ಬಿಜೆಪಿಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ: ಹೈಕಮಾಂಡ್‌ಗೆ ಪತ್ರ, ಸದ್ಯದಲ್ಲೇ ಅಧಿಕೃತ ಸ್ಪಷ್ಟನೆ – Kannada News | Shehzad Poonawalla Steps Down From BJP Role, Awaits Official Statement

ನವದೆಹಲಿ, ಜುಲೈ 31: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ(Shehzad Poonawalla)ಅವರು ತಮ್ಮ ಹುದ್ದೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಧಡೀರ್ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಪಕ್ಷದ ಉನ್ನತ ನಾಯಕತ್ವಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರಾಜೀನಾಮೆಗೆ ನಿಖರ ಕಾರಣಗಳು ಇನ್ನೂ ಹೊರಬಿದ್ದಿಲ್ಲವಾದರೂ, ಪೂನಾವಾಲಾ ಅವರು ಸದ್ಯದಲ್ಲೇ ಮಾಧ್ಯಮಗಳ ಮುಂದೆ ಬಂದು ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಯಿದೆ.

ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿನ ತಮ್ಮ ಬಯೋದಿಂದ ಪೂನಾವಾಲಾ ‘ಬಿಜೆಪಿ ರಾಷ್ಟ್ರೀಯ ವಕ್ತಾರ’ ಎಂಬ ಉಲ್ಲೇಖವನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ. ಆದರೆ, ತಮ್ಮನ್ನು ಪ್ರಧಾನಿ ನರೇಂದ್ರ ಮೋದಿಯವರ ಜೀವಮಾನದ ಅನುಯಾಯಿ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದೆಡೆ, ಅವರ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಇಂದಿಗೂ ‘ಬಿಜೆಪಿ ರಾಷ್ಟ್ರೀಯ ವಕ್ತಾರ’ ಎಂದೇ ಪಟ್ಟಿ ಮಾಡಲಾಗಿದೆ. 2017 ರಲ್ಲಿ ಕಾಂಗ್ರೆಸ್‌ನ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಬಹಿರಂಗವಾಗಿ ಪ್ರಶ್ನಿಸಿ, ರಾಹುಲ್ ಗಾಂಧಿಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸುದ್ದಿಯಾಗಿದ್ದರು. ಈ ವಿವಾದದಿಂದಾಗಿ ಅವರು ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ತಮ್ಮ ಸ್ವಂತ ಕುಟುಂಬ ಹಾಗೂ ಸಹೋದರ ತೆಹ್ಸೀನ್ ಪೂನಾವಾಲಾ ಅವರಿಂದಲೂ ಸಾರ್ವಜನಿಕವಾಗಿ ದೂರವಾಗಬೇಕಾಯಿತು. ತದನಂತರ ಬಿಜೆಪಿ ಸೇರಿದ ಪೂನಾವಾಲಾ, ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡು ಟಿವಿ ಚಾನೆಲ್‌ಗಳ ಚರ್ಚೆಗಳಲ್ಲಿ ಪಕ್ಷದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿದ್ದರು.

ಮತ್ತಷ್ಟು ಓದಿ: ಅತ್ತ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ

ಬಿಜೆಪಿಗೆ ಬಂದ ನಂತರ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡ ಪೂನಾವಾಲಾ, ಚಾನೆಲ್‌ಗಳ ಚರ್ಚೆಯಲ್ಲಿ ಪ್ರಮುಖವಾಗಿ ಭಾಗವಹಿಸಿ ಪ್ರತಿಪಕ್ಷಗಳ ಹಾಗೂ ರಾಹುಲ್ ಗಾಂಧಿಯವರ ವಿರುದ್ಧ ಪ್ರಬಲ ವಾಗ್ದಾಳಿ ನಡೆಸುವ ಮೂಲಕ ಮನೆಮಾತಾಗಿದ್ದರು.ಇತ್ತೀಚೆಗೆ ಅವರ ಸಹೋದರ ಹಾಗೂ ರಾಜಕೀಯ ವಿಶ್ಲೇಷಕ ತೆಹಸೀನ್ ಪೂನಾವಾಲಾ ಅವರು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ, ಕೇಂದ್ರದ E20 ಇಂಧನ ನೀತಿ ಹಾಗೂ ಸೋನಮ್ ವಾಂಗ್ಚುಕ್ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು ಸಹ ಭಾರಿ ಚರ್ಚೆಗೆ ಕಾರಣವಾಗಿತ್ತು.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಪೂನಾವಾಲಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಬಿಜೆಪಿ ಹೈಕಮಾಂಡ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ಈ ಕುರಿತು ಬಿಜೆಪಿಯಾಗಲಿ ಅಥವಾ ಸ್ವತಃ ಶಹಜಾದ್ ಪೂನಾವಾಲಾ ಅವರಾಗಲಿ ಯಾವುದೇ ಅಧಿಕೃತ ಸಾರ್ವಜನಿಕ ಪ್ರಕಟಣೆ ನೀಡಿಲ್ಲ.

ಇತ್ತೀಚೆಗೆ ಅವರ ಸಹೋದರ ಹಾಗೂ ರಾಜಕೀಯ ವಿಶ್ಲೇಷಕ ತೆಹಸೀನ್ ಪೂನಾವಾಲಾ ಅವರು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ, ಕೇಂದ್ರದ E20ಇಂಧನ ನೀತಿ ಹಾಗೂ ಸೋನಮ್ ವಾಂಗ್ಚುಕ್ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು ಸಹ ಭಾರಿ ಚರ್ಚೆಗೆ ಕಾರಣವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:00 pm, Fri, 31 July 26

Source link

ಮೂರನೇ ಆಷಾಢ ಶುಕ್ರವಾರದ ನಿಮಿತ್ತ ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಮೈಸೂರಿನ ಚಾಮುಂಡೇಶ್ವರಿ ದೇಗುಲ – Kannada News | Mysuru Chamundeshwari Temple Adorned for Third Ashada Friday

ಮೈಸೂರು, ಜುಲೈ 31: ಚಾಮುಂಡಿಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ನಿಮಿತ್ತ ನಾಡದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇಗುಲವನ್ನು ಆಕರ್ಷಕ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಗರ್ಭಗುಡಿಯ ಒಳಭಾಗದಲ್ಲಿ ಕಮಲದ ಹೂವು, ಸೇಬು, ಕಿತ್ತಳೆ, ಮೂಸಂಬಿ, ಮಾವಿನ ಎಲೆಗಳಿಂದ ಸಿಂಗರಿಸಲಾಗಿದೆ. ಸಾವಿರಾರು ಭಕ್ತರು ಬೆಳಗ್ಗಿನ ಜಾವದಿಂದಲೇ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Indian Railways: ಆನ್​ಲೈನ್​ನಲ್ಲಿ ಹೆಚ್ಚುವರಿ ಲಗೇಜ್ ಬುಕಿಂಗ್ ಸೇವೆ ಆರಂಭಿಸಿದ ಭಾರತೀಯ ರೈಲ್ವೆ – Kannada News | Indian Railways Launches Online Extra Baggage Booking for Confirmed Ticket Holders

ನವದೆಹಲಿ, ಜುಲೈ 31: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ(Indian Railways)ಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಇಂದಿನಿಂದ ಆನ್ ಲೈನ್ ಲಗೇಜ್​ ಬುಕಿಂಗ್ ಸೌಲಭ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ರೈಲುಗಳಲ್ಲಿ ನಿಯಮಕ್ಕಿಂತ ಹೆಚ್ಚು ಭಾರವಾದ ಲಗೇಜ್ ಹೊತ್ತು ತರುವುದರಿಂದ ಸಹ-ಪ್ರಯಾಣಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ತಪ್ಪಿಸಲು ಹಾಗೂ ನಿಲ್ದಾಣಗಳ ಪಾರ್ಸೆಲ್ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಡಿಜಿಟಲ್ ವ್ಯವಸ್ಥೆಯನ್ನು ತರಲಾಗಿದೆ.

ದೃಢೀಕೃತ ಟಿಕೆಟ್‌ಗೆ ಮಾತ್ರ ಅವಕಾಶ: ಐಆರ್​ಸಿಟಿಸಿ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಟಿಕೆಟ್ ಬುಕ್ ಮಾಡುವಾಗ, ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರು ಮಾತ್ರ ತಮ್ಮ ಹೆಚ್ಚುವರಿ ಲಗೇಜ್ ಅನ್ನು ಮುಂಗಡವಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಪಾರ್ಸೆಲ್ ಆಫೀಸ್‌ಗೆ ಅಲೆಯುವ ಅಗತ್ಯವಿಲ್ಲ: ಈ ಹಿಂದೆ ಉಚಿತ ಮಿತಿಗಿಂತ ಹೆಚ್ಚಿನ ಲಗೇಜ್ ಇದ್ದರೆ ನಿಲ್ದಾಣದ ಪಾರ್ಸೆಲ್ ಆಫೀಸ್‌ಗೆ ಭೇಟಿ ನೀಡಬೇಕಿತ್ತು, ಇನ್ಮುಂದೆ ಈ ಪ್ರಕ್ರಿಯೆಯನ್ನು ಮನೆಯಲ್ಲಿಯೇ ಪೂರ್ಣಗೊಳಿಸಬಹುದು.
ದಂಡದಿಂದ ಪಾರು: ರೈಲು ಪ್ರಯಾಣದ ವೇಳೆ ತಪಾಸಣೆ ನಡೆಸುವ ಟಿಟಿಇ (TTE) ಅಥವಾ ಅಧಿಕಾರಿಗಳಿಂದ ಬೀಳುವ ಭಾರಿ ದಂಡದ ತೊಂದರೆಯಿಂದ ಪ್ರಯಾಣಿಕರು ಪಾರಾಗಬಹುದು.

ಯಾವ ವರ್ಗಕ್ಕೆ ಎಷ್ಟು ಕೆಜಿ ಉಚಿತ ಹಾಗೂ ಗರಿಷ್ಠ ಲಗೇಜ್ ಮಿತಿ?
ರೈಲ್ವೇ ಕಾಯ್ದೆಯನ್ವಯ ಪ್ರತಿ ಪ್ರಯಾಣಿಕರ ತರಗತಿಗೆ ತಕ್ಕಂತೆ ಉಚಿತ ಮತ್ತು ಗರಿಷ್ಠ ಲಗೇಜ್ ಸಾಗಾಟದ ಮಿತಿಯನ್ನು ನಿಗದಿಪಡಿಸಲಾಗಿದೆ:

ಎಸಿ 3-ಟೈರ್, 3ಇ ಹಾಗೂ ಎಸಿ ಚೇರ್ ಕಾರ್ ಕೋಚ್‌ಗಳಲ್ಲಿ ಉಚಿತ ಮಿತಿ ಮತ್ತು ಗರಿಷ್ಠ ಮಿತಿ ಎರಡೂ 40 ಕೆಜಿ ಒಂದೇ ಆಗಿರುವುದರಿಂದ, ಈ ಕೋಚ್‌ಗಳ ಒಳಗೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಲು ಆನ್‌ಲೈನ್ ಬುಕಿಂಗ್ ಲಭ್ಯವಿರುವುದಿಲ್ಲ. 40 ಕೆಜಿಗಿಂತ ಹೆಚ್ಚಿದ್ದರೆ ಅದನ್ನು ಲಗೇಜ್ ವ್ಯಾನ್‌ನಲ್ಲಿ ಪ್ರತ್ಯೇಕವಾಗಿ ಬುಕ್ ಮಾಡಬೇಕಾಗುತ್ತದೆ.

ಮತ್ತಷ್ಟು ಓದಿ: ರೈಲು ಪ್ರಯಾಣಿಕರೇ ಗಮನಿಸಿ; ನಾಳೆಯಿಂದ ರೈಲ್ವೆ ಇಲಾಖೆಯಿಂದ ಲಗೇಜ್ ಆನ್‌ಲೈನ್ ಬುಕಿಂಗ್ ಆರಂಭ

ಪ್ರಯಾಣಿಸುವ ಮೊದಲು ಪಾರ್ಸೆಲ್ ಕಚೇರಿಗೆ ಭೇಟಿ ನೀಡುವ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಪ್ರಕ್ರಿಯೆಯನ್ನು ಸುಲಭಗೊಳಿಸುವ ಗುರಿಯನ್ನು ಈ ಕ್ರಮ ಹೊಂದಿದೆ. CRIS ಅಗತ್ಯವಿರುವ ವ್ಯವಸ್ಥೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ ನಂತರ ಜುಲೈ 31 ರಿಂದ ಈ ಸೌಲಭ್ಯವನ್ನು ಜಾರಿಗೆ ತರುವಂತೆ ರೈಲ್ವೆ ಮಂಡಳಿಯು ಎಲ್ಲಾ ವಲಯ ರೈಲ್ವೆಗಳಿಗೆ ನಿರ್ದೇಶನ ನೀಡಿದೆ.

ತರಗತಿವಾರು ಉಚಿತ ಲಗೇಜ್ ಭತ್ಯೆ
ಹೆಚ್ಚುವರಿ ಹಣ ಪಾವತಿಸದೆ ನೀವು ಸಾಗಿಸಬಹುದಾದ ಸಾಮಾನುಗಳ ಪ್ರಮಾಣವು ನಿಮ್ಮ ಪ್ರಯಾಣ ವರ್ಗವನ್ನು ಅವಲಂಬಿಸಿರುತ್ತದೆ.

ಎಸಿ ಪ್ರಥಮ ದರ್ಜೆ: 70 ಕೆಜಿ ವರೆಗೆ ಉಚಿತ, ಅನ್ವಯವಾಗುವ ಶುಲ್ಕಗಳನ್ನು ಪಾವತಿಸಿದ ನಂತರ ಗರಿಷ್ಠ ಅನುಮತಿಸುವ ಮಿತಿ 150 ಕೆಜಿ.
ಪ್ರಥಮ ದರ್ಜೆ ಮತ್ತು ಎಸಿ 2-ಟೈರ್: 50 ಕೆಜಿ ವರೆಗೆ ಉಚಿತ. ಹೆಚ್ಚುವರಿ ಲಗೇಜ್ ಶುಲ್ಕದೊಂದಿಗೆ ಗರಿಷ್ಠ ಮಿತಿ 100 ಕೆಜಿ.
ಸ್ಲೀಪರ್ ಕ್ಲಾಸ್: 40 ಕೆಜಿ ವರೆಗೆ ಉಚಿತ. ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗರಿಷ್ಠ ಮಿತಿ 80 ಕೆಜಿ.
ಎರಡನೇ ದರ್ಜೆ: 35 ಕೆಜಿ ವರೆಗೆ ಉಚಿತ. ಗರಿಷ್ಠ ಮಿತಿ 70 ಕೆಜಿ, ಅನ್ವಯವಾಗುವ ಶುಲ್ಕಗಳೊಂದಿಗೆ.
AC 3-ಟೈರ್, AC 3 ಎಕಾನಮಿ ಮತ್ತು AC ಚೇರ್ ಕಾರ್: ಅನುಮತಿಸಲಾದ ಗರಿಷ್ಠ ಲಗೇಜ್ 40 ಕೆಜಿ.

ಉಚಿತ ಭತ್ಯೆಯನ್ನು ಮೀರಿ ಸಾಮಾನುಗಳನ್ನು ಸಾಗಿಸುವ ಪ್ರಯಾಣಿಕರು ಸಾಮಾನ್ಯ ಲಗೇಜ್ ದರಕ್ಕಿಂತ 1.5 ಪಟ್ಟು ಪಾವತಿಸಬೇಕಾಗುತ್ತದೆ. ಕನಿಷ್ಠ ಶುಲ್ಕ 30 ರೂ. ಶುಲ್ಕಗಳನ್ನು 10 ಕೆಜಿ ಸ್ಲ್ಯಾಬ್‌ಗಳಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಲೆಕ್ಕಾಚಾರಕ್ಕಾಗಿ ಪರಿಗಣಿಸಲಾದ ಕನಿಷ್ಠ ದೂರ 50 ಕಿ.ಮೀ.

ಪ್ರಯಾಣಿಕರು ಭಾರತೀಯ ರೈಲ್ವೆ ಪಾರ್ಸೆಲ್ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡು ಲಾಗಿನ್ ಆಗುವ ಮೂಲಕ, ಮೂಲ ಮತ್ತು ಗಮ್ಯಸ್ಥಾನ ನಿಲ್ದಾಣಗಳನ್ನು ಆಯ್ಕೆ ಮಾಡುವ ಮೂಲಕ, ರೈಲು ಆಯ್ಕೆ ಮಾಡುವ ಮೂಲಕ, ಫಾರ್ವರ್ಡ್ ನೋಟ್ ಅನ್ನು ಭರ್ತಿ ಮಾಡುವ ಮೂಲಕ ಮತ್ತು ಅಂದಾಜು ಸರಕು ಶುಲ್ಕಗಳನ್ನು ಪರಿಶೀಲಿಸುವ ಮೂಲಕ ಬುಕಿಂಗ್ ಅನ್ನು ಪೂರ್ಣಗೊಳಿಸಬಹುದು. ಈ ಬದಲಾವಣೆಯೊಂದಿಗೆ, ಹೆಚ್ಚುವರಿ ಸಾಮಾನುಗಳನ್ನು ಹೊತ್ತೊಯ್ಯುವ ಪ್ರಯಾಣಿಕರು ಇನ್ನು ಮುಂದೆ ಪಾರ್ಸೆಲ್ ಕಚೇರಿಯಲ್ಲಿ ಸಂಪೂರ್ಣ ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್! ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ – Kannada News | Tumakuru QR Code Secret Exposes Police Constable Son In Hydro Ganja Racket

ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ

ತುಮಕೂರು, ಜುಲೈ 31: ಒಂದು ಕಡೆ ತಂದೆ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಆತನ ಮಗನೇ ಗ್ಯಾಂಗ್ ಕಟ್ಟಿಕೊಂಡು ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಆಘಾತಕಾರಿ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ರಹಸ್ಯ ‘ಕ್ಯೂಆರ್ ಕೋಡ್’ (QR Code) ಯೋಜನೆಯಿಂದಾಗಿ ಪೊಲೀಸ್ ಸಿಬ್ಬಂದಿಯ ಪುತ್ರ ಸೇರಿ 9 ಮಂದಿ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಕ್ಯೂಆರ್ ಕೋಡ್‌ ರಹಸ್ಯ

ತುಮಕೂರು ಉಪವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್ ಅವರು ಮಾದಕ ದಂಧೆ ತಡೆಯಲು ಕ್ಯೂಆರ್ ಕೋಡ್ ಜಾಗೃತಿ ಅಭಿಯಾನ ಆರಂಭಿಸಿದ್ದರು. ಸಾರ್ವಜನಿಕರು ಗುಪ್ತವಾಗಿ ಮಾಹಿತಿ ನೀಡಲು ಮತ್ತು ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಲು ಈ ವ್ಯವಸ್ಥೆ ಮಾಡಲಾಗಿತ್ತು. ಜುಲೈ 10ರಂದು ಈ ಕ್ಯೂಆರ್ ಕೋಡ್ ಮೂಲಕ ಬಂದ ಗೌಪ್ಯ ಸುಳಿವನ್ನು ಬೆನ್ನಟ್ಟಿದ ತಿಲಕ್ ಪಾರ್ಕ್ ಪೊಲೀಸರಿಗೆ ಅಚ್ಚರಿಯ ಸತ್ಯ ಕಾದಿತ್ತು.

ಬಿಸಿಎ ವಿದ್ಯಾರ್ಥಿಯ ಕರಾಳ ದಂಧೆ

ತುಮಕೂರು ಎಸ್ಪಿ ಕಚೇರಿಯ ಹಿಂದಿನ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಪೊಲೀಸ್ ಸಿಬ್ಬಂದಿ ರಘುನಾಥ್ ಅವರ ಪುತ್ರ ದಿಶಾಂತ್ (21) ಎಂಬ ಬಿಸಿಎ ವಿದ್ಯಾರ್ಥಿಯೇ ಈ ಗ್ಯಾಂಗ್‌ನ ಮುಖ್ಯಸ್ಥ. ಬೆಂಗಳೂರಿನಿಂದ ವ್ಯವಸ್ಥಿತವಾಗಿ ಸಾಮಾನ್ಯ ಗಾಂಜಾ ಹಾಗೂ ದುಬಾರಿ ‘ಹೈಡ್ರೋ ಗಾಂಜಾ’ ತರಿಸಿಕೊಂಡು ತುಮಕೂರಿನಲ್ಲಿ ಮಾರಾಟ ಮಾಡುತ್ತಿದ್ದ.

ಕಾರ್ಯಾಚರಣೆ ನಡೆಸಿದ ಪೊಲೀಸರು ದಿಶಾಂತ್ ಸೇರಿದಂತೆ ಬೆಂಗಳೂರಿನ ಮಂಜುನಾಥ್ (35), ತುಮಕೂರಿನ ಸತೀಶ್ (37), ಪ್ರಮೋದ್ (28), ದರ್ಶನ್ (31) ಮತ್ತು ಅಮೋಘ್ (31) ಎಂಬ ಆರು ಮಂದಿಯನ್ನು ಮೊದಲ ಹಂತದಲ್ಲಿ ಬಂಧಿಸಿದರು. ಇವರಿಂದ ಫಾರ್ಚ್ಯೂನರ್ ಕಾರು ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆ ಮುಂದುವರಿಸಿದ ಪೊಲೀಸರು ಮತ್ತಷ್ಟು ಸುಳಿವು ಆಧರಿಸಿ ಮತ್ತೆ ಮೂವರನ್ನು ಸೆರೆಹಿಡಿದಿದ್ದು, ಈವರೆಗೆ ಒಟ್ಟು 9 ಮಂದಿ ಜೈಲುಪಾಲಾಗಿದ್ದಾರೆ. ತಿಲಕ್ ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates 31 July: ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆ 3,140 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 31st July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 31: ಕಳೆದ ನಾಲ್ಕು ತಿಂಗಳಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನದಿನಕ್ಕೂ ಏರಿಳಿತಗಳನ್ನು ಕಾಣುವುದು ಮುಂದುವರಿದಿದೆ. ಚಿನ್ನದ ಬೆಲೆ (Gold Price) ಶುಕ್ರವಾರ ಗ್ರಾಮ್​ಗೆ 25 ರೂ ಏರಿದೆಯಾದರೂ ಕಳೆದ ನಾಲ್ಕು ದಿನದಲ್ಲಿ ಬೆಲೆ ನೂರಕ್ಕೂ ಹೆಚ್ಚು ರೂಗಳಷ್ಟು ಇಳಿಕೆಯಾಗಿದೆ. ಜನವರಿ ಕೊನೆಯಲ್ಲಿ 16,395 ರೂವರೆಗೆ ಏರಿದ್ದ ಆಭರಣ ಚಿನ್ನದ ಬೆಲೆ ಈಗ 13,255 ರೂಗೆ ಇಳಿದಿದೆ. ಈ ನಾಲ್ಕು ತಿಂಗಳಲ್ಲಿ ಬೆಲೆ 3,140 ರೂಗಳಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 31ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,460 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,255 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,845 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,460 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,255 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,255 ರೂ
  • ಚೆನ್ನೈ: 13,255 ರೂ
  • ಮುಂಬೈ: 13,255 ರೂ
  • ದೆಹಲಿ: 13,270 ರೂ
  • ಕೋಲ್ಕತಾ: 13,255 ರೂ
  • ಕೇರಳ: 13,255 ರೂ
  • ಅಹ್ಮದಾಬಾದ್: 13,260 ರೂ
  • ಜೈಪುರ್: 13,270 ರೂ
  • ಲಕ್ನೋ: 13,270 ರೂ
  • ಭುವನೇಶ್ವರ್: 13,255 ರೂ

ಇದನ್ನೂ ಓದಿ: Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 550 ರಿಂಗಿಟ್ (12,819 ರುಪಾಯಿ)
  • ದುಬೈ: 495.50 ಡಿರಾಮ್ (12,866 ರುಪಾಯಿ)
  • ಅಮೆರಿಕ: 135 ಡಾಲರ್ (12,874 ರುಪಾಯಿ)
  • ಸಿಂಗಾಪುರ: 179 ಸಿಂಗಾಪುರ್ ಡಾಲರ್ (13,295 ರುಪಾಯಿ)
  • ಕತಾರ್: 495.50 ಕತಾರಿ ರಿಯಾಲ್ (12,961 ರೂ)
  • ಸೌದಿ ಅರೇಬಿಯಾ: 509 ಸೌದಿ ರಿಯಾಲ್ (12,927 ರುಪಾಯಿ)
  • ಓಮನ್: 52.50 ಒಮಾನಿ ರಿಯಾಲ್ (13,003 ರುಪಾಯಿ)
  • ಕುವೇತ್: 41.34 ಕುವೇತಿ ದಿನಾರ್ (12,812 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 235 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 235 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿರಿಯಾನಿ ತಿನ್ನುತ್ತಾ ಹಣೆಗೆ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದ ಸಲ್ಮಾನ್ ಖಾನ್ – Kannada News | Salman Khan was undergoing Platelet Rich Plasma

ಸಲ್ಮಾನ್ ಖಾನ್ (Salman Khan) ವಯಸ್ಸೀಗ 60 ವರ್ಷ. ಈಗಲೂ ಬಾಲಿವುಡ್​​ನ ಸ್ಟಾರ್ ನಟರಾಗಿಯೇ ಗುರುತಿಸಿಕೊಳ್ಳುತ್ತಾರೆ. ಇತ್​ತೀಚೆಗಷ್ಟೆ ಸಲ್ಮಾನ್ ಖಾನ್ ಅವರ ಫೋಟೊ ಒಂದು ವೈರಲ್ ಆಗಿತ್ತು. ಫೋಟೊನಲ್ಲಿ ಸಲ್ಮಾನ್ ವಯಸ್ಸಾದವರಂತೆ, ಸುಸ್ತಾದವರಂತೆ ಕಾಣುತ್ತಿದ್ದರು. ಆದರೆ ಅದಾದ ಮರುದಿನವೇ ಸಲ್ಮಾನ್ ಖಾನ್ ತಮ್ಮ ಸ್ಟೈಲ್ ಆಗಿರುವ, ಫಿಟ್ ಆಗಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದರು. ಸಲ್ಮಾನ್ ಖಾನ್ 60ರ ವಯಸ್ಸಿನವರಂತೆ ಕಾಣುವುದಿಲ್ಲ ಎಂಬುದು ನಿಜ, ಆದರೆ ಅದಕ್ಕಾಗಿ ಅವರು ಸಾಕಷ್ಟು ತ್ಯಾಗ, ನೋವುಗಳನ್ನು ಸಹ ಸಹಿಸಿಕೊಂಡಿದ್ದಾರೆ. ಈ ಬಗ್ಗೆ ನಿರ್ಮಾಪಕರೊಬ್ಬರು ಹೇಳಿದ್ದಾರೆ.

ಸಲ್ಮಾನ್ ಖಾನ್​​ ವಯಸ್ಸು 60 ಆದರೂ ಅವರ ಕೂದಲು ಉದುರಿಲ್ಲ. ಅವರ ಕೂದಲು ಘನವಾಗಿದೆ, ಕಪ್ಪಗಿದೆ. ಆದರೆ ಇದಕ್ಕಾಗಿ ಅವರು ಕಷ್ಟವಾದ ಪ್ಲೇಟ್​​ಲೆಟ್ ರಿಚ್ ಪ್ಲಾಸ್ಮಾ ಥೆರಪಿ ಮಾಡಿಸಿಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡಿದ್ದ ನಿರ್ಮಾಪಕ ಶೈಲೇಂದ್ರ ಸಿಂಗ್ ಈ ಬಗ್ಗೆ ವಿವರಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮನೆಗೆ ಒಮ್ಮೆ ಹೋಗಿದ್ದೆ ಅವರು ಥೆರಪಿ ಮಾಡಿಸಿಕೊಳ್ಳುತ್ತಿದ್ದರು. ಅವರ ಹಣೆ, ತಲೆಗೆ ಸೂಜಿಗಳನ್ನು ಚುಚ್ಚಲಾಗುತ್ತಿತ್ತು. ಆದರೆ ಆ ನೋವಿನ ನಡುವೆಯೂ ಸಲ್ಮಾನ್ ಖಾನ್ ಚಿಕನ್ ಬಿರಿಯಾನಿ ತಿನ್ನುತ್ತಿದ್ದರು’ ಎಂದಿದ್ದಾರೆ.

ಆಗೆಲ್ಲ ಪ್ರತಿ ಸೋಮವಾರ ರಾತ್ರಿ ನಾವೆಲ್ಲ ಸಲ್ಮಾನ್ ಖಾನ್ ಮರೆಯಲ್ಲಿ ಪಾರ್ಟಿ ಮಾಡುತ್ತಿದ್ದೆವು, ಆಗ ಒಮ್ಮೆ ಸೋಮವಾರ ಸಲ್ಮಾನ್ ಖಾನ್ ಮನೆಗೆ ಹೋಗಿದ್ದೆ. ಆಗ ಸಲ್ಮಾನ್ ಖಾನ್ ಡೈನಿಂಗ್ ರೂಂನಲ್ಲಿದ್ದರು. ತಮ್ಮ ಎದುರು ಒಂದು ಕನ್ನಡಿ ಹಾಕಿಕೊಂಡಿದ್ದರು. ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ತಲೆಗೆ ಸೂಜಿಗಳನ್ನು ಚುಚ್ಚಲಾಗುತ್ತಿತ್ತು. ನಾವೆಲ್ಲ ಸಲ್ಮಾನ್ ಜೊತೆ ಮಾತನಾಡಬೇಕೆಂದರೆ ಕನ್ನಡಿ ಮೂಲಕ ಮಾತನಾಡಿಸಬೇಕಿತ್ತು. ಆ ನೋವಿನ ನಡುವೆಯೂ ಸಲ್ಮಾನ್ ಖಾನ್ ಎಲ್ಲರೊಡನೆ ಮಾತನಾಡುತ್ತಾ ಪಾರ್ಟಿ ಮಾಡುತ್ತಾ ಬಿರಿಯಾನಿ ತಿನ್ನುತ್ತಿದ್ದರು’ ಎಂದಿದ್ದಾರೆ ನಿರ್ಮಾಪಕ.

ಇದನ್ನೂ ಓದಿ:‘ಯಾರು ಹೆದರುತ್ತಾರೋ ಅವರು ಸತ್ತಂತೆ’; ನಿಗೂಢಾರ್ಥದ ಪೋಸ್ಟ್ ಹಂಚಿಕೊಂಡ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಯಂಗ್ ಆಗಿ ಕಾಣಲು ಕೆಲವು ವೈದ್ಯಕೀಯ ಥೆರಪಿಗಳನ್ನು ಸಹ ಮಾಡಿಸಿಕೊಂಡಿದ್ದಾರೆ. ಮುಖಕ್ಕೆ ಸಹ ಕೆಲವು ಥೆರಪಿಗಳನ್ನು ಸಲ್ಮಾನ್ ಖಾನ್ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತದೆ. ಸಲ್ಮಾನ್ ಖಾನ್ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಮಾತೃಭೂಮಿ’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದಾದ ಬಳಿಕ ‘ಭಜರಂಗಿ ಭಾಯಿಜಾನ್ 2’ ಸಿನಿಮಾನಲ್ಲಿ ನಟಿಸಲಿದ್ದಾರೆ. ಒಂದು ಸೂಪರ್ ಹೀರೋ ಸಿನಿಮಾನಲ್ಲೂ ಭಾಯಿಜಾನ್ ನಟಿಸಲಿದ್ದಾರೆ. ಅದನ್ನು ರಾಜ್ ಮತ್ತು ಡಿಕೆ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮನೆಯಲ್ಲಿ ಮೃತ ವ್ಯಕ್ತಿಗಳ ಅಥವಾ ಹಿರಿಯರ ಫೋಟೋ ಇಡಲು ಸರಿಯಾದ ದಿಕ್ಕು ಯಾವುದು? ವಾಸ್ತು ನಿಯಮ ಇಲ್ಲಿದೆ – Kannada News | Vastu Tips for Hanging Photos: Right Direction for Family and Ancestor Photos at Home

ಮನೆಯಲ್ಲಿ ಫೋಟೋಗಳನ್ನು ಎಲ್ಲಿ ಇಡಬೇಕು?Image Credit source: mjginteriors.com

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಗೋಡೆಗಳ ಮೇಲೆ ನೇತುಹಾಕುವ ಛಾಯಾಚಿತ್ರಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ; ಅವು ಮನೆಯ ಶಕ್ತಿ ಮತ್ತು ಕುಟುಂಬ ಸದಸ್ಯರ ಮನಃಸ್ಥಿತಿಯ ಮೇಲೆ ಅಪಾರ ಪ್ರಭಾವ ಬೀರುತ್ತವೆ. ತಪ್ಪು ದಿಕ್ಕಿನಲ್ಲಿ ಇರಿಸಲಾದ ಚಿತ್ರಗಳು ಮನೆಯಲ್ಲಿ ಸದಾ ಒತ್ತಡ ಮತ್ತು ನಕಾರಾತ್ಮಕ ಕಂಪನಗಳನ್ನು ಉಂಟುಮಾಡಬಹುದು. ಅದೇ ರೀತಿ ಸರಿಯಾದ ದಿಕ್ಕು ಮತ್ತು ಸ್ಥಳದಲ್ಲಿ ಫೋಟೋಗಳನ್ನು ನೇತುಹಾಕುವುದರಿಂದ ಮನೆಯಲ್ಲಿ ಶಾಂತಿ, ಪ್ರೀತಿ ಮತ್ತು ಸಂಪತ್ತು ಹೆಚ್ಚಾಗುತ್ತದೆ.

ಉತ್ತರ ಗೋಡೆಯ ಮೇಲೆ ಜೀವಂತ ಜನರ ಫೋಟೋಗಳು:

ಮನೆಯ ಉತ್ತರ ದಿಕ್ಕು ಸಂಪತ್ತಿನ ಅಧಿಪತಿಯಾದ ಕುಬೇರನಿಗೆ ಸೇರಿದ್ದಾಗಿದೆ. ವಾಸ್ತು ಪ್ರಕಾರ, ಈ ಉತ್ತರ ಗೋಡೆಯ ಮೇಲೆ ಜೀವಂತವಾಗಿರುವ ಜನರ ಮತ್ತು ಕುಟುಂಬ ಸದಸ್ಯರ ಛಾಯಾಚಿತ್ರಗಳನ್ನು ನೇತುಹಾಕುವುದು ಅತ್ಯಂತ ಶ್ರೇಷ್ಠ. ವಿಶೇಷವಾಗಿ ಮಕ್ಕಳ ಮತ್ತು ಕುಟುಂಬದವರ ನಗುತ್ತಿರುವ ಮುಖಗಳ ಚಿತ್ರಗಳನ್ನು ಉತ್ತರ ಗೋಡೆಯ ಮೇಲಿಡುವುದರಿಂದ ಅವರ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ಅಪಾರ ಸಮೃದ್ಧಿ ದೊರೆಯುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹಾಗೂ ಸದಸ್ಯರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.

ಪೂರ್ವಜರ ಚಿತ್ರಗಳನ್ನು ಇಡಲು ಸರಿಯಾದ ದಕ್ಷಿಣ ದಿಕ್ಕು:

ವಾಸ್ತು ಶಾಸ್ತ್ರದಲ್ಲಿ ದಕ್ಷಿಣ ದಿಕ್ಕನ್ನು ಧರ್ಮರಾಜ ಯಮ ಮತ್ತು ಪಿತೃ ದೇವತೆಗಳ (ಪೂರ್ವಜರ) ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮೃತಪಟ್ಟ ಪೂರ್ವಜರ ಛಾಯಾಚಿತ್ರಗಳನ್ನು ಮನೆಯ ದಕ್ಷಿಣ ಗೋಡೆಯ ಮೇಲೆ ಮಾತ್ರ ನೇತುಹಾಕಬೇಕು. ಹೀಗೆ ದಕ್ಷಿಣ ಗೋಡೆಗೆ ಫೋಟೋ ಹಾಕಿದಾಗ, ಆ ಚಿತ್ರಗಳು ಉತ್ತರ ದಿಕ್ಕಿಗೆ ಮುಖ ಮಾಡಿರುತ್ತವೆ. ಈ ನಿಯಮವನ್ನು ಪಾಲಿಸುವುದರಿಂದ ಪೂರ್ವಜರಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ ಮತ್ತು ಅವರ ಪೂರ್ಣ ಆಶೀರ್ವಾದ ಕುಟುಂಬಕ್ಕೆ ಲಭಿಸುತ್ತದೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಪೂರ್ವಜರ ಫೋಟೋ ಇಡುವಾಗ ಈ ತಪ್ಪು ಮಾಡಬೇಡಿ:

ಮೃತರ ಫೋಟೋಗಳನ್ನು ಇಡುವಾಗ ಕೆಲವೊಂದು ಪ್ರಮುಖ ವಾಸ್ತು ನಿಯಮಗಳನ್ನು ಮರೆಯದೇ ಪಾಲಿಸಬೇಕು. ಇಲ್ಲದಿದ್ದರೆ ಮನೆಯಲ್ಲಿ ವಾಸ್ತು ದೋಷ ಉಂಟಾಗಬಹುದು.

  • ಪೂಜಾ ಕೊಠಡಿ: ಮೃತಪಟ್ಟವರು ನಮಗೆ ಎಷ್ಟೇ ಪ್ರೀತಿಪಾತ್ರರಾಗಿದ್ದರೂ, ಅವರ ಚಿತ್ರಗಳನ್ನು ದೇವರ ಪೂಜಾ ಕೊಠಡಿಯಲ್ಲಿ ವಿಗ್ರಹಗಳ ಅಥವಾ ದೇವತೆಗಳ ಫೋಟೋಗಳ ಜೊತೆಗೆ ಇಡಬಾರದು.
  • ಉತ್ತರ ಮತ್ತು ಪೂರ್ವ ಗೋಡೆಗಳು: ಮೃತರ ಫೋಟೋಗಳನ್ನು ಯಾವುದೇ ಕಾರಣಕ್ಕೂ ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಗಳ ಮೇಲೆ ನೇತುಹಾಕಬಾರದು.
  • ಮಲಗುವ ಕೋಣೆ ಮತ್ತು ಅಡುಗೆಮನೆ: ಪೂರ್ವಜರ ಫೋಟೋಗಳನ್ನು ಮಲಗುವ ಕೋಣೆ (Bedroom), ಅಡುಗೆಮನೆ (Kitchen) ಹಾಗೂ ಮುಖ್ಯ ದ್ವಾರದ ಎದುರು ನೇರವಾಗಿ ಕಾಣಿಸುವಂತೆ ಇಡಬಾರದು.
  • ಜೀವಂತ ಜನರ ಜೊತೆ ಇಡಬೇಡಿ: ಜೀವಂತವಾಗಿರುವ ಜನರ ಫೋಟೋಗಳ ಜೊತೆಗೆ ಮೃತರ ಫೋಟೋಗಳನ್ನು ಒಂದೇ ಗೋಡೆಯ ಮೇಲೆ ಅಥವಾ ಒಂದೇ ಫ್ರೇಮ್‌ನಲ್ಲಿ ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.

ಅಭಿವೃದ್ಧಿ ಮತ್ತು ನೆಮ್ಮದಿ ತರುವ ವಾಸ್ತು ಸಲಹೆಗಳು:

ಪೂರ್ವಜರ ಫೋಟೋಗಳನ್ನು ದಿನನಿತ್ಯ ಅಥವಾ ವಿಶೇಷ ಪಿತೃ ಕಾರ್ಯಗಳ ದಿನದಂದು ಶುಚಿಗೊಳಿಸಿ, ಹೂವಿನ ಹಾರ ಹಾಕಿ ಧೂಪ-ದೀಪಗಳಿಂದ ಪೂಜಿಸುವುದು ಮನೆಗೆ ಅತ್ಯಂತ ಶ್ರೇಯಸ್ಕರ. ಪೂರ್ವಜರ ಫೋಟೋಗಳ ಚೌಕಟ್ಟುಗಳು (Frames) ಮುರಿದುಹೋಗದಂತೆ ನೋಡಿಕೊಳ್ಳಿ ಮತ್ತು ಫೋಟೋಗಳನ್ನು ಯಾವಾಗಲೂ ಧೂಳು ಇಲ್ಲದಂತೆ ಸ್ವಚ್ಛವಾಗಿಡಿ. ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಸದಾ ಶಾಂತಿ, ನೆಮ್ಮದಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸಂಸ್ಕೃತಿ ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು’; ದೀಪಿಕಾ ಪಡುಕೋಣೆಗೆ ಕೌಂಟರ್ – Kannada News | Director Venky Atluri Reacts to Deepika Padukone Working Hours Controversy

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಕೆಲಸದ ಸಮಯದ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದಿನಕ್ಕೆ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ದೀಪಿಕಾ ಪಟ್ಟು ಹಿಡಿದಿದ್ದರು. ಈ ಕಾರಣದಿಂದಾಗಿ ಅವರು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸೀಕ್ವೆಲ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದಿಂದ ಹೊರನಡೆದಿದ್ದಾರೆ.

ತೆಲುಗು ಚಿತ್ರರಂಗದ ಕೆಲಸದ ಸಂಸ್ಕೃತಿ

ದೀಪಿಕಾ ಪಡುಕೋಣೆ ಅವರ ಈ ನಿರ್ಧಾರದ ಬಗ್ಗೆ ಟಾಲಿವುಡ್ ನಿರ್ದೇಶಕ ವೆಂಕಿ ಅಟ್ಲೂರಿ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರತಿ ಚಿತ್ರರಂಗಕ್ಕೂ ತನ್ನದೇ ಆದ ಕೆಲಸದ ಸಂಸ್ಕೃತಿ ಇರುತ್ತದೆ ಎಂದು ಅವರು ಹೇಳಿದ್ದಾರೆ. ’ತೆಲುಗು ಚಿತ್ರರಂಗದಲ್ಲಿ ಸಾಮಾನ್ಯವಾಗಿ ದಿನಕ್ಕೆ 11 ರಿಂದ 12 ಗಂಟೆಗಳ ಕಾಲ ಶೂಟಿಂಗ್ ನಡೆಯುತ್ತದೆ. ಬೇರೆ ಭಾಷೆಯ ಕಲಾವಿದರು ಇಲ್ಲಿಗೆ ಬಂದಾಗ ಆ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಗೌರವ ನೀಡಬೇಕು’ ಎಂದು ವೆಂಕಿ ತಿಳಿಸಿದ್ದಾರೆ.

ರವೀನಾ ಟಂಡನ್ ಜೊತೆಗಿನ ಹಳೆಯ ನೆನಪು

ನಿರ್ದೇಶಕ ವೆಂಕಿ ಅಟ್ಲೂರಿ ಅವರು ತಾವು ನಿರ್ದೇಶಿಸುತ್ತಿರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದ ಶೂಟಿಂಗ್ ನೆನಪೊಂದನ್ನು ಹಂಚಿಕೊಂಡಿದ್ದಾರೆ. ‘ಊಟಿಯ ಭಾರಿ ಚಳಿಯಲ್ಲಿ ನಟಿ ರವೀನಾ ಟಂಡನ್ ಮತ್ತು ನಟ ಸೂರ್ಯ ಜೊತೆ ಚಿತ್ರೀಕರಣ ನಡೆಯುತ್ತಿತ್ತು. ಅಂದು ಕೆಲಸ ಮುಗಿಸಲು ಸತತ 14 ಗಂಟೆಗಳ ಕಾಲ ಶೂಟಿಂಗ್ ಮಾಡಬೇಕಾದ ಅನಿವಾರ್ಯತೆ ಇತ್ತು. ರವೀನಾ ಟಂಡನ್ ಅವರ ಮ್ಯಾನೇಜರ್ ವಿರೋಧ ವ್ಯಕ್ತಪಡಿಸಿದರೂ ನಟಿ ಮಾತ್ರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹಕ್ಕೆ ದೀಪಿಕಾ ಪಡುಕೋಣೆ ಬೆಂಬಲ? ಅಸಲಿ ಕಥೆ ಇಲ್ಲಿದೆ

ವೈಜಯಂತಿ ಮೂವೀಸ್ ಅಧಿಕೃತ ಪ್ರಕಟಣೆ

ದೀಪಿಕಾ ಪಡುಕೋಣೆ ಅವರು ಎಂಟು ಗಂಟೆಗಳ ಶಿಫ್ಟ್ ನಿಯಮಕ್ಕೆ ಪಟ್ಟು ಹಿಡಿದ ಕಾರಣ ಕಲ್ಕಿ ಚಿತ್ರತಂಡದಿಂದ ಹೊರಬೀಳಬೇಕಾಯಿತು. ಇತ್ತೀಚೆಗೆ ವೈಜಯಂತಿ ಮೂವೀಸ್ ಸಂಸ್ಥೆಯು ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿದೆ. ಮೊದಲ ಭಾಗದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದರೂ ಸೀಕ್ವೆಲ್ ಸಮಯದಲ್ಲಿ ಇಬ್ಬರ ನಡುವೆ ಒಮ್ಮತ ಮೂಡದ ಕಾರಣ ದೀಪಿಕಾ ಸಿನಿಮಾದಿಂದ ದೂರವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಶುರಾಮನ ಪಾತ್ರಕ್ಕಾಗಿ 25 ಕೆಜಿ ಹೆಚ್ಚಿಸಿಕೊಳ್ಳಲು ರೆಡಿ ಆದ ವಿಕ್ಕಿ ಕೌಶಲ್ – Kannada News | Vicky Kaushal Undergoes Massive Weight Gain Transformation of 25 kg for Mahavatar

ಬಾಲಿವುಡ್ ನಟ ವಿಕ್ಕಿ ಕೌಶಲ್ ಯಾವುದೇ ಪಾತ್ರ ಸಿಕ್ಕರೂ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಪ್ರತಿ ಪಾತ್ರಕ್ಕೆ ಬೇಕಿರೋ ಅಗತ್ಯ ತಯಾರಿಗಳನ್ನು ಅವರು ಮಾಡಿಕೊಳ್ಳುತ್ತಾರೆ. ‘ಛಾವಾ’ ಚಿತ್ರದ ಯಶಸ್ಸಿನ ನಂತರ ವಿಕ್ಕಿ ‘ಮಹಾವತಾರ್’ ಸಿನಿಮಾಗಾಗಿ ದೊಡ್ಡ ಸವಾಲನ್ನು ಸ್ವೀಕರಿಸಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರು ಚಿರಂಜೀವಿ ಪರಶುರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ನಟ ಬರೋಬ್ಬರಿ 25 ಕೆಜಿಗೂ ಹೆಚ್ಚು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಪರಶುರಾಮನ ಪಾತ್ರಕ್ಕಾಗಿ ಭಾರಿ ಸಿದ್ಧತೆ

ಪುರಾಣಗಳಲ್ಲಿ ಪರಶುರಾಮನನ್ನು ಅತ್ಯಂತ ಶಕ್ತಿಶಾಲಿ ಮತ್ತು ದೈತ್ಯ ಪ್ರತಿಭೆಯಾಗಿ ಬಣ್ಣಿಸಲಾಗಿದೆ. ಈ ಪಾತ್ರಕ್ಕೆ ಜೀವ ತುಂಬಲು ವಿಕ್ಕಿ ಕೌಶಲ್ ಭಾರಿ ಕಸರತ್ತು ನಡೆಸಲಿದ್ದಾರೆ. ಚಿತ್ರದಲ್ಲಿ ಪರಶುರಾಮನ ದಿವ್ಯ ಕೊಡಲಿಯನ್ನು ಹಿಡಿದು ಹೋರಾಡುವ ದೃಶ್ಯಗಳಿಗಾಗಿ ಅವರು ಅಗಲವಾದ ಎದೆ ಹಾಗೂ ಬಲಿಷ್ಠ ದೇಹವನ್ನು ಹೊಂದಬೇಕಾಗಿದೆ. ಇದಕ್ಕಾಗಿ ಅವರ ಫಿಟ್‌ನೆಸ್ ಕೋಚ್ ತೇಜಸ್ ಲಾಲಾವಾನಿ ಮತ್ತು ನ್ಯೂಟ್ರಿಷನಿಸ್ಟ್ ಅಲ್ಕೇಶ್ ಶರೋತ್ರಿ ವಿಶೇಷ ತರಬೇತಿ ಹಾಗೂ ಆಹಾರದ ಪ್ಲಾನ್ ಸಿದ್ಧಪಡಿಸಿದ್ದಾರೆ.

ಛಾವಾ ಚಿತ್ರಕ್ಕಿಂತಲೂ ದೊಡ್ಡ ಸವಾಲು

ವಿಕ್ಕಿ ಕೌಶಲ್ ಅವರು ಈ ಹಿಂದೆ ‘ಚಾವಾ’ ಚಿತ್ರಕ್ಕಾಗಿ ತಮ್ಮ ತೂಕವನ್ನು 80 ಕೆಜಿಯಿಂದ 105 ಕೆಜಿಗೆ ಹೆಚ್ಚಿಸಿಕೊಂಡಿದ್ದರು ಅಂದತ. ಆದರೆ ‘ಮಹಾವತಾರ್’ ಚಿತ್ರಕ್ಕಾಗಿ ಅವರು ಇದಕ್ಕಿಂತಲೂ ಹೆಚ್ಚು ದಪ್ಪಗಾಗಬೇಕಿದೆ. ಸೆಪ್ಟೆಂಬರ್ ತಿಂಗಳಿನಿಂದ ಅವರ ಕಠಿಣ ತರಬೇತಿ ಆರಂಭವಾಗಲಿದೆ. ಡಿಸೆಂಬರ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗುವ ಮುನ್ನ, ಅಂದರೆ ಕೇವಲ ಮೂರು ತಿಂಗಳಲ್ಲಿ ಅವರು ಇಷ್ಟು ಕೆಜಿ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಮೊದಲ ಬಾರಿ ಮಗನನ್ನು ಪರಿಚಯಿಸಿದ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್: ಆದರೆ ಒಂದು ಷರತ್ತು

ಕಠಿಣ ವರ್ಕೌಟ್ ಮತ್ತು ಡಯಟ್ ಪ್ಲಾನ್

ಈ ಹೊಸ ರೂಪಕ್ಕಾಗಿ ವಿಕ್ಕಿ ಕೌಶಲ್ ದಿನನಿತ್ಯದ ಆಹಾರದಲ್ಲಿ 250 ರಿಂದ 500 ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ಪ್ರೊಟೀನ್ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಸ್ಕ್ವಾಟ್ಸ್, ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್‌ನಂತಹ ಕಠಿಣ ವ್ಯಾಯಾಮಗಳನ್ನು ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ – Kannada News | Banks have upto 15 days holiday in India, including Id Milad, Onam, independence day

ಎಸ್​ಬಿಐ ಬ್ಯಾಂಕ್​ನ ಚಿತ್ರImage Credit source: Getty Images

ನವದೆಹಲಿ, ಜುಲೈ 31: ಆರ್​ಬಿಐ (RBI) ಕ್ಯಾಲೆಂಡರ್ ಪ್ರಕಾರ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ (Bank Holidays) ಇರುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಈದ್ ಮಿಲಾದ್, ಓಣಂ ಇತ್ಯಾದಿ ಪ್ರಮುಖ ರಜಾದಿನಗಳಿವೆ. ಹಾಗೆಯೇ, ಕೇರ್ ಪೂಜಾ ಇತ್ಯಾದಿ ಪ್ರಾದೇಶಿಕ ವಿಶೇಷ ರಜೆಗಳೂ ಇವೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದಲ್ಲಿ ಒಂಬತ್ತು ದಿನಗಳು ಬ್ಯಾಂಕುಗಳ ಕಚೇರಿ ಬಂದ್ ಆಗಿರುತ್ತದೆ.

2026ರ ಆಗಸ್ಟ್​ನಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳ ಪಟ್ಟಿ

  • ಆಗಸ್ಟ್ 2: ಭಾನುವಾರದ ರಜೆ
  • ಆಗಸ್ಟ್ 4, ಮಂಗಳವಾರ: ಕೇರ್ ಪೂಜಾ (ತ್ರಿಪುರಾದಲ್ಲಿ ರಜೆ)
  • ಆಗಸ್ಟ್ 8: ಎರಡನೇ ಶನಿವಾರದ ರಜೆ ಹಾಗೂ ಸಿಕ್ಕಿಂನಲ್ಲಿ ಟೆಂಡೋಂಗ್ ಲಹೋ ರುಮ್ ಫಾಟ್ ಹಬ್ಬ
  • ಆಗಸ್ಟ್ 9: ಭಾನುವಾರದ ರಜೆ
  • ಆಗಸ್ಟ್ 13, ಗುರುವಾರ: ಪೇಟ್ರಿಯಾಟ್ಸ್ ಡೇ (ಮಣಿಪುರದಲ್ಲಿ ರಜೆ)
  • ಆಗಸ್ಟ್ 15, ಶನಿವಾರ: ಸ್ವಾತಂತ್ರ್ಯ ದಿನಾಚರಣೆ (ಎಲ್ಲೆಡೆ ರಜೆ)
  • ಆಗಸ್ಟ್ 16: ಭಾನುವಾರದ ರಜೆ
  • ಆಗಸ್ಟ್ 19, ಬುಧವಾರ: ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದೂರ್ ಜಯಂತಿ (ತ್ರಿಪುರಾದಲ್ಲಿ ರಜೆ)
  • ಆಗಸ್ಟ್ 22: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 23: ಭಾನುವಾರದ ರಜೆ
  • ಆಗಸ್ಟ್ 25, ಮಂಗಳವಾರ: ಮಿಲಾದ್ ಉನ್ ನವಬಿ, ಮಿಲಾದ್ ಇ ಶೆರಿಫ್, ಪ್ರಥಮ ಓಣಂ (ಕೇರಳ, ಆಂಧ್ರ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 26, ಬುಧವಾರ: ಈದ್ ಮಿಲಾದ್, ಮಿಲಾದ್ ಉನ್ ನಬಿ, ಬರಾವಾಫತ್, ತಿರುಓಣಂ (ಕರ್ನಾಟಕ, ಮಹಾರಾಷ್ಟ್ರ, ಕೇರಳ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 27, ಗುರುವಾರ: ಝುಲನ್ ಯಾತ್ರಾ, ಓಣಂ (ಒಡಿಶಾ, ಕೇರಳ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 28, ಶುಕ್ರವಾರ: ರಕ್ಷಾಬಂಧನ (ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಕೆರಳ, ಹಿಮಾಚಲಪ್ರದೇಶ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 30: ಭಾನುವಾರದ ರಜೆ

ಇದನ್ನೂ ಓದಿ: ಮನೆ ಕಟ್ಟುವ ಪ್ಲ್ಯಾನ್‌ನಲ್ಲಿದ್ದೀರಾ, ಈ ದಾಖಲೆಗಳು ಇದ್ರೆ ಲೈಸನ್ಸ್ ಪಡೆಯೋದು ಸುಲಭ

ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜೆಗಳು

  • ಆಗಸ್ಟ್ 2: ಭಾನುವಾರದ ರಜೆ
  • ಆಗಸ್ಟ್ 8: ಎರಡನೇ ಶನಿವಾರದ ರಜೆ
  • ಆಗಸ್ಟ್ 9: ಭಾನುವಾರದ ರಜೆ
  • ಆಗಸ್ಟ್ 15, ಶನಿವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 16: ಭಾನುವಾರದ ರಜೆ
  • ಆಗಸ್ಟ್ 22: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 23: ಭಾನುವಾರದ ರಜೆ
  • ಆಗಸ್ಟ್ 26, ಬುಧವಾರ: ಈದ್ ಮಿಲಾದ್
  • ಆಗಸ್ಟ್ 30: ಭಾನುವಾರದ ರಜೆ

ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರುತ್ತವೆ. ಕ್ಯಾಷ್ ವಿತ್​ಡ್ರಾಯಲ್​ಗೆ ಎಟಿಎಂಗಳು ದಿನದ 24 ಗಂಟೆ ಲಭ್ಯ ಇರುತ್ತವೆ. ಆರ್​ಟಿಜಿಎಸ್, ನೆಫ್ಟ್ ಇತ್ಯಾದಿ ಹಣ ವರ್ಗಾವಣೆಗೆ ನೆಟ್ ಬ್ಯಾಂಕಿಂಗ್ ಇದ್ದೇ ಇರುತ್ತದೆ. ಸಾಮಾನ್ಯ ಹಣ ವರ್ಗಾವಣೆಗಳಿಗೆ ಯುಪಿಐ ಕೂಡ ಇರುತ್ತದೆ. ಆದರೆ, ಚೆಕ್ ಹಾಕಲು, ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಲು, ದೊಡ್ಡ ಮೊತ್ತದ ಹಣ ಡೆಪಾಸಿಟ್ ಮಾಡಲು ಬ್ಯಾಂಕ್ ಕಚೇರಿಗಳಿಗೆ ಹೋಗುವ ಅವಶ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version