ಒಂದೇ ಒಂದು ಸೋಲಿಲ್ಲದ ಏಕೈಕ ನಾಯಕ ಅಜಿಂಕ್ಯ ರಹಾನೆ

Source link

ರೈಲು ಪ್ರಯಾಣಿಕರೇ ಗಮನಿಸಿ; ನಾಳೆಯಿಂದ ರೈಲ್ವೆ ಇಲಾಖೆಯಿಂದ ಲಗೇಜ್ ಆನ್‌ಲೈನ್ ಬುಕಿಂಗ್ ಆರಂಭ – Kannada News | Indian Railways will start online luggage booking from Tomorrow

ನವದೆಹಲಿ, ಜುಲೈ 30: ರೈಲು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲು ಭಾರತೀಯ ರೈಲ್ವೆ (Indian Railways) ಇಲಾಖೆ ನಾಳೆಯಿಂದ (ಜುಲೈ 31) ನೂತನ ಆನ್‌ಲೈನ್ ಲಗೇಜ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸುತ್ತಿದೆ. ಉಚಿತ ಮಿತಿಗಿಂತ ಹೆಚ್ಚು ಲಗೇಜ್ ಒಯ್ಯುವ ಪ್ರಯಾಣಿಕರು ಇನ್ಮುಂದೆ ರೈಲ್ವೆ ನಿಲ್ದಾಣದ ಲಗೇಜ್ ಬುಕಿಂಗ್ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಪ್ರಯಾಣಕ್ಕೂ ಮೊದಲೇ ಹೆಚ್ಚುವರಿ ಲಗೇಜ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದರಿಂದ, ಪ್ರಯಾಣದ ವೇಳೆ ಟಿಕೆಟ್ ತಪಾಸಕರು (TTE) ವಿಧಿಸುವ ಭಾರಿ ದಂಡದಿಂದ ಪ್ರಯಾಣಿಕರು ಪಾರಾಗಬಹುದು.

ಹೊಸ ಆನ್‌ಲೈನ್ ಹೆಚ್ಚುವರಿ ಲಗೇಜ್ ಬುಕಿಂಗ್ ಸೌಲಭ್ಯವು ಅನಗತ್ಯ ಪೇಪರ್ ಕೆಲಸ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ಮತ್ತು ದೇಶಾದ್ಯಂತ ರೈಲ್ವೆ ಟರ್ಮಿನಲ್‌ಗಳಲ್ಲಿ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಭಾರತದ ಮೊದಲ ಹೈಡ್ರೋಜನ್ ಟ್ರೈನ್; ಇದು ವಿಶ್ವದ ಅತಿ ಶಕ್ತಿಶಾಲಿ, ಅತಿ ಉದ್ದದ ಜಲಜನಕ ರೈಲು

ಉಚಿತ ಲಗೇಜ್ ಮಿತಿ ವಿವರ:

ಪ್ರಯಾಣಿಕರು ತಾವು ಪ್ರಯಾಣಿಸುವ ಕ್ಲಾಸ್​​ಗೆ ಅನುಗುಣವಾಗಿ ಉಚಿತವಾಗಿ ಕೊಂಡೊಯ್ಯಬಹುದಾದ ಮತ್ತು ಗರಿಷ್ಠ ಬುಕ್ ಮಾಡಬಹುದಾದ ಲಗೇಜ್ ಮಿತಿ ಹೀಗಿದೆ:

ಎಸಿ ಫಸ್ಟ್ ಕ್ಲಾಸ್:

ಉಚಿತ ಮಿತಿ: 70 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 150 ಕೆಜಿ

ಫಸ್ಟ್ ಕ್ಲಾಸ್ ಮತ್ತು ಎಸಿ 2-ಟೈಯರ್:

ಉಚಿತ ಮಿತಿ: 50 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 100 ಕೆಜಿ

ಎಸಿ 3-ಟೈಯರ್, ಎಸಿ 3 ಇಕಾನಮಿ ಮತ್ತು ಎಸಿ ಚೇರ್ ಕಾರ್:

ಉಚಿತ ಮಿತಿ: 40 ಕೆಜಿ

ಸ್ಲೀಪರ್ ಕ್ಲಾಸ್ :

ಉಚಿತ ಮಿತಿ: 40 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 80 ಕೆಜಿ

ಸೆಕೆಂಡ್ ಕ್ಲಾಸ್ / ಜನರಲ್:

ಉಚಿತ ಮಿತಿ: 35 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 70 ಕೆಜಿ

ಪ್ರಯಾಣಕ್ಕೂ ಮುನ್ನ ಹೆಚ್ಚುವರಿ ಲಗೇಜ್ ಅನ್ನು ಆನ್‌ಲೈನ್‌ನಲ್ಲೇ ಕಾಯ್ದಿರಿಸುವ ಪ್ರಯಾಣಿಕರು, ತಮ್ಮ ಲಗೇಜ್‌ಗೆ ಬೀಳುವ ದಂಡದಿಂದ ಮುಕ್ತಿ ಪಡೆಯಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ನೂತನ ಉಪಕ್ರಮವು ಲಗೇಜ್ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲಿದ್ದು, ರೈಲು ಪ್ರಯಾಣಿಕರ ಅಡಚಣೆಗಳನ್ನು ಕಡಿಮೆ ಮಾಡಲಿದೆ.

ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ

ಈ ಆನ್​ಲೈನ್​ ಬುಕಿಂಗ್​ನ ಅನುಕೂಲಗಳು:

ಕ್ಯೂ ನಿಲ್ಲುವ ಕಿರಿಕಿರಿ ಇಲ್ಲ: ರೈಲ್ವೆ ನಿಲ್ದಾಣಗಳ ಲಗೇಜ್ ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವುದನ್ನು ಈ ಆನ್‌ಲೈನ್ ಸೇವೆ ನಿವಾರಿಸುತ್ತದೆ.

ಸುಲಭ ಆನ್‌ಲೈನ್ ಬುಕಿಂಗ್: ಪ್ರಯಾಣಿಕರು ತಮ್ಮ ಟಿಕೆಟ್ ಕಾಯ್ದಿರಿಸುವಾಗಲೇ ಅಥವಾ ಪ್ರಯಾಣದ ಮುನ್ನ IRCTC ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಹೆಚ್ಚುವರಿ ಲಗೇಜ್‌ಗೆ ಶುಲ್ಕ ಪಾವತಿಸಿ ಬುಕ್ ಮಾಡಬಹುದು.

ದಂಡದಿಂದ ಪಾರಾಗಬಹುದು: ರೈಲಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಲಗೇಜ್ ತೆಗೆದುಕೊಂಡು ಹೋಗಿ ಕೊನೆ ಕ್ಷಣದಲ್ಲಿ ಸಿಕ್ಕಿಬಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ. ಆನ್‌ಲೈನ್ ಪ್ರಿ-ಬುಕಿಂಗ್ ಮೂಲಕ ದಂಡದಿಂದ ಪಾರಾಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರ್ಪಿತಾ ಲಂಕೇಶ್ ಮುಡಿಗೆ ‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ ಕಿರೀಟ – Kannada News | Indrajit Lankesh wife Arpitha Lankesh wins Mrs Globe Classic 2026 Title

ಕನಸುಗಳನ್ನು ಬೆನ್ನಟ್ಟಲು ಜೀವನದ ಯಾವುದೇ ಹಂತವೂ ತಡವಲ್ಲ ಎಂಬುದನ್ನು ಅರ್ಪಿತಾ ಲಂಕೇಶ್ (Arpitha Lankesh) ಅವರು ಈ ಗೆಲುವಿನ ಮೂಲಕ ಸಾಬೀತುಪಡಿಸಿದ್ದಾರೆ. ‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ (Mrs Globe Classic 2026) ಕಿರೀಟವನ್ನು ಅರ್ಪಿತಾ ಲಂಕೇಶ್ ಅವರು ಮುಡಿಗೇರಿಸಿಕೊಂಡಿದ್ದಾರೆ. ಸ್ಥಿರತೆ, ಮಹತ್ವಾಕಾಂಕ್ಷೆ ಮತ್ತು ಅಚಲವಾದ ದೃಢಸಂಕಲ್ಪದ ಫಲವಾಗಿ ತಮಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

1979ರ ಆಗಸ್ಟ್ 21ರಂದು ಜನಿಸಿದ ಅರ್ಪಿತಾ ಅವರು ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಕೇವಲ 18ನೇ ವಯಸ್ಸಿನಲ್ಲಿಯೇ ಮದುವೆಯಾಗುವ ಮೂಲಕ ಜೀವನವು ಬೇರೆಯದೇ ಹಾದಿ ತುಳಿದರೂ, ತಮ್ಮ ಆಕಾಂಕ್ಷೆಗಳಿಗೆ ಮದುವೆ ಅಡ್ಡಿಯಾಗಲು ಅವರು ಬಿಡಲಿಲ್ಲ. ಬದಲಿಗೆ, ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲೇಬೇಕೆಂಬ ದೃಢಸಂಕಲ್ಪದಿಂದ ಎಂಜಿನಿಯರಿಂಗ್ ವ್ಯಾಸಂಗ ಮಾಡಿದರು. ಈ ಹಂತದಲ್ಲೇ ಮಾತೃತ್ವವನ್ನು ಸ್ವೀಕರಿಸಿ, ತಮ್ಮ ಪದವಿ ಶಿಕ್ಷಣ ಮುಂದುವರಿಯುತ್ತಿರುವಾಗಲೇ ಮೊದಲ ಮಗ ಸಮರ್ಜಿತ್‌ಗೆ ಜನ್ಮ ನೀಡಿದರು.

ಅರ್ಪಿತಾ ಲಂಕೇಶ್ ಅವರು ಪತ್ನಿಯಾಗಿ, ತಾಯಿಯಾಗಿ ಮತ್ತು ವಿದ್ಯಾರ್ಥಿನಿಯಾಗಿ ಜವಾಬ್ದಾರಿಗಳನ್ನು ಸರಿದೂಗಿಸುತ್ತಾ, ಯಾವುದೇ ವಿರಾಮ ತೆಗೆದುಕೊಳ್ಳದೆ ಎಂಜಿನಿಯರಿಂಗ್ ಪೂರ್ಣಗೊಳಿಸಿದರು. ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಜರ್ಮನ್ ಐಟಿ ಕಂಪನಿಗೆ ಸೇರಿದ ಅವರು, ಕಳೆದ 25 ವರ್ಷಗಳಲ್ಲಿ ಯಶಸ್ವಿ ಐಟಿ ವೃತ್ತಿಪರರಾಗಿ ಗುರುತಿಸಿಕೊಂಡರಲ್ಲದೆ, ಉದ್ಯಮಶೀಲತೆಯ ರಂಗಕ್ಕೂ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದರು.

ತಮ್ಮ ಮಹತ್ವಾಕಾಂಕ್ಷೆಯ ಪಯಣದ ಮುಂದುವರಿದ ಭಾಗವಾಗಿ, ಪ್ರತಿಷ್ಠಿತ ‘ಮಿಸೆಸ್ ಗ್ಲೋಬ್ ಕ್ಲಾಸಿಕ್’ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದ ಅರ್ಪಿತಾ, ಪ್ರಪಂಚದಾದ್ಯಂತದ ಹಲವು ಮಹಿಳೆಯರೊಂದಿಗೆ ಸ್ಪರ್ಧಿಸಿ ಅತ್ಯಂತ ಹೆಮ್ಮೆಯಿಂದ ‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ ಕಿರೀಟವನ್ನು ಭಾರತಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ಮೊದಲ ಸಿನಿಮಾಗೆ ಪ್ರೀತಂ ಗುಬ್ಬಿ ನಿರ್ದೇಶನ

ಈ ಗೆಲುವಿನ ಬಗ್ಗೆ ಅವರು ಮಾತನಾಡಿದ್ದಾರೆ. ‘ಮಿಸೆಸ್ ಗ್ಲೋಬ್ ಇಂಟರ್‌ನ್ಯಾಷನಲ್’ ಸೌಂದರ್ಯ ಸ್ಪರ್ಧೆಯಲ್ಲಿನ ನನ್ನ ಪಯಣದ ಈ ಹೆಮ್ಮೆಯ ಮತ್ತು ಸ್ಮರಣೀಯ ಮೈಲಿಗಲ್ಲನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. 1996ರಲ್ಲಿ ಡಾ. ಟ್ರೇಸಿ ಕೆಂಬಲ್ ಅವರಿಂದ ಸ್ಥಾಪಿಸಲ್ಪಟ್ಟ ಈ ಸ್ಪರ್ಧೆಯು ಪ್ರಪಂಚದಾದ್ಯಂತದ ವಿವಾಹಿತ ಮಹಿಳೆಯರಲ್ಲಿರುವ ಸೌಂದರ್ಯ, ಬುದ್ಧಿವಂತಿಕೆ, ನಾಯಕತ್ವ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾಜಿಕ ಸೇವೆಯನ್ನು ಗೌರವಿಸುತ್ತದೆ ಎಂದು ಅರ್ಪಿತಾ ಲಂಕೇಶ್ ಹೇಳಿದ್ದಾರೆ.

‘ಕೇವಲ ಬಾಹ್ಯ ಸೌಂದರ್ಯಕ್ಕೆ ಆದ್ಯತೆ ನೀಡುವ ಸಾಂಪ್ರದಾಯಿಕ ಸ್ಪರ್ಧೆಗಳಿಗಿಂತ ಭಿನ್ನವಾಗಿ, ಮಹಿಳಾ ಸಬಲೀಕರಣ, ಆತ್ಮವಿಶ್ವಾಸ, ಸಮಾಜ ಸೇವೆ ಮತ್ತು ವೈಯಕ್ತಿಕ ಸಾಧನೆಗಳಿಗೆ ‘ಮಿಸೆಸ್ ಗ್ಲೋಬ್’ ಹೆಚ್ಚಿನ ಒತ್ತು ನೀಡುತ್ತದೆ. ಅತ್ಯಂತ ಕೃತಜ್ಞತೆ ಮತ್ತು ಉತ್ಸಾಹದಿಂದ ನಾನು ಮಿಸೆಸ್ ಗ್ಲೋಬ್ ಇಂಡಿಯಾ ಕ್ಲಾಸಿಕ್ ಅಧಿಕೃತ ಕಿರೀಟವನ್ನು ಪಡೆದುಕೊಂಡಿದ್ದೇನೆ ಎಂದು ಘೋಷಿಸಲು ಬಯಸುತ್ತೇನೆ. ಈ ಗೌರವವು ನನ್ನ ಸತತ ಶ್ರಮ, ಉತ್ಸಾಹ ಮತ್ತು ನನ್ನ ಕುಟುಂಬ, ಸ್ನೇಹಿತರು, ಮಾರ್ಗದರ್ಶಕರು ಹಾಗೂ ಹಿತೈಷಿಗಳ ಅಚಲ ಬೆಂಬಲಕ್ಕೆ ಸಿಕ್ಕ ಪ್ರತಿಫಲವಾಗಿದೆ’ ಎಂದಿದ್ದಾರೆ ಅರ್ಪಿತಾ ಲಂಕೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾವೇರಿ ನದಿ ನೀರು: CWRC ಆದೇಶ ಎತ್ತಿಹಿಡಿದ CWMA, ಕರ್ನಾಟಕ ಮತ್ತೆ ಹಿನ್ನಡೆ – Kannada News | Cauvery river water Dispute: CWMA upholds CWRC order, Again setback to Karnataka

ನವದೆಹಲಿ, (ಜುಲೈ 30): ಮಳೆ ಕೊರತೆಯ ನಡುವೆ ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWRC ಕರ್ನಾಟಕಕ್ಕೆ ಆದೇಶಿಸಿದ್ದು, ಇದಕ್ಕೆ ಕರ್ನಾಟಕ ಮೇಲ್ನನವಿ ಹೋಗಿದೆ. ಇದರ ಮಧ್ಯೆ ತುರ್ತು ಸಭೆ ನಡೆಸಿದ CWMA , CWRC ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದ ಕರ್ನಾಟಕದಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.

Source link

ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಮದುವೆ ಬಗ್ಗೆ ಭಾರೀ ಚರ್ಚೆ; ಭಾವೀ ಸೊಸೆ ಕುರಿತು ತಾಯಿ ಹೇಳಿದ್ದೇನು? – Kannada News | Abhijeet Dipke Mother’s statement on his Wedding Dipke clarification on CJP Foriegn Fund

ನವದೆಹಲಿ, ಜುಲೈ 30: ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ಬಹಳ ಕಡಿಮೆ ಅವಧಿಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ದೆಹಲಿಯಲ್ಲಿ ನೀಟ್ ಪತ್ರಿಕೆ ಸೋರಿಕೆ ವಿಷಯದ ಕುರಿತು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ, ನಂತರ ವಿದ್ಯಾರ್ಥಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಪ್ರತಿಭಟನೆ ಕೂಡ ಯಶಸ್ವಿಯಾಯಿತು. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೂಡ ನೀಡಿದರು. ಇದೀಗ ಅಭಿಜೀತ್ ಮದುವೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಅಭಿಜೀತ್ ದೀಪ್ಕೆ ಅವರ ಕುಟುಂಬ ಮತ್ತು ಮದುವೆಯ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ, ಅಭಿಜೀತ್ ದೀಪ್ಕೆಯ ತಾಯಿ ಅವರ ಮದುವೆಯ ಬಗ್ಗೆ ಕೆಲವು ಮಾಹಿತಿ ಕೂಡ ಹಂಚಿಕೊಂಡಿದ್ದಾರೆ. ಅಭಿಜೀತ್ ದೀಪ್ಕೆ ಯಾವಾಗ ಮದುವೆಯಾಗುತ್ತಾರೆ? ಎಂಬುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್​ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್

ಅಭಿಜೀತ್ ದೀಪ್ಕೆ ಅವರ ತಾಯಿ, ಕಳೆದ ಕೆಲವು ದಿನಗಳಿಂದ ತಾವು ಮದುವೆ ಸಮಾರಂಭಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಭಿಜೀತ್ ತುಂಬಾ ಸ್ವಾಭಿಮಾನಿಯಾಗಿದ್ದು, ಮದುವೆಗೆ ಹುಡುಗಿಯ ಕುಟುಂಬದಿಂದ ವರದಕ್ಷಿಣೆಯಾಗಿ ಏನೂ ಬಯಸುವುದಿಲ್ಲ. ಆಕೆ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನೂ ತರುವುದು ಬೇಡ. ನಾವು ಭಾವಿ ಸೊಸೆಯ ಕುಟುಂಬದಿಂದ ದುಬಾರಿ ವಸ್ತುಗಳನ್ನು ಅಥವಾ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಅಭಿಜೀತ್ ದೀಪ್ಕೆ ಅವರ ತಾಯಿ ಹೇಳಿದ್ದಾರೆ.

ನೀವು ಯಾವ ರೀತಿಯ ಚಾಣಕ್ಯ?:

ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮೇಲೆ ಹೊರಗಿನಿಂದ ಮತ್ತು ವಿದೇಶದಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಇದು ದೊಡ್ಡ ಸಂಚಲನ ಮೂಡಿಸಿದೆ. ಆದರೆ ಈಗ ಇದೇ ವಿಷಯದ ಬಗ್ಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸ್ಪಷ್ಟನೆ ನೀಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷವು ಹೊರಗಿನಿಂದ ಹಣ ಪಡೆಯುತ್ತಿದೆ ಎಂದಾದರೆ ಅಮಿತ್ ಶಾ ಇದ್ದಾಗ ಇದು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆ ನನ್ನ ಮನಸ್ಸಿಗೆ ಬರುತ್ತದೆ. ಕಾಕ್ರೋಚ್ ಜನತಾ ಪಕ್ಷವನ್ನು ಹೊರಗಿನಿಂದ ನಿಯಂತ್ರಿಸುತ್ತಿದ್ದರೆ, ಇದು ಗೃಹ ಸಚಿವ ಅಮಿತ್ ಶಾ ಅವರ ವೈಫಲ್ಯವಲ್ಲವೇ? ಹಾಗಾದರೆ ನೀವು ಯಾವ ರೀತಿಯ ಚಾಣಕ್ಯ? ಒಂದುವೇಳೆ ನಿಮ್ಮ ಆರೋಪ ನಿಜವೇ ಆದರೆ ನಿಮ್ಮ ವೈಫಲ್ಯಕ್ಕೆ ನೀವು ಕೂಡ ರಾಜೀನಾಮೆ ನೀಡಬೇಕು ಎಂದು ದೀಪ್ಕೆ ಲೇವಡಿ ಮಾಡಿದ್ದಾರೆ.

ಬಾಬಾ ರಾಮದೇವ್​​ಗೆ ತಿರುಗೇಟು:

ಕಾಕ್ರೋಚ್ ಜನತಾ ಪಕ್ಷವು ಆಂದೋಲನವನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದ ನಂತರವೂ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾಕ್ರೋಚ್ ಜನತಾ ಪಕ್ಷದ ಆಂದೋಲನದಿಂದಾಗಿ ಭಾರತಕ್ಕೆ ಮಾನಹಾನಿಯಾಗಿದೆ ಎಂದು ಬಾಬಾ ರಾಮದೇವ್ ಆರೋಪಿಸಿದರು. ಜೆನ್-ಝಡ್ ಆಂದೋಲನದಲ್ಲಿ ಬಹಳಷ್ಟು ಅವಮಾನಗಳಾಗಿವೆ ಎಂದು ಬಾಬಾ ರಾಮದೇವ್ ಆರೋಪಿಸಿದ್ದಾರೆ. ಬಾಬಾ ರಾಮದೇವ್ ಅವರ ಆರೋಪಗಳನ್ನು ಅಭಿಜಿತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದಾರೆ. ಈ ಆಂದೋಲನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಫೋಟೋಗಳನ್ನು ಹೊತ್ತೊಯ್ಯುವುದರಿಂದ ದೇಶ ಮತ್ತು ಸಂಸ್ಕೃತಿಗೆ ಹೇಗೆ ಅವಮಾನವಾಗಿದೆ? ಎಂದು ದೀಪ್ಕೆ ಬಾಬಾ ರಾಮದೇವ್ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿಜೆಪಿ ಎಚ್ಚರಿಕೆ ಬೆನ್ನಲ್ಲೇ ಪ್ರತಿಭಟನಾರರ ಮೇಲಿನ ಕೇಸ್ ಹಿಂಪಡೆಯುವುದಾಗಿ ಬಿಹಾರ ಸರ್ಕಾರ ಘೋಷಣೆ

‘ಪತಂಜಲಿಯ ಉತ್ಪನ್ನಗಳು ಗ್ರಾಹಕರಿಗೆ ವಂಚನೆ ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಾಬಾ ರಾಮದೇವ್ ಅವರು ಅದರ ಬಗ್ಗೆ ಗಮನಹರಿಸಬೇಕು. ಸಂಸ್ಕೃತಿ, ಪ್ರಜಾಪ್ರಭುತ್ವವನ್ನು ಜೆನ್-ಝಡ್ ನೋಡಿಕೊಳ್ಳುತ್ತದೆ. ನೀವು ಪತಂಜಲಿಯ ಉತ್ಪನ್ನಗಳ ಮೇಲೆ ಕಣ್ಣಿಡಬೇಕು, ಇಲ್ಲದಿದ್ದರೆ ಅದನ್ನು ಮುಚ್ಚಬೇಕಾದೀತು’ ಎಂದು ಅಭಿಜೀತ್ ತಿರುಗೇಟು ನೀಡಿದ್ದಾರೆ.

ಪೊಲೀಸರ ವಿರುದ್ಧ ವಾಗ್ದಾಳಿ:

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ವರ್ತನೆಯನ್ನು ಖಂಡಿಸಿದ ಅಭಿಜೀತ್ ದೀಪ್ಕೆ, ಪೊಲೀಸರು ಸಂವಿಧಾನವನ್ನು ಮಾತ್ರ ಪಾಲಿಸಬೇಕು. ಅವರು ಬಿಜೆಪಿಯ ಆದೇಶಗಳನ್ನು ಪಾಲಿಸಬಾರದು. ನೀವು ಬಿಜೆಪಿಯ ಆದೇಶ ಪಾಲಿಸುವುದೇ ಆದರೆ ನಿಮ್ಮ ಖಾಕಿ ಪ್ಯಾಂಟ್ ತೆಗೆದು, ಹಾಫ್ ಶಾರ್ಟ್ಸ್ ಧರಿಸಿ ಬಿಜೆಪಿ ಕಚೇರಿಯ ಹೊರಗೆ ನಿಂತುಕೊಳ್ಳಿ ಎಂದು ಅಭಿಜಿತ್ ದೀಪ್ಕೆ ಪೊಲೀಸರ ಕುರಿತು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

KFCC Meeting On Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ – Kannada News | KFCC Holds Meetings on Farmer Protests and Industry Shutdown Decision over Cauvery Water Dispute on SC Directives

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು (Cauvery Water) ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಹೆಚ್ಚಾಗುತ್ತಿದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು ನಟಿಸಿರುವ ‘ಜನ ನಾಯಗನ್’ ಸಿನಿಮಾ ಕರ್ನಾಟಕದ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕೆಲವು ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನವನ್ನು ನಿಲ್ಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇದರಿಂದಾಗಿ ಮಂಡ್ಯದಲ್ಲಿ ‘ಜನ ನಾಯಗನ್’ ಪ್ರದರ್ಶನ ರದ್ದಾಗಿದೆ. ಎಲ್ಲ ಸಂಘಟನೆಗಳು ಜೊತೆಯಾಗಿ ಕರ್ನಾಟಕ ಬಂದ್ ಮಾಡುವ ಬಗ್ಗೆಯೂ ಮಾತುಕಥೆ ನಡೆಯುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಇಂದು (ಜು.30) ಸಭೆ ನಡೆಸುತ್ತಿದೆ. ಮಂಡಳಿ ಅಧ್ಯಕ್ಷರಾದ ಜಯಮಾಲಾ ಅವರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ – Kannada News | Raichur: Mantralaya’s Rayara Matha Finds a Permanent Solution to the Water Problem

ರಾಯಚೂರು, ಜುಲೈ 30: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರೀಮಠವು ಹೊಸ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದೆ. ತುಂಗಭದ್ರಾ ನದಿಯಿಂದ ಮಳೆಗಾಲದಲ್ಲಿ ಹರಿದುಬರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುವ ಉದ್ದೇಶದಿಂದ ಶ್ರೀಮಠದ 40 ಎಕರೆ ಪ್ರದೇಶದಲ್ಲಿ ಬೃಹತ್ ‘ಇಂಪೌಂಡಿಂಗ್ ರಿಸರ್ವೈಯರ್’ ನಿರ್ಮಿಸಲಾಗುತ್ತಿದ್ದು, ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು. ಹೆಚ್‌ಎಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯ 50 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಮುಂಬರುವ 2057ರ ವರೆಗೆ ಅಂದರೆ ಸುಮಾರು 30 ವರ್ಷಗಳ ಕಾಲ ಮಂತ್ರಾಲಯದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳೊಂದಿಗೆ ಹೆಚ್‌ಎಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕೆ. ರವಿ ಹಾಗೂ ಮಠದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾವೇರಿ ಹೋರಾಟ: ಮಂಡ್ಯದಲ್ಲಿ ರದ್ದಾಯ್ತು ‘ಜನ ನಾಯಗನ್’ ಶೋ – Kannada News | Jana Nayagan movie shows canceled in Mandya

ಕಾವೇರಿ (Cauvery) ಹೋರಾಟ ಕರ್ನಾಟಕದಲ್ಲಿ ಕಾವೇರುತ್ತಿದೆ. ಕಾವೇರಿ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸಬೇಕೆಂದು ರಾಜ್ಯಕ್ಕೆ ಸೂಚನೆ ನೀಡಿದೆ. ಆದರೆ ರಾಜ್ಯದ ರೈತರು, ಕನ್ನಡಪರ ಸಂಘಟನೆಗಳು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಗಳು ಸಹ ಆರಂಭವಾಗಿವೆ. ಇದರ ಬೆನ್ನಲ್ಲೆ ಇಂದು (ಜುಲೈ 30) ತಮಿಳುನಾಡಿನ ಸಿಎಂ, ನಟ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ವಿರುದ್ಧ ಸಹ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಕರ್ನಾಟಕದಲ್ಲಿಯೂ ಸಹ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೆ ಇಂದು (ಜುಳೈ 30) ಕನ್ನಡ ಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿನಿಮಾದ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

ಇಂದು ಬೆಳಿಗ್ಗೆ ಕೆಲ ಕನ್ನಡಪರ ಸಂಘಟನೆ ಸದಸ್ಯರು ಮಂಡ್ಯದ ಗುರುಶ್ರೀ ಚಿತ್ರಮಂದಿರಕ್ಕೆ ನುಗ್ಗಿ ವಿಜಯ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಶೋಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಸಿನಿಮಾದ ಗೇಟಿನ ಬಳಿ ಅಂಟಿಸಲಾಗಿದ್ದು ‘ಜನ ನಾಯಗನ್’ ಸಿನಿಮಾದ ಪೋಸ್ಟರ್ ಅನ್ನು ಹರಿದು, ವಿಜಯ್ ವಿರುದ್ಧ ಘೋಷಣೆಗಳನ್ನು ಸಹ ಕೂಗಿದರು.

ಇದನ್ನೂ ಓದಿ:ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ಸದ್ಯ ಇರುವ ನೀರೆಷ್ಟು? ಇಲ್ಲಿದೆ ಮಾಹಿತಿ

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ವಿಜಯ್ ಈಗ ನಟರಷ್ಟೆ ಅಲ್ಲದೆ, ತಮಿಳುನಾಡು ರಾಜ್ಯದ ಸಿಎಂ ಸಹ ಆಗಿದ್ದಾರೆ. ಕಾವೇರಿ ನೀರು ಪಡೆದುಕೊಳ್ಳಲು ಸಿಎಂ ವಿಜಯ್ ಈಗಾಗಲೇ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ವಿಜಯ್ ವಿರುದ್ಧ ಅಸಮಾಧನ ಮೂಡಿದ್ದು, ಆ ಅಸಮಾಧಾನ ‘ಜನ ನಾಯಗನ್’ ಸಿನಿಮಾದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿದೆ.

ಇಂದು (ಜುಲೈ 30) ಕರ್ನಾಟಕ ಫಿಲಂ ಚೇಂಬರ್​​ನಲ್ಲಿ ಈ ವಿಷಯವಾಗಿ ಚರ್ಚೆ ನಡೆಯುತ್ಇದ್ದು, ಕನ್ನಡ ಚಿತ್ರರಂಗದ ಸದಸ್ಯರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಬೇಕೆ ಬೇಡವೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜೊತೆಗೆ ‘ಜನ ನಾಯಗನ್’ ಸಿನಿಮಾದ ಬಗ್ಗೆಯೂ ಸಹ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:53 pm, Thu, 30 July 26

Source link

ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರ: ಹಾಲ್ನೊರೆಯಂತೆ ಧುಮ್ಮಿಕ್ಕಿದ ಗೋಕಾಕ್ ಜಲಪಾತ – Kannada News | Gokak Falls Roars Amidst Western Ghats Torrential Rains: Ghataprabha River Overflows, Bridge Submerged

ಬೆಳಗಾವಿ, ಜುಲೈ 30: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಮತ್ತು ಜಲಪಾತಗಳು ತುಂಬಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರುವ ಪ್ರಸಿದ್ಧ ಗೋಕಾಕ್ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕಿ ಭೋರ್ಗರೆಯುತ್ತಿದೆ. ಹೆಚ್ಚಿದ ನೀರಿನ ಮಟ್ಟದಿಂದಾಗಿ ಸ್ಥಳೀಯ ಜನಜೀವನಕ್ಕೆ ತೊಂದರೆಯಾಗಿದ್ದು, ಗೋಕಾಕ್ ನಗರ ಮತ್ತು ಶಿಂಗಳಾಪುರ ಗ್ರಾಮದ ನಡುವೆ ಇರುವ ಪ್ರಮುಖ ಬ್ರಿಡ್ಜ್‌ ಕಮ್ ಬ್ಯಾರೇಜ್ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೀಂ ಇಂಡಿಯಾ ಬಾಂಗ್ಲಾಕ್ಕೆ ಬರಲಿದೆ ಎಂಬ ಭರವಸೆ ಇದೆ; ಬಿಸಿಬಿ ಮುಖ್ಯಸ್ಥ ತಮೀಮ್ ಇಕ್ಬಾಲ್ – Kannada News | Team India’s Bangladesh ODI T20 Series: BCB Confident, Official Announcement Soon?

ಪ್ರಸ್ತುತ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ (Team India) ಮುಂದಿನ ತಿಂಗಳು ಆಗಸ್ಟ್ 15 ರಿಂದ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲಿದೆ. ಇದಾದ ಬಳಿಕ ಸೀಮಿತ ಓವರ್‌ಗಳ ಸರಣಿಗಾಗಿ ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ (India vs Bangladesh) ಪ್ರವಾಸ ಕೈಗೊಳ್ಳಲಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಎರಡೂ ಮಂಡಳಿಗಳು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ.ಸದ್ಯಕ್ಕೆ ಕೇಳಿಬಂದಿರುವ ಮಾಹಿತಿ ಪ್ರಕಾರ, ಈ ಪ್ರವಾಸದಲ್ಲಿ ಭಾರತ ತಂಡವು ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಆದರೆ ಈ ಎರಡು ಸರಣಿಗಳಿಗಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡುತ್ತಾ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಉಭಯ ದೇಶಗಳ ನಡುವಿನ ಸಂಬಂಧ ಅಷ್ಟು ಉತ್ತಮವಾಗಿಲ್ಲ. ಅಲ್ಲದೆ 2026 ರ ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡ ಭಾರತಕ್ಕೆ ಬರುವುದುಕ್ಕೆ ನಿರಾಕರಿಸಿದ ಬಳಿಕ ಉಭಯ ಕ್ರಿಕೆಟ್ ಮಂಡಳಿಗಳ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಆದರೀಗ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ತನ್ನ ತಪ್ಪಿನ ಅರಿವಾಗಿದ್ದು, ಟೀಂ ಇಂಡಿಯಾವನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಇದಕ್ಕೆ ಅನುಗುಣವಾಗಿ ಬಿಸಿಬಿ ಮುಖ್ಯಸ್ಥ ತಮೀಮ್ ಇಕ್ಬಾಲ್, ಭಾರತ ತಂಡವು ಸರಣಿಗಾಗಿ ಬಾಂಗ್ಲಾಕ್ಕೆ ಭೇಟಿ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಜೊತೆ ಮಾತುಕತೆ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪ್ರಸ್ತುತ ಮುಖ್ಯಸ್ಥ ಮತ್ತು ಮಾಜಿ ಆಟಗಾರ ತಮೀಮ್ ಇಕ್ಬಾಲ್ ಈ ಬಗ್ಗೆ ಹೇಳಿಕೆ ನೀಡಿರುವುದಾಗಿ ಕ್ರಿಕ್‌ಬಜ್ ವರದಿ ಮಾಡಿದ್ದು ಅದರಲ್ಲಿ, ‘ದುರದೃಷ್ಟವಶಾತ್, ಭಾರತದ ವಿರುದ್ಧದ ಸರಣಿಯ ಬಗ್ಗೆ ನನಗೆ ಯಾವುದೇ ಸುದ್ದಿ ಇಲ್ಲ. ನಾನು ಬಿಸಿಸಿಐ ಜೊತೆ ಮಾತುಕತೆ ನಡೆಸುತ್ತಿದ್ದೇನೆ ಮತ್ತು ಬಿಸಿಬಿ ಸದಸ್ಯರಲ್ಲಿ ಇಮೇಲ್‌ಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಮತ್ತು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಬಾಂಗ್ಲಾದೇಶವು ತುಂಬಾ ಸುರಕ್ಷಿತ ದೇಶ. ಹೀಗಾಗಿ ಟೀಂ ಇಂಡಿಯಾ ಇಲ್ಲಿಗೆ ಬರುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ನಮ್ಮ ಕಡೆಯಿಂದ ಅಗತ್ಯವಿರುವ ಯಾವುದೇ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಆದರೆ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ ನಾನು ಬಿಸಿಬಿ ಅಧ್ಯಕ್ಷ, ಮತ್ತು ನಾನು ಎಂದಿಗೂ ದಾಟಬಾರದ ಮಿತಿಗಳನ್ನು ಹೊಂದಿದ್ದೇನೆ. ಆದ್ದರಿಂದ, ನನ್ನ ಸ್ಥಾನದಲ್ಲಿ ನನ್ನ ಜವಾಬ್ದಾರಿಯ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದಿದ್ದಾರೆ.

ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

ಸರಣಿಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ

ಈ ಸರಣಿಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಮೀಮ್ ಇಕ್ಬಾಲ್ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ, ಇದುವರೆಗಿನ ಚರ್ಚೆಗಳು ತುಂಬಾ ಸಕಾರಾತ್ಮಕವಾಗಿವೆ ಎಂದು ಹೇಳಿದ್ದಾರೆ. ಸರಣಿ ನಡೆಯುತ್ತದೆಯೋ ಇಲ್ಲವೋ ಎಂಬುದು ನಮಗೆ ಶೀಘ್ರದಲ್ಲೇ ತಿಳಿಯಬಹುದು. ಬಾಂಗ್ಲಾದೇಶ ಪ್ರಸ್ತುತ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ ಮತ್ತು 2027 ರ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:43 pm, Thu, 30 July 26

Source link

Exit mobile version