Headlines

Mercury Transit: ಬುಧ ಕರ್ಕಾಟಕ ರಾಶಿ ಪ್ರವೇಶ; ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ – Kannada News | Mercury Transit in Cancer: Lucky Boost for Gemini, Virgo, Cancer, Libra Zodiacs!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಸಂಚಾರವು 12 ರಾಶಿಗಳ ಮೇಲೂ ವಿಭಿನ್ನ ಪರಿಣಾಮ ಬೀರುತ್ತದೆ. ಶೀಘ್ರದಲ್ಲೇ ಬುಧ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಅದೃಷ್ಟದ ಯೋಗಗಳು ಸೃಷ್ಟಿಯಾಗಲಿವೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ವಿಶೇಷವಾಗಿ ಮಿಥುನ, ಕನ್ಯಾ, ಕರ್ಕಾಟಕ ಮತ್ತು ತುಲಾ ರಾಶಿಯವರಿಗೆ ಈ ಸಂಚಾರವು ವೃತ್ತಿ, ಹಣಕಾಸು ಹಾಗೂ ಕುಟುಂಬ ಜೀವನದಲ್ಲಿ ಶುಭ ಫಲಗಳನ್ನು ನೀಡುವ ಸಾಧ್ಯತೆ ಇದೆ. ಮಿಥುನ ರಾಶಿ: ಮಿಥುನ ರಾಶಿಯ ಅಧಿಪತಿ ಬುಧನಾಗಿರುವುದರಿಂದ ಈ…

Read More

37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ: ಹಾಸನ, ಮಂಡ್ಯ, ತುಮಕೂರು ರೈತರಲ್ಲಿ ಆತಂಕ – Kannada News | Severe Drought Impacts Hemavathi Dam: Low Water Storage and Farmer Distress in Karnataka

ಬೆಂಗಳೂರು, ಜು.29: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಭೀತಿ ಎದುರಾಗಿರುವ ಸಂದರ್ಭದಲ್ಲಿ, ಕಾವೇರಿ ನ್ಯಾಯಾಧಿಕರಣದ ಆದೇಶವು ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ತಮಿಳುನಾಡಿಗೆ ನೀರು ಬಿಡುವ ಆದೇಶದ ನಡುವೆ, ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಅತ್ಯಂತ ಕಡಿಮೆ ಇದೆ. ಒಟ್ಟು 37 ಟಿಎಂಸಿ ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ಕೇವಲ 24.195 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 35-36…

Read More

Moss Removing Tips: ಪಾಚಿಗಟ್ಟಿದ ನೆಲವನ್ನು ಸ್ವಚ್ಛಗೊಳಿಸಲು ಈ ಸುಲಭ ಟಿಪ್ಸ್‌ ಪಾಲಿಸಿ ಸಾಕು – Kannada News | Here are some simple tricks to get rid of moss on wall and floor

ಮಳೆಗಾಲದಲ್ಲಿ ಗೋಡೆ, ನೆಲದ ಮೇಲೆ ಪಾಚಿ (moss) ಬೆಳೆಯೋದು ಸಾಮಾನ್ಯ. ತೇವಾಂಶದ ಕಾರಣದಿಂದಾಗಿ ಮನೆಯಂಗಳದಲ್ಲಿ ಹಾಸಿರುವ ಇಂಟರ್‌ಲಾಕ್‌, ಟೆರೇಸ್‌, ಗೋಡೆಗಳ ಮೇಲೆ ಪಾಚಿಗಳು ಬೆಳೆಯುತ್ತವೆ. ನೆಲದ ಮೇಲಿರುವ ಈ ಪಾಚಿಯ ಮೇಲೆ ಕಾಲಿಟ್ಟರೆ ಜಾರಿ ಬೀಳೋದಂತೂ ಗ್ಯಾರಂಟಿ. ಅದರಲ್ಲೂ ಮನೆಯಲ್ಲಿ ಹಿರಿಯರು ಮಕ್ಕಳು ಇದ್ದರಂತೂ ತುಂಬಾನೇ ಕಷ್ಟ. ಅವರು ಅತ್ತಿತ್ತ ಓಡಾಡುವ ಕಾರಣ ನೆಲದ ಮೇಲೆ ಅಂಟಿರುವ ಪಾಚಿಯನ್ನು ಕ್ಲೀನ್‌ ಮಾಡುತ್ತಲೇ ಇರಬೇಕು. ಅಷ್ಟೇ ಅಲ್ಲದೆ ಗೋಡೆಗಳ ಮೇಲೆ ಅಂಟಿರುವ ಪಾಚಿಯನ್ನು ಸಹ ತೆಗೆದುಹಾಕಬೇಕು, ಇಲ್ಲದಿದ್ದರೆ ಅದು…

Read More

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ: ನಿವಾಸಿಗಳಲ್ಲಿ ಹೆಚ್ಚಿದ ಆತಂಕ – Kannada News | Bengalurus Byadarahalli Residents Live in Fear as Leopard Spotted Five Times in a Month

AQI Sign In Continue with Google ಕನ್ನಡहिन्दीNews9తెలుగుमराठीગુજરાતીবাংলাਪੰਜਾਬੀதமிழ்മലയാളം logout Source link

Read More

ತಾಯಿ ನಮ್ಮನ್ನಗಲಿದ್ದಾರೆ ಎಂಬುವುದನ್ನ ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: ಹೆಚ್​ಡಿ ಕುಮಾರಸ್ವಾಮಿ ಭಾವುಕ ಮಾತು – Kannada News | I Cannot imagin the Thought That Mother Has Left Us: H.D. Kumaraswamy

ಹಾಸನ, ಜುಲೈ 29: ಮಾಜಿ ಪ್ರದಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ಕಾರ್ಯ ನಾಳೆ ನಡೆಯಲಿದ್ದು, ಉತ್ತರ ಕ್ರಿಯಾದಿ ಕಾರ್ಯಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ‘ತಾಯಿ ನಮ್ಮನ್ನಗಲಿದ್ದಾರೆ ಎಂದು ನೆನಸಿಕೊಳ್ಳಲಿಕ್ಕೂ ಸಹ ಸಾಧ್ಯವಿಲ್ಲ, ಅವರು ನಮ್ಮೊಂದಿಗಿ ಓಡಾಡಿಕೊಂಡಿದ್ದಾರೆ ಎಂಬ ಭಾವನೆ ಇದೆ. ತಾಯಿ ಭೂಮಿ ತಾಯಿಯ ಮಡಿಲನ್ನು ಸೇರಿದ್ದರೂ, ಅವರು ತಮ್ಮ ಹೃದಯದಲ್ಲಿ ಸದಾ ಇರುತ್ತಾರೆ. ನನ್ನ ಬಳಿಗೆ…

Read More

ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಈ ಒಂದು ಬದಲಾವಣೆ ಸಾಕು! ಇಲ್ಲಿದೆ ಡಯಟಿಷಿಯನ್ ನೀಡಿದ ಸಲಹೆ – Kannada News | Protein Idli Benefits: A Healthy Breakfast for Weight Management

ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯ ಸಮಸ್ಯೆ ಅಂದರೆ ಬೊಜ್ಜು ಎಲ್ಲ ವಯಸ್ಸಿನವರಲ್ಲೂ ಹೆಚ್ಚಾಗುತ್ತಿದೆ. ತೂಕ ಇಳಿಸಿಕೊಳ್ಳಲು ಹಲವರು ಬೆಳಗಿನ ಉಪಹಾರವನ್ನು ಬಿಟ್ಟುಬಿಡುವುದು ಅಥವಾ ಕಡಿಮೆ ತಿನ್ನುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಉಪಹಾರವನ್ನು ಬಿಡುವುದಕ್ಕಿಂತ ಪ್ರೋಟೀನ್, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ. ಇದಕ್ಕೆ ಪೂರಕವೆಂಬಂತೆ ಡಯಟಿಷಿಯನ್‌ಗಳು ಶಿಫಾರಸು ಮಾಡುವ ಪ್ರೋಟೀನ್ ಇಡ್ಲಿ ಆರೋಗ್ಯಕರ ಉಪಹಾರಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಅನಿಸುವುದರ…

Read More

ಜೆನ್ ಜಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ವಿಶಾಲ್ ದದ್ಲಾನಿ: ಕಂಗನಾ ಮಾತಿಗೆ ತಿರುಗೇಟು – Kannada News | Singer Composer Vishal Dadlani defends CJP Gen Z protester after Kangana Ranaut post

ಇತ್ತೀಚೆಗೆ ನಡೆದ ಜೆನ್ ಜಿ (Gen Z) ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅವರ ಭಾಷಾ ಶೈಲಿಯನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ (Kangana Ranaut) ಹೇಳಿಕೆಗೆ ಬಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ವಿಶಾಲ್ ದದ್ಲಾನಿ (Vishal Dadlani) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ಯುವಜನರ ಪರವಾಗಿ ಧ್ವನಿ ಎತ್ತಿರುವ ವಿಶಾಲ್, ವಿದ್ಯಾರ್ಥಿಗಳ ಮೇಲಾದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ…

Read More

ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಮುಖ್ಯಸ್ಥ ವಿನೀತ್ ಗುಪ್ತಾ ಸಲಹೆ – Kannada News | Cauvery Water Dispute: CWRC Recommends Distress Formula Amidst Karnatakas Drought Crisis

ನವದೆಹಲಿ, ಜುಲೈ 29: ಕಾವೇರಿ ನೀರು ಹಂಚಿಕೆ ವಿವಾದ ತಾರಕಕ್ಕೇರಿದ್ದು, ಸಂಕಷ್ಟ ಸೂತ್ರ ಪಾಲಿಸುವಂತೆ CWRC (ಕಾವೇರಿ ನೀರು ನಿಯಂತ್ರಣ ಸಮಿತಿ) ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸಲಹೆ ನೀಡಿದೆ. CWRC ಮುಖ್ಯಸ್ಥ ವಿನೀತ್ ಗುಪ್ತಾ ಈ ಶಿಫಾರಸು ಮಾಡಿದ್ದಾರೆ. ಇದೇ ವೇಳೆ, ಬಿಜೆಪಿ ನಿಯೋಗವು ಕನಕಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿದೆ. ವಿಪಕ್ಷ ನಾಯಕ ಆರ್. ಅಶೋಕ್ ದಾವಣಗೆರೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮತ್ತು 10,000 ಕೋಟಿ ರೂಪಾಯಿ ಪರಿಹಾರ ಬಿಡುಗಡೆ…

Read More

ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ – Kannada News | After 2 Years After His Death Supreme Court gives clean chit to former PM Manmohan Singh in coal scam case

ನವದೆಹಲಿ, ಜುಲೈ 29: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Dr Manmohan Singh) ನಿಧನರಾದ 2 ವರ್ಷಗಳ ನಂತರ, ಅವರ ಆಡಳಿತಾವಧಿಯ ಮೇಲೆ ಕಪ್ಪುಚುಕ್ಕೆಯಾಗಿದ್ದ ಕಲ್ಲಿದ್ದಲು ಹಗರಣದ ಪ್ರಕರಣವೊಂದಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದಿದೆ. ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court)  ಮನಮೋಹನ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆ ಎದುರಿಸುವಂತೆ ಮನಮೋಹನ್ ಸಿಂಗ್ ಮತ್ತು ಇತರ ಐವರಿಗೆ…

Read More

ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯದಲ್ಲಿ 84 ಲಕ್ಷಕ್ಕೂ ಹೆಚ್ಚು ASDDO ಮತದಾರರು ಪತ್ತೆ – Kannada News | Karnataka Voter List Revision: Over 84 Lakh ASDDO Voters Identified; V Anbukumar

ಬೆಂಗಳೂರು, ಜುಲೈ 29: ‘ರಾಜ್ಯದಲ್ಲಿ ಇದುವರೆಗೆ ವಿತರಿಸಲಾದ ಒಟ್ಟು 5,54,32,314 ಎನ್ಯುಮರೇಷನ್ ಅರ್ಜಿಗಳ ಪೈಕಿ 4,26,75,861 ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಶೇ. 76.99 ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಪರಿಶೀಲನೆ ವೇಳೆ ರಾಜ್ಯಾದ್ಯಂತ ಗೈರಾದ, ಸ್ಥಳಾಂತರಗೊಂಡ, ಮೃತಪಟ್ಟ, ನಕಲಿ ಮತ್ತು ಇತರೆ ವರ್ಗಕ್ಕೆ (ASDDO) ಸೇರಿದ ಒಟ್ಟು 84,31,612 ಮತದಾರರು ಪತ್ತೆಯಾಗಿದ್ದಾರೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ (v anbukumar)​​​ ಹೇಳಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಿಷ್ಟು  ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ…

Read More