ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್

ಬುಲ್ಲಿ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಭುವನ್ ಪೊನ್ನಣ್ಣ ಅವರು ತಮ್ಮ ಪತ್ನಿ ಹರ್ಷಿಕಾ ಪೂಣಚ್ಚ ಅವರ ಸಿನಿಮಾ ನಿರ್ಮಾಣಕ್ಕೆ ನೀಡಿದ ಅಪಾರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಹರ್ಷಿಕಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರೂ, ಚಿತ್ರತಂಡಕ್ಕೆ ಶ್ರಮಿಸಿದ್ದಾರೆ ಎಂದು ಭುವನ್ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಹಾಸ್ಯಭರಿತವಾಗಿ ಮಧ್ಯಪ್ರವೇಶಿಸಿ, ಭುವನ್‌ರನ್ನು ತಮಾಷೆ ಮಾಡಿದರು. ‘ನೀವಿಬ್ಬರೂ ಮದುವೆ ಆಗಿದ್ದೀರಾ ಅಥವಾ ಇಟ್ಟುಕೊಂಡಿದ್ದೀರಾ’ ಎಂದು ಭುವನ್ ಅವರನ್ನು ಓಂ ಪ್ರಕಾಶ್ ಪ್ರಶ್ನೆ ಮಾಡಿದರು. ಪತಿ-ಪತ್ನಿ ಆಗಿದ್ದರೂ ಇಬ್ಬರ ಮಧ್ಯೆ ಥ್ಯಾಂಕ್ಸ್ ಏಕೆ ಎಂಬುದು ಓಂ ಪ್ರಕಾಶ್ ಪ್ರಶ್ನೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮತ್ತು ಊರ್ವಶಿ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧರ್ಮಸ್ಥಳ ಬಳಿ ಶವ ಹೂತ ಪ್ರಕರಣ: DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ! – Kannada News | Dharmasthala Skeleton Case: DNA Confirms Identity of Three Men, Know details of them here

ಆದಿಶೇಷ ನಾರಾಯಣ, ಕೃಷ್ಣಪ್ಪ, ಅಯ್ಯಪ್ಪImage Credit source: tv9

ಮಂಗಳೂರು, ಜುಲೈ 30: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (Dharmasthala Mass burial Case) ಮಹತ್ವದ ಬೆಳವಣಿಗೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ನಡೆಸಿದ ಉತ್ಖನನದ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೂವರ ಕುಟುಂಬಸ್ಥರಿಂದ ಸಂಗ್ರಹಿಸಿದ್ದ ಡಿಎನ್‌ಎ ಮಾದರಿಗಳನ್ನು ಅಸ್ಥಿಪಂಜರಗಳ ಡಿಎನ್‌ಎ ಜತೆ ಹೋಲಿಕೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಮೂರು ಅಸ್ಥಿಪಂಜರಗಳ ಡಿಎನ್‌ಎ ಕುಟುಂಬಸ್ಥರ ಮಾದರಿಗಳೊಂದಿಗೆ ಹೊಂದಾಣಿಕೆಯಾಗಿದೆ ಎಂದು ತಿಳಿದುಬಂದಿದೆ.

ಪತ್ತೆಯಾದವರು ಯಾರು?

ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವವರ ಪೈಕಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ (27) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಸೇರಿದ್ದಾರೆ. ಅಂದರೆ, ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ಪತ್ತೆಯಾದ ಮೂವರೂ ಪುರುಷರು ಎಂಬುದು ದೃಢಪಟ್ಟಿದೆ. ಇವರ ಪೈಕಿ ಅಯ್ಯಪ್ಪ ಮತ್ತು ಕೃಷ್ಣಪ್ಪ 70 ವರ್ಷ ಮೇಲ್ಪಟ್ಟವರಾಗಿದ್ದಾರೆ.

‘ಮಹಿಳೆಯರ ಅಸ್ಥಿಪಂಜರ’ ಆರೋಪಕ್ಕೆ ವ್ಯತಿರಿಕ್ತ ಬೆಳವಣಿಗೆ

ಧರ್ಮಸ್ಥಳದ ಆಸುಪಾಸಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿತ್ತು. ಆದರೆ ಎಸ್‌ಐಟಿ ಉತ್ಖನನದ ವೇಳೆ ಪತ್ತೆಯಾದ ಅಸ್ಥಿಪಂಜರಗಳ ಪೈಕಿ ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವ ಮೂವರೂ ಪುರುಷರು ಎಂಬುದು ಇದೀಗ ತಿಳಿದುಬಂದಿದೆ. ಜುಲೈ 15ರಂದು ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿದ್ದ ವರದಿಯಲ್ಲಿ ಅಸ್ಥಿಪಂಜರಗಳ ಗುರುತು ಪತ್ತೆ ಹಾಗೂ ಡಿಎನ್‌ಎ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಲಾಗಿದೆ.

ಮೂವರ ಕುಟುಂಬಸ್ಥರ ಡಿಎನ್‌ಎ ಮಾದರಿಗಳನ್ನು ಪಡೆದು ನಡೆಸಿದ ಪರೀಕ್ಷೆಯಲ್ಲಿ ಅಸ್ಥಿಪಂಜರಗಳೊಂದಿಗೆ ಹೊಂದಾಣಿಕೆ ಕಂಡುಬಂದಿದೆ. ಎಸ್‌ಐಟಿಗೆ ಮನವಿ ಸಲ್ಲಿಸಿದಲ್ಲಿ, ಸಂಬಂಧಪಟ್ಟ ಕುಟುಂಬಸ್ಥರಿಗೆ ಅಸ್ಥಿಪಂಜರಗಳನ್ನು ಪಡೆಯಲು ಅವಕಾಶ ನೀಡಬಹುದು ಎಂದು ತಿಳಿದುಬಂದಿದೆ.

ಮೂವರು ನಾಪತ್ತೆಯಾಗಿದ್ದು ಯಾವಾಗ, ಎಲ್ಲಿ?

ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವ ಕೊಡಗು ಜಿಲ್ಲೆಯ ಯು.ಬಿ. ಅಯ್ಯಪ್ಪ (70) ಅವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದರು. ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಈ ಸಂಬಂಧ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆದಿಶೇಷ ನಾರಾಯಣ (27) ಅವರು ಬೆಂಗಳೂರಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. 2013ರ ಅಕ್ಟೋಬರ್ 2ರಂದು ಮನೆಗೆ ವಾಪಸ್ ಬಂದು ಮೊಬೈಲ್ ಇಟ್ಟು ಬಳಿಕ ನಾಪತ್ತೆಯಾಗಿದ್ದರು. ಈ ಹಿಂದೆ ಪದೇಪದೆ ಮನೆ ಬಿಟ್ಟು ಹೋಗುತ್ತಿದ್ದ ಕಾರಣ, ಅವರು ಮರಳಿ ಬರುತ್ತಾರೆ ಎಂದು ಕುಟುಂಬಸ್ಥರು ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ.

ಇನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಅವರು ವಯಸ್ಸಿನ ಕಾರಣದಿಂದ ಮನೆಯಲ್ಲೇ ಇರುತ್ತಿದ್ದರು. 2024ರ ಅಕ್ಟೋಬರ್ 22ರಂದು ಏಕಾಏಕಿ ಮನೆಯಿಂದ ಹೊರಹೋದ ಅವರು ಬಳಿಕ ವಾಪಸ್ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಸಿಕ್ಕ 7 ಬುರುಡೆಗಳ ರಹಸ್ಯ ಪತ್ತೆಯೇ ಎಸ್​​ಐಟಿ ಅಧಿಕಾರಿಗಳಿಗೀಗ ಸವಾಲು

ಹೀಗೆ ಮೂವರ ನಾಪತ್ತೆ ಪ್ರಕರಣಗಳ ಹಿನ್ನೆಲೆ ಇದೀಗ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಡಿಎನ್‌ಎ ಜತೆ ಹೊಂದಾಣಿಕೆಯಾಗಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪ ಎಲ್ಲಿ ಎಂದು ಕೇಳ್ಬೇಡ, ಅಮ್ಮನನ್ನ ಚೆನ್ನಾಗಿ ನೋಡಿಕೋ, ಕ್ಯಾನ್ಸರ್​ನಿಂದ ಕಣ್ಮುಚ್ಚುವ ಮುನ್ನ ಮಗನಿಗೆ ಧೈರ್ಯ ತುಂಬಿದ ತಂದೆ – Kannada News | Dying Father’s Heartfelt Final Message to Son Goes Viral: Take Care of Mom

ನವದೆಹಲಿ, ಜುಲೈ 30: ಕ್ಯಾನ್ಸರ್(Cancer) ರೋಗದಿಂದ ಕಣ್ಮುಚ್ಚುವ ಕೆಲವೇ ಕ್ಷಣಗಳ ಮುನ್ನ, ತಂದೆಯೊಬ್ಬರು ತಮ್ಮ ಮುಗ್ದ ಮಗನಿಗೆ ಕೊನೆಯ ಉಪದೇಶ ನೀಡುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರನ್ನು ಕಣ್ಣೀರಿಡುವಂತೆ ಮಾಡಿದೆ. ವೋಕ್ ಎಮಿನೆಂಟ್ ಎಂಬ ಎಕ್ಸ್​​ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮಾಸ್ಕ್​ ಧರಿಸಿರುವ ತಂದೆಯೊಬ್ಬರು ತನ್ನ ಸಾವು ಹತ್ತಿರದಲ್ಲಿದೆ ಎಂದು ತಿಳಿದೂ ಅತ್ಯಂತ ಶಾಂತವಾಗಿ ಪಕ್ಕದಲ್ಲಿದ್ದ ತಮ್ಮ ಚಿಕ್ಕ ಮಗ ‘ಮಂತ್ರ’ನಿಗೆ ಧೈರ್ಯ ತುಂಬಿದ್ದಾನೆ. ತನ್ನ ಸಾವು ಮಗನ ಮುಗ್ಧ ಮನಸ್ಸಿನ ಮೇಲೆ ಆಘಾತ ಉಂಟುಮಾಡಬಾರದೆಂದು ಮೃದುವಾಗಿ ತಿಳಿಸಿ ಹೇಳಿದ್ದಾರೆ.

‘‘ಮಂತ್ರ, ನಾನು ನಿನ್ನ ಬಿಟ್ಟು ದೂರ ಹೋದರೆ ಅಮ್ಮನ ಮಾತು ಕೇಳು, ಹಠ ಮಾಡಬೇಡ, ನಿನ್ನ ಅಮ್ಮ ಮತ್ತು ಇಬ್ಬರು ಸಹೋದರಿಯರನ್ನು ಜವಾಬ್ದಾರಿಯಿಂದ ಚೆನ್ನಾಗಿ ನೋಡಿಕೋ. ‘ಅಪ್ಪ ಎಲ್ಲಿಗೆ ಹೋದರು?’ ಅಂತ ಯಾವತ್ತೂ ಕೇಳಬೇಡ. ನೀನು ನನ್ನನ್ನು ನೆನಪಿಸಿಕೊಂಡಾಗಲೆಲ್ಲಾ ನಾನು ನಿನ್ನ ಆಸುಪಾಸಿನಲ್ಲೇ ಇರುತ್ತೇನೆ” ಎಂದು ಹೇಳಿದ್ದಾರೆ. ತಾನಿಲ್ಲದಿದ್ದರೂ ಮಗ ಧೈರ್ಯವಾಗಿ, ಉತ್ಸಾಹದಿಂದ ಬದುಕಬೇಕು ಎಂದು ಭರವಸೆ ನೀಡುವ ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೊಗೆ ಸಾವಿರಾರು ಜನರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಎಂತಹ ವಿಧಿಯಾಟ, ತಂದೆಯ ಮಾತಿನ ಆಳ ಮತ್ತು ಗಂಭೀರತೆ ಅರಿಯದ ಆ ಮುಗ್ಧ ಮಗುವಿನ ಮುಖ ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ.

ಪೋಸ್ಟ್​

ಯಾವ ಕುಟುಂಬಕ್ಕೂ ಇಂತಹ  ಸಂದರ್ಭ ಬಾರದಿರಲಿ, ಆ ತಂದೆ ತನ್ನಿಲ್ಲದ ಮುಂದಿನ ಜೀವನಕ್ಕೆ ಮಗನನ್ನು ಸಿದ್ಧಪಡಿಸುತ್ತಿರುವ ರೀತಿ ಅತ್ಯಂತ ಕಠಿಣವಾದದ್ದು ಎಂದು ಕಂಬನಿ ಮಿಡಿದಿರುವ ನೆಟ್ಟಿಗರು, ಆ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ತಂದೆಯ ಮಾತಿನ ಆಳ ಮತ್ತು ಗಂಭೀರತೆ ಅರಿಯದ ಆ ಮುಗ್ಧ ಮಗುವಿನ ಮುಖ ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ.

ಆ ತಂದೆ ತನ್ನಿಲ್ಲದ ಮುಂದಿನ ಜೀವನಕ್ಕೆ ಮಗನನ್ನು ಸಿದ್ಧಪಡಿಸುತ್ತಿರುವ ರೀತಿ ಅತ್ಯಂತ ಕಠಿಣವಾದದ್ದು ಎಂದು ಕಂಬನಿ ಮಿಡಿದಿರುವ ನೆಟ್ಟಿಗರು, ಆ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ತನ್ನ ಸಾವು ಮಗನ ಮುಗ್ಧ ಮನಸ್ಸಿನ ಮೇಲೆ ಆಘಾತ ಉಂಟುಮಾಡಬಾರದೆಂದು ಮೃದುವಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: ಕ್ಯಾನ್ಸರ್​​ ಹೇಗೆ ಹರಡುತ್ತದೆ? ಸಂಶೋಧನೆಯಿಂದ ಬೆಳಕಿಗೆ ಬಂತು ಹೊಸ ವಿಚಾರ

ಈ ಘಟನೆಯು ಕೇವಲ ಒಂದು ಕುಟುಂಬದ ವೈಯಕ್ತಿಕ ದುಃಖವಾಗಿ ಉಳಿಯದೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಕುಟುಂಬಗಳಿಗೆ ಮಾನಸಿಕ ಬೆಂಬಲ ನೀಡುವ ಅಗತ್ಯವನ್ನು ಇಡೀ ಸಮಾಜಕ್ಕೆ ನೆನಪಿಸಿದೆ. ಜೀವಿತಾವಧಿಯ ಕೊನೆಯ ದಿನಗಳಲ್ಲಿ ಪ್ರೀತಿಪಾತ್ರರೊಂದಿಗೆ ಕಳೆಯುವ ಪ್ರತಿ ಕ್ಷಣವೂ ಎಷ್ಟು ಅಮೂಲ್ಯವಾದುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Palmistry: ಅಂಗೈಯಲ್ಲಿ ‘V’ ಆಕಾರದ ರೇಖೆ ಇದೆಯೇ? ಹಾಗಿದ್ದರೆ ನಿಮ್ಮ ಭವಿಷ್ಯದಲ್ಲಿ ಕಾದಿದೆ ಅನಿರೀಕ್ಷಿತ ಅದೃಷ್ಟ! – Kannada News | Vishnu Line on Palm: Your V Shape for Success, Wealth and Destiny Insight

ಅಂಗೈಯಲ್ಲಿ ‘V’ ಆಕಾರದ ರೇಖೆImage Credit source: youtube

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ (Palmistry) ಪ್ರತಿಯೊಂದು ರೇಖೆಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಅನೇಕ ಜನರು ತಮ್ಮ ಕೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯದ ಒಳನೋಟಗಳನ್ನು ಪಡೆಯಲು ಬಯಸುತ್ತಾರೆ. ಹಸ್ತದಲ್ಲಿರುವ ನಾನಾ ರೀತಿಯ ರೇಖೆಗಳಲ್ಲಿ ‘V’ ಆಕಾರದ ರೇಖೆ ಅತ್ಯಂತ ಪವಿತ್ರ ಹಾಗೂ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಈ ರೇಖೆಯನ್ನು ಸಾಮುದ್ರಿಕ ಶಾಸ್ತ್ರದಲ್ಲಿ “ವಿಷ್ಣು ರೇಖೆ” (Vishnu Line) ಎಂದೂ ಕರೆಯಲಾಗುತ್ತದೆ. ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯೇ? ಹಾಗಿದ್ದರೆ ಇದರ ಅರ್ಥ ಮತ್ತು ನಿಮ್ಮ ಜೀವನದ ಮೇಲಾಗುವ ಅದ್ಭುತ ಬದಲಾವಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

‘V’ ಆಕಾರದ ರೇಖೆ (ವಿಷ್ಣು ರೇಖೆ) ಎ ಎಲ್ಲಿದೆ?

ಸಾಮಾನ್ಯವಾಗಿ ಹೃದಯ ರೇಖೆಯು (Heart Line) ಗುರು ಪರ್ವತದ (ಆಂಗೂಷ್ಠದ ಪಕ್ಕದ ಬೆರಳು) ಕಡೆಗೆ ಸಾಗಿ, ಕೊನೆಯಲ್ಲಿ ಎರಡು ಭಾಗವಾಗಿ ಸೀಳಿದಾಗ ಇಂಗ್ಲಿಷ್‌ನ ‘V’ ಆಕಾರವನ್ನು ಪಡೆದುಕೊಳ್ಳುತ್ತದೆ. ಈ ರೀತಿ ಉಂಟಾಗುವ ಆಕಾರವನ್ನೇ ವಿಷ್ಣು ರೇಖೆ ಎಂದು ಕರೆಯಲಾಗುತ್ತದೆ. ಶ್ರೀಮಹಾ ವಿಷ್ಣುವಿನ ಕೃಪೆಗೆ ಪಾತ್ರರಾದವರ ಕೈಯಲ್ಲಿ ಮಾತ್ರ ಈ ವಿಶೇಷ ರೇಖೆ ಕಂಡುಬರುತ್ತದೆ ಎಂಬುದು ನಂಬಿಕೆ.

ವಿಷ್ಣು ರೇಖೆಯಿರುವವರ ಜೀವನದಲ್ಲಿ ನಡೆಯುವ ಪವಾಡಗಳು:

ಆರಂಭಿಕ ಹೋರಾಟ, ನಂತರ ಅನಿರೀಕ್ಷಿತ ತಿರುವು:

ಈ ರೇಖೆಯನ್ನು ಹೊಂದಿರುವವರ ಜೀವನವು ಆರಂಭದ ದಿನಗಳಲ್ಲಿ ಸುಲಭವಾಗಿರುವುದಿಲ್ಲ. ಇವರು ತಮ್ಮ ಬಾಲ್ಯ ಮತ್ತು ಯೌವನದಲ್ಲಿ ಅನೇಕ ಕಷ್ಟ, ನಷ್ಟ ಹಾಗೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ 30 ವರ್ಷಗಳ ನಂತರ ಇವರ ಜೀವನದಲ್ಲಿ ಅನಿರೀಕ್ಷಿತವಾದ ಧನಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಸ್ಥಗಿತಗೊಂಡಿದ್ದ ಕೆಲಸಗಳು ಇದ್ದಕ್ಕಿದ್ದಂತೆ ಸುಲಭವಾಗಿ ಪೂರ್ಣಗೊಳ್ಳತೊಡಗುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

35ರ ನಂತರ ಆರ್ಥಿಕ ಸ್ಥಿರತೆ ಮತ್ತು ಅಪಾರ ಸಂಪತ್ತು:

ಸ್ವಲ್ಪ ಸಮಯದವರೆಗೆ ಆರ್ಥಿಕ ಮುಗ್ಗಟ್ಟು ಅಥವಾ ಬಡತನದಿಂದ ಬಳಲುತ್ತಿದ್ದರೂ, 35 ವರ್ಷ ವಯಸ್ಸಿನ ನಂತರ ಇವರ ಅದೃಷ್ಟವೇ ಬದಲಾಗುತ್ತದೆ. ಇವರು ದೊಡ್ಡ ಮಟ್ಟದ ಆರ್ಥಿಕ ಪ್ರಗತಿಯನ್ನು ಕಾಣುತ್ತಾರೆ. ಗಳಿಸಿದ ಹಣವು ಸ್ಥಿರವಾಗಿ ಉಳಿಯುತ್ತದೆ ಮತ್ತು ಕುಟುಂಬದೊಂದಿಗೆ ಅತ್ಯಂತ ಸಂತೋಷ, ನೆಮ್ಮದಿಯ ಜೀವನ ನಡೆಸುತ್ತಾರೆ.

ಅಚಲ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ:

ಇವರು ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಹೆದರದೆ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಾರೆ. ಇವರಲ್ಲಿ ಅಡಗಿರುವ ಶಿಸ್ತು ಮತ್ತು ಕಠಿಣ ಪರಿಶ್ರಮವೇ ಇವರನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಾವಿಟ್ಟ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸು ಕಾಣುತ್ತಾ ಶ್ರೀಮಂತ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಗಮನಿಸಿ: ವಿಷ್ಣು ರೇಖೆ ಹೊಂದಿರುವವರು ಸದಾ ಸತ್ಯ, ಧರ್ಮ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗಬೇಕು. ಕೆಟ್ಟ ದಾರಿ ಅಥವಾ ಅಧರ್ಮದ ಕೆಲಸಗಳಲ್ಲಿ ತೊಡಗಿದರೆ ಈ ರೇಖೆಯ ಶುಭ ಫಲಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಅಜಿಂಕ್ಯ ರಹಾನೆ – Kannada News | Ajinkya Rahane announces retirement from international Cricket

ಭಾರತೀಯ ಕ್ರಿಕೆಟ್‌ನ ಅತ್ಯಂತ ಶಾಂತ, ಸಂಯಮ ಹಾಗೂ ನಂಬಿಕಸ್ಥ ಬ್ಯಾಟರ್‌ಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಅವರು ಇಂದು (ಜುಲೈ 30, 2026) ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ರಹಾನೆ,  ಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ. ನನ್ನನ್ನು ಇಂದು ಈ ಮಟ್ಟದ ವ್ಯಕ್ತಿಯನ್ನಾಗಿ ರೂಪಿಸಲು ಮೌಲ್ಯಯುತ ಕೊಡುಗೆ ನೀಡಿದ ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಮತ್ತು ಪೋಷಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ರಹಾನೆ ವೃತ್ತಿಜೀವನ:

ಭಾರತ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದ ರಹಾನೆ, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ದೇಶಕ್ಕಾಗಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂಕಿ-ಅಂಶಗಳು ಹೀಗಿವೆ:

ಮಾದರಿ ಪಂದ್ಯಗಳು ರನ್  ಸರಾಸರಿ ಶತಕ / ಅರ್ಧಶತಕ ಗರಿಷ್ಠ ಸ್ಕೋರ್
ಟೆಸ್ಟ್ 85 5,077  38.46 12 / 26 188
ಏಕದಿನ 90 2,962  35.26 3 / 24 111
ಟಿ20  20 375  20.83 0 / 1 61

ಐತಿಹಾಸಿಕ ಸಾಧನೆಗಳು:

  • ಮೆಲ್ಬೋರ್ನ್ ವೀರಾವೇಶ: 2020-21ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ, ಅಡಿಲೇಡ್ ಟೆಸ್ಟ್‌ನ ಹೀನಾಯ ಸೋಲಿನ ಬಳಿಕ ತಂಡ ಮುನ್ನಡೆಸಿದ ರಹಾನೆ, ಮೆಲ್ಬೋರ್ನ್‌ನಲ್ಲಿ ಶತಕ ಸಿಡಿಸಿ ಭಾರತ ಐತಿಹಾಸಿಕ ಗೆಲುವು ದಾಖಲಿಸಲು ಕಾರಣರಾದರು.
  • ಸೋಲದ ಸರದಾರ: ರಹಾನೆ ನಾಯಕತ್ವ ವಹಿಸಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋಲನ್ನೇ ಕಂಡಿಲ್ಲ. ಗಾಯಾಳುಗಳಿಂದ ಜರ್ಜರಿತವಾಗಿದ್ದ ಯುವ ಭಾರತ ತಂಡವನ್ನು ಮುನ್ನಡೆಸಿ ಆಸ್ಟ್ರೇಲಿಯಾ ನೆಲದಲ್ಲೇ ಸರಣಿ ಗೆದ್ದದ್ದು ಅವರ ಶ್ರೇಷ್ಠ ನಾಯಕತ್ವಕ್ಕೆ ಹಿಡಿದ ಕನ್ನಡಿ.
  • ವಿದೇಶಿ ನೆಲದ ಆಪತ್ಬಾಂಧವ: ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಕಠಿಣ ಪಿಚ್‌ಗಳಲ್ಲಿ ಅಜಿಂಕ್ಯ ರಹಾನೆ ಬಾರಿಸಿದ ರನ್‌ಗಳಿಂದ ಅದೆಷ್ಟೋ ಬಾರಿ ಭಾರತ ತಂಡ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ!

2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ 38 ವರ್ಷದ ಅಜಿಂಕ್ಯ ರಹಾನೆ, ಇದೀಗ ಅಂತರರಾಷ್ಟ್ರೀಯ ವೇದಿಕೆಯಿಂದ ಅಧಿಕೃತವಾಗಿ ನಿರ್ಗಮಿಸಿದ್ದಾರೆ. ಈ ಮೂಲಕ 15 ವರ್ಷಗಳ ತಮ್ಮ ಇಂಟರ್​ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ.

Source link

ಚೀನಾ-ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್ ರವಾನೆ ಶಂಕೆ: ಅಮೆರಿಕ ಅಧ್ಯಕ್ಷ ಟ್ರಂಪ್ ಆತಂಕ – Kannada News | Trump Alarmed: China Pakistan to Iran Rocket Launchers Fueling Mideast Tension

ವಾಷಿಂಗ್ಟನ್, ಜುಲೈ 30: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಮತ್ತು ಅಮೆರಿಕ ನಡುವೆ ಭೌಗೋಳಿಕ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಚೀನಾವು ಪಾಕಿಸ್ತಾನದ ಮಾರ್ಗವಾಗಿ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.ವರದಿಗಳು ದೃಢಪಟ್ಟರೆ, ಅಮೆರಿಕ-ಇರಾನ್ ಸಂಘರ್ಷದಲ್ಲಿ ಚೀನಾದ ನೇರ ಹಸ್ತಕ್ಷೇಪ ಬಯಲಾಗಲಿದ್ದು, ಇದು ಪ್ರಾದೇಶಿಕ ಯುದ್ಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಆತಂಕ ಮೂಡಿಸಿದೆ.

ಶ್ವೇತಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸುದ್ದಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.”ಈ ಸುದ್ದಿ ನಿಜವಾಗಿದ್ದರೆ ಅದು ನನಗೆ ಆಶ್ಚರ್ಯ ತರಲಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಇಂತಹ ಯಾವುದೇ ಸಂಘರ್ಷದಲ್ಲಿ ಭಾಗಿಯಾಗುವುದಿಲ್ಲ ಎಂದು ನನಗೆ ಬಲವಾದ ಭರವಸೆ ನೀಡಿದ್ದರು. ಅವರು ಈ ಕೆಲಸ ಮಾಡಿದ್ದರೆ ನನಗೆ ತೀವ್ರ ನಿರಾಶೆಯಾಗಲಿದೆ” ಎಂದು ಟ್ರಂಪ್ ಹೇಳಿದರು.

400 ರಾಕೆಟ್ ಲಾಂಚರ್‌ಗಳನ್ನು ಕಳುಹಿಸಲಾಗಿದೆ ಎಂಬುದಕ್ಕೆ ಇನ್ನು ಯಾವುದೇ ಸ್ವತಂತ್ರ ಹಾಗೂ ಅಧಿಕೃತ ಮಿಲಿಟರಿ ಆಧಾರಗಳು ಲಭ್ಯವಾಗಿಲ್ಲ. ಚೀನಾ ಮತ್ತು ಪಾಕಿಸ್ತಾನ ಸರ್ಕಾರಗಳು ಈ ವರದಿಗಳನ್ನು ದೃಢೀಕರಿಸಿಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಜೊತೆಗೆ, ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ಕೃತಕ ಬುದ್ಧಿಮತ್ತೆಯ (AI) ತಾಂತ್ರಿಕ ಸ್ಪರ್ಧೆಯ ಕುರಿತೂ ಟ್ರಂಪ್ ಮಾತನಾಡಿದರು.

ಮತ್ತಷ್ಟು ಓದಿ: ಮಾತುಕತೆ ವಿಫಲವಾದರೆ ಇರಾನ್ ವಿರುದ್ಧ ಮತ್ತೆ ಕಠಿಣ ಮಿಲಿಟರಿ ದಾಳಿ, ಇರಾನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

ಎಐ ರೇಸ್‌ನಲ್ಲಿ ಅಮೆರಿಕವು ಚೀನಾಕ್ಕಿಂತ ಬಹಳಷ್ಟು ಮುಂದಿದೆ. ಎಐ ತಂತ್ರಜ್ಞಾನದಲ್ಲಿ ಯಾರು ಗೆಲ್ಲುತ್ತಾರೋ ಅವರೇ ಜಗತ್ತನ್ನು ಆಳುತ್ತಾರೆ ಎಂದು ಅವರು ಪ್ರತಿಪಾದಿಸಿದರು. “ನಮ್ಮ ವಿಜ್ಞಾನಿಗಳು ಮತ್ತು ನಾವೀನ್ಯಕಾರರು ಉನ್ನತ ಮಟ್ಟದ ಕೆಲಸ ಮಾಡುತ್ತಿದ್ದಾರೆ. ಚೀನಾ ಹಿನ್ನಡೆ ಅನುಭವಿಸಲು ಬಿಡದಂತೆ, ದೇಶದಲ್ಲಿ ಎಐ ಅಭಿವೃದ್ಧಿಗೆ ಅತಿಯಾದ ನಿಯಂತ್ರಣ ಅಥವಾ ನಿರ್ಬಂಧಗಳನ್ನು ನಾವು ವಿಧಿಸುವುದಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದರು.

ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಹಾಗೂ ಅಮೆರಿಕದ ಮಿಲಿಟರಿ ಪಡೆಗಳ ನಡುವೆ ನಿರಂತರ ದಾಳಿಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರ ಸರಬರಾಜು ವರದಿಗಳು ರಾಜತಾಂತ್ರಿಕ ಬಿಕ್ಕಟ್ಟನ್ನು ಹೆಚ್ಚಿಸಿವೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮತ್ತು ಇರಾನ್ ಜೊತೆಗಿನ ಚೀನಾದ 25 ವರ್ಷಗಳ ಕಾರ್ಯತಂತ್ರದ ಒಪ್ಪಂದವು ಈ ಮೂರು ದೇಶಗಳ ನಡುವಿನ ಮಿಲಿಟರಿ ಹಾಗೂ ಆರ್ಥಿಕ ನಂಟು ಗಟ್ಟಿಯಾಗಿರುವುದನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ… ಬದಲಾಗದಲಿದೆ ಈ ರಾಶಿಯವರ ಭಾಗ್ಯ… – Kannada News | Surya Budha Ketu in Leo: Astrological Impacts and Remedies for All Zodiacs

ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ

ಅಪರೂಪದ ಯೋಗ ಖಗೋಲದಲ್ಲಿ ಆಗಲಿದೆ. ಸಿಂಹ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಕೇತು ಗ್ರಹಗಳ ಯುತಿ ಏರ್ಪಟ್ಟಿದೆ. ಇಲ್ಲಿ ಬುಧನು ಮೌಢ್ಯ ಹೊಂದಿದ್ದು, ಕೇತು ವಕ್ರ ಸ್ಥಿತಿಯಲ್ಲಿದ್ದಾನೆ. ​ಸಿಂಹ ರಾಶಿಯು ಸೂರ್ಯನ ಸ್ವಕ್ಷೇತ್ರ. ಸ್ವಕ್ಷೇತ್ರದಲ್ಲಿ ಸೂರ್ಯ, ಬುಧ ಹಾಗೂ ಕೇತುಗಳ ಯುತಿಯು ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಿಶಿಷ್ಟ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಈ ಯುತಿಯಿಂದ ಯಾರಿಗೆ ಹಾಗೂ ಯಾವ ರೀತಿಯ ಶುಭ, ಅಶುಭ ಫಲಗಳು ದೊರೆಯಲಿವೆ.

​ಗ್ರಹಗಳ ಯುತಿಯ ವಿಶ್ಲೇಷಣೆ:

ಬುಧಾದಿತ್ಯ ಯೋಗ ಅಪರೂಪದ್ದು. ಸ್ವಕ್ಷೇತ್ರವಾದ ಸಿಂಹದಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಇದ್ದಾಗ ಬುಧಾದಿತ್ಯ ಯೋಗ ಉಂಟಾಗುತ್ತದೆ. ಇದು ಬುದ್ಧಿಮತ್ತೆ, ತಾರ್ಕಿಕ ಆಲೋಚನೆ, ಶಿಕ್ಷಣ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ ಇಲ್ಲಿ ಬುಧನು ಅಸ್ತಂಗತನಾಗಿರುವುದರಿಂದ ಯೋಗದ ಪರಿಣಾಮ ಸಾಧಾರಣವಾಗಿರುತ್ತದೆ.

​ಸೂರ್ಯ-ಕೇತು – ಆಧ್ಯಾತ್ಮಿಕ ಯೋಗ:

ಸೂರ್ಯ ಮತ್ತು ಕೇತುಗಳ ಸಮ್ಮಿಲನವು ಅಹಂಕಾರವನ್ನು ಕಡಿಮೆ ಮಾಡಿ ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚಿಸುತ್ತದೆ. ಆದರೆ ಇದು ತಂದೆಯ ಆರೋಗ್ಯ ಹಾಗೂ ಆತ್ಮವಿಶ್ವಾಸದಲ್ಲಿ ಕೊಂಚ ಅಸ್ಥಿರತೆ ತರಬಹುದು.

​ಬುಧ-ಕೇತು:

ಸಂಶೋಧನೆ, ಗೂಢ ಶಾಸ್ತ್ರ, ವ್ಯಾಕರಣ, ಜ್ಯೋತಿಷ್ಯ ಹಾಗೂ ಮಂತ್ರಶಾಸ್ತ್ರಗಳ ಅಧ್ಯಯನಕ್ಕೆ ಅತ್ಯಂತ ಶುಭಕರ.

​ಇವರಿಗೆ ಶುಭ ಫಲಗಳು:

ಧನು ರಾಶಿಯವರಿಗೆ ಈ ಯುತಿಯು ಧನು ಲಗ್ನಕ್ಕೆ 9ನೇ ಭಾವದಲ್ಲಿ ನಡೆಯುತ್ತಿರುವುದರಿಂದ, ಆಧ್ಯಾತ್ಮಿಕ ಪ್ರಗತಿ, ಉನ್ನತ ಶಿಕ್ಷಣ, ವೈರಾಗ್ಯ ಭಾವನೆ, ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಸಂಶೋಧಕರಿಗೆ ಹಾಗೂ ಅಧ್ಯಾಪಕರಿಗೆ ವಿಶೇಷ ಯಶಸ್ಸು ಸಿಗಲಿದೆ.

​ವೃಶ್ಚಿಕ, ಮೇಷ ಹಾಗೂ ಧನು ರಾಶಿ:

​ವೃಶ್ಚಿಕದವರಿಗೆ ಉದ್ಯೋಗ ಕ್ಷೇತ್ರದಲ್ಲಿ ತಾಂತ್ರಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿದ್ದವರಿಗೆ ಸಫಲತೆ ಸಿಗುತ್ತದೆ.
​ಮೇಷ ರಾಶಿಯವರಿಗೆ ಮಂತ್ರ ಸಾಧನೆ, ಜ್ಯೋತಿಷ್ಯ ಅಧ್ಯಯನ, ಹಾಗೂ ಗೂಢ ವಿದ್ಯೆಗಳನ್ನು ಕಲಿಯಲು ಅತ್ಯುತ್ತಮ ಸಮಯ.

​ಶಿಕ್ಷಣ ಹಾಗೂ ಗೂಢವಿದ್ಯೆ ಅಭ್ಯಾಸ ಮಾಡುವವರಿಗೆ: ವೈಯಾಕರಣಿಗಳು, ಜ್ಯೋತಿಷಿಗಳು, ವೇದ-ಶಾಸ್ತ್ರ ಅಧ್ಯಯನಕಾರರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಬುದ್ಧಿಶಕ್ತಿ ಪ್ರಖರಗೊಂಡು ಹೊಸ ವಿಚಾರಗಳು ಹೊಳೆಯುತ್ತವೆ.

​ಪ್ರಮುಖ ಶುಭ ಫಲ:

ಆಧ್ಯಾತ್ಮಿಕ ಜಾಗೃತಿ ಉಂಟಾಗಲಿದೆ. ಐಹಿಕ ಸುಖಗಳಿಗಿಂತ ದೈವಿಕ ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ಮನಸ್ಸು ತೊಡಗುತ್ತದೆ.​ಸಂಶೋಧನಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ವಿಷಯಗಳನ್ನು ಭೇದಿಸುವ ಸಾಮರ್ಥ್ಯ ಹಾಗೂ ನಿಖರವಾದ ವಿಶ್ಲೇಷಣಾ ಶಕ್ತಿ ಹೆಚ್ಚುತ್ತದೆ. ಯಾವುದೇ ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡು ಮಾತನಾಡುವ ಕೌಶಲ ಒಲಿಯುತ್ತದೆ.

​ಇವರಿಗೆ ಅಶುಭ ಫಲ:

ಸಿಂಹ ರಾಶಿಯಾದ ಸ್ವಂತ ರಾಶಿಯಲ್ಲೇ ಈ ಯುತಿ ಇರುವುದರಿಂದ ತಲೆನೋವು, ಕಣ್ಣಿನ ಸಮಸ್ಯೆಗಳು, ಅತಿಯಾದ ಮಾನಸಿಕ ಒತ್ತಡ ಹಾಗೂ ಪಿತ್ತ ಪ್ರಕೋಪ ಕಾಡಬಹುದು. ಕುಂಭ ರಾಶಿಯಲ್ಲಿ ರಾಹು ಕುಂಭದಲ್ಲಿದ್ದು, ಸಿಂಹದ ಗ್ರಹಗಳನ್ನು ವೀಕ್ಷಿಸುವುದರಿಂದ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ವೈಮನಸ್ಸುಗಳು ಅಥವಾ ಸಮ್ಮಿಶ್ರ ಅಭಿಪ್ರಾಯಗಳು ಮೂಡಬಹುದು. ವ್ಯಾಪಾರ ಪಾಲುದಾರಿಕೆಯಲ್ಲಿ ಜಾಗ್ರತೆ ಅಗತ್ಯ. ಮಕರ ಹಾಗೂ ಕರ್ಕಾಟಕ ರಾಶಿಯವರಿಗೆ ಧನ ಸ್ಥಾನ ಹಾಗೂ ವೆಚ್ಚ ಸ್ಥಾನಗಳಲ್ಲಿ ವ್ಯತ್ಯಾಸವಾಗುವುದರಿಂದ ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

​ಪ್ರಮುಖ ಅಶುಭ ಫಲಗಳು:

​ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. 9ನೇ ಭಾವದಲ್ಲಿ ಸೂರ್ಯ-ಕೇತು ಒಂದಾಗುವುದರಿಂದ ತಂದೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಚರ್ಮ ಹಾಗೂ ನರಗಳ ಸಮಸ್ಯೆ ಕಾಣಿಸುಸುವುದು. ಬುಧ ಅಸ್ತಂಗತನಾಗಿ ಕೇತುವಿನೊಂದಿಗೆ ಇರುವುದರಿಂದ ಚರ್ಮದ ಕಿರಿಕಿರಿ, ನರಗಳ ದೌರ್ಬಲ್ಯ ಅಥವಾ ಪಿತ್ತ ವಿಕಾರಗಳು ಕಾಣಿಸಿಕೊಳ್ಳಬಹುದು. ಅತಿಯಾದ ವೈರಾಗ್ಯ, ಉದಾಸೀನತೆ ಇರಲಿದೆ. ಐಹಿಕ ಅಥವಾ ಲೌಕಿಕ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಿ ಕೆಲಸ ಕಾರ್ಯಗಳಲ್ಲಿ ವಿಳಂಬ ಧೋರಣೆ ಬರಬಹುದು.

ಪರಿಹಾರ:

​ಸೂರ್ಯ ನಮಸ್ಕಾರ ಹಾಗೂ ಆದಿತ್ಯಹೃದಯ ಸ್ತೋತ್ರವನ್ನು ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ನೀಡಿ ಆದಿತ್ಯಹೃದಯ ಸ್ತೋತ್ರ ಪಠಿಸುವುದರಿಂದ ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣವನ್ನು ಬುಧನ ಮೌಢ್ಯ ಹಾಗೂ ಕೇತುವಿನ ದೋಷ ಶಮನಕ್ಕಾಗಿ ಮಾಡಿ ಅಥವಾ ಗಣಪತಿ ಅಥರ್ವಶೀರ್ಷ ಪಠಣ ಅತ್ಯಂತ ಶ್ರೇಷ್ಠ. ​ಯೋಗ್ಯರಿಗೆ ಕೆಂಪು ಬೇಳೆ, ವಸ್ತ್ರ, ಹಾಗೂ ಹೆಸರುಬೇಳೆ ದಾನ ಮಾಡುವುದು ಶುಭ ತರುತ್ತದೆ. ಅನ್ನದಾನಕ್ಕೆ ವಿಶೇಷ ಮಹತ್ತ್ವ ಇದೆ. ಆದಷ್ಟು ಅನ್ನದಾನಕ್ಕೆ ಒತ್ತು ಕೊಡುವುದು ಉತ್ತಮ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜ್ಯುವೆಲ್ಲರಿಯಿಂದ ರಾತ್ರೋರಾತ್ರಿ 10 ಲಕ್ಷ ರೂ. ಮೌಲ್ಯದ ಆಭರಣ ಮಾಯ! ಕಳ್ಳರೇ ಬಾರದೆ ವಜ್ರ, ಚಿನ್ನಾಭರಣ ಕಳವಾಗಿದ್ಹೇಗೆ ಗೊತ್ತೇ? – Kannada News | Tumakuru Jewellery Shop Theft Mystery Solved: Rat Stole Rs 10 Lakh Gold and Diamond Jewellery

ಕಾಣೆಯಾಗಿದ್ದ ಆಭರಣಗಳು ಹಾಗೂ ಅವುಗಳು ಪತ್ತೆಯಾದ ಇಲಿ ಬಿಲImage Credit source: tv9

ತುಮಕೂರು, ಜುಲೈ 30: ಸಿನಿಮಾ ಕಥೆಯನ್ನೂ ಮೀರಿಸುವಂತಿರುವ ವಿಚಿತ್ರ ಘಟನೆಯೊಂದು ತುಮಕೂರು (Tumakur) ನಗರದಲ್ಲಿ ನಡೆದಿದೆ. ಪ್ರತಿಷ್ಠಿತ ಜ್ಯುವೆಲರಿ ಶಾಪ್‌ನಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ 10 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಆದರೆ ಜ್ಯುವೆಲ್ಲರಿಯ ಶಟರ್ ಮುರಿದಿರಲಿಲ್ಲ, ಹೊರಗಿನಿಂದ ಯಾರೂ ಒಳನುಗ್ಗಿದ ಕುರುಹು ಕೂಡ ಇರಲಿಲ್ಲ. ಕೊನೆಗೆ ಸಿಸಿಟಿವಿ ಪರಿಶೀಲಿಸಿದಾಗ ಇಡೀ ಪ್ರಕರಣದ ಅಸಲಿ ರಹಸ್ಯ ಬಯಲಾಗಿದೆ! ತುಮಕೂರು ನಗರದ ಕಾಲ್‌ಟೆಕ್ಸ್ ಸರ್ಕಲ್‌ ಸಮೀಪದಲ್ಲಿರುವ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ.

ಅಂಗಡಿಯಲ್ಲಿ 50 ಗ್ರಾಂಗೂ ಅಧಿಕ ತೂಕದ ವಜ್ರ ಹಾಗೂ ಚಿನ್ನಾಭರಣಗಳು ಬೆಳಗ್ಗೆ ನೋಡುವಾಗ ಕಾಣೆಯಾಗಿದ್ದವು. ಸರಗಳು ಮತ್ತು ಉಂಗುರಗಳು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಆಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

ಸಿಸಿಟಿವಿ ಪರಿಶೀಲಿಸಿದಾಗ ಗೊತ್ತಾಯ್ತು ಅಚ್ಚರಿಯ ಸತ್ಯ

ಕಳ್ಳತನವಾಗಿರಬಹುದು ಎಂದು ಅನುಮಾನಗೊಂಡ ಸಿಬ್ಬಂದಿ, ಪೊಲೀಸ್ ಠಾಣೆಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಂಡ ದೃಶ್ಯ ನೋಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಅಚ್ಚರಿಯಾಗಿದೆ.

ಆಭರಣ ಎಗರಿಸಿದ್ದು ‘ಕಳ್ಳ’ ಇಲಿ!

ಸಿಸಿಟಿವಿ ದೃಶ್ಯದಲ್ಲಿ ಒಂದು ಇಲಿ ಅಂಗಡಿಯೊಳಗೆ ಸದ್ದಿಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಬಳಿಕ ಅದೇ ಇಲಿ ಚಿನ್ನಾಭರಣಗಳನ್ನು ಎಳೆದೊಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳನ್ನು ಎಗರಿಸಿದ ಇಲಿ, ಅವುಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿಟ್ಟಿತ್ತು.

ಬಿಲ ತೋಡಿದಾಗ ಸಿಕ್ತು ಕಳವಾದ ಆಭರಣ

ಇಲಿಯ ಜಾಡು ಹಿಡಿದ ಜ್ಯುವೆಲರಿ ಶಾಪ್ ಸಿಬ್ಬಂದಿ, ಅದು ಸೇರಿಕೊಂಡಿದ್ದ ಬಿಲವನ್ನು ಪತ್ತೆಹಚ್ಚಿದ್ದಾರೆ. ಬಳಿಕ ಬಿಲವನ್ನು ತೋಡಿದಾಗ ನಾಪತ್ತೆಯಾಗಿದ್ದ ಆಭರಣಗಳು ಅಲ್ಲಿ ಪತ್ತೆಯಾಗಿವೆ. ಒಂದೆರಡು ಆಭರಣಗಳಲ್ಲ, ಬರೋಬ್ಬರಿ 10 ಉಂಗುರಗಳು ಹಾಗೂ 3 ಸರಗಳನ್ನು ಇಲಿ ತನ್ನ ಬಿಲದಲ್ಲಿ ಇಟ್ಟುಕೊಂಡಿತ್ತು. ಆಭರಣಗಳು ಸುರಕ್ಷಿತವಾಗಿ ವಾಪಸ್ ಸಿಕ್ಕಿದ್ದರಿಂದ ಜ್ಯುವೆಲರಿ ಶಾಪ್ ಮಾಲೀಕರು ಹಾಗೂ ಸಿಬ್ಬಂದಿ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಮಳೆ ಅಭಾವಕ್ಕೆ ತುಮಕೂರು ಮಂದಿ ಕಂಗಾಲು: ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು

ಈ ಸಂಪೂರ್ಣ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಚಿತ್ರ ‘ಕಳ್ಳತನ’ ಪ್ರಕರಣದ ವಿಡಿಯೋ ಗಮನ ಸೆಳೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Friendship Day 2026: ಫ್ರೆಂಡ್‌ಶಿಪ್‌ ನಮ್ಮ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ – Kannada News | International Friendship Day 2026: History of International Friendship Day and the benefits of friendship

ಅಂತಾರಾಷ್ಟ್ರೀಯ ಸ್ನೇಹ ದಿನImage Credit source: Getty Images

ಸ್ನೇಹ (Friendship) ರಕ್ತ ಸಂಬಂಧಕ್ಕೂ ಮೀರಿದ ಬಂಧ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಒಳ್ಳೆಯ ಸ್ನೇಹಿತರು ಮುಖದಲ್ಲಿ ನಗುವನ್ನು ತರಿಸುವುದು ಮಾತ್ರವಲ್ಲ, ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಕೂಡ ಸಹಾಯ ಮಾಡುತ್ತಾರೆ. ಈ ಸ್ನೇಹ ಸಂಬಂಧದ ಮಹತ್ವವನ್ನು ಸಾರುವ ಹಾಗೂ ರಾಷ್ಟ್ರ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿ, ಜನಾಂಗಗಳ ನಡುವೆಯೂ ಸ್ನೇಹ ಸಂಬಂಧ, ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಲಾಗುತ್ತದೆ. ಸ್ನೇಹವನ್ನು ಸಂಭ್ರಮಿಸಲು ಮೀಸಲಿರುವ ಈ ದಿನದಂದು ಒಂದೊಳ್ಳೆ ಸ್ನೇಹದಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ.

ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು 1958ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ರಾಷ್ಟ್ರ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿ, ಜನಾಂಗಗಳ ನಡುವೆಯೂ ಸ್ನೇಹ ಸಂಬಂಧ, ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ಮೊದಲು ಪರಾಗ್ವೆಯಲ್ಲಿ 1958ರಲ್ಲಿ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಪ್ರಸ್ತಾಪಿಸಲಾಯಿತು. ಆ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 30ನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಜೀವನದಲ್ಲಿ ಸ್ನೇಹ ಎಷ್ಟು ಮುಖ್ಯ?

ಉತ್ತಮ ಸ್ನೇಹವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ನಿರಾಳವಾಗಿಡಲು ಸಹಾಯ ಮಾಡುತ್ತದೆ. ನಾವು ಸ್ನೇಹಿತರೊಂದಿಗೆ ಸಮಯ ಕಳೆಯುವಾಗ, ನಮ್ಮ ದೇಹವು ಎಂಡಾರ್ಫಿನ್‌ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಸಂತೋಷ ಮತ್ತು ಶಾಂತಿಯನ್ನು ತರುವ ಹಾರ್ಮೋನು ಆಗಿದ್ದು, ಅದಕ್ಕಾಗಿಯೇ ನಾವು ಸ್ನೇಹಿತರೊಂದಿಗೆ ಇದ್ದಾಗ ಖುಷಿಯಾಗಿ ಇರುತ್ತೇವೆ. ಸ್ನೇಹಿತರು ಮುಖದಲ್ಲಿ ನಗುವನ್ನು ತರಿಸುವುದು ಮಾತ್ರವಲ್ಲ, ಕಷ್ಟಕಾಲಕ್ಕೆ ಹೆಗಲಾಗಿ, ಜೀವನದ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಲ್ಲುತ್ತಾರೆ. ಅದಕ್ಕಾಗಿಯೇ ಜೀವದಲ್ಲಿ ಉತ್ತಮ ಸ್ನೇಹಿತರು ಇರಬೇಕು ಅನ್ನೋದು.

ಇದನ್ನೂ ಓದಿ: ಕರ್ನಾಟಕದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ತಾಣಗಳಿವು

ಒಳ್ಳೆಯ ಸ್ನೇಹದ ಪ್ರಯೋಜಗಳೇನು?

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ: ನಾವು ಸ್ನೇಹಿತರೊಂದಿಗೆ ಇರುವಾಗ, ನಮ್ಮ ಮಾನಸಿಕ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಸಮಯದಲ್ಲಿ ಧನಾತ್ಮಕ ಹಾರ್ಮೋನುಗಳ ಬಿಡುಗಡೆಯು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ, ನಮಗೆ ಉತ್ತಮ ಭಾವನೆ ನೀಡುತ್ತದೆ. ಸ್ನೇಹಿತರೊಂದಿಗೆ ಕುಳಿತು ಮಾತನಾಡುವುದರಿಂದ ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕ ಕಡಿಮೆಯಾಗುತ್ತದೆ. ಸ್ನೇಹಿತರು ನಿಮ್ಮ ಭಾವನಾತ್ಮಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬೆಂಬಲವನ್ನು ನೀಡುತ್ತಾರೆ.

ಉತ್ತಮ ಸ್ನೇಹ ಹೃದಯಕ್ಕೂ ಪ್ರಯೋಜನಕಾರಿ: ಸ್ನೇಹವು ಮನಸಿಕ ಆರೋಗ್ಯ ಮಾತ್ರವಲ್ಲದೆ ಹೃದಯಕ್ಕೂ ಪ್ರಯೋಜನಕಾರಿ. ಸ್ನೇಹವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.  ಒಳ್ಳೆಯ ಸ್ನೇಹಿತರನ್ನು ಹೊಂದಿರುವ ಜನರು ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯಂತಹ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಇರುತ್ತಂತೆ.

ಭಾವನಾತ್ಮಕ ಬೆಂಬಲ ದೊರೆಯುತ್ತದೆ: ಸ್ನೇಹವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ, ಕಷ್ಟಕರವಾದ ಕೆಲಸಗಳಲ್ಲಿಯೂ ಸಹ ನೀವು ಯಶಸ್ವಿಯಾಗಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಸ್ನೇಹಿತರು ಭಾವನಾತ್ಮಕ ಬೆಂಬಲವನ್ನು ನೀಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅಲ್ಲದೆ ಒಬ್ಬ ಒಳ್ಳೆಯ ಸ್ನೇಹಿತ ನಿಮ್ಮನ್ನು ಜೀವನದಲ್ಲಿ ಮುಂದುವರೆಯಲು ಸಹ ಪ್ರೋತ್ಸಾಹಿಸುತ್ತಾನೆ. ಆದ್ದರಿಂದ ಯಾವಾಗಲೂ ಉತ್ತಮರ ಸ್ನೇಹವನ್ನು ಮಾಡಿ.

ಜೀವನಶೈಲಿಯ ಮೇಲೆ ಸಕಾರಾತ್ಮಕ ಪರಿಣಾಮ: ಸ್ನೇಹಿತರೊಂದಿಗೆ ಸಮಯ ಕಳೆಯುವುದು ನಮ್ಮ ಜೀವನಶೈಲಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸ್ನೇಹವು ಜನರು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದಂತಹ ಅಭ್ಯಾಸಗಳು ಜೀವನಶೈಲಿಯನ್ನು ಪರಿವರ್ತಿಸಬಹುದು, ಇದು ಸಂತೋಷದ ಜೀವನಕ್ಕೆ ಕಾರಣವಾಗಬಹುದು ಮತ್ತು ರೋಗಗಳನ್ನು ದೂರವಿಡಬಹುದು. ಹಾಗಾಗಿ ಯಾವಾಗಲೂ ಒಳ್ಳೆಯ ಮತ್ತು ಸಕಾರಾತ್ಮಕ ಮನೋಭಾವವಿರುವ ಸ್ನೇಹಿತರ ಜೊತೆಗಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರ್ಜೆಂಟೀನಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ! – Kannada News | FIFA Crackdown: Argentina Faces Heavy Sanctions Over World Cup Fights

ಫಿಫಾ ವಿಶ್ವಕಪ್ 2026ರ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಆನ್‌-ಫೀಲ್ಡ್ ಗಲಾಟೆ ಹಾಗೂ ವಿವಾದಾತ್ಮಕ ಆಚರಣೆಗಳಿಗೆ ಸಂಬಂಧಿಸಿದಂತೆ, ಅರ್ಜೆಂಟೀನಾ ಆಟಗಾರರು ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ (AFA) ವಿರುದ್ಧ ಫಿಫಾ (FIFA) ಭಾರಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.

 ಕೈಕೈ ಮಿಲಾಯಿಸಿದ ಆಟಗಾರರು:

ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲುಗಳಿಂದ ಸೋತ ನಂತರ, ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಭಾರಿ ಗಲಾಟೆ ನಡೆದಿತ್ತು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫಿಫಾ ಶಿಸ್ತು ಸಮಿತಿಯು ಅರ್ಜೆಂಟೀನಾದ ಪ್ರಮುಖ ಆಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದೆ.

  • ಲಿಯಾಂಡ್ರೊ ಪರೇಡೆಸ್: ಸ್ಪೇನ್‌ನ ಗಾವಿ ಮತ್ತು ಎರಿಕ್ ಗಾರ್ಸಿಯಾ ಅವರೊಂದಿಗೆ ಜಗಳವಾಡಿದ ಹಿನ್ನೆಲೆಯಲ್ಲಿ ಇವರ ಮೇಲೆ 3 ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.
  • ನಾಹ್ಯುಯೆಲ್ ಮೊಲಿನಾ: ಸ್ಪೇನ್ ತಂಡದ ನಾಯಕ ರೋಡ್ರಿಗೆ ಹೊಡೆಯಲು ಯತ್ನಿಸಿದ ಆರೋಪದ ಮೇಲೆ 2 ಹಲ್ಲೆ ಮತ್ತು ಅಸಭ್ಯ ವರ್ತನೆಯ ಕೇಸ್ ಹಾಕಲಾಗಿದೆ.
  • ಥಿಯಾಗೊ ಅಲ್ಮಾಡಾ: ಅರ್ಜೆಂಟೀನಾ ಆಟಗಾರ ಥಿಯಾಗೊ ವಿರುದ್ಧ ಕ್ರೀಡಾ ಮನೋಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ  ಫಿಫಾ ಶಿಸ್ತು ಸಂಹಿತೆಯ ಆರ್ಟಿಕಲ್ 14(1)(b) ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
  • ರೋಬರ್ಟೊ ಅಯಾಲಾ (ಸಹಾಯಕ ತರಬೇತುದಾರ): ಮೈದಾನದ ಗಲಾಟೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅರ್ಜೆಂಟೀನಾ ತಂಡದ ಸಹಾಯಕ ಕೋಚ್ ರೋಬರ್ಟೊ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.

ರಾಜಕೀಯ ಬ್ಯಾನರ್ ಪ್ರದರ್ಶನದ ವಿವಾದ:

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ನಂತರ, ಅರ್ಜೆಂಟೀನಾ ಆಟಗಾರರು ಮೈದಾನದಲ್ಲಿ “ಲಾಸ್ ಮಾಲ್ವಿನಾಸ್ ಸನ್ ಅರ್ಜೆಂಟೀನಾಸ್” (ಫಾಕ್‌ಲ್ಯಾಂಡ್ ದ್ವೀಪಗಳು ಅರ್ಜೆಂಟೀನಾಕ್ಕೆ ಸೇರಿದ್ದು) ಎಂಬ ರಾಜಕೀಯ ಘೋಷಣೆಯುಳ್ಳ ಬ್ಯಾನರ್ ಪ್ರದರ್ಶಿಸಿದ್ದರು.

ಕ್ರೀಡಾಂಗಣದಲ್ಲಿ ಯಾವುದೇ ರಾಜಕೀಯ ಅಥವಾ ಸದ್ಧಾಂತಿಕ ಸಂದೇಶಗಳನ್ನು ಪ್ರದರ್ಶಿಸುವುದನ್ನು ಫಿಫಾದ ಆರ್ಟಿಕಲ್ 13 ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಹೀಗಾಗಿ ಇದರ ವಿರುದ್ಧವೂ ತನಿಖೆ ಆರಂಭವಾಗಿದೆ.

ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ (AFA) ಮೇಲಿನ ಆರೋಪಗಳು:

ಕೇವಲ ಆಟಗಾರರು ಮಾತ್ರವಲ್ಲದೆ, ಇಡೀ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯ ವಿರುದ್ಧವೂ ಫಿಫಾ ಪ್ರಕರಣ ದಾಖಲಿಸಿದೆ.

  • ಅಭಿಮಾನಿಗಳ ದುರ್ವರ್ತನೆ: ಪಂದ್ಯದ ವೇಳೆ ಅರ್ಜೆಂಟೀನಾ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದು ಮತ್ತು ಮೈದಾನಕ್ಕೆ ವಸ್ತುಗಳನ್ನು ಎಸೆದ ಆರೋಪ ಎದುರಿಸುತ್ತಿದೆ.
  • ನಿಯಮ ಉಲ್ಲಂಘನೆ: ಪಂದ್ಯವನ್ನು ತಡವಾಗಿ ಆರಂಭಿಸಿದ್ದು ಮತ್ತು ಕ್ರೀಡಾಂಗಣದ ಭದ್ರತಾ ನಿಯಮಗಳನ್ನು ಪಾಲಿಸದೇ ಇರುವ ಆರೋಪ ಕೂಡ ಅರ್ಜೆಂಟೀನಾ ಫುಟ್​ಬಾಲ್ ಸಂಸ್ಥೆಯ ಮೇಲಿದೆ.

ಇದನ್ನೂ ಓದಿ: ಯಾವ ಬೌಲರ್ ಕಂಡರೆ ಭಯ? ವೈಭವ್ ಸೂರ್ಯವಂಶಿ ಖಡಕ್ ಉತ್ತರ

ಮುಂದಿನ ಪರಿಣಾಮಗಳೇನು?

ಆರೋಪ ಎದುರಿಸುತ್ತಿರುವ ಆಟಗಾರರು ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯು ಫಿಫಾ ಶಿಸ್ತು ಸಮಿತಿಗೆ ತಮ್ಮ ಅಧಿಕೃತ ಸ್ಪಷ್ಟನೆ ನೀಡಬೇಕಿದೆ. ತಪ್ಪಿತಸ್ಥರೆಂದು ಸಾಬೀತಾದರೆ ಆಟಗಾರರಿಗೆ ಕನಿಷ್ಠ 3 ಪಂದ್ಯಗಳ ನಿಷೇಧ ವಿಧಿಸುವ ಸಾಧ್ಯತೆಯಿದೆ. ಇದರಿಂದ ಅವರು ಮುಂದಿನ ಪ್ರಮುಖ ಅಂತರರಾಷ್ಟ್ರೀಯ ಪಂದ್ಯಗಳಿಂದ ವಂಚಿತರಾಗಬಹುದು ಹಾಗೂ AFA ಭಾರಿ ಪ್ರಮಾಣದ ದಂಡ ತೆರಬೇಕಾಗಬಹುದು.

Source link

Exit mobile version