ವಿಂಡೀಸ್ ವಿರುದ್ದ ಸೋತ ಪಾಕ್ ತಂಡಕ್ಕೆ ಡಬಲ್ ಶಾಕ್ ನೀಡಿದ ಐಸಿಸಿ – Kannada News | Pak’s Double Blow: West Indies Test Defeat and ICC Penalizes Players for Misconduct

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ (Pakistan vs West Indies) ತಂಡಗಳು ಪ್ರಸ್ತುತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ವಿಂಡೀಸ್ 90 ರನ್​ಗಳಿಂದ ಗೆದ್ದುಕೊಂಡಿತು. ಬಾಬರ್ ಆಝಂ ನಾಯಕತ್ವದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪಾಕ್, ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್‌ ಮಾಡಿತು. ಹೀಗಾಗಿ ಪಾಕ್ ತಂಡಕ್ಕೆ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಎದುರಾಯಿತು. ಈ ಸೋಲಿನ ನೋವಿನಿಂದ ಹೊರಬರುವ ಮೊದಲೇ ಪಾಕಿಸ್ತಾನ ತಂಡಕ್ಕೆ ಐಸಿಸಿ (ICC) ಮತ್ತೊಂದು ಶಾಕ್ ನೀಡಿದೆ. ತಂಡದ ಇಬ್ಬರು ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ.

ಇಬ್ಬರು ಪಾಕ್ ಆಟಗಾರರ ವಿರುದ್ಧ ಐಸಿಸಿ ಕ್ರಮ

ಪಾಕಿಸ್ತಾನದ ವೇಗದ ಬೌಲರ್‌ಗಳಾದ ಮೊಹಮ್ಮದ್ ಅಬ್ಬಾಸ್ ಮತ್ತು ಖುರ್ರಮ್ ಶಹಜಾದ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪಂದ್ಯದ ಸಮಯದಲ್ಲಿ ಇಬ್ಬರೂ ಆಟಗಾರರು ಅವಾಚ್ಯ ಶಬ್ದಗಳನ್ನು ಬಳಸಿದ್ದು, ಲೆವೆಲ್ 1 ರ ಉಲ್ಲಂಘನೆಯಾಗಿದೆ. ಹೀಗಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಮೊಹಮ್ಮದ್ ಅಬ್ಬಾಸ್​ಗೆ ವಾಗ್ದಂಡನೆ ನೀಡಿದರೆ, ಖುರ್ರಮ್ ಶಹಜಾದ್ ಅವರ ಪಂದ್ಯ ಶುಲ್ಕದ 15% ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಇದರ ಜೊತೆಗೆ ಅವರಿಗೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ವಿಂಡೀಸ್ ಆಟಗಾರ ಶೈ ಹೋಪ್ ಅವರನ್ನು ಔಟ್ ಮಾಡಿದ ನಂತರ ಖುರ್ರಮ್ ಆಕ್ರಮಣಕಾರಿಯಾಗಿ ಆಚರಿಸಿದ್ದರು. ಮತ್ತೊಂದೆಡೆ, ಮೊಹಮ್ಮದ್ ಅಬ್ಬಾಸ್ ಜೋಮೆಲ್ ವಾರಿಕನ್ ಅವರನ್ನು ಔಟ್ ಮಾಡಿದ ನಂತರವೂ ಅದೇ ರೀತಿ ಮಾಡಿದ್ದರು. ಹೀಗಾಗಿ ಇವರಿಬ್ಬರ ಆಚರಣೆಗಳು ಆಕ್ರಮಣಕಾರಿ ಎಂದು ಪರಿಗಣಿಸಿರುವ ಐಸಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ.

IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ

ಫೈನಲ್​ ರೇಸ್​ನಿಂದ ಪಾಕ್ ಔಟ್

ಪಾಕಿಸ್ತಾನದ ಪರವಾಗಿ ಮೊಹಮ್ಮದ್ ಅಬ್ಬಾಸ್ ಅದ್ಭುತ ಬೌಲಿಂಗ್ ಮಾಡಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರ ಪರಿಣಾಮವಾಗಿ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 181 ರನ್‌ಗಳಿಗೆ ಆಲೌಟ್ ಆಗಿ ಪಾಕಿಸ್ತಾನಕ್ಕೆ ಕೇವಲ 211 ರನ್‌ಗಳ ಗುರಿ ನೀಡಿತು. ಆದರೆ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಗಿ ವಿಂಡೀಸ್ ವಿರುದ್ಧ ಸೋಲೊಪ್ಪಿಕೊಂಡಿತು. ನಾಯಕ ಬಾಬರ್ ಆಝಂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 58 ರನ್ ಗಳಿಸಿದರು. ಇತ್ತ ವಿಂಡೀಸ್ ಪರ ಜೇಡನ್ ಸೀಲ್ಸ್ 20 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಹೊರಬಿದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರಿನಲ್ಲಿ ಆಗಸ್ಟ್ 29ರಂದು ನಟ ಚಿಕ್ಕಣ್ಣ ಮದುವೆ; ಸಿಕ್ತು ಮಾಹಿತಿ – Kannada News | Kannada Comedy Actor Chikkanna to Marry Pavana in Mysuru on August 29

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರು ಶೀಘ್ರದಲ್ಲೇ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಅವರ ಮದುವೆಯ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಮದುವೆಗೆ ತಯಾರಿ ಶುರುವಾಗಿದೆ.

Source link

ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ; ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಹೆಚ್ಚಳ – Kannada News | Assam flood Death toll rises to 75 Assam Rains

ಅಸ್ಸಾಂ, ಜುಲೈ 29: ಅಸ್ಸಾಂನಲ್ಲಿ (Assam Flood) ಸಂಭವಿಸಿರುವ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರವು ಸಂತ್ರಸ್ತರಿಗಾಗಿ ಹಲವು ಪರಿಹಾರ ಕ್ರಮಗಳನ್ನು ಘೋಷಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಅಥವಾ ಕಾಣೆಯಾದವರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚುತ್ತಿದ್ದರೂ, ಪ್ರವಾಹ ಪರಿಸ್ಥಿತಿಯಲ್ಲಿ ಒಟ್ಟಾರೆಯಾಗಿ ಸುಧಾರಣೆ ಕಂಡುಬರುತ್ತಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲು ರಕ್ಷಣಾ ಪಡೆಗಳು ಹಗಲಿರುಳು ಶ್ರಮಿಸುತ್ತಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಯಾಬಿಟಿಸ್ ಇದ್ದರೆ ಪಾದಗಳ ಬಗ್ಗೆ ಇರಲಿ ಎಚ್ಚರ! ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ – Kannada News | Diabetic Foot Problems: Early Signs, Prevention Tips and Daily Care Guide

ಮಧುಮೇಹ (Diabetes) ಇಂದು ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಕಾಯಿಲೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ದೀರ್ಘಕಾಲ ನಿಯಂತ್ರಣದಲ್ಲಿರದಿದ್ದರೆ ಅದು ಕಣ್ಣು, ಹೃದಯ, ಮೂತ್ರಪಿಂಡ ಮಾತ್ರವಲ್ಲದೆ ಪಾದಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಹಲವರು ನೋವು ಕಾಣಿಸಿಕೊಂಡ ನಂತರ ಮಾತ್ರ ಪಾದಗಳ ಬಗ್ಗೆ ಗಮನ ಹರಿಸುತ್ತಾರೆ. ಆದರೆ ತಜ್ಞರ ಪ್ರಕಾರ ಪ್ರತಿದಿನ ಪಾದಗಳನ್ನು ಪರಿಶೀಲಿಸುವ ಅಭ್ಯಾಸವೇ ಡಯಾಬಿಟಿಕ್ ಫುಟ್ ಸಮಸ್ಯೆಯನ್ನು ತಡೆಯುವ ಅತ್ಯುತ್ತಮ ಮಾರ್ಗವಾಗಿದೆ. ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್ (NIDDK) ಪ್ರಕಾರ, ದೀರ್ಘಕಾಲದ ಅಧಿಕ ರಕ್ತದ ಸಕ್ಕರೆಯಿಂದ ನರಗಳು ಮತ್ತು ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಡಯಾಬಿಟಿಕ್ ನ್ಯೂರೋಪತಿ (Diabetic Neuropathy) ಉಂಟಾಗಿ ಪಾದಗಳಲ್ಲಿ ಸಂವೇದನೆ ಕಡಿಮೆಯಾಗಬಹುದು.

ಮಧುಮೇಹದಿಂದ ಪಾದಗಳಿಗೆ ಹೇಗೆ ಹಾನಿಯಾಗುತ್ತದೆ?

  • ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದಾಗ ಪಾದಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ.
  • ಪಾದಗಳಲ್ಲಿ ಜುಮ್ಮೆನಿಸುವುದು ಅಥವಾ ಚುಚ್ಚಿದಂತಾಗುವುದು
  • ಸುಡುವ ಅನುಭವ
  • ನೋವು ಅಥವಾ ಸಂಪೂರ್ಣ ಸಂವೇದನೆ ಕಳೆದುಕೊಳ್ಳುವುದು
  • ಸಣ್ಣ ಗಾಯಗಳೂ ಗೊತ್ತಾಗದಿರುವುದು
  • ಗಾಯಗಳು ನಿಧಾನವಾಗಿ ಗುಣಮುಖವಾಗುವುದು
  • ಸೋಂಕಿನ ಅಪಾಯ ಹೆಚ್ಚಾಗುವುದು

ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಗಾಯಗಳು ಗಂಭೀರವಾಗಿ ಬೆಳೆದು ಶಸ್ತ್ರಚಿಕಿತ್ಸೆ ಅಥವಾ ಅಪರೂಪದ ಸಂದರ್ಭಗಳಲ್ಲಿ ಅಂಗವಿಚ್ಛೇದನದ ಅಪಾಯವೂ ಉಂಟಾಗಬಹುದು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

  • ಗುಣವಾಗದ ಗಾಯಗಳು
  • ಪಾದಗಳಲ್ಲಿ ಕೆಂಪು ಅಥವಾ ಊತ
  • ಗಾಯದಿಂದ ಕೀವು ಹೊರಬರುವುದು
  • ಪಾದಗಳು ಹೆಚ್ಚು ಬಿಸಿಯಾಗಿರುವ ಅನುಭವ
  • ನಿರಂತರ ನೋವು ಅಥವಾ ಮರಗಟ್ಟುವಿಕೆ
  • ಚರ್ಮದ ಬಣ್ಣ ಬದಲಾವಣೆ
  • ಪದೇ ಪದೇ ಗುಳ್ಳೆಗಳು (Blisters)
  • ಉಗುರು ಸುತ್ತ ಸೋಂಕು
  • ನಡೆಯಲು ತೊಂದರೆ

ಇದನ್ನೂ ಓದಿ: ಪ್ರತಿದಿನ ವೈಟ್ ರೈಸ್ ತಿನ್ನುತ್ತಿದ್ದೀರಾ? ತೂಕ ನಿಯಂತ್ರಣಕ್ಕೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಮಧುಮೇಹ ರೋಗಿಗಳು ಪ್ರತಿದಿನ ಪಾಲಿಸಬೇಕಾದ ಪಾದಗಳ ಆರೈಕೆ

  • ಪ್ರತಿದಿನ ಉಗುರು, ಪಾದದ ಅಡಿಭಾಗ ಹಾಗೂ ಬೆರಳುಗಳ ಮಧ್ಯೆ ಪರಿಶೀಲಿಸಿ.
  • ಪಾದಗಳನ್ನು ತೊಳೆದು ಚೆನ್ನಾಗಿ ಒಣಗಿಸಿಕೊಳ್ಳಿ.
  • ಚರ್ಮ ಒಣಗದಂತೆ ಮಾಯಿಶ್ಚರೈಸರ್ ಬಳಸಿ. ಆದರೆ ಬೆರಳುಗಳ ಮಧ್ಯೆ ಹಚ್ಚಬೇಡಿ.
  • ಯಾವಾಗಲೂ ಸರಿಯಾದ ಗಾತ್ರದ ಶೂ ಮತ್ತು ಹತ್ತಿಯ ಸಾಕ್ಸ್ ಧರಿಸಿ.
  • ಚಪ್ಪಲಿ ಹಾಕದೆಯೇ ಬರಿ ಕಾಲಿನಲ್ಲಿ ನಡೆಯುವುದನ್ನು ತಪ್ಪಿಸಿ.
  • ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ನಿಯಂತ್ರಣದಲ್ಲಿ ಇಡಿ.
  • ವರ್ಷಕ್ಕೊಮ್ಮೆ ಅಥವಾ ವೈದ್ಯರ ಸಲಹೆಯಂತೆ ಪಾದಗಳ ಸಂಪೂರ್ಣ ಪರೀಕ್ಷೆ ಮಾಡಿಸಿಕೊಳ್ಳಿ.

ಪಾದಗಳ ಆರೋಗ್ಯಕ್ಕಾಗಿ ತಿನ್ನಬೇಕಾದ ಆಹಾರಗಳು

  • ಹಸಿರು ಸೊಪ್ಪುಗಳು
  • ಸಂಪೂರ್ಣ ಧಾನ್ಯಗಳು
  • ಬೇಳೆಕಾಳುಗಳು
  • ಕಡಲೆಕಾಯಿ ಮತ್ತು ಬಾದಾಮಿ
  • ಮೀನು (ಒಮೆಗಾ-3)
  • ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ಇರುವ ಆಹಾರಗಳು
  • ಸಾಕಷ್ಟು ನೀರು

ಕೆಳಗಿನ ಪರಿಸ್ಥಿತಿಗಳಲ್ಲಿ ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಿ.

  • ಎರಡು ದಿನಗಳಾದರೂ ಗಾಯ ಗುಣವಾಗದಿದ್ದರೆ
  • ಕೀವು ಅಥವಾ ದುರ್ವಾಸನೆ ಇದ್ದರೆ
  • ಜ್ವರದೊಂದಿಗೆ ಪಾದದಲ್ಲಿ ಸೋಂಕು ಕಂಡುಬಂದರೆ
  • ತೀವ್ರ ಊತ ಅಥವಾ ಕಪ್ಪು ಬಣ್ಣದ ಚರ್ಮ ಕಂಡುಬಂದರೆ
  • ನಡೆಯಲು ಸಾಧ್ಯವಾಗದಷ್ಟು ನೋವು ಇದ್ದರೆ

ಸೂಚನೆ: ಮಧುಮೇಹದಲ್ಲಿ ಪಾದಗಳ ಆರೈಕೆ ದೈನಂದಿನ ಅಭ್ಯಾಸವಾಗಬೇಕು. ನಿಯಮಿತ ರಕ್ತದ ಸಕ್ಕರೆ ನಿಯಂತ್ರಣ, ಆರೋಗ್ಯಕರ ಆಹಾರ, ವ್ಯಾಯಾಮ ಹಾಗೂ ಪಾದಗಳ ಸ್ವಚ್ಛತೆ ಡಯಾಬಿಟಿಕ್ ಫುಟ್ ಸಮಸ್ಯೆಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಂಡೀಸ್ ವಿರುದ್ದ ಸೋತ ಪಾಕ್ ತಂಡಕ್ಕೆ ಡಬಲ್ ಶಾಕ್ ನೀಡಿದ ಐಸಿಸಿ – Kannada News | Pak’s Double Blow: West Indies Test Defeat and ICC Penalizes Players for Misconduct

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ (Pakistan vs West Indies) ತಂಡಗಳು ಪ್ರಸ್ತುತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ವಿಂಡೀಸ್ 90 ರನ್​ಗಳಿಂದ ಗೆದ್ದುಕೊಂಡಿತು. ಬಾಬರ್ ಆಝಂ ನಾಯಕತ್ವದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪಾಕ್, ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್‌ ಮಾಡಿತು. ಹೀಗಾಗಿ ಪಾಕ್ ತಂಡಕ್ಕೆ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಎದುರಾಯಿತು. ಈ ಸೋಲಿನ ನೋವಿನಿಂದ ಹೊರಬರುವ ಮೊದಲೇ ಪಾಕಿಸ್ತಾನ ತಂಡಕ್ಕೆ ಐಸಿಸಿ (ICC) ಮತ್ತೊಂದು ಶಾಕ್ ನೀಡಿದೆ. ತಂಡದ ಇಬ್ಬರು ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ.

ಇಬ್ಬರು ಪಾಕ್ ಆಟಗಾರರ ವಿರುದ್ಧ ಐಸಿಸಿ ಕ್ರಮ

ಪಾಕಿಸ್ತಾನದ ವೇಗದ ಬೌಲರ್‌ಗಳಾದ ಮೊಹಮ್ಮದ್ ಅಬ್ಬಾಸ್ ಮತ್ತು ಖುರ್ರಮ್ ಶಹಜಾದ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪಂದ್ಯದ ಸಮಯದಲ್ಲಿ ಇಬ್ಬರೂ ಆಟಗಾರರು ಅವಾಚ್ಯ ಶಬ್ದಗಳನ್ನು ಬಳಸಿದ್ದು, ಲೆವೆಲ್ 1 ರ ಉಲ್ಲಂಘನೆಯಾಗಿದೆ. ಹೀಗಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಮೊಹಮ್ಮದ್ ಅಬ್ಬಾಸ್​ಗೆ ವಾಗ್ದಂಡನೆ ನೀಡಿದರೆ, ಖುರ್ರಮ್ ಶಹಜಾದ್ ಅವರ ಪಂದ್ಯ ಶುಲ್ಕದ 15% ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಇದರ ಜೊತೆಗೆ ಅವರಿಗೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ವಿಂಡೀಸ್ ಆಟಗಾರ ಶೈ ಹೋಪ್ ಅವರನ್ನು ಔಟ್ ಮಾಡಿದ ನಂತರ ಖುರ್ರಮ್ ಆಕ್ರಮಣಕಾರಿಯಾಗಿ ಆಚರಿಸಿದ್ದರು. ಮತ್ತೊಂದೆಡೆ, ಮೊಹಮ್ಮದ್ ಅಬ್ಬಾಸ್ ಜೋಮೆಲ್ ವಾರಿಕನ್ ಅವರನ್ನು ಔಟ್ ಮಾಡಿದ ನಂತರವೂ ಅದೇ ರೀತಿ ಮಾಡಿದ್ದರು. ಹೀಗಾಗಿ ಇವರಿಬ್ಬರ ಆಚರಣೆಗಳು ಆಕ್ರಮಣಕಾರಿ ಎಂದು ಪರಿಗಣಿಸಿರುವ ಐಸಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ.

IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ

ಫೈನಲ್​ ರೇಸ್​ನಿಂದ ಪಾಕ್ ಔಟ್

ಪಾಕಿಸ್ತಾನದ ಪರವಾಗಿ ಮೊಹಮ್ಮದ್ ಅಬ್ಬಾಸ್ ಅದ್ಭುತ ಬೌಲಿಂಗ್ ಮಾಡಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರ ಪರಿಣಾಮವಾಗಿ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 181 ರನ್‌ಗಳಿಗೆ ಆಲೌಟ್ ಆಗಿ ಪಾಕಿಸ್ತಾನಕ್ಕೆ ಕೇವಲ 211 ರನ್‌ಗಳ ಗುರಿ ನೀಡಿತು. ಆದರೆ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಗಿ ವಿಂಡೀಸ್ ವಿರುದ್ಧ ಸೋಲೊಪ್ಪಿಕೊಂಡಿತು. ನಾಯಕ ಬಾಬರ್ ಆಝಂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 58 ರನ್ ಗಳಿಸಿದರು. ಇತ್ತ ವಿಂಡೀಸ್ ಪರ ಜೇಡನ್ ಸೀಲ್ಸ್ 20 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಹೊರಬಿದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾ ಕಠಿಣ ನಿಲುವು ತಳೆಯಿರಿ; ಕಪ್ಪು ಸಮುದ್ರದ ದಾಳಿ ಬೆನ್ನಲ್ಲೇ ಭಾರತಕ್ಕೆ ಉಕ್ರೇನ್ ಸಲಹೆ – Kannada News | Will India Summon Russia? Ukraine Urges India To Act After Attacks On Sailors

ಕೈವ್, ಜುಲೈ 29: ಉಕ್ರೇನ್ ಬಳಿಯ ಕಪ್ಪು ಸಮುದ್ರದಲ್ಲಿ ಹಡಗುಗಳು ಮತ್ತು ಬಂದರು ಮೂಲಸೌಕರ್ಯಗಳ ಮೇಲೆ ರಷ್ಯಾ ನಿರಂತರವಾಗಿ ನಡೆಸುತ್ತಿರುವ ದಾಳಿಗಳು ಭಾರತೀಯ ನಾವಿಕರ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತಿವೆ ಎಂದು ಆರೋಪಿಸಿ ಉಕ್ರೇನ್ (Ukraine) ತೀವ್ರ ವಾಗ್ದಾಳಿ ನಡೆಸಿದೆ. ಕಪ್ಪು ಸಮುದ್ರದಲ್ಲಿ ಭಾರತೀಯ ನಾವಿಕರಿಗೆ ಅಪಾಯವನ್ನುಂಟುಮಾಡುತ್ತಿರುವ ದಾಳಿಗಳ ಕುರಿತು ವಿವರಣೆ ಕೋರಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ಪ್ರತಿನಿಧಿಯನ್ನು ಮತ್ತೊಮ್ಮೆ ಕರೆಸಿಕೊಂಡು ಸಮನ್ಸ್ ನೀಡಲಿದೆಯೇ? ಎಂದು ಉಕ್ರೇನ್ ಎಕ್ಸ್​ ಪೋಸ್ಟ್‌ನಲ್ಲಿ ಪ್ರಶ್ನಿಸಿದೆ.

ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿಯು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ರಷ್ಯಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿಯ ನಡುವೆಯೂ ಉಕ್ರೇನ್‌ನ ಚೊರ್ನೊಮೊರ್ಸ್ಕ್ ಬಂದರಿನಲ್ಲಿರುವ ‘ಎಂ.ವಿ. ಅಮೀರ್ 1’ (MV AMIR 1) ಹಡಗಿನಲ್ಲಿ 13 ಭಾರತೀಯ ಸಿಬ್ಬಂದಿ ಸೇರಿದಂತೆ ಹಲವರು ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು

ಸಂಕಷ್ಟಕ್ಕೆ ಸಿಲುಕಿರುವ ನಾವಿಕರಿಗೆ ಸಂಬಂಧಿಸಿದಂತೆ ಉಕ್ರೇನ್ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದ್ದು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಭಾರತದ ಮೌನಕ್ಕೆ ಉಕ್ರೇನ್ ಅಸಮಾಧಾನ:

ಕಪ್ಪು ಸಮುದ್ರದ ಭದ್ರತೆಗೆ ಸಂಬಂಧಿಸಿದಂತೆ ಉಕ್ರೇನ್ ವಿದೇಶಾಂಗ ಸಚಿವರು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ನಡುವೆ ದೂರವಾಣಿ ಸಂಭಾಷಣೆ ನಡೆಸಲು ಕೋರಿದ್ದ ಮನವಿಗೆ ಯಾವುದೇ ಪ್ರತಿಕ್ರಿಯೆ ಬಾರದಿರುವ ಬಗ್ಗೆ ಉಕ್ರೇನ್ ಅಸಮಾಧಾನ ವ್ಯಕ್ತಪಡಿಸಿದೆ. “ಭಾರತೀಯ ನಾವಿಕರನ್ನು ಅಪಾಯಕ್ಕೆ ಸಿಲುಕಿಸುವ ರಷ್ಯಾದ ದಾಳಿಗಳು ಮುಂದುವರಿದಿರುವುದರಿಂದ, ಭಾರತದ ವಿದೇಶಾಂಗ ಸಚಿವಾಲಯವು ಹೆಚ್ಚಿನ ವಿವರಣೆಗಳಿಗಾಗಿ ರಷ್ಯಾದ ಪ್ರತಿನಿಧಿಯನ್ನು ಮತ್ತೊಮ್ಮೆ ಕರೆಸಿಕೊಳ್ಳಲಿದೆಯೇ?” ಎಂದು ಉಕ್ರೇನ್ ರಾಯಭಾರ ಕಚೇರಿ ನೇರವಾಗಿ ಪ್ರಶ್ನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಖಾಲಿ ನಿವೇಶನ ಮಾಲೀಕರಿಗೆ ಜಿಬಿಎ ಬಿಗ್ ಶಾಕ್, ಸೈಟ್ ಕ್ಲೀನ್ ಇಲ್ಲದಿದ್ರೆ ದಂಡ – Kannada News | Gba to impose penalty of up to rs 1 lakh for bengaluru plot owners not clearing garbage by august 15

ಬೆಂಗಳೂರು, (ಜುಲೈ 29): ರಾಜಧಾನಿ ಬೆಂಗಳುರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಖಾಲಿ ನಿವೇಶನಗಳನ್ನು ತ್ಯಾಜ್ಯ ಸುರಿಯುವ ತಾಣ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೆ ಬ್ರೇಕ್ ಹಾಕಲು ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರ ಸೂಚನೆ ಮೇರೆಗೆ, ಆಗಸ್ಟ್ ತಿಂಗಳಿನಿಂದ ತ್ಯಾಜ್ಯದಿಂದ ಸ್ವಾತಂತ್ರ್ಯ ಎಂಬ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ನಗರದ ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್‌ಗಳು, ಕಟ್ಟಡ ತ್ಯಾಜ್ಯ, ಮರದ ಕೊಂಬೆಗಳು ಹಾಗೂ ರಸ್ತೆಬದಿ ಬಿದ್ದಿರುವ ವಿದ್ಯುತ್ ಕಂಬ, ಪೈಪ್‌ಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಪಾಲಿಕೆಗಳು ಮುಂದಾಗಿವೆ. ಇದರ ಜೊತೆಗೆ ನಗರದ ಎಲ್ಲಾ ಖಾಲಿ ನಿವೇಶನ ಮಾಲೀಕರಿಗೆ ಆಗಸ್ಟ್ 15ರ ಗಡುವು ನೀಡಲಾಗಿದೆ.

ಹೌದು… ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸದಿದ್ದರೆ, ಪಾಲಿಕೆ ವತಿಯಿಂದಲೇ ತ್ಯಾಜ್ಯ ತೆರವುಗೊಳಿಸಲಾಗುತ್ತದೆ. ಆದರೆ, ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಮತ್ತು ತೆರವುಗೊಳಿಸಿದ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅಡಿಯಲ್ಲಿ ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆ ಸ್ಪಾಟ್​ ಆಗುತ್ತಿದೆಯಾ ಮೆಟ್ರೋ? ಈವರೆಗೆ ಪ್ರಾಣ ಕಳೆದುಕೊಂಡವರೆಷ್ಟು?

ಖಾಲಿ ನಿವೇಶನ ಸ್ವಚ್ಛವಿಲ್ಲದಿದ್ದರೆ ದಂಡ

ಒಂದು ವೇಳೆ ತೆರಿಗೆ ಬಾಕಿ ಉಳಿಸಿಕೊಂಡರೆ, ‘ಕರ್ನಾಟಕ ಭೂಕಂದಾಯ ಕಾಯ್ದೆ 1964’ರ ಪ್ರಕಾರ ಕಠಿಣ ವಸೂಲಾತಿ ಕ್ರಮ ಜರುಗಿಸಲಾಗುತ್ತದೆ.ನಿಯಮ ಉಲ್ಲಂಘಿಸುವ ನಿವೇಶನದಾರರಿಗೆ ದಂಡದ ಬಿಸಿಯೂ ತಟ್ಟಲಿದೆ. ಮೊದಲ ಉಲ್ಲಂಘನೆಗೆ 25,000 ರೂಪಾಯಿ ದಂಡ ವಿಧಿಸಿದರೆ, ನಂತರದ ಉಲ್ಲಂಘನೆಗಳಿಗೆ 50,000 ದಿಂದ 1 ಲಕ್ಷ ರೂಪಾಯಿಯವರೆಗೆ ದಂಡ ಹಾಕಲಾಗುತ್ತದೆ. ಇನ್ನು ನಿವೇಶನಗಳನ್ನು ಸ್ವಚ್ಛಗೊಳಿಸಿದ ಬಳಿಕ, ಅಲ್ಲಿ ಮತ್ತೆ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿಯಾಗದಂತೆ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ಗೋಡೆ ನಿರ್ಮಿಸಿಕೊಳ್ಳುವುದು ಸಹ ಮಾಲೀಕರ ಜವಾಬ್ದಾರಿಯಾಗಿದೆ.

ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಲು ಅವಕಾಶ

ಒಂದು ವೇಳೆ ನಿಮ್ಮ ಸುತ್ತಮುತ್ತಲಿನ ಖಾಲಿ ನಿವೇಶನಗಳನ್ನು ಮಾಲೀಕರು ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರೂ ದೂರು ನೀಡಬಹುದು. ಅಂತಹ ನಿವೇಶನಗಳ ಛಾಯಾಚಿತ್ರ ಹಾಗೂ GPS Co-ordinates ನೊಂದಿಗೆ 9448197197 ನಂಬರ್‌ಗೆ ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ದೂರು ನೀಡುವ ಸಾರ್ವಜನಿಕರ ಮಾಹಿತಿಯನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಿದ್ದಾರೆ. ಒಟ್ಟಿನಲ್ಲಿ, ಖಾಲಿ ನಿವೇಶನ ಇಟ್ಟುಕೊಂಡು ಸುಮ್ಮನೆ ಕುಳಿತರೆ ಇನ್ಮುಂದೆ ಜೇಬಿಗೆ ಕತ್ತರಿ ಬೀಳುವುದು ಖಚಿತ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

ಪಾಕಿಸ್ತಾನ ಸೇನೆಯಿಂದ ಬಲೂಚಿಸ್ತಾನದ ಬಾಲಕಿಯ ಹತ್ಯೆ; ಹಮಾಸ್ ರೀತಿ ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಮೆರವಣಿಗೆ – Kannada News | Pakistan Army killed Balochistan Girl Parades her Body in Streets In Hamas Style

ಬಲೂಚಿಸ್ತಾನ, ಜುಲೈ 29: ಬಲೂಚಿಸ್ತಾನದಲ್ಲಿ ಪಾಕಿಸ್ತಾನ (Pakistan) ಸೇನೆಯ ದೌರ್ಜನ್ಯಗಳ ಕುರಿತು ಹೊಸ ವರದಿಗಳು ಹೊರಬಿದ್ದಿದ್ದು, ಆ ಪ್ರಾಂತ್ಯದಲ್ಲಿ ಸೇನೆಯು ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳ ಕುರಿತು ಕಳವಳಗಳು ತೀವ್ರಗೊಂಡಿವೆ. ಪಾಕಿಸ್ತಾನ ಸೇನೆಯ ಸಿಬ್ಬಂದಿ ಬಲೂಚಿಸ್ತಾನದಲ್ಲಿ ನಿರಪರಾಧಿ ಬಾಲಕಿಯೊಬ್ಬಳಿಗೆ ಗುಂಡಿಕ್ಕಿ ಕೊಂದ ನಂತರ, ಹಮಾಸ್ ಮಾದರಿಯಲ್ಲಿ ಆಕೆಯ ಮೃತದೇಹವನ್ನು ಸೇನಾ ವಾಹನದ ಮುಂಭಾಗದಲ್ಲಿ ಕಟ್ಟಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಪಾಕಿಸ್ತಾನ ಸೇನೆಯು ಕಳೆದ ಹಲವಾರು ವರ್ಷಗಳಿಂದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾಗಳಲ್ಲಿ ಇಂತಹ ದೌರ್ಜನ್ಯಗಳನ್ನು ನಡೆಸುತ್ತಾ ಬಂದಿದೆ.

ಪಾಕಿಸ್ತಾನ ಸೇನೆಯು ಬಲೂಚಿಸ್ತಾನ ಹಾಗೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಸ್ಥಳೀಯ ನಾಗರಿಕರ ವಿರುದ್ಧ ಸುದೀರ್ಘ ಕಾಲದಿಂದ ಇಂತಹ ಕಠಿಣ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂಬ ಆರೋಪಗಳಿವೆ.

ಇದನ್ನೂ ಓದಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಸ್ಫೋಟ: ಇಬ್ಬರು ಸಾವು, ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಥಳೀಯ ನಾಯಕ

ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಹಿಂಸಾಚಾರ:

ಈ ಘಟನೆಯ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದ (PoK) ರಾವಲಾಕೋಟ್ ಪ್ರದೇಶದಲ್ಲೂ ಭಾರಿ ಪ್ರತಿಭಟನೆಗಳು ಹಾಗೂ ಹಿಂಸಾಚಾರ ವರದಿಯಾಗಿದೆ. ರಾವಲಾಕೋಟ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ಪಾಕಿಸ್ತಾನಿ ಪಡೆಗಳು ಕಳೆದ ಎರಡು ದಿನಗಳಲ್ಲಿ 32 ಕಾಶ್ಮೀರಿ ಪ್ರತಿಭಟನಾಕಾರರನ್ನು ಹತ್ಯೆ ಮಾಡಿವೆ ಎನ್ನಲಾಗಿದೆ.

ಪಿಒಕೆಯಲ್ಲಿನ ಸಾರ್ವಜನಿಕ ಪ್ರತಿಭಟನೆಗಳ ಮೇಲಿನ ಕಠಿಣ ಕ್ರಮವನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, “ನಾನು ಆಜಾದ್ ಕಾಶ್ಮೀರದ ಪ್ರತಿಭಟನಾಕಾರರನ್ನು ಭಾರತದಂತೆಯೇ ನಮ್ಮ ಶತ್ರುಗಳು ಎಂದು ಪರಿಗಣಿಸುತ್ತೇನೆ” ಎಂದು ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ – Kannada News | Senior actress Urvashi talks about Puneeth Rajkumar in Bully Kannada movie press meet

ಖ್ಯಾತ ನಟಿ ಊರ್ವಶಿ (Urvashi) ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ‘ರಾಮ ಶಾಮ ಭಾಮ’ ಸಿನಿಮಾದ ಬಳಿಕ ದೊಡ್ಡ ಗ್ಯಾಪ್ ಆಗಿತ್ತು. ಈಗ ‘ಬುಲ್ಲಿ’ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಊರ್ವಶಿ ಅವರು ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡರು. ‘ಕನ್ನಡ ಚಿತ್ರರಂಗ ನನ್ನನ್ನು ಬಿಡಲ್ಲ. ಅದು ನನಗೆ ಗೊತ್ತು. ರಾಜ್​ಕುಮಾರ್ ಜೊತೆಯಲ್ಲಿ ನಾನು ನಟಿಸಿದೆ. ಅಪ್ಪು ಜೊತೆ ಒಂದು ಹಾಡಿನಲ್ಲಿ ನಟಿಸಿದೆ. ಒಂದಿನ ನನಗೆ ಅಪ್ಪು ಕರೆ ಮಾಡಿದರು. ವಯಸ್ಸಿನಲ್ಲಿ ನನಗಿಂತ 5-6 ವರ್ಷ ಮಾತ್ರ ವ್ಯತ್ಯಾಸ ಇರುವ ನೀನು ತಾಯಿ ಪಾತ್ರ ಯಾಕೆ ಮಾಡುತ್ತೀಯಾ ಅಂತ ಕೇಳಿದರು. ನಾನು ಗ್ಲಾಮರ್ ಮಾಡಲ್ಲ ಅಂದೆ. ಓಕೆ ನಾವಿಬ್ಬರು ಒಂದು ಡ್ಯಾನ್ಸ್ ಮಾಡೋಣ ಬಾ ಅಂತ ಕರೆದರು’ ಎಂದು ‘ರಾಜ್ ದಿ ಶೋ ಮ್ಯಾನ್’ ಸಿನಿಮಾದ ಚಿತ್ರೀಕರಣದ ದಿನಗಳನ್ನು ಊರ್ವಶಿ ಅವರು ನೆನಪಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಾವೇ ದೂರುದಾರರಾಗಿ, ತಾವೇ ತೀರ್ಪು ಕೊಟ್ಟ ಮಾಲೂರು ಜಡ್ಜ್: ಹೈಕೋರ್ಟ್ ಛೀಮಾರಿ – Kannada News | Karnataka high court stays On fir filed by malur jmfc judge against biker and family

ಬೆಂಗಳೂರು, (ಜುಲೈ 29):  ಖಾಸಗಿ ಜಗಳಕ್ಕೆ ತಮಗಿರುವ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೈಕ್ ಸವಾರ (Biker), ಆತನ ತಾಯಿ ಹಾಗೂ 69 ವರ್ಷದ ವೃದ್ಧ ತಾತನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದ ಮಾಲೂರು ಜೆಎಂಎಫ್‌ಸಿ (JMFC) ಜಡ್ಜ್ ಗಾಯತ್ರಿ ಅವರ ವರ್ತನೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹೌದು..  ಬೈಕ್ ಸವಾರ, ಅಜ್ಜ, ಮಹಿಳೆ ಮೇಲಿನ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಜಡ್ಜ್ ಆದ ಮಾತ್ರಕ್ಕೆ ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ ಎಂದು ಜೆಎಂಎಫ್ ಸಿ ಜಡ್ಜ್ ವರ್ತನೆಗೆ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ  ಬೈಕ್ ಚಾಲಕ, ತಾಯಿ, ತಾತನ ವಿರುದ್ಧದ ಎಫ್ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಾವೇ ದೂರುದಾರರು, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ

ಮಾಲೂರು ಜಡ್ಜ್ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ಪತಿಯೊಂದಿಗೆ ತೆರಳುತ್ತಿದ್ದಾಗ ನಿಧಾನಕ್ಕೆ ಚಲಿಸುವಂತೆ ಬೈಕ್ ಚಾಲಕ ಹೇಳಿದ್ದಕ್ಕೆ ಜಗಳ ಮಾಡಿದ್ದಾರೆ. ಜಡ್ಜ್ ಗಾಯತ್ರಿ ಹಾಗೂ ಪತಿ ಆತನ‌ ಮನೆಯವರೆಗೆ ಚೇಸ್ ಮಾಡಿದ್ದಾರೆ. ಸಿಸಿಟಿವಿ ವೈರಲ್ ಆದ ಬಳಿಕ ಎಫ್ಐಆರ್ ದಾಖಲಿಸಿದ್ದಾರೆ. ಜಡ್ಜ್ ಒತ್ತಡದಿಂದ 70 ವರ್ಷದ ತಾತನನ್ನೂ ಪೊಲೀಸರು ಬಂಧಿಸಿದ್ದರು ಎಂದು ಎಸ್ ಪಿಪಿ ಬಿ.ಎನ್.ಜಗದೀಶ್ ಅವರು ಜಗಳದ ದೃಶ್ಯ ನ್ಯಾಯಮೂರ್ತಿಗಳಿಗೆ ತೋರಿಸಿದ್ದಾರೆ. ಅಲ್ಲದೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ದೃಶ್ಯ ತಗೆಯಲೂ ಆದೇಶಿಸಿದ್ದಾರೆ. ತಾವೇ ದೂರುದಾರರು, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ ಎಂದು ಎಸ್ ಪಿಪಿ ಬಿ.ಎನ್.ಜಗದೀಶ್ ವಾದ ಮಂಡಿಸಿದರು.

ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ

ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ,  ಜಡ್ಜ್ ಆದ ಮಾತ್ರಕ್ಕೆ ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ. ಜಡ್ಜ್ ಹುದ್ದೆಗೆ ಥರವಲ್ಲದ ರೀತಿಯಲ್ಲಿ ಗಾಯತ್ರಿ ವರ್ತಿಸಿದ್ದಾರೆ. ಜಡ್ಜ್ ನಡವಳಿಕೆ ಕೋರ್ಟ್ ನೊಳಗೂ ಹೊರಗೂ ವಿಶ್ವಾಸ ಮೂಡಿಸುವಂತಿರಬೇಕು. ಜಡ್ಜ್ ತಮ್ಮ ಹುದ್ದೆಯನ್ನು ದುರುಪಯೋಗಡಿಸಿಕೊಂಡಿದ್ದಾರೆ ಎಂದು ಹೇಳಿ   ಜಡ್ಜ್ ದಾಖಲಿಸಿದ ಎಫ್ಐಆರ್ ಗೆ ಮಧ್ಯಂತರ ತಡೆ ನೀಡಿದೆ.

ಘಟನೆ ಹಿನ್ನೆಲೆ

ಮಾಲೂರು ಘಟನೆ ಹಿನ್ನೆಲೆ‌ ನೋಡುವುದಾದರೆ, ನ್ಯಾಯಾಧೀಶರ ಕಾರಿಗೆ ಅಡ್ಡಿ ಬಂದ ದ್ವಿಚಕ್ರ ವಾಹನ ಸವಾರನೊಂದಿಗೆ ನ್ಯಾಯಾಧೀಶೆ ಜಗಳ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು, ಈ ಸಂಬಂಧ ಮಾಲೂರು ಪೊಲೀಸರಿಗೆ ದೂರು ಸಲ್ಲಿಸಿದ್ದ ನ್ಯಾಯಾಧೀಶೆ ಗಾಯತ್ರಿ ದೂರಿನ ಆಧಾರದ ಮೇಲೆ ಮಾಲೂರು ಪೊಲೀಸರು ಮೂವರನ್ನು ಬಂಧಿಸಿದ್ದರು. ಕೋಲಾರ ಜಿಲ್ಲೆಯ ಮಾಲೂರು ನಗರದ ಕೆ.ಎಂ.ವಿನಯ್ (24), ಅವರ ತಾಯಿ ಕವಿತಾ (47) ಹಾಗೂ ತಾತ ವೆಂಕಟೇಶ್ (69) ಎಂಬುವವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಅದು ಸಹ ತಮ್ಮ ಕಾರಿಗೆ ದ್ವಿಚಕ್ರ ವಾಹನ ಚಾಲಕ ವಿನಯ್ ಉದ್ದೇಶ ಪೂರ್ವಕವಾಗಿ ಅಡ್ಡಿ ಪಡಿಸಿದ್ದಾನೆ ಎಂದು ದೂರು ನೀಡಿದ್ರು. ಸದ್ಯ ಈ ಪ್ರಕರಣಕ್ಕೆ ಮಧ್ಯಂತರ ತಡೆ ನೀಡುವ‌ ಮೂಲಕ ನ್ಯಾಯಾಧೀಶೆಗೆ ಹಿನ್ನಡೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ 

Source link

Exit mobile version