ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು? – Kannada News | Sambhar Deer entered into residential colony in jalandhar watch viral video
ಜಲಂಧರ್, ಜನವರಿ 8: ಪಂಜಾಬ್ನ ಜಲಂಧರ್‌ನ ಜನವಸತಿ ಪ್ರದೇಶಕ್ಕೆ ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯಿಂದ ಬಹಳ ಕಷ್ಟಪಟ್ಟು ಹಿಡಿದು, ವಾಪಾಸ್ ಕಾಡಿಗೆ ಬಿಟ್ಟಿದ್ದಾರೆ. ಜಲಂಧರ್‌ನ ಆದಂಪುರ್‌ನ ಜನವಸತಿ ಪ್ರದೇಶಕ್ಕೆ ಜಿಂಕೆ (Deer) ಇದ್ದಕ್ಕಿದ್ದಂತೆ ಬಂದಾಗ ಜನರು ಭಯಭೀತರಾದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಈ ಘಟನೆ ಆದಂಪುರ ಬಳಿಯ ವಸತಿ ಪ್ರದೇಶದಲ್ಲಿ ನಡೆದಿದ್ದು, ರಸ್ತೆಯಲ್ಲಿ ಜಿಂಕೆ ಓಡುತ್ತಿರುವುದನ್ನು ಜನರು ನೋಡಿದ್ದಾರೆ….