Vastu Tips: ಮನೆಯಲ್ಲಿ ನಿಂತುಹೋದ ಗಡಿಯಾರ ಇಟ್ಟಿದ್ದೀರಾ? ತಕ್ಷಣ ಈ ವಾಸ್ತು ದೋಷದ ಬಗ್ಗೆ ತಿಳಿದುಕೊಳ್ಳಿ! – Kannada News | Vastu Tips for Wall Clocks: Why You Should Never Keep a Stopped Clock at Home

ನಿಂತುಹೋದ ಗಡಿಯಾರ ವಾಸ್ತು ದೋಷImage Credit source: Getty Images

ಮನೆಯಲ್ಲಿ ಪ್ರತಿಯೊಂದು ವಸ್ತುವನ್ನು ಇಡುವ ದಿಕ್ಕು ಮತ್ತು ಸ್ಥಿತಿಯ ಬಗ್ಗೆ ವಾಸ್ತು ಶಾಸ್ತ್ರದಲ್ಲಿ (Vastu Shastra) ವಿಶೇಷ ಮಹತ್ವ ನೀಡಲಾಗಿದೆ. ಇದರ ಭಾಗವಾಗಿ, ಗಡಿಯಾರವು ಕೇವಲ ಸಮಯವನ್ನು ತೋರಿಸುವ ಸಾಧನವಲ್ಲ; ಬದಲಾಗಿ ಅದು ಸಮಯದ ಹರಿವು, ಜೀವನದ ನಿರಂತರ ಪ್ರಗತಿ ಮತ್ತು ಮನೆಯ ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಅದಕ್ಕಾಗಿಯೇ ವಾಸ್ತು ತಜ್ಞರು ಮನೆಯಲ್ಲಿ ನಿಂತುಹೋದ, ಮುರಿದ ಅಥವಾ ದೀರ್ಘಕಾಲದಿಂದ ಕೆಲಸ ಮಾಡದ ಗಡಿಯಾರಗಳನ್ನು ಇಡದಂತೆ ಸಲಹೆ ನೀಡುತ್ತಾರೆ. ಈ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ವಾಸ್ತು ಮಾರ್ಗದರ್ಶನ ಇಲ್ಲಿದೆ.

ನಿಂತುಹೋದ ಗಡಿಯಾರವನ್ನು ದುರದೃಷ್ಟಕರವೆಂದು ಏಕೆ ಪರಿಗಣಿಸಲಾಗುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರವು ಜೀವನದ ನಿರಂತರ ಚಲನೆ ಮತ್ತು ಯಶಸ್ಸಿಗೆ ಪ್ರತೀಕವಾಗಿದೆ. ಆದರೆ ಮನೆಯಲ್ಲಿ ನಿಂತುಹೋದ ಗಡಿಯಾರವನ್ನು ಇಡುವುದರಿಂದ ಜೀವನದಲ್ಲಿ ಅಡೆತಡೆಗಳು, ಕಾರ್ಯಗಳಲ್ಲಿ ಅನಗತ್ಯ ವಿಳಂಬ ಮತ್ತು ಮಾನಸಿಕ ನಿಶ್ಚಲತೆ ಉಂಟಾಗುತ್ತದೆ ಎಂದು ನಂಬಲಾಗಿದೆ. ಇಂತಹ ಹಾಳಾದ ಗಡಿಯಾರಗಳನ್ನು ದೀರ್ಘಕಾಲ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಸಕಾರಾತ್ಮಕ ಶಕ್ತಿಯ ಹರಿವಿಗೆ ತಡೆಯುಂಟಾಗುತ್ತದೆ. ಇದು ಕುಟುಂಬದ ಸದಸ್ಯರ ಆರ್ಥಿಕ ಮತ್ತು ವೃತ್ತಿಪರ ಪ್ರಗತಿಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಬಹುದು.

ಗಡಿಯಾರವನ್ನು ಇಡಲು ಸೂಕ್ತವಾದ ದಿಕ್ಕುಗಳು ಯಾವುವು?

ವಾಸ್ತು ಪ್ರಕಾರ ಗಡಿಯಾರವನ್ನು ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಯ ಮೇಲೆ ಹಾಕುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಉತ್ತರ ದಿಕ್ಕು ಧನದೇವತೆಯಾದ ಕುಬೇರನಿಗೆ ಸಂಬಂಧಿಸಿದ್ದರಿಂದ, ಈ ದಿಕ್ಕಿನಲ್ಲಿ ಗಡಿಯಾರ ಇಡುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಲಭಿಸುತ್ತವೆ. ಹಾಗೆಯೇ, ಪೂರ್ವ ದಿಕ್ಕನ್ನು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದ್ದು, ಈ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಆದರೆ, ಹೆಚ್ಚಿನ ವಾಸ್ತು ತಜ್ಞರು ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡದಂತೆ ಸಲಹೆ ನೀಡುತ್ತಾರೆ, ಏಕೆಂದರೆ ಇದನ್ನು ಯಮನ ದಿಕ್ಕು ಹಾಗೂ ಸ್ಥಗಿತತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ತಕ್ಷಣವೇ ಬದಲಾಯಿಸಬೇಕಾದ ಗಡಿಯಾರಗಳು ಯಾವುವು?

ನಿಮ್ಮ ಮನೆಯಲ್ಲಿ ಕಾರ್ಯನಿರ್ವಹಿಸದ ಅಥವಾ ಹಾಳಾದ ಗಡಿಯಾರಗಳಿದ್ದರೆ ಅವುಗಳನ್ನು ತಕ್ಷಣವೇ ದುರಸ್ತಿ ಮಾಡಿಸಬೇಕು ಅಥವಾ ಬದಲಾಯಿಸಬೇಕು. ಮುಖ್ಯವಾಗಿ, ಸಂಪೂರ್ಣವಾಗಿ ನಿಂತುಹೋದ ಗಡಿಯಾರ, ಗಾಜು ಒಡೆದ ಅಥವಾ ಡಯಲ್ ಹಾನಿಗೊಳಗಾದ ಗಡಿಯಾರಗಳನ್ನು ಮನೆಯಲ್ಲಿ ಇಡಬಾರದು. ಇದರ ಜೊತೆಗೆ, ಬ್ಯಾಟರಿ ಹೊಸದಾಗಿದ್ದರೂ ಪದೇ ಪದೇ ನಿಲ್ಲುವ ಹಾಗೂ ಯಾವಾಗಲೂ ತಪ್ಪು ಅಥವಾ ಹಿಂದಿನ ಸಮಯವನ್ನು ತೋರಿಸುವ ಗಡಿಯಾರಗಳು ಮನೆಯ ವಾತಾವರಣದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಆದ್ದರಿಂದ ಸರಿಯಾದ ಸಮಯ ತೋರಿಸುವ ಗಡಿಯಾರಗಳನ್ನು ಮಾತ್ರ ಬಳಸುವುದು ಸೂಕ್ತ.

ಇದನ್ನೂ ಓದಿ: ‘ಪ್ಲಾಟ್ ಖರೀದಿಸಿ, VIP ದರ್ಶನ ಪಡೆಯಿರಿ’ ಜಾಹೀರಾತು ವಿವಾದ; ಟಿಟಿಡಿ ಸ್ಪಷ್ಟನೆ

ಮನೆಯಲ್ಲಿರಬೇಕಾದ ಗಡಿಯಾರಗಳ ಸಂಖ್ಯೆ:

ವಾಸ್ತು ಶಾಸ್ತ್ರವು ಮನೆಯಲ್ಲಿ ಎಷ್ಟು ಗಡಿಯಾರಗಳಿರಬೇಕು ಎಂಬ ನಿರ್ದಿಷ್ಟ ಸಂಖ್ಯೆಯನ್ನು ನಿಗದಿಪಡಿಸುವುದಿಲ್ಲ. ಆದರೆ ಮನೆಯ ಪ್ರತಿಯೊಂದು ಕೊಠಡಿಯಲ್ಲಿರುವ ಗಡಿಯಾರಗಳು ಒಂದೇ ಸರಿಯಾದ ಸಮಯವನ್ನು ತೋರಿಸುತ್ತಿರಬೇಕು. ಬೇರೆ ಬೇರೆ ಗಡಿಯಾರಗಳು ಭಿನ್ನ ಸಮಯವನ್ನು ತೋರಿಸಿದರೆ ಅದು ಮನೆಯಲ್ಲಿ ಗೊಂದಲ ಮತ್ತು ಅಶಾಂತಿಯನ್ನು ತರುತ್ತದೆ. ಇನ್ನು ಹಳೆಯ ಅಥವಾ ಪುರಾತನ (Antique) ಗಡಿಯಾರಗಳ ವಿಷಯಕ್ಕೆ ಬಂದರೆ, ಅವು ಉತ್ತಮ ಸ್ಥಿತಿಯಲ್ಲಿದ್ದು ಸರಿಯಾದ ಸಮಯ ತೋರಿಸುತ್ತಿದ್ದರೆ ಅವುಗಳನ್ನು ಇಡುವುದು ಅಶುಭವೇನಲ್ಲ. ಆದರೆ ಹಾಳಾದ ಪುರಾತನ ಗಡಿಯಾರವನ್ನು ಕೇವಲ ಅಲಂಕಾರಕ್ಕಾಗಿ ಇಡುವುದು ವಾಸ್ತು ಪ್ರಕಾರ ದೋಷವೆನಿಸುತ್ತದೆ.

ವಾಸ್ತು ಪ್ರಕಾರ ಅನುಸರಿಸಬೇಕಾದ ಪ್ರಮುಖ ನಿಯಮಗಳು:

ಮನೆಯಲ್ಲಿ ವಾಸ್ತು ದೋಷ ಉಂಟಾಗದಂತೆ ತಡೆಯಲು ಕೆಲವು ಸರಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಡಿಯಾರವನ್ನು ಯಾವಾಗಲೂ ಸರಿಯಾದ ಸಮಯಕ್ಕೆ ಹೊಂದಿಸಿಡುವುದು ಮತ್ತು ಗಡಿಯಾರ ಹಾಳಾದ ತಕ್ಷಣ ಅದನ್ನು ದುರಸ್ತಿ ಮಾಡಿಸುವುದು ಅತ್ಯಗತ್ಯ. ಬಿರುಕು ಬಿಟ್ಟ ಗಾಜು ಇರುವ ಗಡಿಯಾರಗಳನ್ನು ತಕ್ಷಣವೇ ತೆಗೆದುಹಾಕಬೇಕು. ಹಾಗೆಯೇ, ಗಡಿಯಾರದ ಮೇಲೆ ಧೂಳು ಕೂರದಂತೆ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಮುಖ್ಯವಾಗಿ ಗಡಿಯಾರವನ್ನು ಉತ್ತರ ಅಥವಾ ಪೂರ್ವದ ಗೋಡೆಯ ಮೇಲೆಯೇ ನೇತುಹಾಕಲು ಆದ್ಯತೆ ನೀಡಬೇಕು.

(ಗಮನಿಸಿ: ಈ ಮೇಲಿನ ಮಾಹಿತಿಯು ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿದೆ. ಇವುಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿರುವುದಿಲ್ಲ.)

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಟ್ಟಡ ಡೆಮಾಲಿಷನ್ ಮಾಡುವ ಮುನ್ನ ಎಚ್ಚರ! ಇನ್ಮುಂದೆ ಬರಲಿದೆ ಹೊಸ ನಿಯಮ – Kannada News | Caution Before Demolishing a Building: New Demolition Rules Coming Soon

ಪ್ರಾತಿನಿಧಿಕ ಚಿತ್ರ Image Credit source: Getty images

ಬೆಂಗಳೂರು, ಜುಲೈ 30: ಕಟ್ಟಡ ತ್ಯಾಜ್ಯ ವಿಲೇವಾರಿ ಸೇರಿದಂತೆ ಕಸ ಸುರಿಯುವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕ್ರಮಕ್ಕೆ ಮುಂದಾಗಿದೆ. ಆ ಮೂಲಕ ನಗರದ ಅಂದ ಹಾಳಾಗದಂತೆ ವಹಿಸಲಾಗುತ್ತಿದೆ. ಇನ್ನು ಕಟ್ಟಡ ಅವಶೇಷಗಳನ್ನು ಎಲ್ಲೆಂದರಲ್ಲಿ ಸುರಿಯುವುದಕ್ಕೆ ಬ್ರೇಕ್ ಹಾಕಲು ಪಾಲಿಕೆ ಹೊಸ ನಿಯಮ ಜಾರಿಗೆ ಮುಂದಾಗಿದೆ. ಇನ್ಮುಂದೆ ಕಟ್ಟಡ ಅವಶೇಷ ವಿಲೇವಾರಿಗೂ (Demolition)  ನಿಯಮಗಳು ಬರಲಿವೆ.

ಎಲ್ಲೆಂದರಲ್ಲಿ ಕಟ್ಟಡದ ಅವಶೇಷ ವಿಲೇವಾರಿ ಮಾಡಿದರೆ ಬೀಳುತ್ತೆ ದಂಡ 

ಇನ್ಮುಂದೆ ಮನೆ ಅಥವಾ ಕಟ್ಟಡ ಡೆಮಾಲಿಷನ್ ಮಾಡುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳದೆ ಕಟ್ಟಡದ ಅವಶೇಷಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಿದರೆ ದಂಡ ಬೀಳುವುದು ಖಚಿತ.

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಡಿಕೆ ಶಿವಕುಮಾರ್

ಈ ಅವಶೇಷಗಳ ವಿಲೇವಾರಿಗೆ ಸಂಬಂಧಿಸಿದ ಕಂಪನಿಯು ಪ್ರತಿ ಟನ್‌ಗೆ 760 ರೂ ದರ ನಿಗದಿಪಡಿಸಲಿದೆ. ನಗರದ ಸೌಂದರ್ಯ ಹಾಳಾಗದಂತೆ ತಡೆಯಲು ಮತ್ತು ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಲು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಮತ್ತಷ್ಟು ಕ್ರಮಕೈಗೊಳ್ಳಲಾಗುವುದು: ಸಚಿವ ಕೃಷ್ಣಬೈರೇಗೌಡ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಮತ್ತಷ್ಟು ಕ್ರಮಕೈಗೊಳ್ಳಲಾಗುತ್ತೆ. ಖಾಸಗಿ ವಾಹನಗಳಲ್ಲಿ ಕಸದ ವಿಲೇವಾರಿ ಮಾಡಲಾಗುತ್ತೆ. ಇನ್ನೂ ಕೆಲವರು ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿದ್ದು, ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ ಇನ್ಮುಂದೆ ಯಾರೆಲ್ಲಾ ಕಸ ವಿಲೇವಾರಿ ಮಾಡುತ್ತಾರೋ, ಆ ಎಲ್ಲಾ ವಾಹನಗಳಿಗೆ ಜಿಪಿಎಸ್ ಹಾಕಬೇಕು. ಕಸವನ್ನು ವಿಲೇವಾರಿ ಮಾಡುವವರು ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಬಗ್ಗೆ ಪೊಲೀಸ್​​, ಸಾರಿಗೆ ಇಲಾಖೆ ಜೊತೆ ಸಭೆ ನಡೆಸಿ, ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರುವಂತೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದೆ

ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರು ವಿಚಾರವಾಗಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ಈಗಾಗಲೇ ಸಿಎಂ ಡಿಕೆ ಶಿವಕುಮಾರ್​ ಜೊತೆಗೆ ಚರ್ಚೆ ಮಾಡಲಾಗಿದೆ. ಸರ್ಕಾರವೂ ಕುಡಿಯುವ ‌ನೀರಿಗೆ ಆದ್ಯತೆ ಅಂತಾ ಹೇಳಿದೆ’ ಎಂದರು.

ವರದಿ: ಅರುಣ್​​ ಕುಮಾರ್​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

HIV ತವರಾಗುತ್ತಿದೆಯಾ ಬೆಂಗಳೂರು?: ಯುವ ಜನತೆಯಲ್ಲೇ ಸೋಂಕು ಪತ್ತೆಯಿಂದ ಹೆಚ್ಚಿದ ಆತಂಕ – Kannada News | Is Bengaluru Becoming an HIV Hotspot? Rising Infections Among Youth Trigger Concern

ಬೆಂಗಳೂರು, ಜುಲೈ 30:  ಸಲಿಂಗ ಕಾಮದ ಪರಿಣಾಮವಾಗಿ ಬೆಂಗಳೂರಿನಲ್ಲಿ ಹೆಚ್​​ಐವಿ ಸೋಂಕಿತ ಪುರುಷರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಡೇಟಿಂಗ್​​ ಆ್ಯಪ್​​ಗಳ ಹೆಚ್ಚಳವೂ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆತಂಕಕಾರಿ ವಿಚಾರವೆಂದರೆ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳ ಹಾಸ್ಟೆಲ್​​ ವಿದ್ಯಾರ್ಥಿಗಳು ಮತ್ತು ಪಿಜಿಗಳಲ್ಲಿ ನೆಲೆಸಿರುವವರೇ ಹೆಚ್ಚಿನ ಪೈಕಿ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಐದೇ ತಿಂಗಳಲ್ಲಿ 4,795 HIV ಪಾಸಿಟಿವ್ ಕೇಸ್ ಪತ್ತೆ

ಕಳೆದ 5 ತಿಂಗಳ ಅವಧಿಯಲ್ಲಿ 4,795 HIV ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಪೈಕಿ ಸೋಂಕಿಗೆ ತುತ್ತಾದವರು ಬಹುತೇಕ ಸಲಿಂಗಿಗಳು. ದೇಶದಲ್ಲಿ ಅತಿ ಹೆಚ್ಚು ಏಡ್ಸ್ ಕೇಸ್​​ ದಾಖಲಾಗುವ ರಾಜ್ಯವಾಗಿ ಕರ್ನಾಟಕ ಮಾರ್ಪಟ್ಟಿದ್ದು, ಅದರಲ್ಲೂ ಬೆಂಗಳೂರಿನಲ್ಲಿಯೇ ಅಧಿಕ ಪ್ರಕರಣಗಳು ದಾಖಲಾಗುತ್ತಿರೋದು ಆರೋಗ್ಯ ಇಲಾಖೆಯ ಟೆನ್ಷನ್​​ಗೆ ಕಾರಣವಾಗಿದೆ. ಗಮನಿಸಲೇ ಬೇಕಾದ ವಿಷಯ ಎಂದರೆ ಅವಿವಾಹಿತರಲ್ಲಿಯೇ HIV ಸೋಂಕು ಹೆಚ್ಚಿದ್ದು, ಇದರ ಪ್ರಮಾಣ ಶೇ. 20-25ರಷ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಕ್ಕಳನ್ನೂ ಕಾಡುತ್ತಿದೆ ಹೃದಯಾಘಾತದ ಸಮಸ್ಯೆ! ಆತಂಕ ಬೇಡ, ಜಾಗೃತಿ ಇರಲಿ ಎಂದ ಬೆಂಗಳೂರಿನ ವೈದ್ಯರು

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕಿ ಪದ್ಮಾ ಬಸವಂತಪ್ಪ, ಸೋಂಕಿತರಿಂದ ಇತರರಿಗೂ ಅಪಾಯ ಇರುವ ಕಾರಣ ಕಾಲೇಜು, ಐಟಿ ಕಂಪನಿಗಳು, ಕಾರ್ಮಿಕರು, ಚಾಲಕರು, ಟ್ರಕ್ ಚಾಲಕರಿಗೆ ಜಾಗೃತಿ ಮೂಡಿಸಬೇಕು. ಸಲಿಂಗ ಕಾಮ, ಲೈಂಗಿಕ ಕಾರ್ಯಕರ್ತರು ಹೈ ರಿಸ್ಕ್ ಕ್ಯಾಟಗರಿಗೆ ಬರ್ತಾರೆ. ಹೀಗಾಗಿ ಇವರಿಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಮಾಡಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆಪ್​​ಗಳ ಮೂಲಕ ಲೈಂಗಿಕ ಚಟುವಟಿಕೆಗಳು ಹೆಚ್ಚಾಗ್ತಿವೆ ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ನಿಯಮದ ಪ್ರಕಾರ ಹೆಚ್​​ಐವಿ ಪರೀಕ್ಷೆ ಕಡ್ಡಾಯ ಮಾಡಲು ಸಾಧ್ಯವಿಲ್ಲ, ಗಮನಕ್ಕೆ ತರದೇ ಟೆಸ್ಟ್ ಮಾಡಲು ಆಗಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gangeshwar Mahadev Temple: ಸಮುದ್ರದ ಅಲೆಗಳೇ ಶಿವನಿಗೆ ಅಭಿಷೇಕ ಮಾಡುವ ಅದ್ಭುತ ಕ್ಷೇತ್ರ; ಪಾಂಡವರು ಪ್ರತಿಷ್ಠಾಪಿಸಿದ ಪಂಚ ಶಿವಲಿಂಗಗಳ ವಿಶೇಷತೆ ಇಲ್ಲಿದೆ – Kannada News | Gangeshwar Mahadev Temple: The Unique Diu Temple Where Sea Waves Perform Abhishekam

ಗಂಗೇಶ್ವರ ಮಹಾದೇವ ದೇವಸ್ಥಾನImage Credit source: youtube

ಭಾರತದ ಅನೇಕ ಪ್ರಾಚೀನ ಶಿವ ದೇವಾಲಯಗಳು ತಮ್ಮ ಪೌರಾಣಿಕ ಹಿನ್ನೆಲೆ ಮತ್ತು ಅದ್ಭುತ ವೈಶಿಷ್ಟ್ಯಗಳಿಂದ ಭಕ್ತರನ್ನು ಆಕರ್ಷಿಸುತ್ತವೆ. ಅಂತಹ ಅಪರೂಪದ ಕ್ಷೇತ್ರಗಳಲ್ಲಿ ಗುಜರಾತ್‌ನ ದಿಯು (Diu) ಸಮೀಪದ ಫುದಮ್ (Fudam) ಗ್ರಾಮದಲ್ಲಿರುವ ಗಂಗೇಶ್ವರ ಮಹಾದೇವ ದೇವಸ್ಥಾನ ಕೂಡ ಒಂದು. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ದೇವಾಲಯವು ಮಹಾಭಾರತದ ಪಾಂಡವರೊಂದಿಗೆ ಸಂಬಂಧ ಹೊಂದಿದೆ ಎಂಬ ನಂಬಿಕೆ ಇರುವುದರಿಂದ ಭಕ್ತರ ಪಾಲಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಪ್ರಕೃತಿ ಮತ್ತು ಭಕ್ತಿಯ ಸಂಗಮವೇ ವಿಶೇಷ. ಸಮುದ್ರದ ಅಲೆಗಳು ದಿನವಿಡೀ ಶಿವಲಿಂಗಗಳಿಗೆ ಅಭಿಷೇಕ ಮಾಡುವ ದೃಶ್ಯವನ್ನು ನೋಡಲು ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ.

ಪಾಂಡವರೊಂದಿಗೆ ಇರುವ ಪೌರಾಣಿಕ ನಂಟು:

ಸ್ಥಳೀಯ ಪುರಾಣಗಳ ಪ್ರಕಾರ, ಮಹಾಭಾರತ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಹಾಗೂ ಶಿವನ ಕೃಪೆ ಪಡೆಯಲು ಈ ಸ್ಥಳದಲ್ಲಿ ತಪಸ್ಸು ನಡೆಸಿದರು. ಇದೇ ವೇಳೆ ಅವರು ಐದು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಶಿವನ ಆರಾಧನೆ ಮಾಡಿದರು ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ಈ ಕ್ಷೇತ್ರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.

ಸಮುದ್ರದ ಅಲೆಗಳೇ ಮಾಡುವ ಶಿವಾಭಿಷೇಕ:

ಗಂಗೇಶ್ವರ ಮಹಾದೇವ ದೇವಸ್ಥಾನದ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಇಲ್ಲಿರುವ ಐದು ಶಿವಲಿಂಗಗಳು ಸಮುದ್ರದ ತೀರದಲ್ಲೇ ನೆಲೆಗೊಂಡಿವೆ. ಉಬ್ಬರವೇಳೆ (High Tide) ಸಮಯದಲ್ಲಿ ಸಮುದ್ರದ ಅಲೆಗಳು ಶಿವಲಿಂಗಗಳನ್ನು ಸಂಪೂರ್ಣವಾಗಿ ಆವರಿಸುತ್ತವೆ. ಬಳಿಕ ಅಲೆಗಳು ಹಿಂದಕ್ಕೆ ಸರಿದಾಗ ಶಿವಲಿಂಗಗಳು ಮತ್ತೆ ಗೋಚರಿಸುತ್ತವೆ. ಭಕ್ತರ ನಂಬಿಕೆಯ ಪ್ರಕಾರ, ಈ ನಿರಂತರ ಜಲಾಭಿಷೇಕವನ್ನು ಸ್ವತಃ ಪ್ರಕೃತಿಯೇ ಶಿವನಿಗೆ ಸಲ್ಲಿಸುವ ಪೂಜೆಯಾಗಿದೆ. ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವುದು ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ.

ಗುಹೆಯಂತಹ ವಾತಾವರಣದ ಆಧ್ಯಾತ್ಮಿಕ ಅನುಭವ:

ದೇವಾಲಯವು ಕಲ್ಲಿನ ಬಂಡೆಗಳ ನಡುವೆ ಗುಹೆಯಂತಹ ವಾತಾವರಣದಲ್ಲಿ ನಿರ್ಮಾಣಗೊಂಡಿದೆ. ಒಂದೆಡೆ ಅರಬ್ಬೀ ಸಮುದ್ರದ ಅಲೆಗಳ ಘರ್ಜನೆ, ಮತ್ತೊಂದೆಡೆ ಶಿವನ ಸಾನ್ನಿಧ್ಯ ಭಕ್ತರಲ್ಲಿ ವಿಶೇಷ ಭಕ್ತಿ ಭಾವವನ್ನು ಮೂಡಿಸುತ್ತದೆ. ಪ್ರಕೃತಿಯ ನಿಶ್ಶಬ್ದತೆ ಮತ್ತು ಸಮುದ್ರದ ಅಲೆಗಳ ನಾದ ಈ ಕ್ಷೇತ್ರಕ್ಕೆ ವಿಶಿಷ್ಟವಾದ ಆಕರ್ಷಣೆಯನ್ನು ನೀಡಿವೆ.

ಇದನ್ನೂ ಓದಿ: ‘ಪ್ಲಾಟ್ ಖರೀದಿಸಿ, VIP ದರ್ಶನ ಪಡೆಯಿರಿ’ ಜಾಹೀರಾತು ವಿವಾದ; ಟಿಟಿಡಿ ಸ್ಪಷ್ಟನೆ

ಗಂಗೇಶ್ವರ ಮಹಾದೇವ ದೇವಸ್ಥಾನಕ್ಕೆ ಹೇಗೆ ಹೋಗಬಹುದು?

  • ವಿಮಾನ ಮಾರ್ಗ: ದಿಯು ವಿಮಾನ ನಿಲ್ದಾಣ (ನಗೋವಾ) ಇಲ್ಲಿನ ಹತ್ತಿರದ ವಿಮಾನ ನಿಲ್ಧಾಣವಾಗಿದೆ. ಅಲ್ಲದೆ ದಮನ್ ಮತ್ತು ದಿಯು ನಡುವೆ ಹೆಲಿಕಾಪ್ಟರ್ ಸೇವೆಯೂ ಲಭ್ಯವಿದ್ದು, ಪ್ರವಾಸಿಗರಿಗೆ ಸುಲಭ ಪ್ರಯಾಣದ ವ್ಯವಸ್ಥೆ ಇದೆ.
  • ರೈಲು ಮಾರ್ಗ: ಈ ದೇವಸ್ಥಾನಕ್ಕೆ ಸಮೀಪದ ಪ್ರಮುಖ ರೈಲು ನಿಲ್ದಾಣ ವೇರಾವಲ್ (Veraval) ಆಗಿದ್ದು, ಇದು ಸುಮಾರು 90 ಕಿ.ಮೀ. ದೂರದಲ್ಲಿದೆ. ದಿಯುವಿನಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ದೆಲ್ವಾಡಾ (Delwada) ರೈಲು ನಿಲ್ದಾಣಕ್ಕೂ ರೈಲು ಸೇವೆ ಲಭ್ಯವಿದೆ.
  • ರಸ್ತೆ ಮಾರ್ಗ: ಗುಜರಾತ್ ಮತ್ತು ಮಹಾರಾಷ್ಟ್ರದಿಂದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ದಿಯು ತಲುಪಬಹುದು. ಮುಂಬೈ, ಅಹಮದಾಬಾದ್, ರಾಜ್ಕೋಟ್, ಸೂರತ್, ವಡೋದರಾ ಹಾಗೂ ಭಾವನಗರದಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆಗಳು ಲಭ್ಯವಿದ್ದು, ರಸ್ತೆ ಮಾರ್ಗದ ಪ್ರಯಾಣವೂ ಸುಲಭವಾಗಿದೆ.

ಭಕ್ತಿ ಮತ್ತು ಪ್ರಕೃತಿಯ ಅಪರೂಪದ ಸಂಗಮ:

ಗಂಗೇಶ್ವರ ಮಹಾದೇವ ದೇವಸ್ಥಾನವು ಕೇವಲ ಒಂದು ಧಾರ್ಮಿಕ ಕ್ಷೇತ್ರವಲ್ಲ; ಇದು ಪೌರಾಣಿಕ ಇತಿಹಾಸ, ಪ್ರಕೃತಿಯ ಸೌಂದರ್ಯ ಮತ್ತು ಆಧ್ಯಾತ್ಮಿಕ ಅನುಭವಗಳ ಸಂಗಮವಾಗಿದೆ. ಸಮುದ್ರದ ಅಲೆಗಳು ಪ್ರತಿದಿನ ಶಿವಲಿಂಗಗಳಿಗೆ ಅಭಿಷೇಕ ಮಾಡುವ ಅಪರೂಪದ ದೃಶ್ಯ ಈ ಕ್ಷೇತ್ರದ ಪ್ರಮುಖ ಆಕರ್ಷಣೆ. ಭಕ್ತಿ, ಇತಿಹಾಸ ಹಾಗೂ ಪ್ರಕೃತಿಯನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಬಯಸುವವರು ಜೀವನದಲ್ಲಿ ಒಮ್ಮೆಯಾದರೂ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಲೇಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:53 pm, Thu, 30 July 26

Source link

ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಡಿಕೆ ಶಿವಕುಮಾರ್ – Kannada News | CM DK Shivakumar Calls All Party Meeting On August 2 Over Cauvery water issue

ಬೆಂಗಳೂರು, (ಜುಲೈ 30): ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಮುಂದಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕಾನೂನು ಹಾಗೂ ರಾಜಕೀಯ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲು ಸಿಎಂ ಡಿಕೆ ಶಿವಕುಮಾರ್ ಅವರು ಸರ್ವಪಕ್ಷಗಳ ಸಭೆ (All-Party Meeting) ಕರೆದಿದ್ದಾರೆ. ಆಗಸ್ಟ್ 2ರ ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸರ್ವಪಕ್ಷ ಸಭೆ ಕರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯುವಕರ ಕಲ್ಯಾಣಕ್ಕೆ ಸರ್ಕಾರ ಬದ್ಧ: ರಾಜ್ಯಸಭೆಯಲ್ಲೂ ಮಂಡನೆಯಾಯ್ತು ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ – Kannada News | Rajya Sabha Debates Exam Fraud Bill 2026: New Law to End Paper Leaks and Protect Youth

ನವದೆಹಲಿ, ಜುಲೈ 30: ಲೋಕಸಭೆಯಲ್ಲಿ ಅಂಗೀಕಾರಗೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆ(Rajya Sabha)ಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ಅನ್ನು ಮಂಡಿಸಿದ್ದಾರೆ. ಈ ಕಠಿಣ ಶಾಸನವು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಹಾಗೂ ಯುವಜನರ ಹಿತಾಸಕ್ತಿ ಮತ್ತು ಭವಿಷ್ಯವನ್ನು ಕಾಯುವಲ್ಲಿ ಸರ್ಕಾರದ ಅತ್ಯುನ್ನತ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಹಿರಿಯರ ಹಾಗೂ ಪ್ರಬುದ್ಧರ ಸದನವಾದ ರಾಜ್ಯಸಭೆಯು ಧ್ವನಿ ಎತ್ತುವ ಮೂಲಕ ಇದನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಲೋಕಸಭೆಯಲ್ಲಿ ಸುಮಾರು 10 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆ ಹಾಗೂ ಪ್ರತಿಪಕ್ಷಗಳ ಅಡೆತಡೆಗಳ ನಡುವೆಯೂ ಮಸೂದೆ ಅಂಗೀಕಾರಗೊಂಡಿರುವುದನ್ನು ಸಿಂಗ್ ಉಲ್ಲೇಖಿಸಿದರು. ಪರೀಕ್ಷಾ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಲು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳಿಗೆ ವಿಶ್ವಾಸ ಮೂಡಿಸಲು ಈ ಹೊಸ ಕಾನೂನು ಸಹಕಾರಿಯಾಗಲಿದೆ ಎಂದರು.

ಪರೀಕ್ಷಾ ವಂಚನೆ ಹಾಗೂ ಪೇಪರ್ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲಾಗುವುದು. ಸಂಘಟಿತ ಪರೀಕ್ಷಾ ಮಾಫಿಯಾ ಅಥವಾ ಗ್ಯಾಂಗ್‌ಗಳಿಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ.ವರೆಗೆ ಭಾರಿ ದಂಡ ವಿಧಿಸಲು ತಿದ್ದುಪಡಿಯಲ್ಲಿ ಅವಕಾಶವಿದೆ. ಪೇಪರ್ ಸೋರಿಕೆ ತನಿಖೆಯನ್ನು ಕೇವಲ 2 ತಿಂಗಳೊಳಗೆ ಪೂರ್ಣಗೊಳಿಸಬೇಕು.

ಮತ್ತಷ್ಟು ಓದಿ: ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ

ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದ್ದು, ಚಾರ್ಜ್‌ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ದಿನನಿತ್ಯದ ಆಧಾರದಲ್ಲಿ ವಿಚಾರಣೆ ಮುಗಿಸಿ ತೀರ್ಪು ನೀಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ ತನಿಖೆಗಾಗಿ ಕೇಂದ್ರ ಸರ್ಕಾರವೇ ಪ್ರತ್ಯೇಕ ‘ವಿಶೇಷ ಕಾರ್ಯಪಡೆ’ (STF) ರಚಿಸಬಹುದಾಗಿದೆ. ಜುಲೈ 20 ರಂದು ಜಂತರ್ ಮಂತರ್ ಬಳಿ ‘ಸಂಸತ್ ಚಲೋ’ ನಡೆಸಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪೆಲೆಟ್ ಗನ್ ಬಳಸಲು ಆದೇಶಿಸಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಭಾರಿ ಗದ್ದಲ ಏರ್ಪಟ್ಟಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮದರ್ ಪ್ರಾಮಿಸ್’ ಬಳಿಕ ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ರಿಲೀಸ್​​ಗೆ ರೆಡಿ ಆದ ಡಾಲಿ ಧನಂಜಯ್ – Kannada News | Dhananjaya Starrer Anna From Mexico To Release On December 24; Badava Rascal Combo Is Back

ನಟ ಡಾಲಿ ಧನಂಜಯ್ (Daali Dhananjay) ನಟಿಸಿ, ನಿರ್ಮಿಸಿರೋ ‘ಮದರ್ ಪ್ರಾಮಿಸ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಈ ಚಿತ್ರದ ಗೆಲುವಿನ ಬಳಿಕ ಅವರು ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ಬಿಡುಗಡೆಗೆ ರೆಡಿ ಆಗಿದ್ದಾರೆ. ಈ ಚಿತ್ರದ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಾಲು ಸಾಲು ರಜಾದಿನಗಳ ಲಾಭ ಪಡೆಯಲು ಈ ಸಿನಿಮಾ ಡಿಸೆಂಬರ್ 24ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ. ವರ್ಷಾಂತ್ಯಕ್ಕೆ ಭರ್ಜರಿ ಮನರಂಜನೆಯ ಧಮಾಕಾ ನೀಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮತ್ತೆ ಒಂದಾಯಿತು ‘ಬಡವ ರಾಸ್ಕಲ್’ ಕಾಂಬಿನೇಷನ್

‘ಅಣ್ಣ ಫ್ರಮ್‌ ಮೆಕ್ಸಿಕೋ’ ಚಿತ್ರದಲ್ಲಿ ಮತ್ತೊಂದು ವಿಶೇಷತೆ ಇದೆ. 2021ರ ಡಿಸೆಂಬರ್‌ನಲ್ಲಿ ‘ಬಡವ ರಾಸ್ಕಲ್’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ಸೂಪರ್ ಹಿಟ್ ಆಗಿತ್ತು. ಧನಂಜಯ್ ಅವರಿಗೆ ನಿರ್ಮಾಪಕರಾಗಿ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು ಈ ಸಿನಿಮಾ. ಈ ಚಿತ್ರದ ಡೈರೆಕ್ಟರ್ ಶಂಕರ್ ಗುರು, ಈಗ ಎರಡನೇ ಬಾರಿಗೆ ಡಾಲಿಗೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದೇ ಡಿಸೆಂಬರ್ ತಿಂಗಳ ಸೆಂಟಿಮೆಂಟ್‌ನೊಂದಿಗೆ ಈ ಹಿಟ್ ಜೋಡಿ ಕಂಬ್ಯಾಕ್ ಮಾಡುತ್ತಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ

ಪಕ್ಕಾ ಕಮರ್ಷಿಯಲ್ ಮತ್ತು ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧನಂಜಯ್ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಇವರೊಂದಿಗೆ ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ಮೊದಲಾದವರು ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಲೂಸ್ ಮಾದ ಯೋಗಿ ಅವರು ಈ ಚಿತ್ರದಲ್ಲಿ ಅತ್ಯಂತ ವಿಶೇಷ ಹಾಗೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್ ಹೀಗೆ ಹೇಳಿದ್ದೇಕೆ?

ವಾಸುಕಿ ವೈಭವ್ ಮ್ಯೂಸಿಕ್ ಮ್ಯಾಜಿಕ್

ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್‌ನಡಿ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೇಲೆ ಈಗಾಗಲೇ ಭಾರಿ ಹೈಪ್ ಸೃಷ್ಟಿಯಾಗಿದೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ಅಜಯ್ ಅವರ ಸಂಕಲನ ಹಾಗೂ ಗುಣ ಅವರ ಕಲಾ ನಿರ್ದೇಶನವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಡಿಸೆಂಬರ್ 24ರ ಗ್ರ್ಯಾಂಡ್ ರಿಲೀಸ್‌ಗೆ ಕೌಂಟ್‌ಡೌನ್ ಶುರು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ: 6 ಜನರ ವಿರುದ್ಧ FIR – Kannada News | Attack Attempt on Bovi Community Seer by Community Leaders; FIR Registered Against Six

ಚಿಕ್ಕಮಗಳೂರು, ಜುಲೈ 30: ಜಿಲ್ಲೆಯ ಕಡೂರು ಪಟ್ಟಣದ ಐಬಿಯಲ್ಲಿ ನಡೆದ ಗಲಾಟೆ ವೇಳೆ ಬೋವಿ ಸಮುದಾಯದ ಗಂಗಾಧರ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯ ಅವಧೂತ ಮಠದ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ಸಂಬಂಧ ಬೋವಿ ಸಮಾಜದ ಅಧ್ಯಕ್ಷ ಸೇರಿದಂತೆ 6 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಸ್ವಾಮೀಜಿ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಕಾರ್ಯಕ್ರಮ ನಿಮಿತ್ತ ಕಡೂರಿಗೆ ಬಂದಿದ್ದರು ಎನ್ನಲಾಗಿದೆ. ಗಂಗಾಧರ್ ಸ್ವಾಮೀಜಿ ಕಡೂರು ಪಟ್ಟಣದ ಐಬಿಯಲ್ಲಿ ಇದ್ದಾಗ ಗಲಾಟೆ ನಡೆದಿದ್ದು, ಬೋವಿ ಸಮಾಜದ ಅಧ್ಯಕ್ಷ ಕೊಲ್ಲಾಬೋವಿ, ನಾಗರಾಜ್, ತಿಮ್ಮಪ್ಪ, ಅಶೋಕ್, ರಮೇಶ್ ಸೇರಿದಂತೆ 6 ಜನರ ವಿರುದ್ಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Nitin Gadkari on E20 Fuel: ಇ20 ಪೆಟ್ರೋಲ್ ಹಳೆಯ BS-III ವಾಹನಗಳ ರಬ್ಬರ್ ಭಾಗಗಳಿಗೆ ಹಾನಿ ಮಾಡಬಹುದು:ನಿತಿನ್ ಗಡ್ಕರಿ – Kannada News | Gadkari Clarifies E20 Impact, Says Older BS III Vehicles May Need Minor Rubber Part Replacement

ನವದೆಹಲಿ, ಜುಲೈ 30: 2016ಕ್ಕಿಂತ ಮೊದಲು ತಯಾರಾದ ಹಳೆಯ ಬಿಎಸ್-III ವಾಹನಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಇ20 ಪೆಟ್ರೋಲ್‌(E20 Petrol)ನಲ್ಲಿ ಚಲಾಯಿಸುವಾಗ ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಏಪ್ರಿಲ್ 1, 2005 ರಿಂದ ಜಾರಿಗೆ ಬಂದು, 2016 ಕ್ಕಿಂತ ಮೊದಲು ತಯಾರಾದ BS-III (ಭಾರತ್ ಸ್ಟೇಜ್-3) ವಾಹನಗಳಲ್ಲಿ ಇ20 ಇಂಧನ ಬಳಸುವಾಗ, ಅವುಗಳ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.

ಜಂಟಿ ಸಂಶೋಧನೆ ಮತ್ತು ಸರ್ಕಾರದ ಸಮರ್ಥನೆ
IOCL, IIP ಡೆಹ್ರಾಡೂನ್, SIAM ಮತ್ತು ARAI ಸಂಸ್ಥೆಗಳು ಜಂಟಿಯಾಗಿ ನಡೆಸಿದ ಪರೀಕ್ಷೆಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಎಂಜಿನ್ ಬದಲಾಯಿಸುವ ಅಗತ್ಯ ಕಂಡುಬಂದಿಲ್ಲ. ಮೈಲೇಜ್ ಕೇವಲ ಇಂಧನವನ್ನು ಮಾತ್ರವೇ ಆಧರಿಸಿಲ್ಲ, ಬದಲಿಗೆ ವಾಹನದ ನಿರ್ವಹಣೆ, ರಸ್ತೆಯ ಸ್ಥಿತಿ ಮತ್ತು ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ ಎಂದು ಆಟೋಮೊಬೈಲ್ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಗಡ್ಕರಿ ತಿಳಿಸಿದ್ದಾರೆ. BS-III ವಾಹನಗಳ ರಬ್ಬರ್ ಗ್ಯಾಸ್ಕೆಟ್‌ಗಳನ್ನು ಸಾಮಾನ್ಯ ವಾಹನ ಸರ್ವೀಸ್ ವೇಳೆ ಸುಲಭವಾಗಿ ಬದಲಾಯಿಸಬಹುದು ಎಂದು ಸಚಿವರು ವಿವರಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಭಾರಿ ಆರೋಪ
ಇ20 ಪೆಟ್ರೋಲ್ ಜಾರಿಯನ್ನು ತೀವ್ರವಾಗಿ ವಿರೋಧಿಸಿರುವ ಆಮ್ ಆದ್ಮಿ ಪಾರ್ಟಿ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರ ಮತ್ತು ವಾಹನ ತಯಾರಕರ ವಿರುದ್ಧ ಸಮರ ಸಾರಿದ್ದಾರೆ. 2023 ಕ್ಕಿಂತ ಮೊದಲು ತಯಾರಾದ ವಾಹನಗಳಲ್ಲಿ E20 ಬಳಸುವುದು ಸುರಕ್ಷಿತವೇ ಎಂದು ಸ್ಪಷ್ಟಪಡಿಸುವಂತೆ 29 ವಾಹನ ತಯಾರಕ ಕಂಪನಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಕೇಜ್ರಿವಾಲ್, ಕೇಂದ್ರದ ಒತ್ತಡದಿಂದಾಗಿ ಯಾವುದೇ ಕಂಪನಿ ಲಿಖಿತ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.

2023ಕ್ಕಿಂತ ಮುಂಚಿನ ಸುಮಾರು 22 ಕೋಟಿ ಬೈಕ್‌ಗಳು ಹಾಗೂ ೮ ಕೋಟಿ ಕಾರುಗಳು ಸೇರಿದಂತೆ ಒಟ್ಟು 30 ಕೋಟಿ ವಾಹನಗಳ ಎಂಜಿನ್ ಹಾಗೂ ಮೈಲೇಜ್ ಮೇಲೆ E20 ಪರಿಣಾಮ ಬೀರಲಿದೆ ಎಂದು 9 ಕಂಪನಿಗಳ ಅಧಿಕಾರಿಗಳು ಫೋನ್ ಮೂಲಕ ತಮಗೆ ಒಪ್ಪಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.

ಎಥೆನಾಲ್ ಮಿಶ್ರಣದಿಂದ ಮೈಲೇಜ್ ಕಡಿಮೆಯಾಗುತ್ತಿದ್ದು, ವಾಹನ ಹಾಳಾದರೆ ಗ್ರಾಹಕರಿಗೆ ಪರಿಹಾರ ನೀಡಲು ಕಂಪನಿಗಳು ನಿರಾಕರಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಕಚ್ಚಾ ತೈಲ ಆಮದು ವೆಚ್ಚ ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ.

ಮತ್ತಷ್ಟು ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

ಆದರೆ, ಹಳೆಯ ವಾಹನ ಮಾಲೀಕರಿಗೆ ಜಾಗೃತಿ ಮತ್ತು ಸೂಕ್ತ ತಾಂತ್ರಿಕ ಬೆಂಬಲ ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಏಪ್ರಿಲ್ 1, 2005 ರಿಂದ ಪರಿಚಯಿಸಲ್ಪಟ್ಟ ಮತ್ತು 2016 ಕ್ಕಿಂತ ಮೊದಲು ತಯಾರಿಸಲಾದ BS-III ವಾಹನಗಳಲ್ಲಿ ಪರೀಕ್ಷೆಯನ್ನು ನಡೆಸಿದಾಗ ಮಾತ್ರ, ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯವಿರಬಹುದು, ಇದನ್ನು ವಾಹನದ ನಿಯಮಿತ ಸೇವಾ ಆಡಳಿತದ ಸಮಯದಲ್ಲಿ ಸುಲಭವಾಗಿ ನಿರ್ವಹಿಸಬಹುದು ಎಂದು ಗಡ್ಕರಿ ಹೇಳಿದ್ದಾರೆ.

ಭಾರತದ ಇ20 ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಸುತ್ತಲಿನ ತಪ್ಪು ಮಾಹಿತಿ ಎಂದು ಕರೆದಿದ್ದಕ್ಕೆ ಸರ್ಕಾರವು ತಿರುಗೇಟು ನೀಡಿದ್ದು, ಎಂಜಿನ್ ಹಾನಿ, ನೀರಿನ ಬಳಕೆ, ವಾಹನ ಖಾತರಿಗಳು, ಇಂಧನ ದಕ್ಷತೆ ಮತ್ತು ಪರಿಸರದ ಮೇಲಿನ ಪರಿಣಾಮದ ಬಗ್ಗೆ ವಿವರವಾದ 10 ಅಂಶಗಳ ಸ್ಪಷ್ಟೀಕರಣವನ್ನು ನೀಡಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಛೀ, ನಾಚಿಕೆಗೇಡು’: ಕಂಗನಾ ಹೇಳಿಕೆಗೆ ಸೋನು ಸೂದ್ ತಿರುಗೇಟು – Kannada News | Sonu Sood criticized Kangana Ranaut’s statement about Gen Z

ಕಂಗನಾ ರನೌತ್ (Kangana Ranaut), ಮೊದಲಿನಿಂದಲೂ ಬಿಜೆಪಿಯನ್ನು ಕೇಂದ್ರ ಸರ್ಕಾರವನ್ನು ಯಾವುದೇ ವಿಷಯದಲ್ಲಾಗಲಿ ಬೆಂಬಲಿಸುತ್ತಲೇ ಬಂದಿದ್ದಾರೆ. ಹಿಂದೆ ರೈತ ಹೋರಾಟ ನಡೆದಾಗ, ಸರ್ಕಾರದ ವಿರುದ್ಧ ಹೋರಾಡಿದ ರೈತರನ್ನು ಭಯೋತ್ಪಾದಕರು ಎಂದಿದ್ದರು, ವೃದ್ಧ ರೈತ ಮಹಿಳೆಯನ್ನು ವೇಶ್ಯಗೆ ಸಹ ಹೋಲಿಸಿ ಟ್ವೀಟ್ ಮಾಡಿದ್ದರು. ಆ ಸಮಯದಲ್ಲಿ ಕಂಗನಾ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು. ಈಗ ಜೆನ್-ಜಿಗಳು ಸರ್ಕಾರದ ವಿರುದ್ಧ ಬೀದಿಗಿಳಿದಾಗಲೂ ಸಹ ಕಂಗನಾ ಮತ್ತೊಮ್ಮೆ ತಮ್ಮ ಹರಿತವಾದ ನಾಲಗೆ ಹರಿಬಿಟ್ಟಿದ್ದು, ‘ಜೆನ್-ಜಿ’ ಅನ್ನು ‘ಜನರೇಷನ್ ಗಟರ್’ ಎಂದಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕವಾಗಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಇದೀಗ, ನಟ, ಸಮಾಜ ಸೇವಕ ಸೋನು ಸೂದ್, ಕಂಗನಾರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಸೋನು ಸೂದ್, ‘ನಾನು ಅವರ ಹೇಳಿಕೆಯನ್ನು ಕೇಳಿಲ್ಲ. ಆದರೆ ಈ ಯುವಕರೇ ನಟರನ್ನು ಸೃಷ್ಟಿಸುವವರು ಮತ್ತು ನೀವಿರುವ ಸ್ಥಾನಕ್ಕೆ ತಲುಪಲು ಸಹಾಯ ಮಾಡುವವರು ಅವರೇ. ಅವರು ನಿಮ್ಮ ಬೆಂಬಲಕ್ಕೆ ನಿಂತಿರುವವರೆಗೆ ನೀವು ಅಭಿವೃದ್ಧಿ ಹೊಂದುತ್ತೀರಿ. ಅವರು ನಿಮ್ಮೊಂದಿಗೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಅದಕ್ಕಾಗಿಯೇ ಎಲ್ಲರನ್ನೂ ಜತೆಗೂಡಿಸಿಕೊಂಡು ಹೋಗಬೇಕು’ ಎಂದಿದ್ದಾರೆ.

ಕಂಗನಾ ಅವರು ಜೆನ್-ಜಿ ಅನ್ನು ‘ಜನರೇಷನ್ ಗಟರ್’ ಎಂದು ಕರೆದಿರುವ ಬಗ್ಗೆ ನಿರ್ದಿಷ್ಟವಾಗಿ ಕೇಳಿದಾಗ, ಸೋನು, ಅವರು ಹಾಗೆ ಹೇಳಿದ್ದರೆ, ಅದು ತುಂಬಾ ಅವಮಾನಕರ ಎಂದು ನಾನು ಭಾವಿಸುತ್ತೇನೆ. ಅದನ್ನು ಹೇಳಬಾರದಿತ್ತು, ಮಾತನಾಡುವ ಮೊದಲು ನಿಮ್ಮ ಪದಗಳನ್ನು ತೂಗಿಕೊಳ್ಳಿ ಎಂಬ ಮಾತಿದೆ. ಸಾರ್ವಜನಿಕರು ದೇವರ ಮತ್ತೊಂದು ರೂಪವಾಗಿರುವುದರಿಂದ ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ. ಈ ಹೇಳಿಕೆ ನಾಚಿಕೆಗೇಡಿನ ಸಂಗತಿ’ ಎಂದರು.

ಇದನ್ನೂ ಓದಿ:ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

ಅಂದಹಾಗೆ ಸೋನು ಸೂದ್ ಮತ್ತು ಕಂಗನಾ ರನೌತ್ ನಡುವೆ ಹಲವು ವರ್ಷಗಳಿಂದಲೂ ಮುನಿಸು ಚಾಲ್ತಿಯಲ್ಲಿದೆ. ಸೋನು ಸೂದ್ ಅವರು ಕಂಗನಾ ನಟನೆಯ ‘ಮಣಿಕರ್ಣಿಕಾ’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಸೋನು ಸೂದ್ ಜೊತೆ ವಿನಾಕಾರಣ ವಿವಾದ ಮಾಡಿಕೊಂಡಿದ್ದ ಕಂಗನಾ, ಸೋನು ಸೂದ್​​ರನ್ನು ಹೇಳದೆ ಕೇಳದೆ ಸಿನಿಮಾದಿಂದ ತೆಗೆದಿದ್ದು ಮಾತ್ರವಲ್ಲದೆ, ಅವರು ನಟಿಸಿದ್ದ ದೃಶ್ಯಗಳನ್ನು ಮರು ಚಿತ್ರೀಕರಣ ಮಾಡಿದರು. ಮಾಧ್ಯಮಗಳ ಮುಂದೆ ಸಹ ಸೋನು ಸೂದ್ ಬಗ್ಗೆ ಕೆಟ್ಟದಾಗಿ, ಅವಮಾನಕರ ರೀತಿಯಲ್ಲಿ ಮಾತನಾಡಿದ್ದರು. ಆಗಿನಿಂದ ಈ ಇಬ್ಬರೂ ಒಟ್ಟಿಗೆ ಕೆಲಸ ಮಾಡಿಲ್ಲ.

ಸಿಜೆಪಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಯುವಕರನ್ನು ಟೀಕೆ ಮಾಡಿದ್ದ ಕಂಗನಾ, ಅವರನ್ನು ‘ಜನರೇಷನ್ ಗಟರ್’ ಎಂದು ಕರೆದಿದ್ದರು, ಈ ಜನರೇಷನ ಪೋಷಕರ ಆರ್ಥಿಕತೆಯ ಮೇಲೆ ಅವಲಂಬಿತರಾಗಿರುತ್ತಾರೆ, ಮಾದಕದ್ರವ್ಯ, ಪಾನೀಯಗಳು ಅಥವಾ ಲೈಂಗಿಕತೆ ಇಷ್ಟೇ ಅವರಿಗೆ ಬೇಕಾಗಿರುವುದು’ ಎಂದು ಕೀಳಾಗಿ ಮಾತನಾಡಿದ್ದರು. ಇದೀಗ ಕಂಗನಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version