ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಕಾಂಗ್ರೆಸ್ ಭವನಕ್ಕೆ ಜಮೀನು, ಬಿ-ಖಾತಾದಾರರಿಗೆ ಜಾಮೂನು – Kannada News | Karnataka Cabinet Meeting Decisions: Government Grants Land for Congress Bhavan in Tumakuru and Raichur
ಬೆಂಗಳೂರು, ಜನವರಿ 08: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ತುಮಕೂರು ಮತ್ತು ರಾಯಚೂರಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಾಗ ನೀಡಲು ಸಂಪುಟ ಒಪ್ಪಿದ್ದು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ರಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ‘ಬಿ-ಖಾತಾ” ನಿವೇಶನ/ಕಟ್ಟಡ/ಅಪಾರ್ಟ್‌ಮೆಂಟ್/ಫ್ಲಾಟ್‌ಗಳಿಗೆ ‘ಎ-ಖಾತಾ’ ನೀಡಲೂ ಒಪ್ಪಿಗೆ ಸೂಚಿಸಿದೆ. ಸಚಿವ ಸಂಪುಟ ಸಭೆಯ ತೀರ್ಮಾನಗಳು KSDL ಬೆಂಗಳೂರು ಸಂಕೀರ್ಣಕ್ಕೆ 17.70 ಕೋಟಿ ಮೊತ್ತದ ಸಾಬೂನು ತಯಾರಿಸುವ…