1999 ರಲ್ಲಿ ಬಿಡುಗಡೆ ಆದ ವಿಷ್ಣುವರ್ಧನ್ ನಟನೆಯ ವೀರಪ್ಪ ನಾಯ್ಕ ಸಿನಿಮಾ, ಅದ್ಭುತವಾದ ಸಿನಿಮಾ. ದೇಶಪ್ರೇಮ ಜಾಗೃತಗೊಳಿಸುವ ಈ ಸಿನಿಮಾನಲ್ಲಿ ವೀರಪ್ಪ ನಾಯಕನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಮೊದಲೆಲ್ಲ ಸ್ವಾತಂತ್ರ್ಯ ದಿನಾಚರಣೆಯಂದು ಈ ಸಿನಿಮಾ ಪ್ರದರ್ಶಿಸುತ್ತಿದ್ದರು.
ಬಿಆರ್ ಪಂತುಲು ನಿರ್ದೇಶನ ಮಾಡಿರುವ 1966ರಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ‘ಕಿತ್ತೂರ ಚೆನ್ನಮ್ಮ’ ಸಹ ದೇಶಪ್ರೇಮ ಜಾಗೃತಗೊಳಿಸುವ ಸಿನಿಮಾ ಆಗಿದೆ. ಡಾ ರಾಜ್ಕುಮಾರ್ ಮತ್ತು ಬಿ ಸರೋಜದೇವಿ ನಟಿಸಿರುವ ಆ ಸಿನಿಮಾನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಕಿತ್ತೂರ ಚೆನ್ನಮ್ಮನ ಜೀವನ ಕತೆ ಇದೆ.
ವಿಷ್ಣುವರ್ಧನ್, ಸುಹಾಸಿನಿ ನಟಿಸಿರುವ ‘ಮುತ್ತಿನಹಾರ’ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಸೈನಿಕ ಮತ್ತು ಅವನ ತ್ಯಾಗಗಳ ಕತೆಯನ್ನು ಒಳಗೊಂಡಿರುವ ಸಿನಿಮಾ ‘ಮುತ್ತಿನ ಹಾರ’ ದೇಶ ಪ್ರೇಮ ಜಾಗೃತಗೊಳಿಸುವ ಸಿನಿಮಾಗಳಲ್ಲಿ ಇದೂ ಒಂದು.
ಶಿವರಾಜ್ ಕುಮಾರ್ ನಟಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಹಗಲುವೇಷ’ ಸಿನಿಮಾ ಸಹ ಇದೇ ಪಟ್ಟಿಗೆ ಸೇರುವ ಸಿನಿಮಾ. ನಾಯಕ, ಬ್ರಿಟೀಷರ ತೆರಿಗೆ ಪದ್ಧತಿಯ ವಿರುದ್ಧ ತಿರುಗಿ ಬೀಳುವ ಕತೆಯನ್ನು ಸಿನಿಮಾ ಒಳಗೊಂಡಿದೆ.
ಕ್ರಾಂತಿಕಾರಿ ಹೋರಾಟಗಾರ ಸಿಂಧೂರ ಲಕ್ಷ್ಮಣನ ಜೀವನ ಕತೆಯನ್ನು ಒಳಗೊಂಡಿರುವ ಸಿನಿಮಾ ‘ವೀರ ಸಿಂಧೂರ ಲಕ್ಷ್ಮಣ’. 1977 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದರು.
ಶಿವರಾಜ್ ಕುಮಾರ್ ನಟಿಸಿರುವ ‘ಎಕೆ-47’ ಸಿನಿಮಾ ಅಪ್ಪಟ ಆಕ್ಷನ್ ಸಿನಿಮಾ ಆದರೂ ಸಹ ಸಿನಿಮಾನಲ್ಲಿ ಸಾಕಷ್ಟು ದೇಶಪ್ರೇಮದ ಅಂಶಗಳು ಇವೆ. ನಾಯಕ, ಭಯೋತ್ಪಾದಕರ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸುವ ಕತೆಯನ್ನು ಒಳಗೊಂಡಿದೆ.
ಕನ್ನಡದಲ್ಲಿ ‘ಇಂಡಿಪೆಂಡೆನ್ಸ್ ಡೇ’ ಹೆಸರಿನ ಸಿನಿಮಾ ಇದೆ. ಸಿನಿಮಾನಲ್ಲಿ ಸಾಯಿ ಕುಮಾರ್ ನಾಯಕ. ಅಪ್ಪಟ ಆಕ್ಷನ್ ಸಿನಿಮಾ ಇದಾಗಿದ್ದು, ದೇಶವನ್ನು ಭಯೋತ್ಪಾದಕರಿಂದ ನಾಯಕ ರಕ್ಷಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ನಟ ದರ್ಶನ್ ನಟಿಸಿರುವ ‘ಕ್ರಾಂತಿ ವೀರ ಸಂಗೊಳ್ಳಿ’ ರಾಯಣ್ಣ ಸಿನಿಮಾ ಸಹ ದೇಶಪ್ರೇಮದ ಕತೆಯುಳ್ಳ ಸಿನಿಮಾ ಆಗಿದೆ. ಬ್ರಿಟೀಷರೊಟ್ಟಿಗೆ ಹೋರಾಡಿದ ಸಂಗೊಳ್ಳಿ ರಾಯಣ್ಣನ ಜೀವನದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
