VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..! – Kannada News | Unbelievable catch in tape ball cricket
ಪಂದ್ಯ ವೀಕ್ಷಿಸಲು ಹೋಗಿ ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕನೋರ್ವ 20 ಸಾವಿರ ರೂ. ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಇಂತಹದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಪಾಕಿಸ್ತಾನದ ಟೇಪ್ ಬಾಲ್ ಚಾಂಪಿಯನ್ಶಿಪ್ ಟೂರ್ನಿ. ಈ ಪಂದ್ಯದಲ್ಲಿ ಮುಲ್ತಾನ್ ಹಾಗೂ ಸಿಯಾಕೋಟ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಪರ ವಿಕ್ಕಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಬಾರಿಸಿದ ಸಿಕ್ಸರ್ವೊಂದು ಪ್ರೇಕ್ಷಕರಿದ್ದ ಗ್ಯಾಲರಿಗೆ ಸಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಓಡಿ ಬಂದು ಚೆಂಡು ಹಿಡಿದಿದ್ದಾರೆ. ಓಡಿ ಬಂದ ರಭಸಕ್ಕೆ ನಿಯಂತ್ರಣ…