ಸೂರ್ಯನ ಬೆಳಕಿನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು? 90% ಜನರಿಗೆ ಇದು ಗೊತ್ತೇ ಇಲ್ಲ – Kannada News | You can get vitamin D from sunlight only if you follow these steps

ವಿಟಮಿನ್ ಡಿ (vitamin D) ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದಂತಹ ಪ್ರಮುಖ ಪೋಷಕಾಂಶವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಆರೋಗ್ಯವನ್ನು ವೃದ್ಧಿಸಲು ಮಾತ್ರವಲ್ಲದೆ ಇದು ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಂಶಗಳನ್ನು ಹೀರಿಕೊಳ್ಳಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಸೂರ್ಯನ ಬೆಳಕು ವಿಟಮಿನ್‌ ಡಿ ಯ ನೈಸರ್ಗಿಕ ಮೂಲವಾಗಿದ್ದು, ಇದರ ಪ್ರಯೋಜನವನ್ನು ಪಡೆಯಲು ಬಹುತೇಕರು ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳುತ್ತಾರೆ. ಆದರೆ 90% ಜನರಿಗೆ ಸೂರ್ಯನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ವಿಧಾನ ಯಾವುದೆಂದು ಗೊತ್ತಿಲ್ಲವಂತೆ. ಹಾಗಿದ್ರೆ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದೆಂದು ನೋಡೋಣ ಬನ್ನಿ.

ಸೂರ್ಯನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು?

ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯಲು ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡಿಕೊಂಡರೆ ಸಾಕು. ಈ ಸಮಯದಲ್ಲಿ ಮುಖ, ಕೈ ಮತ್ತು ಪಾದಗಳು ಬಿಸಿಲಿಗೆ ಒಡ್ಡಿಕೊಳ್ಳಬೇಕು. ಬಟ್ಟೆಯಿಂದ ಸಂಪೂರ್ಣ ದೇಹವನ್ನು ಮುಚ್ಚಿಕೊಳ್ಳುವುದರಿಂದ ವಿಟಮಿನ್‌ ಡಿ ಉತ್ಪಾದನೆಯಾಗುವುದಿಲ್ಲ. ವಿಟಮಿನ್ ಡಿ ಪಡೆಯಲು ಉತ್ತಮ ಸಮಯವೆಂದರೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ. ಈ ಸಮಯದಲ್ಲಿ, ಸೂರ್ಯನ UVB ಕಿರಣಗಳು ಚರ್ಮವನ್ನು ತಗುಲಿ ವಿಟಮಿನ್ ಡಿ ಉತ್ಪಾದಿಸಲು ಸಹಾಯ ಮಾಡುತ್ತದೆ.

ಸೂರ್ಯನ ಬೆಳಕು ನಮ್ಮ ಚರ್ಮಕ್ಕೆ ನೇರವಾಗಿ ತಾಗಿದಾಗ ನಮಗೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗುತ್ತದೆ. ಗಾಜಿನ ಹಿಂದೆ, ನೆರಳಿನಲ್ಲಿ ಕುಳಿತುಕೊಳ್ಳುವುದರಿಂದ ಅಥವಾ ಸನ್‌ಸ್ಕ್ರೀನ್ ಹಚ್ಚಿ ಸೂರ್ಯನ ಬೆಳಕಿಗೆ ಮೈ ಒಡ್ಡುವುದರಿಂದ ವಿಟಮಿನ್ ಡಿ ಉತ್ಪಾದನೆ ನಿಲ್ಲುತ್ತದೆ. ಅಲ್ಲದೆ UVB ಕಿರಣಗಳು ಗಾಜಿನ ಮೂಲಕ ಭೇದಿಸುವುದಿಲ್ಲ. ಆದ್ದರಿಂದ, ನಿಮಗೆ ವಿಟಮಿನ್ ಡಿ ಅಗತ್ಯವಿದ್ದರೆ, ನೀವು ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕಿಗೆ ನೇರವಾಗಿ ದೇಹವನ್ನು ಒಡ್ಡಿಕೊಳ್ಳಬೇಕು.

ಯಾವ ಸಮಯದಲ್ಲಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಬಿಡುಗಡೆಯಾಗುತ್ತದೆ?

ಹೆಚ್ಚಿನವರು ಬೆಳಿಗ್ಗೆ 7 ರಿಂದ 8 ಗಂಟೆಯ ಸಮಯದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಈ ಸಮಯದಲ್ಲಿ  ಸೂರ್ಯನ ಬೆಳಕು ತುಂಬಾ ದುರ್ಬಲವಾಗಿರುತ್ತದೆ, ಇದರ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಯೇ ಇರುವುದಿಲ್ಲ. ವಾಸ್ತವವಾಗಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ರಚನೆಯ ಪ್ರಕ್ರಿಯೆಯು ಬೆಳಿಗ್ಗೆ 10 ಗಂಟೆಯ ನಂತರ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮುಖ್ಯ. ತಪ್ಪಾದ ವಿಧಾನವು ಚರ್ಮಕ್ಕೆ ಹಾನಿ ಮಾಡಬಹುದು.

ಇದನ್ನೂ ಓದಿ: ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?

ಸೂರ್ಯನಿಂದ ವಿಟಮಿನ್ ಡಿ ಪಡೆಯುವಾಗ ಈ ತಪ್ಪುಗಳನ್ನು ಮಾಡಬಾರದು:

  • ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು.
  • ಸಂಪೂರ್ಣ ದೇಹಕ್ಕೆ ಸನ್‌ ಸ್ಕ್ರೀನ್‌ ಹಚ್ಚುವುದು.
  • ಕೈ ಕಾಲು ಮುಚ್ಚುವಂತಹ ಸಂಪೂರ್ಣ ಬಟ್ಟೆ ಧರಿಸುವುದು

ಈ ಎಲ್ಲಾ ತಪ್ಪುಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಗಂಟೆಗಟ್ಟಲೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ಚರ್ಮದ ಕಪ್ಪಾಗುವಿಕೆ, ಸುಕ್ಕುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಬೆನ್ನಲ್ಲೆ ಕೋಲಾರದಲ್ಲೂ ಬ್ಯಾನರ್​​ ಗಲಾಟೆ: ಬಿಜೆಪಿಗರ ನಡೆಗೆ ಕಾಂಗ್ರೆಸ್​​ ಕೆಂಡ – Kannada News | Kolar Banner Row: Congress BJP Clash Over Ex MLA Manjunath Gowdas Poster

ಕೋಲಾರ, ಜನವರಿ 07: ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರ ಮಅಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ಸದ್ದುಮಾಡಿದೆ. ಕೋಲಾರದ ಮಾಲೂರು ತಾಲೂಕಿನ ಕಾಂಗ್ರೆಸ್ ಹಾಗೂ BJP ಕಾರ್ಯಕರ್ತರ ನಡುವೆ ಬ್ಯಾನರ್ ಗಲಾಟೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಟಾಕ್ ಫೈಟ್​​ ನಡೆದಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಪಟ್ಟಣದಲ್ಲಿ ಬ್ಯಾನರ್ ಅಳವಡಿಸಿದ್ದು, ನಮ್ಮ ಶಾಸಕರು ಎಂದು ಸಂಬೋಧಿಸಿ ಅದರಲ್ಲಿ ಶುಭಾಶಯ ಕೋರಿದ್ದಾರೆ. ಇದಕ್ಕೆ ಹಾಲಿ ಶಾಸಕ ನಂಜೇಗೌಡ ಬೆಂಬಲಿಗರು ಕೆಂಡಾಮಂಡಲರಾಗಿದ್ದು, BJP ಕಾರ್ಯಕರ್ತರು ಹಾಕಿದ್ದ ಬ್ಯಾನರ್​​ನ ಮಾಲೂರು ನಗರಸಭೆ ತೆರವುಗೊಳಿಸಿದೆ. ಇದಾದ ಬಳಿಕ ನಗರಸಭೆ ಪೌರಾಯುಕ್ತ ಪ್ರದೀಪ್ ಎದುರು ಕಚೇರಿಯಲ್ಲಿ ಹೈಡ್ರಾಮ ನಡೆದಿದ್ದು, ಪೌರಾಯುಕ್ತರನ್ನು ಬಿಜೆಪಿ ಮುಖಂಡರು ಏಕವಚನದ್ದಲಿ ತರಾಟೆಗೆ ಪಡೆದ ಪ್ರಸಂಗ ಕೂಡ ನಡೆದಿದೆ. ಬಳ್ಳಾರಿ ರೀತಿ ಅವಘಡ ಆಗದಿರಲಿ ಎಂಬ ಕಾರಣಕ್ಕೆ ಬ್ಯಾನರ್​​ ತೆರವು ಮಾಡಿದ್ದೇವೆ ಎಂದು ಪೌರಾಯುಕ್ತರು ಕೂಡ ಈ ವೇಳೆ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜನ ನಾಯಗನ್’ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ‘ರಾಜಾ ಸಾಬ್’ ಮತ್ತು ‘ಶಂಕರ ವರ ಪ್ರಸಾದ್’ – Kannada News | The Raja Saab and Mana Shankara Vara Prasad Garu movie teams approach Telangana High Court

ಸಂಕ್ರಾಂತಿ (Sankranthi) ಹಬ್ಬಕ್ಕೆ ಪ್ರತಿ ಬಾರಿಯಂತೆ ಈ ಬಾರಿಯೂ ತೆಲುಗು ಚಿತ್ರರಂಗದ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’, ರವಿತೇಜ ನಟನೆಯ ‘ಭರ್ತ ಪ್ರಜಲಕು ವಿಜ್ಞಪ್ತಿ’, ನವೀನ್ ಪೋಲಿಶೆಟ್ಟಿ ನಟನೆಯ ‘ಅನಗನಗಾ ಒಕ ರಾಜು’, ಶರವಣ ನಟನೆಯ ‘ನಾರಿ ನಡುಮ ಮುರಾರಿ’ ಸಿನಿಮಾಗಳು ತೆರೆಗೆ ಬರುತ್ತಿವೆ. ಇವುಗಳ ಜೊತೆಗೆ ತಮಿಳಿನ ‘ಜನ ನಾಯಗನ್’ ಮತ್ತು ‘ಪರಾಶಕ್ತಿ’ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿವೆ.

ಆದರೆ ಇದೀಗ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಮತ್ತು ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಗಳು ಹಠಾತ್ತನೆ ಕೋರ್ಟ್ ಮೆಟ್ಟಿಲೇರಿವೆ. ತೆಲಂಗಾಣ ಹೈಕೋರ್ಟ್​​ಗೆ ಎರಡೂ ಸಿನಿಮಾಗಳು ಪಿಟಿಷನ್ ಸಲ್ಲಿಸಿದ್ದು, ತಮ್ಮ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿವೆ.

ದೊಡ್ಡ ಸಿನಿಮಾಗಳು ಬಿಡುಗಡೆ ಆದಾಗೆಲ್ಲ ಚಿತ್ರತಂಡಗಳು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ನಿರ್ದಿಷ್ಟ ದಿನಗಳ ವರೆಗೆ ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಳನ್ನು ಪ್ರದರ್ಶಿಸಲು ಅನುಮತಿ ಪಡೆದುಕೊಳ್ಳುತ್ತವೆ. ಆದರೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್, ಈ ಟಿಕೆಟ್ ದರ ಹೆಚ್ಚಳದ ಕುರಿತಂತೆ ಸಲ್ಲಿಕೆ ಆಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿ, ಟಿಕೆಟ್ ದರ ಹೆಚ್ಚಳ ಮಾಡದಂತೆ ಆದೇಶ ನೀಡಿದೆ. ಇದೇ ಕಾರಣಕ್ಕೆ ಇದೀಗ ‘ದಿ ರಾಜಾ ಸಾಬ್’ ಮತ್ತು ‘ಮನ ಶಂಕರ ವರ ಪ್ರಸಾದ್’ ಚಿತ್ರತಂಡಗಳು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿವೆ.

ಇದನ್ನೂ ಓದಿ:ಇನ್ಮುಂದೆ ಸೆಟ್​ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ

ಆದರೆ ಆಂಧ್ರ ಪ್ರದೇಶದಲ್ಲಿ ಈ ಸಮಸ್ಯೆ ಇಲ್ಲ. ಎರಡೂ ಸಿನಿಮಾಗಳಿಗೆ ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಸುಲಭವಾಗಿ ಅನುಮತಿ ದೊರೆತಿದೆ. ಆದರೆ ತೆಲಂಗಾಣದಲ್ಲಿ ಹೈಕೋರ್ಟ್ ಆದೇಶ ಇರುವ ಕಾರಣ ಅನುಮತಿ ನೀಡಲಾಗಿಲ್ಲ. ಇದೀಗ ‘ದಿ ರಾಜಾ ಸಾಬ್’ ಮತ್ತು ‘ಮನ ಶಂಕರ ವರ ಪ್ರಸಾದ್’ ಅವರುಗಳು ಈಗ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಬುಧವಾರ ವಿಚಾರಣೆಗೆ ತೆಗೆದುಕೊಳ್ಳೂವುದಾಗಿ ಹೇಳಲಾಗಿದೆ.

ಈ ಹಿಂದೆ ‘ಅಖಂಡ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ತೆಲಂಗಾಣದಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ತೆಲಂಗಾಣ ಹೈಕೋರ್ಟ್ ಆದೇಶ ಹೊರಡಿಸಿ, ಟಿಕೆಟ್ ದರ ಹೆಚ್ಚಳ ಮಾಡುವಂತಿಲ್ಲ ಎಂದಿತ್ತು. ಅಲ್ಲದೆ ತಮ್ಮ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ಚಿತ್ರತಂಡಕ್ಕೆ ಛೀಮಾರಿ ಸಹ ಹಾಕಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Teeth Gap Fortune: ನಿಮ್ಮ ಹಲ್ಲುಗಳ ನಡುವೆ ಅಂತರವಿದೆಯೇ? ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Teeth Gap Fortune: Astrology Secrets for Smart, Wealthy Women

ಸಾಮಾನ್ಯವಾಗಿ, ಅನೇಕ ಜನರು ಹಲ್ಲುಗಳ ನಡುವಿನ ಅಂತರದಿಂದಾಗಿ ನಗಲು ಕಷ್ಟಪಡುತ್ತಾರೆ. ಇದು ಅವರ ಸೌಂದರ್ಯವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಿ, ಅವರು ವೈದ್ಯರ ಬಳಿಗೆ ಹೋಗಿ ಕ್ಲಿಪ್‌ಗಳನ್ನು ಹಾಕಿಸಿಕೊಳ್ಳುತ್ತಾರೆ. ಆದರೆ, ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಲ್ಲುಗಳ ನಡುವೆ ಅಂತರವಿರುವುದು ದೋಷವಲ್ಲ, ಅದು ದೊಡ್ಡ ಆಶೀರ್ವಾದ ಎಂದು ನಿಮಗೆ ತಿಳಿದಿದೆಯೇ? ಈ ಗುಣಲಕ್ಷಣವಿದ್ದರೆ ಮಹಿಳೆಯರು, ವಿಶೇಷವಾಗಿ ಅದೃಷ್ಟವಂತರು ಎಂದು ಶಾಸ್ತ್ರ ಹೇಳುತ್ತವೆ.

ಅತ್ಯಂತ ಬುದ್ಧಿವಂತರು:

ಜ್ಯೋತಿಷ್ಯ ತಜ್ಞರ ಪ್ರಕಾರ, ಮುಂಭಾಗದ ಹಲ್ಲುಗಳ ನಡುವೆ ಅಂತರವಿರುವ ಹುಡುಗಿಯರು ತುಂಬಾ ಬುದ್ಧಿವಂತರು. ಅವರಿಗೆ ಹೆಚ್ಚಿನ ಗ್ರಹಣ ಶಕ್ತಿ ಇರುತ್ತದೆ. ಅವರು ಯಾವುದೇ ಸಂಕೀರ್ಣ ಸಮಸ್ಯೆಯನ್ನು ಬಹಳ ಚಾತುರ್ಯದಿಂದ ಪರಿಹರಿಸಬಹುದು. ಅವರ ಬುದ್ಧಿವಂತಿಕೆಯು ಅವರಿಗೆ ಸಮಾಜದಲ್ಲಿ ವಿಶೇಷ ಗುರುತನ್ನು ತರುತ್ತದೆ. ಅವರು ವೃತ್ತಿಪರವಾಗಿ ಅಚಲ ಯಶಸ್ಸನ್ನು ಸಾಧಿಸುತ್ತಾರೆ. ಯಾವುದೇ ಕೆಲಸ ಪೂರ್ಣಗೊಳ್ಳುವವರೆಗೆ ಅದನ್ನು ಬಿಟ್ಟುಕೊಡದಿರುವ ಪರಿಶ್ರಮ ಅವರಲ್ಲಿದೆ. ವೈಫಲ್ಯಗಳ ನಡುವೆಯೂ ಅವರು ಬಿಟ್ಟುಕೊಡುವುದಿಲ್ಲ ಮತ್ತು ತಮ್ಮ ಗುರಿಯತ್ತ ಧಾವಿಸುತ್ತಾರೆ. ಅವರಿಗೆ ಕಚೇರಿಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯುವ ಹೆಚ್ಚಿನ ಅವಕಾಶವಿದೆ.

ನೀವು ಹೆಜ್ಜೆ ಇಟ್ಟಲ್ಲೆಲ್ಲಾ ಸಂಪತ್ತಿನ ಮಳೆ:

ಆರ್ಥಿಕ ದೃಷ್ಟಿಯಿಂದ, ಹಲ್ಲುಗಳ ನಡುವಿನ ಅಂತರವನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮದುವೆಗೆ ಮೊದಲು, ಪೋಷಕರ ಮನೆ ಸಂತೋಷದಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಮದುವೆಯ ನಂತರ, ಅತ್ತೆ-ಮಾವನ ಮನೆಗೆ ಪ್ರವೇಶಿಸಿದಾಗ, ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಸಂಪತ್ತು ಸ್ಥಾಪನೆಯಾಗುತ್ತದೆ ಎಂದು ನಂಬಲಾಗಿದೆ. ಅವರನ್ನು ಮಹಾಲಕ್ಷ್ಮಿಯ ಅವತಾರವೆಂದು ಪರಿಗಣಿಸಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಸಂತೋಷದ ಕುಟುಂಬ ಜೀವನ:

ಇವರು ಕುಟುಂಬ ಮತ್ತು ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಅವರು ಯಾವಾಗಲೂ ತಮ್ಮ ಪತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಇದು ಕುಟುಂಬಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ತರುತ್ತದೆ. ಅವರು ಮಿತವಾದ ಆಹಾರವನ್ನು ಸೇವಿಸುತ್ತಾರೆ ಮತ್ತು ತಮ್ಮ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.

ನಿಮ್ಮ ಹಲ್ಲುಗಳ ನಡುವೆ ಅಂತರವಿದ್ದರೆ ಅಸುರಕ್ಷಿತ ಭಾವನೆ ಹೊಂದುವ ಅಗತ್ಯವಿಲ್ಲ. ವಿಜ್ಞಾನದ ಪ್ರಕಾರ, ಅದು ನಿಮ್ಮ ಉನ್ನತ ವ್ಯಕ್ತಿತ್ವ ಮತ್ತು ಉಜ್ವಲ ಭವಿಷ್ಯದ ಸಂಕೇತವಾಗಿದೆ. ಆದ್ದರಿಂದ ಆ ಅಂತರದ ಬಗ್ಗೆ ಹೆಮ್ಮೆಪಡಿರಿ ಮತ್ತು ನಿಮ್ಮ ಹೃದಯದಿಂದ ನಗುತ್ತಿರಿ!

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊನ್ನಾವರದ ಬಳಿ ಪಲ್ಟಿಯಾಗಿ ಹೊತ್ತಿ ಉರಿದ ಕಾರು: ಗುರುತು ಸಿಗದಂತೆ ಸುಟ್ಟು ಕರಕಲಾದ ಇಬ್ಬರು! – Kannada News | Honnavar car fire tragedy two burnt alive after car overturns

ಕಾರವಾರ/ಚಾಮರಾಜನಗರ: ಪಲ್ಟಿಯಾಗಿ ಕಾರು ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್​ನಲ್ಲಿ ನಡೆದಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾರಿನ ನಂಬರ್​​ಪ್ಲೇಟ್​​ ಕೂಡ ಬೆಂಕಿಯಲ್ಲಿ ಸುಟ್ಟುಹೋಗಿದೆ. ಹೀಗಾಗಿಕಾರು ಮತ್ತು ಕಾರಿನಲ್ಲಿ ಇದ್ದವರ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಮೃತರು ಸಿದ್ದಾಪುರ ಮೂಲದವರೆಂದು ಗೊತ್ತಾಗಿದ್ದು, ಘಟನೆ ಬಗ್ಗೆ ಸಂಬಂಧಿಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸಂಪ್​​ನಲ್ಲಿ ತಾಯಿ-ಮಕ್ಕಳ ಶವ ಪತ್ತೆ; ನಿಗೂಢ ಸಾವಿಗೆ ಕಾರಣ ಏನು?

ಬಸ್​​-ಲಾರಿ ಮುಖಾಮುಖಿ ಡಿಕ್ಕಿ

ಬಸ್​​-ಲಾರಿ ಡಿಕ್ಕಿ

KSRTC ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ಅಶ್ವಮೇಧ ಬಸ್​​ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಎರಡು ವಾಹನಗಳ ಚಾಲಕರ ಸ್ಥಿತಿ ಗಂಭೀರವಾಗಿದೆ. ಬೆಂಡರವಾಡಿ ಗ್ರಾಮದ ಶಾಲೆ ಹತ್ತಿರದ ತಿರುವಿನಲ್ಲಿ ನಂಜನಗೂಡು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಗಾಯಾಳನ್ನ ನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತದ ಹಿನ್ನೆಲೆ ಟ್ರಾಫಿಕ್​​ ಜಾಮ್​​ ಉಂಟಾಗಿದ್ದು, ಕೆಲ ಕಾಲ ವಾಹನ ಸವಾರರು ಪರದಾಟ ನಡೆಸಬೇಕಾಯ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಂಡ ಕಂಡಲ್ಲಿ ಪಾನ್ ಮಸಾಲ ಉಗುಳಿದರೆ 12 ಸಾವಿರ ರೂ. ದಂಡ – Kannada News | London Residents Call for Action Over Spit Stains on City Streets

ಲಂಡನ್, ಜನವರಿ 07: ಭಾರತದ ಬಹುತೇಕ ಬೀದಿಗಳಲ್ಲಿ ಅಲ್ಲಲ್ಲಿ ಪಾನ್ ಮಸಾಲ ಉಗುಳಿರುವ ಕಲೆಗಳು ಕಾಣುತ್ತವೆ. ಆದರೆ ನಮ್ಮ ಜನರು ಲಂಡನ್​ಗೆ ಹೋಗಿ ಅಲ್ಲಿಯೂ ಅದೇ ಕೆಲಸ ಮಾಡುತ್ತಿದ್ದು, ಅಲ್ಲಿನ ಜನರು ಬೇಸರ ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ 12 ಸಾವಿರ ರೂ. ವರೆಗೆ ದಂಡ(Penalty) ವಿದಿಸುವಂತೆ ಮನವಿ ಮಾಡಿದ್ದಾರೆ.

ಅವರು ಹಂಚಿಕೊಂಡಿರುವ ವಿಡಿಯೋ ಹಾಗೂ ಫೋಟೊದಲ್ಲಿ ಡಸ್ಟ್​ಬಿನ್ ಡಬ್ಬಿಯಿಂದ ಹಿಡಿದು ಪಾದಚಾರಿ ಮಾರ್ಗಗಳು, ಗೋಡೆಗಳು, ರಸ್ತೆಯ ಪಕ್ಕದಲ್ಲೆಲ್ಲಾ ಪಾನ್ ಮಸಾಲವನ್ನು ಉಗುಳಿರುವುದನ್ನು ಕಾಣಬಹುದು. ಅವುಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಹ್ಯಾರೋ ಮತ್ತು ವೆಂಬ್ಲಿಯ ಹಲವಾರು ಪ್ರದೇಶಗಳ ಈ ಪರಿಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಜನರು ಪಾನ್ ಉಗುಳುವುದರಿಂದಾಗಿ ರಸ್ತೆಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಈ ಪ್ರದೇಶಗಳನ್ನು ಸ್ವಚ್ಛವಾಗಿಡುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. ಸ್ಥಳೀಯ ಪಾನ್ ಅಂಗಡಿ ಮಾಲೀಕರು ಸಹ ಕಳವಳ ವ್ಯಕ್ತಪಡಿಸಿದ್ದು, ಕೆಲವು ಗ್ರಾಹಕರು ಅಜಾಗರೂಕತೆಯಿಂದ ಉಗುಳುವುದು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಮತ್ತಷ್ಟು ಓದಿ: ಒಂದೇ ಬೈಕ್‌ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು

ಮೊದಲ ಅಪರಾಧಕ್ಕೆ 1000 ಪೌಂಡ್‌ಗಳು ಮತ್ತು ಎರಡನೇ ಅಪರಾಧಕ್ಕೆ 5000 ಪೌಂಡ್‌ಗಳ ದಂಡ ವಿಧಿಸಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಮೂರನೆಯದು 10 ಸಾವಿರ + 1 ವಾರ ಜೈಲು ಶಿಕ್ಷೆ, ಇಂಗ್ಲೆಂಡ್​ನಲ್ಲಿ ಇದು ಜಾರಿಯಾದರೆ ಮುಂದೊಂದು ದಿನ ಭಾರತದಲ್ಲೂ ಇಂಥಾ ನಿಯಮಗಳನ್ನು ಜಾರಿಗೆ ತರಬಹುದು. ಬ್ರೆಂಟ್ ಕೌನ್ಸಿಲ್ ಈಗ ಜನರಿಗೆ ಕಲೆಗಳಿಗಾಗಿ ನೂರು ಪೌಂಡ್ ದಂಡ ವಿಧಿಸುತ್ತಿದೆ.

ತೆರಿಗೆದಾರರಾದ ನಾವು ಈ ಕಲೆಗಳನ್ನು ತೆಗೆದುಹಾಕಲು ಸಾವಿರಾರು ಪೌಂಡ್ ಹಣವನ್ನು ಪಾವತಿಸುತ್ತಿದ್ದೇವೆ. ಗುಟ್ಕಾ-ಪಾನ್ ಮಸಾಲ ರಸ್ತೆಗಳಿಗೆ ಸಾಂಕ್ರಾಮಿಕ ರೋಗದಂತಾಗಿದೆ. ಬಾಲಿವುಡ್ ನಟರು ಅಂತಹ ಉತ್ಪನ್ನಗಳನ್ನು ಜಾಹೀರಾತು ಮಾಡಲು ನಾಚಿಕೆಪಡಬೇಕು ಎನ್ನು ಶೀರ್ಷಿಕೆಯಡಿ ಪೋಸ್ಟ್​ ಮಾಡಿದ್ದಾರೆ.

ಉಗುಳುವುದು ಸಾಮಾನ್ಯವಾಗಿ ಕಂಡುಬರುವ ಮೂರು ಪ್ರದೇಶಗಳಲ್ಲಿ ಅಧಿಕಾರಿಗಳು ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ ಮತ್ತು ಈ ಸ್ಥಳಗಳಲ್ಲಿ ಅಧಿಕಾರಿಗಳು ಗಸ್ತು ತಿರುಗಲಿದ್ದಾರೆ. ಪಾನ್ ಉಗುಳುವುದು ಕಂಡುಬಂದರೆ ಜನರು 100 ಪೌಂಡ್​ಗಳು(ಸುಮಾರು ರೂ. 12,000) ವರೆಗೆ ದಂಡ ವಿಧಿಸಬಹುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ! – Kannada News | Chikkamagaluru POCSO case: Father Forces Minor Daughter into Prostitution Ring

ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ!

ಚಿಕ್ಕಮಗಳೂರು, ಜನವರಿ 07: ತಂದೆ- ತಾಯಿ ಎಷ್ಟೇ ಕಷ್ಟವಿದ್ದರೂ ಮಕ್ಕಳು ಚನ್ನಾಗಿರಲೆಂದು ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ತಂದೆ ಹೆತ್ತ ಮಗಳನ್ನೇ ದಂಧೆಗಿಳಿಸಿದ್ದಾನೆ. ಹಣದಾಸೆಗಾಗಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆಯೇ ವೇಶ್ಯಾವಾಟಿಕೆಗೆ ದೂಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

ಅಜ್ಜಿ ಮನೆಗೆ ಬಂದಿದ್ದವಳಿಗೆ ಕಾದಿತ್ತು ಕಂಟಕ

ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತದೆಯೆಂಬ ಆಸೆಗೆ ತಂದೆಯೊಬ್ಬ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ, PUC ವರೆಗೂ ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ಮನೆಗೆ ಮರಳಿದ್ದಳು. ಈ ವೇಳೆ ಡಿಸೆಂಬರ್​ನಲ್ಲಿ ತಂದೆಯೊಂದಿಗೆ ಅಜ್ಜಿಯ ಮ್ನೆಗೆ ಹೋಗಿ 2 ದಿನ ಉಳಿದು ಬಂದಿದ್ದಳು. ಮತ್ತೊಮ್ಮೆ ಅಜ್ಜಿಯಿಂದ ಬುಲಾವು ಬಂದಿದೆಯೆಂದು ಆಕೆಯ ಮನೆಗೆ ಹೋದ ಹುಡುಗಿಗೆ ಕಂಟಕ ಕಾದಿತ್ತು. ಅದೇ ಸಂದರ್ಭದಲ್ಲಿ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ ತಂದೆ- ಮಗಳೊಡನೆ ಸಲುಗೆ ಬೆಳೆಸಿದ್ದ. ಆತನ ಮನೆಗೆ ಬಂದು ತಂಗುವಂತೆಯೂ ತಿಳಿಸಿದ್ದ.

ಎರಡು ದಿನಗಳಕಾಲ ನಾಲ್ವರಿಂದ ಅತ್ಯಾಚಾರ

ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್​ನೊಂದಿಗೆ ಮಂಗಳೂರಿಗೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದಳು. ಆದಾಗಿಯೂ ಮರುದಿನ ಅಪ್ರಾಪ್ತೆ ಬಳಿ ಬಂದ ಭರತ್, 4-5 ಜನ ಬರುತ್ತಾರೆ, ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅವನ ಮಾತಿನಂತೆ 20ರಿಂದ ಹಿಡಿದು 45 ವರ್ಷ ವಯೋಮಿತಿಯ ನಾಲ್ವರು ಒಬ್ಬರಾದ ಮೇಲೊಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದರು. ಇದಾದ ಮರುದಿನವೂ ಇದೇ ಕೆಲಸಕ್ಕೆ ಒತ್ತಾಯಿಸಿದಾಗ ಹುಡುಗಿ ನಿರಾಕರಿಸಿದರೂ ಮತ್ತೊಮ್ಮೆ ಆಕೆಯ ಮೇಲೆ ಅದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ವೇಳೆ ನಾನು ಅಪ್ರಾಪ್ತೆ, ನನ್ನನ್ನು ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಕೇಳದ ಕಾಮುಕರು, ನಾವು ಭರತ್ ಶೆಟ್ಟಿಗೆ ಹಣ ನೀಡಿದ್ದೇವೆಂದು ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.

ಇದನ್ನೂ ಓದಿ Chikkamagaluru: ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ

ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಎನ್ನಲಾಗಿರುವ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜನ ನಾಯಗನ್’​ ರಿಲೀಸ್​​​ಗೂ ಮೊದಲು ಒಟಿಟಿಯಲ್ಲಿ ಟ್ರೆಂಡ್ ಆಯ್ತು ‘ಭಗವಂತ ಕೇಸರಿ’ – Kannada News | Thalapathy Vijay’s Jan Nayagan: Bhagavanth Kesari Remake Details

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್​​ಗೆ ರೆಡಿ ಇರೋದು ಗೊತ್ತೇ ಇದೆ. ಈ ಸಿನಿಮಾ ಬಾಲಯ್ಯ ನಟನೆಯ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಆಗಿದೆ. ಮೂಲತಃ ತೆಲುಗಿನಲ್ಲಿ ನಿರ್ಮಿಸಲಾದ ‘ಭಗವಂತ ಕೇಸರಿ’ ಈ ಚಿತ್ರವು ಐಎಂಡಿಬಿಯಲ್ಲಿ ಕೇವಲ 5.8 ರೇಟಿಂಗ್ ಪಡೆದಿದೆ. ಈ ಚಿತ್ರವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಜಿಯೋ ಹಾಟ್​​ಸ್ಟಾರ್​ ಅಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್, ‘ಪುಷ್ಪ 2’ ಖ್ಯಾತಿಯ ಶ್ರೀಲೀಲಾ ಮತ್ತು ಅರ್ಜುನ್ ರಾಂಪಾಲ್ ಖಳನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ತೆಲುಗು ನಟ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿದ್ದಾರೆ. 2023ರಲ್ಲಿ ಬಿಡುಗಡೆ ಆದ ಚಿತ್ರದ ಬಜೆಟ್ ಸುಮಾರು 65 ಕೋಟಿ ರೂಪಾಯಿ. ಭಾರತದಲ್ಲಿ 84.78 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ 114.50 ಕೋಟಿ ರೂ. ಗಳಿಸಿದೆ.

ಅನಿಲ್ ರವಿಪುಡಿ ‘ಭಗವಂತ ಕೇಸರಿ’ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಆದಾಗ್ಯೂ, ಚಿತ್ರದ ವಿಷಯ ಮತ್ತು ಸಂದೇಶವನ್ನು ಪ್ರಶಂಸಿಸಲಾಯಿತು. ಗಮನಾರ್ಹವಾಗಿ, ಈ ಚಿತ್ರವು 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೆಲುಗು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

‘ಭಗವಂತ ಕೇಸರಿ’ ಸಿನಿಮಾ ಮತ್ತೆ ಜನಪ್ರಿಯತೆ ಗಳಿಸಲು ಪ್ರಮುಖ ಕಾರಣ ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಮುಂಬರುವ ಚಿತ್ರ ‘ಜನ ನಾಯಗನ್’. ಇದು ವಿಜಯ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಟಿಸಿದ ಕೊನೆಯ ಚಿತ್ರ ಎಂದು ನಂಬಲಾಗಿದೆ. ಈ ಚಿತ್ರವು ಜನವರಿ 9ರಂದು ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ರಿಲೀಸ್​​ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ

‘ಜನ ನಾಯಗನ್’ ಚಿತ್ರದ ಕಥೆ ‘ಭಗವಂತ ಕೇಸರಿ’ಯಿಂದ ಪ್ರೇರಿತವಾಗಿದೆ ಎಂಬ ವದಂತಿ ಬಹಳ ಹಿಂದಿನಿಂದಲೂ ಇತ್ತು. ಕೆಲವು ದಿನಗಳ ಹಿಂದೆ ‘ಜನ ನಾಯಗನ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಇದು ಸ್ಪಷ್ಟವಾಯಿತು. ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೊಲೀಸರ ಕಿರುಕುಳಕ್ಕೆ ಹೊಸಕೋಟೆಯಲ್ಲಿ ವ್ಯಕ್ತಿ ಬಲಿ?: ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ – Kannada News | Police Harassment Allegation: Man Found Dead in Devanahalli

ದೇವನಹಳ್ಳಿ/ಹುಬ್ಬಳ್ಳಿ, ಜನವರಿ 07: ಮಹಿಳೆ‌ ನಾಪತ್ತೆ ವಿಚಾರವಾಗಿ ಪೊಲೀಸರ ಕಿರುಕುಳ ಹಿನ್ನೆಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಕೇಳಿಬಂದಿದೆ. ಮೈಲಾಪುರ ಗ್ರಾಮದ ಮಂಜುನಾಥ್(44) ಮೃತ ದುರ್ದೈವಿಯಾಗಿದ್ದು, ತೋಟದ ಬಳಿ ನೇಣು‌ ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

ತೋಟದ ಕೆಲಸಕ್ಕೆ ಬರುತ್ತಿದ್ದ ಅಶ್ವಿನಿ ಎಂಬಾಕೆ 8 ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮಂಜುನಾಥ್​ನನ್ನ ಪೊಲೀಸರು ವಿಚಾರಣೆಗೆ ಕರೆದಿದ್ದರು. ಮಹಿಳೆ ಜೊತೆ ಸಂಬಂಧ ಆರೋಪ ಹಿನ್ನೆಲೆ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಮುಗಿಸಿ‌ ಮನೆಗೆ ಬಂದಿದ್ದ ಅವರು​​​ ಶವವಾಗಿ ಪತ್ತೆಯಾಗಿದ್ದು, ತಂದೆ ಸಾವಿಗೆ ಪೊಲೀಸರೇ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ. ಕಾನ್ಸ್​​ಟೇಬಲ್​ ಅಂಬರೀಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕೊಲೆ ಮಾಡಿರುವ ಶಂಕೆ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ.

ಇದನ್ನೂ ಓದಿ: ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ!

ಬಿಜೆಪಿ ಕಾರ್ಯಕರ್ತೆ ಮೇಲೆ ಖಾಕಿ ದರ್ಪ?

ಬಿಜೆಪಿ ಕಾರ್ಯಕರ್ತೆ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ ಹುಬ್ಬಳ್ಳಿ ನಗರದ ಕೇಶ್ವಾಪುರ ಠಾಣೆ ಪೊಲೀಸರ ವಿರುದ್ಧ ಕೇಳಿಬಂದಿದೆ. ಬಟ್ಟೆಬಿಚ್ಚಿದ್ರೂ ಬಿಡದೆ ಕೇಶ್ವಾಪುರ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ತನ್ನನ್ನು ಥಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತೆ ಸುಜಾತಾ ಅಲಿಯಾಸ್​​ ವಿಜಯಲಕ್ಷ್ಮೀ ಆರೋಪಿಸಿದ್ದಾರೆ. ಸುಜಾತಾ ಹಂಡಿ ವಿರುದ್ಧ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್​ ಸುವರ್ಣ ಕಲ್ಲಕುಂಟ್ಲಾ ದೂರು ನಡಿದ್ದರು. ಅದೇ ದೂರಿನ ವಿಚಾರವಾಗಿ ಪೊಲೀಸರು ದರ್ಪ ನಡೆಸಿದ್ದಾರೆ ಎಂದು ದೂರಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಅಧಿಕಾರಿಗಳ ಜೊತೆ ಸುಜಾತಾ ಹಂಡಿ ತೆರಳಿದ್ದು, ಈ ವೇಳೆ ಸುವರ್ಣ ಕಲ್ಲಕುಂಟ್ಲಾ ಮತ್ತು ಅವರ ಬೆಂಬಲಿಗರು ಗಲಾಟೆ ನಡೆಸಿದ್ದರು. ಘಟನೆ ಸಂಬಂಧ ಕೇಶ್ವಾಪುರ ಠಾಣೆಗೆ ದೂರು, ಪ್ರತಿದೂರು ದಾಖಲಾಗಿತ್ತು. ಕಾರ್ಪೊರೇಟರ್​ ದೂರು ಆಧರಿಸಿ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಕೂಗಾಡಿದ್ದರು. ಈ ವೇಳೆ ವಿವಸ್ತ್ರಗೊಳಿಸಿ ಕೇಶ್ವಾಪುರ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಸುಜಾತಾ ಹಂಡಿ‌ ಕೆಲ ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

10 ಹೆಣ್ಣುಮಕ್ಕಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ – Kannada News | Haryana Couple Welcomes Son After Ten Daughters, Family Responds to Debate

ಹರಿಯಾಣ, ಜನವರಿ 07: ಹರಿಯಾಣದಲ್ಲಿ ಮಹಿಳೆಯೊಬ್ಬಳು ಹತ್ತು ಹೆಣ್ಣುಮಕ್ಕಳ ಬಳಿಕ ಇದೀಗ ಗಂಡು ಮಗು(Baby)ವಿಗೆ ಜನ್ಮ ನೀಡಿದ್ದಾರೆ. ಈ ಘಟನೆಯು ತಾಯಿ ಹಾಗೂ ಶಿಶುವಿನ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗೆಯೇ ಗಂಡು ಮಗು ಬೇಕೇ ಬೇಕು ಎನ್ನುವ ಮನಸ್ಥಿತಿಯ ಬಗ್ಗೆಯೂ ಕಳವಳ ಮೂಡಿದೆ. ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆಯಲ್ಲಿ ಮಹಿಳೆ ತನ್ನ 11ನೇ ಮಗುವಿಗೆ ಜನ್ಮ ನೀಡಿದ್ದಾಳೆ.

ಡಾ. ನರವೀರ್ ಶಿಯೋರನ್ ಅವರ ಪ್ರಕಾರ, ಈ ಹೆರಿಗೆ ಅಪಾಯಕರವಾಗಿತ್ತು, ತಾಯಿಗೆ ಮೂರು ಯುನಿಟ್ ರಕ್ತ ಬೇಕಿತ್ತು, ಈಗ ತಾಯಿ, ಮಗು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಜನವರಿ 3 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು ಫತೇಹಾಬಾದ್ ಜಿಲ್ಲೆಯ ತನ್ನ ಹಳ್ಳಿಗೆ ಮರಳಿದ್ದಾರೆ. ದಿನಗೂಲಿ ಕಾರ್ಮಿಕರಾಗಿರುವ ತಂದೆ ಸಂಜಯ್ ಕುಮಾರ್ ಮಾತನಾಡಿ, ನಮಗೆ ಹಾಗೂ ನನ್ನ ಹೆಣ್ಣುಮಕ್ಕಳಿಗೆ ತಮ್ಮ ಬೇಕೆಂಬ ಆಸೆ ಇತ್ತು ಎಂದು ಹೇಳಿದ್ದಾರೆ.

2007ರಲ್ಲಿ ಅವರು ವಿವಾಹವಾಗಿದ್ದರು, ಹಿರಿಯ ಮಗಳು 12ನೇ ತರಗತಿ ಓದುತ್ತಿದ್ದಾಳೆ, ಉಳಿದ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದಾರೆ. ನಮ್ಮ ಆದಾಯ ಕಡಿಮೆ ಇದ್ದರೂ ಕೂಡ ಮಕ್ಕಳಿಗೆ ಶಿಕ್ಷಣ ಕೊಡುವುದು ನಮ್ಮ ಆದ್ಯತೆ. ಏನೇ ನಡೆದರೂ ಅದು ದೇವರಿಗೆ ಬಿಟ್ಟಿದ್ದು ಮತ್ತು ನಾನು ಅದರಲ್ಲಿ ಸಂತೋಷವಾಗಿದ್ದೇನೆ ಎಂದರು.

ಮತ್ತಷ್ಟು ಓದಿ: ಗಂಡು ಮಗು ಆಸೆ: ಕನಸು ಈಡೇರದಿದ್ದಾಗ ಹೆಂಡ್ತಿ ಮಕ್ಕಳನ್ನ ಬಿಟ್ಟು ಹೋಗ್ಬಿಟ್ಟ

ಇಂದಿನ ಹುಡುಗಿಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸನ್ನು ಸಾಧಿಸಲು ಸಮರ್ಥರಾಗಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ನಂಬಿಕೆ ಕೂಡ ನನ್ನದು ಎಂದರು. ಶಿಶುವಿಗೆ ದಿಲ್ಖುಷ್ ಎಂದು ನಾಮಕರಣ ಮಾಡಲಾಗಿದೆ.

19 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಮಗನ ಜನನವಾಗಿದೆ. ಹಿರಿಯ ಮಗಳು ಸರೀನಾ, ಸುಮಾರು 18 ವರ್ಷ ವಯಸ್ಸಿನವಳು.ಸರ್ಕಾರಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಾಳೆ, ನಂತರ ಅಮೃತಾ 11 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶೀಲಾ 7 ನೇ ತರಗತಿಯಲ್ಲಿ, ಕಿರಣ್ 6 ನೇ ತರಗತಿಯಲ್ಲಿ, ದಿವ್ಯಾ 5 ನೇ ತರಗತಿಯಲ್ಲಿ, ಮನ್ನತ್ 3 ನೇ ತರಗತಿಯಲ್ಲಿ, ಕೃತಿಕಾ 2 ನೇ ತರಗತಿಯಲ್ಲಿ ಮತ್ತು ಅಮ್ನಿಶ್ 1 ನೇ ತರಗತಿಯಲ್ಲಿ ಓದುತ್ತಿದ್ದರೆ, ಒಂಬತ್ತನೇ ಮತ್ತು ಹತ್ತನೇ ಹೆಣ್ಣುಮಕ್ಕಳು ಲಕ್ಷ್ಮಿ ಮತ್ತು ವೈಶಾಲಿ. ವೈಶಾಲಿ ನಂತರ, ಕುಟುಂಬವು ಅಂತಿಮವಾಗಿ ಒಬ್ಬ ಮಗನನ್ನು ಸ್ವಾಗತಿಸಿದೆ.

ಹರಿಯಾಣದಲ್ಲಿ 2025 ರಲ್ಲಿ ಇದು 1,000 ಪುರುಷರಿಗೆ 923 ಮಹಿಳೆಯರಿದ್ದು ಇದು ಸುಧಾರಿಸಿದೆ, ಆದರೂ ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version