ಕ್ಯಾಬ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್ – Kannada News | Good News for Cab Passengers: Government Bans Mandatory Tips on Ola, Uber, Rapido and Namma Yatri Apps

ಬೆಂಗಳೂರು, ಜನವರಿ 8: ಬೆಂಗಳೂರಿನಲ್ಲಿ ಆಟೋ ಮತ್ತು ಕ್ಯಾಬ್ ಸೇವೆಗಳಿಗೆ ಹೆಸರುವಾಸಿಯಾದ ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಮುಂತಾದ ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ಕಡ್ಡಾಯವಾಗಿ ಟಿಪ್ಸ್ ಪಡೆಯುವ ನೀತಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಇದುವರೆಗೆ, ಕ್ಯಾಬ್ ಬುಕ್ ಮಾಡುವಾಗ ಆ್ಯಪ್​ಗಳಲ್ಲಿ ಪ್ರಯಾಣ ದರದ ಜೊತೆಗೆ 20, 40, 60 ರೂಪಾಯಿ ಟಿಪ್ಸ್ ನೀಡುವ ಆಯ್ಕೆ ಇದ್ದು, ಅದನ್ನು ಆಯ್ಕೆ ಮಾಡದಿದ್ದರೆ ಬೇಗನೆ ಕ್ಯಾಬ್ ಬುಕ್ ಆಗುತ್ತಿರಲಿಲ್ಲ. ಈ ಟಿಪ್ಸ್ ನೀಡಿದರೆ ವಾಹನಗಳು ಬೇಗ ಸಿಗುತ್ತವೆ ಎಂಬ ಅಲಿಖಿತ ನಿಯಮ ಗ್ರಾಹಕರ ಸುಲಿಗೆಗೆ ಕಾರಣವಾಗಿತ್ತು.

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಅಪ್ಲಿಕೇಷನ್‌ಗಳಲ್ಲಿ ಹೆಚ್ಚುವರಿ ಟಿಪ್ಸ್ ಆಯ್ಕೆಯನ್ನು ಕಡ್ಡಾಯವಾಗಿ ನೀಡುವಂತಿಲ್ಲ. ಟ್ರಿಪ್ ಮುಗಿದ ನಂತರ ಗ್ರಾಹಕರು ಸ್ವಯಂಪ್ರೇರಿತವಾಗಿ ಟಿಪ್ಸ್ ನೀಡಬಹುದು. ಈ ಟಿಪ್ಸ್ ಸಂಪೂರ್ಣವಾಗಿ ಚಾಲಕರ ಖಾತೆಗೆ ನೇರವಾಗಿ ಹೋಗಬೇಕು, ಇದರಲ್ಲಿ ಅಗ್ರಿಗೇಟರ್ ಕಂಪನಿಗಳು ಯಾವುದೇ ಪಾಲನ್ನು ಕೇಳುವಂತಿಲ್ಲ. ಈ ನಿರ್ಧಾರದಿಂದ ಬೆಂಗಳೂರಿನ ಪ್ರಯಾಣಿಕರು ಮತ್ತು ಆಟೋ, ಕ್ಯಾಬ್ ಚಾಲಕರು ಸಂತಸಗೊಂಡಿದ್ದಾರೆ. ಅಲ್ಲದೆ, ಮಹಿಳಾ ಸುರಕ್ಷತೆಗಾಗಿ ಮಹಿಳಾ ಚಾಲಕರ ಆಯ್ಕೆಗೂ ಅವಕಾಶ ನೀಡುವಂತೆ ಸೂಚಿಸಲಾಗಿದೆ.

ಈ ಹೊಸ ನಿಯಮಕ್ಕೆ ಪ್ರಯಾಣಿಕರು ವ್ಯಾಪಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಕೆಲಸಕ್ಕೆ ತೆರಳುವವರಿಗೆ 10, 20, 30 ರೂಪಾಯಿ ಟಿಪ್ಸ್ ನೀಡುವುದು ಆರ್ಥಿಕವಾಗಿ ಕಷ್ಟಕರವಾಗಿತ್ತು. ಇದು ಅವರ ಜೇಬಿಗೆ ಹೊರೆಯಾಗುತ್ತಿತ್ತು ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿರುವುದು ಬಹಳ ಅವಶ್ಯಕವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಿಷ್ಕೃತ ನಿಯಮಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 08 January: ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 8, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನವು ಪುಬ್ಬಾ ನಕ್ಷತ್ರದಲ್ಲಿ ಚಂದ್ರನ ಸಂಚಾರದೊಂದಿಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಈ ದಿನದ ರಾಹುಕಾಲವು ಮಧ್ಯಾಹ್ನ 1:51 ರಿಂದ 3:17 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭ ಕಾಲವು ಮಧ್ಯಾಹ್ನ 12:26 ರಿಂದ 1:50 ರವರೆಗೆ ಇರುತ್ತದೆ. ಸೂರ್ಯನು ಧನು ರಾಶಿಯಲ್ಲಿ ಮತ್ತು ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುತ್ತಾನೆ. ಮಕರ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ ಮತ್ತು ವ್ಯವಹಾರದಲ್ಲಿ ಲಾಭದ ಯೋಗವಿದೆ. ಕನ್ಯಾ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಕಂಡರೂ ಸಂಧ್ಯಾಕಾಲಕ್ಕೆ ಶುಭವಾಗಲಿದೆ. ಪ್ರಯಾಣ ಯೋಗ, ಆರ್ಥಿಕ ಸ್ಥಿತಿ, ಸಂಬಂಧಗಳಲ್ಲಿನ ಬದಲಾವಣೆಗಳು ಮತ್ತು ಆರೋಗ್ಯದ ಕುರಿತು ಪ್ರತಿಯೊಂದು ರಾಶಿಗಳಿಗೂ ಗುರೂಜಿ ಅವರು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೂ ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನೂ ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Horoscope Today 08 January: ಇಂದು ಈ ರಾಶಿಯವರ ಮನಸ್ಸಿಗೆ ಆಪ್ತರಿಂದ ಘಾಸಿಯಾಗಲಿದೆ

ಮೇಷ ರಾಶಿ:

ಸ್ತ್ರೀಯರಿಗೆ ಮಾತುಗಾರಿಕೆಯಿಂದ ಪ್ರಶಂಸೆ ಸಿಗಲಿದೆ. ನಯವಾದ ಮಾತಿನಿಂದ ನಿಮ್ಮನ್ನು ಕಾರ್ಯಕ್ಕೆ ಒಲಿಸಿಬಹುದು. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಅವರ ಜೊತೆ ಸಂತೋಷದ ಸಮಯವನ್ನು ನೆನಪಿಸಿಕೊಳ್ಳುವಿರಿ. ನೀವು ಪ್ರಸಿದ್ಧಿಯನ್ನು ಪಡೆಯಲು ಆಸಕ್ತಿಯು ಹೆಚ್ಚುವುದು. ಕೆಲವು ವಿಚಾರವನ್ನು ನೀವೇ ದೊಡ್ಡ ಮಾಡಿಕೊಂಡು ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಸಾಹಸದಿಂದ ಯಶಸ್ಸು ಸಿಗುತ್ತದೆ ಎಂಬ ಭ್ರಮೆ ಬರಬಹುದು.

ವೃಷಭ ರಾಶಿ:

ಅನಿರೀಕ್ಷಿತ ಪ್ರಯಾಣದಿಂದ ಆಯಾಸವು ಅಧಿಕವಾದೀತು. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಖರ್ಚು ಮಾಡಬೇಕಾಗಿಬರಬಹುದು. ಗೊಂದಲದಿಂದ ಹೊರಬರಲು ಸಹಾಯವನ್ನು ಪಡೆಯಿರಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ತಾಯಿಯಿಂದ ನಿಮಗೆ ಲಾಭವಾಗಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರ ದುಃಖಿಸುವುದರಲ್ಲಿ ಅರ್ಥವಿರದು. ಆರ್ಥಿಕ ತೊಂದರೆಗೆ ನೀವು ಬಂಧುಗಳ ಸಹಾಯವನ್ನು ಪಡೆಯಬಹುದು.

ಮಿಥುನ ರಾಶಿ:

ನಿಮ್ಮ ಪಾಲಿಗೆ ಎಲ್ಲ ಬಾಂಧವ್ಯಗಳೂ ಸಮಯಕ್ಕೆ ಆಗಲಾರವು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಂಟಾಗುವುದು. ತಪ್ಪು ನಿರ್ಧಾರಗಳಿಂದ ಆರ್ಥಿಕ ಹೊಡೆತವನ್ನು ತಿನ್ನಬೇಕಾಗುವುದು. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ. ಪಾಲುದಾರಿಕೆಯಲ್ಲಿ ವ್ಯತ್ಯಾಸವನ್ನು ಮಾಡಬೇಕಾದೀತು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು.

ಕರ್ಕಾಟಕ ರಾಶಿ:

ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು‌. ಆರ್ಥಿಕ‌ಲಾಭವನ್ನು ಕೇವಲ ತರ್ಕದಿಂದ ಸಾಧಿಸಲಾಗದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಹಿತಶತ್ರುಗಳ ತೊಂದರೆಯ ನಡುವೆಯೂ ನಿಮ್ಮ ಅಭಿವೃದ್ಧಿಯು ಆಗಲಿದೆ. ಇದರಿಂದ‌ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಪ್ರಯೋಗಾತ್ಮಕ ವಿಚಾರಕ್ಕೆ ಒಲವು ಹೆಚ್ಚಾಗುವುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ನಿಂದಿಸುವ ಮಾತು ವಿವಾದಕ್ಕೆ ಗುರಿಯಾಗಬಹುದು. ಬೇಕಾದಲ್ಲಿ ಮಾತ್ರ ನಿಮ್ಮ ಪ್ರಭಾವವನ್ನು ಬಳಸುವಿರಿ.

ಸಿಂಹ ರಾಶಿ:

ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ನಿಮ್ಮ ತಪ್ಪೇ ಇದ್ದರೂ ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ. ಕೆಲವೊಮ್ಮೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗಬಹುದು. ಮನೋವಿಕಾರಕ್ಕೆ ಕಾರ್ಯದಲ್ಲಿ ಮಗ್ನರಾಗುವುದು ಬಿಟ್ಟರೆ ಬೇರೆ ಗತಿಯಿಲ್ಲ. ಶತ್ರುಗಳನ್ನು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ.

ಕನ್ಯಾ ರಾಶಿ:

ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ಇಂದಿನ‌ ‌ಮನೆಯ ವಾತಾವರಣದುಮನದ ನಿಮ್ಮ ಅಧ್ಯಯನಕ್ಕೆ ತೊಡಬಲಕಾಗಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ಒಳ್ಳೆಯದನ್ನು ಮಾಡಲು ಅನುಕೂಲವಿದ್ದರೂ ಮಾಡುವ ಮನಸ್ಸು ಬಾರದು. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ನೀವು ಇನ್ನೊಬ್ಬರ ಮೇಲಿನ ಅವಲಂಬನೆಯನ್ನು ಕಡಿಮೆ‌ಮಾಡುವಿರಿ. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು.

ತುಲಾ ರಾಶಿ:

ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು. ಆಲಸ್ಯವೆನ್ನುವ ಶತ್ರುವನ್ನು ಮಟ್ಟಹಾಕಿ ಜೀವನಿಗೆಲ್ಲಬೇಕು. ಕಛೇರಿಯ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಮಿತವಾದ‌ ಮಾತಿರಲಿ. ಯಾರಿಂದಲಾದರೂ ಆರ್ಥಿಕ ಬೆಂಬಲವನ್ನು ನಿರೀಕ್ಷಿಸುವಿರಿ. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ.

ವೃಶ್ಚಿಕ ರಾಶಿ:

ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಮುಖಸ್ತುತಿ ಕೆಲವೊಮ್ಮೆ ನಿಮಗೆ ಪ್ರಯೋಜನವಾಗಲಿದೆ. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರಕ್ಕೆ ಕರೆ ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ಸಮಾರಂಭಗಳಿಗೆ ನೀವು ಮುಖ್ಯರಾಗಿ ಇರುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳುವರು. ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ಪಡೆಯಿರಿ.

ಧನು ರಾಶಿ:

ದೀರ್ಘಕಾಲದ ಪ್ರೇಮವು ಸಾಕೆನಿಸುವುದು. ಏನನ್ನೂ ಮಾಡದೇ ಸುಮ್ಮನಿರಲಾರಿರಿ. ಸಂತಾನ ಪ್ರಾಪ್ತಿಯಿಂದ ನಿಮಗೆ ಖುಷಿ ಸಿಗಲಿದೆ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ‌ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ನಾನಾ ಚಿಂತೆಗಳು ಹುಟ್ಟಬಹುದು. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಸರಿಯಾದ ನಿರ್ಧಾರಕ್ಕೆ ಬನ್ನಿ. ಇಂದು ಸ್ತ್ರೀಯರಿಗೆ ಸೌಂದರ್ಯಪ್ರಜ್ಞೆಯು ಅಧಿಕವಾಗಿದ್ದು ಹೆಚ್ಚು ಸಮಯವನ್ನು ಕೊಡುವಿರಿ. ಉದ್ಯೋಗದ ಸ್ಥಳವು ಬೆಲೆಯು ಕಡಿಮೆ‌ ಆದಂತೆ ತೋರುವುದು. ಕ್ಷಣಿಕ ಸುಖಕ್ಕಾಗಿ ಸಂಪತ್ತನ್ನು ಅಧಿಕವಾಗಿ ತ್ಯಾಗ ಮಾಡುವಿರಿ.

ಮಕರ ರಾಶಿ:

ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಕಾರ್ಯಗಳನ್ನು ಸರಳವಾಗಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾಹನದಲ್ಲಿ ಸಂಚರಿಸುವಾಗ ಮರಣಭೀತಿಯು ನೆನಪಾಗುವುದು. ಎಲ್ಲರಿಂದ ದೂರವಾಗಲು ಬಯಸುವಿರಿ. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ. ಉದ್ಯೋಗದಲ್ಲಿ ದೂರದೃಷ್ಟಿ ಇರಲಿ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯು ಅಧಿಕವಾಗಬಹುದು.

ಕುಂಭ ರಾಶಿ:

ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲ‌ವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ಶುಭ ಕಾರ್ಯವೇ ಆಗಿದ್ದರೆ ದೈವಾನುಗ್ರಹ ನಿಮ್ಮ ಪಾಲಿಗೆ ಇದೆ. ನಿಮ್ಮ‌ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸಿ ಸಿಗದೇ ಬೇಸರಗೊಳ್ಳುವಿರಿ. ಸ್ನೇಹಿತರ ಒತ್ತಾಯದ ಮೇರೆಗೆ ಪ್ರಯಾಣ ಮಾಡುವಿರಿ.

ಮೀನ ರಾಶಿ:

ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಹೋರಾಟದ ಮನೋಭಾವವು ಇಂದು ಎದ್ದು ತೋರುವುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾದೀತು. ಪ್ರೀತಿಪಾತ್ರರ ಜೊತೆ ಧನಾತ್ಮಕವಾದ ಚಿಂತನೆಯನ್ನು ಮಾಡುವಿರಿ. ಉದ್ಯೋಗದಲ್ಲಿ ಸ್ಥಿರತೆ‌ಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಸಂಬಂಧಗಳನ್ನು ಚೆನ್ನಾಗಿ ಇಟ್ಟಕೊಳ್ಳಲು ಇಷ್ಟಪಡುವಿರಿ.

ಜನವರಿ 08,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಷಷ್ಠೀ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ ಯೋಗ : ಸೌಭಾಗ್ಯ, ಕರಣ : ಗರಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13-56 – 15:21, ಯಮಗಂಡ ಕಾಲ 06:52 – 08:17, ಗುಳಿಕ ಕಾಲ 09:42 – 11:06

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 8ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಮಾನಸಿಕವಾಗಿ ನಿಮಗೆ ಎಷ್ಟೇ ಉತ್ಸಾಹ ಇದ್ದರೂ ಕೆಲಸ- ಕಾರ್ಯಗಳಲ್ಲಿ ತೊಡಗುವ ಮುನ್ನ ದೈಹಿಕವಾದ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಈ ದಿನ ನೀವು ವಿಶ್ರಾಂತಿಗೆ ಆದ್ಯತೆ ನೀಡುವುದು ಒಳ್ಳೆಯದು. ಮಾನಸಿಕವಾಗಿಯೂ ದಿನದ ಎರಡನೇ ಭಾಗದಲ್ಲಿ ಸ್ವಲ್ಪ ಗೊಂದಲವಿರಬಹುದು, ನಿರ್ಧಾರಗಳನ್ನು ಮುಂದೂಡಿ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ನೆಮ್ಮದಿ ತರಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಬಹುದು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭದ ನಿರೀಕ್ಷೆ ಇರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಷೇರು, ಮಲ್ಟಿ ಕಮಾಡಿಟಿಗಳಲ್ಲಿ ಹಣ ತೊಡಗಿಸಿದವರಿಗೆ, ಲೇವಾ ದೇವಿ ವ್ಯವಹಾರ ಮಾಡುವಂಥವರಿಗೆ ಇಂದು ಆಕಸ್ಮಿಕ ಧನ ಲಾಭದ ಯೋಗವಿದೆ. ಆದರೆ ಹತ್ತಿರದವರೇ ನಿಮ್ಮ ಕಾಲೆಳೆಯುವ ಸಾಧ್ಯತೆ ಇರುವುದರಿಂದ ಅಂತರಂಗದ- ವ್ಯವಹಾರದ ಒಳ ಗುಟ್ಟುಗಳನ್ನು ಬಿಟ್ಟುಕೊಡಬೇಡಿ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಸವಾಲಿನ ದಿನ. ಸಣ್ಣ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ. ಕಣ್ಣಿನ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ. ಶಾರ್ಟ್‌ಕಟ್ ಮೂಲಕ ನಿಮಗೆ ಹಣ ಗಳಿಸುವ ಅವಕಾಶ ಸಿಕ್ಕರೂ ಅತ್ತ ಸುಳಿಯಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸವಾಲಿನ ದಿನ ಇದಾಗಿರಲಿದೆ. ಮನೆಯ- ಕುಟುಂಬದ ಜವಾಬ್ದಾರಿಗಳು ಇಂದು ಹೆಚ್ಚಾಗಲಿವೆ. ಕಚೇರಿಯಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಬೇಕಾಗಬಹುದು. ಈ ಹಿಂದೆ ನೀಡಿದ್ದ ಗಡುವಿಗಿಂತ ಮುಂಚಿತವಾಗಿ ಕೆಲಸ ಮುಗಿಸುವಂತೆ ಹೇಳಬಹುದು. ನೆರೆಹೊರೆಯವರ ಜೊತೆ ವಾಗ್ವಾದಕ್ಕೆ ಇಳಿಯಬೇಡಿ. ಆರ್ಥಿಕ ಲಾಭಕ್ಕಿಂತ ಖರ್ಚು ಅಧಿಕವಾಗಿರಲಿದೆ. ಹಳೆ ಬಾಕಿ ಪಾವತಿಸಲು ಅನುಕೂಲಕರ ಸಮಯವಿದು. ಸಂಗಾತಿಯ ಬೆಂಬಲ ನಿಮಗಿರಲಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ವಾಹನ ಸಂಚಾರದಲ್ಲಿ ಜಾಗರೂಕರಾಗಿರಿ – Kannada News | January 8 Daily Numerology: Birth Numbers 1, 2, 3 Predictions details here

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಇಂದು ನೀವು ಅಂದುಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಇದೇ ಕಾರಣಕ್ಕೆ ನಿಮ್ಮ ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕಡಿಮೆ ಆದರೂ ಪ್ರಯತ್ನವೇ ಮಾಡದಂತೆ ಸುಮ್ಮನೆ ಇರುವುದು ಸರಿಯಲ್ಲ. ಆರ್ಥಿಕವಾಗಿ ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವ್ಯವಹಾರದಿಂದ ದೂರವಿರುವುದು ಒಳ್ಳೆಯದು. ಸಾಮಾಜಿಕ ಸೇವೆ- ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳಿಗಾಗಿ ಹಣ ವ್ಯಯವಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ದಿನದ ಆರಂಭದಲ್ಲಿ ಮನಸ್ಸಿಗೆ ಸ್ವಲ್ಪ ಬೇಸರ ಎನಿಸಿದರೂ, ಸಂಜೆಯ ವೇಳೆಗೆ ಶುಭ ಸುದ್ದಿಯೊಂದು ಬರಲಿದೆ. ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಬಹಳ ಮುಖ್ಯ. ಜತೆಗೆ ಇರುವವರು ಏನು ಹೇಳುತ್ತಿದ್ದಾರೆ ಎಂಬ ಧ್ವನಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರಬಹುದು, ಮೌನವಾಗಿರುವುದು ಸೂಕ್ತ. ಹಳೆಯ ಸ್ನೇಹಿತರ ಭೇಟಿಯಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆಯಾದಲ್ಲಿ ಆಹಾರ ಪಥ್ಯ ಮಾಡುವುದು ಅಗತ್ಯ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಇಂದು ಸಕಾಲವಲ್ಲ. ಮುಖ್ಯವಾದ ಕಡತಗಳ ಬಗ್ಗೆ ಗಮನವಿರಲಿ, ಕೆಲವು ಫೈಲ್ ಗಳು ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಹನ ಸಂಚಾರದಲ್ಲಿ ಜಾಗರೂಕತೆ ಇರಲಿ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂಬ ಮಾತನ್ನು ನೀವು ಎಲ್ಲಿಯೇ ಆಡುವುದಕ್ಕೂ ಮುನ್ನ ನಾಲ್ಕಾರು ಬಾರಿ ಆಲೋಚಿಸುವುದು ಮುಖ್ಯ. ಇನ್ನು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಓಡಾಟ ನಡೆಸಬೇಕಾಗಬಹುದು. ಇಂದು ಯಾವುದೇ ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ.

ಲೇಖನ- ಎನ್‌.ಕೆ.ಸ್ವಾತಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ಯಂತ್ರೋಪಕರಣಗಳ ಬಳಕೆಯಲ್ಲಿ ಜಾಗ್ರತೆ ವಹಿಸಿ – Kannada News | January 8 Numerology: Daily Predictions for Birth Numbers 7, 8, 9

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಾದಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಮನಸ್ಸು ಮಾಡುವಿರಿ. ದಿನಸಿ ಪದಾರ್ಥಗಳು, ಬೇಕರಿ ಪದಾರ್ಥಗಳ ಖರೀದಿಗೆ ಹಣವನ್ನು ಖರ್ಚು ಮಾಡಲಿದ್ದೀರಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಯೋಗ ಮತ್ತು ಧ್ಯಾನದಿಂದ ದೈಹಿಕ ಶಕ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರ ಸಂಪರ್ಕ ಸಾಧ್ಯವಾಗಲಿದೆ. ಬೆಲೆಬಾಳುವ ವಸ್ತುಗಳನ್ನು, ಸಣ್ಣ- ಪುಟ್ಟ ಚಿನ್ನ- ಬೆಳ್ಳಿ ಒಡವೆಗಳನ್ನು ಜೋಪಾನವಾಗಿಡಿ. ಸರ್ಕಾರಿ ಸವಲತ್ತುಗಳು ಸಿಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಎಲ್ಲ ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡಲೇ ಬೇಕು ಎಂಬುದು ಕಡ್ಡಾಯ ಏನೂ ಅಲ್ಲ. ಆದ್ದರಿಂದ ನಿಮಗೆ ಸಂಬಂಧ ಪಡದ ವಿಷಯಗಳಲ್ಲಿ ಮೌನಕ್ಕೆ ಶರಣಾಗುವುದು ನಿಮ್ಮ ಕೆಲಸಗಳಿಗೆ ಹೆಚ್ಚು ಪೂರಕವಾಗಲಿದೆ. ಶತ್ರುಗಳ ಕಾಟ ತಗ್ಗಲಿದೆ. ವೃತ್ತಿ ಜೀವನದಲ್ಲಿ ಬದಲಾವಣೆ ಬಯಸುವವರಿಗೆ ಈ ಬಗ್ಗೆ ಮರು ಚಿಂತನೆ ನಡೆಸಲು ಸೂಕ್ತ ದಿನ. ಯಂತ್ರೋಪಕರಣಗಳ ಬಳಕೆಯಲ್ಲಿ ಜಾಗ್ತೆ ಇರಲಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹೂಡಿಕೆಯಲ್ಲಿ ತಾಳ್ಮೆಯಿರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಜವಾಬ್ದಾರಿಗಳನ್ನು ಇತರರಿಗೂ ಹಂಚಿ, ಗಡುವಿನೊಳಗೆ ಕೆಲಸ ಮುಗಿಸುವ ಕಡೆಗೆ ಗಮನವನ್ನು ನೀಡುವುದು ಉತ್ತಮ. ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಎಂಬ ಧೋರಣೆ ಬೇಡ. ಹೂಡಿಕೆ- ವೃತ್ತಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳುವ ಇರಾದೆ ಇರುವವರು ಇತರರ ಸಹಾಯವನ್ನೂ ಪಡೆಯಿರಿ. ಉದ್ಯೋಗ ಬದಲಾವಣೆಗೆ ಇದು ಸಕಾಲವಲ್ಲ. ಬೆನ್ನು ನೋವು ಅಥವಾ ಮೊಣಕಾಲು ನೋವು ಕಾಡಬಹುದು. ಆರ್ಥಿಕವಾಗಿ ಸಾಧಾರಣ ಫಲಿತಾಂಶ ದೊರೆಯಲಿದೆ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಗವಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

Economy: 2024-25ರಲ್ಲಿ ಶೇ. 6.5, 2025-26ರಲ್ಲಿ ಶೇ. 7.4; ಈ ವರ್ಷಕ್ಕೆ ಸರ್ಕಾರದ ಆರ್ಥಿಕ ಬೆಳವಣಿಗೆ ಅಂದಾಜು – Kannada News | Govt releases its first advance estimate, projects economy to grow 7.4pc this fy

ನವದೆಹಲಿ, ಜನವರಿ 7: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ (Indian economy) ಶೇ. 7.4ರಷ್ಟು ಬೆಳೆಯುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜು ಮಾಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಇಂದು (ಬುಧವಾರ) ಬಿಡುಗಡೆ ಮಾಡಿದ ತನ್ನ ಮೊದಲ ಮುಂಗಡ ಅಂದಾಜು ವರದಿಯಲ್ಲಿ ಈ ಲೆಕ್ಕಾಚಾರ ಹಾಕಿದೆ. 2024-25ರಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚಿತ್ತು. 2025-26ರಲ್ಲಿ ಶೇ. 7.4 ರಷ್ಟು ಹೆಚ್ಚಬಹುದು ಎಂದು ಸರ್ಕಾರ ನಿರೀಕ್ಷಿಸುತ್ತಿದೆ.

2011-12ರ ವರ್ಷದ ಆಧಾರದಲ್ಲಿ (base year) ಜಿಡಿಪಿ 201.90 ಲಕ್ಷ ಕೋಟಿ ರೂ ಮುಟ್ಟಬಹುದು ಎಂದು ಅಂದಾಜು ಮಾಡಲಾಗಿದೆ. 2024-25ರಲ್ಲಿ ಜಿಡಿಪಿ ಗಾತ್ರ 187.97 ಲಕ್ಷ ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ. 7.4ರಷ್ಟು ಹೆಚ್ಚುವ ಸಾಧ್ಯತೆ ಕಾಣುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9

ನಾಮಿನಲ್ ಜಿಡಿಪಿ ಶೇ. 8 ಹೆಚ್ಚಳ ಸಾಧ್ಯತೆ

ಪ್ರಸಕ್ತ ದರಗಳ ಆಧಾರದ ಜಿಡಿಪಿ (GDP at current prices) ಅಥವಾ ನಾಮಿನಲ್ ಜಿಡಿಪಿ 2025-26ರಲ್ಲಿ 357.14 ಲಕ್ಷ ಕೋಟಿ ರೂ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷದಲ್ಲಿ (2024-25) ಜಿಡಿಪಿ ಗಾತ್ರ 330.68 ಲಕ್ಷ ಕೋಟಿ ರೂ ಇತ್ತು. ಅಂದರೆ ನಾಮಿನಲ್ ಜಿಡಿಪಿ ಪ್ರಸಕ್ತ ವರ್ಷದಲ್ಲಿ ಶೇ. 8ರಷ್ಟು ಹೆಚ್ಚಬಹುದು ಎಂದು ಸರ್ಕಾರದ ಮೊದಲ ಅಡ್ವಾನ್ಸ್ಡ್ ಎಸ್ಟಿಮೇಟ್​ಗಳಲ್ಲಿ ತಿಳಿಸಲಾಗಿದೆ.

ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಏಜೆನ್ಸಿ ಕೂಡ ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 7.4ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ. ಸರ್ಕಾರದ ಅಂದಾಜು ಕೂಡ ಇಷ್ಟೇ ಇದೆ. 2023-24ರಲ್ಲಿ ಭಾರತದ ಜಿಡಿಪಿ ಶೇ. 8.2, 2024-25ರಲ್ಲಿ ಶೇ. 6.5ರಷ್ಟು ವೃದ್ಧಿಸಿತ್ತು. 2025-26ರ ಮೊದಲ ಕ್ವಾರ್ಟರ್​ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್​ನಲ್ಲಿ ಶೇ. 8.2ರಷ್ಟು ಜಿಡಿಪಿ ಹೆಚ್ಚಿದೆ. ಅಂದರೆ ಮೊದಲಾರ್ಧದಲ್ಲಿ ಆರ್ಥಿಕ ಬೆಳವಣಿಗೆ ಶೇ. 8ರ ದರದಲ್ಲಿ ಆಗಿದೆ. ಇನ್ನೆರಡು ಕ್ವಾರ್ಟರ್​ಗಳಲ್ಲೂ ಉತ್ತಮ ಬೆಳವಣಿಗೆ ದಾಖಲಾದರೆ ಜಿಡಿಪಿ ಶೇ 8ರ ಆಸುಪಾಸಿನಲ್ಲಿ ಇದ್ದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ಬಜೆಟ್​ಗೆ ಸಂಬಂಧ ಇರುತ್ತೆ ಈ ಎಸ್ಟಿಮೇಟ್

ಸರ್ಕಾರ ಈ ವರ್ಷದ ಆರ್ಥಿಕ ಬೆಳವಣಿಗೆ ಎಷ್ಟಿರಬಹುದು ಎಂದು ಮುಂಗಡವಾಗಿ ಮಾಡುವ ಅಂದಾಜು ವರದಿಯ ದತ್ತಾಂಶವನ್ನು ಬಜೆಟ್ ಸಿದ್ಧತೆಗೆ ಬಳಸಲಾಗುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಇದು ಮೋದಿ 3.0 ಸರ್ಕಾರದ ಮೂರನೇ ಪೂರ್ಣಪ್ರಮಾಣದ ಬಜೆಟ್ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಘು ಮೇಲಿನ ಎಮೋಷನ್: ‘ಟಿಕೆಟ್ ಟು ಟಾಪ್ 6’ ಆಟ ಬಿಟ್ಟುಕೊಟ್ಟ ರಕ್ಷಿತಾ ಶೆಟ್ಟಿ – Kannada News | Rakshitha Shetty quits during Ticket to Top 6 task in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಈಗ ಅಂತಿಮ ಹಂತದ ಹಣಾಹಣಿಗೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಎಲ್ಲರ ನಡುವೆ ಪೈಪೋಟಿ ಜಾಸ್ತಿ ಆಗಿದೆ. ಈ ವಾರ ‘ಟಿಕೆಟ್ ಟು ಟಾಪ್ 6’ ಟಾಸ್ಕ್ ನಡೆಯುತ್ತಿದೆ. ಅಂದರೆ, ಅಂತಿಮ 6 ಮಂದಿಯ ನಡುವೆ ನಡೆಯಲಿರುವ ಸ್ಪರ್ಧೆಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸಲು ಟಾಸ್ಕ್ ನೀಡಲಾಗುತ್ತಿದೆ. ಈ ಆಟದಲ್ಲಿ ಈಗಾಗಲೇ ಧ್ರುವಂತ್ ವಿರುದ್ಧ ಸೋತು ಗಿಲ್ಲಿ ನಟ ಅವರು ಔಟ್ ಆಗಿದ್ದಾರೆ. ಅಚ್ಚರಿ ಎಂದರೆ, ರಕ್ಷಿತಾ ಶೆಟ್ಟಿ (Rakshitha Shetty) ಅವರು ಸ್ವತಃ ಆಟದಿಂದ ಹೊರಗೆ ಬಂದಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಮ್ಯೂಟೆಂಟ್ ರಘು ಮೇಲಿನ ಎಮೋಷನ್!

ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಎಮೋಷನ್​​ಗೆ ಬೆಲೆ ಇಲ್ಲ. ತಾವೇ ಗೆಲ್ಲಬೇಕು ಎಂಬ ಕಾರಣಕ್ಕೆ ಸ್ನೇಹವನ್ನು ಬಲಿಕೊಡುತ್ತಾರೆ. ಹಲವು ದಿನಗಳಿಂದ ಒಟ್ಟಿಗೆ ಇದ್ದವರು ಒಂದು ಆಟಕ್ಕಾಗಿ ಕಿರಿಕ್ ಮಾಡಿಕೊಳ್ಳುತ್ತಾರೆ. ಆದರೆ ಈ ವಾರ ರಕ್ಷಿತಾ ಶೆಟ್ಟಿ ಅವರು ಎಮೋಷನ್​​ಗೆ ಒಳಗಾಗಿದ್ದಾರೆ. ರಘು ಅವರನ್ನು ಸೇವ್ ಮಾಡುವ ಸಲುವಾಗಿ ರಕ್ಷಿತಾ ಶೆಟ್ಟಿ ಸ್ವತಃ ಆಟದಿಂದ ಹೊರಗೆ ಬಂದರು.

ಟಾಸ್ಕ್ ವೇಳೆ ರಾಶಿಕಾ ಶೆಟ್ಟಿ, ಮ್ಯೂಟೆಂಟ್ ರಘು ಮತ್ತು ರಕ್ಷಿತಾ ಶೆಟ್ಟಿ ಅವರು ಒಂದು ತಂಡವಾಗಿ ಆಟ ಆಡಿದರು. ಆದರೆ ಅವರ ತಂಡಕ್ಕೆ ಹಿನ್ನಡೆ ಆಯಿತು. ಹಾಗಾಗಿ ಒಬ್ಬರನ್ನು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಇಡಬೇಕು ಎಂದು ಸೂಚಿಸಲಾಯಿತು. ಮೂವರೂ ಒಟ್ಟಿಗೆ ಚರ್ಚಿಸಿ ಒಬ್ಬರನ್ನು ಹೊರಗೆ ಇಡಬೇಕಿತ್ತು.

ರಾಶಿಕಾ ಶೆಟ್ಟಿ ಅವರನ್ನು ಆಟದಿಂದ ಹೊರಗೆ ಇಡಲು ರಘು ಮತ್ತು ರಕ್ಷಿತಾ ಆರಂಭದಲ್ಲಿ ತೀರ್ಮಾನಿಸಿದರು. ಆದರೆ ಆ ತೀರ್ಮಾನಕ್ಕೆ ರಾಶಿಕಾ ಒಪ್ಪಿಕೊಳ್ಳಲಿಲ್ಲ. ಒಂದು ವೇಳೆ ಒಮ್ಮತದ ನಿರ್ಧಾರಕ್ಕೆ ಬರದೇ ಇದ್ದರೆ ಮೂವರಿಗೂ ಅವಕಾಶ ತಪ್ಪುತ್ತಿತ್ತು. ಹಾಗಾಗಿ ಅಂತಿಮ ಹಂತದಲ್ಲಿ ರಘು ಅವರು ತಾನೇ ಔಟ್ ಆಗಲು ನಿರ್ಧರಿಸಿದರು. ಆದರೆ ಆಗ ರಕ್ಷಿತಾ ಶೆಟ್ಟಿ ಅವರು ಮನಸ್ಸು ಬದಲಾಯಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್

ಮ್ಯೂಟೆಂಟ್ ರಘು ಅವರನ್ನು ರಕ್ಷಿತಾ ಶೆಟ್ಟಿ ಅವರು ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಅವರಿಬ್ಬರು ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ. ರಘು ಮೇಲೆ ರಕ್ಷಿತಾ ಶೆಟ್ಟಿ ಅವರಿಗೆ ಬಹಳ ಪ್ರೀತಿ ಇದೆ. ಹಾಗಾಗಿ ರಘು ಅವರು ಆಟದಿಂದ ಹೊರಗೆ ಉಳಿಯುವುದು ರಕ್ಷಿತಾಗೆ ಇಷ್ಟ ಆಗಲಿಲ್ಲ. ಆದ್ದರಿಂದ ಎಮೋಷನ್​​ಗೆ ಒಳಗಾಗಿ ಅವರು ತಮ್ಮ ಆಟವನ್ನು ಬಿಟ್ಟುಕೊಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: 4ನೇ ಆವೃತ್ತಿಯ ಡಬ್ಲ್ಯುಪಿಎಲ್​ನಲ್ಲಿ ಆರ್​ಸಿಬಿ ಯಾವ ದಿನ ಯಾವ ತಂಡವನ್ನು ಎದುರಿಸಲಿದೆ? – Kannada News | WPL 2026: RCB Full Schedule, Match Dates and Venues

ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League) ನಾಲ್ಕನೇ ಆವೃತ್ತಿಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಜನವರಿ 9 ರಿಂದ ಈ ಟೂರ್ನಿ ಪ್ರಾರಂಭವಾಗಲಿದ್ದು, ಫೆಬ್ರವರಿ 05 ರಂದು ಕೊನೆಗೊಳ್ಳಲಿದೆ. ಈ ಆವೃತ್ತಿಯ ಪಂದ್ಯಗಳಿಗೆ ಕೇವಲ ಎರಡು ನಗರಗಳು ಆತಿಥ್ಯವಹಿಸುತ್ತಿದ್ದು, ನವಿ ಮುಂಬೈ ಹಾಗೂ ವಡೋದರಾದಲ್ಲಿ ಪಂದ್ಯಾವಳಿ ನಡೆಯಲಿದೆ. ಎಲ್ಲರಿಗೂ ತಿಳಿದಿರುವಂತೆ ಈ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುತ್ತಿವೆ. ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ತಲಾ 2 ಪಂದ್ಯಗಳನ್ನು ಆಡಲಿವೆ. ಈ ರೀತಿಯಾಗಿ ಒಂದು ತಂಡ ಒಟ್ಟು ಎಂಟು ಪಂದ್ಯಗಳನ್ನು ಆಡುತ್ತದೆ. ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಈ 22 ಪಂದ್ಯಗಳಲ್ಲಿ ಆರ್​ಸಿಬಿ (RCB) ಆಡಲಿರುವ 8 ಪಂದ್ಯಗಳನ್ನು ಯಾವ ದಿನದಂದು ಯಾವ ತಂಡದ ಎದುರು ಎಲ್ಲಿ ಆಡುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

ಮೊದಲ ಎದುರಾಳಿ ಮುಂಬೈ

ಆರ್​ಸಿಬಿ ಟೂರ್ನಿಯ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುತ್ತಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಜನವರಿ 09 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ನಡೆಯಲಿದೆ. ನಂತರ ಎರಡನೇ ಪಂದ್ಯ ಜನವರಿ 12 ರಂದು ಯುಪಿ ವಾರಿಯರ್ಸ್​ ವಿರುದ್ಧ ನಡೆಯಲಿದ್ದು, ಈ ಪಂದ್ಯಕ್ಕೂ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯ ನೀಡಲಿದೆ.

ಮೂರನೇ ಪಂದ್ಯವನ್ನು ಜನವರಿ 16 ರಂದು ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮುಂಬೈನಲ್ಲಿ ಎದುರಿಸಲಿದೆ. ಜನವರಿ 17 ರಂದು ನಡೆಯಲ್ಲಿರುವ ನಾಲ್ಕನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್, ಆರ್​ಸಿಬಿಗೆ ಎದುರಾಳಿಯಾಗಲಿದೆ. ಈ ಪಂದ್ಯವೂ ಕೂಡ ಮುಂಬೈನಲ್ಲಿ ನಡೆಯಲ್ಲಿದೆ.

WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ

ಎರಡು ದಿನಗಳ ಬಳಿಕ ಅಂದರೆ ಜನವರಿ 19 ರಂದು ತನ್ನ 5ನೇ ಪಂದ್ಯವನ್ನಾಡಲಿರುವ ಆರ್​ಸಿಬಿ ಈ ಪಂದ್ಯದಲ್ಲಿ ಎರಡನೇ ಬಾರಿಗೆ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ನಂತರ ಜನವರಿ 24 ರಂದು ಡೆಲ್ಲಿ ಕ್ಯಾಪಿಟಲ್ಸ್​ಗೆ ಆರ್​ಸಿಬಿ ಎರಡನೇ ಬಾರಿಗೆ ಮುಖಾಮುಖಿಯಾಗಲಿದೆ. ಈ ಎರಡು ಪಂದ್ಯಗಳು ವಡೋದರಲ್ಲಿ ನಡೆಯಲಿವೆ. ಉಳಿದೆರಡು ಪಂದ್ಯಗಳು ಸಹ ಇದೇ ವಡೋದರದಲ್ಲಿ ನಡೆಯಲಿದ್ದು, ಇದರಲ್ಲಿ ಆರ್​ಸಿಬಿ ಕ್ರಮವಾಗಿ ಜನವರಿ 26 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಜನವರಿ 29 ರಂದು ಯುಪಿ ವಾರಿಯರ್ಸ್​ ತಂಡವನ್ನು ಎದುರಿಸಲಿದೆ.

ಆರ್​ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರ್ರಿ ಬದಲಿಗೆ)

ಆರ್​ಸಿಬಿ ಪೂರ್ಣ ವೇಳಾಪಟ್ಟಿ

ದಿನಾಂಕ

ಮುಖಾಮುಖಿ

ಸ್ಥಳ

09-01-2026

ಮುಂಬೈ ಇಂಡಿಯನ್ಸ್ vs ಆರ್​ಸಿಬಿ

ನವಿ ಮುಂಬೈ

12-01-2026

ಆರ್​ಸಿಬಿ vs ಯುಪಿ ವಾರಿಯರ್ಸ್

ನವಿ ಮುಂಬೈ

16-01-2026

ಆರ್​ಸಿಬಿ vs ಗುಜರಾತ್ ಜೈಂಟ್ಸ್

ನವಿ ಮುಂಬೈ

17-01-2026

ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ

ನವಿ ಮುಂಬೈ

19-01-2026

ಗುಜರಾತ್ ಜೈಂಟ್ಸ್ vs ಆರ್​ಸಿಬಿ

ವಡೋದರಾ

24-01-2026

ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್

ವಡೋದರಾ

26-01-2026

ಆರ್​ಸಿಬಿ vs ಮುಂಬೈ ಇಂಡಿಯನ್ಸ್

ವಡೋದರಾ

29-01-2026

ಯುಪಿ ವಾರಿಯರ್ಸ್ vs ಆರ್​ಸಿಬಿ

ವಡೋದರಾ

03-02-2026

ಎಲಿಮಿನೇಟರ್

ವಡೋದರಾ

05-02-2026

ಫೈನಲ್

ವಡೋದರಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತ್ಯೇಕ ಘಟನೆ: ರಸ್ತೆ ಬದಿ‌ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ, 16ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು – Kannada News | Bengaluru Mangaluru techie commits suicide by falling from apartment 16th floor And Medical Student death at Shivamogga

ಬೆಂಗಳೂರು, (ಜನವರಿ 07): ರಸ್ತೆ ಬದಿ‌ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ (Bengaluru rural)  ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ ಬಳಿ ಕಾರಿನಲ್ಲಿ ಶವಪತ್ತೆಯಾಗಿದೆ. ಇಂದು (ಜನವರಿ 07) ಬೆಳಗ್ಗೆಯಿಂದ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ಎಷ್ಟು ಎಬ್ಬಿಸಿದರೂ ಎದ್ದಿಲ್ಲ. ಎಚ್ಚರಗೊಳ್ಳದಿದ್ದಕ್ಕೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೆಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ವ್ಯಕ್ತಿಯ ಜೇಬಿನಲ್ಲಿ ಶಿಡ್ಲಘಟ್ಟ ತಾಲೂಕಿನ ತಾಳಹಳ್ಳಿ ದಾಖಲೆಗಳು ಪತ್ತೆಯಾಗಿದೆ. ಆದ್ರೆ, ಮೃತ ವ್ಯಕ್ತಿ ಯಾರು ಏನು ಎನ್ನುವುದೇ ತಿಳಿದುಬಂದಿಲ್ಲ. ಆದ್ರೆ, ಸಿಕ್ಕ ದಾಖಲೆಗಳ ಆಧಾರದ ಮೇಲೆ ಪೊಲೀಸರು ಮೃತನ ಕುಟುಂಬಸ್ಥರನ್ನ ಸಂಪರ್ಕಿಸುವ ಪಯತ್ನ ನಡೆಸಿದ್ದಾರೆ.

ಇದನ್ನೂ ಓದಿ: ಪತ್ನಿ ಮಗ ಇದ್ರೂ ತಂಗಿ ಜತೆ ಅಣ್ಣ ಸಂಸಾರ: ಅಣ್ಣ-ತಂಗಿ ಲವ್ವಿಡವ್ವಿ ಸಾವಿನಲ್ಲಿ ಅಂತ್ಯ!

16ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ಅಪಾರ್ಟ್‌ಮೆಂಟ್‌ನ (Apartment) 16ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿಯೊಬ್ಬರು (Techie) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಗಲಗುಂಟೆಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನಿಕ್ಷೇಪ್ (26) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ನಿಕ್ಷೇಪ್ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದು, ಸ್ಕಿಜೋಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅಪಾರ್ಟ್‌ಮೆಂಟ್‌ನ 16ನೇ ಮಹಡಿಗೆ ಬಂದು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಮಂಗಳೂರಿನ ನಿವಾಸಿಯಾಗಿರುವ ಬಂಗೇರಾ, ವಿದೇಶದಲ್ಲಿ ಇಂಜಿನಿಯರಿಂಗ್ ಮುಗಿಸಿ ತಂದೆ ತಾಯಿ ಜೊತೆ ಬಾಗಲಗುಂಟೆ ಪ್ರಿನ್ಸ್ ಅಪಾರ್ಟ್ಮೆಂಟ್ ವಾಸವಿದ್ದ. ಬಂಗೇರಾ ಕುಟುಂಬ 20ನೇ ಮಹಡಿಯ ಫ್ಲಾಟ್ ನಲ್ಲಿ ವಾಸವಿತ್ತು. ಆದ್ರೆ, ಬಂಗೇರಾ 16ನೇ ಮಹಡಿ ಬಿದ್ದು ಅಚ್ಚರಿಗೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು,ಈ ಬಗ್ಗೆ ಬಾಗಲಗುಂಟೆ ಪೊಲೀಸರು‌ ತನಿಖೆ ಕೈಗೊಂಡಿದ್ದಾರೆ.

ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ: ಇನ್ನೊಂದೆಡೆ ಎಂಡಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ಭದ್ರಾ ಹಾಸ್ಟೆಲ್ ನಲ್ಲಿ ನಡೆದಿದೆ. ಸಂದೀಪ್ ರಾಜ್ (27) ಆತ್ಮಹತ್ಯೆಗೆ ಶರಣಾದ ಪಿಜಿ ವಿದ್ಯಾರ್ಥಿ.  ಮೂಲತಃ ತುಮಕೂರಿನ ಮಧುಗಿರಿ ಮೂಲದ ಸಂದೀಪ್ ರಾಜ್, ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಡಿ ರೆಡಿಯಾಲಜಿ ವ್ಯಾಸಂಗ ಮಾಡುತ್ತಿದ್ದ. ಇನ್ನು ಸಂದೀಪ್ ರಾಜ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಸಂಬಂಧ ಶಿವಮೊಗ್ಗದ ಖಾಸಗಿ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version