ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ದೆಹಲಿ ಸರ್ಕಾರ; ಪ್ರತಿಭಟನಾಕಾರರ ಮೇಲಿನ ಕೇಸ್ ಕೈಬಿಡಲು ನಿರ್ಧಾರ – Kannada News | Delhi government to drop legal action against protesters Excluding Criminals

ನವದೆಹಲಿ, ಜುಲೈ 30: ದೆಹಲಿಯ ಜಂತರ್ ಮಂತರ್‌ನಲ್ಲಿ (Delhi Protest) ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾಮಾನ್ಯ ಜನರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದರೂ, ಪ್ರತಿಭಟನಾಕಾರರ ಮೇಲಿನ 13 ಎಫ್‌ಐಆರ್‌ಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಗೃಹ ಸಚಿವಾಲಯ ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ದೆಹಲಿಯ ಗೃಹ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಚಳವಳಿಯ ಸಮಯದಲ್ಲಿ ಯಾರನ್ನಾದರೂ ವಶಕ್ಕೆ ಪಡೆಯಲಾಗಿದ್ದರೆ ಅಥವಾ ಬಂಧಿಸಿದ್ದರೆ ಅಂತಹವರನ್ನು ಪರಿಶೀಲನೆಯ ನಂತರ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಬಂಧಿತರನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್​ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್

ನೀಟ್ – ಯುಜಿ ಪರೀಕ್ಷೆಯ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಸಿಜೆಪಿ ತನ್ನ ಹೋರಾಟವನ್ನು ಹಿಂತೆಗೆದುಕೊಂಡಿತ್ತು. ಆದರೆ, ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆಯ ವೇಳೆ ಪ್ರಮುಖ ಬೇಡಿಕೆಗಳನ್ನು ಇಟ್ಟಿತ್ತು. ಅವುಗಳಲ್ಲಿ ಪ್ರತಿಭಟನಾಕಾರರ ಮೇಲೆ ಯಾವುದೇ ಕೇಸ್ ದಾಖಲಿಸಬಾರದು ಎಂಬುದು ಕೂಡ ಒಂದಾಗಿತ್ತು. ಇದರ ಬೆನ್ನಲ್ಲೇ ಬಿಹಾರ ಮತ್ತು ಅಸ್ಸಾಂನಂತಹ ರಾಜ್ಯಗಳು ಪ್ರತಿಭಟನಾಕಾರರ ಮೇಲಿನ ಎಫ್​ಐಆರ್ ಹಿಂಪಡೆದಿದ್ದವು. ಆದರೆ, ದೆಹಲಿಯಲ್ಲಿ ಕೇಸ್ ಹಿಂಪಡೆದಿರಲಿಲ್ಲ.

ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳುವಾಗ, ದೆಹಲಿ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಿಜೆಪಿ ಹೇಳಿತ್ತು. ಆದರೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಇನ್ನೂ ಸಂಪೂರ್ಣವಾಗಿ ಹಿಂಪಡೆದಿಲ್ಲ ಎಂದು ಸಿಜೆಪಿ ಪದೇ ಪದೇ ಆರೋಪಿಸುತ್ತಿತ್ತು. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾದರೆ ಮತ್ತೆ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಸಿಜೆಪಿ ಎಚ್ಚರಿಸಿತ್ತು. ಇದೀಗ ದೆಹಲಿಯಲ್ಲೂ ಕೇಸ್ ಹಿಂಪಡೆಯಲಾಗಿದೆ.

ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ

2,873 ಕ್ರಿಮಿನಲ್ ಹಿನ್ನೆಲೆಯುಳ್ಳವರ ಗುರುತು:

ಪ್ರತಿಭಟನಾ ಸ್ಥಳದಲ್ಲಿದ್ದ ಅಪಾರ ಸಂಖ್ಯೆಯ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ದೆಹಲಿ ಪೊಲೀಸರು ಗುರುತಿಸಿದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ. ಪೊಲೀಸ್ ಮೂಲಗಳ ಪ್ರಕಾರ, ಮುಖ ಗುರುತಿಸುವ ತಂತ್ರಜ್ಞಾನ (Facial Recognition System – FRS) ಮತ್ತು ಇತರ ಡಿಜಿಟಲ್ ಉಪಕರಣಗಳನ್ನು ಬಳಸಿ ಜುಲೈ 20ರಿಂದ 25ರ ನಡುವೆ ಜಂತರ್ ಮಂತರ್‌ನಲ್ಲಿ 2,873 ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಇದ್ದುದನ್ನು ಪತ್ತೆಹಚ್ಚಲಾಗಿದೆ. ಈ ಅಪರಾಧಿಗಳು ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ದೆಹಲಿ ಪೊಲೀಸರು ಪ್ರತ್ಯೇಕ ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಎಷ್ಟೇ ಕ್ಲೋಸ್‌ ಆಗಿದ್ರೂ ಸರಿ, ಇಂತಹ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ – Kannada News | Chanakya Niti: Don’t tell your family matters to people to these people, know why

ಪ್ರತಿ ಮನೆಯಲ್ಲೂ ನೋವು-ನಲಿವು ಇದ್ದೇ ಇರುತ್ತದೆ. ಮನೆಯವರು ಸಂತೋಷದಿಂದ (Happiness) ಇರುವಂತೆ ಮನೆಯವರ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಸಹ ಏರ್ಪಡುತ್ತಿರುತ್ತವೆ. ನಿಮ್ಮನೆ ಕೌಟುಂಬಿಕ ವಿವಾದಗಳು, ಹಣಕಾಸಿನ ವಹಿವಾಟುಗಳು ಮತ್ತು ಭವಿಷ್ಯದ ಯೋಜನೆಗಳನ್ನು ಕುಟುಂಬ ಸದಸ್ಯರೊಳಗೆ ಮಾತ್ರ ಸೀಮಿತಗೊಳಿಸಬೇಕು. ಹೊರಗಿನ ಯಾರನ್ನೂ ಕುಟುಂಬದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಅನುಮತಿಸಬಾರದು. ಫ್ಯಾಮಿಲಿ ಮ್ಯಾಟರ್‌ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಗಾಸಿಪ್ ಮಾಡುವವರು, ಅಸೂಯೆ ಪಡುವವರು, ಸ್ವಾರ್ಥಿಗಳು ಈ ರೀತಿಯ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಗಳನ್ನು ಹೇಳಿದರೆ, ಸಂಬಂಧಗಳಲ್ಲಿ ಬಿರುಕು ಮೂಡಬಹುದು ಮತ್ತು ಮನೆಯ ನೆಮ್ಮದಿ ಸಂತೋಷವೇ ಹಾಳಾಗಬಹುದು.

ನಿಮ್ಮ ಫ್ಯಾಮಿಲಿ ಮ್ಯಾಟರ್‌ಗಳನ್ನು ಈ ಕೆಲವು ಜನರಿಗೆ ಹೇಳಬೇಡಿ:

ಗಾಸಿಪ್‌ ಮಾಡುವ ಜನ: ಕೆಲವರಿಗೆ ಗಾಸಿಪ್‌ ಮಾಡುವ ಸ್ವಭಾವವಿರುತ್ತದೆ. ಇಂತಹ ಜನರ ಬಳಿ ಏನಾದ್ರೂ ನಿಮ್ಮ ಮನೆಯಲ್ಲಿ ನಡೆಯುವ ಜಗಳ, ಮನಸ್ತಾಪಗಳ ಬಗ್ಗೆ ಹೇಳಿದರೆ, ಅವರು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಗಾಸಿಪ್‌ ಮಾಡಿ ನಿಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಮತ್ತು ನಿಮ್ಮ ಕುಟುಂಬದ ಸೀಕ್ರೆಟ್‌ ತಿಳಿದುಕೊಂಡು ಇತರರ ಬಳಿ ಇಲ್ಲಸಲ್ಲದ್ದನ್ನು ಹೇಳುತ್ತಾರೆ. ಹಾಗಾಗಿ ಗಾಸಿಪ್‌ ಮಾಡುವ ಜನರ ಬಳಿ ನಿಮ್ಮ ಫ್ಯಾಮಿಲಿ ಮ್ಯಾಟರ್‌ ಹೇಳಬೇಡಿ.

ನಿಮ್ಮ ಬಗ್ಗೆ ಅಸೂಯೆ ಪಡುವ ಜನರು: ನಾವು ಎಷ್ಟೇ ಕ್ಲೋಸ್‌ ಆಗಿದ್ರೂ ಸಹ ನಮ್ಮ ಪ್ರಗತಿ, ಮನೆಯ ಸಂತೋಷವನ್ನು ನೋಡಿ ಕೆಲವು ಸಿಕ್ಕಾಪಟ್ಟೆ ಅಸೂಯೆ ಪಡುತ್ತಾರೆ. ಅಂತಹ ಜನರು ಹೊರನೋಟಕ್ಕೆ ನಿಮ್ಮ ಹಿತೈಷಿಗಳಂತೆ ಕಂಡರೂ ಅವರು ಯಾವಾಗಲೂ ನಿಮಗೆ ಕೆಟ್ಟಗಾಬೇಕು ಎಂದು ಬಯಸುತ್ತಾರೆ ಎನ್ನುತ್ತಾರೆ ಚಾಣಕ್ಯ. ನಿಮ್ಮ ಕುಟುಂಬದ ಸಮಸ್ಯೆಗಳ ಬಗ್ಗೆ ಅವರ ಬಳಿ ಹೇಳಿ, ಅದಕ್ಕೆ ಪರಿಹಾರವನ್ನು ಕೇಳಿದರೆ, ಅವರು ಬೇಕು ಬೇಕಂತಲೇ ತಪ್ಪು ಸಲಹೆಗಳನ್ನು ನೀಡಿ ಕುಟುಂಬಕ್ಕೆ, ಸಂಬಂಧಕ್ಕೆ ಹಾನಿ ಮಾಡುತ್ತಾರೆ. ಹಾಗಾಗಿ ಅಸೂಯೆ ಪಡುವ  ಜನರಿಂದ ಯಾವಾಗಲೂ ಅಂತರವನ್ನು ಕಾಯ್ದುಕೊಳ್ಳಬೇಕು.

ಇದನ್ನೂ ಓದಿ: ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ

ಸ್ವಾರ್ಥ ಮತ್ತು ದುರಾಸೆಯ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಕೇವಲ ತಮ್ಮ ಲಾಭಕ್ಕಾಗಿ ನಿಮ್ಮೊಂದಿಗೆ ಸಹವಾಸದಲ್ಲಿರುವ ಜನರಿಗೆ ಯಾವುದೇ ಕಾರಣಕ್ಕೂ ನಿಮ್ಮನೆ ವಿಚಾರಗಳನ್ನು ಹೇಳಬೇಡಿ. ಏಕೆಂದರೆ ಇವರು ತಮ್ಮ ಸ್ವಾರ್ಥ ಮತ್ತು ದುರಾಸೆಗಾಗಿ ನಿಮ್ಮ ಕುಟುಂಬಕ್ಕೆ ತೊಂದರೆಯನ್ನು ಉಂಟು ಮಾಡುತ್ತಾರೆ. ಹಾಗಾಗಿ ಇಂತಹ ಜನರನ್ನು  ನಿಮ್ಮ ಮನೆಯ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ.

ದುರಹಂಕಾರಿ ಮತ್ತು ಪಶ್ಚಾತ್ತಾಪವಿಲ್ಲದ ಜನರು: ಯಾವಾಗಲೂ ತಮ್ಮನ್ನು ತಾವು ಸರಿ ಮತ್ತು ಉಳಿದವರೆಲ್ಲರೂ ತಪ್ಪು ಎಂದು ಪರಿಗಣಿಸುವ ಜನರನ್ನು ನಿಮ್ಮ ಮನೆಯ ವ್ಯವಹಾರಗಳಿಂದ ದೂರವಿಡಬೇಕು ಎನ್ನುತ್ತಾರೆ ಚಾಣಕ್ಯ. ಅವರ ಪ್ರಕಾರ, ಇಂತಹ ಜನರುಬ ಮನೆಯ ವಿವಾದ ಅಥವಾ ಭಿನ್ನಾಭಿಪ್ರಾಯವನ್ನು ಪರಿಹರಿಸುವ ಬದಲು, ಅವರು ತಮ್ಮ ಅಹಂಕಾರದಿಂದಾಗಿ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತಾರೆ. ಹಾಗಾಗಿ ಈ ಸ್ವಭಾವದ ಜನರನ್ನು ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್, ರಣ್​​ಬೀರ್ ನಟನೆ ಕೊಂಡಾಡಿದ ಬಾಲಿವುಡ್ ನಟ – Kannada News | Ramayana actor Kunal Kapoor praises Yash and Ranbir Kapoor

ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಅನ್ನು ಸಹ ಗಳಿಸಿಕೊಂಡಿದೆ. ಟ್ರೈಲರ್​​ನಲ್ಲಿ ಯಶ್ ಅವರ ಎಂಟ್ರಿ, ಅವರ ನಟನೆ, ಅವರ ಸ್ವಾಗ್, ಅವರ ಅಬ್ಬರವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಟ್ರೈಲರ್ ನೋಡಿದವರೆಲ್ಲ ಯಶ್ ಅವರನ್ನು ಭರಪೂರವಾಗಿ ಹೊಗಳುತ್ತಿದ್ದಾರೆ. ಇದೀಗ ಯಶ್ ಅವರೊಟ್ಟಿಗೆ ‘ರಾಮಾಯಣ’ ಸಿನಿಮಾನಲ್ಲಿ ನಟಿಸಿರುವ ಸಹನಟನೋರ್ವ ಯಶ್ ಅವರ ಗುಣಗಾನ ಮಾಡಿದ್ದಾರೆ.

ಇಂದು ಬಿಡುಗಡೆ ಆದ ಟ್ರೈಲರ್​​ನಲ್ಲಿ ಯಶ್ ಅವರು ನಿರ್ವಹಿಸಿರುವ ರಾವಣ ಪಾತ್ರ, ಇಂದ್ರನ ನಗರಿಯ ಮೇಲೆ ದಾಳಿ ಮಾಡಿರುವ ದೃಶ್ಯಗಳಿವೆ. ರಾವಣ, ಇಂದ್ರನ ಸೇನೆಯನ್ನು ಧ್ವಂಸ ಮಾಡುವ ಕೆಲ ದೃಶ್ಯಗಳನ್ನು ಟ್ರೈಲರ್​​ನಲ್ಲಿ ಸೇರಿಸಲಾಗಿದೆ. ಸಿನಿಮಾನಲ್ಲಿ ಇಂದ್ರನ ಪಾತ್ರದಲ್ಲಿ ನಟ ಕುನಾಲ್ ಕಪೂರ್ ನಟಿಸಿದ್ದಾರೆ. ಇಂದು ಟ್ರೈಲರ್ ಬಿಡುಗಡೆ ಆದ ಬಳಿಕ ಅವರು ಟ್ವಿಟ್ಟರ್​​ನಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸಿದ್ದು, ಈ ವೇಳೆ ಯಶ್ ಬಗ್ಗೆ ಕುನಾಲ್ ಕಪೂರ್ ಮಾತನಾಡಿದ್ದಾರೆ.

ಕುನಾಲ್ ಕಪೂರ್ ಅವರು ತಮ್ಮ ‘ರಾಮಾಯಣ’ ಪಾತ್ರವಾದ ದೇವೇಂದ್ರ (ಇಂದ್ರ ದೇವ) ಇಂದ ಸ್ಫೂರ್ತಿ ಪಡೆದ ಕೆಲ ಚಿತ್ರಗಳನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಸೃಷ್ಟಿಸಿದ ಫ್ಯಾನ್ ಪೋಸ್ಟರ್​​ಗಳು ಅವಾಗಿದ್ದವು. ಅದರ ಜೊತೆಗೆ ಅಭಿಮಾನಿಗಳೊಟ್ಟಿಗೆ ಸಂವಾದವನ್ನು ಸಹ ಅವರು ಮಾಡಿದರು. ‘ರಾವಣನಾಗಿ ಯಶ್ ಹೇಗಿದ್ದಾರೆ?’ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುನಾಲ್ ಕಪೂರ್, ‘ನಂಬಲಸಾಧ್ಯ! ರಾವಣನಿಗೆ ಹೆಮ್ಮೆಯೆನಿಸುತ್ತದೆ’ ಎಂದು ಉತ್ತರಿಸಿದ್ದಾರೆ. ಆ ಮೂಲಕ ರಾವಣನಿಗೇ ಹೆಮ್ಮೆ ಆಗುವ ರೀತಿಯಲ್ಲಿ ಯಶ್ ನಟಿಸಿದ್ದಾರೆ ಮತ್ತು ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕುನಾಲ್ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಟ್ರೇಲರ್​​ನಲ್ಲಿ ರಾವಣನದ್ದೇ ಅಬ್ಬರ

ಮತ್ತೊಬ್ಬ ಬಳಕೆದಾರರು ರಣಬೀರ್ ಕಪೂರ್ ಅವರೊಂದಿಗೆ ಕೆಲಸ ಮಾಡಿದ ಅವರ ಅನುಭವದ ಬಗ್ಗೆ ಹೇಳುವಂತೆ ಕೇಳಿದರು. ಅದಕ್ಕೆ ಉತ್ತರಿಸಿದ ಕುನಾಲ್ ಕಪೂರ್, ‘ಗಿಗಾ ಚಾಡ್. ಯಾವುದೇ ಸ್ಟಾರ್‌ಡಮ್‌ನ ಹೊರೆಯಿಲ್ಲದ ನಕ್ಷತ್ರ’ ಎಂದು ಸರಳವಾಗಿ ಒಂದೇ ವಾಕ್ಯದಲ್ಲಿ ಉತ್ತರ ನೀಡಿದ್ದಾರೆ. ಆ ಮೂಲಕ ರಣ್​​ಬೀರ್ ಕಪೂರ್ ಅತ್ಯಂತ ಸರಳವಾದ ವ್ಯಕ್ತಿತ್ವ ಉಳ್ಳ ವ್ಯಕ್ತಿ ಎಂದು ಕುನಾಲ್ ಹೇಳಿದ್ದಾರೆ.

ಕುನಾಲ್ ಕಪೂರ್, ‘ರಾಮಾಯಣ’ ಸಿನಿಮಾನಲ್ಲಿ ದೇವೇಂದ್ರನ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ರಣಬೀರ್ ಕಪೂರ್ ಶ್ರೀ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದು, ನಮಿತ್ ಮಲ್ಹೋತ್ರಾ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತರಾದ ಹಾನ್ಸ್ ಜೀಮರ್ ಮತ್ತು ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ಮೊದಲ ಭಾಗ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಹಾರ್ದಿಕ್ or ರಿಂಕು; ಯಾರಿಗೆ ಸಿಗಲಿದೆ ಕೆಕೆಆರ್ ನಾಯಕತ್ವ?

Source link

ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ – Kannada News | Union Minister HD Kumaraswamy Prepares Mother Chennamma Photo In HMT Watches

ಹಾಸನ, (ಜುಲೈ 30): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪತ್ನಿ ದಿ.ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ ಇಂದು (ಜು.30) ನಡೆಯಿತು. ಬೆಳಗ್ಗೆಯಿಂದಲೇ ಸಮಾಧಿ ಸ್ಥಳ ಹಾಗೂ ಎಚ್​​​ಡಿ ರೇವಣ್ಣನವರ ನಿವಾಸದಲ್ಲಿ ಪೂಜೆ ಪುನಸ್ಕಾರಗಳು ನಡೆದಿದ್ದು, ಲಕ್ಷಾಂತರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಚೆನ್ನಮ್ಮನಿಗೆ ಇಷ್ಟವಾದ ಚಕ್ಕುಲಿ, ಮೈಸೂರ್ ಪಾಕ್​ ಅನ್ನು ಇಟ್ಟು ಪೂಜೆ ಮಾಜೆ ಮಾಡಲಾಯ್ತು. ಇನ್ನೊಂದೆಡೆ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಅವರು ತಾಯಿ ನೆನಪಿಗಾಗಿ ಎಚ್​​​​ಎಂಟಿ ವಾಚ್​​​ನಲ್ಲಿ ಚೆನ್ನಮ್ಮರ ಫೋಟೋ ರೆಡಿ ಮಾಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Kitchen Cleaning Tips: ಮಹಿಳೆಯರೇ… ಬೆಳಗೆದ್ದು ಅಡುಗೆ ಮನೆ ಸ್ವಚ್ಛಗೊಳಿಸುವಾಗ ಈ ಕ್ರಮಗಳನ್ನು ಅನುಸರಿಸಿ – Kannada News | What should you clean first thing in the kitchen in the morning?

ಅಡುಗೆ ಮನೆ (Kitchen) ಪ್ರತಿ ಮನೆಯ ಅತ್ಯಂತ ಪ್ರಮುಖ ಭಾಗ. ಅಲ್ಲದೆ ಅಡುಗೆ ಮನೆಯನ್ನು ಅನ್ನಪೂರ್ಣ ದೇವಿಯ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅಡುಗೆ ಮನೆಯ ಶುಚಿತ್ವದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು. ಮುಖ್ಯವಾಗಿ ಬೆಳಗ್ಗೆ ಅಡುಗೆಯನ್ನು ಪ್ರಾರಂಭಿಸುವ ಮೊದಲು ಅಡುಗೆ ಮನೆಯಲ್ಲಿರುವ ಯಾವ ವಸ್ತುವನ್ನು ಸ್ವಚ್ಛಗೊಳಿಸಬೇಕು ಎಂಬುದರ ಬಗ್ಗೆ ತಿಳಿದಿರಬೇಕು. ಗ್ಯಾಸ್‌ ಸ್ಟೌವ್‌ ಅಥವಾ ಸಿಂಕ್‌ ಅಥವಾ ಕೌಂಟರ್‌ ಟಾಪ್‌ ಇವುಗಳನ್ನು ಸರಿಯಾದ ಕ್ರಮದಿಂದ ಸ್ವಚ್ಛಗೊಳಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಮೊದಲು ಅಡುಗೆ ಮನೆಯಲ್ಲಿ ಏನನ್ನು ಕ್ಲೀನ್‌ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಬೆಳಗ್ಗೆ ಅಡುಗೆಮನೆಯನ್ನು ಸ್ವಚ್ಛಗೊಳಿಸುವ ಸರಿಯಾದ ಕ್ರಮ ಯಾವುದು?

ಮೊದಲು ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಬೇಕು: ವಾಸ್ತು ಶಾಸ್ತ್ರದ ಪ್ರಕಾರ, ಬೆಳಗ್ಗೆ ಅಡುಗೆ ಮನೆಗೆ ಕಾಲಿಟ್ಟ ತಕ್ಷಣ ಗ್ಯಾಸ್‌ ಸ್ಟೌವ್‌ ಸ್ವಚ್ಛಗೊಳಿಸಬೇಕು. ಶಾಸ್ತ್ರಗಳಲ್ಲಿ ಒಲೆಯನ್ನು ಅಗ್ನಿದೇವರ ಸಂಕೇತವೆಂದು ಪರಿಗಣಿಸಲಾಗಿದ್ದು, ಆದ್ದರಿಂದ ಪ್ರತಿನಿತ್ಯ ಬೆಳಗ್ಗೆ ಒಲೆ ಹಚ್ಚಿ ಅಡುಗೆಯನ್ನು ಪ್ರಾರಂಬಿಸುವ ಮುನ್ನ ಸ್ವಚ್ಛಬಟ್ಟೆಯಿಂದ ಗ್ಯಾಸ್‌ ಸ್ಟೌವ್‌ ಕ್ಲೀನ್‌ ಮಾಡಬೇಕು. ಹಿಂದಿನ ದಿನ ಅಡುಗೆ ಮಾಡುವ ಸಂದರ್ಭದಲ್ಲಿ ಚೆಲ್ಲಿದ ಕಲೆಗಳಿದ್ದರೆ, ಅದನ್ನು ಸ್ವಚ್ಛಗೊಳಿಸಿಯೇ ಬೆಳಗ್ಗಿನ ಅಡುಗೆಯನ್ನು ತಯಾರಿಸಬೇಕು. ಹೀಗೆ ಮಾಡುವುದರಿಂದ, ಮನೆಯಲ್ಲಿ ಎಂದಿಗೂ ಹಣ ಅಥವಾ ಆಹಾರದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದಲ್ಲದೆ, ಸ್ವಚ್ಛವಾದ ಒಲೆಯ ಮೇಲೆ ಅಡುಗೆ ಮಾಡುವುದರಿಂದ ಮನೆಯ ತುಂಬಾ ಸಕಾರಾತ್ಮಕ ಶಕ್ತಿ ಹರಡುತ್ತದೆ.

ಸ್ಲ್ಯಾಬ್ ಅಥವಾ ಕೌಂಟರ್‌ ಟಾಪ್‌ ಸ್ವಚ್ಛಗೊಳಿಸಬೇಕು:  ಮೊದಲು ಗ್ಯಾಸ್‌ ಸ್ಟೌವ್‌ ಸ್ವಚ್ಛಗೊಳಿಸಿ ನಂತರ, ಅಡುಗೆಮನೆಯ ಸ್ಲ್ಯಾಬ್ ಅಥವಾ ಕೌಂಟರ್‌ಟಾಪ್ ಕ್ಲೀನ್‌ ಮಾಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಕೊಳಕು ಸ್ಲ್ಯಾಬ್‌ನಲ್ಲಿ ಅಡುಗೆ ಮಾಡುವ ಅಭ್ಯಾಸ ರಾಹು ಮತ್ತು ಕೇತು ಗ್ರಹಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಕಾರಾತ್ಮಕ ಶಕ್ತಿ ಹರಡಬಹುದು. ಇನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ, ಕೌಂಟರ್‌ ಟಾಪ್‌ ಹೆಚ್ಚು ಬಳಸಲ್ಪಡುವುದರಿಂದ ರಾತ್ರಿಯಿಡೀ ಅನೇಕ ಸಣ್ಣ ಬ್ಯಾಕ್ಟೀರಿಯಾಗಳು ಅದರ ಮೇಲೆ ಸಂಗ್ರಹವಾಗಬಹುದು. ಹೀಗಿರುವಾ ಸ್ಲ್ಯಾಬ್‌ ಸ್ವಚ್ಛಗೊಳಿಸದೆ ಅದರ ಮೇಲೆ ಪಾತ್ರೆ, ಹಣ್ಣು ತರಕಾರಿಗಳನ್ನು ಇಟ್ಟಾಗ ಬ್ಯಾಕ್ಟೀರಿಯಾ ಈ ವಸ್ತುಗಳಿಗೂ ಹರಡುತ್ತದೆ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಗ್ಯಾಸ್‌ ಸ್ಟೌವ್‌ ಸ್ವಚ್ಛಗೊಳಿಸಿದ ಬಳಿಕ ಸ್ವಚ್ಛ ಬಟ್ಟೆಯಿಂದ ಕೌಂಟರ್‌ ಟಾಪ್‌ ಕ್ಲೀನ್‌ ಮಾಡಿ.

ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ಬೆಳೆಸ್ಬೋದು ತಾಜಾ ಕೊತ್ತಂಬರಿ ಸೊಪ್ಪು; ನಿಮಗಾಗಿ ಇಲ್ಲಿದೆ ಸಲಹೆ

ಅಂತಿಮವಾಗಿ ಸಿಂಕ್ ಸ್ವಚ್ಛಗೊಳಿಸಿ:  ಗ್ಯಾಸ್‌ ಒಲೆ ಮತ್ತು ಸ್ಲ್ಯಾಬ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ, ಅಂತಿಮವಾಗಿ ಸಿಂಕ್ ಅನ್ನು ಸ್ವಚ್ಛಗೊಳಿಸಬೇಕು. ರಾತ್ರಿ ಉಪಯೋಗಿಸಿದ ಪಾತ್ರೆಗಳು ಸಿಂಕ್‌ನಲ್ಲಿ ಹಾಗೆಯೇ ಇದ್ದರೆ, ಬೆಳಿಗ್ಗೆ ಅವುಗಳನ್ನು ಮೊದಲು ತೊಳೆಯಿರಿ. ನಂಬಿಕೆಗಳ ಪ್ರಕಾರ, ಸಿಂಕ್‌ನಲ್ಲಿ ಕೊಳಕು ಅಥವಾ ದುರ್ವಾಸನೆಯು ಬಡತನಕ್ಕೆ ದಾರಿ ಮಾಡಿಕೊಡುತ್ತದೆ,  ವ್ಯರ್ಥ ಖರ್ಚನ್ನು ಹೆಚ್ಚಿಸುತ್ತದೆ, ಅದೇ ಸಿಂಕ್ ಸ್ವಚ್ಛವಾಗಿದ್ದರೆ ಸಕಾರಾತ್ಮಕತೆ ಹೆಚ್ಚುತ್ತದೆ. ಮನೆಯ ಸಮೃದ್ಧಿಯೂ ಹೆಚ್ಚುತ್ತದೆ.

ಅಡುಗೆ ಮನೆಯ ಸ್ವಚ್ಛತೆಯ ಬಗೆಗಿನ ಈ ಕೆಲವು ಅಂಶಗಳನ್ನು ಸಹ ಪಾಲಿಸಿ:

  • ನೀವು ರಾತ್ರಿ ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ಎಂದಿಗೂ ಬಿಡಬಾರದು. ಮಲಗುವ ಮುನ್ನ ಎಲ್ಲಾ ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಏಕೆಂದರೆ ರಾತ್ರಿಯಿಡೀ ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ಬಿಡುವುದು ವಾಸ್ತು ಹಾಗೂ ಆರೋಗ್ಯ ಇವೆರಡರ ದೃಷ್ಟಿಯಿಂದಲೂ ಒಳ್ಳೆಯದಲ್ಲ.
  • ಅಡುಗೆಮನೆ ಸ್ವಚ್ಛಗೊಳಿಸುವ ಬಟ್ಟೆಗಳನ್ನು ಪ್ರತಿದಿನ ಚೆನ್ನಾಗಿ ತೊಳೆದು ಒಣಗಿಸಬೇಕು, ಏಕೆಂದರೆ ಕೊಳಕು ಬಟ್ಟೆಗಳು ಅಡುಗೆಮನೆಯಲ್ಲಿ ಅನಾರೋಗ್ಯ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ.
  • ಇದಲ್ಲದೆ, ಬೆಳಿಗ್ಗೆ ಅಡುಗೆ ಮಾಡುವ ಮೊದಲು, ನೀವು ನೆಲವನ್ನು ಗುಡಿಸಬೇಕು ಅಥವಾ ಲಘುವಾಗಿ ಒರೆಸಬೇಕು. ಇದು ರಾತ್ರಿಯ ಧೂಳನ್ನು ತೆಗೆದುಹಾಕುತ್ತದೆ ಮತ್ತು ಅಡುಗೆಮನೆಯಲ್ಲಿ ತಾಜಾ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ: ವಿಡಿಯೋ ನೋಡಿ – Kannada News | Daughter in Law Bhavani Revanna Shares Heartfelt Memories of Mother in Law Chennamma, Watch Video

ಹಾಸನ, ಜುಲೈ 30: ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇಗುಲದ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯ ಮಾಡಲಾಯಿತು. ಎಡೆಯನ್ನ ಹೊಲದಲ್ಲಿ ಇಟ್ಟು ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ‘ಅಮ್ಮ ಹಾಸನಕ್ಕೆ ಬಂದಾಗ ನನ್ನ ಜೊತೆಯೇ ಇರುತ್ತಿದ್ದರು. ದೇವರ ಮನೆಗೆ ಹೋದರೆ ಎರಡು ಮೂರು ಗಂಟೆಯಾದರೂ ಪೂಜೆ ಮುಗುಯುತ್ತಿರಲಿಲ್ಲ. ನಾವು ಅಮ್ಮ ಯಾವ ದೇವರ ಜೊತೆ ಮಾತಾಡಿದ್ರಿ ಎಂದರೆ ನಕ್ಕು ಸುಮ್ಮನಾಗುತ್ತಿದ್ದರು. ರೇವಣ್ಣ ಅವರ ಪಾಲಿಗೆ ತಂದೆ-ತಾಯಿ ಎಂದರೆ ದೇವರ ಸಮಾನ. ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಬಂದರೆ ನಾನಿದ್ದರೂ ಮೊದಲು ಅಮ್ಮನಿಗೆ ಪ್ರಸಾದ ಕೊಡುತ್ತಿದ್ದರು. ನಮಗೆ ಎಲ್ಲಾ ವಿಷಯದಲ್ಲಿ ಅವರೇ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಯಾವುದೇ ರಾಜಕಾರಣಿ ಅಲ್ಲ, ಸಿನಿಮಾ ಸ್ಟಾರ್ ಅಲ್ಲ, ಆದರೂ ಅವರು ಗಳಿಸಿರುವ ಪ್ರೀತಿ ದೊಡ್ಡದು. ಅತ್ತೆಗೆ ಚಕ್ಕುಲಿ, ಮೈಸೂರು ಪಾಕ್​​ ಅಂದ್ರೆ ತುಂಬಾ ಇಷ್ಟ’ ಎಂದು ಭಾವುಕರಾದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಕೆಲವು ಸಂದರ್ಭಗಳಲ್ಲಿ ಪೆಲೆಟ್ ಗನ್ ಬಳಕೆ ಕಾನೂನುಬದ್ಧ; ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ – Kannada News | Supreme Court permits pellet gun use in exceptional cases duriong Jantar Mantar Protest Hearing

ನವದೆಹಲಿ, ಜುಲೈ 30: ಪ್ರತಿಭಟನೆಗಳನ್ನು ನಿಯಂತ್ರಿಸಲು ಅನಿವಾರ್ಯ ಪರಿಸ್ಥಿತಿಗಳಲ್ಲಿ ಪೆಲೆಟ್ ಗನ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡುವ ಪ್ರಸ್ತುತ ಕಾನೂನು ನಿಯಮಗಳನ್ನು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಗೊಳಿಸದ ಹೊರತು ಅವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಸ್ಪಷ್ಟಪಡಿಸಿದೆ. ದೆಹಲಿಯ ಜಂತರ್​ಮಂತರ್​​ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಸಲಾಗಿತ್ತು. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಹಲವು ಪ್ರತಿಭಟನಾಕಾರರು ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದರು. ಈ ಘಟನೆಯ ಅರ್ಜಿಗಳ ಸರಣಿ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್

ಏನಿದು ಘಟನೆ?:

ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ (NEET) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ್ದ ಪೆಲೆಟ್ ಗನ್ ದಾಳಿಯಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಘಟನೆಯ ಬೆನ್ನಲ್ಲೇ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ನಿಭಾಯಿಸಲು ಲೋಹದ ಪೆಲೆಟ್ ಗನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠವು, ಪ್ರಸ್ತುತ ಚಾಲ್ತಿಯಲ್ಲಿರುವ ಪೊಲೀಸ್ ಮಾರ್ಗಸೂಚಿಗಳು ಮತ್ತು ಕಾನೂನು ನಿಯಮಗಳು ಪೆಲೆಟ್ ಗನ್ ಬಳಕೆಗೆ ಅನುಮತಿ ನೀಡುತ್ತವೆ. ಹೀಗಾಗಿ ಆ ನಿಯಮಗಳು ಕಾನೂನುಬದ್ಧವಾಗಿ ಇರುವವರೆಗೆ ಅವುಗಳ ಬಳಕೆಯನ್ನು ನೇರವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.

ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ

ಪೆಲೆಟ್ ಗನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರಾಕರಿಸಿದರೂ, ಪ್ರತಿಭಟನೆಯ ವೇಳೆ ಭದ್ರತಾ ಸಿಬ್ಬಂದಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆಯೇ ಅಥವಾ ನಿಯಮಗಳನ್ನು ಮೀರಿ ಪೆಲೆಟ್ ಗನ್ ಬಳಸಲಾಗಿದೆಯೇ ಎಂಬ ನಿರ್ದಿಷ್ಟ ದುರ್ಬಳಕೆಯ ಆರೋಪಗಳನ್ನು ಕೋರ್ಟ್ ಪ್ರತ್ಯೇಕವಾಗಿ ಪರಿಶೀಲಿಸಲಿದೆ.

ಹಾಗೇ, ಈ ಘಟನೆಯಲ್ಲಿ ಗಾಯಗೊಂಡಿರುವ ಪ್ರತಿಭಟನಾಕಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರವು ತಕ್ಷಣವೇ ಅತ್ಯುತ್ತಮ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:12 pm, Thu, 30 July 26

Source link

ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಐಐಟಿ ಕಾನ್ಪುರದ ವೆಬ್‌ಸೈಟನ್ನೇ ಹ್ಯಾಕ್​​ ಮಾಡಿ ಸಾಮರ್ಥ್ಯ ಪ್ರದರ್ಶಿಸಿದ ಅಭ್ಯರ್ಥಿ! – Kannada News | Candidate Hacks IIT Kanpur Website After Admission Denial; Director Invites Him to Prove Talent

ಕಾನ್ಪುರ, ಜುಲೈ 30: ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಿಸಲ್ಪಟ್ಟ ಕಾರಣ ಅಭ್ಯರ್ಥಿಯೋರ್ವ ಐಐಟಿ ಕಾನ್ಪುರದ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದ ಅಭ್ಯರ್ಥಿ, ತನಗೆ ಬೇಕಾಗಿರುವುದು ಕೇವಲ ನ್ಯಾಯಯುತ ಅವಕಾಶ ಮಾತ್ರ. ತನ್ನ ಉದ್ದೇಶ ಐಐಟಿ ಕಾನ್ಪುರ ಅಥವಾ ಅದರ ವೆಬ್‌ಸೈಟ್‌ಗೆ ಹಾನಿ ಮಾಡುವುದು ಅಲ್ಲ, ಬದಲಾಗಿ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿನ ತನ್ನ ಸಾಮರ್ಥ್ಯವನ್ನು ತೋರಿಸುವುದೇ ಎಂದು ಸ್ಪಷ್ಟಪಡಿಸಿದ್ದಾನೆ.

ಅಭ್ಯರ್ಥಿ ಹೇಳಿದ್ದೇನು?

ಆಯ್ಕೆ ಪ್ರಕ್ರಿಯೆಯ ಭಾಗವಾಗಿದ್ದ ಹ್ಯಾಕಥಾನ್‌ನಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಲಿಲ್ಲ. ನಾನು ಪ್ರವೇಶ ಶುಲ್ಕ ಪಾವತಿಸಿದ್ದೆ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದೆ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿನ ನನ್ನ ಕೆಲಸದ ಸಾಕ್ಷ್ಯಗಳನ್ನೂ ಸಲ್ಲಿಸಿದ್ದೆ. ಆದರೂ ನನ್ನನ್ನು ಆಯ್ಕೆ ಮಾಡಲಿಲ್ಲ ಎಂದು ಅಭ್ಯರ್ಥಿ ಆರೋಪಿಸಿದ್ದಾನೆ.

ಇದನ್ನೂ ಓದಿ: ಅಪ್ಪ ಎಲ್ಲಿ ಎಂದು ಕೇಳ್ಬೇಡ, ಅಮ್ಮನನ್ನ ಚೆನ್ನಾಗಿ ನೋಡಿಕೋ, ಕ್ಯಾನ್ಸರ್​ನಿಂದ ಕಣ್ಮುಚ್ಚುವ ಮುನ್ನ ಮಗನಿಗೆ ಧೈರ್ಯ ತುಂಬಿದ ತಂದೆ

ಸಾಮರ್ಥ್ಯ ಮರುಪರಿಶೀಲಿಸಲು ನಿರ್ಧಾರ

ಈ ಘಟನೆಗೆ ಸಂಬಂಧಿಸಿದಂತೆ ಐಐಟಿ ಕಾನ್ಪುರ ನಿರ್ದೇಶಕ ಪ್ರೊ. ಮನೀಂದ್ರ ಅಗರ್ವಾಲ್ ಅವರು ಪೊಲೀಸರಿಗೆ ದೂರು ನೀಡದೇ, ಅಭ್ಯರ್ಥಿಯನ್ನು ಕ್ಯಾಂಪಸ್‌ಗೆ ಆಹ್ವಾನಿಸಿ ಅವನ ಸಾಮರ್ಥ್ಯವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದಾರೆ. ಅಭ್ಯರ್ಥಿ ನಿಜವಾಗಿಯೂ ಪ್ರತಿಭಾವಂತನಾಗಿದ್ದರೆ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ನಾವು ಅವಕಾಶ ನೀಡುತ್ತೇವೆ. ಅದರ ಆಧಾರದ ಮೇಲೆ ಪ್ರವೇಶ ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಭ್ಯರ್ಥಿ ಈ ರೀತಿ ಮಅಡಿರುವುದು ಸರಿಯಾದ ಮಾರ್ಗವಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ಹ್ಯಾಕಥಾನ್‌ನಲ್ಲಿ ಭಾಗವಹಿಸಲು ಅವಕಾಶವೇ ನೀಡಲಾಗಿರಲಿಲ್ಲ ಎಂಬ ಅಭ್ಯರ್ಥಿಯ ಆರೋಪವನ್ನೂ ತಳ್ಳಿಹಾಕಿದ್ದಾರೆ. ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಹ್ಯಾಕಥಾನ್‌ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಆದರೆ, ಆಯ್ಕೆ ಪ್ರಕ್ರಿಯೆಯ ವೇಳೆ ಸಂಬಂಧಿಸಿದ ಅಭ್ಯರ್ಥಿ ತನ್ನ ಹ್ಯಾಕಿಂಗ್ ಕೌಶಲ್ಯದ ಬಗ್ಗೆ ಸಮರ್ಪಕ ಸಾಕ್ಷ್ಯ ಒದಗಿಸಲು ವಿಫಲನಾಗಿದ್ದ ಎಂದು ಪ್ರೊ. ಮನೀಂದ್ರ ಅಗರ್ವಾಲ್ ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:23 pm, Thu, 30 July 26

Source link

ಐಐಟಿ ಪ್ರಾಧ್ಯಾಪಕರನ್ನು ಗೋಮೂತ್ರ ತಜ್ಞ ಎಂದಿದ್ದ ಪ್ರಿಯಾಂಕಾ ಗಾಂಧಿ; 215ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ತೀವ್ರ ಖಂಡನೆ – Kannada News | 215 academicians wrote letter to priyanka gandhi slams her for gaumutra expert remark on v kamakoti

ನವದೆಹಲಿ, ಜುಲೈ 30: ಕೇಂದ್ರ ಸರ್ಕಾರದಿಂದ ಪರೀಕ್ಷಾ ಸುಧಾರಣೆಗಳಿಗಾಗಿ ರಚಿಸಲಾದ ಹೊಸ ಕಾರ್ಯಪಡೆಯ ಸದಸ್ಯರೂ ಆಗಿರುವ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಕುರಿತು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ನೀಡಿದ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಸಿದ್ಧ ವಿಜ್ಞಾನಿಯೊಬ್ಬರ ಶೈಕ್ಷಣಿಕ ಅರ್ಹತೆ ಮತ್ತು ಸಾಧನೆಗಳನ್ನು ಕೀಳಾಗಿ ಕಂಡಿದ್ದಕ್ಕಾಗಿ 215 ಹಾಲಿ ಮತ್ತು ಮಾಜಿ ಕುಲಪತಿಗಳು ಹಾಗೂ ಶಿಕ್ಷಣತಜ್ಞರು ಪ್ರಿಯಾಂಕಾ ಗಾಂಧಿಯವರ ವಿರುದ್ಧ ಬಹಿರಂಗ ಪತ್ರ ಬರೆದು ತೀವ್ರವಾಗಿ ಖಂಡಿಸಿದ್ದಾರೆ.

3 ಪುಟಗಳ ಪತ್ರ ಬರೆದಿರುವ ಶಿಕ್ಷಣ ತಜ್ಞರು ಪ್ರಿಯಾಂಕಾ ಗಾಂಧಿಯವರನ್ನು ತರಾಟೆಗೆ ತೆಗದುಕೊಂಡಿದ್ದಾರೆ. “ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರನ್ನು ‘ಗೋಮೂತ್ರ ತಜ್ಞ’ ಎಂದು ಟೀಕಿಸಿರುವ ನಿಮ್ಮ ಹೇಳಿಕೆಯ ಕುರಿತು ನಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇವೆ. ಇದನ್ನು ವ್ಯಂಗ್ಯಕ್ಕಾಗಿ ಹೇಳಿರಲಿ ಅಥವಾ ರಾಜಕೀಯ ಭಾಷಣಕ್ಕಾಗಿ ಹೇಳಿರಲಿ ಇಂತಹ ಹೇಳಿಕೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ವಿಚಾರಗಳ ಸಾರಾಂಶವನ್ನು ಗ್ರಹಿಸಿ ಚರ್ಚಿಸುವ ಬದಲಿಗೆ ವಿದ್ವಾಂಸರೊಬ್ಬರ ವ್ಯಕ್ತಿತ್ವಕ್ಕೆ ಲೇಬಲ್ ಅಂಟಿಸಿ ಟೀಕಿಸುವುದು ಸರಿಯಲ್ಲ. ನಮ್ಮ ವಿಜ್ಞಾನಿಗಳು, ವಿದ್ವಾಂಸರು ಮತ್ತು ಶಿಕ್ಷಣತಜ್ಞರು ಅಪಹಾಸ್ಯದ ಲೇಬಲ್‌ಗಳಿಗೆ ತುತ್ತಾಗುವ ಭಯವಿಲ್ಲದೇ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಬಹುದು ಎಂಬ ಭರವಸೆಗೆ ಅರ್ಹರು” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರೊ. ಕಾಮಕೋಟಿ ಸಾಧನೆಗಳ ವಿವರ:

215 ವ್ಯಕ್ತಿಗಳು ಸಹಿ ಮಾಡಿರುವ ಈ ಬಹಿರಂಗ ಪತ್ರದಲ್ಲಿ ಪ್ರೊ. ಕಾಮಕೋಟಿ ಅವರ ಶೈಕ್ಷಣಿಕ ಕೊಡುಗೆಗಳನ್ನು ಎತ್ತಿಹಿಡಿಯಲಾಗಿದೆ. ಪ್ರೊ. ಕಾಮಕೋಟಿ ಭಾರತದ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾದ ಐಐಟಿ ಮದ್ರಾಸ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಷಯದಲ್ಲಿ ಐಐಟಿ ಮದ್ರಾಸ್‌ನಿಂದ ಎಂ.ಎಸ್ (M.S.) ಮತ್ತು ಪಿಎಚ್.ಡಿ (Ph.D.) ಪದವಿ ಪಡೆದಿದ್ದಾರೆ. ಅವರು 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 50ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರು ಹೇಡಿಗಳು, ನಮಗೆ ಹೆದರುತ್ತಿದ್ದಾರೆ; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ

ಕಾಮಕೋಟಿ ಅವರ ಹೆಸರಿನಲ್ಲಿ ‘ಡಿಆರ್‌ಡಿಒ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್’ ಮತ್ತು ‘ಇಂಡಿಯನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಟೆಕ್ನೋ ವಿಷನರಿ ಅವಾರ್ಡ್’ ನಂತಹ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿವೆ. ಭಾರತದ ಮೊದಲ ಉದ್ಯಮ ಮಟ್ಟದ ಮೈಕ್ರೋಪ್ರೊಸೆಸರ್ ಆಗಿರುವ ಶಕ್ತಿ- SHAKTIಯನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಮಾರ್ಗದರ್ಶಿ ಶಕ್ತಿಯಾಗಿದ್ದಾರೆ.

“ಕಾಮಕೋಟಿ ಅವರಂತಹ ಸಾಧಕರ ಬಗ್ಗೆ ನೀಡುವ ಹೇಳಿಕೆಗಳು ಭಾರತದ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ರವಾನಿಸುವ ಸಂದೇಶ ಆತಂಕಕಾರಿಯಾಗಿದೆ. ನಮ್ಮ ವಿಜ್ಞಾನಿಗಳು ಮತ್ತು ವಿದ್ವಾಂಸರು ಅಪಹಾಸ್ಯದ ಲೇಬಲ್‌ಗಳಿಗೆ ತುತ್ತಾಗುವ ಭಯವಿಲ್ಲದೆ ಸಂವಾದಗಳಲ್ಲಿ ಭಾಗವಹಿಸುವಂತಾಗಬೇಕು. ಅವರ ವಾದಗಳನ್ನು ವಿಮರ್ಶಿಸಿ, ಸಾಕ್ಷ್ಯಗಳನ್ನು ಸವಾಲು ಮಾಡಿ, ಆಧಾರಗಳನ್ನು ಕೇಳಿ. ಆದರೆ ವಿದ್ವತ್ತಿನ ಅಸ್ತಿತ್ವವನ್ನೇ ಕೀಳಾಗಿ ಕಾಣಬೇಡಿ” ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: ‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಮಂಗಳವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ರ ಮೇಲಿನ ಚರ್ಚೆಯ ವೇಳೆ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ನೀಡಿದ್ದರು. ಅವರು ಭಾಷಣದಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಮಾತುಗಳು ಪ್ರೊ. ವಿ. ಕಾಮಕೋಟಿ ಅವರನ್ನು ಉದ್ದೇಶಿಸಿಯೇ ಹೇಳಿದ್ದೆಂದು ಸ್ಪಷ್ಟವಾಗಿ ತಿಳಿದುಬಂದಿತ್ತು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version