ಲಕ್ಷ್ಮೀ ಹೆಬ್ಬಾಳ್ಕರ್​​ ಪರ ನಿಂತ ಸತೀಶ್ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ? – Kannada News | Satish Jarkiholi Bats for Lakshmi Hebbalkar For Minister Post In Dk Shivakumar Governmnet

ಬೆಳಗಾವಿ, (ಆಗಸ್ಟ್ 15): ಡಿಕೆ ಶಿವಕುಮಾರ್ ಸಂಪುಟದಲ್ಲಿ ಮಹಿಳಾ ಸಚಿವ ಸ್ಥಾನ ಮೀಸಲಿರಿಸಲಾಗಿದೆ. ಸಚಿವ ಸಂಪುಟ ಪುನಾರಚನೆ ವೇಳೆ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಅವರಿಗೆ ಮಣೆ ಹಾಕಲಾಗಿತ್ತು. ಆದ್ರೆ, ಬದಲಾದ ಸನ್ನವೇಶಗಳಿಂದ ಅವರು ಸಚಿವರಾಗಿ ಅಧಿಕಾರಿ ಸ್ವೀಕಾರ ಮಾಡಲಿಲ್ಲ. ಹೀಗಾಗಿ ಅದೊಂದು ಸ್ಥಾನ ಖಾಲಿ ಉಳಿದಿದ್ದು, ಇದಕ್ಕೆ ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್ ರೇಸ್​​ನಲ್ಲಿದ್ದಾರೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್​ ಪರವಾಗಿ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಹೌದು..ರಾಜ್ಯ ರಾಜಕಾರಣವೇ ಬೇರೆ ಬೆಳಗಾವಿ ರಾಜಕಾರಣವೇ ಬೇರೆ, ಬೆಳಗಾವಿಯಲ್ಲಿ ಕುಟುಂಬ ಕುಟುಂಬಗಳ ನಡುವಿನ ಜಿದ್ದಾಜಿದ್ದಿ ಇದೆ. ಲಕ್ಷ್ಮೀ ಹೆಬ್ಬಾಳ್ಕರ್​​​​​ ಹಾಗೂ ಜಾರಕಿಹಿಳಿ ಕುಟುಂಬ ಒಂದು ರೀತಿ ಹಾವು ಮುಂಗಸಿ ಇದ್ದಂತೆ. ಆದರೂ ಇದೀಗ ಸಚಿವ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಪರ ಬ್ಯಾಟಿಂಗ್ ಮಾಡಿದ್ದಾರೆ ಕುತೂಹಲ ಮೂಡಿಸಿದೆ.

Source link

ನಿರ್ದೇಶಕಿ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಯಶ್ ಬಿಚ್ಚು ಮಾತು – Kannada News | Yash talk about his differences with director Geethu Mohandas

ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಯಶ್ ಅವರೇ ಹೇಳಿದಂತೆ ಅವರು ಈ ಸಿನಿಮಾಕ್ಕಾಗಿ ಸುಮಾರು ಐದು ವರ್ಷ ಕೆಲಸ ಮಾಡಿದ್ದಾರಂತೆ. ಸಿನಿಮಾದ ಚಿತ್ರೀಕರಣ ನಡೆಯುವಾಗ ಹಲವು ಬಾರಿ ಸಿನಿಮಾ ಬಗ್ಗೆ ಏನೇನೋ ಸುದ್ದಿಗಳು ಹರಿದಾಡಿದ್ದವು. ಸಿನಿಮಾ ನಿಂತು ಹೋಗಿದೆ. ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್​​ದಾಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿನಿಮಾದ ಟ್ರೈಲರ್ ರಿಲೀಸ್​ ಕಾರ್ಯಕ್ರಮದಲ್ಲಿ ಗೀತೂ ಮೋಹನ್​​ದಾಸ್, ಯಶ್ ಅವರ ಬಗ್ಗೆ ಬಹಳ ಪ್ರೀತಿ, ಗೌರವದಿಂದ ಮಾತನಾಡಿ ಗಾಸಿಪ್​​ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ನಟ ಯಶ್, ತಮ್ಮ ಹಾಗೂ ಗೀತೂ ಮೋಹನ್​​ದಾಸ್ ನಡುವೆ ಮೂಡಿದ್ದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ನಡೆದ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, ಸಿನಿಮಾದ ಸಂಗೀತದ ಬಗ್ಗೆ, ಹಾಡುಗಳ ಬಗ್ಗೆ, ಅವುಗಳು ಹುಟ್ಟಿದ ರೀತಿಯ ಬಗ್ಗೆ ಮಾತನಾಡಿದರು. ಈ ವೇಳೆ, ತಮಗೂ ಹಾಗೂ ನಿರ್ದೇಶಕಿ ಗೀತೂ ಮೋಹನ್​​ ನಡುವೆ ಉಂಟಾದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದರು.

‘ಸಂಗೀತ ಮಾಡುವಾಗ ಸಾಕಷ್ಟು ಸಮಸ್ಯೆ ಆಯ್ತು. ಗೀತೂ ಅವರದ್ದು, ತುಸು ಪಾಶ್ಚಿಮಾತ್ಯ ಸಂಗೀತದ ರುಚಿ. ವೆಸ್ಟರ್ನ್ ಮಾದರಿಯ ಸಂಗೀತಕ್ಕೆ, ಹಾಡುಗಳಿಗೆ ಅವರು ಬೇಡಿಕೆ ಇಡುತ್ತಿದ್ದರು. ಆದರೆ ನನಗೆ ನನ್ನ ಅಭಿಮಾನಿಗಳ ಬಗ್ಗೆಯೂ ಗಮನ ಹರಿಸಬೇಕಿತ್ತು. ನನಗೆ ತುಸು ಲೋಕಲ್, ಇಂಡಿಯನ್ ಶೈಲಿಯ ಸಂಗೀತದ ಕಡೆಗೆ ಒಲವು. ಈ ವಿಷಯವಾಗಿ ನನಗೆ ಹಾಗೂ ಗೀತೂ ಅವರಿಗೆ ಭಿನ್ನಾಭಿಪ್ರಾಯ ಮೂಡಿತ್ತು’ ಎಂದಿದ್ದಾರೆ ನಟ ಯಶ್.

ಇದನ್ನೂ ಓದಿ:ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್

‘ಟಾಕ್ಸಿಕ್’ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಎರಡೂ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ಯಶ್ ಹಾಗೂ ಕಿಯಾರಾ ನಟಿಸಿರುವ ‘ತಬಾಹಿ’ ಹಾಡಂತೂ ದೊಡ್ಡ ಹಿಟ್ ಎನಿಸಿಕೊಂಡಿದೆ. ಸಿನಿಮಾಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಗೀತೂ ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಹಾಗೂ ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: ವರ್ಕ್ ಫ್ರಂ ಹೋಂ, ಹಣ ಡಬಲ್ ಆಮಿಷ; ಕೋಟ್ಯಂತರ ರೂ ವಂಚನೆ: ನಾಲ್ವರ ಬಂಧನ – Kannada News | Kolar Work from Home Scam: Kalikadevi Enterprises Accused of Defrauding Crores, 4 Arrested

ಕೋಲಾರ, ಆಗಸ್ಟ್​​ 15: ಮನೆಯಲ್ಲೇ ಕುಳಿತು ಕೆಲಸ (Work-from-home fraud) ಮಾಡಿ ಸಾವಿರಾರು ರೂ ಗಳಿಸಬಹುದು ಹಾಗೂ ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಬರೋಬ್ಬರಿ 50 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ (Arrested). ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಈ ವಂಚನಾ ಜಾಲ ನಡೆಸಲಾಗುತ್ತಿದ್ದು, ಸಂಸ್ಥೆಯ ಮಾಲೀಕರಾದ ಬೆಂಗಳೂರು ಚಿಕ್ಕಜಾಲ ಮೂಲದ ಭೂಮಿ ಕಿರಣ್ ಶೆಟ್ಟಿ (28), ಅವರ ಪತ್ನಿ ಆರತಿ (23), ಕೋಲಾರದ ಬ್ಯಾಲಹಳ್ಳಿ ನಿವಾಸಿ ರಮ್ಯಾ ಹಾಗೂ ಬಂಗಾರಪೇಟೆ-ಬೂದಿಕೋಟೆ ಶಾಖೆಯ ಮ್ಯಾನೇಜರ್ ವೆಂಕಟಾಚಲಪತಿ ಅಲಿಯಾಸ್ ಸ್ವಾಮಿ ಬಂಧಿತ ಆರೋಪಿಗಳು.

ನಡೆದಿದ್ದೇನು?

ಕಿರಣ್ ಮತ್ತು ಆರತಿ ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಸಂಸ್ಥೆ ನಡೆಸುತ್ತಿದ್ದರು. ಊದುಬತ್ತಿ, ಮೆಣದಬತ್ತಿ, ಪೇಪರ್ ಪ್ಲೇಟ್ ಸೇರಿದಂತೆ ವಿವಿಧ ವಸ್ತುಗಳ ಪ್ಯಾಕಿಂಗ್ ಕೆಲಸ ನೀಡುವುದಾಗಿ ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದರು. ಪ್ಯಾಕಿಂಗ್ ಹೆಸರಿನಲ್ಲಿ ಗ್ರಾಹಕರಿಂದ ಲಕ್ಷಾಂತರ ರೂ ಡೆಪಾಸಿಟ್ ಪಡೆಯುತ್ತಿದ್ದ ಆರೋಪಿಗಳು, ಕ್ರಮೇಣ ಹಣ ಕೊಡುವುದನ್ನು ನಿಲ್ಲಿಸಿದ್ದಾರೆ. ಅನುಮಾನಗೊಂಡ ಗ್ರಾಹಕರು ಹಣ ಕೊಡುವಂತೆ ಒತ್ತಾಯಿಸಿದಾಗ ಪ್ರಕರಣ ಬಯಲಿಗೆ ಬಂದಿದ್ದು, ಸದ್ಯ ಕೋಲಾರದ ಗಲ್‌ಪೇಟೆ, ಬೂದಿಕೋಟೆ, ಬೆಂಗಳೂರಿನ ಚಿಕ್ಕಜಾಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಏಳೆಂಟು ಸಾವಿರ ಜನರು ಹಣ ಕಳೆದುಕೊಂಡಿದ್ದು, ಸರಾಸರಿ 50 ಕೋಟಿಗೂ ಅಧಿಕ ಹಣ ವಂಚನೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ!

ಇನ್ನು ಬಂಗಾರಪೇಟೆ ತಾಲೂಕಿನ ದೆಬ್ಬನಹಳ್ಳಿ, ಬೂದಿಕೋಟೆಯಲ್ಲೂ ಕಾಳಿಕಾದೇವಿ ಎಂಟರ್​ಪ್ರೈಸಸ್​ ಬ್ರಾಂಚ್ ಇದ್ದು, ಇಲ್ಲಿ ಕೋಲಾರ ಜಿಲ್ಲೆಯ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ಜನರಿಂದಲೂ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿದ್ದರು. ಒಟ್ಟು 1121 ಜನರಿಂದ ಬರೋಬ್ಬರಿ 10.53 ಕೋಟಿಯಷ್ಟು ಹಣ ಸಂಗ್ರಹಿಸಿದ್ದ ಮ್ಯಾನೇಜರ್ ವೆಂಕಟಾಚಲಪತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಹಣ ಡಬಲ್ ಮಾಡುವ ಆಮಿಷ ಪ್ರಕರಣಗಳು ಬೆಳಕಿಗೆ

ಕೋಲಾರ ಜಿಲ್ಲೆಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ಎಂಟರ್‌ಪ್ರೈಸಸ್‌ಗಳು ಸಾರ್ವಜನಿಕರಿಗೆ ಹಣವನ್ನು ಬೇಗನೆ ಡಬಲ್ ಅಥವಾ ತ್ರಿಬಲ್​ ಮಾಡಿಕೊಡುವುದಾಗಿ ಆಮಿಷ ಒಡ್ಡಿ ವಂಚನೆ ಮಾಡಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಆರಂಭದಲ್ಲಿ ಕೆಲವರಿಗೆ ಹಣದ ರಿಟರ್ನ್ಸ್ ನೀಡಿದಂತೆ ತೋರಿಸಿ, ನಂತರ ಕಚೇರಿಗಳನ್ನು ಮುಚ್ಚಿ ಮಾಲೀಕರು ತಲೆಮರೆಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇಂತಹ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 350ಕ್ಕೂ ಹೆಚ್ಚು ಜನರು ದೂರು ನೀಡಿದ್ದು, 6 ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ!

ಅಲ್ಲದೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಸೇರಿ ಹಲವೆಡೆ ಇದೇ ರೀತಿ ಕೋಟ್ಯಂತರ ರೂ ವಂಚನೆ ನಡೆದಿರುವುದು ತಿಳಿದು ಬಂದಿದ್ದು, ಸದ್ಯ ವಂಚನೆಗೊಳಗಾದ ಜನರು ತಾವು ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ನಿವೃತ್ತ ಸರ್ಕಾರಿ ಶಿಕ್ಷಕರು, ಜಮೀನು ಮಾರಾಟದ ಹಣ, ಒಡವೆ ಅಡವಿಟ್ಟು ತಂದ ಹಣ, ಮಕ್ಕಳ ಮದುವೆಗೆಂದು ಕೂಡಿಟ್ಟಿದ್ದ ಹಣ ಹೀಗೆ ಬಡ ಜನರು ಕಷ್ಟಪಟ್ಟು ಕೂಡಿಟ್ಟಿದ್ದ ಹಣವನ್ನು ಲಪಟಾಯಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ. ಇತ್ತ ನಮ್ಮ ಹಣ ನಮಗೆ ವಾಪಸ್ ಕೊಡಿ ಎನ್ನುವುದು ಹಣ ಕಳೆದುಕೊಂಡವರ ಅಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

AUS vs BAN: 228 ರನ್​ಗಳ ಮುನ್ನಡೆ; ಬಾಂಗ್ಲಾ ಆಟಕ್ಕೆ ಕಾಂಗರೂಗಳು ಕಕ್ಕಾಬಿಕ್ಕಿ – Kannada News | Bangladesh Stuns Australia: Dominates Day 3, Leads by 67 Runs in Home Test

ತವರು ನೆಲದಲ್ಲಿ ದುರ್ಬಲ ಬಾಂಗ್ಲಾದೇಶ ತಂಡವನ್ನು ಏಕಪಕ್ಷೀಯವಾಗಿ ಸೋಲಿಸುವ ಇರಾದೆಯೊಂದಿಗೆ ಕಣಕ್ಕಿಳಿದಿದ್ದ ಆತಿಥೇಯ ಆಸ್ಟ್ರೇಲಿಯಾ (Bangladesh vs Australia ) ತಂಡಕ್ಕೆ ಬಾಂಗ್ಲಾದೇಶದ ಆಟಗಾರರು ಮರೆಯಲಾಗದ ಆಘಾತ ನೀಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾವನ್ನು ಕೇವಲ 198 ರನ್​ಗಳಿಗೆ ಆಲೌಟ್ ಮಾಡಿದ್ದ ಬಾಂಗ್ಲಾದೇಶ, ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 426 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 228 ರನ್​ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಇತ್ತ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡರಲ್ಲೂ ವಿಫಲವಾಗಿದ್ದ ಆಸ್ಟ್ರೇಲಿಯಾ ತಂಡ ಇದೀಗ ಎರಡನೇ ಇನ್ನಿಂಗ್ಸ್​ನ ಬ್ಯಾಟಿಂಗ್​ನಲ್ಲೂ ಎಡವಿದಂತೆ ಕಾಣುತ್ತಿದೆ. ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 161 ರನ್ ಕಲೆಹಾಕಿದೆ. ಇದರೊಂದಿಗೆ ಆಸ್ಟ್ರೇಲಿಯಾ ಇನ್ನೂ 67 ರನ್‌ಗಳ ಹಿನ್ನಡೆಯಲ್ಲಿದೆ.

1 ಶತಕ, ಇಬ್ಬರ ಅರ್ಧಶತಕ

ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ತಂಜಿದ್ ಹಸನ್ ಶತಕ ಬಾರಿಸಿದರೆ, ನಾಯಕ ನಜ್ಮುಲ್ ಶಾಂತೊ 84 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಮುನ್ನಡೆಗೆ ಗಮನಾರ್ಹವಾಗಿ ಕೊಡುಗೆ ನೀಡಿತು. ಇವರಿಬ್ಬರ ಜೊತೆಗೆ ಮೆಹಿದಿ ಹಸನ್ ಅವರ 65 ರನ್‌ಗಳ ಇನ್ನಿಂಗ್ಸ್ ಕೂಡ ಬಾಂಗ್ಲಾದೇಶದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿತು.

ನಾಲ್ಕು ವಿಕೆಟ್‌ ಪತನ

ಮೂರನೇ ದಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್​ಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಆದಾಗ್ಯೂ, ದಿನದ ಅಂತ್ಯದ ವೇಳೆಗೆ ಬಾಂಗ್ಲಾದೇಶ ನಾಲ್ಕು ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಯಿತು. ಆಸೀಸ್ ಪರ ಕ್ಯಾಮರೂನ್ ಗ್ರೀನ್ ಮೂರನೇ ದಿನದಂದು 43 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅಲೆಕ್ಸ್ ಕ್ಯಾರಿ 19 ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಉಳಿದಂತೆ ಸ್ಟೀವ್ ಸ್ಮಿತ್ 44 ರನ್ ಗಳಿಸಿ ಔಟಾದರೆ, ಮಾರ್ನಸ್ ಲಬುಶೇನ್ ಅವರ ಇನ್ನಿಂಗ್ಸ್ 31 ರನ್​ಗಳಿಗೆ ಅಂತ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಜೇಕ್ ವೆದರಾಲ್ಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಟ್ರಾವಿಸ್ ಹೆಡ್ ಕೇವಲ 17 ರನ್ ಗಳಿಸಲಷ್ಟೇ ಶಕ್ತರಾದರು. ಇತ್ತ ಬಾಂಗ್ಲಾದೇಶ ಪರ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಪಡೆದಿದ್ದ ಹಸನ್ ಮಹ್ಮದ್, ಮೂರನೇ ದಿನದ ಆಟದ ಅಂತ್ಯದವರೆಗೆ ಎರಡನೇ ಇನ್ನಿಂಗ್ಸ್​ನಲ್ಲೂ 2 ವಿಕೆಟ್ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti On Marriage: ಅಂದಚೆಂದವಲ್ಲ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ಅಗತ್ಯವಾಗಿ ಪರಿಗಣಿಸಿ – Kannada News | Chanakya Niti: Know these things when choosing a life partner

ಮದುವೆ (Marriage) ಎನ್ನುವುದು ಜೀವನದ ಪ್ರಮುಖ ಘಟ್ಟ. ಈ ವೈವಾಹಿಕ ಜೀವನ ಸುಂದರವಾಗಿರಬೇಕೆಂದರೆ ಸೂಕ್ತವಾದ ಜೀವನ ಸಂಗಾತಿಯನ್ನು ಆರಿಸುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದರಿಂದ ಜೀವನವೂ ಉತ್ತಮವಾಗಿರುತ್ತದೆ. ಇಂದಿನ ಈ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನೋಡಿದಾಗ ಮದುವೆ ಅನೇಕರು ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಹೇಗೆ, ಮದುವೆಯಾದರೆ ಜೀವನ ಹಾಳಾಗಬಹುದೇ ಎಂದು ತಲೆಕೊಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವ ಬದಲು ಜೀವನ ಸಂಗಾತಿಯ ಸ್ವಭಾವ, ನಡವಳಿಕೆ, ಸಂಸ್ಕಾರ ಹೇಗಿದೆ ಎಂಬುದನ್ನು ಪರಿಗಣಿಸಬೇಕು ಎಂಬುದನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಲೈಫ್‌ ಪಾರ್ಟ್ನರ್‌ ಆಯ್ಕೆ ಮಾಡುವಾಗ ಯಾವೆಲ್ಲಾ ವಿಷಯಗಳನ್ನು ಪರಿಗಣಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಯಾವೆಲ್ಲಾ ವಿಷಯಗಳನ್ನು ಪರಿಗಣಿಸಬೇಕು?

ನೋಟವಲ್ಲ ಉತ್ತಮ ಸ್ವಭಾವವನ್ನು ಪರಿಗಣಿಸಿ:

ಕೇವಲ ಬಾಹ್ಯ ಸೌಂದರ್ಯವನ್ನು ಆಧರಿಸಿ ಮದುವೆಯಾಗಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.  ಆಕರ್ಷಣೆಯು ತಾತ್ಕಾಲಿಕ, ಆದರೆ ಉತ್ತಮ ಸ್ವಭಾವ, ತಿಳುವಳಿಕೆ ಮತ್ತು ಗೌರವವು ದೀರ್ಘಾವಧಿಯವರೆಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಉತ್ತಮ ಸ್ವಭಾವದ, ಕಷ್ಟಕಾಲದಲ್ಲಿ ನಿಮ್ಮ ಜೊತೆಯಾಗಿ ನಿಲ್ಲುವ ಉತ್ತಮ ಗುಣವಿರುವ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ.

ಕೋಪದ ಸ್ವಭಾವದ ಬಗ್ಗೆ ಎಚ್ಚರದಿಂದಿರಿ:

ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ಅಥವಾ ಕೆಟ್ಟ ಪದಗಳನ್ನು ಬಳಸಿ ಮಾತನಾಡುವ, ನಿರಂತರವಾಗಿ ಕಠಿಣ ಭಾಷೆಯನ್ನು ಬಳಸುವವರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡುವುದರಿಂದ ಸಂಬಂಧಗಳಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಚಾಣಕ್ಯ.

ದುರಾಸೆಯ ಸ್ವಭಾವದವರ ಬಗ್ಗೆ ಎಚ್ಚರ ಇರಲಿ:

ಒಬ್ಬ ವ್ಯಕ್ತಿಯು ಸಂಬಂಧಕ್ಕಿಂತ ಹಣ, ಆಸ್ತಿ, ಅಂತಸ್ತಿಗೆ ಆದ್ಯತೆ ನೀಡಿದರೆ , ಅಂತಹ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಜೀವನದ ಸಂದರ್ಭಗಳು ಬದಲಾಗುತ್ತವೆ ಮತ್ತು ಕಷ್ಟದ ಸಮಯದಲ್ಲಿ, ಸಂಬಂಧಕ್ಕೆ ಆದ್ಯತೆ ನೀಡುವ ಸಂಗಾತಿ ಮಾತ್ರ ನಿಮ್ಮೊಂದಿಗೆ ಅಂಟಿಕೊಳ್ಳುತ್ತಾರೆ.

ಇದನ್ನೂ ಓದಿ: ಮಹಿಳೆಯರು ತಮ್ಮ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಗುಣಗಳನ್ನು ಪರಿಗಣಿಸಿ:

ಪ್ರಾಮಾಣಿಕತೆ, ಉತ್ತಮ ನಡವಳಿಕೆಯಿರುವ ವ್ಯಕ್ತಿಗಳನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡುವುದು ಉತ್ತಮ. ಸುಳ್ಳು ಹೇಳುವ, ಮೋಸ ಮಾಡುವ ಅಥವಾ ದುಶ್ಷಟಗಳಿಗೆ ದಾಸರಾಗಿರುವ ವ್ಯಕ್ತಿಯೊಂದಿಗೆ ಸಂಬಂಧವನ್ನು ಬೆಳೆಸಬಾರದು. ಇಂತಹವರಿಗೆ ಜೀವನ ಹಾಳಾಗುವ ಸಾಧ್ಯತೆ ಹೆಚ್ಚು.

ಸಂಸ್ಕಾರವಂತರನ್ನು ಆಯ್ಕೆ ಮಾಡಿ:

ಸಂಗಾತಿಯನ್ನು ಆಯ್ಕೆಮಾಡುವಾಗ, ಬಾಹ್ಯ ಸೌಂದರ್ಯವನ್ನು ನೋಡುವ ಬದಲು ವ್ಯಕ್ತಿಯ ಗುಣಗಳಿಗೆ ಪ್ರಾಮುಖ್ಯತೆ ನೀಡಬೇಕು, ಅವರ ಆಲೋಚನೆಗಳು ಮತ್ತು ಸಂಸ್ಕಾರಕ್ಕೆ ಪ್ರಾಮುಖ್ಯತೆ ನೀಡಬೇಕು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಸಂಸ್ಕಾರ ಹೊಂದಿರುವ ವ್ಯಕ್ತಿಯು ಮದುವೆಯ ನಂತರ ತನ್ನ ಸಂಗಾತಿಯನ್ನು  ಉತ್ತಮವಾಗಿ ನೋಡಿಕೊಳ್ಳುತ್ತಾರೆ, ಅವರು ಸಂಗಾತಿಯನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ, ಎಂತಹದ್ದೇ ಕೆಟ್ಟ ಪರಿಸ್ಥಿತಿಯನ್ನೂ ತನ್ನ ಸಂಗಾತಿಯನ್ನು ಬಿಟ್ಟು ಹೋಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲೋಕ್​ ಕುಮಾರ್ ಭೇಟಿ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಲ್ಲೋಲ ಕಲ್ಲೋಲ – Kannada News | Major Changes In parappana agrahara central jail after phone found in prajwal revanna barrack

ಬೆಂಗಳೂರು, (ಆಗಸ್ಟ್​ 15): ಪ್ರಜ್ವಲ್ ರೇವಣ್ಣ (Prajwal Revanna) ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ (parappana agrahara central jai)ಭದ್ರತೆಯನ್ನು ತೀವ್ರಗೊಳಿಸಿ ಹೈಪ್ರೊಫೈಲ್ ಕೈದಿಗಳ ಮೇಲೆ ಬಿಗಿ ಕಣ್ಗಾವಲು ಇಡಲಾಗಿದೆ. ಹೌದು….ಕಾರಾಗೃಹ ಡಿಜಿಪಿ ಅಲೋಕ್​ ಕುಮಾರ್ ಭೇಟಿ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾಗೌಡಗೂ ಬಿಸಿ ತಟ್ಟಿದೆ. ನಟ ದರ್ಶನ್ ಅವರ ಬ್ಯಾರಕ್ ಸುತ್ತ ಸಿಸಿಟಿವಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಸಹ-ಆರೋಪಿ ಪವಿತ್ರಾಗೌಡನನ್ನು  16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹತ್ವದ ಬದಲಾವಣೆ

ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ನಿನ್ನೆ (ಆಗಸ್ಟ್ 14) ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಭೇಟಿಯ ನಂತರ ಜೈಲಿನಲ್ಲಿ ಮತ್ತಷ್ಟು ಬಿಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಜ್ವಲ್ ರೇವಣ್ಣಗೆ ನೀಡುತ್ತಿದ್ದ ಸವಲತ್ತುಗಳನ್ನು ಸ್ಥಗಿತಗೊಳಿಸಲಾಗಿದ್ದು, ಈಗಾಗಲೇ 22 ಜನರಿದ್ದ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ಇನ್ನು ಇದೀಗ ಅವರ ಮೇಲಿನ ಕಣ್ಗಾವಲನ್ನು ಅಧಿಕಾರಿಗಳು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಇದನ್ನೂ ನೋಡಿ: ಪರಪ್ಪನ ಅಗ್ರಹಾರ ಜೈಲು ಪರಿಶೀಲಿಸಿದ ಡಿಜೆಪಿ: ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್

ದರ್ಶನ್ ಹಾಗೂ ಪವಿತ್ರಾಗೌಡಗೂ ತಟ್ಟಿದ ಬಿಸಿ

ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರ ಮೇಲೆಯೂ ಜೈಲಾಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ಜೈಲಿನ ಭದ್ರತಾ ಹಿತದೃಷ್ಟಿಯಿಂದ ಪವಿತ್ರಾಗೌಡ ಅವರ ಬ್ಯಾರಕ್ ಅನ್ನು ಅಧಿಕಾರಿಗಳು ಬದಲಾಯಿಸಿದ್ದಾರೆ. ಇಷ್ಟು ದಿನ ಕೇವಲ ಇಬ್ಬರು ಖೈದಿಗಳಿದ್ದ ಬ್ಯಾರಕ್‌ನಲ್ಲಿದ್ದ ಪವಿತ್ರಾಗೌಡ ಅವರನ್ನು ಈಗ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಬರೋಬ್ಬರಿ 16 ಖೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರ ಬ್ಯಾರಕ್ ಬಳಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದರ್ಶನ್ ಅವರ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ಕಣ್ಗಾವಲಿನ ಮೂಲಕ ಅಧಿಕಾರಿಗಳು ನಿರಂತರವಾಗಿ ಜೈಲಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ಇರುವ ಬ್ಯಾರಕ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರದೂಷ್‌ನನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಹಬ್ಬದಲ್ಲಿ ಪಾಲ್ಗೊಂಡಿದ್ದಕ್ಕೆ ಟೀಕೆ, ನಿಂದನೆ: ಕಣ್ಣೀರು ಹಾಕಿದ ನಟಿ ಫಾರಿಯಾ – Kannada News | Actress Faria Abdullah cried talking about hate she getting

ಸಿನಿಮಾ (Cinema) ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ, ನಿಂದನೆಗಳನ್ನು ಪ್ರತಿದಿನವೂ ಎದುರಿಸುತ್ತಿರುತ್ತಾರೆ. ತೆಲುಗಿನ ಜನಪ್ರಿಯ ನಟಿ ಫಾರಿಯಾ ಅದ್ಬುಲ್ಹ ಅಂತೂ ಪ್ರತಿದಿನವೂ ಟೀಕೆ, ನಿಂದನೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಅದ್ಭುತ ನಟಿ, ಡ್ಯಾನ್ಸರ್ ಆಗಿರುವ ಫಾರಿಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಗ್ಲಾಮರಸ್ ಆಗಿ ಉಡುಗೆಗಳನ್ನು ಧರಿಸಿ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ಫರಿಯಾ ಅವರು ಪದೇ ಪದೇ ಟೀಕೆಗೆ ಗುರಿಯಾಗುತ್ತಿರುತ್ತಾರೆ. ವಿಶೇಷವಾಗಿ ಮುಸ್ಲಿಂ ಮಂದಿ ಫಾರಿಯಾ ಅವರನ್ನು ‘ಕಾಫಿರ್’ ಎಂದು, ಧರ್ಮಕ್ಕೆ ಕಳಂಕ ಎಂದೆಲ್ಲ ಟೀಕೆ ಮಾಡುತ್ತಲೇ ಇರುತ್ತಾರೆ.

ಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇರಿಸಿರುವ ಫರಿಯಾ ಇತ್ತೀಚೆಗಷ್ಟೆ ಹಿಂದೂಗಳು ಆಚರಿಸುವ, ತೆಲುಗು ರಾಜ್ಯಗಳಲ್ಲಿ ಬಹಳ ಜನಪ್ರಿಯವಾಗಿರುವ ಬೋನಾಲ ಪಂಡಗ (ಬೋನಾಲ ಹಬ್ಬ)ದಲ್ಲಿ ಭಾಗಿ ಆಗಿದ್ದರು. ಹಿಂದೂ ಹೆಣ್ಣುಮಕ್ಕಳಂತೆ ಕಳಶ ಹೊತ್ತು ನಡೆದಿದ್ದರು. ಬೋನಾಲ ಹಬ್ಬದಲ್ಲಿ ಕಾಣಿಸಿಕೊಳ್ಳುವ ಪೋತಾಲರಾಜುಗಳ ಜೊತೆಗೆ ಸಖತ್ ಆಗಿ ಡ್ಯಾನ್ಸ್ ಸಹ ಮಾಡಿದ್ದರು. ಆದರೆ ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಸ್ಲಿಮರು ನಟಿಯ ವಿರುದ್ಧ ಟೀಕಾಪ್ರಹಾರ ಆರಂಭಿಸಿದ್ದಾರೆ.

ಇದೀಗ ನಟಿ ಫಾರಿಯಾ ಅಬ್ದುಲ್ಲಾ ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ತಮಗೆ ಎದುರಾಗುತ್ತಿರುವ ಈ ಟೀಕೆ, ನಿಂದನೆಗಳ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಆರಂಭದಲ್ಲಿ ನಗುತ್ತಲೇ ಮಾತನಾಡಲು ಆರಂಭಿಸಿದ ಫರಿಯಾ, ‘ನನ್ನ ತಂದೆ ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಆ ಧರ್ಮಕ್ಕೆ ಮತಾಂತರ ಆದರು. ನನ್ನ ತಂದೆ, ಇಸ್ಲಾಂ ಧರ್ಮದಲ್ಲಿರುವ ಎಲ್ಲ ಒಳ್ಳೆಯ ವಿಷಯಗಳನ್ನು ತೋರಿಸಿ ಬೆಳೆಸಿದ್ದಾರೆ. ನಾನೂ ಸಹ ಇಸ್ಲಾಂ ಧರ್ಮದಲ್ಲಿ ಸದಾ ಒಳ್ಳೆಯದನ್ನೇ ನೋಡಿದ್ದೇನೆ, ನೀವೂ ಸಹ ನೋಡಿ ಎಂಬುದು ನನ್ನ ಆಶಯ ಬ್ರೋ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಯಂದು ನೋಡಬೇಕಾದ ಕನ್ನಡ ಸಿನಿಮಾಗಳಿವು

‘ನಾನು ತಪ್ಪು ಮಾಡುತ್ತಿದ್ದೇನೆ, ನಾನು ‘ಕಾಫಿರ್’ ಎಂದೆಲ್ಲ ಹೇಳುತ್ತಿರುವ ನಿಮಗೆಲ್ಲ ಒಳ್ಳೆಯದಾಗಲಿ ಎಂದೇ ನಾನು ಆಶಿಸುತ್ತೇನೆ’ ಎನ್ನುತ್ತಾ ನಟಿ ಫರಿಯಾಗೆ ದುಃಖ ತಡೆಯಲಾಗಲಿಲ್ಲ, ಅಳುತ್ತಲೇ ಮಾತು ಮುಂದುವರೆಸಿದ ನಟಿ, ‘ನಾನು ಮರ, ಕಲ್ಲು, ಚಿಟ್ಟೆ ಎಲ್ಲದರಲ್ಲೂ ಜೀವವನ್ನೇ ನೋಡುತ್ತೇನೆ. ನಿಮಗೆ ಅದು ಅದ್ಭುತ ಅನಿಸದಿದ್ದರೆ, ನಿಮಗೆ ಅದರಿಂದ ದೇವರಲ್ಲಿ ನಂಬಿಕೆ ಹೆಚ್ಚಾಗುವ ಬದಲಿಗೆ, ದೇವರಿಂದ ದೂರ ಆಗುತ್ತೀರಿ ಎಂದಾದರೆ ನೀವು ತಪ್ಪು ದಾರಿಯಲ್ಲಿ ದೇವರನ್ನು ಹುಡುಕುತ್ತಿದ್ದೀರಿ, ನೀವು ಭೇಟಿ ಆಗುವ ಪ್ರತಿ ವ್ಯಕ್ತಿಯಲ್ಲಿಯೂ ನೀವು ದೇವರನ್ನು ಕಾಣದಿದ್ದರೆ ನೀವು ತಪ್ಪು ಹಾದಿಯಲ್ಲಿದ್ದೀರಿ ಎಂದರ್ಥ’ ಎಂದಿದ್ದಾರೆ ನಟಿ.

‘ನಾನು ಪ್ರೀತಿಗಾಗಿ ಪ್ರಾರ್ಥಿಸುತ್ತೇನೆ, ಒಗ್ಗಟ್ಟಿಗಾಗಿ ಪ್ರಾರ್ಥಿಸುತ್ತೇನೆ. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನಾನು ಅದನ್ನು ಮುಂದುವರೆಸುತ್ತೇನೆ. ಏಕೆಂದರೆ ಅದು ನನ್ನ ಕ್ರಾಂತಿ. ನಾನು ಇನ್ನು ಮುಂದೆ ಪ್ರೀತಿಯನ್ನು ಹೆಚ್ಚು-ಹೆಚ್ಚು ಹಂಚುತ್ತೇನೆ. ಈಗ ನನ್ನ ಬಗ್ಗೆ ದ್ವೇಷ ಕಾರುತ್ತಿರುವವರಿಗೂ ಸಹ ನಾನು ಪ್ರೀತಿಯನ್ನೇ ಹಂಚುತ್ತೇನೆ. ಅವರ ಒಳಿತಿಗಾಗಿ ಕೋರುತ್ತೇನೆ’ ಎಂದಿದ್ದಾರೆ.

‘ನನಗೆ ಗೊತ್ತಿದೆ ನನ್ನ ಹೃದಯ ಒಳ್ಳೆಯದು ಎಂದು, ನಾನು ಪ್ರೀತಿಯನ್ನು ಅನುಭವಿಸಿದ್ದೇನೆ. ನಾನು ಒಳ್ಳೆಯತನವನ್ನು ಕಂಡಿದ್ದೇನೆ. ನಾನು ‘ಅಲ್ಹ’ ಪದದ ಅರ್ಥವನ್ನು ತಿಳಿದುಕೊಂಡಿದ್ದೇನೆ. ಅದರ ಅರ್ಥ ಬೆಳಕು. ಎಲ್ಲೆಡೆ, ಎಲ್ಲ ವೇಳೆಯಲ್ಲಿ ಎಲ್ಲವನ್ನೂ ಏಕಗೊಳಿಸಿರುವ ಬೆಳಕು. ಇಷ್ಟು ವಿಶಾಲವಾಗಿರುವುದನ್ನು ನೀವು ಸಂಕುಚಿತ ಹೇಗೆ ಮಾಡಬಲ್ಲಿರಿ’ ಎಂದು ನಟಿ ಫರಿಯಾ ಪ್ರಶ್ನೆ ಮಾಡಿದ್ದಾರೆ.

ಫಾರಿಯಾ ಅದ್ಬುಲ್ಹ ಒಳ್ಳೆಯ ನಟಿ. ತೆಲುಗು ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿ. ‘ಜಾತಿ ರತ್ನಾಲು’ ಸಿನಿಮಾ ಮೂಲಕ ನಟನೆ ಆರಂಭಿಸಿದ ಫರಿಯಾ, ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳುನಾಡು ಸಿಎಂ ವಿಜಯ್ ಪುತ್ರ ನಿರ್ದೇಶನ ಮಾಡಿರುವ ಹೊಸ ಸಿನಿಮಾ ‘ಸಿಗ್ಮ’ನಲ್ಲಿಯೂ ಅವರೇ ನಾಯಕಿ. ಫರಿಯಾ ಬಹಳ ಒಳ್ಳೆಯ ಡ್ಯಾನ್ಸರ್ ಸಹ ಹೌದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ: ಪೊಲೀಸ್​​ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು; 7 ಜನರ ಬಂಧನ – Kannada News | Mentally Ill girl physical Assault: Police Investigation Reveals Shocking Details, 7 Arreste

ಗದಗ, ಆಗಸ್ಟ್​​ 15: ಮಾನಸಿಕ ಅಸ್ವಸ್ಥ ಯುವತಿಯನ್ನು (Mentally challenged girl) ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರ ಎಸಗಿ, ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಅಮಾನವೀಯ ಘಟನೆಯೊಂದು ಗದಗದಲ್ಲಿ (gadag) ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಎಸಗಿದ ಮತ್ತು ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು ಏಳು ಜನರನ್ನು ಗದಗ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹಣದ ಆಮಿಷ: ದೂರು ನೀಡದಂತೆ ಜೀವಬೆದರಿಕೆ

ಗದಗದ ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬ್ಬೀರಹ್ಮದ್ ಲಂಗೋಟಿ, ಪ್ರದೀಪ್ ನವಲೇಕರ್ ಹಾಗೂ ಭರತ ಕೊರವರ ಎಂಬುವವರು ಯುವತಿಯನ್ನು ಪ್ರತ್ಯೇಕ ನಿರ್ಜನ ಪ್ರದೇಶ ಹಾಗೂ ಮನೆಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಯುವತಿ ಮೂರು ತಿಂಗಳ ಗರ್ಭಿಣಿಯಾದಾಗ ಈ ನೀಚ ಕೃತ್ಯ ಪೋಷಕರಿಗೆ ತಿಳಿದಿದೆ. ಈ ವೇಳೆ ಆರೋಪಿಗಳು ಬಡ ಕುಟುಂಬಕ್ಕೆ ಹಣದ ಆಮಿಷವೊಡ್ಡಿ, ದೂರು ನೀಡದಂತೆ ಜೀವಬೆದರಿಕೆ ಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಗದಗ ಪೊಲೀಸರಿಂದ ಭರ್ಜರಿ ಬೇಟೆ: ಮೂವರು ಅಂತಾರಾಜ್ಯ ಕಳ್ಳರ ಬಂಧನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ

ಅಲ್ಲದೆ, ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಆರ್​ಎಂಪಿ ವೈದ್ಯ ಡಾ. ನಾಗರಾಜ್ ಕಮತರ, ಶಿಗ್ಲಿ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಾಗೂ ಸಂದೀಪ್ ಎಂಬುವವರ ನೆರವಿನಿಂದ 10 ಗರ್ಭಪಾತ ಮಾತ್ರೆಗಳನ್ನು ನೀಡಿ ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆ.

ಗರ್ಭಪಾತ ಕೃತ್ಯಕ್ಕೆ ಸಾಥ್​ ನೀಡಿದವರ ವಿರುದ್ಧವೂ ಎಫ್‌ಐಆರ್

ಈ ಅಕ್ರಮ ಗರ್ಭಪಾತ ಕೃತ್ಯಕ್ಕೆ ಗದಗ ಅಂಜುಮನ್ ಅಧ್ಯಕ್ಷ ಅನ್ವರ್ ಬಾಗೇವಾಡಿ, ಕಾರ್ಯದರ್ಶಿ ಅಲ್ತಾಫ್ ಕೊಪ್ಪಳ ಹಾಗೂ ಎಸ್​ಡಿಪಿಐ ಮುಖಂಡ ಬಿಲಾಲ್ ಗೋಕಾವಿ ಸಾಥ್ ನೀಡಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದು, ಈ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಿಸಿಕೊಂಡ ಗದಗ ಮಹಿಳಾ ಠಾಣೆ ಸಿಪಿಐ ಜೂಲಕಟ್ಟಿ ತನಿಖೆ ನಡೆಸಿ, ನಾಲ್ವರು ಆರೋಪಿಗಳು ಸೇರಿದಂತೆ ಅಕ್ರಮ ಗರ್ಭಪಾತಕ್ಕೆ ನೆರವಾದ ವೈದ್ಯ, ನರ್ಸ್ ಸೇರಿ ಏಳು ಜನರ ಹೆಡೆಮುರಿ ಕಟ್ಟಿದ್ದಾರೆ.

ಯಾರನ್ನೂ ಬಿಡಲ್ಲ: ಎಸ್​​ಪಿ ವರಿಷ್ಠಾಧಿಕಾರಿ ರೋಹನ್ ಖಡಕ್​​ ಎಚ್ಚರಿಕೆ

ಇನ್ನು ವೈದ್ಯರ ಅಧಿಕೃತ ಚೀಟಿ ಇಲ್ಲದೆ ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡಿದ ಮೆಡಿಕಲ್ ಶಾಪ್ ಮಾಲೀಕನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಜೊತೆಗೆ ಬಂಧಿತ ಸ್ಟಾಫ್ ನರ್ಸ್ ರೇಖಾ ಅಕ್ರಮ ಗರ್ಭಪಾತ ದಂಧೆಯಲ್ಲಿ ತೊಡಗಿದ್ದಳೇ ಎಂಬ ಬಗ್ಗೆಯೂ ಪೊಲೀಸರು ಆಕೆಯ ಹಿನ್ನೆಲೆ ಕೆದಕುತ್ತಿದ್ದಾರೆ. ‘ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದವರು, ರಾಜಿ ಪಂಚಾಯಿತಿ ಮಾಡಿದವರು ಸೇರಿದಂತೆ ಯಾವುದೇ ಪ್ರಭಾವಿಗಳಿದ್ದರೂ ಯಾರನ್ನೂ ಬಿಡುವುದಿಲ್ಲ’ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ದೇವದತ್ ಪಡಿಕ್ಕಲ್ ಶತಕ, ರಾಹುಲ್ ಅರ್ಧಶತಕ; ಭಾರತಕ್ಕೆ ಮೊದಲ ದಿನದ ಗೌರವ – Kannada News | India vs SL Test Day 1: Devdutt Padikkal’s Unbeaten 131 Dominates Galle Match

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ದೇವದತ್ ಪಡಿಕ್ಕಲ್ 178 ಎಸೆತಗಳಲ್ಲಿ ಅಜೇಯ131 ರನ್ ಬಾರಿಸಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ 36 ಎಸೆತಗಳಲ್ಲಿ 27 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೊದಲ ದಿನ ಸಂಪೂರ್ಣ 90 ಓವರ್​ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅಲ್ಲದೆ ಮಳೆ ಆಟಕ್ಕೆ ಅಡ್ಡಿಪಡಿಸಿದರ ಕಾರಣ ಮೊದಲ ದಿನ 73 ಓವರ್​ಗಳ ಆಟ ಮಾತ್ರ ನಡೆಯಿತು.

Published On – 6:10 pm, Sat, 15 August 26

Source link

ಡಬ್ಬಗಳಲ್ಲಿ ಶೇಖರಿಸಿಡುವ ಅಕ್ಕಿಯಲ್ಲಿ ಹುಳಗಳಾಗಂತೆ ತಡೆಯಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ – Kannada News | How to prevent Weevils in rice

ಸಾಮಾನ್ಯವಾಗಿ ಒಂದೆರಡು ತಿಂಗಳಿಗೆ ಬೇಕಾಗುವ ಅಕ್ಕಿ (Rice), ಬೇಳೆ, ದ್ವಿಧಳ ಧಾನ್ಯಗಳನ್ನು ಒಂದೇ ಬಾರಿಗೆ ಖರೀದಿಸಿ, ಡಬ್ಬಗಳಲ್ಲಿ ಭದ್ರವಾಗಿ ಶೇಖರಿಸಿಡುತ್ತಾರೆ. ಅಕ್ಕಿ, ಕಾಳುಗಳು, ಹಿಟ್ಟುಗಳನ್ನು ಎಷ್ಟೇ ಭದ್ರವಾಗಿ ಸ್ಟೋರ್‌ ಮಾಡಿಟ್ಟರೂ ಡಬ್ಬದೊಳಗೆ ಹುಳುಗಳು ಆವರಿಸಿಬಿಡುತ್ತವೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ತುಸು ಹೆಚ್ಚೇ ಇರುತ್ತದೆ. ಹುಳುಗಳು ಅವರಿಸುವುದರಿಂದ ಅಕ್ಕಿ, ಕಾಳುಗಳು ಮತ್ತು ಹಿಟ್ಟಿನ ರುಚಿ, ಗುಣಮಟ್ಟ ಎರಡೂ ಕಡಿಮೆಯಾಗುತ್ತದೆ. ನೀವು ಮನೆಯಲ್ಲಿ ಡಬ್ಬದಲ್ಲಿ ಶೇಖರಿಸಿಟ್ಟ ಅಕ್ಕಿಯಲ್ಲೂ ಇದೇ ರೀತಿ ಹುಳುಗಳಾಗಿದ್ಯಾ? ಹಾಗಿದ್ರೆ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಮತ್ತು ಸ್ಟೋರ್‌ ಮಾಡಿಡುವ ಅಕ್ಕಿ, ಕಾಳುಗಳಲ್ಲಿ ಹುಳುಗಳಾಗದಂತೆ ನೋಡಿಕೊಳ್ಳಲು ಈ ಸಿಂಪಲ್‌ ಹಾಗೆನೇ ಪರಿಣಾಮಕಾರಿ ಸಲಹೆಯನ್ನು ಪಾಲಿಸಿ.

ಅಕ್ಕಿಯಲ್ಲಿರುವ ಹುಳುಗಳನ್ನು ತೆಗೆದುಹಾಕುವುದು ಹೇಗೆ?

ಅಕ್ಕಿಯನ್ನು ಸೂರ್ಯನ ಬೆಳಕಿನಲ್ಲಿಡಿ: ನೀವು ಡಬ್ಬದಲ್ಲಿ ಶೇಖರಿಸಿಟ್ಟ ಅಕ್ಕಿ ಅಥವಾ ಕಾಳುಗಳಲ್ಲಿ ವಿಪರೀತ ಹುಳುಗಳಿದ್ದರೆ, ಅಕ್ಕಿಯನ್ನು ದೊಡ್ಡ ತಟ್ಟೆ ಅಥವಾ ಸ್ವಚ್ಛವಾದ ಬಟ್ಟೆಯ ಮೇಲೆ ತೆಳುವಾಗಿ ಹರಡಿ. ಬಿಸಿಲಿನಲ್ಲಿಡಿ. ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಅದನ್ನು ಬಿಸಿಲಿನಲ್ಲಿಡಬೇಕು. ಸೂರ್ಯನ ಶಾಖವು ಅಕ್ಕಿಯಿಂದ ಕೀಟಗಳನ್ನು ಓಡಿಸುತ್ತದೆ. ಅಲ್ಲದೆ ಈ ಟ್ರಿಕ್ಸ್‌  ಅಕ್ಕಿಯಿಂದ ತೇವಾಂಶವನ್ನು ಸಹ ತೆಗೆದುಹಾಕುತ್ತದೆ.

ವಿನೆಗರ್ ಮತ್ತು ಇಂಗು ಬಳಕೆ: ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಬಿಳಿ ವಿನೆಗರ್ ಸುರಿಯಿರಿ. ಅದಕ್ಕೆ ಕಾಲು ಚಮಚ ಇಂಗು ಸೇರಿಸಿ. ಇದನ್ನು ಅಕ್ಕಿಯ ಡಬ್ಬದ ಮಧ್ಯದಲ್ಲಿಡಿ. ವಿನೆಗರ್‌ ಮತ್ತು ಇಂಗಿನ ಕಟುವಾದ ವಾಸನೆಗೆ ಹುಳುಗಳು ಸಂಪೂರ್ಣವಾಗಿ ಮಾಯವಾಗಿಬಿಡುತ್ತವೆ. ಕೀಟಗಳು ಹೋದ ನಂತರ, ಅಕ್ಕಿಯನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿ. ಅಕ್ಕಿ, ಕಾಳುಗಳ ಡಬ್ಬದಲ್ಲಿರುವ ಹುಳು, ಕೀಟಗಳನ್ನು ತೊಡೆದುಹಾಕಲು ಈ ಟ್ರಿಕ್ಸ್‌ ತುಂಬಾನೇ ಪರಿಣಾಮಕಾರಿ.

ಲವಂಗ ಅಥವಾ ದಾಲ್ಚಿನ್ನಿ: ಅಕ್ಕಿ ಡಬ್ಬದಿಂದ ಕೀಟಗಳನ್ನು ತೆಗೆದುಹಾಕಲು ನೀವು ಲವಂಗ ಅಥವಾ ದಾಲ್ಚಿನ್ನಿಯನ್ನು ಸಹ ಬಳಸಬಹುದು.  ಅಕ್ಕಿ ಡಬ್ಬದಲ್ಲಿ ಕೆಲವು ಲವಂಗ ಅಥವಾ ದಾಲ್ಚಿನ್ನಿ ತುಂಡುಗಳನ್ನು ಇರಿಸಿ. ಅವುಗಳ ಬಲವಾದ ಪರಿಮಳವು ಹುಳುಗಳನ್ನು ಹೋಗಲಾಡಿಸುತ್ತವೆ. ಅಲ್ಲದೆ ಇದು ಅಕ್ಕಿಯಲ್ಲಿನ ತೇವಾಂಶದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ನೀವು ಅಕ್ಕಿ, ಕಾಳುಗಳನ್ನು ಸ್ಟೋರ್‌ ಮಾಡುವಾಗ ಒಂದೆರಡು ಲವಂಗ, ದಾಲ್ಚಿನ್ನಿಯನ್ನು ಆ ಡಬ್ಬದಲ್ಲಿ ಇಟ್ಟರೆ ಹುಳುಗಳು ಎಂದಿಗೂ ಅಕ್ಕಿಯನ್ನು ಆವರಿಸುವುದಿಲ್ಲ.

ಅಕ್ಕಿ, ಕಾಳುಗಳಲ್ಲಿ ಹುಳುಗಳಾಗದಂತೆ ನೋಡಿಕೊಳ್ಳುವುದು ಹೇಗೆ?

ಬಿರಿಯಾನಿ ಎಲೆ ತಂತ್ರ: ಕೀಟ, ಹುಳುಗಳು ಬಿರಿಯಾನಿ ಎಲೆಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ಈ ಎಲೆ ನೈಸರ್ಗಿಕ ಕೀಟ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಅಕ್ಕಿ, ಕಾಳುಗಳಲ್ಲಿ ಹುಳುಗಳಾಗುವುದನ್ನು ತಡೆಯಲು ಸಹ ಪರಿಣಾಮಕಾರಿ. ನೀವು ಸ್ಟೋರ್‌ ಮಾಡುವ ಅಕ್ಕಿ ಡಬ್ಬದಲ್ಲಿ ಎರಡರಿಂದ ಮೂರು ಬಿರಿಯಾನಿ ಎಲೆಗಳನ್ನು ಇರಿಸಿ. ಈ ವಿಧಾನವು ಹಿಟ್ಟು ಮತ್ತು ಇತರ ದ್ವಿದಳ ಧಾನ್ಯಗಳಿಗೂ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ರೀತಿ ಸ್ವಚ್ಛಗೊಳಿಸಿ

ಬೆಳ್ಳುಳ್ಳಿ ಸೇರಿಸಿ: ಅಕ್ಕಿಗೆ ಕೀಟಗಳು ಮುತ್ತಿಕೊಳ್ಳುವುದನ್ನು ತಡೆಯಲು, ಸಿಪ್ಪೆ ತೆಗೆಯದ ಐದರಿಂದ ಆರು ಬೆಳ್ಳುಳ್ಳಿ ಎಸಳುಗಳನ್ನು ಅಕ್ಕಿ ಡಬ್ಬದಲ್ಲಿಡಿ.  ಇದರ ಬಲವಾದ ವಾಸನೆಯು ಕೀಟಗಳನ್ನು ದೂರವಿಡುತ್ತದೆ. ಅಕ್ಕಿ, ಕಾಳುಗಳಲ್ಲಿ ಹುಳುಗಳಾಗುವುದನ್ನು ತಡೆಯುತ್ತದೆ.

ಅರಶಿಣ ಕೊಂಬು, ಒಣ ಮೆಣಸು: ಒಂದು ಒಣ ಅರಿಶಿನ ಕೊಂಬು, ಒಂದು ಒಣ ಮೆಣಸುಎರಡು ಪಲಾವ್‌ ಎಲೆ ಮತ್ತು ನಾಲ್ಕರಿಂದ ಐದು ಲವಂಗಗಳನ್ನು ದ್ವಿದಳ ಧಾನ್ಯಗಳು, ಅಕ್ಕಿ ಅಥವಾ ಯಾವುದೇ ಇತರ ಧಾನ್ಯಗಳನ್ನು ಸ್ಟೋರ್‌ ಮಾಡಿಡುವ ಪಾತ್ರೆಯಲ್ಲಿ ಹಾಕಿದರೆ, ಆ ಡಬ್ಬದಲ್ಲಿ ಹುಳು, ಕೀಟಗಳು ಆವರಿಸುವುದಿಲ್ಲ. ಇವುಗಳ ನೈಸರ್ಗಿಕ ಪರಿಮಳ ಅಕ್ಕಿ, ಧಾನ್ಯಗಳಲ್ಲಿ ಕೀಟ, ಹುಳುಗಳು ಆವರಿಸುವುದನ್ನು ತಡೆಯುತ್ತವೆ. ಅವುಗಳ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ನಿವಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version