Headlines

ಕಾಂಗ್ರೆಸ್ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ: ಕೇಂದ್ರ ಸಚಿವ ಜೋಶಿ ಕಿಡಿ

ಬೆಂಗಳೂರು, (ಮಾರ್ಚ್ 13): ಮಧ್ಯಪ್ರಾಚ್ಯದ ಯುದ್ಧ (War) ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲೂ ಗ್ಯಾಸ್ (LPG Gas) ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಆದರೆ, ಕಾಂಗ್ರೆಸ್ (Congress)  ಪಕ್ಷ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ. ದೇಶದಲ್ಲಿ ಈ ಹಿಂದೆಲ್ಲಾ ಕ್ರೈಸಿಸ್ ಉಂಟಾದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ಕಾಂಗ್ರೆಸ್ ತೀರಾ ತೀರಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ…

Read More

Abhijit Patil: ಕೋಚಿಂಗ್ ಇಲ್ಲದೆ, ಮೊದಲ ಪ್ರಯತ್ನದಲ್ಲೇ IPS ಅಧಿಕಾರಿಯಾದ 22 ವರ್ಷದ ಯುವಕ; ಅಭಿಜೀತ್ ಪಾಟೀಲ್ ಯಶೋಗಾಥೆ – Kannada News

ಅಭಿಜೀತ್ ಪಾಟೀಲ್Image Credit source: Instagram/Abhijeet Patil ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ UPSC (ನಾಗರಿಕ ಸೇವೆಗಳ ಪರೀಕ್ಷೆ) ಉತ್ತೀರ್ಣರಾಗುವುದು ಲಕ್ಷಾಂತರರ ಜನರ ಕನಸು. ಈ ಪರೀಕ್ಷೆಯಲ್ಲಿ ಗೆಲ್ಲಲು ದುಬಾರಿ ತರಬೇತಿ ಸಂಸ್ಥೆಗಳು ಹಾಗೂ ಲಕ್ಷಾಂತರ ರೂಪಾಯಿ ಹಣ ಬೇಕೇಬೇಕು ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಆದರೆ, ಸರಿಯಾದ ಯೋಜನೆ, ಕಟ್ಟುನಿಟ್ಟಾದ ಶಿಸ್ತು ಮತ್ತು ಸಮರ್ಪಣಾ ಮನೋಭಾವವಿದ್ದರೆ ಯಾವುದೇ ಕೋಚಿಂಗ್ ಇಲ್ಲದೆಯೂ ಇತಿಹಾಸ ಸೃಷ್ಟಿಸಬಹುದು ಎಂದು ಮಹಾರಾಷ್ಟ್ರದ ಯುವ ಅಧಿಕಾರಿ ಅಭಿಜೀತ್ ಪಾಟೀಲ್ ಸಾಬೀತುಪಡಿಸಿದ್ದಾರೆ….

Read More

Bangaluru rain: ಬೆಂಗಳೂರಲ್ಲಿ ಧಾರಾಕಾರ ಮಳೆ; ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ! – Kannada News | Bengaluru Heavy Rain: Roads Turn Into Lakes, Motorists Struggle Amid Severe Waterlogging

ಬೆಂಗಳೂರು, ಜೂನ್​​ 14: ನಗರದಲ್ಲಿ (bengaluru) ಕಳೆದೆರಡು ದಿನಗಳಿಂದ ಮಳೆ (Rain) ಚುರುಕುಗೊಂಡಿದೆ. ನಿನ್ನೆ ಸಂಜೆಯೂ ಮಳೆ ದರ್ಶನವಾಗಿದ್ದು, ಇಂದು ಮತ್ತೆ ಮಳೆ ಎಂಟ್ರಿಕೊಟ್ಟಿದೆ. ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಆರಂಭವಾಗಿದೆ. ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದ್ದಾರೆ. ಮುಖ್ಯಾಂಶಗಳು ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ ಮಳೆಯಿಂದ ಟ್ರಾಫಿಕ್ ಜಾಮ್​, ವಾಹನ ಸವಾರರ ಪರದಾಟ ಧಾರಾಕಾರ ಮಳೆಯಿಂದ…

Read More

ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ಕೆಎನ್​​ ರಾಜಣ್ಣ ಖಡಕ್​​ ಮಾತು – Kannada News | No Siddaramaiah, No Congress Party: Says KN Rajanna

ಬೆಂಗಳೂರು, ಜನವರಿ 06: ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ, ಹೆಚ್.ಡಿ.ದೇವೇಗೌಡರು ಇಲ್ಲ ಅಂದರೆ ಜೆಡಿಎಸ್ ಪಕ್ಷ ಇಲ್ಲ. ಹಾಗೆಯೇ ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್ ಪಕ್ಷ ಇಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಇನ್ನಷ್ಟು ಪುಣ್ಯ, ಶ್ರೇಯಸ್ಸು ಲಭಿಸಲಿ. 2028ರಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ….

Read More

ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಕೆಳಗೆ ಅಗ್ನಿ ಅವಘಡ! – Kannada News | Massive Fire Breaks Out At KR Market

ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನ ಹೃದಯಭಾಗದಲ್ಲಿರುವ ಕೆ.ಆರ್. ಮಾರ್ಕೆಟ್ ಬಳಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಮಾರ್ಕೆಟ್ ಬಳಿಯ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಜ್ವಾಲೆಗಳು ಕಸದ ರಾಶಿಯನ್ನು ವ್ಯಾಪಿಸಿ, ಅದನ್ನು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಿದೆ. ಅಗ್ನಿ ಅವಘಡದಿಂದಾಗಿ ಮಾರ್ಕೆಟ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿದೆ. ಇದು ಸ್ಥಳದಲ್ಲಿ ಉಸಿರಾಟದ ಸಮಸ್ಯೆಯನ್ನುಂಟುಮಾಡುತ್ತಿದೆ ಮತ್ತು ಗೋಚರತೆಯನ್ನು ಕಡಿಮೆ ಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ,…

Read More

ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್ – Kannada News | 5th Flight from Dubai Lands in Bengaluru; 1,500 Indians Return Safely in 3 Days Amid Iran Israel War

3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್Image Credit source: tv9 ಬೆಂಗಳೂರು, ಮಾರ್ಚ್ 5: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯಿಂದ ದುಬೈ, ಅಬುಧಾಬಿ, ಜೆದ್ದಾ, ದೋಹಾ ಸೇರಿ ಹಲವೆಡೆ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಅಲ್ಲಿನ ಏರ್‌ಪೋರ್ಟ್‌ಗಳಲ್ಲೇ ಸಿಕ್ಕಿಹಾಕಿರುವ ಆಗಿರುವ ಸಾವಿರಾರು ಜನ ಪ್ರಯಾಣಿಕರನ್ನು ಕಳೆದ ಸೋಮವಾರ ರಾತ್ರಿಯಿಂದ ಎಮಿರೇಟ್ಸ್, ಎತಿಹಾದ್ ಮತ್ತು ಇಂಡಿಗೋ ಏರ್ಲೈನ್ಸ್‌ಗಳ ಮೂಲಕ ಬೆಂಗಳೂರಿಗೆ (Bangalore) ಕರೆತರಲಾಗುತ್ತಿದೆ. ದಿನಕ್ಕೆ ಒಂದು ಅಥವಾ ಎರಡು ವಿಮಾನಗಳು ದುಬೈ ಮತ್ತ…

Read More

NeGD Summer Internship 2026: ಕೇಂದ್ರ ಸರ್ಕಾರದ ಐಟಿ ಇಲಾಖೆಯಲ್ಲಿ ಇಂಟರ್ನ್‌ಶಿಪ್ ಮಾಡಲು ಇಲ್ಲಿದೆ ಸುವರ್ಣಾವಕಾಶ! – Kannada News | NeGD Summer Internship 2026: Non Technical Roles for Students in Digital India

ಕೇಂದ್ರ ಸರ್ಕಾರದ ಐಟಿ ಇಲಾಖೆಯಲ್ಲಿ ಇಂಟರ್ನ್‌ಶಿಪ್ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್‌ನ ರಾಷ್ಟ್ರೀಯ ಇ-ಆಡಳಿತ ವಿಭಾಗವು (NeGD), 2026 ರ ಸಾಲಿನ ತಾಂತ್ರಿಕೇತರ ಬೇಸಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೇಶದ ಡಿಜಿಟಲ್ ರೂಪಾಂತರದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಇದೊಂದು ಅಪರೂಪದ ಅವಕಾಶವಾಗಿದೆ. ಲಭ್ಯವಿರುವ ಹುದ್ದೆಗಳು ಮತ್ತು ಇಲಾಖೆಗಳ ವಿವರ: ಈ ಇಂಟರ್ನ್‌ಶಿಪ್ ಕಾರ್ಯಕ್ರಮದ…

Read More

ಯಾರೇ ಲಂಚ ಕೇಳಿದರೂ ಕೊಡೋದಿಲ್ಲ ಹೇಳಿ; ಕರೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್ – Kannada News | If anyone demands a bribe from you just say wont pay it Tamil Nadu Chief Minister Vijay says to people

ಕರೂರ್, ಜುಲೈ 10: ಇಂದು ತಮಿಳುನಾಡಿನ ಕರೂರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್ (CM Vijay), “ನಿಮ್ಮ ಬಳಿ ಯಾರೇ ಲಂಚ ಕೇಳಿದರೂ ನೀವು ಅದನ್ನು ಕಟ್ಟುನಿಟ್ಟಾಗಿ ನಿರಾಕರಿಸಬೇಕು” ಎಂದು ಘೋಷಿಸಿದ್ದಾರೆ. ನಿಮ್ಮ ಜೊತೆಗೆ ನಾನಿದ್ದೇನೆ. ಲಂಚ ಕೊಡುವಂತಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಹೇಳಿ. ಹಾಗೆ ನಿರಾಕರಿಸುವ ಜನರ ಪರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಂಪೂರ್ಣ ಬೆಂಬಲವಾಗಿ ನಿಲ್ಲಲಿದ್ದೇನೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಇದೇವೇಳೆ, ತಮ್ಮ 55 ದಿನಗಳ ಆಡಳಿತದಲ್ಲಿ ಮಾಡಿದ ಬದಲಾವಣೆಗಳನ್ನು…

Read More

ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಬೆಂಗಳೂರು, (ಮಾರ್ಚ್ 31): ಕೆಐಎಎಲ್ (kempegowda international airport bengaluru) ಆಡಳಿತ ಕಚೇರಿಯ ವಿಳಾಸಕ್ಕೆ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ವಿಳಾಸ ಸರಿಯಾಗಿದ್ದರಿಂದ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್‌ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಇದರಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಇದೀಗ ಈ ಪಾರ್ಸೆಲ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದು,…

Read More

ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ – Kannada News | Shobha Karandlaje Slams Karnataka Government Over CM Change Debate Amid Public Crisis

ದೇವನಹಳ್ಳಿ, ಮೇ 27: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಬಿಕ್ಕಟ್ಟು ಮತ್ತು ಆಡಳಿತದ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಐಎಬಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ಎರಡುವರೆ ವರ್ಷ ಕೇವಲ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಚರ್ಚೆ ನಡೆಸಿದೆ. ಬರಗಾಲ, ನೆರೆಹಾವಳಿ, ಬೆಂಗಳೂರಿನಲ್ಲಿ ತ್ಯಾಜ್ಯ ಹಗರಣದಂತಹ ಗಂಭೀರ ಸಮಸ್ಯೆಗಳಿದ್ದರೂ, ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಂತ್ರಿಗಳು…

Read More