ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 38ಕ್ಕೆ ಏರಿಕೆ – Kannada News | 7.7 magnitude earthquake hits in Indonesia 38 dead in tsunami warning issued
ಬಾಲಿ, ಆಗಸ್ಟ್ 15: ಇಂಡೋನೇಷ್ಯಾದಲ್ಲಿ (Indonesia Earthquake) ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಂದು ಮುಂಜಾನೆ ಉಂಟಾದ ಈ ಪ್ರಬಲ ಭೂಕಂಪದ ಕುರಿತು ಸ್ಥಳೀಯ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಮುದ್ರದಾಳದಲ್ಲಿ ಸಂಭವಿಸಿದ ಈ ಭೂಕಂಪದ ನಂತರ ಆಗ್ನೇಯ ಏಷ್ಯಾದ ಇಂಡೋನೇಷ್ಯಾ ದೇಶದ ಹಲವು ಭಾಗಗಳಲ್ಲಿ ಸುನಾಮಿ ಅಲೆಗಳು ಕಂಡುಬಂದವು. ಬಂದರು ನಗರಿ ಮಾಉಮೇರೆಯಲ್ಲಿ (Maumere) ರಕ್ಷಣಾ ಸಿಬ್ಬಂದಿ 38 ಶವಗಳನ್ನು ಹೊರಗೆ ತಂದಿದ್ದಾರೆ…