ದಕ್ಷಿಣ ಭಾರತದ ಸೂಪರ್ ಸ್ಟಾರ್ ಸೂರ್ಯ ಅಪಾರ ಜನಪ್ರಿಯತೆ ಹೊಂದಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರಂತೆ ಸೂರ್ಯ ಕೂಡ ಬೇರೆ ಭಾಷೆಗಳಲ್ಲಿ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಅಭಿಮಾನಿಗಳು ಹಾಗೂ ವಿತರಕರಿಗೆ ತೀವ್ರ ನಿರಾಸೆಯಾಗಿತ್ತು. ಆದರೆ, ಈಗ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದಾರೆ.
ಸತತ ಮೂರು ಸಿನಿಮಾ ಸೋತರೆ ಕರಿಯರ್ ಮುಗಿಯಿತು ಎಂದು ಭಾವಿಸಲಾಗುತ್ತದೆ. ಸೂರ್ಯ ಅವರ ವೃತ್ತು ಜೀವನ ಕೂಡ ಮುಗಿಯಿತು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಸೂರ್ಯ ಈಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ.
ಅವರ ನಟನೆಯ ‘ಕರುಪ್ಪು’ ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈ ಗೆಲುವಿನ ಬೆನ್ನಲ್ಲೇ ತೆರೆಕಂಡ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಕೂಡ ಗೆಲುವಿನ ಹಾದಿಯಲ್ಲಿದೆ. ಈ ಚಿತ್ರಕ್ಕೆ ಎಲ್ಲೆಡೆ ಉತ್ತಮ ವಿಮರ್ಶೆ ಹಾಗೂ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಮೊದಲ ದಿನವೇ 31.51 ಕೋಟಿ ರೂಪಾಯಿ ಗಳಿಸಿದೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಅತ್ಯುತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎಂಬುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ:;ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಕಾಕ್ರೋಚ್ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಬೇಸರ
‘ವಿಶ್ವನಾಥ್ ಆ್ಯಂಡ್ ಸನ್ಸ್’ ಪ್ರಪಂಚದಾದ್ಯಂತ ಸುಮಾರು 200 ಕೋಟಿ ರೂಪಾಯಿ ಗಳಿಕೆಯ ಗುರಿ ಹೊಂದಿದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಈ ಸಿನಿಮಾಗೆ ಯಾವುದೇ ದೊಡ್ಡ ಪೈಪೋಟಿ ಇಲ್ಲ. ‘ಟಾಕ್ಸಿಕ್’ ಚಿತ್ರ ಬರುವವರೆಗೆ ಇದಕ್ಕೆ ಪೈಪೋಟಿ ಇಲ್ಲ. ಪ್ರೇಕ್ಷಕರ ಬೆಂಬಲ ಇದ್ದರೆ ಸಿನಿಮಾ ಸುಲಭವಾಗಿ ಈ ಮೈಲಿಗಲ್ಲು ತಲುಪಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
