ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ – Kannada News | Heavy Rains Lash Hassan District, Dried Coffee Crop Damaged Across Several Areas

ಹಾಸನ, ಜನವರಿ 14: ಹಾಸನ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಕಟಾವು ಮಾಡಿ ಒಣಗಲು ಹಾಕಿದ್ದ ಕಾಫಿ ಬೆಳೆಗೆ ಮಳೆಯಿಂದಾಗಿ ಹಾನಿಯುಂಟಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ, ಕೊಯ್ಲು ಮಾಡಿ ಒಣಗಿಸಲು ಹಾಕಲಾಗಿದ್ದ ಕಾಫಿ ಬೀಜಗಳು ಮಳೆಯಲ್ಲಿ ನೆನೆದು ಸಂಪೂರ್ಣ ಹಾಳಾಗಿವೆ. ಇದರಿಂದ ಕಾಫಿ ಬೆಳೆಗಾರರು ಭಾರೀ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮಳೆ ಹಾನಿಯಿಂದಾಗಿ ಕಾಫಿ ಹೂವುಗಳು, ಕಾಫಿ ಗಿಡಗಳು ಮತ್ತು ಒಟ್ಟಾರೆ ಕಾಫಿ ಕೃಷಿ ಮೇಲೂ ಪರಿಣಾಮ ಬೀರಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Makar Sankranti: ಮಕರ ಸಂಕ್ರಾಂತಿಗೆ ಈ ವಸ್ತು ಮನೆಗೆ ತನ್ನಿ; ನಿಮ್ಮ ಅದೃಷ್ಟವೇ ಬದಲಾಗಲಿದೆ – Kannada News | Makar sankranti attract wealth and positivity with these 5 auspicious vastu items

ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿಗೆ ಹೆಚ್ಚಿನ ಮಹತ್ವವಿದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಆಕರ್ಷಿಸಲು ಈ ಹಬ್ಬದಂದು ಯಾವ ವಸ್ತುಗಳನ್ನು ಖರೀದಿಸಬೇಕು ಎಂಬುದನ್ನುಇಲ್ಲಿ ತಿಳಿದುಕೊಳ್ಳಿ.

ಗಾಳಿ ಗಂಟೆಗಳು(Wind Chimes):

ಸಂಕ್ರಾಂತಿಯಂದು ಗಾಳಿ ಗಂಟೆಗಳನ್ನು ತಂದು ಗಾಳಿ ಬೀಸುವ ಸ್ಥಳದಲ್ಲಿ ಇರಿಸಿ. ಇವುಗಳ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ.

ಲೋಹದ ಆಮೆ:

ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ ಅಥವಾ ಚಿನ್ನದ ಬಣ್ಣದ ಆಮೆಯನ್ನು ತಂದು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಸ್ಥಿರತೆ ಮತ್ತು ವೃತ್ತಿ ಪ್ರಗತಿ ಬರುತ್ತದೆ.

ಸ್ಫಟಿಕ ವಸ್ತುಗಳು:

ವಾಸ್ತು ಪ್ರಕಾರ, ಸ್ಫಟಿಕ ಚೆಂಡುಗಳು ಸಂಪತ್ತಿನ ಸಂಕೇತಗಳಾಗಿವೆ. ಅವುಗಳನ್ನು ಮನೆಯಲ್ಲಿ ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಸಮತೋಲನವನ್ನು ಸೃಷ್ಟಿಸಲು ಮತ್ತು ಅದೃಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅದೃಷ್ಟದ ನಾಣ್ಯಗಳು:

ಮನೆಯ ಮುಖ್ಯ ದ್ವಾರದೊಳಗೆ ಕೆಂಪು ರಿಬ್ಬನ್‌ನಿಂದ ಕಟ್ಟುವ ಮೂರು ತಾಮ್ರದ ನಾಣ್ಯಗಳನ್ನು ಕಟ್ಟುವುದರಿಂದ ಆರ್ಥಿಕ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಆದಾಯದ ಮೂಲಗಳು ಸುಧಾರಿಸುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಬಾತುಕೋಳಿಗಳ ಜೋಡಿ:

ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅಥವಾ ತಮ್ಮ ಪ್ರೇಮ ಸಂಬಂಧವನ್ನು ಬಲಪಡಿಸಲು ಬಯಸುವವರು ಒಂದು ಜೋಡಿ ಮ್ಯಾಂಡರಿನ್ ಬಾತುಕೋಳಿಗಳ ಪ್ರತಿಮೆಯನ್ನು ತಂದು ಮಲಗುವ ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇಡುವುದು ಶುಭ.

ಈ ಮೇಲಿನ ವಸ್ತುಗಳನ್ನು ತಂದು ಇಡುವ ಮುಂಚೆ ಸರಿಯಾದ ದಿಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅವುಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಿ. ಇದು ವಾಸ್ತು ದೋಷಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ಕುಟುಂಬವನ್ನು ಸೂರ್ಯ ದೇವರ ಆಶೀರ್ವಾದದಿಂದ ತುಂಬುತ್ತದೆ, ಶಾಂತಿ ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಗಲ್ಲ ಬಾಲಿವುಡ್, ಮತ್ತೆ ‘ಕಾಂತಾರ’ಕ್ಕೆ ಅವಮಾನ ಮಾಡುವ ಯತ್ನ – Kannada News | CBFC removes Kantara movie reference from Bollywood movie Rahu Ketu

‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾನಲ್ಲಿ ಕರಾವಳಿಯ ದೈವ ಆರಾಧನೆ ಅದರ ಮಹಿಮೆ ಇನ್ನಿತರೆ ವಿಚಾರಗಳನ್ನು ತೋರಿಸಲಾಗಿದೆ. ಸಿನಿಮಾ ಮಾಡುವಾಗ ತಾವು ದೈವಗಳಿಗೆ ಅಪಚಾರ ಆಗದಂತೆ ಬಲು ನೇಮ-ನಿಷ್ಠೆಯಿಂದ ಸಿನಿಮಾ ಮಾಡಿರುವುದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಅಲ್ಲದೆ ಯಾರೂ ಸಹ ದೈವವನ್ನು ಅನುಕರಣೆ ಮಾಡುವುದು ಬೇಡ, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಸಹ ಹೇಳಿದ್ದರು. ಆದರೂ ಸಹ ಕೆಲವರು ಅದನ್ನು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್​​ನ ಸ್ಟಾರ್ ನಟ ರಣ್ವೀರ್ ಸಿಂಗ್, ವೇದಿಕೆ ಮೇಲೆ ಕೆಟ್ಟದಾಗಿ ದೈವನ ಅನುಕರಣೆ ಮಾಡಿ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದ್ದರು. ಆದರೆ ಇದೀಗ ಮತ್ತೊಂದು ಬಾಲಿವುಡ್ ತಂಡ ಇದೇ ಯತ್ನ ಮಾಡಿದೆ.

ಬಾಲಿವುಡ್​ನ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಅತಿರೇಕಕ್ಕೆ ಹೋಗಿ ಹಾಸ್ಯ ಮಾಡುವುದು ಮಾಮೂಲು, ಬಾಲಿವುಡ್​​ನಲ್ಲಿ ನಡೆಯುವುದು ಮೈಂಡ್​ ಲೆಸ್ ಕಾಮಿಡಿ ಮತ್ತು ಬಾಡಿ ಶೇಮಿಂಗ್ ಕಾಮಿಡಿ. ಗೋಲ್​​ಮಾಲ್, ವೆಲ್​​ಹಮ್, ‘ಹೌಸ್​​ಫಯಲ್’ ಇಂಥಹುಗಳಿಗೆ ಉದಾಹರಣೆ. ಇದೀಗ ಬಾಲಿವುಡ್​ನ ಇಂಥಹುದೇ ಒಂದು ಹಾಸ್ಯ ಪ್ರಧಾನ ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾವನ್ನು ಹಾಸ್ಯಕ್ಕೆ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಆಸ್ಕರ್ ರೇಸ್​​ನಲ್ಲಿ ಸ್ಥಾನ ಪಡೆದ ‘ಕಾಂತಾರ: ಚಾಪ್ಟರ್ 1’ ಸಿನಿಮಾ

‘ರಾಹು-ಕೇತು’ ಹೆಸರಿನ ಹಿಂದಿ ಹಾಸ್ಯ ಪ್ರಧಾನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾದ ಕೂಗು ಮತ್ತು ಸಿನಿಮಾದ ರೆಫೆರೆನ್ಸ್​​ಗಳನ್ನು ಸಹ ಬಳಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಆ ಎರಡಕ್ಕೂ ಕತ್ತರಿ ಹಾಕಿದೆ. ಇಬ್ಬರು ಪೆದ್ದ ಯುವಕರ ಕತೆ ‘ರಾಹು-ಕೇತು’ ಆಗಿದ್ದು, ಸಿನಿಮಾನಲ್ಲಿ ಹಾಸ್ಯಕ್ಕಾಗಿ ‘ಕಾಂತಾರ’ ಸಿನಿಮಾದ ರೆಫೆರನ್ಸ್ ಅನ್ನು ಹಾಗೂ ದೈವದ ಕೂಗನ್ನು ಬಳಸಲಾಗಿತ್ತಂತೆ. ಆದರೆ ಅದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆ ದೃಶ್ಯವನ್ನು ತೆಗೆದಿದೆ.

ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಮತ್ತು ‘ಕಾಂತಾರ’ ಸಿನಿಮಾ ತಂಡಕ್ಕೆ ಸೇರಿದ ಹಲವರು ಹಲವು ಬಾರಿ ಈ ಬಗ್ಗೆ ಹೇಳಿದ್ದಾರೆ. ದೈವದ ಅನುಕರಣೆ ಮಾಡುವುದು, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಆದರೂ ಸಹ ಪದೇ ಪದೇ ಕೆಲವರು ಕಮರ್ಶಿಯಲ್ ಕಾರಣಗಳಿಗೆ, ಹಾಸ್ಯಕ್ಕೆ ದೈವದ ಅನುಕರಣೆ ಮಾಡುತ್ತಲೇ ಇದ್ದಾರೆ. ಇದೀಗ ಸೆನ್ಸಾರ್ ಮಂಡಳಿ ಸಮಯೋಚಿತವಾಗಿ ಬಾಲಿವುಡ್ ಸಿನಿಮಾದಿಂದ ‘ಕಾಂತಾರ’ ಸಿನಿಮಾದ ರೆಫೆರೆನ್ಸ್ ಅನ್ನು ತೆಗೆದು ಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗದಗದಲ್ಲಿ ಚಿನ್ನದ ನಿಧಿ: ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ – Kannada News | Beyond Gold: A Locals 45 Year Insight into Lakkundis Historical Finds

ಗದಗ, .14: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ಪುರಾತನ ಕಾಲದ ನಿಧಿಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಚಿನ್ನ ಪತ್ತೆಯಾದ ನಂತರ ಇಲ್ಲಿನ ಇನ್ನು ಇಂತಹ ಚಿನ್ನ ಸಿಗುವ ಸ್ಥಳಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದೀಗ ಲಕ್ಕುಂಡಿಯ ನಿಧಿಗಳ ಬಗ್ಗೆ ಸ್ಥಳೀಯರಾದ ಬಸಪ್ಪ ಬಡಿಗೇರ ಅವರು ಟಿವಿ9 ಕನ್ನಡಕ್ಕೆ ಹಲವು ಆಸಕ್ತಿದಾಯಕ ಮಾಹಿತಿಗಳನ್ನು ನೀಡಿದ್ದಾರೆ. ಬಸಪ್ಪ ಬಡಿಗೇರರ ಪ್ರಕಾರ, ಲಕ್ಕುಂಡಿಯಲ್ಲಿ ಮುತ್ತು, ರತ್ನ, ಹವಳಗಳಲ್ಲದೆ ಚಿನ್ನವೂ ದೊರೆಯುತ್ತದೆ. ರಾಜಮಹಾರಾಜರ ಕಾಲದಲ್ಲಿ ನಡೆದ ಭೀಕರ ಯುದ್ಧಗಳಲ್ಲಿ ಮಡಿದವರ ದೇಹದ ಮೇಲಿದ್ದ ಅಮೂಲ್ಯ ವಸ್ತುಗಳು ಈ ಪ್ರದೇಶದಲ್ಲಿ ಇಂದಿಗೂ ದೊರೆಯುತ್ತಿವೆ. ಜಮೀನುಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಈ ವಸ್ತುಗಳು ಹೆಚ್ಚಾಗಿ ಸಿಗುತ್ತವೆ ಎಂದು ಅವರು ತಿಳಿಸಿದ್ದಾರೆ. ಒಂದು ಕಾಲದಲ್ಲಿ ಗ್ರಾಮದ ಒಣಗೇರಿ ಮನೆಯಲ್ಲಿ ಒಂದು ರಾಜ ಕಿರೀಟವೂ ಸಿಕ್ಕಿತ್ತು ಎಂಬ ಸಂಗತಿಯನ್ನು ಬಡಿಗೇರ ನೆನಪಿಸಿಕೊಂಡಿದ್ದಾರೆ. ಲಕ್ಕುಂಡಿಯಲ್ಲಿ ದೊರೆತ ಇಂತಹ ನಿಧಿಗಳನ್ನು ತಮ್ಮ ಬಳಿ ಇಟ್ಟುಕೊಂಡವರಿಗೆ ದುರಂತಗಳು ಸಂಭವಿಸುತ್ತವೆ ಎಂಬ ಸ್ಥಳೀಯ ನಂಬಿಕೆಯನ್ನೂ ಅವರು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಿಕ್ಕ ಚಿನ್ನವನ್ನು ಸರ್ಕಾರಕ್ಕೆ ಒಪ್ಪಿಸಿದ್ದು ಒಂದು ಒಳ್ಳೆಯ ನಿರ್ಧಾರ ಎಂದು ಬಡಿಗೇರ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಲ್ಹಾದ ಜೋಶಿ ‘ಕರ್ನಾಟಕದ ಮೋದಿ’: ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚುಗೆ – Kannada News | UAE’s Kannada Patashale Hails Pralhad Joshi as “Karnataka’s Modi”

ಪ್ರಲ್ಹಾದ ಜೋಶಿ ‘ಕರ್ನಾಟಕದ ಮೋದಿ’: ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚು

ನವದೆಹಲಿ, ಜನವರಿ 14: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿ ತೋರುವಲ್ಲಿ ‘ ಕರ್ನಾಟಕದ ಮೋದಿ’ ಎಂದು UAE ನಲ್ಲಿರುವ ‘ಕನ್ನಡ ಪಾಠಶಾಲೆ’ಯ ಸಂಚಾಲಕ ಶಶಿಧರ್ ನಾಗರಾಜಪ್ಪ ಬಣ್ಣಿಸಿದ್ದಾರೆ. ಯುಎಇನಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕಲ್ಯಾಣ ಕಾರ್ಯಕ್ಕೆ ಮಿಸಲಾದಂತೆ, ಕರ್ನಾಟಕದಲ್ಲಿ ಪ್ರಲ್ಹಾದ ಜೋಶಿ ಅವರು ಕನ್ನಡಿಗರ ಪಾಲಿನ ಮೋದಿ ಆಗಿದ್ದಾರೆ ಎಂದು ಹೊಗಳಿದರು.

ಅನಿವಾಸಿ ಭಾರತೀಯರಿಗೆ ಸ್ಫೂರ್ತಿ

ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿಯ ವಿಷಯದಲ್ಲಿ ‘ಕರ್ನಾಟಕದ ಮೋದಿ’ ಎಂದೇ ಗುರುತಿಸಿಕೊಳ್ಳುವಂತಹ ದಕ್ಷ ನಾಯಕರಾಗಿದ್ದಾರೆ ಸಚಿವ ಪ್ರಲ್ಹಾದ ಜೋಶಿ ಅವರೆಂದು ಅಭಿಮಾನ ವ್ಯಕ್ತಪಡಿಸಿದ ಶಶಿಧರ್, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳನ್ನು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಶಂಸಿಸಿದರು. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯವೈಖರಿ ಅಪ್ರತಿಮವಾದದ್ದು. ಸಾಗರೋತ್ತರ ಕನ್ನಡಿಗರ ಮತ್ತು ಅನಿವಾಸಿ ಭಾರತೀಯರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುವ ಸಹೃದಯಿ ಎಂದು ಬಣ್ಣಿಸಿದರು. ಇದೇ ವೇಳೆ ವಿದೇಶದಲ್ಲಿ ಕನ್ನಡ ಪಸರಿಸುವ ಕೈಂಕರ್ಯದಲ್ಲಿ ಅಭೂತಪೂರ್ವ ಪ್ರಯತ್ನ ನಡೆಸಿದ ಯುಎಇ ಕನ್ನಡ ಪಾಠಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಶಿಧರ್ ಹೇಳುವಂತೆ, ಯು.ಎ.ಇ ನಲ್ಲಿ ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಹಮ್ಮಿಕೊಂಡಿರುವ ‘ಕನ್ನಡ ಪಾಠಶಾಲೆ’ಯಂತಹ ಪ್ರಯತ್ನಗಳಿಗೆ ಸಚಿವ ಜೋಶಿ ಅವರ ಬೆಂಬಲ, ಮಾರ್ಗದರ್ಶನ ನಮಗೆಲ್ಲಾ ಸ್ಫೂರ್ತಿದಾಯಕ. ಕೇಂದ್ರ ಸಚಿವರಾಗಿ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಅವರ ಔದಾರ್ಯದ ಗುಣ ನಿಜಕ್ಕೂ ಶ್ಲಾಘನೀಯ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಲ್ಹಾದ ಜೋಶಿ ಅವರ ದೂರದೃಷ್ಟಿ ಮತ್ತು ಕಾಳಜಿ ನಮಗೆ ಮತ್ತಷ್ಟು ಶಕ್ತಿ ನೀಡಿದೆ.

ಕನ್ನಡ – ಕನ್ನಡಿಗರ ಹಿರಿಮೆಯನ್ನು ಹೊಗಳಿದ ಜೋಶಿ

ಸಮಾರಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕನ್ನಡ ಭಾಷೆ- ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಮೆರೆಯುತ್ತ, ವಿದೇಶಿ ನೆಲದಲ್ಲಿ ಕನ್ನಡ ಭಾಷಿಕರನ್ನು ಒಗ್ಗೂಡಿಸಿ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯುಎಇ ಕನ್ನಡ ಪಾಠಶಾಲೆ ಕೈಂಕರ್ಯಕ್ಕೆ ಅಭಿಮಾನ ವ್ಯಕ್ತಪಡಿಸಿದರು. ಯುಎಇಯಲ್ಲಿರುವ ಅನಿವಾಸಿ ಭಾರತೀಯರು ಕನ್ನಡ ಪಾಠಶಾಲೆಯನ್ನು ಆರಂಭಿಸಿ, ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತ ಹೊರನಾಡ ಕನ್ನಡಿಗರಿಗೆ ಸೂರ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿ ಕನ್ನಡ – ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸ್ಮರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ – Kannada News | What Era Does the Lakkundi Treasure Belong To? Mystery Finally Revealed

ಗದಗ, ಜನವರಿ 14: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ನಿಧಿ ಸುಮಾರು 300 ವರ್ಷಗಳಿಗಿಂತಲೂ ಹಳೆಯದ್ದು ಎಂಬುದು ಗೊತ್ತಾಗಿದೆ. ಜಿಲ್ಲಾಧಿಕಾರಿಗಳ ಹೇಳಿಕೆಗಳ ಪ್ರಕಾರ, ಪತ್ತೆಯಾದ ಆಭರಣಗಳು 300 ವರ್ಷಗಳಿಗೂ ಹೆಚ್ಚು ಹಳೆಯದಾಗಿದ್ದು, ಅಂದಿನ ಕಾಲದ ಮೂರು-ನಾಲ್ಕು ರಾಜಮನೆತನಗಳ ಆಳ್ವಿಕೆಗೆ ಸಂಬಂಧಿಸಿರಬಹುದು. ಪತ್ತೆಯಾದ ಆಭರಣಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳನ್ನು ಯಾರೋ ದಷ್ಟಪುಷ್ಟವಾಗಿರುವ ಶ್ರೀಮಂತ ವ್ಯಕ್ತಿಗಳು ಧರಿಸಿರಬೇಕು ಎಂದು ಜಿಲ್ಲಾಧಿಕಾರಿಗಳು ಅಂದಾಜಿಸಿದ್ದಾರೆ. ಈ ನಿಧಿ ಯಾರಿಗೆ ಸೇರಿತ್ತು ಎಂಬುದರ ಕುರಿತು ವರದಿ ಬರಲು ಇನ್ನೂ ಮೂರು ದಿನಗಳು ಬೇಕಾಗಬಹುದು. ವಿಶೇಷವಾಗಿ, ಆಭರಣಗಳ ಮೇಲಿನ ವರ್ಕ್‍ಮನ್‍ಶಿಪ್ (ಕರಕುಶಲತೆ) ಗಮನ ಸೆಳೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಪ್ಪಲಿಯಲ್ಲಿ ಹೊಡೆಸಿ ಬೆಂಕಿ ಹಾಕಿಸ್ತೀನಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಕಾಂಗ್ರೆಸ್ ರಾಜ್ಯ ಸಂಯೋಜಕ – Kannada News | Congress State Coordinator Threatens Shidlaghatta Municipal Commissioner with Assault and Arson

ರಾಜೀವ್ ಗೌಡ ಹಾಗೂ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ

ಚಿಕ್ಕಬಳ್ಳಾಪುರ, ಜನವರಿ 14: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡ ಅವಾಚ್ಯ ಹಾಗೂ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಡು ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕೋಪಗೊಂಡು, ದೂರವಾಣಿ ಕರೆ ಮೂಲಕ ಅವ್ಯಾಚ್ಚ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿತ ರಾಜೀವ್ ಗೌಡ ಅವರು ಕೆಪಿಸಿಸಿ ರಾಜ್ಯ ಸಂಯೋಜಕರಾಗಿದ್ದು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ದೂರವಾಣಿ ಕರೆ ವೇಳೆ ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ದಂಗೆ ಮಾಡಿಸುತ್ತೇನೆ’ ಎಂದು ಗಂಭೀರ ಬೆದರಿಕೆ ಹಾಕಲಾಗಿದೆ ಎಂದು ಪೌರಾಯುಕ್ತೆ ಅಮೃತಾ ಗೌಡ ದೂರಿದ್ದಾರೆ.

ಈ ವೇಳೆ ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಅವರ ಮೇಲೂ ಅವ್ಯಾಚ್ಚ ಹಾಗೂ ಅಶ್ಲಿಲ ಪದಗಳಿಂದ ನಿಂದನೆ ನಡೆದಿದ್ದು, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೂ ಅವಮಾನಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ

ಈ ಘಟನೆಯಿಂದ ಶಿಡ್ಲಘಟ್ಟ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಯಭೀತಗೊಂಡಿದ್ದು, ಸಾರ್ವಜನಿಕ ಸೇವೆ ನಿರ್ವಹಿಸುವ ಅಧಿಕಾರಿಗಳಿಗೆ ಈ ರೀತಿಯ ಬೆದರಿಕೆಗಳು ಅಸಹ್ಯಕರವಾಗಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:02 am, Wed, 14 January 26

Source link

Video: ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ – Kannada News | Traffic Check Turns Tragic as Speeding Biker Mows Down Home Guard in Hyderabad

ಹೈದರಾಬಾದ್, ಜನವರಿ 14: ತೆಲಂಗಾಣದ ಹೈದರಾಬಾದ್‌ನಲ್ಲಿ ಮಂಗಳವಾರ ದಿನನಿತ್ಯದ ಸಂಚಾರ ತಪಾಸಣೆಯ ಸಮಯದಲ್ಲಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಾಯಗೊಂಡಿದ್ದು,ಆತನನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗಾಯಗೊಂಡ ಗೃಹರಕ್ಷಕ ದಳದ ಸಿಬ್ಬಂದಿಯನ್ನು 40 ವರ್ಷದ ಜಂಗಯ್ಯ ಎಂದು ಗುರುತಿಸಲಾಗಿದೆ. ಫಲಕ್ನುಮಾ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಚೆಕ್ ಪೋಸ್ಟ್ ಸ್ಥಾಪಿಸಲು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದಾಗ ಈ ಘಟನೆ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಳ್ಳಾರಿ ಗಲಭೆಗೆ ಅಮಿತ್ ಶಾ ಕಾರಣವಾ? ಕೆಪಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು – Kannada News | Bellary Riots: BJP’s Srivatsa Files DGP Complaint Against M. Lakshman for False Claims**

ಬಳ್ಳಾರಿ, .14: ಜಿಲ್ಲೆಯ ಗಲಭೆಗೆ ಅಮಿತ್ಶಾ (Amit Shah) ಕಾರಣ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿರುವ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ಶಾಸಕ ಶ್ರೀವತ್ಸ ದೂರು ನೀಡಿದ್ದಾರೆ. ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಬಳ್ಳಾರಿ ಗಲಾಟೆಗೆ ಅಮಿತ್ ಶಾ ಕಾರಣ ಎಂದು ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಹೆಣ ಬೀಳಿಸಿ ರಾಜಕಾರಣ ಮಾಡಿ ಎಂದು ಅಮಿತ್ ಶಾ ವಿ.ಸೋಮಣ್ಣ ಮೂಲಕ ಜರ್ನಾದನ ರೆಡ್ಡಿ, ರಾಮುಲುಗೆ ಸಂದೇಶ ಕೊಟ್ಟಿದ್ದಾರೆ ವಿ.ಸೋಮಣ್ಣ ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಲ್ಲವೂ ಗೊತ್ತಾಗತ್ತೆ ಅಂತ ಲಕ್ಷ್ಮಣ್ ಸುಳ್ಳು ಆರೋಪವನ್ನು ಮಾಡಿದ್ದಾರೆ. ಇದೆಲ್ಲವೂ ಸುಳ್ಳು ಹಾಗೂ ಸಮಾಜದಲ್ಲಿ ಶಾಂತಿ ಕಾದಾಡುವ ಹೇಳಿಕೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯದ ಪೊಲೀಸ್​​​ ನಿರ್ದೇಶಕ ಡಾ. ಎಂ. . ಸಲೀಂ ಅವರನ್ನು ಭೇಟಿ ಮಾಡಿದ್ದೇವೆ. ಖಂಡಿತ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಸಾರ್ವಜನಿಕರಲ್ಲಿ ಅಶಾಂತಿ ಮತ್ತು ದ್ವೇಷವನ್ನು ಪ್ರಚೋದಿಸುವ ಸುಳ್ಳು ಹೇಳಿಕೆಯನ್ನು ನೀಡುವುದು ತಪ್ಪು, ಅದು ಕೂಡ ಒಳ್ಳೆಯ ಸ್ಥಾನಮಾನದಲ್ಲಿರುವ ವ್ಯಕ್ತಿಗಳೇ ಇಂತಹ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದಾರೆ.

ಎಂ. ಲಕ್ಷ್ಮಣ್ ಹೇಳಿದ್ದೇನು?

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ. ಲಕ್ಷ್ಮಣ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಚೋದನೆಯಿಂದ ಬಳ್ಳಾರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಅಮಿತ್ಶಾ ಹೊತ್ತಿದ್ದಾರೆ. ಸಚಿವ ಸೋಮಣ್ಣ ಅವರನ್ನು ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಿದರೆ, ಬಗ್ಗೆ ಖಂಡಿತ ಸದ್ಯದಲೇ ಎಲ್ಲರಿಗೂ ತಿಳಿಯುತ್ತದೆ. “ಕೇಂದ್ರ ಸಚಿವ ಸೋಮಣ್ಣ ಬಳ್ಳಾರಿಗೆ ಭೇಟಿ ನೀಡಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕರ್ನಾಟಕದ ಮಾಜಿ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚೆ ನಡೆಸಿದ ನಂತರ ಹಿಂಸಾಚಾರ ಸಂಭವಿಸಿದೆ. ಪತ್ರಿಕಾ ಸಭೆಗಳನ್ನು ನಡೆಸಿ ನಿಷ್ಪ್ರಯೋಜಕವಾಗಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಒಂದು ದೇಹವನ್ನು ಉರುಳಿಸಿ ರಾಜಕೀಯ ಮಾಡಿ ಎಂಬಂತಹ ಹೇಳಿಕೆಗಳನ್ನು ಕೇಂದ್ರ ಸಚಿವ ಸೋಮಣ್ಣ ನೀಡಿದ್ದಾರೆ. ಹೇಳಿಕೆಯಿಂದಲ್ಲೇ ಗೊತ್ತಾಗುತ್ತದೆ ಕೇಂದ್ರ ಸಚಿವ ಸೋಮಣ್ಣ ಅವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಗೃಹ ಸಚಿವ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಎಂ. ಲಕ್ಷ್ಮಣ್ ಹೇಳಿಕೆಗೆ ಬಿಪಿಜೆ ಅಕ್ರೋಶ:

ಕಾಂಗ್ರೆಸ್ ನಾಯಕ ಲಕ್ಷ್ಮಣ್ ತಮ್ಮ ಹೇಳಿಕೆಯಲ್ಲಿ ಕೇಂದ್ರ ಗೃಹ ಸಚಿವ ಶಾ ಮತ್ತು ಕೇಂದ್ರ ಸಚಿವ ಸೋಮಣ್ಣ ಅವರನ್ನು ನೇರವಾಗಿ ಹೆಸರಿಸಿ, ಯಾವುದೇ ದಾಖಲೆಗಳು, ಪುರಾವೆಗಳು ಅಥವಾ ಆಧಾರಗಳಿಲ್ಲದೆ “ಒಂದು ದೇಹ ಬೀಳಬೇಕು ಮತ್ತು ಅದರ ಮೇಲೆ ರಾಜಕೀಯ ಮಾಡಬೇಕು” ಎಂಬಂತಹ ಅತ್ಯಂತ ಗಂಭೀರ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳು ಸಾರ್ವಜನಿಕರಲ್ಲಿ ಭಯ, ಆತಂಕ ಮತ್ತು ಅಶಾಂತಿಯನ್ನು ಉಂಟುಮಾಡುತ್ತವೆ. ಸಾರ್ವಜನಿಕರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ದುರುದ್ದೇಶಪೂರಿತ ಉದ್ದೇಶದಿಂದ, ಆಧಾರರಹಿತ ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡಲಾಗಿದೆ. ಆಡಳಿತ ಪಕ್ಷದ (ಕಾಂಗ್ರೆಸ್) ಅಧಿಕೃತ ವಕ್ತಾರರು ಕೇಂದ್ರ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಹರಡುವ ಮೂಲಕ ಜನರನ್ನು ಪ್ರಚೋದಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ

ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಪದೇ ಪದೇ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ, ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಮತ್ತು ಸಾರ್ವಜನಿಕರು ಹಾಗೂ ವಿವಿಧ ಮಾಧ್ಯಮ ವೇದಿಕೆಗಳ ಮುಂದೆ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಅವರಿಗೆ ವಿನಾಯಿತಿ ನೀಡುವುದು ಮತ್ತು ಅವರ ಇಂತಹ ಮಾತುಗಳನ್ನು ನಿಯಂತ್ರಣ ಮಾಡಿದ್ದರೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅವರ ವಿರುದ್ಧ ಈಗಾಗಲೇ ಹಲವಾರು ಮಾನನಷ್ಟ ಪ್ರಕರಣಗಳು ದಾಖಲಾಗಿವೆ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಇದರ ಹೊರತಾಗಿಯೂ, ಅವರು ಮಾತನಾಡಲು ಸರ್ಕಾರವೇ ಅವಕಾಶ ನೀಡಿದೆ ಎಂದು ಶಾಸಕ ಶ್ರೀವತ್ಸ ಹೇಳಿದರು. ಕಾಂಗ್ರೆಸ್ ನಾಯಕ ಲಕ್ಷ್ಮಣ್ ನೀಡಿದ ಹೇಳಿಕೆಯೂ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 125, 351 ಮತ್ತು 353 ರ ಅಡಿಯಲ್ಲಿ ಶಿಕ್ಷಾರ್ಹ ಗಂಭೀರ ಕ್ರಿಮಿನಲ್ ಅಪರಾಧವಾಗಿದೆ ಹೇಳಿದ್ದಾರೆ.

ಗಲಭೆ ಪ್ರಕರಣ ಚುರುಕುಗೊಳಿಸಿದ CID:

ಈಗಾಗಲೇ ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡಿರುವ ಸಿಐಡಿ, ತನ್ನ ತನಿಖೆಗೆ ವೇಗ ನೀಡಿದೆ. ಘಟನಾ ಸ್ಥಳಕ್ಕೆ CID ADGP ಬಿಕೆ ಸಿಂಗ್ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಮೂಲ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಪೊಲೀಸರು ತಾವು ನಡೆಸಿದ ತನಿಖೆಯ ದಾಖಲೆಗಳನ್ನು ಕೂಡ ನೀಡಿದ್ದಾರೆ. ಜತೆಗೆ ವಿಡಿಯೋ ಸಾಕ್ಷಗಳ ಆಧಾರಿತವಾಗಿ ವಿಚಾರಣೆ ಕರೆಯಲು ಸಿದ್ದತೆಗಳನ್ನು ನಡೆಸಲು ಮುಂದಾಗಿದ್ದಾರೆ. ಇದು ರಾಜಕೀಯ ಪ್ರೇರೆಪಿತ ಘಟನೆ ಆಗಿರುವ ಕಾರಣ ಬಿಜೆಪಿ ಹಾಗೂ ಕಾಂಗ್ರೆಸ್​​ ನಾಯಕರಿಗೆ ನೋಟಿಸ್​​ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನೆ ಬಳಿಕ ನಾಪತ್ತೆಯಾದವರ ಜನರ ಮಾಹಿತಿಯನ್ನು ಕೂಡ ADGP ಬಿಕೆ ಸಿಂಗ್ ಕೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 am, Wed, 14 January 26

Source link

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಆಟಗಾರರಿಗೆ ವೀಸಾ ನಿರಾಕರಣೆ – Kannada News | T20 World Cup 2026: India denied Visas to Pakistan born Players

ಬಹುನಿರೀಕ್ಷಿತ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದೆ. ಈ ತಂಡಗಳಲ್ಲಿ ಕೆಲ ಟೀಮ್​ಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಮುಖ್ಯ ಕಾರಣ ತಮ್ಮ ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರು ಇರುವುದು.

ಭಾರತದಲ್ಲಿ ನಡೆಯಲಿರುವ ಟಿ20 ಪಂದ್ಯಗಳಿಗೆ ಯುಎಸ್​ಎ ಆಟಗಾರರು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ನಾಲ್ವರು ಪಾಕಿಸ್ತಾನ್ ಮೂಲದ ಅಮರಿಕನ್ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಪಾಕಿಸ್ತಾನ್ ಮೂಲದ ಯುಎಸ್​ಎ ವೇಗಿ ಅಲಿ ಖಾನ್ ಭಾರತಕ್ಕೆ ಪ್ರಯಾಣಿಸಲು ವೀಸಾ ನಿರಾಕರಿಸುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.

ಸಂಕಷ್ಟದಲ್ಲಿ 15 ಕ್ಕೂ ಹೆಚ್ಚು ಆಟಗಾರರು:

ಟಿ20 ವಿಶ್ವಕಪ್​​ನಲ್ಲಿ ಭಾಗವಹಿಸಲಿರುವ ಹಲವು ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ. ಅದರಲ್ಲೂ ಯುಎಇ ತಂಡದಲ್ಲಿರುವ ಬಹುತೇಕರು ಪಾಕಿಸ್ತಾನ್ ಮೂಲದವರು. ಯುಎಇ ತಂಡದ ನಾಯಕ ಮುಹಮ್ಮದ್ ವಾಸಿಮ್ ಸೇರಿದಂತೆ 7 ಆಟಗಾರರು ಪಾಕಿಸ್ತಾನದಲ್ಲಿ ಜನಿಸಿದವರು. ಹೀಗಾಗಿ ವೀಸಾ ನಿರಾಕರಣೆಯಿಂದ ಯುಎಇ ತಂಡವು ಹೆಚ್ಚಿನ ತೊಂದರೆಯನ್ನು ಎದುರಿಸಲಿದೆ.

ಯುಎಇ ಜೊತೆಗೆ, ಇಂಗ್ಲೆಂಡ್, ಒಮಾನ್, ಇಟಲಿ, ಕೆನಡಾ, ಝಿಂಬಾಬ್ವೆ ಮತ್ತು ನೆದರ್‌ಲೆಂಡ್ಸ್​ ತಂಡಗಳಲ್ಲೂ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ.  ಅಂದರೆ 15 ಕ್ಕೂ ಹೆಚ್ಚು ಪಾಕಿಸ್ತಾನ್ ಮೂಲದ ಆಟಗಾರರು  ಭಾರತಕ್ಕೆ ವೀಸಾ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪರಿಣಾಮ, ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.

ಐಸಿಸಿಯ ಸಹಾಯ ಕೇಳಿದ ಮಂಡಳಿಗಳು:

ಭಾರತದ ವೀಸಾ ಕಾನೂನುಗಳಿಂದಾಗಿ ಬೆದರಿಕೆಗಳನ್ನು ಎದುರಿಸುತ್ತಿರುವ ಕ್ರಿಕೆಟ್ ಮಂಡಳಿಗಳು ಇದೀಗ ಐಸಿಸಿಯ ಸಹಾಯವನ್ನು ಕೋರಿವೆ. ಈ ಎಲ್ಲಾ ತಂಡಗಳ ಆಟಗಾರರಿಗೆ ವೀಸಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಆದರೆ ಉನ್ನತ ಮಟ್ಟದ ಹಸ್ತಕ್ಷೇಪವಿಲ್ಲದೆ ಸಕಾಲಿಕ ಅನುಮೋದನೆ ಅಸಂಭವವಾಗಿದೆ.

ಇದನ್ನೂ ಓದಿ: ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB

ಸಕಾಲಿಕ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ಹಲವಾರು ಪ್ರಮುಖ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಪಂದ್ಯಾವಳಿಯ  ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸರಳವಾಗಿ ಹೇಳುವುದಾದರೆ, ಭಾರತದ ವೀಸಾ ಕಾನೂನು ಇದೀಗ ಐಸಿಸಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದು ಕೂಡ ಅನಿವಾರ್ಯವಾಗಿದೆ.

Source link

Exit mobile version