Mercury Transit: ಬುಧ ಕರ್ಕಾಟಕ ರಾಶಿ ಪ್ರವೇಶ; ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ – Kannada News | Mercury Transit in Cancer: Lucky Boost for Gemini, Virgo, Cancer, Libra Zodiacs!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಸಂಚಾರವು 12 ರಾಶಿಗಳ ಮೇಲೂ ವಿಭಿನ್ನ ಪರಿಣಾಮ ಬೀರುತ್ತದೆ. ಶೀಘ್ರದಲ್ಲೇ ಬುಧ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಅದೃಷ್ಟದ ಯೋಗಗಳು ಸೃಷ್ಟಿಯಾಗಲಿವೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ವಿಶೇಷವಾಗಿ ಮಿಥುನ, ಕನ್ಯಾ, ಕರ್ಕಾಟಕ ಮತ್ತು ತುಲಾ ರಾಶಿಯವರಿಗೆ ಈ ಸಂಚಾರವು ವೃತ್ತಿ, ಹಣಕಾಸು ಹಾಗೂ ಕುಟುಂಬ ಜೀವನದಲ್ಲಿ ಶುಭ ಫಲಗಳನ್ನು ನೀಡುವ ಸಾಧ್ಯತೆ ಇದೆ.

ಮಿಥುನ ರಾಶಿ:

ಮಿಥುನ ರಾಶಿಯ ಅಧಿಪತಿ ಬುಧನಾಗಿರುವುದರಿಂದ ಈ ಸಂಚಾರವು ವಿಶೇಷ ಶುಭಫಲ ನೀಡಲಿದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಆದಾಯ ಹೆಚ್ಚಾಗಬಹುದು ಮತ್ತು ಹೂಡಿಕೆಗಳಿಂದ ಉತ್ತಮ ಲಾಭ ದೊರೆಯಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೂ ಬುಧನ ಸಂಚಾರ ಅನುಕೂಲಕರವಾಗಲಿದೆ. ಹೊಸ ಯೋಜನೆಗಳು ಯಶಸ್ವಿಯಾಗಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಕರ್ಕಾಟಕ ರಾಶಿ:

ಬುಧನ ಪ್ರವೇಶದಿಂದ ಕರ್ಕಾಟಕ ರಾಶಿಯವರಿಗೆ ಉದ್ಯೋಗ ಹಾಗೂ ವ್ಯವಹಾರದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಇದು ಅನುಕೂಲಕರ ಸಮಯ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಮತ್ತು ಆರ್ಥಿಕ ಸ್ಥಿರತೆ ಹೆಚ್ಚಾಗಬಹುದು.

ತುಲಾ ರಾಶಿ:

ತುಲಾ ರಾಶಿಯವರಿಗೆ ಹೊಸ ಜವಾಬ್ದಾರಿಗಳು ಮತ್ತು ವೃತ್ತಿಯಲ್ಲಿ ಪ್ರಗತಿಯ ಅವಕಾಶಗಳು ಸಿಗಬಹುದು. ಆದಾಯದಲ್ಲಿ ಹೆಚ್ಚಳ, ಹೂಡಿಕೆಗೆ ಅನುಕೂಲಕರ  ಸಮಯ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ. ಕುಟುಂಬ ಜೀವನವೂ ಸಂತೋಷಕರವಾಗಿರಲಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ: ಹಾಸನ, ಮಂಡ್ಯ, ತುಮಕೂರು ರೈತರಲ್ಲಿ ಆತಂಕ – Kannada News | Severe Drought Impacts Hemavathi Dam: Low Water Storage and Farmer Distress in Karnataka

ಬೆಂಗಳೂರು, ಜು.29: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಭೀತಿ ಎದುರಾಗಿರುವ ಸಂದರ್ಭದಲ್ಲಿ, ಕಾವೇರಿ ನ್ಯಾಯಾಧಿಕರಣದ ಆದೇಶವು ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ತಮಿಳುನಾಡಿಗೆ ನೀರು ಬಿಡುವ ಆದೇಶದ ನಡುವೆ, ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಅತ್ಯಂತ ಕಡಿಮೆ ಇದೆ. ಒಟ್ಟು 37 ಟಿಎಂಸಿ ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ಕೇವಲ 24.195 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 35-36 ಟಿಎಂಸಿ ನೀರಿತ್ತು ಮತ್ತು ಜಲಾಶಯ ಎರಡು ಬಾರಿ ಭರ್ತಿಯಾಗಿತ್ತು. ಈ ಬಾರಿ ಜಲಾಶಯಕ್ಕೆ ಕೇವಲ 5,690 ಕ್ಯೂಸೆಕ್ ಒಳಹರಿವು ಇದ್ದು, ಕಳೆದ ವರ್ಷದ 14,935 ಕ್ಯೂಸೆಕ್‌ಗೆ ಹೋಲಿಸಿದರೆ ಇದು ತೀರಾ ಕಡಿಮೆ. ನೀರಿನ ಕೊರತೆಯಿಂದಾಗಿ ಈ ಬಾರಿ ಕಾಲುವೆಗಳಿಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಲಕ್ಷಾಂತರ ರೈತರು ಈ ಜಲಾಶಯದ ನೀರನ್ನು ನಂಬಿ ಕೃಷಿ ಮಾಡುತ್ತಾರೆ. ಕುಡಿಯುವ ನೀರಿಗೂ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುವ ಆತಂಕ ಇರುವಾಗ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರೈತರು ಹೋರಾಟ ಆರಂಭಿಸಿದ್ದಾರೆ. ತಮ್ಮ ಹಿತಾಸಕ್ತಿಗಳನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಬಾರದು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Moss Removing Tips: ಪಾಚಿಗಟ್ಟಿದ ನೆಲವನ್ನು ಸ್ವಚ್ಛಗೊಳಿಸಲು ಈ ಸುಲಭ ಟಿಪ್ಸ್‌ ಪಾಲಿಸಿ ಸಾಕು – Kannada News | Here are some simple tricks to get rid of moss on wall and floor

ಮಳೆಗಾಲದಲ್ಲಿ ಗೋಡೆ, ನೆಲದ ಮೇಲೆ ಪಾಚಿ (moss) ಬೆಳೆಯೋದು ಸಾಮಾನ್ಯ. ತೇವಾಂಶದ ಕಾರಣದಿಂದಾಗಿ ಮನೆಯಂಗಳದಲ್ಲಿ ಹಾಸಿರುವ ಇಂಟರ್‌ಲಾಕ್‌, ಟೆರೇಸ್‌, ಗೋಡೆಗಳ ಮೇಲೆ ಪಾಚಿಗಳು ಬೆಳೆಯುತ್ತವೆ. ನೆಲದ ಮೇಲಿರುವ ಈ ಪಾಚಿಯ ಮೇಲೆ ಕಾಲಿಟ್ಟರೆ ಜಾರಿ ಬೀಳೋದಂತೂ ಗ್ಯಾರಂಟಿ. ಅದರಲ್ಲೂ ಮನೆಯಲ್ಲಿ ಹಿರಿಯರು ಮಕ್ಕಳು ಇದ್ದರಂತೂ ತುಂಬಾನೇ ಕಷ್ಟ. ಅವರು ಅತ್ತಿತ್ತ ಓಡಾಡುವ ಕಾರಣ ನೆಲದ ಮೇಲೆ ಅಂಟಿರುವ ಪಾಚಿಯನ್ನು ಕ್ಲೀನ್‌ ಮಾಡುತ್ತಲೇ ಇರಬೇಕು. ಅಷ್ಟೇ ಅಲ್ಲದೆ ಗೋಡೆಗಳ ಮೇಲೆ ಅಂಟಿರುವ ಪಾಚಿಯನ್ನು ಸಹ ತೆಗೆದುಹಾಕಬೇಕು, ಇಲ್ಲದಿದ್ದರೆ ಅದು ಮನೆಯ ಅಂದವನ್ನೇ ಸಂಪೂರ್ಣವಅಗಿ ಹಾಳು ಮಾಡುತ್ತವೆ. ಈ ಪಾಚಿಯನ್ನು ತೆಗೆದು ಹಾಕುವುದು ಕಷ್ಟದ ಕೆಲಸವಲ್ಲ, ಮನೆಯಲ್ಲಿ ಲಭ್ಯವಿರುವ ಈ ಕೆಲವು ವಸ್ತುಗಳ ಸಹಾಯದಿಂದ ಸುಲಭವಾಗಿ ತೆಗೆದುಹಾಕಬಹುದು.

ನೆಲದ ಮೇಲೆ ಅಂಟಿರುವ ಪಾಚಿಯನ್ನು ತೆಗೆದುಹಾಕುವುದು ಹೇಗೆ?

ವಿನೆಗರ್: ವಿನೆಗರ್‌ನಲ್ಲಿರುವ ಆಮ್ಲೀಯ ಗುಣಗಳು ಪಾಚಿಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ. ಸ್ಪ್ರೇ ಬಾಟಲಿಯಲ್ಲಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ನೇರವಾಗಿ ಪಾಚಿ ಇರುವ ಪ್ರದೇಶದ ಮೇಲೆ ಸಿಂಪಡಿಸಿ ಮತ್ತು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಗಟ್ಟಿಯಾದ ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ ಇದು ಗೋಡೆಯ ಮೇಲಿನ ಪಾಚಿಯನ್ನು ಸುಲಭವಾಗಿ ತೆಗೆದು ಹಾಕುತ್ತದೆ.

ಅಡಿಗೆ ಸೋಡಾ: ಪಾಚಿಯನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಪಾಚಿಗಟ್ಟಿದ ನೆಲಕ್ಕೆ ಹಚ್ಚಿ  ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ, ಅದನ್ನು ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ. ಗೋಡೆಯಂತಹ  ಸಣ್ಣ ಪ್ರದೇಶಗಳಿಂದ ಪಾಚಿಯನ್ನು ತೆಗೆದುಹಾಕಲು ಈ ವಿಧಾನವು ವಿಶೇಷವಾಗಿ ಉಪಯುಕ್ತವಾಗಿದೆ.

ಬ್ಲೀಚಿಂಗ್ ಪೌಡರ್: ಮನೆಯಂಗಳದ ಇಂಟರ್‌ಲಾಕ್‌ ಮೇಲೆ ಪಾಚಿ ಅಂಟಿದ್ದರೆ, ಇದರ ಮೇಲೆ ನಡೆಯುವುದರಿಂದ ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಇದನ್ನು ಸುಲಭವಾಗಿ ತೆಗೆದು ಹಾಕಲು ಬ್ಲೀಚಿಂಗ್‌ ಪೌಡರ್‌ ಬಳಸಬಹುದು.  ಪಾಚಿ ತುಂಬಿದ ಪ್ರದೇಶದ ಮೇಲೆ ಸ್ವಲ್ಪ ಪ್ರಮಾಣದ ಬ್ಲೀಚಿಂಗ್ ಪೌಡರ್ ಅನ್ನು ಸಿಂಪಡಿಸಿ, ಅದನ್ನು ನೀರಿನಿಂದ ತೇವಗೊಳಿಸಿ ಮತ್ತು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದನ್ನು ಬಳಸುವಾಗ ಕೈಗವಸುಗಳನ್ನು ಧರಿಸಲು ಮರೆಯದಿರಿ. ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ. ಈ ವಿಧಾನವು ಪಾಚಿಯನ್ನು ತೆಗೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ನೀವು ಖರೀದಿಸುವ ಕೇಸರಿ ಅಸಲಿಯೋ, ನಕಲಿಯೋ ಎಂಬುದನ್ನು ತಿಳಿಯಲು ಟ್ರಿಕ್ಸ್‌ ಬಳಸಿ

ಬಿಸಿ ನೀರು ಮತ್ತು ಡಿಟೆರ್ಜಂಟ್‌: ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಪ್ರಮಾಣದ ಡಿಟರ್ಜೆಂಟ್ ಪೌಡರ್ ಅಥವಾ ಡಿಶ್‌ವಾಶಗ ಲಿಕ್ವಿಡ್‌ ಅನ್ನು ಮಿಶ್ರಣ ಮಾಡಿ. ಈ ದ್ರಾವಣವನ್ನು ಪಾಚಿ ತುಂಬಿದ ಪ್ರದೇಶದ ಮೇಲೆ ಸುರಿಯಿರಿ ಮತ್ತು ತಕ್ಷಣ ಗಟ್ಟಿಯಾದ ಪೊರಕೆ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಪಾಚಿಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.

ಉಪ್ಪು ಮತ್ತು ನಿಂಬೆ ಪೇಸ್ಟ್: ನಿಂಬೆಹಣ್ಣಿನ ಆಮ್ಲೀಯತೆ ಮತ್ತು ಉಪ್ಪಿನ ಒರಟುತನ ಪಾಚಿಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ. ಒಂದು ಬೌಲ್‌ಗೆ ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ ದಪ್ಪ ಪೇಸ್ಟ್ ಮಾಡಿ ಮತ್ತು ಗೋಡೆ ಮೇಲೆ ಅಂಟಿರುವ ಪಾಚಿಯ ಮೇಲೆ ಹಚ್ಚಿ 15 ರಿಂದ20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ: ನಿವಾಸಿಗಳಲ್ಲಿ ಹೆಚ್ಚಿದ ಆತಂಕ – Kannada News | Bengalurus Byadarahalli Residents Live in Fear as Leopard Spotted Five Times in a Month



AQI








Sign In


Source link

ತಾಯಿ ನಮ್ಮನ್ನಗಲಿದ್ದಾರೆ ಎಂಬುವುದನ್ನ ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: ಹೆಚ್​ಡಿ ಕುಮಾರಸ್ವಾಮಿ ಭಾವುಕ ಮಾತು – Kannada News | I Cannot imagin the Thought That Mother Has Left Us: H.D. Kumaraswamy

ಹಾಸನ, ಜುಲೈ 29: ಮಾಜಿ ಪ್ರದಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ಕಾರ್ಯ ನಾಳೆ ನಡೆಯಲಿದ್ದು, ಉತ್ತರ ಕ್ರಿಯಾದಿ ಕಾರ್ಯಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ‘ತಾಯಿ ನಮ್ಮನ್ನಗಲಿದ್ದಾರೆ ಎಂದು ನೆನಸಿಕೊಳ್ಳಲಿಕ್ಕೂ ಸಹ ಸಾಧ್ಯವಿಲ್ಲ, ಅವರು ನಮ್ಮೊಂದಿಗಿ ಓಡಾಡಿಕೊಂಡಿದ್ದಾರೆ ಎಂಬ ಭಾವನೆ ಇದೆ. ತಾಯಿ ಭೂಮಿ ತಾಯಿಯ ಮಡಿಲನ್ನು ಸೇರಿದ್ದರೂ, ಅವರು ತಮ್ಮ ಹೃದಯದಲ್ಲಿ ಸದಾ ಇರುತ್ತಾರೆ. ನನ್ನ ಬಳಿಗೆ ಬರುವ ಸಂಕಷ್ಟದಲ್ಲಿರುವವರಲ್ಲಿ ತಾಯಿಯನ್ನು ಕಾಣುತ್ತೇನೆ ಮತ್ತು ಅವರ ಕಷ್ಟಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಈ ಒಂದು ಬದಲಾವಣೆ ಸಾಕು! ಇಲ್ಲಿದೆ ಡಯಟಿಷಿಯನ್ ನೀಡಿದ ಸಲಹೆ – Kannada News | Protein Idli Benefits: A Healthy Breakfast for Weight Management

ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯ ಸಮಸ್ಯೆ ಅಂದರೆ ಬೊಜ್ಜು ಎಲ್ಲ ವಯಸ್ಸಿನವರಲ್ಲೂ ಹೆಚ್ಚಾಗುತ್ತಿದೆ. ತೂಕ ಇಳಿಸಿಕೊಳ್ಳಲು ಹಲವರು ಬೆಳಗಿನ ಉಪಹಾರವನ್ನು ಬಿಟ್ಟುಬಿಡುವುದು ಅಥವಾ ಕಡಿಮೆ ತಿನ್ನುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಉಪಹಾರವನ್ನು ಬಿಡುವುದಕ್ಕಿಂತ ಪ್ರೋಟೀನ್, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ. ಇದಕ್ಕೆ ಪೂರಕವೆಂಬಂತೆ ಡಯಟಿಷಿಯನ್‌ಗಳು ಶಿಫಾರಸು ಮಾಡುವ ಪ್ರೋಟೀನ್ ಇಡ್ಲಿ ಆರೋಗ್ಯಕರ ಉಪಹಾರಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಅನಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.

ಪ್ರೋಟೀನ್ ಇಡ್ಲಿ ಹೇಗೆ ತಯಾರಿಸಬೇಕು?

ಸಾಮಾನ್ಯ ಇಡ್ಲಿ ಹಿಟ್ಟಿಗೆ ಒಂದು ಚಮಚ ತುರಿದ ಪನ್ನೀರ್, ಸ್ವಲ್ಪ ಮೊಳಕೆ ಬಂದ ಮೆಂತ್ಯೆ ಕಾಳು, ತುರಿದ ಕ್ಯಾರೆಟ್ (ಬೇಕಿದ್ದರೆ ಮಾತ್ರ), ಸ್ವಲ್ಪ ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಚೆನ್ನಾಗಿ ಕಲಸಿ ಇಡ್ಲಿ ಪಾತ್ರೆಯಲ್ಲಿ ಆವಿಯಲ್ಲಿ ಬೇಯಿಸಬೇಕು. ಇದಕ್ಕೆ ಪ್ರೋಟೀನ್ ಚಟ್ನಿ ಮಾಡಬಹುದು ಅದಕ್ಕೆ ಹುರಿದ ಕಡಲೆ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಸ್ವಲ್ಪ ಗೋಡಂಬಿ, ತೆಂಗಿನ ತುರಿ, ಶುಂಠಿ, ಜೀರಿಗೆ, ಮೆಂತ್ಯೆ, ಕರಿಬೇವು, ಹಸಿಮೆಣಸಿನಕಾಯಿ, ಚಿಟಿಕೆ ಇಂಗು, ಹುಣಸೆಹಣ್ಣು ಇವೆಲ್ಲವನ್ನು ಹುರಿದು ತಣ್ಣಗಾದ ಬಳಿಕ ರುಬ್ಬಿದರೆ ರುಚಿಕರ ಹಾಗೂ ಪೌಷ್ಟಿಕಾಂಶ ಭರಿತ ಚಟ್ನಿ ಸಿದ್ಧವಾಗುತ್ತದೆ.

ಪ್ರೋಟೀನ್ ಇಡ್ಲಿ ಸೇವೆನಯಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ತೂಕ ಇಳಿಕೆಗೆ ಸಹಕಾರಿ: ಪನ್ನೀರ್‌ನಲ್ಲಿರುವ ಪ್ರೋಟೀನ್ ಹಾಗೂ ಕ್ಯಾರೆಟ್ ಮತ್ತು ಮೆಂತ್ಯೆಯಲ್ಲಿರುವ ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಅನಗತ್ಯ ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆಯಾಗಬಹುದು.

ಸ್ನಾಯುಗಳ ಆರೋಗ್ಯಕ್ಕೆ ಉತ್ತಮ: ಪ್ರೋಟೀನ್ ಸ್ನಾಯುಗಳ ಬೆಳವಣಿಗೆ ಅಗತ್ಯ. ನಿಯಮಿತ ವ್ಯಾಯಾಮ ಮಾಡುವವರಿಗೆ ಇದು ಉತ್ತಮ ಉಪಹಾರ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಮೊಳಕೆ ಬಂದ ಮೆಂತ್ಯೆ ಹಾಗೂ ಫೈಬರ್ ಮಲಬದ್ಧತೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನೆರವು: ಫೈಬರ್ ಮತ್ತು ಪ್ರೋಟೀನ್ ಹೊಂದಿರುವ ಆಹಾರವು ಗ್ಲೂಕೋಸ್ ನಿಧಾನವಾಗಿ ಬಿಡುಗಡೆಯಾಗಲು ಸಹಾಯ ಮಾಡುತ್ತದೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ತಕ್ಷಣ ಏರಿಕೆಯಾಗುವ ಸಾಧ್ಯತೆ ಕಡಿಮೆಯಾಗಬಹುದು.

ಇದನ್ನೂ ಓದಿ: ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಲಿವರ್‌ಗೆ ಅಪಾಯಕಾರಿಯೇ ತಿಳಿದುಕೊಳ್ಳಿ

ಹೃದಯದ ಆರೋಗ್ಯಕ್ಕೆ ಸಹಕಾರಿ: ಕುಂಬಳಕಾಯಿ ಬೀಜ ಹಾಗೂ ಸೂರ್ಯಕಾಂತಿ ಬೀಜಗಳಲ್ಲಿ ಉತ್ತಮ ಕೊಬ್ಬು, ಮ್ಯಾಗ್ನೀಷಿಯಂ ಮತ್ತು ವಿಟಮಿನ್ ಇ ಇದ್ದು ಹೃದಯದ ಆರೋಗ್ಯಕ್ಕೆ ಸಹಾಯಕ.

ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಪಾಲಿಸಬೇಕಾದ ನಿಯಮಗಳು:

  • ಬೆಳಗಿನ ಉಪಹಾರವನ್ನು ಎದ್ದ ನಂತರ 1–2 ಗಂಟೆಯೊಳಗೆ ಸೇವಿಸಿ.
  • ಪ್ರತಿಯೊಂದು ಊಟದಲ್ಲೂ ಪ್ರೋಟೀನ್ ಸೇರಿಸಿ.
  • ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಕುಡಿಯಿರಿ.
  • ಸಕ್ಕರೆ ಹೆಚ್ಚಿರುವ ಪಾನೀಯಗಳನ್ನು ಕಡಿಮೆ ಮಾಡಿ.
  • ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಿ.
  • ರಾತ್ರಿ ಊಟವನ್ನು ಮಲಗುವ 2–3 ಗಂಟೆಗಳ ಮೊದಲು ಮುಗಿಸಿ.
  • 7–8 ಗಂಟೆ ನಿದ್ರೆ ಮಾಡಿ.

ಯಾವುದೇ ಒಂದು ಆಹಾರ ಪದಾರ್ಥವನ್ನು ಮಾತ್ರ ಸೇವಿಸುವುದರಿಂದ ತೂಕ ಇಳಿಯುವುದಿಲ್ಲ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಚೆನ್ನಾಗಿ ನಿದ್ರೆ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿತೂಕ ನಿಯಂತ್ರಣಕ್ಕೆ ನೆರವಾಗುತ್ತವೆ. ಮಧುಮೇಹ, ಥೈರಾಯ್ಡ್ ಅಥವಾ ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರು ಹೊಸ ಡಯಟ್ ಆರಂಭಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೆನ್ ಜಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ವಿಶಾಲ್ ದದ್ಲಾನಿ: ಕಂಗನಾ ಮಾತಿಗೆ ತಿರುಗೇಟು – Kannada News | Singer Composer Vishal Dadlani defends CJP Gen Z protester after Kangana Ranaut post

ಇತ್ತೀಚೆಗೆ ನಡೆದ ಜೆನ್ ಜಿ (Gen Z) ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅವರ ಭಾಷಾ ಶೈಲಿಯನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ (Kangana Ranaut) ಹೇಳಿಕೆಗೆ ಬಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ವಿಶಾಲ್ ದದ್ಲಾನಿ (Vishal Dadlani) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ಯುವಜನರ ಪರವಾಗಿ ಧ್ವನಿ ಎತ್ತಿರುವ ವಿಶಾಲ್, ವಿದ್ಯಾರ್ಥಿಗಳ ಮೇಲಾದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂಗನಾ ರಣಾವತ್ ಹೇಳಿದ್ದೇನು?

ವಿದ್ಯಾರ್ಥಿ ಪ್ರತಿಭಟನಾಕಾರರು ಬಳಸುತ್ತಿರುವ ಭಾಷೆ ಮತ್ತು ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋಗಳ ಕುರಿತು ಕಂಗನಾ ರಣಾವತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಟು ಪದಗಳಿಂದ ವಾಗ್ದಾಳಿ ನಡೆಸಿದ್ದರು. ‘ನನ್ನ ಜೀವನದಲ್ಲೇ ಇಷ್ಟೊಂದು ಅಸಹ್ಯಕರ ವಿಡಿಯೋಗಳನ್ನು ನೋಡಿರಲಿಲ್ಲ. ಜೆನ್ ಜಿ ಪ್ರತಿಭಟನೆಯ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳು ವಾಂತಿ ಬರಿಸುವಂತಿವೆ. ಅವರು ಮಾತನಾಡುತ್ತಿರುವ ಶೈಲಿ ಹಾಗೂ ಬಳಸುತ್ತಿರುವ ಭಾಷೆ ತೀರಾ ಕೆಳಮಟ್ಟದ್ದಾಗಿದೆ’ ಎಂದು ಬರೆದುಕೊಂಡಿದ್ದರು.

ವಿಶಾಲ್ ದದ್ಲಾನಿ ಖಾರವಾದ ಪ್ರತಿಕ್ರಿಯೆ:

ಕಂಗನಾ ಅವರ ಈ ಹೇಳಿಕೆಗಳ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವಿಶಾಲ್ ದದ್ಲಾನಿ ಅವರು, ವಿದ್ಯಾರ್ಥಿಗಳ ಮೇಲಾದ ಹಲ್ಲೆಯನ್ನು ಪ್ರಶ್ನಿಸಿದ್ದಾರೆ. ‘ಕೆಟ್ಟ ಭಾಷೆ ಎನ್ನುತ್ತೀರಾ? ನೀವು ಬೀದಿಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದೀರಿ. ಅವರ ಮೇಲೆ ಕಲ್ಲು ತೂರಿ, ಲಾಠಿ ಪ್ರಹಾರ, ಅಶ್ರು ವಾಯು ಹಾಗೂ ಪೆಲೆಟ್ ಗನ್ ಪ್ರಯೋಗ ಮಾಡಿದ್ದೀರಿ. ನಿಮ್ಮ ಬಾಡಿಗೆ ಗೂಂಡಾಗಳು ಇಂದಿಗೂ ಅವರನ್ನು ಬೆದರಿಸುತ್ತಿದ್ದಾರೆ. ಹೀಗಿರುವಾಗ ಅವರು ಬೈದಿರುವುದರಲ್ಲಿ ತಪ್ಪೇನಿದೆ?’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್

ಈ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ, ‘ಯುವ ಪ್ರತಿಭಟನಾಕಾರರ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಹಣ ನೀಡಿ ಪೇಯ್ಡ್ ಅಪಪ್ರಚಾರ ನಡೆಸಲಾಗುತ್ತಿದೆ. ಇದು ನಿಮ್ಮ ಅಸಹಾಯಕತೆಯನ್ನು ತೋರಿಸುತ್ತದೆ’ ಎಂದು ವಿಶಾಲ್ ದದ್ಲಾನಿ ಅವರು ಲೇವಡಿ ಮಾಡಿದ್ದಾರೆ. ವಿದ್ಯಾರ್ಥಿಗಳು ಬಳಸಿದ ಭಾಷೆಯನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ, ಅವರ ಮೇಲಾದ ದೌರ್ಜನ್ಯಗಳ ಕುರಿತು ಸಮಾಜ ಗಮನಹರಿಸಬೇಕು ಎಂದು ವಿಶಾಲ್ ಹೇಳಿದ್ದು, ಸದ್ಯ ಈ ವಿಷಯವು ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಮುಖ್ಯಸ್ಥ ವಿನೀತ್ ಗುಪ್ತಾ ಸಲಹೆ – Kannada News | Cauvery Water Dispute: CWRC Recommends Distress Formula Amidst Karnatakas Drought Crisis

ನವದೆಹಲಿ, ಜುಲೈ 29: ಕಾವೇರಿ ನೀರು ಹಂಚಿಕೆ ವಿವಾದ ತಾರಕಕ್ಕೇರಿದ್ದು, ಸಂಕಷ್ಟ ಸೂತ್ರ ಪಾಲಿಸುವಂತೆ CWRC (ಕಾವೇರಿ ನೀರು ನಿಯಂತ್ರಣ ಸಮಿತಿ) ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸಲಹೆ ನೀಡಿದೆ. CWRC ಮುಖ್ಯಸ್ಥ ವಿನೀತ್ ಗುಪ್ತಾ ಈ ಶಿಫಾರಸು ಮಾಡಿದ್ದಾರೆ. ಇದೇ ವೇಳೆ, ಬಿಜೆಪಿ ನಿಯೋಗವು ಕನಕಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿದೆ. ವಿಪಕ್ಷ ನಾಯಕ ಆರ್. ಅಶೋಕ್ ದಾವಣಗೆರೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮತ್ತು 10,000 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ – Kannada News | After 2 Years After His Death Supreme Court gives clean chit to former PM Manmohan Singh in coal scam case

ನವದೆಹಲಿ, ಜುಲೈ 29: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Dr Manmohan Singh) ನಿಧನರಾದ 2 ವರ್ಷಗಳ ನಂತರ, ಅವರ ಆಡಳಿತಾವಧಿಯ ಮೇಲೆ ಕಪ್ಪುಚುಕ್ಕೆಯಾಗಿದ್ದ ಕಲ್ಲಿದ್ದಲು ಹಗರಣದ ಪ್ರಕರಣವೊಂದಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದಿದೆ. ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court)  ಮನಮೋಹನ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆ ಎದುರಿಸುವಂತೆ ಮನಮೋಹನ್ ಸಿಂಗ್ ಮತ್ತು ಇತರ ಐವರಿಗೆ ಸಮನ್ಸ್ ಜಾರಿಗೊಳಿಸಿದ್ದ 2015ರ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಮಾಜಿ ಪ್ರಧಾನಿಯವರ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬ ಸಿಬಿಐ ನಿರ್ಧಾರವನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದ ನಂತರ ಆರಂಭವಾಗಿದ್ದ 11 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಈ ತೀರ್ಪಿನೊಂದಿಗೆ ಮುಕ್ತಾಯ ಸಿಕ್ಕಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪರ ವಕೀಲರ ಮೇಲ್ಮನವಿಯನ್ನು ಅಂಗೀಕರಿಸಿತು. ಸಿಬಿಐನ ಕ್ಲೀನ್ ಚಿಟ್ ವರದಿಯನ್ನು ಅಂಗೀಕರಿಸಿತು ಮತ್ತು ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಪುರಸ್ಕರಿಸಿದ್ದು, ಸಿಬಿಐ ವರದಿಯನ್ನು ತಿರಸ್ಕರಿಸಿ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ವಿಶೇಷ ನ್ಯಾಯಾಧೀಶರಿಗೆ ಯಾವುದೇ ಸೂಕ್ತ ಕಾರಣವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಿಬಿಐ ವಿಸ್ತೃತ ತನಿಖೆ ನಡೆಸಿ 2 ಪ್ರತ್ಯೇಕ ಬಿ-ರಿಪೋರ್ಟ್‌ಗಳನ್ನು ಸಲ್ಲಿಸಿದ್ದು, ಎರಡರಲ್ಲೂ ಯಾವುದೇ ಅಪರಾಧ ಪ್ರಕರಣ ಸಾಬೀತಾಗಿಲ್ಲ ಎಂದು ತೀರ್ಮಾನಿಸಲಾಗಿತ್ತು ಎಂಬುದನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ, ಸ್ಮಾರಕ ವಿಚಾರದಲ್ಲೂ ವಿವಾದ: ಕಾರಣ ಇಲ್ಲಿದೆ ನೋಡಿ

ಡಾ. ಮನಮೋಹನ್ ಸಿಂಗ್ ಡಿಸೆಂಬರ್ 2024ರಲ್ಲಿ ನಿಧನರಾದರೂ ಅವರ ವಿರುದ್ಧ ಹಲವಾರು ಪ್ರತಿಕೂಲ ಟೀಕೆಗಳು ಇದ್ದ ಕಾರಣ ವಿಚಾರಣಾ ನ್ಯಾಯಾಲಯದ ಆದೇಶದ ಸಿಂಧುತ್ವವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ದಿವಂಗತ ಮಾಜಿ ಪ್ರಧಾನಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಅವರ ಮರಣದ ನಂತರ ಮೇಲ್ಮನವಿ ತಾಂತ್ರಿಕವಾಗಿ ನಿಷ್ಪರಿಣಾಮಕಾರಿಯಾಗಿದೆ. ಆದರೆ ವಿಚಾರಣಾ ನ್ಯಾಯಾಲಯದ ಅವಲೋಕನಗಳನ್ನು ಪರಿಗಣಿಸುವುದು ಮುಖ್ಯ ಎಂದು ವಾದಿಸಿದ್ದರು.

ಇಂದು ನೀಡಿರುವ ಈ ಮಹತ್ವದ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ 2015ರ ಮಾರ್ಚ್ 11ರ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ತನಿಖಾ ಸಂಸ್ಥೆಯ ಬಿ-ರಿಪೋರ್ಟ್ ಅನ್ನು ಅಂಗೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಇದನ್ನೂ ಓದಿ: ‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’; ಚುನಾವಣಾ ಆಯುಕ್ತರೆದುರು ಹೀಗಂದಿದ್ದರಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಏನಿದು ಪ್ರಕರಣ?:

ಈ ಪ್ರಕರಣವು 2005ರಲ್ಲಿ ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಅನ್ನು ಹಿಂಡಾಲ್ಕೊ ಕಂಪನಿಗೆ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಆ ಸಮಯದಲ್ಲಿ ಡಾ. ಮನಮೋಹನ್ ಸಿಂಗ್ ಅವರ ಬಳಿಯೇ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯೂ ಇತ್ತು. ಅವರ ವಿರುದ್ಧ ತನಿಖೆ ನಡೆಸಲು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಸಿಬಿಐ ತೀರ್ಮಾನಿಸಿದ್ದರೂ, ವಿಶೇಷ ಸಿಬಿಐ ನ್ಯಾಯಾಲಯವು ಮನಮೋಹನ್ ಸಿಂಗ್ ಮತ್ತು ಇತರ ಐವರಿಗೆ ಕ್ರಿಮಿನಲ್ ಗೂಢಾಲೋಚನೆ ಹಾಗೂ ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳಡಿಯಲ್ಲಿ ವಿಚಾರಣೆ ಎದುರಿಸುವಂತೆ ಸಮನ್ಸ್ ಜಾರಿಗೊಳಿಸಿತ್ತು.

ಯುಪಿಎ ಆಡಳಿತಾವಧಿಯಲ್ಲಿ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದ ಕಲ್ಲಿದ್ದಲು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಕೆಲವು ಕ್ರಿಮಿನಲ್ ಪ್ರಕ್ರಿಯೆಗಳಲ್ಲಿ ಒಂದಾಗಿದ್ದ ಈ ಪ್ರಕರಣವು ಡಾ. ಮನಮೋಹನ್ ಸಿಂಗ್ ಅವರ ನಿಧನದ ನಂತರ ಮುಕ್ತಾಯಗೊಂಡಿದೆ. ಪ್ರಾಮಾಣಿಕ ರಾಜಕಾರಣಿ ಎಂದು ರಾಜಕೀಯ ವಿರೋಧಿಗಳಿಂದಲೂ ಮೆಚ್ಚುಗೆ ಪಡೆದಿದ್ದ ಮನಮೋಹನ್ ಸಿಂಗ್ ಅವರಿಗೆ ಈ ಪ್ರಕರಣ ದೊಡ್ಡ ಕಪ್ಪುಚುಕ್ಕೆಯಾಗಿತ್ತು. ಆ ಕಪ್ಪುಚುಕ್ಕೆ ಅವರ ನಿಧನದ ಬಳಿಕ ಅಳಿಸಿಹೋದಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯದಲ್ಲಿ 84 ಲಕ್ಷಕ್ಕೂ ಹೆಚ್ಚು ASDDO ಮತದಾರರು ಪತ್ತೆ – Kannada News | Karnataka Voter List Revision: Over 84 Lakh ASDDO Voters Identified; V Anbukumar

ಬೆಂಗಳೂರು, ಜುಲೈ 29: ‘ರಾಜ್ಯದಲ್ಲಿ ಇದುವರೆಗೆ ವಿತರಿಸಲಾದ ಒಟ್ಟು 5,54,32,314 ಎನ್ಯುಮರೇಷನ್ ಅರ್ಜಿಗಳ ಪೈಕಿ 4,26,75,861 ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಶೇ. 76.99 ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಪರಿಶೀಲನೆ ವೇಳೆ ರಾಜ್ಯಾದ್ಯಂತ ಗೈರಾದ, ಸ್ಥಳಾಂತರಗೊಂಡ, ಮೃತಪಟ್ಟ, ನಕಲಿ ಮತ್ತು ಇತರೆ ವರ್ಗಕ್ಕೆ (ASDDO) ಸೇರಿದ ಒಟ್ಟು 84,31,612 ಮತದಾರರು ಪತ್ತೆಯಾಗಿದ್ದಾರೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ (v anbukumar)​​​ ಹೇಳಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಿಷ್ಟು 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ‘84,31,612 ಮತದಾರರಲ್ಲಿ 11,61,231 ಮತದಾರರು ನಾಪತ್ತೆಯಾಗಿದ್ದರೆ, 51,74,968 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ 14,99,799 ಮತದಾರರು ಮೃತಪಟ್ಟಿದ್ದು, 5,62,572 ಜನರು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದು ಕಂಡುಬಂದಿದೆ. ಇದರ ಜೊತೆಗೆ 33,042 ಇತರೆ ಮತದಾರರನ್ನೂ ಗುರುತಿಸಲಾಗಿದೆ’ ಎಂದರು.

ಎಸ್‌ಡಿಡಿಒ ಪ್ರಕ್ರಿಯೆ ಹೇಗೆ?

ಎಸ್‌ಡಿಡಿಒನಲ್ಲಿ ಮತದಾರರು ಸಂಖ್ಯೆ ಹೆಚ್ಚಿರುವ ವಿಚಾರವಾಗಿ ಮಾತನಾಡಿದ ಅವರು, ‘ಪ್ರತಿಯೊಂದಕ್ಕೆ ಸ್ಥಳ ಮಹಾಜರ್ ಮಾಡಿರುತ್ತಾರೆ. ಮರಣ ಪ್ರಮಾಣಪತ್ರ ತೆಗೆದುಕೊಂಡು ಅಪ್ಲೋಡ್​ ಮಾಡಿತ್ತಾರೆ. ಗೈರುಹಾಜರು, ಸ್ಥಳಾಂತರಗೊಂಡ ಅಂದರೆ ಮತದಾರರ ವಿಳಾಸದಲ್ಲಿ ಅವರಿಲ್ಲ ಎನ್ನುವ ಅರ್ಥ. ಅವರು ಶಿಫ್ಟ್ ಆಗಿರಬಹುದು ಅಥವಾ ಗೈರುಹಾಜರು ಅಂತ ಪರಿಗಣನೆ ಆಗುತ್ತೆ. ದೇಶದ ಎಲ್ಲಿಯೂ ವೋಟರ್​ಗಾಗಿ ಅರ್ಜಿ ಸಲ್ಲಿಸಿಲ್ಲ ಎಂದ್ದಾದರೆ, ಅಂತವರು ಆನ್​​ಲೈನ್​​ ಮೂಲಕ ಅಥವಾ ಫಾರ್ಮ್ 6 ಅಲ್ಲಿ ಸಲ್ಲಿಸಬಹುದು’ ಎಂದು ಅವರು ಮಾಹಿತಿ ನೀಡಿದರು.

ಎನ್ಯುಮರೇಷನ್ ಫಾರಂ ಬಿಎಲ್‌ಒಗಳಿಗೆ ಹಸ್ತಾಂತರಿಸುವಂತೆ ಅನ್ಬುಕುಮಾರ್ ಮನವಿ

ರಾಜ್ಯಾದ್ಯಂತ ಇನ್ನೂ 43,24,847 ಫಾರಂಗಳನ್ನು ಸಾರ್ವಜನಿಕರು ವಾಪಸ್ ಮಾಡುವುದು ಬಾಕಿ ಇದ್ದು, ಎನ್ಯುಮರೇಷನ್ ಫಾರಂಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ ಆದಷ್ಟು ಬೇಗ ಬಿಎಲ್‌ಒಗಳಿಗೆ ಹಸ್ತಾಂತರಿಸುವಂತೆ ಅನ್ಬುಕುಮಾರ್ ಮನವಿ ಮಾಡಿದರು. ಫಾರಂಗಳನ್ನು ವಾಪಸ್ ನೀಡಿದರೆ ಮಾತ್ರ ಡ್ರಾಫ್ಟ್ ರೋಲ್‌ನಲ್ಲಿ ಹೆಸರು ಸೇರ್ಪಡೆಯಾಗಲಿದೆ. ಮನೆಗೆ ಮತದಾರರು ಲಭ್ಯವಿಲ್ಲದಿದ್ದರೂ ಅವರ ಕುಟುಂಬದ ಸದಸ್ಯರು ಸಹಿ ಮಾಡಿ ನೀಡಬಹುದು ಹಾಗೂ 2002ರ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಫಾರಂಗಳನ್ನು ಇಟ್ಟುಕೊಳ್ಳಬಾರದು. ಆಯಾ ಎನ್ಯುಮರೇಷನ್ ಫಾರಂ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ. ಅಲ್ಲದೆ, 2026ರ ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವ ಹೊಸ ಅರ್ಹ ಮತದಾರರು ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಅವಧಿ ವಿಸ್ತರಣೆ ಕೋರಿದ್ದ PIL ಇತ್ಯರ್ಥಗೊಳಿಸಿದ ಹೈಕೋರ್ಟ್

‘ಇನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 1,03,88,363 ಮತದಾರರಿದ್ದು, ಈ ಪೈಕಿ 39,38,202 ಎಸ್‌ಡಿಡಿಒ ಮತದಾರರು ಪತ್ತೆಯಾಗಿದ್ದಾರೆ. ಇನ್ನು 16,57,582 ಫಾರಂಗಳು ಡಿಜಿಟಲೀಕರಣಗೊಳ್ಳಲು ಬಾಕಿ ಇವೆ. ಎಸ್‌ಡಿಡಿಒ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿ.ಅನ್ಬುಕುಮಾರ್​​​ ಹೇಳಿದ್ದಾರೆ.

ವರದಿ: ಅರುಣ್ ಕುಮಾರ್​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:07 pm, Wed, 29 July 26

Source link

Exit mobile version