ಕಾವೇರಿ ಜಲ ವಿವಾದ: ಮಂಡ್ಯದ ಕೆಆರ್​​ಎಸ್​​ ಬಳಿ ಬಿಜೆಪಿಗರಿಂದ ಬೃಹತ್​​ ಪ್ರತಿಭಟನೆ – Kannada News | Cauvery Row: BS Yediyurappa, R Ashoka, and Top BJP Leaders Stage Massive Protest Near KRS Dam in Mandya

ಮಂಡ್ಯ, ಜುಲೈ 31: ನೀರು ಹರಿಸಬೇಕೆಂಬ CWMA ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಸಂಜಯ ಸರ್ಕಲ್​ನಲ್ಲಿ ರೈತರು ಮತ್ತು ಕನ್ನಡ ಸಂಘಟನೆಗಳ ಧರಣಿ ನಡೆಸಿದ್ದರೆ, ಕಾವೇರಿ ಹೋರಾಟಕ್ಕೆ ಪಡಿತರ ವಿತರಕರ ಸಂಘವೂ ಬೆಂಬಲ ನೀಡಿದೆ. ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯಲ್ಲಿ ಕೂತು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿದೆ. ಮತ್ತೊಂದೆಡೆ ಶ್ರೀರಂಗಪಟ್ಟಣ ತಾಲೂಕಿನ ​ಎಸ್​ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ವಿಪಕ್ಷ ನಾಯಕ ಆರ್​.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ​ಸೇರಿ ಪ್ರಮುಖರು ಭಾಗಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾವೇರಿ ನೀರು ಹಂಚಿಕೆ ವಿವಾದ: ಎಸಿ ರೂಮ್‌ನಲ್ಲಿ ಕೂತು ತೀರ್ಮಾನ ಸರಿಯಲ್ಲ ಎಂದ ಹೆಚ್.ಡಿ. ಕುಮಾರಸ್ವಾಮಿ – Kannada News | HD Kumaraswamy Criticises CWMA Over Cauvery Water Release to Tamil Nadu

ಹಾಸನ, ಜುಲೈ 31: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀರು ಬಿಡುವಂತೆ ನೀಡಿರುವ ಆದೇಶದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ದೆಹಲಿಯ AC ರೂಮ್‌ಗಳಲ್ಲಿ ಕೂತು ತೆಗೆದುಕೊಳ್ಳುವ ಬದಲು, CWMA ಸದಸ್ಯರು ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳಾದ ಕೆಆರ್‌ಎಸ್‌, ಹಾರಂಗಿ, ಕಬಿನಿ, ಹೇಮಾವತಿ ಮತ್ತು ಮೆಟ್ಟೂರು ಪ್ರದೇಶಗಳಿಗೆ ಭೇಟಿ ನೀಡಿ, ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧರಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಸದ್ಯ ಲಭ್ಯವಿರುವ 54-55 ಟಿಎಂಸಿ ನೀರಲ್ಲಿ, 10 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಉಳಿದ 44 ಟಿಎಂಸಿಯಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿಗಾಗಿ 30 ಟಿಎಂಸಿ ಮತ್ತು ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ, ಮುಂದೆ ಹರಿಯುವ ನೀರನ್ನು ಆಧರಿಸಿ, ಅಂದಾಜು ಲೆಕ್ಕಾಚಾರದ ಮೇಲೆ ನೀರು ಬಿಡುಗಡೆ ಮಾಡಲು ಆದೇಶಿಸುವುದು ಸರಿಯಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Cauvery Water Dispute: ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ ರಾಮಲಿಂಗಾ ರೆಡ್ಡಿ? – Kannada News | Cauvery Dispute: BJPs Protest is Political, Government Stands with Farmers, Says Minister Ramalinga Reddy

ಬೆಂಗಳೂರು, ಜುಲೈ 31: ಕಾವೇರಿ ನದಿ ನೀರಿನ ವಿವಾದ ತೀವ್ರಗೊಂಡಿದ್ದು, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದ್ದು, ಮಳೆಯ ಅಭಾವದಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ಕರ್ನಾಟಕದ ನಿಲುವು ಬಹಳ ಸ್ಪಷ್ಟವಾಗಿದ್ದು, ಮುಖ್ಯಮಂತ್ರಿಗಳು ಈಗಾಗಲೇ ರಾಜ್ಯದ ಹಿತಾಸಕ್ತಿ ಕಾಯುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ, ಸೆಪ್ಟೆಂಬರ್ 3 ರಂದು ಎಲ್ಲ ವಿರೋಧ ಪಕ್ಷಗಳ ನಾಯಕರನ್ನು ಒಳಗೊಂಡ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಕಾವೇರಿ ವಿಚಾರದಲ್ಲಿ ಮುಂದಿನ ಕಾರ್ಯತಂತ್ರ ಮತ್ತು ನಿರ್ಧಾರಗಳ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. “ನಮ್ಮ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಲುವನ್ನು ಸರ್ಕಾರ ತೆಗೆದುಕೊಂಡಿರುವುದರಿಂದ ಸದ್ಯಕ್ಕೆ ಯಾವುದೇ ಹೋರಾಟದ ಅವಶ್ಯಕತೆ ಇಲ್ಲ” ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೆಪ್ಟೋ ಡೆಲಿವರಿ ಪಾರ್ಟ್ನರ್​​ನಿಂದ ಕಿರುಕುಳ: ವಿಡಿಯೋ ಹಂಚಿಕೊಂಡು ಮಹಿಳೆ ಗಂಭೀರ ಆರೋಪ – Kannada News | Safety Alert: Zepto Blocks Delivery Partner After Bengaluru Woman Alleges Harassment in Viral Video

ಬೆಂಗಳೂರು, ಜುಲೈ 31: ಜೆಪ್ಟೋ ಡೆಲಿವರಿ ಪಾರ್ಟ್ನರ್‌ ಒಬ್ಬರು ಮನೆಗೆ ಬಂದ ಬಳಿಕ ಪದೇ ಪದೇ ಒಳಗೆ ಬರಬಹುದಾ ಎಂದು ವಿನಂತಿಸುವ ಮೂಲಕ ಭಯ ಹುಟ್ಟಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಘಟನೆ ಬಗ್ಗೆ ಎಳೆ ಳೆಯಾಗಿ ಮಾಹಿತಿ ನೀಡಿದ್ದಾರೆ. ಜೆಪ್ಟೋ ಸಂಸ್ಥೆ ಸಂಬಂಧಿತ ಡೆಲಿವರಿ ಪಾರ್ಟ್ನರ್ ಮೇಲೆ ನಿರ್ಬಂಧ ಹೇರಿದ್ದು, ಆತನ ಐಡಿಯನ್ನು ರದ್ದುಪಡಿಸಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ಘಟನೆ ಏನು?

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಹಿಳೆ ನೀಡಿರುವ ಮಾಹಿತಿ ಪ್ರಕಾರ, ಡೆಲಿವರಿ ಪಾರ್ಟ್ನರ್ ಮನೆಗೆ ಆರ್ಡರ್ ತಲುಪಿಸಿದ ಬಳಿಕ ಕುಡಿಯಲು ನೀರು ಕೇಳಿದ್ದ. ಈ ವೇಳೆ ಮಹಿಳೆ ಒಂದು ಬಾಟಲ್​​ ನೀರು ನೀಡಿದ್ದು, ಅದನ್ನು ಇಟ್ಟುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಆದರೆ, ಬಾಟಲಿಯಲ್ಲಿದ್ದ ನೀರು ಕುಡಿದ ಬಳಿಕ ಆತ ಮತ್ತೆ ಬಂದು ಇನ್ನಷ್ಟು ನೀರನ್ನು ಆತ ಕೇಳಿದ್ದು, ಸತತ ಐದು ನಿಮಿಷ ಮನೆ ಒಳಗೆ ಬರಲು ಅವಕಾಶ ನೀಡುವಂತೆ ಪದೇ ಪದೇ ಮನವಿ ಮಾಡಿದ್ದ ಎಂಬುದಾಗಿ ಅವರು ಆರೋಪಿಸಿದ್ದಾರೆ. ಇದನ್ನು ತಾನು ನಿರಾಕರಿಸಿದ್ದು, ಹೊರಗಡೆಯಲ್ಲೇ ಸಾಕಷ್ಟು ಜಾಗವಿದ್ದು ಅಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರೂ ಆತ ಮನೆ ಒಳಗೆ ಬಿಡುವಂತೆ ಒತ್ತಾಯಿಸುತ್ತಲೇ ಇದ್ದ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಂದ ‘ಸ್ವಿಗ್ಗಿ’ಗೆ ಶಾಕ್: ಆ.15 ರ ನಂತರ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ

ಗೇಟ್ ಮುಚ್ಚಲು ಮುಂದಾದಾಗ ಆತ ಮತ್ತೆ ಇದೇ ರೀತಿ ಹೇಳಿಕೆಗಳನ್ನು ಪುನರಾವರ್ತಿಸಿದ್ದು, ಇದರಿಂದ ಭಯಗೊಂಡು ಮನೆಯ ಬಾಗಿಲು ಮುಚ್ಚಿಕೊಂಡು ಒಳಗೇ ಇದ್ದೆ. ಬಳಿಕ ಆತ ಗೇಟ್ ಬಡಿದು ಗದ್ದಲ ಮಾಡಲಾರಂಭಿಸಿದ ಎಂದು ಮಹಿಳೆ ಹೇಳಿದ್ದಾರೆ. ಡೆಲಿವರಿ ಪಾರ್ಟ್ನರ್‌ನ ವೈಯಕ್ತಿಕ ವಿವರಗಳು ನನ್ನ ಬಳಿ ಇರಲಿಲ್ಲ. ಅದಕ್ಕಾಗಿಯೇ ನಾನು ಪೊಲೀಸರಿಗೆ ದೂರು ನೀಡಲಿಲ್ಲ ಎಂಬುದಾಗಿಯೂ ಅವರು ತಿಳಿಸಿದ್ದಾರೆ. ಇದೇ ತಿಂಗಳ ಆರಂಭದಲ್ಲಿ, ಫ್ಲಿಪ್‌ಕಾರ್ಟ್ ಡೆಲಿವರಿ ಸಿಬ್ಬಂದಿಯೊಬ್ಬರು ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಫ್ಲ್ಯಾಟ್‌ಗೆ ಅನುಮತಿಯಿಲ್ಲದೆ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧಿತರಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:40 pm, Fri, 31 July 26

Source link

Video: 52 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ; ಪುಟ್ಟ ಲಕ್ಷ್ಮಿಯನ್ನು ಕಂಡು ಖುಷಿಪಟ್ಟ ಮನೆ ಮಂದಿ – Kannada News | Family overjoyed at the news of a baby girl’s arrival after 52 years.

ಹೆಣ್ಣು ಲಕ್ಷ್ಮಿಯ ಸ್ವರೂಪ. ಆದರೆ ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು (girl baby) ಹುಟ್ಟೋದು ಎಂಬ ಮಾತಿದೆ. ಇದೀಗ ಕುಟುಂಬವೊಂದು (family) ಹೆಣ್ಣು ಮಗು ಆಗಮನದ ಸುದ್ದಿ ಕೇಳಿ ಕುಣಿದಾಡಿದೆ. 52 ವರ್ಷಗಳ ಬಳಿಕ ಮನೆಗೆ ಪುಟ್ಟ ಲಕ್ಷ್ಮಿ ಆಗಮನವಾಗಿದೆ. ಕುಟುಂಬದ ಸದಸ್ಯರ ಖುಷಿಯು ಅವರುಗಳ ಮುಖದಲ್ಲಿ ವ್ಯಕ್ತವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕುಟುಂಬದ ಸಂಭ್ರಮವನ್ನು ಕಣ್ತುಂಬಿಸಿಕೊಂಡಿದ್ದಾರೆ.

ಡಾ. ಬೇಲಾ ಶಾಹ್ ಜೈನ್ (Dr. Bela Shah Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂಭ್ರಮದ ಕ್ಷಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ಗೆ ಕೆಲವೊಮ್ಮೆ ಪವಾಡಗಳು ನಡೆಯಲು ತಲೆಮಾರುಗಳನ್ನು ತೆಗೆದುಕೊಳ್ಳುತ್ತವೆ. 52 ವರ್ಷಗಳ ಕಾಲ ಗಂಡು ಮಕ್ಕಳನ್ನು ಮಾತ್ರ ಸ್ವಾಗತಿಸಿದ ನಂತರ, ಈ ಕುಟುಂಬಕ್ಕೆ ಅಂತಿಮವಾಗಿ ಹೆಣ್ಣು ಮಗುವಿನ ಆಗಮನವಾಗಿದೆ. ಇದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ದಿನ ಎಂದು ಶೀರ್ಷಿಕೆಯಲ್ಲಿ  ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಡೆಲಿವರಿ ರೂಮ್‌ನ ಹೊರಗೆ ಕುಟುಂಬವೊಂದು ಮಗುವಿನ ಆಗಮನಕ್ಕಾಗಿ ಕಾಯುತ್ತಿರುವುದನ್ನು ಕಾಣಬಹುದು. ಇದೇ ವೇಳೆ ವೈದ್ಯಯೊಬ್ಬಳು  ಹೆಣ್ಣು ಮಗುವನ್ನು ತಂದು ತೋರಿಸುತ್ತಿದ್ದಂತೆ ಎಲ್ಲರ ಮೊಗದಲ್ಲಿ ನಗು ಮೂಡಿದೆ. ಮನೆ ಮಂದಿಯೆಲ್ಲಾ ಖುಷಿಯಿಂದ ಕುಣಿದಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಮೂರುವರೆ ವರ್ಷದ ಬಳಿಕ ವಿದೇಶದಿಂದ ಬಂದ ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಮನೆ ಮಂದಿ

ಈ ವಿಡಿಯೋ 24 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕುಟುಂಬಕ್ಕೆ ಶುಭಾಶಯಗಳು ಎಂದು ಹೇಳಿದರೆ, ಮತ್ತೊಬ್ಬರು, ನಮ್ಮ ಮನೆಯಲ್ಲೂ ಹೀಗೆಯೇ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ತಾಯಿ ಹಾಗೂ ಮಗು ಎಷ್ಟು ಪುಣ್ಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನುಷ್ಯರಿಗಿಂತ ನಾಯಿಗಳ ಬರ್ತ್‌ಡೇಗೇ ಭಾರಿ ಡಿಮ್ಯಾಂಡ್: ಬೊಮ್ಮನಹಳ್ಳಿಯಿಂದ ಮುಂಬೈವರೆಗೆ ವೈಭವದ ‘ಪೆಟ್ ಪಾರ್ಟಿ’ ಕ್ರೇಜ್ – Kannada News | Pet Celebrations Soar in Bengaluru: Dog Birthdays, Baby Showers and Lavish Events

ಬೆಂಗಳೂರು, ಜು.31 : ಸಾಕುಪ್ರಾಣಿಗಳನ್ನು (Pets) ಕುಟುಂಬದ ಪ್ರಮುಖ ಸದಸ್ಯರಂತೆಯೇ ನೋಡಿಕೊಳ್ಳುವ ಧೋರಣೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಭಾರಿ ವೇಗವಾಗಿ ಹೆಚ್ಚುತ್ತಿದೆ. ಮೊದಲೆಲ್ಲಾ ಕೇವಲ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸುತ್ತಿದ್ದ ‘ಪೆಟ್ ಬರ್ತ್‌ಡೇ’ಗಳು (Pet Birthdays) ಈಗ ಅಲ್ಟ್ರಾ-ಪ್ರೀಮಿಯಂ ಹಾಗೂ ವೈಭವೋಪೇತ ಪಾರ್ಟಿಗಳಾಗಿ ರೂಪಾಂತರಗೊಂಡಿವೆ ಎಂದು ಪೆಟ್ ಕೆಫೆ ಹಾಗೂ ರೆಸಾರ್ಟ್ ಮಾಲೀಕರು ತಿಳಿಸಿದ್ದಾರೆ.

ಸಾಕು ನಾಯಿಗಳ ಪ್ರೀತಿಗಾಗಿ ಮಾಲೀಕರು ಕೇವಲ ಹುಟ್ಟುಹಬ್ಬ ಮಾತ್ರವಲ್ಲದೆ, ನಾಯಿಗಳ ಸೀಮಂತ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡಿ ಹುಟ್ಟುಹಬ್ಬ ಆಚರಿಸುವ ಟ್ರೆಂಡ್ ಕೂಡ ಸೃಷ್ಟಿಸಿದ್ದಾರೆ. ‘ಸ್ನೂಪಿ ಪೆಟ್ ಕೆಫೆ’ಯ ಸಂಸ್ಥಾಪಕ ಲಾರೆನ್ಸ್ ಅವರ ಪ್ರಕಾರ, ಅವರ ಕೆಫೆಯಲ್ಲಿ ಪ್ರತಿ ವಾರ ಕನಿಷ್ಠ 3 ರಿಂದ 4 ಪೆಟ್ ಬರ್ತ್‌ಡೇ ಪಾರ್ಟಿಗಳು ನಡೆಯುತ್ತಿವೆ.

ಸಾಮಾನ್ಯ ಬರ್ತ್‌ಡೇ ಆಚರಣೆ ₹3,000 ದಿಂದ ಆರಂಭವಾದರೆ, ಕೆಲವು ಶ್ರೀಮಂತ ಮಾಲೀಕರು 1 ಲಕ್ಷದಿಂದ 2 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ದೀಪಾಲಂಕಾರ , ವಿಶೇಷ ಉಡುಪುಗಳು, ಪೆಟ್‌ಗಳಿಗಾಗಿಯೇ ತಯಾರಿಸಿದ ವಿಶೇಷ ಮೆನು ಹಾಗೂ 10 ರಿಂದ 20 ನಾಯಿಗಳ ಸಮಾಗಮ ಆಯೋಜಿಸಲಾಗುತ್ತಿದೆ.

‘ಪೆಟ್ ಕಾರ್ಟ್ ನೆಸ್ಟ್’ ಸಂಸ್ಥಾಪಕ ಶೇಖರ್ ಗಾಂವ್ಕರ್ ಮಾತನಾಡಿ, “ಜನರು ಈಗ ಮನುಷ್ಯರ ಬರ್ತ್‌ಡೇಗಿಂತ ನಾಯಿಗಳ ಹುಟ್ಟುಹಬ್ಬವನ್ನು ತಿಂಗಳುಗಳ ಮುಂಚಿತವಾಗಿಯೇ ಅತ್ಯಂತ ಯೋಜನಾಬದ್ಧವಾಗಿ ಪ್ಲಾನ್ ಮಾಡುತ್ತಿದ್ದಾರೆ. ಪಾರ್ಟಿಗಳಲ್ಲಿ ವಿಶೇಷ ಸ್ವಿಮ್ಮಿಂಗ್ ಪೂಲ್ ಸೆಷನ್‌ಗಳು, ವೃತ್ತಿಪರ ಛಾಯಾಗ್ರಾಹಕರು ಹಾಗೂ ನಾಯಿಯ ಬಟ್ಟೆಗೆ ಮ್ಯಾಚ್ ಆಗುವಂತಹ ಅಲಂಕಾರಗಳನ್ನು ಮಾಡಿಸಲಾಗುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಂದ ‘ಸ್ವಿಗ್ಗಿ’ಗೆ ಶಾಕ್: ಆ.15 ರ ನಂತರ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ

‘ವೇಣೂಸ್ ಪೆಟ್ ಕೇರ್’ನ ವೇಣು ಅವರ ಪ್ರಕಾರ, ಪೆಟ್ ಪೋಷಕರು ನಾಯಿ ಗರ್ಭಿಣಿಯಾದಾಗ ‘ಕ್ಯಾನೈನ್ ಬೇಬಿ ಶವರ್’ (ಸೀಮಂತ) ಮಾಡುವುದು ಹಾಗೂ 6,000 ರೂ. ದಿಂದ 20,000 ರೂ. ಖರ್ಚು ಮಾಡಿ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕವೂ ಸಂಭ್ರಮಿಸುತ್ತಿದ್ದಾರೆ. ಈ ರೀತಿಯ ವೈಭವದ ಪಾರ್ಟಿ ಸಂಸ್ಕೃತಿ ನಾಯಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಬೆಕ್ಕುಗಳ ಪಾರ್ಟಿ ಇಂದಿಗೂ ಅಪರೂಪವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪ ಕ್ರಿಮಿನಲ್ ಅಲ್ಲ, ದೇಶ ಕಾಯುವ ಸೈನಿಕ: ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ – Kannada News | Delhi Police Officer’s Daughter Shares Emotional Account After Protest Clash

ನವದೆಹಲಿ, ಜುಲೈ 31: ದೆಹಲಿಯ ಜಂತರ್ ಮಂತರ್ ಬಳಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಹಿಂಸಾಚಾರದ ವೇಳೆ ಗಂಭೀರವಾಗಿ ಗಾಯಗೊಂಡ ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (SI) ಅವರ ಮಗಳು, ತಮ್ಮ ತಂದೆಗೆ ನ್ಯಾಯ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಲತಾಣಗಳಲ್ಲಿ ತಮ್ಮ ತಂದೆಯನ್ನು ‘ಕ್ರಿಮಿನಲ್’ ಎಂದು ಬಿಂಬಿಸುತ್ತಿರುವುದಕ್ಕೆ ಆಕೆ ತೀವ್ರ ಆಕ್ರೋಶ ಹಾಗೂ ನೋವು ವ್ಯಕ್ತಪಡಿಸಿದ್ದಾರೆ. “ನನ್ನ ತಂದೆ ದೆಹಲಿ ಪೊಲೀಸ್ ಇಲಾಖೆಗೆ ಸೇರುವ ಮೊದಲು ಭಾರತೀಯ ನೌಕಾಪಡೆಯಲ್ಲಿ ‘ಮರೀನ್ ಕಮಾಂಡೋ’ (MARCOS) ಆಗಿ 15 ವರ್ಷಗಳ ಕಾಲ ದೇಶ ಸೇವೆ ಮಾಡಿದ್ದಾರೆ.

ಅವರು ಜಂತರ್ ಮಂತರ್‌ನಲ್ಲಿ ಕಟ್ಟುನಿಟ್ಟಿನ ಭದ್ರತಾ ಕರ್ತವ್ಯದಲ್ಲಿದ್ದರು” ಎಂದು ಹೇಳಿದ್ದಾರೆ. ತಂದೆ ರಾತ್ರಿ ಮನೆಗೆ ಬಂದಾಗ, ಇದು ಕೇವಲ ವಿದ್ಯಾರ್ಥಿ ಪ್ರತಿಭಟನೆಯಂತೆ ಕಾಣುತ್ತಿಲ್ಲ, ಇದರ ಹಿಂದೆ ಹಲವು ಸಮಾಜಘಾತಕ ಶಕ್ತಿಗಳು ಕೈಜೋಡಿಸಿವೆ ಎಂದು ಆಗಾಗ ಹೇಳುತ್ತಿದ್ದರು ಎಂದು ಆಕೆ ನೆನಪಿಸಿಕೊಂಡಿದ್ದಾರೆ.

ಜುಲೈ 25 ರಂದು ಮಧ್ಯಾಹ್ನ ಸುಮಾರು 7 ಗಂಟೆಯ ವೇಳೆಗೆ ಜಂತರ್ ಮಂತರ್ ಸ್ಟೇಜ್ ಬಳಿ ರೊಚ್ಚಿಗೆದ್ದ ಉಗ್ರ ಗುಂಪೊಂದು ಎಸ್‌ಐ ಅವರನ್ನು ಎಳೆದಾಡಿ, ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯನ್ನೇ ಕ್ರಿಮಿನಲ್ ಎಂದು ಕರೆಯಲಾಗುತ್ತಿದೆ ಹಾಗೂ ಆತನ ಮೇಲೆ ಹಲ್ಲೆ ಮಾಡಿದವರೇ ಸುಪ್ರೀಂ ಕೋರ್ಟ್‌ಗೆ ತೆರಳಿ ಪೊಲೀಸರ ವಿರುದ್ಧ ದೂರು ನೀಡಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ – Kannada News | Congress Leader Vinay Kulkarni Bail: Lawyer Sunil Explains High Court Order

ಬೆಂಗಳೂರು, ಜುಲೈ 31: ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದು, ಈ ಕುರಿತು ಅವರ ವಕೀಲ ಸುನೀಲ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ನಾವು ಎರಡು ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ನಮ್ಮ ಅರ್ಜಿಯನ್ನು ಪುರಸ್ಕರಿಸಿದೆ. ವಿನಯ್ ಕುಲಕರ್ಣಿ ಪರ ಸಿವಿ ನಾಗೇಶ್ ವಾದ ಮಾಡಿದ್ದರು. ವಿನಯ್ ಕುಲಕರ್ಣಿ ಪಾತ್ರ ಇಲ್ಲ ವೆಂದು ವಾದ ಮಾಡಿದ್ದೆವು’ ಎಂದು ತಿಳಿಸಿದರು.

ವಿನಯ್ ಕುಲಕರ್ಣಿ ಇಂದೇ ಬಿಡುಗಡೆಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಜಾಮೀನು ಸಂಬಂಧ ದೃಢೀಕೃತ ಪತ್ರ ಇನ್ನೂ ಕೈಸೇರಿಲ್ಲ. ಆದೇಶದ ದೃಢೀಕೃತ ಪತ್ರ ಸಿಕ್ಕ ನಂತರ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸ್ತೀವೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನದಿ ನೀರು ವಿವಾದ: ವಿಜಯ್ ಭೇಟಿಗೆ ಬೆಂಗಳೂರಲ್ಲಿ ವೇದಿಕೆ ಸಿದ್ಧ; ಅತ್ತ ‘ಜನ ನಾಯಗನ್’ ಸಿನಿಮಾಗೆ ಗೇಟ್​ಪಾಸ್ – Kannada News | Cauvery Water Dispute: Tamil Nadu CM Vijay’s Film Jananayagan Boycotted in Karnataka Ahead of August 3 Bengaluru Peace Talks

ಕಾವೇರಿ ನದಿ ನೀರು ಹಂಚಿಕೆ ವಿವಾದದ ತೀವ್ರತೆಯ ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೊಂದು ಘಟಿಸುವ ಸಾಧ್ಯತೆ ಇದೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (Vijay) ಆಗಸ್ಟ್ 3ರಂದು ಬೆಂಗಳೂರಿಗೆ ಆಗಮಿಸಲು ವೇದಿಕೆ ಸಿದ್ಧವಾಗಿದೆ. ಕಾವೇರಿ ನೀರು ಹಂಚಿಕೆ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಧಾನಸೌಧದಲ್ಲಿ ಅವರು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಆದರೆ, ಈ ಐತಿಹಾಸಿಕ ರಾಜಕೀಯ ಸಂಧಾನದ ಸಿದ್ಧತೆಗಳ ಬೆನ್ನಲ್ಲೇ, ಕರ್ನಾಟಕದಲ್ಲಿ ವಿಜಯ್ ನಟನೆಯ ಸಿನಿಮಾಗಳ ವಿರುದ್ಧ ಸಾರ್ವಜನಿಕ ಆಕ್ರೋಶದ ಕಿಚ್ಚು ಹೊತ್ತಿಕೊಂಡಿರುವುದು ತೀವ್ರ ವಿರೋಧಾಭಾಸಕ್ಕೆ ನಾಂದಿ ಹಾಡಿದೆ.

ಸಿನಿಮಾ ವರ್ಸಸ್ ರಾಜಕೀಯ: ಕಾವೇರಿ ಹೋರಾಟದ ಹೊಸ ಆಯಾಮ

ತಮಿಳುನಾಡಿನ ಹಿಂದಿನ ಸರ್ಕಾರಗಳು ಡಿಎಂಕೆ ಮತ್ತು ಎಐಎಡಿಎಂಕೆ ಕಾವೇರಿ ವಿಚಾರದಲ್ಲಿ ಕರ್ನಾಟಕದ ಜೊತೆ ನೇರ ಮಾತುಕತೆಗೆ ಸದಾ ಹಿಂದೇಟು ಹಾಕುತ್ತಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರ ಈ ನಡೆ ಒಂದು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಮಧ್ಯೆ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಎತ್ತಂಗಡಿ ಮಾಡಲಾಗುತ್ತಿದೆ.

ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರ ಹಾಗೂ ಮಂಡ್ಯದ ಗುರುಶ್ರೀ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾವನ್ನು ಕನ್ನಡಪರ ಮತ್ತು ರೈತ ಸಂಘಟನೆಗಳ ತೀವ್ರ ಪ್ರತಿಭಟನೆಯ ಎಚ್ಚರಿಕೆಯ ನಂತರ ಪ್ರದರ್ಶನದಿಂದಲೇ ಎತ್ತಂಗಡಿ ಮಾಡಲಾಗಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಖ್ಯಾತೆ ತೆಗೆಯುತ್ತಿರುವಾಗ ಅವರ ಮುಖ್ಯಮಂತ್ರಿಯ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂಬುದು ಪ್ರತಿಭಟನಾಕಾರರ ಆಕ್ರೋಶವಾಗಿದೆ.

ವಿಜಯ್‌ಗೆ ಎದುರಾಗಿದೆ ಇಕ್ಕಟ್ಟಿನ ಪರಿಸ್ಥಿತಿ

ಸಿನಿಮಾ ನಟನಾಗಿ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ವಿಜಯ್, ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಜವಾಬ್ದಾರಿ ಹೊತ್ತಿದ್ದಾರೆ. ರಾಜಕೀಯವಾಗಿ ಅವರು ಕರ್ನಾಟಕದೊಂದಿಗೆ ಸೌಹಾರ್ದಯುತ ಮಾತುಕತೆಗೆ ಮುಂದಾಗಿದ್ದರೂ, ಅವರದೇ ಸಿನಿಮಾಗಳನ್ನು ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಬಹಿಷ್ಕರಿಸುತ್ತಿರುವುದು ಅವರ ಬದಲಾದ ಸ್ಥಾನಮಾನದ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಲೇ, ಕರ್ನಾಟಕದ ರೈತರ ಭಾವನೆಗಳಿಗೂ ಧಕ್ಕೆ ತರದಂತೆ ಸಮತೋಲನ ಕಾಯ್ದುಕೊಳ್ಳುವುದು ವಿಜಯ್ ಅವರಿಗೆ ಅಗ್ನಿಪರೀಕ್ಷೆಯಾಗಿದೆ.

ಬರೋದೇ ಅನುಮಾನ?

ತಮಿಳುನಾಡಿನ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ಈ ಕುರಿತು ಮಾಧ್ಯಮಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ‘ಮುಖ್ಯಮಂತ್ರಿ ವಿಜಯ್ ಅವರು ಕಾವೇರಿ ವಿವಾದದ ಸಂಧಾನ ಮಾತುಕತೆಗಾಗಿ ಕರ್ನಾಟಕಕ್ಕೆ ಭೇಟಿ ನೀಡುವ ಬಗ್ಗೆ ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮುಖ್ಯಮಂತ್ರಿಗಳ ಪ್ರವಾಸದ ಕುರಿತಾದ ನಿಖರ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಜಯ್ ಜತೆ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ ಖುಷಿಯಲ್ಲಿ ಕನ್ನಡಿಗ ವಜ್ರಾಂಗ್ ಶೆಟ್ಟಿ

ಇದೆಲ್ಲರ ನಡುವೆ  ಆಗಸ್ಟ್ 3ರ ವಿಧಾನಸೌಧದ ಸಭೆಗೆ ಸರ್ವ ಸಿದ್ಧತೆಗಳು ನಡೆಯುತ್ತಿದ್ದು, ಉಭಯ ರಾಜ್ಯಗಳ ಬಾವುಟ ಮತ್ತು ಲಾಂಛನಗಳು ರಾರಾಜಿಸುತ್ತಿವೆ. ಈ ಸಭೆಯು ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತದೆಯೇ ಅಥವಾ ಕೇವಲ ಸಾಂಕೇತಿಕ ರಾಜಕೀಯ ಸಭೆಯಾಗಿ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Cauvery Water Dispute: ಚಾಮರಾಜನಗರದಲ್ಲಿ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾ ಎತ್ತಂಗಡಿ! – Kannada News | Cauvery Row: Vijay Starrer Jananayagan Movie Screening Stopped In Chamarajanagar

ಚಾಮರಾಜನಗರ, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡು ಸಿಎಂ ಆಕಾಂಕ್ಷಿ, ನಟ ಜೋಸೆಫ್ ವಿಜಯ್ ಅಭಿನಯದ ‘ಜನನಾಯಗನ್’ (Jananayagan) ಸಿನಿಮಾವನ್ನು ಪ್ರದರ್ಶನದಿಂದ ರದ್ದುಗೊಳಿಸಿ ಎತ್ತಂಗಡಿ ಮಾಡಲಾಗಿದೆ.

ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ವಿವಿಧ ಕನ್ನಡ ಮತ್ತು ರೈತ ಸಂಘಟನೆಗಳು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಮಣಿದ ಚಿತ್ರಮಂದಿರದ ಮಾಲೀಕರು ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version