ಮೈಸೂರಿನಲ್ಲಿ ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗಿ ರಾಹುಲ್ ರಹಸ್ಯ ಮಾತು! – Kannada News | Karnataka CM Row: Rahul gandhi Talks separate with Siddaramaiah And DK Shivakumar at Mysuru Airport

ಮೈಸೂರು, (ಜನವರಿ 13): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಸಿಎಂ ಕುರ್ಚಿ ಕಿತ್ತಾಟ ಮುಂದುವರೆದಿದೆ. ಸಂಕ್ರಾಂತಿ ಬಳಿಕ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ಲ್ಯಾನ್ ಮಾಡಿದ್ದಾರೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ಮನವೊಲಿಸಿ ಸಿಎಂ ಹುದ್ದೆ ಪಡೆಯಬೇಕೆಂಬ ತಂತ್ರ ರೂಪಿಸಿದ್ದಾರೆ. ಆದ್ರೆ, ಈ ಎಲ್ಲಾ ಬೆಳವಂಣಿಗೆಗಳ ನಡುವೆ ಮೈಸೂರಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೌದು.. ತಮಿಳುನಾಡಿಗೆ ತೆರಳಲು ದೆಹಲಿಯಿಂದ ವಿಮಾನದ ಮೂಲಕ ಮೈಸೂರಿಗೆ ಬಂದ ರಾಹುಲ್ ಗಾಂಧಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಆದ್ರೆ, ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನು ಸೈಡಿಗೆ ಕರೆದುಕೊಂಡು ಹೋಗಿ ಮಾತನಾಡಿದ್ದಾರೆ. ಬಳಿಕ ರಾಹುಲ್ ಗಾಂಧಿ ಡಿಕೆಶಿಯನ್ನು ಬಿಟ್ಟು ಸಿದ್ದರಾಮಯ್ಯನವರನ್ನು ಪಕ್ಕಕ್ಕೆ ಕರೆದುಕೊಂಡು ಚರ್ಚಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ನೋಡಿ: ಏಯ್ ನೋಡ್ರಪ್ಪ ಅದೇ ಫೈನಲ್: ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?

Source link

ಕುಟುಂಬಕ್ಕೆ ಸಂಕಷ್ಟ ತಂದಿಟ್ಟ ವೈರಲ್ ವಿಡಿಯೋ: ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಅವಳಲ್ಲ ಅವನಾದ ಕಥೆ – Kannada News | Officers rescued Boy Who Acting In Girl Dress at Koppal Gavimath Fair

ಕೊಪ್ಪಳ, (ಜನವರಿ 13): ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶನಗಳನ್ನ ಮಾಡುವ ಮಗುವಿನ ವಿಡಿಯೋ ವೈರಲ್ ಆಗಿದ್ದು, ಇದೀಗ ಅದೇ ವೈರಲ್ ವಿಡಿಯೋ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಮದ್ಯಪ್ರದೇಶದಿಂದ ಬಂದ ಅಲೆಮಾರಿ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲಿ (Koppal GaviMath Fair) ಸಾಹಸ ದೃಶ್ಯಗಳನ್ನ ಪ್ರದರ್ಶನ ಮಾಡತಿತ್ತು,ಸಾಹಸ ಪ್ರದರ್ಶನಕ್ಕೆ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಂಡಿದ್ದರು. ಆ ಬಾಲಕಿ ಮಾಡೋ ಸಾಹಸ ಪ್ರದರ್ಶನ ವೈರಲ್ ಆಗಿತ್ತು.ಬಾಲ ಕಾರ್ಮಿಕ ಕಾಯ್ದೆಯಡಿ 14 ವರ್ಷದ ಮಕ್ಕಳನ್ನು ಯಾವ ಕೆಲಸಕ್ಕೆ ಬಳಕೆ ಮಾಡುವಂತಿಲ್ಲ. ಆದ್ರೆ, ವಿಡಿಯೋ ವೈರಲ್ ಆಗುತ್ತಲೇ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ.ಆದ್ರೆ ಇಡೀ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಇಲ್ಲೆ.ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ ಬಾಲಕಿ ಬಾಲಕಿ ಅಲ್ಲ,ಬದಲಾಗಿ ಆಕೆ ಬಾಲಕ.

ಅವಳಲ್ಲ ಅವನು: ಅಧಿಕಾರಿಗಳು ಶಾಕ್

ಪೋಷಕರು ಜನರನ್ನು ಸೆಳೆಯೋ ದೃಷ್ಟಿಯಿಂದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿದ್ರಂತೆ. ಖುದ್ದು ಪೋಷಕರೇ ಆ ಮಾತನ್ನ ಅಧಿಕಾರಿಗಳ ಮುಂದೆ ಹೇಳಿದ್ದಾರ. ಅಧಿಕಾರಿಗಳು ಸಹ ಮೊದಲು ಆ ಮಗುವನ್ನ ಬಾಲಕಿಯರ ಬಾಲ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಫಾರಂ ನಂಬರ್ 17 ತುಂಬುವಾಗ ಪೋಷಕರು ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.ಒಂದು ಕ್ಷಣ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೇ ಗಾಬರಿಯಾಗಿದ್ದಾರೆ.ಬಳಿಕ ಬಾಲಕಿಯರ ಬಾಲ ಮಂದಿರದಿಂದ ಬಾಲಕರ ಬಾಲ ಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ನೋಡಿ: ಕೊಪ್ಪಳ: ಬಸ್ಸಿಗಾಗಿ ನೂಕುನುಗ್ಗಲು, ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ

ಜನರನ್ನು ತಮ್ಮತ್ತ ಸೆಳೆದ ನಾಲ್ಕು ರೂಪಾಯಿ ಹಣ ಮಾಡಬೇಕು ಎನ್ನುವುದು ಅಲೆಮಾರಿ ಕುಟುಂಬದ ಕಾಯಕ. ಅದೇ ರೀತಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲೂ ಹತ್ತು ವರ್ಷದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ ಮಾಡತಿದ್ರು,ಆದ್ರೆ ಯಾವಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ,ಆಗ ಆ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಯ್ತು.

ಬಾಲಕನ ರಕ್ಷಣೆ

ಸದ್ಯ ಮಕ್ಕಳ ರಕ್ಷಣಾ ಘಟಕದ ಆಧಿಕಾರಿಗಳು ಹತ್ತು ವರ್ಷದ ಮಗುವನ್ನ ರಕ್ಷಣೆ ಮಾಡಿದ್ದಾರೆ.ಮಕ್ಕಳ ಭವಿಷ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾರೂ ಕೂಡಾ ಮಕ್ಕಳನ್ನ ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲು ಅವಕಾಶ ವಿಲ್ಲ. ಅಲ್ಲದೇ ಸಂವಿಧಾನದ ಕಲಂ 1 ಎ ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿರೋದು ಸರ್ಕಾರದ ಕೆಲಸ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮಗುವನ್ನ ರಕ್ಷಣೆ ಮಾಡಿದ್ದು, ಇದೀಗ ಆ ಮಗುವನ್ನ ಮೂಲ ಸ್ಥಳಕ್ಕೆ ಕಳಿಸುವುದಾಗಿ ಹೇಳುತ್ತಿದ್ದಾರೆ.

ಒಟ್ಟಾರೆ ಹೊಟ್ಟೆಪಾಡಿಗಾಗಿ ಕೊಪ್ಪಳಕ್ಕೆ ಬಂದ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.ಸಾಮಾಜಿಕ ಜಾಲತಾಣದಿಂದ ಆ ಕುಟುಂಬ ಇದೀಗ ಮಗುವನ್ನ ಬಿಟ್ಟಿರಬೇಕಾಯ್ತು,ಅಧಿಕಾರಿಗಳು ಕೂಡಾ ತಮ್ಮ ಕೆಲಸ ಮಾಡಿದ್ದಾರೆ.ಆದ್ರೆ ಒಂದು ವಿಡಿಯೋ ಏನೆಲ್ಲಾ ಸಮಸ್ಯೆ ಉಂಟು ಮಾಡತ್ತೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗರ್ಭಿಣಿಯರಲ್ಲಿ ನೀರಿನ ಅಂಶ ಕಡಿಮೆಯಾದರೆ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ? – Kannada News | Pregnancy Hydration Tips for Winters

ಚಳಿಗಾಲದಲ್ಲಿ (Winters) ಸಾಮಾನ್ಯವಾಗಿ ಬಾಯಾರಿಕೆ ಕಡಿಮೆ ಇರುತ್ತದೆ, ಆದರೆ ಇದರರ್ಥ ಕಡಿಮೆ ನೀರು (Water) ಕುಡಿಯಬೇಕು ಎಂದಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಗರ್ಭಿಣಿಯರಿಗೆ (Pregnant Women) ಮುಖ್ಯವಾಗಿದೆ. ಏಕೆಂದರೆ ದೇಹದಲ್ಲಿ ನೀರಿನ ಕೊರತೆಯಿದ್ದರೆ, ಅದು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಅನೇಕ ಸಂದರ್ಭಗಳಲ್ಲಿ, ಇದು ಹೆರಿಗೆಯ ಸಮಯದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು ಅಥವಾ ಅಕಾಲಿಕ ಜನನಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಗರ್ಭಿಣಿಯರು ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು, ನೀರಿನ ಅಂಶ ಕಡಿಮೆಯಾದರೆ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ ತಿಳಿದುಕೊಳ್ಳಿ.

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಗರ್ಭಿಣಿಯರು ಚಳಿಗಾಲದಲ್ಲಿಯೂ ಸಹ ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದಕ್ಕಿಂತ ಕಡಿಮೆ ಕುಡಿಯುವುದರಿಂದ ಮೂತ್ರನಾಳದ ಸೋಂಕು, ದೇಹದಲ್ಲಿ ಊತ ಮತ್ತು ಆಮ್ನಿಯೋಟಿಕ್ ದ್ರವದ ಪ್ರಮಾಣದಲ್ಲಿ ಇಳಿಕೆಯಾಗುವ ಅಪಾಯ ಹೆಚ್ಚಾಗುತ್ತದೆ. ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾದರೆ, ಅದು ಸಿಸೇರಿಯನ್ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ನೀರು ಕಡಿಮೆ ಕುಡಿಯುವುದರಿಂದ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ?

ಸಾಮಾನ್ಯವಾಗಿ ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾಗುತ್ತದೆ. ಅದರ ಮಟ್ಟವು ಆರಂಭಿಕ ಹಂತದಲ್ಲಿ ಕಡಿಮೆಯಾದರೆ, ಅದು ಮಗುವಿನ ಕೈಗಳು, ಪಾದಗಳು ಅಥವಾ ಮುಖದ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಇದು ಆಮ್ನಿಯೋಟಿಕ್ ಬ್ಯಾಂಡ್ ಸಿಂಡ್ರೋಮ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದಲ್ಲೂ ಮಹಿಳೆಯರು ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರನ್ನು ಕುಡಿಯುವುದು ಒಳ್ಳೆಯದು. ಜೊತೆಗೆ ನೀರಿನ ಕೊರತೆ ನೀಗಿಸಲು ಎಳನೀರು, ಸೂಪ್‌ ಗಳನ್ನು ಸೇವಿಸಬಹುದು ಆದರೆ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇವುಗಳಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುತ್ತೀರಾ? ಹಾಗಿದ್ರೆ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ

ಚಳಿಗಾಲದಲ್ಲಿ ನೀರು ಕುಡಿಯಲು ಸಿಂಪಲ್ ಸಲಹೆಗಳು:

  • ಎದ್ದ ತಕ್ಷಣ 1 ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.
  • ಸಾಮಾನ್ಯ ತಾಪಮಾನದಲ್ಲಿ ನೀರು ಕುಡಿಯಿರಿ.
  • ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬೇಡಿ.

ದೇಹ ನಿರ್ಜಲೀಕರಣಗೊಂಡಿರುವುದನ್ನು ಗುರುತಿಸುವುದು ಹೇಗೆ?

  • ಮೂತ್ರದ ಬಣ್ಣ ಹಳದಿ.
  • ತುಟಿಗಳು ಒಣಗಿರುತ್ತವೆ.
  • ದಣಿದ ಭಾವನೆ.
  • ನಿರಂತರ ತಲೆನೋವು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಕ್ಸಿಕ್: ದಕ್ಷಿಣದ ಹೀರೋಗಳ ಆರಾಧನೆ ಅಂತ್ಯ ಆಗಬಹುದು; ಆರ್​ಜಿವಿ ಭವಿಷ್ಯ – Kannada News | Ram Gopal Varma says Dhurandhar 2 and Toxic clash will answer many questions

2026ರ ಅತಿ ದೊಡ್ಡ ಕ್ಲ್ಯಾಶ್ ಎಂದರೆ ‘ಧುರಂಧರ್ 2’ (Dhurandhar 2) ವರ್ಸಸ್ ‘ಟಾಕ್ಸಿಕ್’ ಸಿನಿಮಾಗಳದ್ದು. ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಯಶ್ ನಟಿಸಿದ್ದರೆ, ‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಬೇರೆ ಬೇರೆ ಕಾರಣಗಳಿಂದ ಸಖತ್ ನಿರೀಕ್ಷೆ ಹುಟ್ಟುಹಾಕಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

‘ಧುರಂದರ್ 2’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ನಡುವೆ ಇರಬಹುದಾದ ವ್ಯತ್ಯಾಸವನ್ನು ರಾಮ್ ಗೋಪಾಲ್ ವರ್ಮಾ ಅವರು ಊಹಿಸಿದ್ದಾರೆ. ‘ಧುರಂದರ್ 2’ ನೈಜತೆಗೆ ಹತ್ತಿರವಾದ ಸಿನಿಮಾ. ಆದರೆ ‘ಟಾಕ್ಸಿಕ್’ ನೈಜತೆ ಇಲ್ಲದ ಸಿನಿಮಾ ಎಂದು ಅವರು ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಹೇಗಿರಬಹುದು ಎಂಬ ಯಾವ ಅಂದಾಜು ಇಲ್ಲದೇ ರಾಮ್ ಗೋಪಾಲ್ ವರ್ಮಾ ಅವರು ಈಗಲೇ ಜಡ್ಜ್​ಮೆಂಟ್ ನೀಡಲು ಆರಂಭಿಸಿದ್ದಾರೆ.

‘ಟಾಕ್ಸಿಕ್ ಸಿನಿಮಾದ ಕಥಾನಾಯಕ ಹುಟ್ಟುತ್ತಲೇ ಬುಲೆಟ್​ಫ್ರೂಫ್. ಟಾಕ್ಸಿಕ್ ಜಗತ್ತು ಇರುವುದೇ ಹೀರೋನ ಆರಾಧಿಸಲು. ಆ ಸಿನಿಮಾ ಕಿರುಚಾಡುತ್ತದೆ. ಆದರೆ ಧುರಂಧರ್ 2 ಸಿನಿಮಾ ಮೌನದಲ್ಲೇ ಮಾತನಾಡುತ್ತದೆ. ಧುರಂಧರ್ ಕಥಾನಾಯಕ ಒಬ್ಬ ಮನುಷ್ಯ. ಅವರಿಗೆ ಇತಿಮಿತಿಗಳು ಇವೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.

‘ಮಾರ್ಚ್ 19ರಂದು ಈ ಎರಡು ಸಿನಿಮಾಗಳ ನಡುವೆ ನಡೆಯುವ ಪೈಪೋಟಿಯು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಇದು ಬರೀ ಕ್ಲ್ಯಾಶ್ ಅಲ್ಲ. ಸತ್ಯ ಮತ್ತು ಸ್ಟೈಲಿಂಗ್ ನಡುವಿನ ಘರ್ಷಣೆ ಆಗಲಿದೆ. ಅದಕ್ಕಿಂತಲೂ ದೊಡ್ಡದು ಸಂಭವಿಸಬಹುದು. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸ್ಟಾರ್​​ಗಳು ಶುರು ಮಾಡಿದ ಹೀರೋ ಆರಾಧನೆಗೆ ಅಂತ್ಯ ಹಾಡಲು ಇದು ನಾಂದಿ ಆಗಬಹುದು’ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ

‘ಧುರಂಧರ್’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಾಗಿ ಅದರ ಸೀಕ್ವೆಲ್ ಬಗ್ಗೆ ಪ್ರೇಕ್ಷಕರಿಗೆ ಸಖತ್ ನಿರೀಕ್ಷೆ ಇದೆ. ಅದೇ ರೀತಿ, ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಬಳಿಕ ನಟಿಸಿದ ಸಿನಿಮಾ ಆದ್ದರಿಂದ ‘ಟಾಕ್ಸಿಕ್’ ಕೂಡ ಬಹಳ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಬಿಡುಗಡೆ ಆದ ಟೀಸರ್ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು – Kannada News | Case against Toxic movie actor Yash for Birthday banner in Bengaluru

ರಾಕಿಂಗ್ ಸ್ಟಾರ್ ಯಶ್ (Yash) ಅವರು ಜನವರಿ 8ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಲ್ಫ್​​ ಕ್ಲಬ್​ ರಸ್ತೆ ಬಳಿಯಿರುವ ​ಮನೆ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಜಿಬಿಎ ಸಹಾಯಕ ಇಂಜಿನಿಯರ್​ ಪೂಜಾರಪ್ಪ ಅವರು ದೂರು ನೀಡಿದ್ದರು. ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿ ಕೇಸ್​ ಹಾಕಲಾಗಿದೆ. ಅದರ ಅನ್ವಯ ಕಾಯ್ದೆ 1951 ಮತ್ತು 1981ರಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಯಶ್​ ಹೆಸರು ಉಲ್ಲೇಖಿಸಿ ಜಿಎಸ್​ ಕ್ರಿಯೇಷನ್ಸ್​ ಮತ್ತು ವೇಣು ಗ್ರೂಪ್ಸ್​ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯಶ್ ಅವರು ಈಗ ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮಾರ್ಚ್ 19ರಂದು ಆ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇಲಿಯೇ ಎದ್ದು ಹೊಲ ಮೇಯ್ದಂತೆ; ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ – Kannada News | Tamil Nadu police arrested for Physical harassment on woman in Kallakurichi

ಚೆನ್ನೈ, ಜನವರಿ 13: ತಮಿಳುನಾಡಿನಲ್ಲಿ (Tamil Nadu) ಪೊಲೀಸ್ ಅಧಿಕಾರಿಯೇ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಕಲ್ಲಕುರಿಚಿ ಜಿಲ್ಲೆಯ 32 ವರ್ಷದ ಮಹಿಳೆಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆ ಮಹಿಳೆ ಕೆಲವು ಬೇಡಿಕೆಗಳ ಕುರಿತು ಕೆಲವು ಜನರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಅವರು ಉಲುಂದೂರ್ಪೇಟೆ ಬಳಿಯ ಪಲಯಂ ಕುಂಚರಂ ಗ್ರಾಮದ 36 ವರ್ಷದ ಶೇಖ್ ಸಲೀಂ ಎಂಬುವವರನ್ನು ಭೇಟಿಯಾದರು.

ಕಲ್ಲಕುರಿಚಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ ಅವರು ಭದ್ರತಾ ಕೆಲಸಕ್ಕಾಗಿ ಅಲ್ಲಿಗೆ ಬಂದಿದ್ದರು. ಬಳಿಕ ಅವರಿಬ್ಬರೂ ಮೊಬೈಲ್ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಸ್ನೇಹಿತರಾದರು. ಶೇಖ್ ಸಲೀಂ ಆ ಮಹಿಳೆಯ ಮನೆಗೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದನ್ನು ನಿರೀಕ್ಷಿಸದ ಮಹಿಳೆ ಕಿರುಚಿದರು. ತಕ್ಷಣ, ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!

ಬಳಿಕ ಆ ಮಹಿಳೆ ಈ ಸಂಬಂಧ ಕಲ್ಲಕುರಿಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಶೇಖ್ ಸಲೀಂ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಅವರು ಆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದು ದೃಢಪಟ್ಟಿದೆ. ಹೀಗಾಗಿ, ಅವರನ್ನು ಬಂಧಿಸಲಾಗಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಗಾಂಧಿ​ ಮಹತ್ವದ ಸಂದೇಶ – Kannada News | Karnataka Power Tussle: Rahul Gandhi Separate Talks With DCM DK Shivakumar at Mysuru Airport

ಮೈಸೂರು, (ಜನವರಿ 13): ಸಿಎಂ ಹುದ್ದೆ ಬೇಕೆಂದು ಪಟ್ಟು ಹಿಡಿದಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಈ ಹಿಂದಿನಿಂದಲೂ ದೆಹಲಿಗೆ ಹೋಗಿ ರಾಹುಲ್ ಗಾಂಧಿ  (Rahul Gandhi) ಭೇಟಿಗೆ ಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಆದ್ರೆ, ಇಂದು(ಜನವರಿ 13) ಕೊನೆಗೂ ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಹೌದು…ತಮಿಳುನಾಡಿಗೆ ತೆರಳು ದೆಹಲಿಯಿಂದ ವಿಮಾನದ ಮೂಲಕ ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿಯವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಆದ್ರೆ, ಈ ವೇಳೆ ಡಿಕೆ ಶಿವಕುಮಾರ್ ಅವರು ಸಿಕ್ಕಿದ್ದೇ ಚಾನ್ಸ್ ಎಂದು ರಾಹುಲ್ ಗಾಂಧಿಯವರನ್ನು ಸೈಡಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ. ಇದು ಸಿಎಂ ಕುರ್ಚಿಯ ಚರ್ಚೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಕೆಲ ನಿಮಿಷಗಳ ಕಾಲ ರಾಹುಲ್ ಗಾಂಧಿ ಜೊತೆ ಡಿ.ಕೆ.ಶಿವಕುಮಾರ್ ಒಬ್ಬರೇ ಮಾತುಕತೆ ನಡೆಸಿದ್ದಾರೆ. ಈ ವೇಳೆ ಏನು ತಲೆಕೆಡಿಸಿಕೊಳ್ಳಬೇಡಿ. ಶೀಘ್ರವೇ ನಿಮ್ಮನ್ನ ದೆಹಲಿಗೆ ಕರೆಯುತ್ತೇವೆ ಎಂದು ಡಿಕೆಶಿಗೆ ರಾಹುಲ್ ಗಾಂಧಿ ಭರವಸೆ ನೀಡಿ ತೆರಳಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಮೂಲಗಳು ತಿಳಿಸಿದ್ದು,ಈ ಬೆಳವಣಿಗೆ ಕಾಂಗ್ರೆಸ್​​ನಲ್ಲಿ ಮಾತ್ರವಲ್ಲದೇ ರಾಜ್ಯ ರಾಜಕಾರಣದಲ್ಲೂ ಸಂಚಲನ ಮೂಡಿಸಿದೆ.

ಇದನ್ನೂ ನೋಡಿ: ಮೈಸೂರಿನಲ್ಲಿ ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗಿ ರಾಹುಲ್ ರಹಸ್ಯ ಮಾತು!

Source link

Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ! – Kannada News | Uttar Pradesh Man Bludgeons Mother and Wife to Death then Chews Flesh

ನವದೆಹಲಿ, ಜನವರಿ 13: ಉತ್ತರಪ್ರದೇಶದ ಖುಷಿ ನಗರದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಮನೆಯಲ್ಲೇ ಹೊಡೆದು ಕೊಂದು (Murder), ಅವರ ತಲೆಗಳನ್ನು ಇಟ್ಟಿಗೆಗಳಿಂದ ಒಡೆದು, ತಲೆಬುರುಡೆಯಿಂದ ಮಾಂಸವನ್ನು ಬಗೆದು ತಿಂದಿದ್ದಾನೆ. ಆತನ ಹಲ್ಲೆಯಿಂದ ಒದ್ದಾಡುತ್ತಿದ್ದ ಆ ಇಬ್ಬರು ಹೆಂಗಸರ ನರಳಾಟವನ್ನು ನೋಡಿ ಸುತ್ತಮುತ್ತಲಿನವರು ಆಘಾತದಿಂದ ಅಲ್ಲಿ ಬಂದು ಸೇರಿದ್ದರು. ಅವರ ಗೋಳಾಟವನ್ನು ನೋಡುತ್ತಿದ್ದ ಜನರೆದುರೇ ಆ ದೇಹಗಳಿಂದ ಮಾಂಸವನ್ನು ತೆಗೆದು ಆತ ತಿಂದಿದ್ದಾನೆ. ಇದನ್ನು ನೋಡಿ ನೆರೆಹೊರೆಯವರು ಭಯದಿಂದ ಮನೆಯೊಳಗೆ ಓಡಿದ್ದಾರೆ.

ಅಹಿರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಾರ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ನೋಡುತ್ತಿದ್ದಾಗ 30 ವರ್ಷದ ವ್ಯಕ್ತಿ ತನ್ನ ತಾಯಿ ಮತ್ತು ಹೆಂಡತಿಯನ್ನು ಕೊಂದಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯಾದ ಸಿಕಂದರ್ ಗುಪ್ತಾ ಎಂಬಾತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಓಡಿಹೋಗಿದ್ದಕ್ಕೆ ಪೊಲೀಸ್ ಠಾಣೆಯಲ್ಲೇ ಹೆಂಡತಿಯನ್ನು ಶೂಟ್ ಮಾಡಿ ಕೊಂದ ಗಂಡ!

ಕಿರುಚಾಟ ಕೇಳಿ ನೆರೆಹೊರೆಯವರು ಹೊರಗೆ ಓಡಿಬಂದರು. ಪಕ್ಕದ ಮನೆಯ ಕಡೆಗೆ ಧಾವಿಸಿದ ಅವರು ಅಲ್ಲಿನ ಪರಿಸ್ಥಿತಿ ನೋಡಿ ಶಾಕ್ ಆಗಿ ನಿಂತರು. ರಕ್ತ ಸೋರುತ್ತಿದ್ದರೂ ಬಿಡದೆ ಸಿಕಂದರ್ ತನ್ನ ತಾಯಿ ಹಾಗೂ ಅಮ್ಮನಿಗೆ ಹೊಡೆಯುತ್ತಿದ್ದ. ಅವರೆಲ್ಲರೂ ಬಿಡಿಸಲು ಮುಂದೆ ಹೋಗಲು ಹೆದರಿ ಅಲ್ಲೇ ನಿಂತಿದ್ದರು. ಆಗ ಆತ ಇಟ್ಟಿಗೆಯಿಂದ ಹೊಡೆದು ಅವರಿಬ್ಬರನ್ನೂ ಕೊಂದನು. ಇದರಿಂದ ಜನರು ಭಯದಿಂದ ಹಿಂದೆ ಸರಿದರು. ಪೊಲೀಸ್ ತಂಡಗಳು ಶೀಘ್ರದಲ್ಲೇ ಆಗಮಿಸಿ ಸಿಕಂದರ್ ಅವರನ್ನು ವಶಕ್ಕೆ ತೆಗೆದುಕೊಂಡವು.

ಇದನ್ನೂ ಓದಿ: ಕಾಡು ಹಂದಿಗಾಗಿ ಇಟ್ಟಿದ್ದ ದೇಶಿ ಬಾಂಬ್ ಕಚ್ಚಿ ಆನೆ ಮರಿ ದಾರುಣ ಸಾವು

ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಕಂದರ್ ಸುಮಾರು 1 ತಿಂಗಳ ಹಿಂದೆ ತನ್ನ ಗ್ರಾಮಕ್ಕೆ ಮರಳಿದ್ದ. ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ ಆತ ಈ ಹಿಂದೆಯೂ ಹಲವು ಬಾರಿ ಪತ್ನಿ ಪ್ರಿಯಾಂಕಾ (28) ಮತ್ತು ತಾಯಿ ರುನಾ ದೇವಿ (60) ಇಬ್ಬರ ಮೇಲೂ ಹಲ್ಲೆ ನಡೆಸಿದ್ದ. ಆದರೆ, ಈ ಬಾರಿ ಅವರಿಬ್ಬರನ್ನೂ ಕೊಲೆ ಮಾಡಿ, ಸಿಮೆಂಟ್ ಇಟ್ಟಿಗೆಯಿಂದ ತಲೆಯನ್ನು ಒಡೆದು, ಅದರಿಂದ ಮಾಂಸವನ್ನು ಹೊರಗೆ ತೆಗೆದು ತಿನ್ನುವ ಮೂಲಕ ವಿಕೃತಿ ಮೆರೆದಿದ್ದಾನೆ. ಆತನ ಮಾನಸಿಕ ಆರೋಗ್ಯದ ಬಗ್ಗೆಯೂ ತನಿಖೆಗಳು ನಡೆದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಮಗಳೂರಿನ ಹಲವೆಡೆ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ – Kannada News | Hikkamagaluru Hit by Cloudburst; Untimely Rains Damage Coffee Crops

ಚಿಕ್ಕಮಗಳೂರು, ಜನವರಿ 13: ಕಾಫಿನಾಡು ಚಿಕ್ಕಮಗಳೂರಲ್ಲಿ ಈ‌ ವರ್ಷದ ಮೊದಲ ‌ಮಳೆಯ ಸಿಂಚನವಾಗಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ , ಕಳಸ, ಶೃಂಗೇರಿ, NR ಪುರ ಭಾಗದಲ್ಲಿ ವರುಣ ಅಬ್ಬರಿಸಿದ್ದು, ದಿಢೀರ್ ಸುರಿದ ಮಳೆಯಿಂದ ಜನರು ಕಂಗಾಲಾದ ಪ್ರಸಂಗ ನಡೆದಿದೆ. ಕಳೆದ ಒಂದು ವಾದದಿಂದ ಕೊರೆಯುವ ಚಳಿ, ಶೀತ ಗಾಳಿಗೆ ಜಿಲ್ಲೆಯ ಜನರು ಹೈರಾಣಾಗಿರುವ ನಡುವೆ ಧಾರಾಕಾರವಾಗಿ ಸುರಿದ ಮಳೆ ಕಾಫಿ ಬೆಳೆಗಾರರನ್ನ ಆತಂಕಕ್ಕೆ ದೂಡಿದೆ. ಜಿಲ್ಲೆಯಾದ್ಯಂತ ಕಾಫಿ ಫಸಲಿನ ಕೊಯ್ಲು ನಡೆಯುತ್ತಿದ್ದು, ಒಣ‌ ಹಾಕಿದ ಕಾಫಿ ಮಳೆಯಿಂದ ಸಂಪೂರ್ಣ ನೆನೆದು ಹಾಳಾಗಿದೆ. ಕೆಲವೆಡೆ ಬೆಳೆ ನೀರಲ್ಲಿ ಕೊಚ್ಚಿ ಹೋಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ! – Kannada News | Boost Immunity with These Superfoods

ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದೇ ಒಂದು ದೊಡ್ಡ ಸವಾಲಾಗಿದೆ. ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ, ಕೆಲಸದ ಒತ್ತಡ, ಸರಿಯಾಗಿ ಆಹಾರ ಸೇವನೆ ಮಾಡದಿರುವುದು ಸೇರಿದಂತೆ ನಾನಾ ಕಾರಣಗಳು ಇದಕ್ಕೆ ಕಾರಣವಾಗಿರಬಹುದು. ಏನೇ ಆಗಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ದೊಡ್ಡ ದೊಡ್ಡ ಕಾಯಿಲೆಗಳಿಂದ ದೂರವಿರಬೇಕಾಗುತ್ತದೆ. ಆದರೆ ಇದಕ್ಕೆ ನಾನಾ ರೀತಿಯ ಔಷಧಿ, ಮಾತ್ರೆಗಳನ್ನು ಸೇವನೆ ಮಾಡುವ ಮೊದಲು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು (Immune System) ಬಲಪಡಿಸಿಕೊಳ್ಳಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಾಗಿರಲು ಇದು ಪ್ರಮುಖ ಅಡಿಪಾಯವಾಗಿರುತ್ತದೆ. ಈ ರೋಗನಿರೋಧಕ ಶಕ್ತಿ ಬಲವಾಗಿದ್ದಷ್ಟೂ ಆರೋಗ್ಯ ಸಮಸ್ಯೆಗಳು ದೂರ ಉಳಿಯುತ್ತವೆ. ಹಾಗಾದರೆ ಇದನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ಬೆಟರ್ ಹೆಲ್ತ್ ಪ್ರಕಾರ, ರೋಗನಿರೋಧಕ ಶಕ್ತಿ ಬಿಳಿ ರಕ್ತ ಕಣಗಳು, ಪ್ರತಿಕಾಯಗಳು, ದುಗ್ಧರಸ ವ್ಯವಸ್ಥೆ, ಗುಲ್ಮ, ಮೂಳೆ ಮಜ್ಜೆ ಮತ್ತು ಥೈಮಸ್ ಗ್ರಂಥಿಯಂತಹ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ನಿಮ್ಮ ರೋಗನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
  • ರೋಗನಿರೋಧಕ ಶಕ್ತಿ ದುರ್ಬಲಗೊಂಡರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ಸೇವಿಸುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
  • ಅದಕ್ಕಾಗಿಯೇ ಆಹಾರದಲ್ಲಿ ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಹಣ್ಣುಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ಏಕೈಕ ಆಹಾರಗಳಾಗಿವೆ. ಆದ್ದರಿಂದ, ಪೌಷ್ಟಿಕತಜ್ಞರು ವರ್ಷದ ಆಯಾ ಸಮಯಕ್ಕೆ ಅನುಗುಣವಾಗಿ ಎಲ್ಲಾ ಋತುಗಳಲ್ಲಿ ಲಭ್ಯವಿರುವ ಹಣ್ಣುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕೇವಲ ಹಣ್ಣುಗಳಷ್ಟೇ ಅಲ್ಲ. ಗ್ರೀನ್ ಟೀ ಕೂಡ ಮುಖ್ಯ. ಟೀ ಅಥವಾ ಕಾಫಿ ಕುಡಿಯುವ ಬದಲು ಗ್ರೀನ್ ಟೀಯನ್ನು ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಸೇರಿಸಿಕೊಂಡರೆ, ರೋಗಗಳು ದೂರವಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version