Headlines

ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು, ಶಿಕ್ಷೆಗೂ ತಡೆಯಾಜ್ಞೆ: ಯೋಗೀಶ್ ಗೌಡರ್ ಕೊಲೆ ಕೇಸ್​ನಲ್ಲಿ ಬಿಗ್ ರಿಲೀಫ್ – Kannada News | Vinay Kulkarni Gets Bail in Yogesh Gowda Murder Case: Possibility of getting another chance for the MLA

ಯೋಗೀಶ್ ಗೌಡರ್ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನುImage Credit source: tv9 ಬೆಂಗಳೂರು, ಜುಲೈ 31: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda Murder Case) ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ವಿನಯ್ ಕುಲಕರ್ಣಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಲಾಗಿದೆ. 5 ಲಕ್ಷ ರೂ. ಬಾಂಡ್ ಹಾಗೂ ಶ್ಯೂರಿಟಿ ಒದಗಿಸುವಂತೆ ಕೋರ್ಟ್​ ಆದೇಶಿಸಿದೆ. ಇದೇ ವೇಳೆ ವಿನಯ್…

Read More

Karnataka Dam Water Level: ಕೆಆರ್‌ಎಸ್​ನಲ್ಲಿ ನೀರಿನ ಅಭಾವದ ಭೀತಿ: ಆಲಮಟ್ಟಿ ಭರ್ತಿ! – Kannada News | Karnataka Dam Water Level Today: KRS, Alamatti, Kabini Storage Details

ಬೆಂಗಳೂರು, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಬಿದ್ದ ಬೆನ್ನಲ್ಲೇ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಕೆಆರ್‌ಎಸ್‌ನಲ್ಲಿ ನೀರಿನ ಅಭಾವ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 90 ಅಡಿ ದಾಟಿದ್ದರೂ ಸಹ, ಸದ್ಯಕ್ಕೆ 92.85 ಅಡಿಯಲ್ಲೇ ಸ್ಥಿರವಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಬಹುದೂರ ಸಾಗಬೇಕಿದೆ. ಒಂದು ಕಡೆ ಮಳೆಯ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೇ ಕಂಗೆಟ್ಟಿದ್ದರೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ…

Read More

Video: ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ ಯುವಕ, ವೈರಲ್‌ ಆಯ್ತು ದೃಶ್ಯ – Kannada News | A young man who took his mother on a flight for the first time.

ಪ್ರತಿಯೊಬ್ಬ ಮಕ್ಕಳಿಗೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ತಮ್ಮ ಹೆತ್ತವರನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಹೌದು, ಹೆತ್ತವರ ಸಣ್ಣ ಪುಟ್ಟ ಕನಸುಗಳನ್ನು ನನಸಾಗಿರುವುದರಲ್ಲಿ ಏನೋ ಖುಷಿ. ಇದೀಗ ಮಗನೊಬ್ಬ ತಾಯಿಯನ್ನು ಮೊದಲ ಬಾರಿಗೆ ವಿಮಾನ (flight) ಹತ್ತಿಸಿದ್ದಾನೆ. ತಾಯಿಯ ಜತೆಗೆ ವಿಮಾನ ಪ್ರಯಾಣದ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ. ಅನ್ಮೋಲ್‌ ಖಾತ್ರಿ (Anmol Khattri) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ನನಗೆ 26…

Read More

ಮನೆಗೆ ಮಾರಿ ಅಂದ್ರಾ ಜ್ಯೋತಿಷಿ? ಬೇಸರದಿಂದ ಮದುವೆಯಾಗಿ 8 ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ – Kannada News | Dehradun Bride’s Tragic End Sparks Questions Over Alleged Harassment and Superstition

ಡೆಹ್ರಾಡೂನ್, ಜುಲೈ 31: ವಿವಾಹವಾಗಿ ಕೇವಲ ಎಂಟು ತಿಂಗಳಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಡೆಹ್ರಾಡೂನ್‌ನ ದೋಯಿವಾಲಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಕ್ಷಿಣೆ ಕಿರುಕುಳ(Dowry) ಮತ್ತು ಮೂಢನಂಬಿಕೆಯ ಆಧಾರದ ಮೇಲೆ ನಿರಂತರ ಮಾನಸಿಕ ಹಿಂಸೆ ನೀಡಿದ್ದರಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸಾಯುವ ಮುನ್ನ ಸೃಷ್ಟಿ ಕಂದರಿ, ತಮ್ಮ ತಾಯಿಗೆ ಭಾವನಾತ್ಮಕ ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ಕ್ಷಮಿಸಿ ಅಮ್ಮಾ, ಇನ್ನು ಮುಂದೆ ಈ ಕಿರುಕುಳ ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ…

Read More

ಕಾವೇರಿ ವಿವಾದ: KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು – Kannada News | Karnataka Cauvery Water Dispute: Women Protesters Perform Urulu Seve at KRS Dam

ಮಂಡ್ಯ, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶವನ್ನು ಖಂಡಿಸಿ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕೆಆರ್‌ಎಸ್ ಜಲಾಶಯದ ಗೇಟ್ ಮುಂದೆ ಶುಕ್ರವಾರ ಬೆಳಗ್ಗೆಯೇ ಮಹಿಳಾ ಹೋರಾಟಗಾರರು ಉರುಳು ಸೇವೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಿರ್ವಹಣಾ ಸಮಿತಿ (CWMA) ಮತ್ತು CWRC ನೀಡಿದ ಆದೇಶದ ವಿರುದ್ಧ ರೈತರು, ಕನ್ನಡಪರ ಸಂಘಟನೆಗಳು ತಿರುಗಿ ಬಿದ್ದಿವೆ. ಪದೇ ಪದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಕುಡಿಯುವ ನೀರಿಗೂ ತೊಂದರೆಯಾಗುವ ಸಂದರ್ಭದಲ್ಲಿ ತಮಿಳುನಾಡಿಗೆ…

Read More

ಆಷಾಢ ಶುಕ್ರವಾರ: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ – Kannada News | Former CM Yediyurappa Visits Chamundeshwari Temple with Family for 3rd Ashada Friday

ಮೈಸೂರು,ಜು.31: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ನೆಲೆವೀಡು ಚಾಮುಂಡಿಬೆಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 3ನೇ ಆಷಾಢ ಶುಕ್ರವಾರದ ಶುಭ ಸಂದರ್ಭದಲ್ಲಿ ಭೇಟಿ ನೀಡಿದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ ತಮ್ಮ ಕುಟುಂಬದ ಇತರ ಸದಸ್ಯರೊಂದಿಗೆ ಯಡಿಯೂರಪ್ಪ ಅವರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು. ನಾಡಿನ ಅಧಿದೇವತೆಯ ಆಶೀರ್ವಾದ ಪಡೆಯಲು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಯಡಿಯೂರಪ್ಪ ಅವರ ಭೇಟಿ…

Read More

Vastu Tips: ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮನೆಗೆ ತರುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ನಿಯಮ ತಿಳಿದಿರಲಿ – Kannada News | Vastu Tips for Second Hand Items: How to Remove Negative Energy Before Using Used Furniture

ಸೆಕೆಂಡ್ ಹ್ಯಾಂಡ್ ವಸ್ತುImage Credit source: linkedin ಸಾಮಾನ್ಯವಾಗಿ ಸೆಕೆಂಡ್ ಹ್ಯಾಂಡ್ ಅಥವಾ ಹಳೆಯ ವಸ್ತುಗಳನ್ನು ಖರೀದಿಸಿದಾಗ, ಅವು ಮನೆಗೆ ಶ್ರೇಯಸ್ಕರವೇ ಅಥವಾ ಅಶುಭವೇ ಎಂಬ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಉದ್ಭವಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಬಳಸುವ ಹಳೆಯ ಪೀಠೋಪಕರಣಗಳು ಅಥವಾ ಯಾವುದೇ ವಸ್ತುಗಳು ಅವುಗಳ ಹಿಂದಿನ ಮನೆಯ ವಾತಾವರಣ, ಅವುಗಳನ್ನು ಬಳಸಿದ ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ಹಳೆಯ ನೆನಪುಗಳನ್ನು ತಮ್ಮೊಂದಿಗೆ ಹೊತ್ತು ತರುತ್ತವೆ. ಈ ಸೂಕ್ಷ್ಮ ಶಕ್ತಿಗಳು ನಮ್ಮ ಮನೆಯ ವಾತಾವರಣ ಮತ್ತು ಕುಟುಂಬದ…

Read More

ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಬಂದ ಅಭಿಮಾನಿ; ಫೋಟೋ ಕಸಿದುಕೊಂಡ ಪೋಲೀಸರು – Kannada News | Police Seize Darshan Photo from Fan Screaming Slogans During Ashadha Pooja At Chamundi Hills

ಆಷಾಢ ಪೂಜೆಯ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಭಕ್ತರ ಸರತಿ ಸಾಲಿನಲ್ಲಿ ನಿಂತಿದ್ದ ಅಭಿಮಾನಿಯೊಬ್ಬ ನಟ ದರ್ಶನ್ ಅವರ ದೊಡ್ಡ ಭಾವಚಿತ್ರವನ್ನು ಹಿಡಿದುಕೊಂಡು ಬಂದಿದ್ದನು. ದೇವಿಯ ದರ್ಶನಕ್ಕಾಗಿ ಕಾಯುವಾಗ ಆತ ಸಾಲಿನಲ್ಲಿ ನಿಂತೇ ‘ಡಿ ಬಾಸ್’ ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದನು. ಗದ್ದಲ ಎಬ್ಬಿಸುತ್ತಾ ತನ್ನ ಅಭಿಮಾನವನ್ನು ಪ್ರದರ್ಶಿಸುತ್ತಿದ್ದ ಆತನ ನಡೆ ಅಲ್ಲಿದ್ದ ಇತರೆ ಭಕ್ತರಿಗೆ ಮುಜುಗರ ಉಂಟುಮಾಡಿತ್ತು. ಭಾವಚಿತ್ರ ಕಸಿದುಕೊಂಡ ಪೊಲೀಸರು ಸರತಿ ಸಾಲಿನಲ್ಲಿ ಭಕ್ತರು ದೇವಿಯ ನಾಮಸ್ಮರಣೆ ಮಾಡುವ…

Read More

TV9 Kannada News Live: ರಾಜ್ಯದಲ್ಲಿ ಹೆಚ್ಚಾಯ್ತು ಕಾವೇರಿ ಕಿಚ್ಚು! ಕೆಆರ್‌ಎಸ್‌ ಮುತ್ತಿಗೆ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 31 July 2026 Cauvery Water Dispute Farmers Protest, Karnataka Tamil Nadu CM Meet Politics Cinema Latest Updates Online

Breaking News Today Live Updates in Kannada: ತಮಿಳುನಾಡಿಗೆ 3,500 ಕ್ಯೂಸೆಕ್ಸ್ ನೀರು ಹರಿಸುವ CWRC ಆದೇಶ ಖಂಡಿಸಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಇಂದು ಕೆಆರ್‌ಎಸ್ ಜಲಾಶಯ ಮುತ್ತಿಗೆ ಚಳವಳಿ ನಡೆಸುತ್ತಿದ್ದು, ಮಂಡ್ಯದಲ್ಲಿ ಹೋರಾಟ ತೀವ್ರಗೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟಿಗೆ ತೆರೆಬಿದ್ದಿದ್ದು, ರಾಹುಲ್ ಗಾಂಧಿ ಪಟ್ಟಿಗೆ ಅಂತಿಮ ಅಂಕಿತ ಹಾಕಿದ್ದಾರೆ. ಸೋಮವಾರ ನೂತನ ಸಚಿವರ ಪ್ರಮಾಣವಚನ ಸಮಾರಂಭ…

Read More

ಪ್ರಧಾನಿ ಮೋದಿ ವೀಡಿಯೊ ಬ್ಲಾಕ್ ಮಾಡಿದ್ದ ಮೆಟಾಗೆ ಸರ್ಕಾರದ ಬಿಸಿ – Kannada News | Meta Faces Govt Heat: PM Modi Video Block Sparks VIP Account Security Overhaul

ನವದೆಹಲಿ, ಜುಲೈ 31: ಕಾಕ್ರೋಚ್ ಜನತಾ ಪಕ್ಷದ (CJP) ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಹಾಗೂ ಮಾರ್ಫ್ ಮಾಡಿದ ವೀಡಿಯೊಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮೆಟಾ ಇಂಡಿಯಾ (Meta India) ಸಂಸ್ಥೆಯ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಹೈದರಾಬಾದ್ ಸೈಬರ್ ಕ್ರೈಮ್ ಪೋಲಿಸರು ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಸೇರಿದಂತೆ ಹಲವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಮ್…

Read More