ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​: ವಿಡಿಯೋ ನೋಡಿ – Kannada News | CM DK Shivakumar Announces Major Opportunity for Job Seekers; Watch the Video

ಬೆಂಗಳೂರು, ಜೂನ್​​ 13: ರಾಜ್ಯದಲ್ಲಿ ಯುವಕರ ಉದ್ಯೋಗಾವಕಾಶ ಹೆಚ್ಚಿಸಲು ಮತ್ತು ಗ್ರಾಮೀಣ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದು, ಭಾರತದಲ್ಲೇ ಪ್ರಥಮವಾದ ಖಾಸಗಿ ಉದ್ಯೋಗ ವಿನಿಮಯ ಕೇಂದ್ರದ ಸ್ಥಾಪನೆ ಪ್ರಮುಖವಾಗಿದೆ. ಖಾಸಗಿ ವಲಯದಲ್ಲಿ ಉದ್ಯೋಗಾಕಾಂಕ್ಷಿಗಳು ಈ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಹಾಗೆಯೇ, ಉದ್ಯೋಗದಾತ ಕಂಪನಿಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನುರಿತ ಮಾನವ ಸಂಪನ್ಮೂಲವನ್ನು ಇಲ್ಲಿಂದ ಪಡೆದುಕೊಳ್ಳಬಹುದು. ಇದು ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಸೇತುವೆಯಾಗಲಿದೆ. ಅದೇ ರೀತಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹೊಸ ಸಿಎಸ್‌ಆರ್ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸಿಟಿಗಳು ಮತ್ತು ಟೌನ್‌ಗಳಿಗೆ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. 2% ಸಿಎಸ್‌ಆರ್ ಕಡ್ಡಾಯವಾಗಿ ಖರ್ಚು ಮಾಡುವ ಕಂಪನಿಗಳು, ಸರ್ಕಾರ ನೀಡುವ ಮಾದರಿಯ ಪ್ರಕಾರ ಶಾಲೆಗಳನ್ನು ನಿರ್ಮಿಸಿ ಸೌಲಭ್ಯಗಳನ್ನು ಒದಗಿಸಬಹುದು. ಈ ಶಾಲೆಗಳು ಸರ್ಕಾರಿ ಶಾಲೆಗಳಾಗಿಯೇ ಉಳಿಯಲಿವೆ. ಈ ಉಪಕ್ರಮಗಳು ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?

ದೊಡ್ಡಣ್ಣ (Doddanna), ಕನ್ನಡ ಚಿತ್ರರಂಗದ ಹಿರಿಯ ನಟ. ಹಿರಿಯ ನಟರಾಗಿರುವ ಜೊತೆಗೆ ಚಿತ್ರರಂಗದ ಏಳ್ಗೆಗೆ ಸಂಬಂಧಿಸಿದ ಇತರೆ ಕಾರ್ಯಗಳಲ್ಲಿಯೂ ಮುಂದಾಳತ್ವ ವಹಿಸುತ್ತಾರೆ. ಜೊತೆಗೆ ಆಗಾಗ್ಗೆ ರಾಜಕೀಯ ವೇದಿಕೆಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ದೊಡ್ಡಣ್ಣ ಅವರು ಈಗಲೂ ಉತ್ಸಾಹದ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಣ್ಣ ನಿಧನದ ಸುದ್ದಿಗಳನ್ನು ಕೆಲ ಕಿಡಿಗೇಡಿಗಳು ಪದೇ ಪದೇ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಕೆಲ ಕಿಡಿಗೇಡಿಗಳು ದೊಡ್ಡಣ್ಣ ಅವರ ನಿಧನ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ನಟ ದೊಡ್ಡಣ್ಣ ಆ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಮನಿಸಿ: ಬಿಗ್​​ಬಾಸ್ ಆಡಿಷನ್​​ಗೆ ವಿಡಿಯೋ ಕಳಿಸುವವರೇ ಈ ಸೂಚನೆ ಪಾಲಿಸಿ – Kannada News | Bigg Boss Kannada audition for common man, Tv Channel give instruction

ಬಿಗ್​​ಬಾಸ್ ಕನ್ನಡದ (Bigg Boss Kannada) ಹೊಸ ಸೀಸನ್ ಈ ಬಾರಿ ತುಸು ಮುಂಚಿತವಾಗಿಯೇ ಶುರು ಆಗಲಿದೆ. ಅದು ಮಾತ್ರವೇ ಅಲ್ಲದೆ, ಈ ಬಾರಿ ಬಿಗ್​​ಬಾಸ್ ಕನ್ನಡಕ್ಕೆ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರ ಎಂಟ್ರಿಗೂ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಜನ ಅರ್ಜಿ ಸಲ್ಲಿಸಿ, ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕಿದೆ. ಕಲರ್ಸ್ ವಾಹಿನಿಯು ಸಾಮಾನ್ಯರು ತಮ್ಮ ಎಂಟ್ರಿ ಕಳಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದು, ಆಡಿಷನ್ ವಿಡಿಯೋ ಮಾಡಿ ಅದನ್ನು ಕಲರ್ಸ್ ವಾಹಿನಿ ಸೂಚಿಸಿರುವ ಲಿಂಕ್​​ಗೆ ಕಳಿಸಬೇಕು, ಕೇವಲ ಇನ್​​ಸ್ಟಾಗ್ರಾಂನಲ್ಲಿ ಅಪ್​​ಲೋಡ್ ಮಾಡಿದರೆ ಸಾಲದು. ಆದರೆ ಆಡಿಷನ್ ವೇಳೆ ಸಾಕಷ್ಟು ಜನ ವಾಹಿನಿ ಹೇಳಿರುವ ನಿಯಮಗಳನ್ನು ಮರೆತು ಆಡಿಷನ್ ವಿಡಿಯೋ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ವಾಹಿನಿಯೂ ಮತ್ತೊಮ್ಮೆ ನಿಯಮಗಳನ್ನು ನೆನಪಿಸಿದೆ.

ಕಲರ್ಸ್ ವಾಹಿನಿಯು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಆಡಿಷನ್ ವಿಡಿಯೋ ಮಾಡುವಾಗ ಕಡ್ಡಾಯವಾಗಿ ನಾಲ್ಕು ಹಂತಗಳನ್ನು ಪಾಲಿಸಲೇ ಬೇಕು ಎಂದು ವಾಹಿನಿ ಹೇಳಿದೆ. ಆ ಹಂತಗಳು ಇಂತಿವೆ, ‘ವಿಡಿಯೋ ಮಾಡುವಾಗ ನಿಮ್ಮ ವಿಶೇಷತೆ ಏನು? ಬಿಗ್​​ಬಾಸ್​​ನಲ್ಲಿ ಭಾಗವಿಸಲು ನೀವು ಏಕೆ ಸೂಕ್ತ ವ್ಯಕ್ತಿ? ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು? ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ವಾಹಿನಿ ಹೇಳಿದೆ.

‘ಬಿಗ್​​ಬಾಸ್, ಪ್ರತಿಭೆ, ಆತ್ಮವಿಶ್ವಾಸ, ಟ್ಯಾಲೆಂಟ್ ಅನ್ನು ತೋರಿಸಲು ಸೂಕ್ತವಾದ ವೇದಿಕೆ. ಇಲ್ಲಿಗೆ ಅರ್ಹತೆ ಪಡೆಯಲು ನೀವೆಷ್ಟು ಸೂಕ್ತವಾದ ವ್ಯಕ್ತಿ ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ವಾಹಿನಿ ಹೇಳಿದೆ. ಮುಂದುವರೆದು, ‘ಬಿಗ್​​ಬಾಸ್ ಆಡಿಷನ್​​ನಲ್ಲಿ ಭಾಗವಹಿಸಲು ಜನ ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್ ವಿಡಿಯೋ ಕಳಿಸುವಾಗ ನಾಲ್ಕು ಹಂತಗಳನ್ನು ಮರೆಯುವುದು ಬೇಡ’ ಎಂದು ವಾಹಿನಿ ಮನವಿ ಮಾಡಿದೆ.

ಇದನ್ನೂ ಓದಿ:ಮತ್ತೆ ತೆಲುಗಿಗೆ ಹೊರಟ ರುಕ್ಮಿಣಿ ವಸಂತ್, ಸ್ಟಾರ್ ನಟನ ಸಿನಿಮಾ

ಬಿಗ್​​ಬಾಸ್ ನಲ್ಲಿ ಭಾಗವಹಿಸಲು ಸಾಮಾನ್ಯ ಜನರು ಆಡಿಷನ್ ನೀಡಬೇಕಿದೆ. ಈ ಹಿಂದೆ ಕೆಲ ಬಾರಿ ಸಾಮಾನ್ಯರನ್ನು ಬಿಗ್​​ಬಾಸ್​​ಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಶೋನಲ್ಲಿ ಗಮನ ಸೆಳೆದ ಸಾಮಾನ್ಯರು ತುಸು ಕಡಿಮೆಯೇ. ಕಳೆದ ಬಾರಿ ಗಿಲ್ಲಿ ಗೆಲ್ಲುವ ಮೂಲಕ ಗ್ರಾಮೀಣ ಪ್ರತಿಭೆಗಳು ಶೋಗೆ ಕಳೆ ತಂದುಕೊಡುತ್ತಾರೆಂಬುದನ್ನು ಗಮನಿಸಿರುವ ಬಿಗ್​​ಬಾಸ್, ಈ ಬಾರಿ ಸಾಮಾನ್ಯರನ್ನು ಶೋಗೆ ಕರೆದುಕೊಂಡು ಬರುವ ನಿರ್ಧಾರ ಕೈಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:19 pm, Sat, 13 June 26

Source link

ಮುಂದುವರಿದ ಖಾತೆ ಕಿತ್ತಾಟ: ಪಟ್ಟು ಬಿಡದ ಕೃಷ್ಣಬೈರೇಗೌಡ; ಸಿದ್ದರಾಮಯ್ಯ ಭೇಟಿಯಾದ ಜಮೀರ್ – Kannada News | Karnataka Cabinet Portfolio Crisis: Krishna Byre Gowda Confident of Securing BDA, BMRDA; Zameer Ahmed meets Siddaramaiah and mallikarjun kharge

ಕೃಷ್ಣಬೈರೇಗೌಡ, ಸಿದ್ದರಾಮಯ್ಯ ಬೇಟೆಯಾದ ಜಮೀರ್Image Credit source: tv9 kannada

ಬೆಂಗಳೂರು, ಜೂನ್​​ 13: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನಗಳಾಗಿವೆ. 13 ಸಚಿವರು ಪ್ರಮಾಣವಚನ ಸ್ವೀಕರಿಸಿಯೂ ಆಗಿದೆ. ಆದರೆ ಖಾತೆ ಬಗ್ಗೆ ಸಚಿವರ ಕ್ಯಾತೆ ಮುಂದುವರಿದಿದೆ. BDA, BMRDA ಹೊರತುಪಡಿಸಿ ಕೇವಲ ಬೆಂಗಳೂರು ನಗರಾಭಿವೃದ್ಧಿ ನೀಡಿದ್ದಕ್ಕೆ ಕೃಷ್ಣಬೈರೇಗೌಡ ಮುನಿಸಿಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಜೊತೆಗೆ BDA, BMRDA ನೀಡುವಂತೆ ಹಾಕಿರುವ ಪಟ್ಟನ್ನು ಸಡಿಲಿಸುತ್ತಿಲ್ಲ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದು, BDA, BMRDA ಸಿಗುವ ವಿಶ್ವಾಸದಲ್ಲಿದ್ದಾರೆ.

ಕೃಷ್ಣಬೈರೇಗೌಡ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು. ಸ್ಪಷ್ಟತೆ ಇದರೆ ಉತ್ತಮ ಕೆಲಸ ಮಾಡಬಹುದು. ಸ್ಪಷ್ಟತೆ ಇಲ್ಲದಿದ್ದರೆ ನಿರೀಕ್ಷೆ ಮುಟ್ಟಲು ಆಗಲ್ಲ ಅಂತಾ ಮಾರ್ಮಿಕವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಜಮೀರ್

ಅತ್ತ ಜಮೀರ್ ಅಹ್ಮದ್​ಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ, ಹುಬ್ಬಳ್ಳಿ ನಗರದಲ್ಲಿ ಧರ್ಮಗುರುಗಳು ಪ್ರತಿಭಟನೆ ಮಾಡಿದರು. ಇತ್ತ ಜಮೀರ್​ ಅಹ್ಮದ್​ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಇಂದು ಸಂಜೆ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಎಲ್ಲ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದಾರೆ.

ದಾವಣಗೆರೆ ಉಪಚುನಾವಣೆ ಬೆಳವಣಿಗೆ ಮಾತ್ರವಲ್ಲದೇ ಬೇರೆಬೇರೆ ಬೆಳವಣಿಗೆಗಳ ಬಗ್ಗೆಯೂ ಜಮೀರ್ ಮೇಲೆ ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರೆ. ಅವರ ಮುನಿಸಿನಿಂದಲೇ ಸಚಿವ ಸ್ಥಾನ ಮಿಸ್ ಎಂದು ಕೈ ಪಾಳಯದಲ್ಲಿ ಚರ್ಚೆ ಹಿನ್ನೆಲೆ ಅವರ ಮುನಿಸು ತಣಿಸಲು ಜಮೀರ್ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ: ‘ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ’:ಪರಮಾಪ್ತ ಜಮೀರ್ ವಿರುದ್ಧ ಸಿದ್ದರಾಮಯ್ಯ ಗರಂ

ಇನ್ನು ಸಿದ್ದರಾಮಯ್ಯ ಭೇಟಿ ಬಳಿಕ ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆಯನ್ನ ಜಮೀರ್ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಖರ್ಗೆ ಭೇಟಿ ಮಾಡಿ ಜಮೀರ್​ ಚರ್ಚೆ ಮಾಡಿದ್ದಾರೆ.

ತಂದೆ ಪರ ಸಿಎಂ ಜೊತೆ ರಾಜೇಂದ್ರ ರಾಜಣ್ಣ ಸಂಧಾನ?

ಈಗಾಗಲೇ ಡಿಕೆ ಶಿವಕುಮಾರ್ ಜೊತೆ ಮುನಿಸಿಕೊಂಡಿರುವ ಮಾಜಿ ಸಚಿವ ರಾಜಣ್ಣ ರಾಜಿಗೆ ಮುಂದಾಗಿದ್ದಾರೆನ್ನಲಾಗಿದೆ. ಸಿಎಂ ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ರಾಜಣ್ಣ ಪುತ್ರ ರಾಜೇಂದ್ರ ಮುಂದಾಗಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿ ರಾಜೇಂದ್ರ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್​ ಸಂಪುಟದಲ್ಲಿ ಸಚಿವನಾಗಲ್ಲ ಎಂದಿರುವ ರಾಜಣ್ಣ ಮಗನಿಗಾದರೂ ಮಂತ್ರಿಗಿರಿ ಸಿಗಲು ಅನ್ನೋ ಪ್ಲ್ಯಾನ್ ಮಾಡಿದ್ದಾರೆನ್ನಲಾಗಿದೆ. ನಿನ್ನೆ ಡಿಕೆ ಶಿವಕುಮಾರ್ ಜೊತೆಗೆ ರಾಜೇಂದ್ರ ಅರ್ಧ ಗಂಟೆ ಮಾತುಕತೆ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಡಿಕೆ ಶಿವಕುಮಾರ್ ಇಟ್ಟ 9 ಬೇಡಿಕೆಗಳು ಹೀಗಿವೆ

ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ಹಂಪನಗೌಡ ಬಾದರ್ಲಿ ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಸಿಂಧನೂರು ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಪರ ಅಭಿಮಾನಿಗಳು 20 ಕಿ.ಮೀ ಪಾದಯಾತ್ರೆ ಮಾಡಿದರು. ಸಿಂಧನೂರಿನಿಂದ ಅಂಬಾದೇವಿ ದೇಗುಲದವರೆಗೆ ಪಾದಯಾತ್ರೆ ಮಾಡಿದ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದರು.

ವರದಿ: ಬ್ಯೂರೋ ರಿಪೋರ್ಟ್, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್ – Kannada News | US President Donald Trump Shares Video Of Strike On Venezuelan Cartel Leader

ವಾಷಿಂಗ್ಟನ್, ಜೂನ್ 13: ಅಮೆರಿಕದ ಭದ್ರತಾ ಪಡೆಗಳು ವೆನೆಜುವೆಲಾದಲ್ಲಿ ಭೀಕರ ಕಾರ್ಯಾಚರಣೆ ನಡೆಸಿದ್ದು, ಯುಎಸ್‌ನಿಂದ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ‘ಟ್ರೆನ್ ಡಿ ಅರಾಗುವಾ’ ಕಾರ್ಟೆಲ್‌ನ ಕುಖ್ಯಾತ ನಾಯಕ ಹೆಕ್ಟರ್ ರುಸ್ತೇನ್‌ಫೋರ್ಡ್ ಗೆರೆರೊ ಫ್ಲೋರೆಸ್ (ನಿನೋ ಗೆರೆರೊ)ನನ್ನು ಕೊಂದಿವೆ. ಅಮೆರಿಕ ಸೇನೆಯು ನಡೆಸಿದ ಅತ್ಯಂತ ಮಾರಕ ವೈಮಾನಿಕ ದಾಳಿಯಲ್ಲಿ ಆತ ಹತನಾಗಿದ್ದಾನೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕೃತವಾಗಿ ಪ್ರಕಟಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟ್ರುತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ಆತನನ್ನು ಯಶಸ್ವಿಯಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ವೈಮಾನಿಕ ದಾಳಿಯ ದೃಶ್ಯವಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಸಿರು ಮೇಲ್ಛಾವಣಿ ಹೊಂದಿರುವ ಕಟ್ಟಡವೊಂದಕ್ಕೆ ಕ್ಷಿಪಣಿ ಅಪ್ಪಳಿಸಿ, ಅದು ಕ್ಷಣಾರ್ಧದಲ್ಲಿ ಸ್ಫೋಟಗೊಳ್ಳುವ ದೃಶ್ಯವಿದೆ. “ಟ್ರೆನ್ ಡಿ ಅರಾಗುವಾ ಭಯೋತ್ಪಾದಕರಿಗೆ ಇನ್ನು ಮುಂದೆ ವೆನೆಜುವೆಲಾದಲ್ಲಾಗಲಿ ಅಥವಾ ಜಗತ್ತಿನ ಬೇರೆಲ್ಲೂ ಸುರಕ್ಷಿತ ತಾಣಗಳಿರುವುದಿಲ್ಲ. ನನ್ನ ನಾಯಕತ್ವದಲ್ಲಿ, ಇಂತಹ ಕ್ರೂರ ಕೊಲೆಗಡುಕರು ಮತ್ತು ಡ್ರಗ್ಸ್ ಮಾಫಿಯಾ ಲೀಡರ್‌ಗಳನ್ನು ಯಾವುದೇ ಸಮಯದಲ್ಲಿ, ಎಂತಹದೇ ಜಾಗದಲ್ಲಿದ್ದರೂ ಹುಡುಕಿ ತೆಗೆದು ನರಕಕ್ಕೆ ಕಳುಹಿಸುತ್ತೇವೆ” ಎಂದು ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.

(Video Source: The White House X Account)

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs AFG: ಗುರ್ಬಾಜ್ ಶತಕ ವ್ಯರ್ಥ; ಅಫ್ಘನ್ ವಿರುದ್ಧ ಭಾರತಕ್ಕೆ ಸುಲಭ ಜಯ

ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಮಳೆ ಪೀಡಿತ ಈ ಪಂದ್ಯವನ್ನು ತಲಾ 25 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅವರ ಸ್ಫೋಟಕ ಶತಕದ ನೆರವಿನಿಂದ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅವರ ಅಜೇಯ ಅರ್ಧಶತಕದ ಇನ್ನಿಂಗ್ಸ್​ ಹಾಗೂ ಕೆಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ 3 ವಿಕೆಟ್​ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

Source link

World Blood Donor Day 2026: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಿ – Kannada News | World Blood Donor Day 2026: What is the significance of World Blood Donor Day?

ವಿಶ್ವ ರಕ್ತದಾನಿಗಳ ದಿನImage Credit source: png magic

ರಕ್ತದಾನವು (Blood donation) ಮಹಾದಾನ ಮಾತ್ರವಲ್ಲ ಇದು ಮಾನವೀಯತೆಯ ಅಮೂಲ್ಯವಾದ ಅಭಿವ್ಯಕ್ತಿಯೂ ಹೌದು. ಅಪಘಾತಕ್ಕೀಡಾದವರಿಗೆ, ಕ್ಯಾನ್ಸರ್‌ ರೋಗಿಗಳಿಗೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗಳಿಗೆ ಹೀಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ರಕ್ತ ಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ರಕ್ತ ದಾನವನ್ನು ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ.  ರಕ್ತದಾನದ ಈ ಮಹತ್ವವನ್ನು ಸಾರಲು, ರಕ್ತದಾನ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಹಾಗೂ ರಕ್ತದಾನಿಗಳನ್ನು ಗೌರವಿಸಲು ಪ್ರತಿವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ರಕ್ತದಾನಿಗಳ ದಿನದ ಇತಿಹಾಸವೇನು?

ವಿಶ್ವ ಆರೋಗ್ಯ ಸಂಸ್ಥೆ (WHO), ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ ಒಕ್ಕೂಟ (IFRC), ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸಂಘ (ISBT), ಮತ್ತು ಅಂತರರಾಷ್ಟ್ರೀಯ ರಕ್ತದಾನ ಸಂಸ್ಥೆಗಳ ಒಕ್ಕೂಟ (IFBDO) ಜಂಟಿಯಾಗಿ ವಿಶ್ವ ರಕ್ತದಾನಿಗಳ ದಿನದ ಆಚರಣೆಯನ್ನು  ಪ್ರಾರಂಭಿಸಿದವು. ಈ ದಿನವನ್ನು ಮೊದಲ ಬಾರಿಗೆ 2004 ರಲ್ಲಿ ಆಚರಿಸಲಾಯಿತು. ನಂತರ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಜೂನ್ 14 ರಂದೇ  ಏಕೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ?

ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನ . ABO ರಕ್ತ ಗುಂಪುಗಳನ್ನು ಕಂಡುಹಿಡಿದ ಮತ್ತು ರಕ್ತ ಗುಂಪುಗಳನ್ನು ವರ್ಗೀಕರಿಸಲು ಆಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ  ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಜೂನ್‌ 14 ರಂದೇ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನದ ಮಹತ್ವವೇನು?

  • ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ಚಿಕಿತ್ಸೆಗಳು, ಥಲಸ್ಸೆಮಿಯಾ ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದಾನವು ಹೊಸ ಜೀವನವನ್ನು ನೀಡುತ್ತದೆ. ಒಂದು ಯೂನಿಟ್ ರಕ್ತವು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ರಕ್ತದಾನದ ಈ ಮಹತ್ವವನ್ನು ಈ ದಿನ ಸಾರಲಾಗುತ್ತದೆ.
  • ರಕ್ತದಾನದ ಮಹತ್ವವನ್ನು ಉತ್ತೇಜಿಸಲು ಮತ್ತು ರಕ್ತದಾನಿಗಳನ್ನು ಗೌರವಿಸಲು ವಿಶ್ವ ರಕ್ತದಾನಿಗಳ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
  • ಪ್ರತಿ ವರ್ಷ, ಈ ವಿಶೇಷ ದಿನದಂದು, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಆಯೋಜಿಸಲಾಗುತ್ತದೆ.
  • ವಿಶ್ವ ರಕ್ತದಾನಿಗಳ ದಿನವು ಸಮಾಜದಲ್ಲಿ ಮಾನವೀಯತೆಯ ಸಂದೇಶವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಮಕ್ಕಳ ಸುಂದರ ಬಾಲ್ಯ, ಉಜ್ವಲ ಭವಿಷ್ಯವನ್ನು ಕಸಿಯುತ್ತಿದೆ ಬಾಲ ಕಾರ್ಮಿಕ ಪದ್ಧತಿ

ರಕ್ತದಾನದ ಬಗೆಗಿನ ಕುತೂಹಲಕಾರಿ ಸಂಗತಿಗಳು:

  • ಒಮ್ಮೆ ರಕ್ತದಾನ ಮಾಡುವುದರಿಂದ ಮೂರು ಜನರ ಜೀವ ಉಳಿಸಬಹುದು.
  • 18 ರಿಂದ 65 ವರ್ಷ ವಯಸ್ಸಿನ ಯಾವುದೇ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
  • ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ರಕ್ತದಾನ ಮಾಡಬಹುದು.
  • ರಕ್ತದಾನವು ದೇಹದಲ್ಲಿ ಹೊಸ ಕೆಂಪು ರಕ್ತ ಕಣಗಳ ರಚನೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
  • ರಕ್ತದಾನ ಮಾಡಲು, ದಾನಿಯೊಬ್ಬರು ಪ್ರತಿ ಡೆಸಿಲೀಟರ್‌ಗೆ 12.5 ಗ್ರಾಂ ಹಿಮೋಗ್ಲೋಬಿನ್ ಹೊಂದಿರಬೇಕು, ಇದಕ್ಕಿಂತ ಕಡಿಮೆ ಇದ್ದರೆ ಅವರು ಅನರ್ಹರಾಗುತ್ತಾರೆ.
  • ರಕ್ತದಾನ ಮಾಡುವುದರಿಂದ ದಾನಿಯ ರಕ್ತದ ಗುಣಮಟ್ಟ ವೃದ್ಧಿಸುತ್ತದೆ. ಇದು ಕೊಲೆಸ್ಟ್ರಾಲ್‌ ಸಾಂದ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೃದ್ಧೆಗೂ ಇಲ್ಲ ಭದ್ರತೆ; ಕಣ್ಣು ಕಾಣದ 70 ವರ್ಷದ ದೆಹಲಿಯ ಮಹಿಳೆ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನ – Kannada News | Delhi 70 year old blind woman assaulted and attempted to physically harassment

ನವದೆಹಲಿ, ಜೂನ್ 13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ 70 ವರ್ಷದ ಕಣ್ಣು ಕಾಣದ ವೃದ್ಧೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ (Delhi Crime News) ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಮಯೂರ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ದೃಷ್ಟಿ ದೋಷ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವೃದ್ಧೆ ಕಳೆದ ಸುಮಾರು 35 ವರ್ಷಗಳಿಂದ ಇದೇ ಪ್ರದೇಶದ ಬೀದಿಗಳಲ್ಲಿ ವಾಸಿಸುತ್ತಿದ್ದರು. ಸ್ಥಳೀಯರೇ ಇವರಿಗೆ ನಿಯಮಿತವಾಗಿ ಆಹಾರ ಮತ್ತು ಬಟ್ಟೆಗಳನ್ನು ನೀಡಿ ನೋಡಿಕೊಳ್ಳುತ್ತಿದ್ದರು. ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ವೃದ್ಧೆಯು ಮನೆಯ ಹೊರಗಿದ್ದಾಗ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಮುಗಿಬಿದ್ದಿದ್ದಾನೆ. ಈ ವೇಳೆ ವೃದ್ಧೆ ಆತನನ್ನು ತಳ್ಳಲು ಯತ್ನಿಸಿದಾಗ, ಆಕ್ರೋಶಗೊಂಡ ಆರೋಪಿ ಇಟ್ಟಿಗೆಯಿಂದ ಅವರ ತಲೆ ಮತ್ತು ಮುಖದ ಭಾಗಕ್ಕೆ ಭೀಕರವಾಗಿ ಜಜ್ಜಿದ್ದಾನೆ. ಇದರಿಂದ ವೃದ್ಧೆ ತೀವ್ರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!

ಪೊಲೀಸ್ ಮೂಲಗಳ ಪ್ರಕಾರ, ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಆರೋಪಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಇಡೀ ಕೃತ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ವೃದ್ಧೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಲಾಗಿದೆ. ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಸಿಕ್ಸರ್ ಬಾರಿಸಿ 16 ಸಾವಿರ ರನ್​ಗಳ ಗಡಿ ದಾಟಿದ ರೋಹಿತ್ ಶರ್ಮಾ

Source link

ಧರ್ಮಸ್ಥಳ ಕೇಸ್​: ಬುರುಡೆ ಗ್ಯಾಂಗ್ ಸಂಪರ್ಕ ಮಾಡಿದ್ದ ಸ್ವಾಮೀಜಿ ರಹಸ್ಯ ರಿವೀಲ್ – Kannada News | Dharmasthala Case: New Revelations Surface Over Swamiji’s Reported Meeting With Burude Gang

ಮಂಗಳೂರು, ಜೂನ್​ 13: ಧರ್ಮಸ್ಥಳದ (Dharmasthala Case) ವಿರುದ್ಧ ಹೆಣೆದಿದ್ದ ಕರಾಳ ಷಡ್ಯಂತ್ರ ಬಯಲಾಗುತ್ತಿದೆ. ಧರ್ಮಸ್ಥಳದಲ್ಲಿ ಶವ ಸಿಗುತ್ತೆ ಅಂತಾ SIT ಅಧಿಕಾರಿಗಳಿಂದ ಗುಂಡಿ ತೋಡಿಸಿದ್ದ ಮಾಸ್ಕ್​ಮ್ಯಾನ್ ಚಿನ್ನಯ್ಯ, ಹೈಕೋರ್ಟ್​​​​​​ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ.  ನಿನ್ನೆ ಯಾರು ಪ್ರೊಡ್ಯೂಸರ್? ಎಷ್ಟು ಕೋಟಿ ಫಂಡಿಂಗ್? ಅನ್ನೋದೆಲ್ಲ ರಿವೀಲ್ ಆಗಿತ್ತು. ಜೊತೆ ನಟ ಪ್ರಕಾಶ್​​ರಾಜ್ ಹೆಸರನ್ನು ಉಲ್ಲೇಖಿಸಿದ್ದ. ಆದರೆ ಇಂದು ಧರ್ಮಸ್ಥಳ ಬುರುಡೆ ರಹಸ್ಯದ ಹಿಂದೆ ಸ್ವಾಮೀಜಿ ಸಂಪರ್ಕ ಇರುವುದು ರಿವೀಲ್ ಆಗಿದೆ.

ಮುಖ್ಯಾಂಶಗಳು

  • ಬುರುಡೆ ಗ್ಯಾಂಗ್ ಸಂಪರ್ಕ ಮಾಡಿದ್ದ ಸ್ವಾಮೀಜಿ
  • ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಸ್ವಾಮೀಜಿ ಭೇಟಿ
  • ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಸ್ವಾಮೀಜಿ ಹೆಸರು ಉಲ್ಲೇಖ

ಚಂದ್ರಶೇಖರ್ ಸ್ವಾಮೀಜಿ ಯಾರು?

ಧರ್ಮಸ್ಥಳ ಬುರುಡೆ ಗ್ಯಾಂಗ್ ಮುಲ್ಕಿ ಆಶ್ರಮದ ಚಂದ್ರಶೇಖರ್ ಸ್ವಾಮೀಜಿಯನ್ನ ಭೇಟಿಯಾದ ಬಗ್ಗೆಯೂ ಚಿನ್ನಯ್ಯನ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಷಡ್ಯಂತ್ರಕಾರರ ಮನವಿ ಮೇರೆಗೆ ಸ್ವಾಮೀಜಿಯೂ ಪೊಲೀಸರನ್ನು ಭೇಟಿಯಾಗಿದ್ದರಂತೆ. ಮಂಗಳೂರು ಪೊಲೀಸ್ ಅಧೀಕ್ಷಕರರನ್ನು ಸ್ವಾಮೀಜಿ ಭೇಟಿ ಮಾಡಿದ್ದರು. ಜೊತೆಗೆ ಬೆಂಗಳೂರಿನ ಹಿರಿಯ ಪೊಲೀಸರನ್ನೂ ಸ್ವಾಮೀಜಿ ಸಂಪರ್ಕಿಸಿದ್ದರು. ಪೊಲೀಸರಿಗೆ ಅರ್ಜಿದಾರರು ದೂರು ದಾಖಲಿಸಿದ್ದಾರೆಂದು ತಿಳಿಸಿದ್ದರು. ಚಿನ್ನಯ್ಯನ ದೂರು ಸ್ವೀಕರಿಸುವಂತೆ ಸ್ವಾಮೀಜಿ ಪ್ರಭಾವ ಬೀರಿದ್ದಾರೆ ಎಂದು ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ಚಿನ್ನಯ್ಯ ಬೇಡಿಕೆಯಂತೆ ಸ್ವಾಮೀಜಿ ಬಳಿ ಹೋಗಿದ್ವಿ ಎಂದ ಮಟ್ಟಣ್ಣನವರ್

ಇನ್ನು ಚಂದ್ರಶೇಖರ್ ಸ್ವಾಮೀಜಿ ಭೇಟಿ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯಿಸಿದ್ದು, ಚಿನ್ನಯ್ಯನ ಬೇಡಿಕೆಯಂತೆ ಚಂದ್ರಶೇಖರ್ ಸ್ವಾಮೀಜಿ ಬಳಿ ಹೋಗಿದ್ವಿ ಅಂತ ಹೇಳಿದ್ದಾರೆ. ಮತ್ತೊಂದ್ಕಡೆ 200 ಕೋಟಿ ರೂ ಫಂಡಿಂಗ್ ಸುಳ್ಳು, ಕೋಮುಗಲಭೆ ಎಬ್ಬಿಸುವ ಹುನ್ನಾರ ಎಂದು ಈ ಬಗ್ಗೆಯೂ ಗಿರೀಶ್ ಮಟ್ಟಣ್ಣನವರ್ ಸ್ಪಷ್ಟನೆ ನೀಡಿದ್ದಾರೆ.

ಗೃಹ ಸಚಿವರನ್ನು ಭೇಟಿಯಾದ ಎಸ್​ಐಟಿ ಮುಖ್ಯಸ್ಥ

ಧರ್ಮಸ್ಥಳ ಬುರುಡೆ ಪ್ರಕರಣದ ಬಗ್ಗೆ ಹೈಕೋರ್ಟ್ ವರದಿ ಕೇಳಿದೆ. ಈ ಬೆನ್ನಲ್ಲೇ SIT ಅಲರ್ಟ್ ಆಗಿದೆ. ಇವತ್ತು ಗೃಹ ಸಚಿವರನ್ನು ಎಸ್​ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ ಭೇಟಿಯಾಗಿದ್ದಾರೆ. ಸುಮಾರು 20 ನಿಮಿಷಗಳ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version