಣಭಾರ ಪ್ರಮಾಣಪತ್ರದ (EC) ದಾಖಲೆಗಳಲ್ಲಿ ‘ಹಟ್ಟಿ ಚಿನ್ನದ ಗಣಿ’ ಹೆಸರು ನಮೂದಿಸಿಕೊಂಡಿದೆ.

ಸಾಲವೂ ಇಲ್ಲ, ಪರಿಹಾರವೂ ಇಲ್ಲ!

ದಶಕಗಳಿಂದ ಜಮೀನಿನ ಹಕ್ಕು ದಾಖಲೆಗಳಲ್ಲಿ ಗಣಿ ಕಂಪನಿಯ ಹೆಸರು ಇರುವುದರಿಂದ, ರೈತರಿಗೆ ಬ್ಯಾಂಕುಗಳಲ್ಲಿ ಬೆಳೆ ಸಾಲವಾಗಲಿ ಅಥವಾ ಇತರ ಯಾವುದೇ ಸಾಲ ಸೌಲಭ್ಯಗಳಾಗಲಿ ಸಿಗುತ್ತಿಲ್ಲ. ಜಮೀನನ್ನು ಮಾರಾಟ ಮಾಡಲು ಸಾಧ್ಯವಾಗದೆ, ಇತ್ತ ಸರ್ಕಾರದಿಂದ ಸಿಗುವ ಬೆಳೆ ಪರಿಹಾರವೂ ಲಭಿಸದೆ ರೈತರು ಸಂಪೂರ್ಣ ಅತಂತ್ರರಾಗಿದ್ದಾರೆ.

18 ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ರೈತರು ತೀವ್ರ ಆಕ್ರೋಶಗೊಂಡಿದ್ದು, ತಕ್ಷಣವೇ ನಮ್ಮ ಜಮೀನಿನ ದಾಖಲೆಗಳಿಂದ ಹಟ್ಟಿ ಕಂಪನಿಯ ಹೆಸರನ್ನು ತೆಗೆದುಹಾಕಬೇಕು ಅಥವಾ ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ಎಚ್ಚರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version