40 ವಿಕೆಟ್​​ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ – Kannada News | West Indies and Pakistan Script Test History!

ವೆಸ್ಟ್ ಇಂಡೀಸ್‌ನಲ್ಲಿ ಈವರೆಗೆ ಒಟ್ಟು 273 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಆದರೆ, ಈ ಹಿಂದಿನ ಯಾವುದೇ ಪಂದ್ಯದಲ್ಲೂ ದಾಖಲಾಗದಂತಹ ಅಪರೂಪದ ದಾಖಲೆಗೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ. ಅದು ಕೂಡ 40 ವಿಕೆಟ್​ಗಳ ಕಬಳಿಕೆಯೊಂದಿಗೆ..!

ಟ್ರಿನಿಡಾಡ್​​ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 40 ವಿಕೆಟ್​ಗಳು ಉರುಳಿದ್ದವು. ಈ 40 ವಿಕೆಟ್​ಗಳನ್ನು ಕಬಳಿಸಿರುವುದು ವೇಗಿಗಳು ಎಂಬುದು ವಿಶೇಷ.

ಅಂದರೆ ಪಾಕಿಸ್ತಾನ್ ಪರ ಎರಡು ಇನಿಂಗ್ಸ್​ಗಳಲ್ಲಿ 20 ವಿಕೆಟ್​ಗಳನ್ನು ವೇಗದ ಬೌಲರ್​ಗಳು ಮಾತ್ರ ಕಬಳಿಸಿದ್ದರು. ಇತ್ತ ವೆಸ್ಟ್ ಇಂಡೀಸ್ ವೇಗಿಗಳು ಕೂಡ ಎರಡು ಇನಿಂಗ್ಸ್​ಗಳಿಂದ 20 ವಿಕೆಟ್ ಉರುಳಿಸಿದ್ದರು. ಈ ಮೂಲಕ ಕೆರಿಬಿಯನ್ ದ್ವೀಪದ ಟೆಸ್ಟ್ ಪಂದ್ಯದಲ್ಲಿ ವೇಗಿಗಳು ಪರಾಕ್ರಮ ಮೆರೆದಿದ್ದಾರೆ.

ಹಳೆಯ ದಾಖಲೆ ಉಡೀಸ್:

2025 ರಲ್ಲಿ ಕಿಂಗ್‌ಸ್ಟನ್‌ನ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವೇಗಿಗಳು 39 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ ಇದೀಗ ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ವೇಗಿಗಳು ಒಟ್ಟು ಸೇರಿ 40 ವಿಕೆಟ್​ ಉರುಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವೇಗಿಗಳ ಮಿಂಚಿಂಗ್:

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ನ ಇಬ್ಬರು ವೇಗಿಗಳು ಐದು ವಿಕೆಟ್ ಕಬಳಿಸಿ ಮಿಂಚಿದ್ದರು. ಅತ್ತ ಪಾಕಿಸ್ತಾನ್ ಪರ ಕೂಡ ಓರ್ವ ವೇಗಿ ಐದು ವಿಕೆಟ್​ಗಳನ್ನು ಪಡೆದಿದ್ದರು.

  • ಜಸ್ಟಿನ್ ಗ್ರೀವ್ಸ್ (ವೆಸ್ಟ್ ಇಂಡೀಸ್): ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಇವರು ಸತತ 5 ಮೇಡನ್ ಓವರ್‌ಗಳ ಜೊತೆಗೆ ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು.
  • ಜೇಡನ್ ಸೀಲ್ಸ್ (ವೆಸ್ಟ್ ಇಂಡೀಸ್): ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಕಡಿಯುವ ಮೂಲಕ ವಿಂಡೀಸ್ ಗೆಲುವನ್ನು ಖಚಿತಪಡಿಸಿದರು.
  • ಮೊಹಮ್ಮದ್ ಅಬ್ಬಾಸ್ (ಪಾಕಿಸ್ತಾನ್): ಪಾಕಿಸ್ತಾನ ಪರ ಅಮೋಘ ಬೌಲಿಂಗ್ ಮಾಡಿದ ಇವರು ಪಂದ್ಯದಲ್ಲಿ ಒಟ್ಟು 8 ವಿಕೆಟ್ (ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್) ಕಸಿದುಕೊಂಡರು.
  • ಮೊಹಮ್ಮದ್ ಅಲಿ (ಪಾಕಿಸ್ತಾನ್):  ಪಾಕ್ ವೇಗಿ ಮೊಹಮ್ಮದ್ ಅಲಿ ಒಟ್ಟು 6 ವಿಕೆಟ್ ಪಡೆಯುವ ಮೂಲಕ ತಮ್ಮ ಬೌಲಿಂಗ್ ಶಕ್ತಿಯನ್ನು ಪ್ರದರ್ಶಿಸಿದ್ದರು.

ಸಂಕ್ಷಿಪ್ತ ಸ್ಕೋರ್ ವಿವರಗಳು:

ಇನಿಂಗ್ಸ್ / ತಂಡ ಒಟ್ಟು ರನ್ (ವಿಕೆಟ್) ಬ್ಯಾಟರ್‌ಗಳ ಸ್ಕೋರ್ ಬೌಲರ್‌ಗಳ ವಿಕೆಟ್​
ವೆಸ್ಟ್ ಇಂಡೀಸ್ (1ನೇ ಇನಿಂಗ್ಸ್) 311/10 ಶೈ ಹೋಪ್ (92), ಕವೆಮ್ ಹಾಡ್ಜ್ (84) ಮೊಹಮ್ಮದ್ ಅಲಿ (4/50), ಆಮಿರ್ ಜಮಾಲ್ (3/62)
ಪಾಕಿಸ್ತಾನ್ (1ನೇ ಇನಿಂಗ್ಸ್) 282/10 ಶಾನ್ ಮಸೂದ್ (109), ಸೌದ್ ಶಕೀಲ್ (60) ಜಸ್ಟಿನ್ ಗ್ರೀವ್ಸ್ (5/27), ಅಲ್ಜಾರಿ ಜೋಸೆಫ್ (2/65)
ವೆಸ್ಟ್ ಇಂಡೀಸ್ (2ನೇ ಇನಿಂಗ್ಸ್) 181/10 ಶಮರ್ ಜೋಸೆಫ್ (38), ಜೋಶುವಾ ಡಾ ಸಿಲ್ವಾ (27) ಮೊಹಮ್ಮದ್ ಅಬ್ಬಾಸ್ (5/22), ಮೊಹಮ್ಮದ್ ಅಲಿ (3/45)
ಪಾಕಿಸ್ತಾನ್ (2ನೇ ಇನಿಂಗ್ಸ್) 120/10 ಬಾಬರ್ ಆಝಂ (58*), ಅಬ್ದುಲ್ಲಾ ಶಫೀಕ್ (15) ಜೇಡನ್ ಸೀಲ್ಸ್ (5/20), ಜಸ್ಟಿನ್ ಗ್ರೀವ್ಸ್ (2/35)

ಇದನ್ನೂ ಓದಿ: ರಾಹುಲ್ ದ್ರಾವಿಡ್ ಔಟ್, ಇಂಗ್ಲೆಂಡ್​ ತಂಡಕ್ಕೆ ಹೊಸ ಕೋಚ್ ಬಹುತೇಕ ಫಿಕ್ಸ್​!

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯವು ಕೇವಲ ಒಂದು ಗೆಲುವು ಅಥವಾ ಸೋಲಿಗೆ ಸೀಮಿತವಾಗದೆ, ಟೆಸ್ಟ್ ಕ್ರಿಕೆಟ್‌ನ ಅಸಲಿ ರೋಮಾಂಚನವನ್ನು ಜಗತ್ತಿಗೆ ಪರಿಚಯಿಸಿದೆ. ಆಧುನಿಕ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ದೊಡ್ಡದಾಗಿದ್ದರೂ, ಕೆರಿಬಿಯನ್ ಮಣ್ಣಿನ ಅಸಲಿ ಶಕ್ತಿ ಇರುವುದೇ ವೇಗದ ಬೌಲಿಂಗ್‌ನಲ್ಲಿ ಎಂಬುದನ್ನು ಈ ಪಂದ್ಯ ಮತ್ತೊಮ್ಮೆ ಸಾಬೀತುಪಡಿಸಿದೆ. ಟ್ರಿನಿಡಾಡ್‌ನ ಈ ಐತಿಹಾಸಿಕ ಪೇಸ್ ಪಂದ್ಯವು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಹಸಿರಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Source link

ರಾತ್ರಿಯಾದ್ರೆ ಸಾಕು ಚಿರತೆ ಭಯ: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ – Kannada News | Leopard in Bengaluru: Forest Dept Fails to Capture Repeatedly Sighted Big Cat

ಬೆಂಗಳೂರು, ಜು.30: ಬ್ಯಾಡರಹಳ್ಳಿ ನಿವಾಸಿಗಳಿಗೆ ಚಿರತೆ ಕಾಟ ತಪ್ಪುತ್ತಿಲ್ಲ. ರಾತ್ರಿಯಾದ್ರೆ ಪದೇಪದೇ ಪ್ರತ್ಯಕ್ಷವಾಗ್ತಿರುವ ಚಿರತೆ, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜುಲೈ ತಿಂಗಳಿನಲ್ಲಿ ಇದು ಆರನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು, ಕಳೆದ ರಾತ್ರಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮತ್ತೊಮ್ಮೆ ದರ್ಶನ ನೀಡಿದೆ. ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಬೋನ್ ಇಟ್ಟು ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರಂಭದಲ್ಲಿ ಬೋನ್‌ ನಲ್ಲಿ ಕೋಳಿ ಇಡಲಾಗಿತ್ತು, ಆದರೆ ಈಗ ಕೋಳಿಯೂ ಇಲ್ಲ. ಆಮಿಷವಿಲ್ಲದೆ ಚಿರತೆ ಹೇಗೆ ಸೆರೆ ಸಿಕ್ಕೀತು ಎಂಬುದು ಸ್ಥಳೀಯರ ಪ್ರಶ್ನೆ. ಪದೇಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಜನರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ವೈಜ್ಞಾನಿಕ ವಿಧಾನಗಳನ್ನು ಬಳಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಚಿರತೆ ಸೆರೆಹಿಡಿಯುವ ಪ್ರಯತ್ನಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ದೂರಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆನ್ನಮ್ಮನವರ 11ನೇ ದಿನದ ಕಾರ್ಯ: ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು – Kannada News | HD Devegowda Offers Prayers at Chennamma’s Memorial During 11th Day Ceremony

ಹಾಸನ, ಜುಲೈ 30: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ದಿವಂಗತ ಪತ್ನಿ ಚೆನ್ನಮ್ಮನವರ ಪುಣ್ಯ ಸ್ಮರಣೆ ಅಂಗವಾಗಿ ಮಾವಿನಕೆರೆ ಬಳಿಯ ಸಮಾಧಿ ಸ್ಥಳದಲ್ಲಿ ಮೊದಲ ಪೂಜೆ ಸಲ್ಲಿಸಿದರು. ಪತ್ನಿಯ ಸಮಾಧಿಗೆ ಹೂವಿನ ಹಾರ ಹಾಕಿ, ಮಲ್ಲಿಗೆ ಹೂಗಳನ್ನು ಅರ್ಪಿಸಿ ನಮಿಸಿದರು. ನಂತರ ಅಗಲಿದ ಪತ್ನಿ ಚೆನ್ನಮ್ಮನವರ ನೆನಪಿನಲ್ಲಿ ಸಮಾಧಿ ಬಳಿ ಮೌನವಾಗಿ ಕುಳಿತು ಭಾವುಕರಾದರು. ಚೆನ್ನಮ್ಮನವರ ಉತ್ತರಕ್ರಿಯೆ ಹಿನ್ನೆಲೆಯಲ್ಲಿ ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಈ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಕುಟುಂಬಸ್ಥರು ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಯ ನಂತರ ಮಾವಿನಕೆರೆ ಚೆನ್ನಮ್ಮ ಸಮಾಧಿ ಬಳಿ ಉತ್ತರಕ್ರಿಯೆಗಳು ನೆರವೇರಿದವು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇತಿಹಾಸ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್ – Kannada News | Sudeep sends special gift to PV Sindhu on her win in Japan

ಕಿಚ್ಚ ಸುದೀಪ್ (Kichcha Sudeep) ಅದ್ಭುತ ನಟ, ನಿರ್ದೇಶಕ ಆಗಿರುವ ಜೊತೆಗೆ ಕ್ರೀಡಾಪಟು ಮತ್ತು ಕ್ರೀಡಾಪ್ರೇಮಿ ಸಹ. ಪ್ರತಿ ವರ್ಷವೂ ತಂಡವೊಂದನ್ನು ಕಟ್ಟಿಕೊಂಡು ಕ್ರಿಕೆಟ್ ಆಡುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ ಸುದೀಪ್. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಉತ್ಸಾಹದಿಂದ ಫೀಲ್ಡ್​​ಗೆ ಇಳಿಯುತ್ತಾರೆ. ಕ್ರಿಕೆಟ್ ಆಡುವುದು ಮಾತ್ರವೇ ಅಲ್ಲದೆ ಆಟದ ಬಗ್ಗೆ ಅಪಾರ ಪ್ರೀತಿ, ಗೌರವಗಳನ್ನು ಸಹ ಹೊಂದಿದ್ದಾರೆ. ಅಂದಹಾಗೆ ಸುದೀಪ್ ಅವರ ಕ್ರೀಡಾ ಪ್ರೀತಿ ಕ್ರಿಕೆಟ್​​ಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ಕ್ರೀಡೆಯನ್ನಾಗಲಿ, ಕ್ರೀಡಾಪಟುವನ್ನಾಗಲಿ ಅವರು ಗೌರವದಿಂದ ಕಾಣುತ್ತಾರೆ. ಇದಕ್ಕೆ ಜಾತಾ ಉದಾಹರಣೆ ಭಾರತದ ಹೆಮ್ಮೆಯ ಬ್ಯಾಡ್​​ಮಿಂಟನ್ ಆಟಗಾರ್ತಿ ಪಿವಿ ಸಿಂಧು.

ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದಿರುವ ಹೆಮ್ಮೆಯ ಬ್ಯಾಡ್​ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಇತ್ತೀಚೆಗಷ್ಟೆ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಈ ಟೂರ್ನಿ ಗೆದ್ದ ಮೊಟ್ಟ ಮೊದಲ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪಿವಿ ಸಿಂಧು ಅವರ ಈ ಸಾಧನೆಯನ್ನು ಹಲವರು ಗುರುತಿಸಿಲ್ಲ. ಬಹಳ ಕಡಿಮೆ ಮಂದಿ ಪಿವಿ ಸಿಂಧು ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ಶುಭಾಶಯ ಹೇಳಿದ್ದಾರೆ. ಅದರಲ್ಲಿ ನಟ ಕಿಚ್ಚ ಸುದೀಪ್ ಸಹ ಒಬ್ಬರು.

ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಿಚ್ಚ ಸುದೀಪ್?

ಜಪಾನ್ ಟೂರ್ನಿ ಗೆದ್ದ ಪಿವಿ ಸಿಂಧು ಅವರಿಗೆ ವಿಶೇಷ ಉಡುಗೊರೆಯನ್ನು ಸುದೀಪ್ ಕಳಿಸಿದ್ದಾರೆ. ವಿಶೇಷವಾದ ಅಭಿನಂದನಾ ಪತ್ರವನ್ನು ಸುದೀಪ್, ಸಿಂಧು ಅವರಿಗೆ ಕಳಿಸಿದ್ದು, ‘ಜಪಾನ್ ಓಪನ್‌ನಲ್ಲಿ ದಾಖಲೆ ಮುರಿಯುವಂತಹ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ.

ಇದರ ಜೊತೆಗೆ ವಿಶೇಷ ಗಿಫ್ಟ್ ಹ್ಯಾಂಪರ್ ಅನ್ನು ಸಹ ಸುದೀಪ್ ಅವರು ಪಿವಿ ಸಿಂಧುಗೆ ಕಳಿಸಿಕೊಟ್ಟಿದ್ದಾರೆ. ಸುದೀಪ್ ಅವರು ಕಳಿಸಿರುವ ಪತ್ರ ಮತ್ತು ಗಿಫ್ಟ್ ಹ್ಯಾಂಪರ್​​ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಿವಿ ಸಿಂಧು, ‘ಬಹಳ ಧನ್ಯವಾದಗಳು ಸುದೀಪ್ ಸರ್’ ಎಂದು ಬರೆದುಕೊಂಡಿದ್ದಾರೆ.

ಕ್ರೀಡಾಪಟುಗಳೊಟ್ಟಿಗೆ ಆಪ್ತ ಗೆಳೆತನವನ್ನು ಸುದೀಪ್ ಹೊಂದಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ, ಐಪಿಎಲ್ ಸ್ಟಾರ್​​ಗಳಾಗಿರುವ ಹಲವು ಕ್ರಿಕೆಟ್ ಆಟಗಾರರು ಸುದೀಪ್ ಅವರ ಆಪ್ತ ಗೆಳೆಯರಾಗಿದ್ದಾರೆ. ಕರ್ನಾಟಕದ ಆಟಗಾರರು ಮಾತ್ರವಲ್ಲದೆ ಹೊರ ರಾಜ್ಯದ ಆಟಗಾರರು, ಕೆಲ ವಿದೇಶಿ ಆಟಗಾರರೊಟ್ಟಿಗೆ ಸಹ ಸುದೀಪ್ ಆಪ್ತ ಗೆಳೆತನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ವಿವಾದದ ಆಕ್ರೋಶ: ತಮಿಳುನಾಡು ಸಿಎಂ ವಿಜಯ್ ಸಿನಿಮಾ ಜನನಾಯಗನ್ ಪ್ರದರ್ಶನ ತಡೆಗೆ ಯತ್ನ – Kannada News | Mandya Protest Against Tamil Nadu CM Vijay’s Jana Nayagan Movie Over Cauvery Water Dispute

ಮಂಡ್ಯ, ಜುಲೈ 30: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳ ಆಕ್ರೋಶ ತೀವ್ರಗೊಂಡಿದೆ. ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಟಿಸಿರುವ ‘ಜನನಾಯಗನ್’ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿ, ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲು ಸಂಘಟನೆಗಳು ಯತ್ನಿಸಿವೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಖ್ಯಾತೆ ತೆಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಸಿನಿಮಾ ಪ್ರದರ್ಶನ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸಿನಿಮಾದ ಪೋಸ್ಟರ್ ಹರಿದು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Job Interview: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ – Kannada News | How to Ace Your Next Job Interview: Key Tips and Mistakes to Avoid

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಸಂದರ್ಶನ (Job Interview) ಎಂಬುದು ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಹಂತವಾಗಿದೆ. ನಿಮ್ಮ ಬಳಿ ಉತ್ತಮ ಶೈಶ್ಚಿಕ ಅರ್ಹತೆ, ಅನುಭವ ಮತ್ತು ಕೌಶಲ್ಯಗಳಿದ್ದರೂ, ಕೆಲವೊಮ್ಮೆ ಕಚೇರಿಯಲ್ಲಿ ಮಾಡುವ ಸಣ್ಣ-ಪುಟ್ಟ ತಪ್ಪುಗಳಿಂದಲೇ ಕೈಗೆ ಸಿಕ್ಕ ಉತ್ತಮ ಉದ್ಯೋಗದ ಅವಕಾಶ ಜಾರಿಹೋಗಬಹುದು. ಸಂದರ್ಶನದಲ್ಲಿ ಯಶಸ್ಸು ಗಳಿಸಲು ಸರಿಯಾದ ಸಿದ್ಧತೆ, ಆತ್ಮವಿಶ್ವಾಸ ಹಾಗೂ ವೃತ್ತಿಪರ ವರ್ತನೆ ಅತ್ಯಗತ್ಯ. ಹಾಗಿದ್ದರೆ, ಸಂದರ್ಶನಕ್ಕೆ ತೆರಳುವ ಮುನ್ನ ನೀವು ತಪ್ಪದೇ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

ಕಂಪನಿಯ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಳ್ಳಿ:

ಸಂದರ್ಶನಕ್ಕೆ ಹಾಜರಾಗುವ ಮೊದಲು ನೀವು ಅರ್ಜಿ ಸಲ್ಲಿಸಿರುವ ಸಂಸ್ಥೆಯ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸಿ. ಕಂಪನಿಯ ಇತಿಹಾಸ, ಸೇವೆಗಳು, ಉತ್ಪನ್ನಗಳು, ಪ್ರಸ್ತುತ ಮಾರುಕಟ್ಟೆ ಸ್ಥಿತಿ ಹಾಗೂ ಅದರ ಗುರಿಗಳ ಬಗ್ಗೆ ಅರಿವು ಇರಲಿ. ಇದು ಕಂಪನಿಯ ಬಗ್ಗೆ ನಿಮಗಿರುವ ಆಸಕ್ತಿ ಮತ್ತು ಪೂರ್ವ ಸಿದ್ಧತೆಯನ್ನು ತೋರಿಸುತ್ತದೆ.

ಸಮಯಪಾಲನೆಗೆ ಮೊದಲ ಆದ್ಯತೆ ನೀಡಿ:

ಸಮಯಪಾಲನೆ ಎಂಬುದು ನಿಮ್ಮ ವೃತ್ತಿಪರತೆಯನ್ನು ಅಳೆಯುವ ಮೊದಲ ಮಾನದಂಡ. ಸಂದರ್ಶನದ ಸ್ಥಳಕ್ಕೆ ಕನಿಷ್ಠ 10 ರಿಂದ 15 ನಿಮಿಷಗಳ ಮುಂಚಿತವಾಗಿಯೇ ತಲುಪುವಂತೆ ಯೋಜನೆ ರೂಪಿಸಿ. ತಡವಾಗಿ ಆಗಮಿಸುವುದು ನಿಮ್ಮ ಬಗ್ಗೆ ಆರಂಭದಲ್ಲೇ ನಕಾರಾತ್ಮಕ ಭಾವನೆ ಮೂಡಿಸುತ್ತದೆ.

ಅಚ್ಚುಕಟ್ಟಾದ ಹಾಗೂ ಔಪಚಾರಿಕ ಉಡುಗೆ (Formal Dress Code):

ನಿಮ್ಮ ಉಡುಪು ನಿಮ್ಮ ವ್ಯಕ್ತಿತ್ವದ ಮೊದಲ ಪ್ರಭಾವ ಬೀರುತ್ತದೆ. ತುಂಬಾ ಕ್ಯಾಶುವಲ್ ಅಥವಾ ಇಸ್ತ್ರಿ ಮಾಡದ ಉಡುಪುಗಳನ್ನು ತೊಡಬೇಡಿ. ಬದಲಾಗಿ ಸ್ವಚ್ಛ, ಅಚ್ಚುಕಟ್ಟಾದ ಹಾಗೂ ಕಂಪನಿಯ ವಾತಾವರಣಕ್ಕೆ ಹೊಂದುವಂತಹ ಫರ್ಮಲ್​​ ಉಡುಪು ಧರಿಸಿ.

ರೆಸ್ಯೂಮ್ (Resume) ಮತ್ತೊಮ್ಮೆ ಪರಿಶೀಲಿಸಿ:

ನಿಮ್ಮ ರೆಸ್ಯೂಮ್‌ನಲ್ಲಿ ನೀವು ಉಲ್ಲೇಖಿಸಿರುವ ಶಿಕ್ಷಣ, ಕಾರ್ಯಾನುಭವ, ಕೌಶಲ್ಯಗಳು ಅಥವಾ ಸಾಧನೆಗಳ ಬಗ್ಗೆ ಸಂದರ್ಶಕರು ಯಾವುದೇ ಪ್ರಶ್ನೆ ಕೇಳಬಹುದು. ಆದ್ದರಿಂದ ಸಂದರ್ಶನಕ್ಕೆ ತೆರಳುವ ಮುನ್ನ ನಿಮ್ಮ ರೆಸ್ಯೂಮ್ ಅನ್ನು ಒಮ್ಮೆ ಕೂಲಂಕುಷವಾಗಿ ಓದಿ ಸ್ಪಷ್ಟತೆ ಕಾಯ್ದುಕೊಳ್ಳಿ.

ಮೊಬೈಲ್ ಫೋನ್ ಸೈಲೆಂಟ್‌ನಲ್ಲಿ ಇರಲಿ:

ಸಂದರ್ಶನ ನಡೆಯುತ್ತಿರುವಾಗ ಮೊಬೈಲ್ ಫೋನ್ ರಿಂಗ್ ಆಗುವುದು ಅಥವಾ ನಿರಂತರ ನೋಟಿಫಿಕೇಶನ್‌ಗಳು ಬರುವುದು ಅತ್ಯಂತ ಕೆಟ್ಟ ಪ್ರಭಾವ ಬೀರುತ್ತದೆ. ಆದ್ದರಿಂದ ಸಂದರ್ಶನದ ಕೊಠಡಿಗೆ ಹೋಗುವ ಮುನ್ನ ಫೋನ್ ಅನ್ನು ಸೈಲೆಂಟ್ ಮೋಡ್‌ಗೆ ಹಾಕಿ ಅಥವಾ ಸ್ವಿಚ್ ಆಫ್ ಮಾಡಿ.

ಸಿಂಪಲ್​ ಸಲಹೆ:

ಸಂದರ್ಶನದ ಹಿಂದಿನ ರಾತ್ರಿ ಚೆನ್ನಾಗಿ ನಿದ್ರೆ ಮಾಡಿ:

ಆತಂಕದಿಂದ ನಿದ್ರೆ ಕೆಟ್ಟರೆ ಸಂದರ್ಶನದ ಸಮಯದಲ್ಲಿ ಆಯಾಸ, ಏಕಾಗ್ರತೆಯ ಕೊರತೆ ಹಾಗೂ ಮುಖದಲ್ಲಿ ಆತಂಕ ಎದ್ದು ಕಾಣುತ್ತದೆ. ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಪೂರ್ಣ ನಿದ್ರೆ ಮಾಡಿ ಪ್ರಶಾಂತ ಮನಸ್ಸಿನಿಂದ ತೆರಳಿ.

ಸಾಮಾನ್ಯ ಪ್ರಶ್ನೆಗಳಿಗೆ ಮುಂಚಿತವಾಗಿ ಸಿದ್ಧರಾಗಿ:

“ನಿಮ್ಮ ಬಗ್ಗೆ ವಿವರಿಸಿ”, “ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?”, “ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಏಕೆ ಬಯಸುತ್ತೀರಿ?” ಎಂಬಂತಹ ಸಾಮಾನ್ಯ ಪ್ರಶ್ನೆಗಳು ಬಹುತೇಕ ಎಲ್ಲ ಸಂದರ್ಶನಗಳಲ್ಲೂ ಇರುತ್ತವೆ. ಇಂತಹ ಪ್ರಶ್ನೆಗಳಿಗೆ ನೇರ, ಸ್ಪಷ್ಟ ಮತ್ತು ಆತ್ಮವಿಶ್ವಾಸದ ಉತ್ತರ ನೀಡಲು ಅಭ್ಯಾಸ ಮಾಡಿ.

ಹಿಂದಿನ ಕಂಪನಿ ಅಥವಾ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ:

ಸಂದರ್ಶನದಲ್ಲಿ ನಿಮ್ಮ ಹಳೆಯ ಕಂಪನಿ, ಬಾಸ್ ಅಥವಾ ಸಹೋದ್ಯೋಗಿಗಳ ಬಗ್ಗೆ ಎಂದಿಗೂ ನಕಾರಾತ್ಮಕವಾಗಿ ಮಾತನಾಡಬೇಡಿ. ಹಳೆಯ ಅನುಭವ ಏನೇ ಇರಲಿ, ಅದನ್ನು ವೃತ್ತಿಪರವಾಗಿ ಮತ್ತು ಸಕಾರಾತ್ಮಕವಾಗಿ ಹಂಚಿಕೊಳ್ಳುವುದು ನಿಮ್ಮ ಪ್ರಬುದ್ಧ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತದೆ.

ಆತ್ಮವಿಶ್ವಾಸ ಮತ್ತು Body Language:

ಸಂದರ್ಶಕರ ಕಣ್ಣಿಗೆ ಕಣ್ಣು ನೋಡಿ ಮಾತನಾಡುವುದು, ಮುಖದಲ್ಲಿ ಸಣ್ಣ ಮುಗುಳುನಗು ಹಾಗೂ ಆತ್ಮವಿಶ್ವಾಸದ ಮಾತುಗಳು ನಿಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತವೆ. ಅತಿಯಾದ ಆತಂಕ ಅಥವಾ ನಿಮ್ಮನ್ನು ನೀವೇ ಕಡಿಮೆ ಅಂದಾಜು ಮಾಡಿಕೊಳ್ಳುವುದು ಸೂಕ್ತವಲ್ಲ.

ಕೊನೆಯಲ್ಲಿ ನೀವು ಕೂಡ ಪ್ರಶ್ನೆಗಳನ್ನು ಕೇಳಿ:

ಸಂದರ್ಶನದ ಕೊನೆಯಲ್ಲಿ “ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?” ಎಂದು ಕೇಳಿದಾಗ “ಇಲ್ಲ” ಎನ್ನಬೇಡಿ. ಕೆಲಸದ ಜವಾಬ್ದಾರಿಗಳು, ಸಂಸ್ಥೆಯ ತಂಡದ ಕಾರ್ಯವೈಖರಿ ಅಥವಾ ಬೆಳವಣಿಗೆಯ ಅವಕಾಶಗಳ ಬಗ್ಗೆ 1ರಿಂದ 2 ಸೂಕ್ತ ಪ್ರಶ್ನೆಗಳನ್ನು ಕೇಳುವುದು ಉದ್ಯೋಗದ ಮೇಲಿನ ನಿಮ್ಮ ಗಂಭೀರ ಆಸಕ್ತಿಯನ್ನು ತೋರಿಸುತ್ತದೆ.

ಯಶಸ್ಸಿಗೆ ಸರಿಯಾದ ಸಿದ್ಧತೆಯೇ ಗುಟ್ಟು:

ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಕೇವಲ ನಿಮ್ಮ ಶೈಕ್ಷಣಿಕ ಅಥವಾ ತಾಂತ್ರಿಕ ಕೌಶಲ್ಯಗಳಷ್ಟೇ ಸಾಕಾಗುವುದಿಲ್ಲ. ಉತ್ತಮ ಸಂವಹನ ಕೌಶಲ್ಯ, ಸಮಯಪಾಲನೆ, ವೃತ್ತಿಪರ ವರ್ತನೆ ಮತ್ತು ಸರಿಯಾದ ಪೂರ್ವ ಸಿದ್ಧತೆಯೇ ನಿಮ್ಮನ್ನು ಇತರ ಸ್ಪರ್ಧಿಗಳಿಗಿಂತ ಭಿನ್ನವಾಗಿ ನಿಲ್ಲಿಸುತ್ತವೆ. ಈ ಸರಳ ಸಲಹೆಗಳನ್ನು ಪಾಲಿಸಿ, ನಿಮ್ಮ ಕನಸಿನ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ!

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ನಿರ್ಭಯವಾಗಿ ಕರ್ತವ್ಯ ನಿರ್ವಹಿಸಿ, ಜವಾಬ್ದಾರಿ ನನ್ನದು, ಪೆಲೆಟ್ ಗನ್ ವಿವಾದದ ನಡುವೆ ಸಿಬ್ಬಂದಿಗೆ ಧೈರ್ಯ ತುಂಬಿದ ಸಿಆರ್​ಪಿಎಫ್ ಮುಖ್ಯಸ್ಥ – Kannada News | CRPF Chief Assures Personnel of Full Support Amid Crowd Control Debate

ನವದೆಹಲಿ, ಜುಲೈ 30: ದೆಹಲಿಯಲ್ಲಿ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪ ಭಾರಿ ರಾಜಕೀಯ ಕಾಡ್ಗಿಚ್ಚು ಹೊತ್ತಿಸಿರುವ ಬೆನ್ನಲ್ಲೇ, ಸಿಆರ್‌ಪಿಎಫ್ (CRPF) ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ (ಜಿ.ಪಿ.) ಸಿಂಗ್ ಅವರು ತಮ್ಮ ಸಿಬ್ಬಂದಿಯ ಬೆನ್ನಿಗೆ ನಿಂತಿದ್ದಾರೆ. ಸಾರ್ವಜನಿಕ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಾಗ ನೀವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಾನೇ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಯಾವುದೇ ಭಯವಿಲ್ಲದೆ ನಿಮ್ಮ ಕರ್ತವ್ಯವನ್ನು ಮುಂದುವರೆಸಿ ಎಂದು ಅವರು ಪಡೆಗಳಿಗೆ ಕರೆ ನೀಡಿದ್ದಾರೆ.

ಸೋಮವಾರ ನಡೆದ ಸಿಆರ್‌ಪಿಎಫ್ ಸಂಸ್ಥಾಪನಾ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಜಿ.ಪಿ. ಸಿಂಗ್, “ಅದು ಕಾರ್ಯಾಚರಣೆಯ ಬೆಟಾಲಿಯನ್ ಆಗಿರಲಿ ಅಥವಾ ಕಾನೂನು ಸುವ್ಯವಸ್ಥೆ ಕಾಯುವ ಘಟಕವಾಗಿರಲಿ, ದೇಶ ಮತ್ತು ಪಡೆಯ ಹಿತಾಸಕ್ತಿಗಾಗಿ ನೀವು ನಿಯಮಾನುಸಾರ ಕೈಗೊಳ್ಳುವ ಪ್ರತಿಯೊಂದು ಕ್ರಮಕ್ಕೂ ಮಹಾನಿರ್ದೇಶಕನಾಗಿ (DG) ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಯಾರೂ ಅಂಜಬೇಕಾಗಿಲ್ಲ” ಎಂದು ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಪ್ರತಿಭಟನಾ ನಿರತ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತು ಆರ್‌ಎಎಫ್ ಸಿಬ್ಬಂದಿ ಪೆಲೆಟ್ ಗನ್‌ಗಳನ್ನು ಹಾರಿಸಿದ್ದಾರೆ. ಅಲ್ಲದೆ, ವಿದ್ಯುತ್ ಚಾರ್ಜ್ ಮಾಡಿದ ಲಾಠಿ ಹಾಗೂ ಕಬ್ಬಿಣದ ಮೊಳೆಗಳನ್ನು ಜೋಡಿಸಲಾಗಿದ್ದ ಆಘಾತಕಾರಿ ಲಾಠಿಗಳನ್ನು ಬಳಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದರು.

ಮತ್ತಷ್ಟು ಓದಿ:
ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್‌ಗಳು ಪತ್ತೆ: ದೆಹಲಿ ಪೊಲೀಸರಿಂದ ಕಾರ್ಯಾಚರಣೆ

ಕ್ಷಿಪ್ರ ಕಾರ್ಯಪಡೆ ಎಂಬುದು ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರತ್ಯೇಕ ವಿಭಾಗವಾಗಿದ್ದು, ಗಲಭೆ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ತರಬೇತಿ ಪಡೆದಿರುತ್ತದೆ. ಜುಲೈ 20 ರಂದು ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಭಾರಿ ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರು.

ಯಾವುದೇ ಪ್ರಮುಖ ಗಲಭೆ ಅಥವಾ ಸಾರ್ವಜನಿಕ ಅಶಾಂತಿಯನ್ನು ಹತೋಟಿಗೆ ತಂದ ನಂತರ, ಸಿಬ್ಬಂದಿಯ ಪ್ರತಿಕ್ರಿಯೆ ಮತ್ತು ಬಲಪ್ರಯೋಗದ ಪ್ರಮಾಣ ಸರಿಯಾಗಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡುವುದು ಸಿಆರ್‌ಪಿಎಫ್‌ನ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಭಾಗವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಟ್ರೈಲರ್ ಬಿಡುಗಡೆ ಆದರೆ ಟ್ರೆಂಡ್ ಆಗುತ್ತಿರುವುದು ಪ್ರಭಾಸ್, ಏಕೆ? – Kannada News | Ramayana movie trailer released but Prabhas’s Adipurush is trending

ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಟ್ರೈಲರ್ ನೋಡಿದವರೆಲ್ಲ, ಭಾರತದ ಈ ವರೆಗಿನ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಸಿನಿಮಾ ಇದೆಂದು ಕೊಂಡಾಡುತ್ತಿದ್ದಾರೆ. ವಿಎಫ್​​ಎಕ್ಸ್, ಗ್ರಾಫಿಕ್ಸ್ ಅಂತೂ ಅದ್ಭುತವಾಗಿವೆ. ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಟ್ರೈಲರ್​​ನ ಕೇಂದ್ರವಾಗಿದ್ದರು ಮೂವರೂ ಸಹ ಸಖತ್ ಗಮನ ಸೆಳೆದಿದ್ದಾರೆ. ಅದರಲ್ಲೂ ಯಶ್ ಅಂತೂ ಟ್ರೈಲರ್​​ ನಲ್ಲಿ ಅಬ್ಬರಿಸಿಬಿಟ್ಟಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಪ್ರಭಾಸ್ ಟ್ರೆಂಡಿಂಗ್​​ನಲ್ಲಿದ್ದಾರೆ.

‘ರಾಮಾಯಣ’ ಸಿನಿಮಾ ಟ್ರೈಲರ್ ಬಿಡುಗಡೆ ಆದ ಬಳಿಕ ಅಚಾನಕ್ಕಾಗಿ ಪ್ರಭಾಸ್ ಟ್ರೆಂಡಿಂಗ್​​ಗೆ ಬಂದಿದ್ದಾರೆ. ಇದಕ್ಕೆ ಕಾರಣ ‘ಆದಿಪುರಷ್’ ಸಿನಿಮಾ. ಪ್ರಭಾಸ್ ನಟಿಸಿದ್ದ ‘ಆದಿಪುರುಷ್’ ಸಿನಿಮಾ ಸಹ ರಾಮಾಯಣ ಕತೆಯನ್ನೇ ಆಧರಿಸಿತ್ತು. ಆ ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದರು. ಸಿನಿಮಾ 2023 ರಲ್ಲಿ ರಿಲೀಸ್ ಆಗಿತ್ತು. ಆದರೆ ಬಾಕ್ಸ್ ಆಫೀಸ್​​​ನಲ್ಲಿ ಹೀನಾಯವಾಗಿ ಸೋತಿತು. ಮಾತ್ರವಲ್ಲದೆ ತೀವ್ರ ಟೀಕೆ, ವಿಮರ್ಶೆಗೆ ಮತ್ತು ವಿವಾದಕ್ಕೆ ಸಹ ಗುರಿ ಆಗಿತ್ತು. ಈಗ ‘ರಾಮಾಯಣ’ ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ‘ಆದಿಪುರುಷ್’ ಸಹ ಟ್ರೆಂಡಿಂಗ್​​ಗೆ ಬಂದಿದೆ. ಆದರೆ ನೆಗಟಿವ್ ಕಾರಣಕ್ಕೆ.

‘ಆದಿಪುರುಷ್’ ಸಿನಿಮಾದ ಟ್ರೈಲರ್ ರಿಲೀಸ್ ಆದಾಗ ಕಳಪೆ ಗುಣಮಟ್ಟದ ವಿಎಫ್​​ಎಕ್ಸ್, ಗ್ರಾಫಿಕ್ಸ್​​ನಿಂದ ತೀವ್ರ ಟೀಕೆಗೆ ಗುರಿ ಆಗಿತ್ತು. ರಾವಣ ಬಾವುಲಿಯ ಮೇಲೆ ಬರುವ ದೃಶ್ಯವೊಂದನ್ನು ಟ್ರೈಲರ್​​ನಲ್ಲಿ ಸೇರಿಸಲಾಗಿತ್ತು. ಅದಂತೂ ಭಾರಿ ಟಿಕೆಗೆ ಗುರಿ ಆಗಿತ್ತು. ಜೊತೆಗೆ ರಾವಣನ ಹತ್ತು ತಲೆಯ ಗ್ರಾಫಿಕ್ಸ್ ಸಹ ಬಹಳ ಕೆಟ್ಟದಾಗಿತ್ತು. ಪ್ರಭಾಸ ಲುಕ್ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್​​ನ ಗುಣಮಟ್ಟದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ‘ಆದಿಪುರುಷ್’ ಅನ್ನು ಟೀಕೆ ಮಾಡುತ್ತಿದ್ದಾರೆ. ಕೆಲವರಂತೂ ‘ಆದಿಪುರುಷ್’ ಸಿನಿಮಾ ಅಷ್ಟು ಕೆಟ್ಟ ವಿಎಫ್​​ಎಕ್ಸ್​ ಹೊಂದಿ, ಬಿಡುಗಡೆ ಆಗಿದ್ದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ

ಇನ್ನು ಕೆಲವರು ‘ರಾಮಾಯಣ’ ಟ್ರೈಲರ್ ಅನ್ನು ನೋಡಿ, ‘ಆದಿಪುರುಷ್’ ಸಿನಿಮಾದ ಟ್ರೈಲರ್​​ಗಿಂತಲೂ 1000 ಪಟ್ಟು ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಓಂ ರಾವತ್, ಇದನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಹಲವಾರು ಮಂದಿ ‘ರಾಮಾಯಣ’ ಟ್ರೈಲರ್ ಅನ್ನು ಮೆಚ್ಚಿಕೊಂಡು, ‘ಆದಿಪುರುಷ್’ ಅನ್ನು ಟ್ರೋಲ್ ಮಾಡಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತಾದೇವಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು, ಇವರು ಹಾಲಿವುಡ್​​ನ ಪ್ರಖ್ಯಾತ ವಿಎಫ್​​ಎಕ್ಸ್ ಸಂಸ್ಥೆ ಡಿಎನ್​​ಜಿಯ ಮಾಲೀಕರು ಸಹ. ಹಾಗಾಗಿ ಸಿನಿಮಾಕ್ಕೆ ವಿಶ್ವದರ್ಜೆಯ ಗುಣಮಟ್ಟದ ವಿಎಫ್​​ಎಕ್ಸ್ ಅಳವಡಿಸಲಾಗಿದೆ. ಸಿನಿಮಾ ಇದೇ ನವೆಂಬರ್​​ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಊರ್ವಶಿ ಪುತ್ರಿ ತೇಜಾಲಕ್ಷ್ಮಿ; ತೆರೆಮೇಲೆ ಒಂದಾದ ಅಮ್ಮ-ಮಗಳು – Kannada News | Veteran Actress Urvashi’s Daughter Teja Lakshmi To Make Her Kannada Debut With Bully

ಊರ್ವಶಿ ಹಾಗೂ ಅವರ ಮಗಳು ತೇಜಾಲಕ್ಷ್ಮಿ

ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು ನಟಿ ಊರ್ವಶಿ (Urvashi). 1984ರಲ್ಲಿ ಬಂದ ರಾಜ್​​ಕುಮಾರ್ ನಟನೆಯ ‘ಶ್ರಾವಣಬಂತು’ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ಸಾಲು ಸಾಲು ಕನ್ನಡ ಸಿನಿಮಾ ಮಾಡಿದರು. ‘ಹಬ್ಬ’, ‘ರಾಮ ಶ್ಯಾಮ ಭಾಮ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಊರ್ವಶಿ ಮತ್ತೊಮ್ಮೆ ಚಂದನವನಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ಅವರು ತಮ್ಮ ಮಗಳನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ವಿಶೇಷ.

ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ, ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ‘ಬುಲ್ಲಿ’ ಸಿನಿಮಾ ಮೂಲಕ ಊರ್ವಶಿ ಅವರ ಪುತ್ರಿ ತೇಜಾಲಕ್ಷ್ಮಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ತಾಯಿ-ಮಗಳ ಮೊದಲ ಆನ್‌ಸ್ಕ್ರೀನ್ ಜುಗಲ್‌ಬಂದಿ

ನಟಿ ಊರ್ವಶಿ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. ಇದು ಅವರ 729ನೇ ಸಿನಿಮಾ! ಇದರಲ್ಲಿ ಅವರು ನಾಯಕ ಭುವನ್ ಪೊನ್ನಣ್ಣ ಅವರ ತಾಯಿ ಯಶೋದಮ್ಮ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲೇ ಓದಿ ಬೆಳೆದು, ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತೇಜಾಲಕ್ಷ್ಮಿ ಈಗಾಗಲೇ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಾಯಿ-ಮಗಳು ಇಬ್ಬರೂ ಒಟ್ಟಾಗಿ ತೆರೇ ಮೇಲೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಅದೂ ಕೂಡ ಕನ್ನಡ ಚಿತ್ರದ ಮೂಲಕ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ: ‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ

ರಾಜ್​​ಕುಮಾರ್ ನೆನೆದ ಊರ್ವಶಿ

ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿರುವ ನಟಿ ಊರ್ವಶಿ, ‘ನನಗೆ ಕನ್ನಡ ಚಿತ್ರರಂಗ ಹಾಗೂ ಇಲ್ಲಿನ ಪ್ರೇಕ್ಷಕರ ಜೊತೆಗೆ ಒಳ್ಳೆಯ ಬಾಂಧವ್ಯವಿದೆ. ಡಾ. ರಾಜ್‌ಕುಮಾರ್ ಅವರಂತಹ ಮಹಾನ್ ನಟರೊಂದಿಗೆ ನಟಿಸಿದ ಹೆಮ್ಮೆ ನನಗಿದೆ. ಹಲವು ವರ್ಷಗಳ ನಂತರ ಒಳ್ಳೆಯ ಕಥೆ ಸಿಕ್ಕಿದ್ದರಿಂದ ‘ಬುಲ್ಲಿ’ ಚಿತ್ರದ ಮೂಲಕ ಮರಳಿ ಬಂದಿದ್ದೇನೆ. ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೆ ದೊಡ್ಡ ನಷ್ಟವಾಗುತ್ತಿತ್ತು ಅನಿಸುತ್ತಿದೆ. ನನ್ನ ಮಗಳಿಗೂ ಕನ್ನಡದಲ್ಲೇ ಮೊದಲ ಬಾರಿಗೆ ನನ್ನೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷ ತಂದಿದೆ’ ಎಂದು ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರದ 18 ದಿನಗಳ ಶೂಟಿಂಗ್ ಮುಕ್ತಾಯಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Kanwar Yatra 2026: ಕನ್ವರ್ ಯಾತ್ರೆ : ಉತ್ತರ ಭಾರತದಲ್ಲಿ ಸಂಚಾರ ಬದಲಾವಣೆ, ವೇಳಾಪಟ್ಟಿ ಮತ್ತು ಪ್ರಯಾಣ ಮಾರ್ಗದರ್ಶಿ – Kannada News | Kanwar Yatra 2026 Begins: Massive Traffic Diversions Across North India Till August 11

ನವದೆಹಲಿ, ಜುಲೈ 30: ಪವಿತ್ರ ಶ್ರಾವಣ ಮಾಸದ ಅಂಗವಾಗಿ ವಾರ್ಷಿಕ ‘ಕನ್ವರ್ ಯಾತ್ರೆ’ ಗುರುವಾರ ಬೆಳಿಗ್ಗೆಯಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಶ್ರಾವಣ ಮಾಸದ ಆಗಮನದೊಂದಿಗೆ ಉತ್ತರ ಭಾರತದಲ್ಲಿ ವಾರ್ಷಿಕ ಪವಿತ್ರ ‘ಕನ್ವರ್ ಯಾತ್ರೆ’ಆರಂಭವಾಗಿದೆ. ಕೇಸರಿ ವಸ್ತ್ರಧಾರಿಗಳಾದ ಭಕ್ತರು ತಮ್ಮ ಹೆಗಲ ಮೇಲೆ ಬಿದಿರಿನ ‘ಕನ್ವರ್’ (ಕಲಶ) ಹೊತ್ತು, ಗಂಗಾಜಲ ತುಂಬಿಕೊಂಡು ಅಚಲ ನಂಬಿಕೆಯೊಂದಿಗೆ ತಮ್ಮ ಊರುಗಳತ್ತ ಸುದೀರ್ಘ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಈ ಯಾತ್ರೆಯು ಆಗಸ್ಟ್ 11, 2026 ರವರೆಗೆ ಮುಂದುವರೆಯಲಿದೆ.

ಕೋಟ್ಯಂತರ ಭಕ್ತರು ಹರಿದ್ವಾರಕ್ಕೆ ಆಗಮಿಸುವ ನಿರೀಕ್ಷೆಯಿರುವುದರಿಂದ ಉತ್ತರಾಖಂಡ ಪೊಲೀಸ್ ಹಾಗೂ ಆಡಳಿತ ಮಂಡಳಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಇಡೀ ಮೇಳ ಪ್ರದೇಶವನ್ನು 18 ಸೂಪರ್ ಝೋನ್, 40 ಝೋನ್ ಹಾಗೂ 141 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ. ಕನ್ವರ್ ಟ್ರ್ಯಾಕ್, ರಾಷ್ಟ್ರೀಯ ಹೆದ್ದಾರಿಗಳು, ದೇವಾಲಯಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 6,000 ಪೊಲೀಸರು ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಮಾರ್ಗಗಳಲ್ಲಿ ಸಿಸಿಟಿವಿ (CCTV) ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ 24 ಗಂಟೆಯೂ ಹೈಟೆಕ್ ಕಣ್ಣಿಡಲಾಗಿದೆ.

ಯಾತ್ರೆಯ ಹಿನ್ನೆಲೆಯಲ್ಲಿ ಮಾತನಾಡಿದ ಯೋಗ ಗುರು ಸ್ವಾಮಿ ರಾಮ್‌ದೇವ್, ಭಕ್ತರು ಸನ್ಮಾರ್ಗದಲ್ಲಿ ಯಾತ್ರೆ ನಡೆಸುವಂತೆ ಮನವಿ ಮಾಡಿದ್ದಾರೆ. ಶ್ರಾವಣ ಮಾಸವು ಅತ್ಯಂತ ಪವಿತ್ರವಾದದ್ದು. ಆದರೆ ಕೆಲವರು ಯಾತ್ರೆಯ ಸಮಯದಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಗದ್ದಲ ಎಬ್ಬಿಸುತ್ತಾರೆ. ಇದು ಶಿವನಿಗೆ ಮತ್ತು ನಮ್ಮ ಸನಾತನ ಧರ್ಮಕ್ಕೆ ಮಾಡುವ ಅವಮಾನ. ಪ್ರತಿಯೊಬ್ಬ ಕನ್ವರಿಯ ಮುಖದಲ್ಲೂ ಶಿವನ ಭಕ್ತಿ ಇರಬೇಕೇ ಹೊರತು ಶಿಸ್ತು ಮೀರುವ ನಡವಳಿಕೆ ಇರಬಾರದು” ಎಂದು ಅವರು ಕರೆ ನೀಡಿದ್ದಾರೆ.

ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ ಹಾಗೂ ಬಿಹಾರದ ಪ್ರಮುಖ ಹೆದ್ದಾರಿಗಳಲ್ಲಿ ಕೇಸರಿ ವಸ್ತ್ರಧಾರಿಗಳಾದ ಲಕ್ಷಾಂತರ ಶಿವಭಕ್ತರು ‘ಕನ್ವರ್​’ಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದು, ಮುಂದಿನ ಎರಡು ವಾರಗಳ ಕಾಲ ಈ ಭಾಗದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗಲಿವೆ.

ಶಿವಭಕ್ತರು ಹರಿದ್ವಾರ, ಗಂಗೋತ್ರಿ ಅಥವಾ ಸುಲ್ತಾನ್‌ಗಂಜ್‌ಗಳಿಗೆ ತೆರಳಿ ಪವಿತ್ರ ಗಂಗಾ ನದಿಯ ನೀರನ್ನು ‘ಕಲಶ’ಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಈ ಪಾತ್ರೆಗಳನ್ನು ಬಿದಿರಿನ ಕಂಬದ ಎರಡೂ ಬದಿಗಳಲ್ಲಿ ತೂಗುಹಾಕಿ, ನೆಲಕ್ಕೆ ತಾಗಿಸದಂತೆ ನೂರಾರು ಕಿಲೋಮೀಟರ್ ಬರಿಗಾಲಿನಲ್ಲಿ ನಡೆದು ತಮ್ಮ ಊರುಗಳ ಶಿವಲಿಂಗಕ್ಕೆ ಅರ್ಪಿಸುವುದು ಈ ವ್ರತದ ಕಠಿಣ ನಿಯಮವಾಗಿದೆ.

ಪ್ರಮುಖ ಸಂಚಾರ ಮಾರ್ಗಗಳು
ಹರಿದ್ವಾರದ ‘ಹರ್ ಕೀ ಪೌರಿ’ಯಿಂದ ಗಂಗಾಜಲ ಪಡೆದು ದೆಹಲಿ, ಪಶ್ಚಿಮ ಯುಪಿ, ಹರಿಯಾಣ ಮತ್ತು ರಾಜಸ್ಥಾನದತ್ತ ಸಾಗುವ ದೆಹಲಿ-ಹರಿದ್ವಾರ (NH-34) ಹೆದ್ದಾರಿ ಅತ್ಯಂತ ಜನನಿಬಿಡವಾಗಿರುತ್ತದೆ. ಬಿಹಾರದ ಸುಲ್ತಾನ್‌ಗಂಜ್‌ನಿಂದ ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ವೈದ್ಯನಾಥ ಧಾಮದವರೆಗೆ ಸುಮಾರು 105 ಕಿ.ಮೀ. ನಡೆದು ಸಾಗುವ ಮಾರ್ಗ. ಯಾತ್ರಿಕರ ಸುರಕ್ಷತೆಗಾಗಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಮುಖ್ಯ ರಸ್ತೆಗಳನ್ನು ಪಾದಚಾರಿಗಳಿಗಾಗಿ ಮೀಸಲಿಡಲಾಗಿದ್ದು, ಸರಕು ಸಾಗಣೆ ಟ್ರಕ್‌ಗಳನ್ನು ಪರ್ಯಾಯ ಮಾರ್ಗಗಳಿವೆ.

ನೀವು ಆಗಸ್ಟ್ ಮೊದಲ ವಾರದಲ್ಲಿ ಉತ್ತರಾಖಂಡ, ಋಷಿಕೇಶ ಅಥವಾ ಡೆಹ್ರಾಡೂನ್‌ಗೆ ರಸ್ತೆ ಪ್ರಯಾಣ ಯೋಜಿಸುತ್ತಿದ್ದರೆ ಭಾರಿ ವಿಳಂಬ ಎದುರಾಗಲಿದೆ.
ತುರ್ತು ಪ್ರಯಾಣವಿದ್ದರೆ ಕಾರುಗಳ ಬದಲಿಗೆ ರೈಲು ಅಥವಾ ವಿಮಾನದ ಸೇವೆ ಬಳಸುವುದು ಉತ್ತಮ.ರಸ್ತೆ ಸಂಚಾರವು ಆಗಸ್ಟ್ 13 ರ ನಂತರ ಸಂಪೂರ್ಣವಾಗಿ ಯಥಾಸ್ಥಿತಿಗೆ ಬರಲಿದೆ.

ಸಮಾಜ ಸೇವೆ ಮತ್ತು ಭದ್ರತೆ
ಹೆದ್ದಾರಿಯ ಉದ್ದಕ್ಕೂ ಸ್ಥಳೀಯ ಗ್ರಾಮಸ್ಥರು ಹಾಗೂ ಸ್ವಯಂಸೇವಕರು ಉಚಿತ ಊಟ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವು ನೀಡುವ ‘ಸೇವಾ ಶಿಬಿರಗಳನ್ನು’ (Sewa Camps) ತೆರೆದಿದ್ದಾರೆ. ಭದ್ರತೆಗಾಗಿ ಪೊಲೀಸರು ಡ್ರೋನ್, ತಾತ್ಕಾಲಿಕ ಸಿಸಿಟಿವಿ ಮತ್ತು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:00 pm, Thu, 30 July 26

Source link

Exit mobile version