40 ಲಕ್ಷ ರೂ ವರದಕ್ಷಿಣೆ, ಸಂಬಳಕ್ಕಾಗಿ ಗಲಾಟೆ: ಚೇಂಬರ್​​​ಗೆ ನುಗ್ಗಿ ಹೆತ್ತ ಮಗಳಿಗೆ ಚಾಕುವಿನಿಂದ ಇರಿದ ತಂದೆ! – Kannada News | Father Stabs Daughter at College Over Marriage and Salary Dispute

ತಂದೆ ನಾಗೇಂದ್ರ, ಮಗಳು ಲಕ್ಷ್ಮೀದುರ್ಗಾImage Credit source: tv9 kannada

ದೇವನಹಳ್ಳಿ, ಜುಲೈ 30: ಮದುವೆ ವಿಚಾರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ವಿರೋಧಿಸಿದ ಕಾರಣಕ್ಕೆ ಕಾಲೇಜ್​ನ​​ ಚೇಂಬರ್​​ಗೆ ನುಗ್ಗಿ ಕೆಲಸ ಮಾಡುತ್ತಿದ್ದ ಮಗಳಿಗೆ (Daughter) ಚಾಕುವಿನಿಂದ ಇರಿದು ತಂದೆ (Father) ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಜುಲೈ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗಳು ಲಕ್ಷ್ಮೀದುರ್ಗಾಗೆ ಚಾಕುವಿನಿಂದ ಇರಿದ ತಂದೆ ನಾಗೇಂದ್ರನನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಆರೋಪಿ ನಾಗೇಂದ್ರ ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದು, ಲಕ್ಷ್ಮೀದುರ್ಗಾ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪೋಷಕರು ಮಗಳಿಗೆ ಮದುವೆ ಮಾಡಬೇಕೆಂದು ಗಂಡು ನೋಡಿದ್ದರು.  ಮದುವೆ ಮಾಡಿಕೊಳ್ಳಲು ಹುಡುಗನ ಮನೆಯವರು ಕೂಡ ಒಪ್ಪಿಕೊಂಡಿದ್ದರು. ಆದರೆ ಮಗಳು ಲಕ್ಷ್ಮೀದುರ್ಗಾಳನ್ನು ಕಷ್ಟಪಟ್ಟು ಓದಿಸಿದ್ದೇನೆ. ಮದುವೆಯಾಗಲು 40 ಲಕ್ಷ ರೂ ಕೊಡಬೇಕೆಂದು ಹುಡುಗನ ಬಳಿ ನಾಗೇಂದ್ರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಇನ್ನೊಂದೆಡೆ ಮಗಳ ಪ್ರತಿ ತಿಂಗಳ ಸಂಬಳವನ್ನೂ ನನಗೇ ಕೊಡಬೇಕೆಂದು ಕೇಳಿದ್ದರು. ನಾಗೇಂದ್ರನ ಈ ಬೇಡಿಕೆಗಳಿಗೆ ಹೆಂಡತಿ ಮತ್ತು ಮಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಳಿಕ ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಜಗಳವಾಗಿತ್ತು.

ಚೇಂಬರ್​ನಲ್ಲೇ ಚಾಕು ಇರಿತ

ಇನ್ನು ಕೋಪದಲ್ಲಿ ನಾಗೇಂದ್ರ, ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿಗೆ ಬಂದಿದ್ದಾರೆ. ಹೆಚ್‌ಒಡಿ ಕ್ಯಾಬಿನ್​​ಗೆಎ​​ ಹೋಗಿ ಪುತ್ರಿಯನ್ನ ನೋಡಬೇಕು ಎಂದಿದ್ದಾರೆ. ಲಕ್ಷ್ಮೀದುರ್ಗಾ ಆಗಮಿಸುತ್ತಿದ್ದಂತೆ ಚೇಂಬರ್​ನಲ್ಲೇ ಹೊಟ್ಟೆ, ಎದೆ, ಕುತ್ತಿಗೆಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ!

ಭೀಕರ ದಾಳಿಗೆ ಒಳಗಾಗಿರುವ ಲಕ್ಷ್ಮೀದುರ್ಗಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಾನುಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:35 pm, Thu, 30 July 26

Source link

ಕಾವೇರಿ ನೀರು ಮಧ್ಯೆ ಕರ್ನಾಟಕಕ್ಕೆ ಮತ್ತೊಂದು ಶಾಕ್, ಮೇಕೆದಾಟು ಡಿಪಿಆರ್ ವಾಪಸ್ – Kannada News | Karnataka Mekedatu Project DPR returned By CWC finds proposal violates Cauvery tribunal award

ಬೆಂಗಳೂರು, (ಜುಲೈ 30): ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ( Mekedatu Project ) ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೆರಿಯಂತಹ ನೆರೆ ರಾಜ್ಯಗಳ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಹೇಳಿತ್ತು. ಇದು ಕರ್ನಾಟಕಕ್ಕೆ ಮತ್ತಷ್ಟು ಬಲ ತಂದಿತ್ತು. ಆದ್ರೆ, ಇದೀಗ ಇದೇ ಕೇಂದ್ರ ಜಲ ಆಯೋಗ (CWC) ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿ (DPR)ಯನ್ನು ವಾಪಸ್ ಕಳುಹಿಸಿದೆ. ಯೋಜನಾ ಪ್ರಸ್ತಾವನೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ನೀಡಿರುವ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ನೀರಿನ ಬಳಕೆಯ ಪ್ರಮಾಣ ಹೆಚ್ಚಿಸಿದ್ದ ಕರ್ನಾಟಕ ಸರ್ಕಾರ, ಬೆಂಗಳೂರಿನ ಕುಡಿಯುವ ನೀರಿಗಾಗಿ 6.95 TMC ನೀರು ಕೇಳಿತ್ತು. ಹೀಗಾಗಿ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಕೇಳಿರುವ ಕೇಂದ್ರ ಜಲ ಆಯೋಗ, ಡಿಪಿಆರ್​​ ಅನ್ನು ವಾಪಸ್ ಕಳುಹಿಸಿದ್ದು, ಡಿಪಿಆರ್‌ನಲ್ಲಿರುವ ಕೆಲ ಅಂಶ ಮಾರ್ಪಡಿಸಿ ಪರಿಷ್ಕೃತ ವಿಸ್ತ್ರತ ಯೋಜನಾ ವರದಿ ಸಲ್ಲಿಸುವಂತೆ ಸಿಡಬ್ಲ್ಯುಸಿ ಸೂಚಿಸಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ

 CWC ಡಿಪಿಆರ್ ವಾಪಸ್ ಕಳುಹಿಸಿದ್ಯಾಕೆ?

2018ರಲ್ಲಿ ಕರ್ನಾಟಕವು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ 4.75 ಟಿಎಂಸಿ ಅಡಿ ನೀರಿನ ಬಳಕೆಯನ್ನು ಪ್ರಸ್ತಾಪಿಸಿ, ಸುಮಾರು 23.75 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಡಿಪಿಆರ್‌ ಸಲ್ಲಿಸಿ ತಾತ್ವಿಕ ಒಪ್ಪಿಗೆ ಪಡೆದಿತ್ತು.ಆದರೆ, 2026ರ ಏಪ್ರಿಲ್‌ನಲ್ಲಿ ಸಲ್ಲಿಸಿದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಬಳಕೆಯ ಪ್ರಮಾಣವನ್ನು 6.95 ಟಿಎಂಸಿ ಅಡಿಗೆ ಹೆಚ್ಚಿಸಲಾಗಿದೆ. ಕಾವೇರಿಗೆ ಅಡ್ಡಲಾಗಿ ತಿರುವು ತಡೆಗೋಡೆ ನಿರ್ಮಿಸುವ ಶಿವನಸಮುದ್ರ ನದಿ ಹರಿವು ವಿದ್ಯುತ್‌ ಯೋಜನೆಯನ್ನು ಹೊಸ ಘಟಕವಾಗಿ ಡಿಪಿಆರ್‌ನಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ ಸೇರಿಸಲಾಗಿದೆ.

2044ರ ವೇಳೆಗೆ ಬೆಂಗಳೂರಿನ ನೀರಿನ ಅಗತ್ಯ 64 ಟಿಎಂಸಿ ಅಡಿ ಎಂದು ಅಂದಾಜಿಸಿರುವ ರಾಜ್ಯ ಸರ್ಕಾರ, 1990ರ ಹಳೆಯ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡಿದೆ. ಆದರೆ ಸುಪ್ರೀಂ ಕೋರ್ಟ್‌ ತನ್ನ 2018ರ ತೀರ್ಪಿನಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಒಟ್ಟು ಕುಡಿಯುವ ನೀರಿನ ಅಗತ್ಯವನ್ನು 33 ಟಿಎಂಸಿ ಅಡಿಗೆ (ಬೆಂಗಳೂರಿಗೆ ಮಾತ್ರ 24 ಟಿಎಂಸಿ ಅಡಿ) ಮಿತಿಗೊಳಿಸಿದೆ.

ಒಟ್ಟು 59.46 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಕರ್ನಾಟಕದ ಸಮರ್ಥನೆಯು ಪ್ರಸ್ತುತ ದತ್ತಾಂಶಗಳಿಲ್ಲದೆ ಹಳೆಯ ಅಂಕಿಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನೀರಿಗಾಗಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ವೆಂಕಟೇಶ್ ಗರಂ – Kannada News | Rockline Venkatesh reacts to Kannada Film Industry Unity over Cauvery Issue

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೆ ತಕರಾರು ಆರಂಭ ಆಗಿದೆ. ಈ ವರ್ಷ ನಿರೀಕ್ಷೆಯ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ ಕರ್ನಾಟಕದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಹೀಗಿರುವಾಗ ತಮಿಳುನಾಡಿನ ಜನರ ಕೃಷಿಗಾಗಿ ನೀರು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಕನ್ನಡ ಚಿತ್ರರಂಗ (Kannada Film Industry) ಕೂಡ ಬೆಂಬಲ ನೀಡುತ್ತಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇದೆಯಾ? ಎಲ್ಲರೂ ಈ ಹೋರಾಟಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ನಡೆಸಿದ ಸುದ್ದಿಗೋಷ್ಠಿ ವೇಳೆ ಈ ಪ್ರಶ್ನೆ ಕೇಳಿಬಂದಿದ್ದಕ್ಕೆ ರಾಕ್​ಲೈನ್ ವೆಂಕಟೇಶ್ ಅವರು ಗರಂ ಆದರು. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CWG 2026: ಜಾವೆಲಿನ್ ಥ್ರೋ ಫೈನಲ್​ ಸುತ್ತಿಗೆ ಅರ್ಹತೆ ಪಡೆದ ಮೂವರು ಭಾರತೀಯರು – Kannada News | CWG 2026 Javelin: Neeraj Chopra, Rohit, Yashveer Qualify for Finals

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದ 8ನೇ ದಿನದಂದು ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು ಇಂದು ನಡೆಯಿತು. ಈ ಸುತ್ತಿನಲ್ಲಿ ಭಾರತದಿಂದ ಮೂವರು ಜಾವೆಲಿನ್ ಎಸೆತಗಾರರು ಭಾಗವಹಿಸಿದ್ದರು. ಅವರಲ್ಲಿ ಸ್ಟಾರ್ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ, ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಸೇರಿದ್ದರು. ಈ ಮೂವರು ಜಾವೆಲಿನ್ ಥ್ರೋ ಫೈನಲ್‌ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರೂ ಅಗ್ರ 12 ರಲ್ಲಿ ಸ್ಥಾನ ಪಡೆದು ಪದಕ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಐದನೇ ಸ್ಥಾನ ಪಡೆದರೆ, ರೋಹಿತ್ ಯಾದವ್ ಒಂಬತ್ತನೇ ಸ್ಥಾನ ಮತ್ತು ಯಶ್ವೀರ್ ಸಿಂಗ್ ಹತ್ತನೇ ಸ್ಥಾನ ಪಡೆದರು. ಶ್ರೀಲಂಕಾದ ರುಮೇಶ್ ಪತಿರಗೆ 82.84 ಮೀಟರ್ ಎಸೆಯುವ ಮೂಲಕ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದರೆ, ಪಾಕಿಸ್ತಾನದ ಅರ್ಷದ್ ನದೀಮ್ (78.63 ಮೀ) ಏಳನೇ ಸ್ಥಾನ ಪಡೆದರು.

ಪದಕ ಸುತ್ತಿನಲ್ಲಿ ಭಾರತೀಯರ ಪ್ರಾಬಲ್ಯ

2018 ರಲ್ಲಿ ಚಿನ್ನ ಗೆದ್ದಿದ್ದ ಚೋಪ್ರಾ ಅರ್ಹತಾ ಸುತ್ತಿನಲ್ಲಿ 79.61 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಐದನೇ ಸ್ಥಾನ ಪಡೆದರೆ, ರೋಹಿತ್ ಯಾದವ್ 78.37 ಮೀ ಮತ್ತು ಯಶ್ವೀರ್ ಸಿಂಗ್ 78.36 ಮೀ ಭರ್ಜಿ ಎಸೆಯುವ ಮಲಕ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಒಂಬತ್ತನೇ ಮತ್ತು 10 ನೇ ಸ್ಥಾನ ಪಡೆದರು. ಈ ಮೂಲಕ ಪದಕ ಸುತ್ತಿನಲ್ಲಿ ಪೂರ್ಣ ಭಾರತೀಯ ತಂಡ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಯಶ್ವೀರ್ ಮೊದಲ ಸುತ್ತಿನಲ್ಲಿ 73.89 ಮೀಟರ್ ದೂರ ಎಸೆದರೆ, ಎರಡನೇ ಸುತ್ತಿನಲ್ಲಿ 74.45 ಮೀಟರ್‌ ಮತ್ತು ಅಂತಿಮ ಪ್ರಯತ್ನದಲ್ಲಿ 78.36 ಮೀಟರ್ ದೂರವನ್ನು ಎಸೆಯುವ ಮೂಲಕ ಅರ್ಹತೆ ಪಡೆದರು. ಹಾಗೆಯೇ ರೋಹಿತ್ ಮೊದಲ ಸುತ್ತಿನಲ್ಲಿ 77.04 ಮೀಟರ್, ಎರಡನೇ ಪ್ರಯತ್ನದಲ್ಲಿ 78.37 ಮೀಟರ್‌ ದೂರ ಎಸೆಯುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡರು. ಇತ್ತ ಮಾಜಿ ವಿಶ್ವ ಚಾಂಪಿಯನ್ ನೀರಜ್ ಮೊದಲ ಸುತ್ತಿನಲ್ಲಿ 76.28 ಮೀಟರ್ ದೂರ ಎಸೆತದರೆ, ಎರಡನೇ ಪ್ರಯತ್ನದಲ್ಲಿ 79.61 ಮೀಟರ್‌ ದೂರ ಎಸೆಯುವ ಮೂಲಕ ಫೈನಲ್​ಗೆ ಅರ್ಹತೆ ಪಡೆದರು.

ಯಾರಿಗೂ ಗುರಿ ದಾಟಲು ಸಾಧ್ಯವಾಗಲಿಲ್ಲ

ನಿರಂತರ ಗಾಳಿ ಮತ್ತು 18 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಯಾವುದೇ ಸ್ಪರ್ಧಿಗೆ 84 ಮೀಟರ್ ನಿಗದಿತ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ.ಇದರಿಂದಾಗಿ ಅಗ್ರ 12 ಕ್ರೀಡಾಪಟುಗಳಿಗೆ ಫೈನಲ್ ಸುತ್ತಿಗೆ ಅರ್ಹತೆ ನೀಡಲಾಯಿತು. ಈ ಸೀಸನ್​ನ ದೋಹಾ ಮತ್ತು ರೋಮ್ ಡೈಮಂಡ್ ಲೀಗ್​ನ ವಿಜೇತ ಶ್ರೀಲಂಕಾದ ಫಾರ್ಮ್‌ನಲ್ಲಿರುವ ರುಮೇಶ್ ತರಂಗ ಪತಿರಾಜ ಮೊದಲ ಸುತ್ತಿನಲ್ಲಿ 82.84 ಮೀಟರ್ ಎಸೆಯುವ ಮೂಲಕ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ – Kannada News | Cauvery issue, Film Chamber says Movie is industry is with Farmers

ಕಾವೇರಿ (Cauvery) ವಿವಾದ ಭುಗಿಲೆದ್ದಿದ್ದು, ರಾಜ್ಯದ ಹಲವೆಡೆ ರೈತರು, ಕನ್ನಡಪರ ಸಂಘಟನೆಗಳ ಸದಸ್ಯರು ತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು ಈಗಾಗಲೇ ಪ್ರತಿಭಟನೆಗೆ ಧುಮುಕಿದ್ದಾವೆ. ಕನ್ನಡ ಚಿತ್ರರಂಗ ಇಂದು (ಜುಲೈ 30) ಫಿಲಂ ಚೇಂಬರ್​​ನಲ್ಲಿ ಸಭೆ ನಡೆಸಿ, ಕಾವೇರಿ ವಿವಾದಕ್ಕೆ ಚಿತ್ರರಂಗ ಹೇಗೆ ಸ್ಪಂದಿಸಬೇಕು ಎಂಬುದನ್ನು ತೀರ್ಮಾನಿಸಿದೆ. ಸಭೆಯ ಬಳಿಕ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರು ಸುದ್ದಿಗೋಷ್ಠಿಯುದ್ದೇಶಿಸಿ ಮಾತನಾಡಿ, ಕನ್ನಡ ಚಿತ್ರರಂಗ ನೆಲ, ಜಲ, ಭಾಷೆಯ ವಿಷಯ ಬಂದಾಗ ಸುಮ್ಮನೆ ಕೂತಿಲ್ಲ. ಈ ಬಾರಿಯೂ ಚಿತ್ರರಂಗ ರೈತರ ಪರ ಇದೆ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರೇ ಎಚ್ಚರ! ಈ ಒಂದು ತಪ್ಪು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳಬಹುದು – Kannada News | Acanthamoeba Keratitis: The Hidden Eye Infection Every Contact Lens User Should Know

ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಅಮೂಲ್ಯ ಅಂಗಗಳಲ್ಲಿ ಒಂದಾಗಿವೆ. ಆದ್ದರಿಂದ ಅವುಗಳ ಆರೈಕೆಯಲ್ಲಿ ಸ್ವಲ್ಪ ನಿರ್ಲಕ್ಷ್ಯವೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಕಾಂಟ್ಯಾಕ್ಟ್ ಲೆನ್ಸ್ (Contact Lens) ಬಳಸುವವರು ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಅಪಾಯಕಾರಿ ಪರಾವಲಂಬಿಗಳು (Parasites) ಕಣ್ಣಿಗೆ ಪ್ರವೇಶಿಸಿ ದೃಷ್ಟಿಗೆ ಶಾಶ್ವತ ಹಾನಿ ಉಂಟುಮಾಡುವ ಸಾಧ್ಯತೆ ಇದೆ.

ಇತ್ತೀಚೆಗೆ ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಕುದುರೆ ಲಾಯವನ್ನು ಸ್ವಚ್ಛಗೊಳಿಸುವ ವೇಳೆ ಮಣ್ಣು ಮತ್ತು ಕೊಳಕು ನೀರು ಕಣ್ಣಿಗೆ ಬಿದ್ದಿದ್ದರಿಂದ ಅವರು ಮುಖವನ್ನು ಚೆನ್ನಾಗಿ ತೊಳೆದರು. ಆದರೆ ಕಾಂಟ್ಯಾಕ್ಟ್ ಲೆನ್ಸ್ ತೆಗೆದಿರಲಿಲ್ಲ. ಕೆಲವು ದಿನಗಳ ಬಳಿಕ ಕಣ್ಣಿನಲ್ಲಿ ತೀವ್ರ ನೋವು, ಕೆಂಪಾಗುವುದು ಹಾಗೂ ಮಸುಕಾದ ದೃಷ್ಟಿ ಕಾಣಿಸಿಕೊಂಡಿತು. ವೈದ್ಯಕೀಯ ಪರೀಕ್ಷೆಯಲ್ಲಿ ಅಕಂಥಾಮೋಬಾ ಅಥವಾ ಅಕಾಂತಮೀಬಾ (Acanthamoeba) ಎಂಬ ಅಪಾಯಕಾರಿ ಪರಾವಲಂಬಿಯಿಂದ ಅಕಾಂತಮೀಬಾ ಕೆರಟೈಟಿಸ್ (Acanthamoeba Keratitis) ಸೋಂಕು ತಗುಲಿರುವುದು ಪತ್ತೆಯಾಯಿತು. ಸೋಂಕಿನಿಂದ ಕಣ್ಣಿನ ಕಾರ್ನಿಯಾ ಹಾನಿಗೊಳಗಾಗಿದ್ದು, ಭವಿಷ್ಯದಲ್ಲಿ ಕಾರ್ನಿಯಾ ಟ್ರಾನ್ಸ್‌ಪ್ಲಾಂಟ್ ಅಗತ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಅಕಾಂತಮೀಬಾ ಎಂದರೇನು?

ಸೂಕ್ಷ್ಮ ಪರಾವಲಂಬಿಯಾಗಿದ್ದು, ಇದು ಮಣ್ಣು, ಧೂಳು, ಕೆರೆ ಮತ್ತು ನದಿ ನೀರು, ಕೊಳಕು ನೀರು, ಟ್ಯಾಪ್ ನೀರು, ಈಜುಕೊಳದ ನೀರಿನಲ್ಲಿ ಕಂಡುಬರುತ್ತದೆ. ಇದು ಕಣ್ಣಿನ ಕಾರ್ನಿಯಾಗೆ ತಗುಲಿದರೆ Acanthamoeba Keratitis ಎಂಬ ಗಂಭೀರ ಸೋಂಕು ಉಂಟಾಗಬಹುದು. ಈ ಸೋಂಕು ಹೆಚ್ಚಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಲ್ಲಿ ಕಂಡುಬರುತ್ತದೆ.

ಈ ಸೋಂಕಿನ ಪ್ರಮುಖ ಲಕ್ಷಣಗಳು

  • ಕಣ್ಣು ಕೆಂಪಾಗುವುದು
  • ತೀವ್ರ ಕಣ್ಣಿನ ನೋವು
  • ಮಸುಕಾದ ದೃಷ್ಟಿ
  • ಬೆಳಕನ್ನು ನೋಡಲು ಕಷ್ಟವಾಗುವುದು
  • ಕಣ್ಣಿನಿಂದ ನೀರು ಹರಿಯುವುದು
  • ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತೆ ಅನುಭವ
  • ಕಾಂಟ್ಯಾಕ್ಟ್ ಲೆನ್ಸ್ ಧರಿಸಲು ತೊಂದರೆ

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಬೇಕು.

ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

  • ಲೆನ್ಸ್ ಹಾಕುವ ಮೊದಲು ಮತ್ತು ತೆಗೆಯುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ.
  • ಲೆನ್ಸ್ ಧರಿಸಿ ಈಜುವುದು ಅಥವಾ ಸ್ನಾನ ಮಾಡುವುದನ್ನು ತಪ್ಪಿಸಿ.
  • ಮಣ್ಣು ಅಥವಾ ಕೊಳಕು ನೀರು ಕಣ್ಣಿಗೆ ತಗುಲಿದರೆ ತಕ್ಷಣ ಲೆನ್ಸ್ ತೆಗೆದು ವೈದ್ಯರನ್ನು ಸಂಪರ್ಕಿಸಿ.
  • ಲೆನ್ಸ್‌ಗಳನ್ನು ಯಾವಾಗಲೂ ಶಿಫಾರಸು ಮಾಡಿದ ಕ್ಲೀನಿಂಗ್ ಸೊಲ್ಯೂಷನ್‌ನಲ್ಲೇ ಇಡಿ.
  • ಹಳೆಯ ಸೊಲ್ಯೂಷನ್ ಅನ್ನು ಮರುಬಳಕೆ ಮಾಡಬೇಡಿ.
  • ಲೆನ್ಸ್ ಕೇಸ್ ಅನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಿ.
  • ಅವಧಿ ಮೀರಿದ ಲೆನ್ಸ್ ಬಳಸಬೇಡಿ.
  • ರಾತ್ರಿ ಮಲಗುವಾಗ (ವೈದ್ಯರ ಸಲಹೆ ಇಲ್ಲದಿದ್ದರೆ) ಲೆನ್ಸ್ ಧರಿಸಬೇಡಿ.

ಇದನ್ನೂ ಓದಿ: ಡಯಾಬಿಟಿಸ್ ಇದ್ದರೆ ಪಾದಗಳ ಬಗ್ಗೆ ಇರಲಿ ಎಚ್ಚರ! ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ

ಯಾರಿಗೆ ಸೋಂಕಿನ ಅಪಾಯ ಹೆಚ್ಚು?

  • ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು
  • ಈಜುಕೊಳದಲ್ಲಿ ಲೆನ್ಸ್ ಧರಿಸುವವರು
  • ಕೊಳಕು ನೀರಿನಲ್ಲಿ ಕೆಲಸ ಮಾಡುವವರು
  • ಲೆನ್ಸ್ ಸ್ವಚ್ಛತೆಯನ್ನು ನಿರ್ಲಕ್ಷಿಸುವವರು
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರು

ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ

  • ಕಣ್ಣಿನ ಆರೋಗ್ಯ ಕಾಪಾಡಲು ಕ್ಯಾರೆಟ್
  • ಪಾಲಕ್ ಹಾಗೂ ಹಸಿರು ಸೊಪ್ಪುಗಳು
  • ಮೊಟ್ಟೆ
  • ಮೀನು (ಒಮೆಗಾ-3)
  • ಬಾದಾಮಿ
  • ಕಿತ್ತಳೆ, ನಿಂಬೆಹಣ್ಣು
  • ವಿಟಮಿನ್ A, C ಮತ್ತು E ಸಮೃದ್ಧ ಆಹಾರಗಳು

ಕಣ್ಣಿನ ಸೋಂಕು ತಡೆಯಲು ಹೆಚ್ಚುವರಿ ಸಲಹೆಗಳು

  • ಇತರರ ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಡಿ.
  • ಕಣ್ಣಿಗೆ ಧೂಳು ಬಿದ್ದರೆ ಉಜ್ಜಬೇಡಿ.
  • ಕಣ್ಣಿನ ಮೇಕಪ್ ಅನ್ನು ಸಮಯಕ್ಕೆ ತೆಗೆದುಹಾಕಿ.
  • ಕಣ್ಣಿನ ಡ್ರಾಪ್ಸ್ ಅನ್ನು ವೈದ್ಯರ ಸಲಹೆಯಂತೆ ಮಾತ್ರ ಬಳಸಿ.
  • ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ.

ಗಮನಿಸಿ: ಕಾಂಟ್ಯಾಕ್ಟ್ ಲೆನ್ಸ್ ಸರಿಯಾದ ರೀತಿಯಲ್ಲಿ ಬಳಸಿದರೆ ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ. ಆದರೆ ಸ್ವಚ್ಛತೆಯ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಕಣ್ಣಿನ ಸೋಂಕು ಹಾಗೂ ದೃಷ್ಟಿ ಕಳೆದುಕೊಳ್ಳುವ ಅಪಾಯ ಉಂಟಾಗಬಹುದು. ಕಣ್ಣಿನ ಯಾವುದೇ ಅಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನೀರು ವಿವಾದ: ಪ್ರಯೋಜನವಾಗಿಲಿಲ್ಲ ಕರ್ನಾಟಕದ ಮೇಲ್ಮನವಿ – Kannada News | Cauvery Row: CWMA Rejects Karnataka’s Appeal, Orders Water Release To Tamil Nadu as per CWRC

ನವದೆಹಲಿ, (ಜುಲೈ 30): ಕಾವೇರಿ ನದಿ ನೀರು ವಿವಾದ (Cauvery river water Dispute)ಮತ್ತೆ ಮುನ್ನೆಲೆಗೆ ಬಂದಿದೆ. ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶಿಸಿದ್ದು, ಆದ್ರೆ, ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಿದೆ. ಆದರೂ ಸಹ ಸಹ ಪ್ರಯೋಜನವಾಗಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಇಂದು (ಜುಲೈ 30) ತುರ್ತು ಸಭೆ ನಡೆಸಿ CWRC ಆದೇಶವನ್ನು ಎತ್ತಿ ಹಿಡಿದಿದ್ದು, 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶಿಸಿದೆ. ಇದರಿಂದ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ.

ಸಿಡಬ್ಲ್ಯೂಎಂಎ (CWMA) ಅಧ್ಯಕ್ಷ ಎಸ್. ಕೆ. ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ CWMA ಮುಂದೆ ಸುದೀರ್ಘ ವಾದ ಮಂಡಿಸಿತ್ತು. ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟು, ಆದೇಶ ಮರುಪರಿಶೀಲಿಸುವಂತೆ ಮನವೊಲಿಸಲು ಯತ್ನಿಸಿತ್ತು. ಆದರೆ, ಕರ್ನಾಟಕದ ಮೇಲ್ಮನವಿಯನ್ನು ತಿರಸ್ಕರಿಸಿರುವ ಪ್ರಾಧಿಕಾರವು, CWRC ಶಿಫಾರಸ್ಸನ್ನೇ ಆದೇಶವಾಗಿ ಮಾರ್ಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Shravan Fasting Food: ಶ್ರಾವಣ ಉಪವಾಸ ವ್ರತ ಮಾಡುವವರು ದಿನವಿಡೀ ಎನರ್ಜಿಯಿಂದ ಇರಲು ತಿನ್ನಬಹುದಾದ ಸಾಬುದಾನ ಭಕ್ಷ್ಯ – Kannada News | Shravan Fasting Food: These are the Sabudana dishes that can be consumed by those observing the Shravan fast

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಶಿವನ ಆರಾಧನೆಗಾಗಿ ಮೀಸಲಾದ ಈ ಪವಿತ್ರ ತಿಂಗಳಿನಲ್ಲಿ ಭಕ್ತರು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ (fasting) ವ್ರತಾಚರಣೆಯನ್ನು ಮಾಡುತ್ತಾರೆ. ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶುಕ್ರವಾರ, ಶ್ರಾವಣ ಶನಿವಾರದಂದು ಉಪವಾಸ ಮಾಡುತ್ತಾರೆ. ಉಪವಾಸದ ಸಮಯದಲ್ಲಿ ಹಣ್ಣುಗಳು, ಸಾಬುದಾನ ಅಂದರೆ ಸಬ್ಬಕ್ಕಿ ಕಿಚಡಿಯಂತಹ ಸಾತ್ವಿಕ ಆಹಾರವನ್ನು ಸೇವನೆ ಮಾಡುತ್ತಾರೆ. ಸಾಬುದಾನ ಕಿಚಡಿ ಜನಪ್ರಿಯ ಉಪವಾಸದ ಆಹಾರವಾಗಿದೆ. ಕಿಚಡಿ ಮಾತ್ರವಲ್ಲ ಸಾಬುದಾನದಿಂದ ಈ ಎಲ್ಲಾ ಆರೋಗ್ಯಕರ ರೆಸಿಪಿಗಳನ್ನು ತಯಾರಿಸಬಹುದು. ಈ ಸಾಬುದಾನ ಭಕ್ಷ್ಯಗಳು ಬಹಳ ಹೊತ್ತಿನವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ, ಸುಸ್ತಾಗುವುದನ್ನು ತಡೆಗಟ್ಟಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಜೊತೆಗೆ ಇದು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಈ ಬಾರಿ ಶ್ರಾವಣ ಮಾಸದಲ್ಲಿ ನೀವು ಉಪವಾಸ ವ್ರತಾಚರಣೆ ಮಾಡುತ್ತಿದ್ದರೆ, ಸಾಬುದಾನದ ಈ ಭಕ್ಷ್ಯಗಳನ್ನು ಸವಿಯಿರಿ.

ಶ್ರಾವಣ ಉಪವಾಸ ಮಾಡುವವರು ತಿನ್ನಬಹುದಾದ ಸಾಬುದಾನ ಖಾದ್ಯಗಳು:

ಸಬುದಾನ ದೋಸೆ: ಶ್ರಾವಣ ಉಪವಾಸ ವ್ರತಾಚರಣೆಯನ್ನು ಮಾಡುತ್ತಿದ್ದರೆ ನೀವು ಉಪವಾಸಕ್ಕೂ ಮುನ್ನ ಸಾಬುದಾನ ದೋಸೆಯನ್ನು ತಿನ್ನಬಹುದು. ಈ ದೋಸೆಯನ್ನು ತಯಾರಿಸಲು ನೆನೆಸಿದ ಸಾಬುದಾನ, ಊದಲು ಅಕ್ಕಿ, ಮೊಸರು ಬೇಕಾಗುತ್ತದೆ. ಈ ಮೂರು ಪದಾರ್ಥವನ್ನು ನಯವಾಗಿ ರುಬ್ಬಿ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ. ನಂತರ ತೆಳುವಾದ ದೋಸೆಯನ್ನು ಮಾಡಿ, ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ. ಈ ದೋಸೆ ಹಗುರವಾದ ಆಹಾರವಾಗಿದ್ದು, ಹೆಚ್ಚು ಹೊತ್ತು ಹಸಿವಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಸಬುದಾನ ಇಡ್ಲಿ: ಮೃದುವಾದ ಸಾಬುದಾನ ಇಡ್ಲಿಯು ಉತ್ತಮ ಉಪವಾಸ ಆಹಾರವಾಗಿದೆ. ಸಾಬುದಾನ ದೋಸೆಗೆ ಹಿಟ್ಟನ್ನು ತಯಾರಿಸುವಂತೆ ನೆನೆಸಿದ ಸಾಬುದಾನ, ಊದಲು ಅಕ್ಕಿ ಮತ್ತು ಮೊಸರನ್ನು ಹಾಕಿ ಹಿಟ್ಟನ್ನು ತಯಾರಿಸಿ, ಈ ಹಿಟ್ಟನ್ನು ಇಡ್ಲಿ ಪಾತ್ರೆಗಳಿಗೆ ಹಾಕಿ ಬೇಯಿಸಿಕೊಳ್ಳಿ. ಈ ಆರೋಗ್ಯಕರ ಇಡ್ಲಿ  ಜೀರ್ಣಿಸಿಕೊಳ್ಳಲು ಸುಲಭ ಮತ್ತು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಸಾಬುದಾನಾ ಖಿಚಡಿ: ಉಪವಾಸದ ಸಮಯದಲ್ಲಿ ಸಾಬುದಾನ ಕಿಚಡಿ ಇರಲೇಬೇಕು. ಇದು ಜನಪ್ರಿಯ ಉಪವಾಸ ಭಕ್ಷ್ಯವಾಗಿದೆ. ರಾತ್ರಿಯಿಡಿ ನೆನೆಸಿದ ಸಾಬುದಾನ, ಹುರಿದ ಕಡಲೆಕಾಯಿ, ಜೀರಿಗೆ, ಹಸಿ ಮೆಣಸಿನಕಾಯಿ, ಬೇಯಿಸಿದ ಆಲೂಗಡ್ಡೆ ಮತ್ತು ಸೌಮ್ಯ ಮಸಾಲೆಗಳನ್ನೆಲ್ಲಾ ಬೇಯಿಸಿ ಈ ಕಿಚಡಿಯನ್ನು ತಯಾರಿಸಲಾಗುತ್ತದೆ. ಪೌಷ್ಟಿದಾಯಕವಾದ ಮತ್ತು ಹಗುರವಾದ ಈ ಭಕ್ಷ್ಯ ಪರಿಪೂರ್ಣ ಉಪವಾಸ ಊಟವಾಗಿದೆ.

ಸಾಬುದಾನ ವಡೆ: ಶ್ರಾವಣ ಉಪವಾಸ ಮಾಡುವವರು ಸಾಬುದಾನ ವಡೆಯನ್ನು ಸಹ ಸವಿಯಬಹುದು. ನೆನೆಸಿದ ಸಾಬುದಾನವನ್ನು, ಬೇಯಿಸಿದ ಆಲೂಗಡ್ಡೆ, ಕಡ್ಲೆ ಹಿಟ್ಟು, ವಿವಿಧ ಮಸಾಲೆಗಳೊಂದಿಗೆ ಬೆರೆಸಿ ನಂತರ ಕೈಯಲ್ಲಿ ವಡೆ ಆಕಾರಕ್ಕೆ ತಟ್ಟಿ, ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಇದನ್ನೂ ಓದಿ: ಬಂದೇ ಬಿಟ್ಟಿದೆ ಆಷಾಢ; ಮಾಸದಲ್ಲಿ ನವ ವಧುವನ್ನು ತವರು ಮನೆಗೆ ಕಳುಹಿಸುವುದೇಕೆ ಗೊತ್ತಾ?

ಸಾಬುದಾನ ಖೀರ್: ಸಿಹಿ ತಿನ್ನಲು ಬಯಸುವವರಿಗೆ ಸಾಬುದಾನ ಖೀರ್  ಉತ್ತಮ, ಆರೋಗ್ಯಕರ ಆಯ್ಕೆಯಾಗಿದೆ. ನೆನೆಸಿದ ಸಬ್ಬಕ್ಕಿಯನ್ನು ಹಾಲು ಮತ್ತು ಸಕ್ಕರೆ ಅಥವಾ ಬೆಲ್ಲದೊಂದಿಗೆ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ ಮತ್ತು ಡ್ರೈ ನಟ್ಸ್‌ ಮತ್ತು ಕೇಸರಿ ದಳವನ್ನು ಸೇರಿಸಿದರೆ ಸಾಬುದಾನ ಖೀರ್‌ ರೆಡಿ. ಇದು ಜನಪ್ರಿಯ ಉಪವಾಸ ಸಿಹಿಖಾದ್ಯವಾಗಿದೆ.

ಸಾಬುದಾನ ಭೇಲ್: ಉಪವಾಸದ ದಿನ ನೀವು ಸಾಬುದಾನ ಭೇಲ್‌ ಕೂಡ ತಿನ್ನಬಹುದು. ಇದಕ್ಕಾಗಿ ಸಾಬುದಾನವನ್ನು ಹುರಿದಿಟ್ಟುಕೊಂಡು ಅದಕ್ಕೆ ಬೇಯಿಸಿದ ಆಲೂಗಡ್ಡೆ, ಹುಡಿದ ಕಡಲೆಕಾಯಿ, ಹಸಿ ಮೆಣಸಿನಕಾಯಿ, ನಿಂಬೆ ರಸ, ರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಾಬುದಾನ ಭೇಲ್‌ ಸಿದ್ದವಾಗುತ್ತದೆ. ಈ ಹಗುವಾದ ಖಾದ್ಯ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆಶಿ ವೈಯಕ್ತಿಕ ಸಹಾಯಕ ಎಂದು ಸುಳ್ಳು ಹೇಳಿ 15 ಲಕ್ಷ ರೂ. ವಂಚನೆ: ಆರೋಪಿ ಅರೆಸ್ಟ್​​ – Kannada News | Impersonation Fraud: Man Arrested in Shivamogga for Cheating 15 Lakh Posing as CM DK Shivakumar’s PA

ಶಿವಮೊಗ್ಗ, ಜುಲೈ 30: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿಎ) ಎಂದು ಸುಳ್ಳು ಹೇಳಿ, ರಿಕ್ರಿಯೇಷನ್ ಕ್ಲಬ್ ಪರವಾನಗಿ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಆರೋಪದಡಿ ತುಂಗಾನಗರ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಕೆಎಚ್‌ಬಿ ಕಾಲೊನಿಯ ರೈತ ಮಂಜುನಾಥ್ ಹಂಜಿ ನೀಡಿದ ದೂರಿನ ಮೇರೆಗೆ, ತುಂಗಾನಗರ ಪೊಲೀಸರು ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಹೇಮಂತ್ ಕುಮಾರ್ ತಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿಎ ಎಂದು ಸುಳ್ಳು ಹೇಳಿ, ರಿಕ್ರಿಯೇಷನ್ ಕ್ಲಬ್ ಪರವಾನಗಿ ಪಡೆಸಿಕೊಡುವುದಾಗಿ ಭರವಸೆ ನೀಡಿದ್ದ. ಈ ನೆಪದಲ್ಲಿ ಫೋನ್‌ಪೇ ಮೂಲಕ ಹಾಗೂ ಶಿವಮೊಗ್ಗದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಮತ್ತು ವಡ್ಡಿನಕೊಪ್ಪ ಪ್ರದೇಶದಲ್ಲಿ ನಗದು ರೂಪದಲ್ಲಿ ಒಟ್ಟು 15 ಲಕ್ಷ ಹಣವನ್ನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೆ ಲಕ್ಷಾಂತರ ರೂ. ವಂಚನೆ: ಕಿಂಗ್‌ಪಿನ್ ರಾಹುಲ್ ಅರೆಸ್ಟ್!

ಆರೋಪಿಗೆ ನ್ಯಾಯಾಂಗ ಬಂಧನ

ಹಣ ಪಡೆದ ಬಳಿಕ ಪರವಾನಗಿ ಕೊಡಿಸದೇ, ಹಣವನ್ನೂ ಹಿಂತಿರುಗಿಸದೇ ಆರೋಪಿ ತಲೆಮರೆಸಿಕೊಂಡಿದ್ದನು.ಈ ಹಿನ್ನೆಲೆ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತುಂಗಾನಗರ ಪೊಲೀಸರು ಆರೋಪಿ ಹೇಮಂತ್ ಕುಮಾರ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾತನಾಡಿ, ಇದೇ ರೀತಿಯ ವಿಧಾನ ಬಳಸಿ ಆರೋಪಿ ಇನ್ನೂ ಯಾರಿಗಾದರೂ ವಂಚನೆ ಮಾಡಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿರೋದಾಗಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯ್ ಜತೆ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ ಖುಷಿಯಲ್ಲಿ ಕನ್ನಡಿಗ ವಜ್ರಾಂಗ್ ಶೆಟ್ಟಿ

Source link

Exit mobile version