Bengaluru Air Quality: ಬೆಂಗಳೂರಿನಲ್ಲಿ ವಾಯುಮಾಲಿನ್ಯ ಏರಿಕೆ, ಸುರಕ್ಷಿತವಾಗಿರಲು ಏನು ಮಾಡಬೇಕು? – Kannada News | Bangalore Air Pollution Crisis: Bengaluru’s air quality is getting worse, Here’s the things you should do

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಏರಿಕೆ, ಸುರಕ್ಷಿತವಾಗಿರಲು ಏನು ಮಾಡಬೇಕು?

ಬೆಂಗಳೂರು, ಜನವರಿ 07: ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಮಧ್ಯಮ ಮಟ್ಟದಲ್ಲಿದ್ದು, ನಗರದಲ್ಲಿನ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಣ್ಣು ಕೆರಕು, ಉಸಿರಾಟದ ತೊಂದರೆ ಮತ್ತು ಅಲರ್ಜಿಗಳು ಕಾಣಿಸಿಕೊಳ್ಳಬಹುದು.

ಸುರಕ್ಷತಾ ಕ್ರಮಗಳನ್ನು ಅನುಸರಿಸಿ

ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಬೆಳಿಗ್ಗೆ ಅಥವಾ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಕಲುಷಿತ ಗಾಳಿಗೆ ಕಾರಣವೇನು?

ಇಂದು ಬೆಂಗಳೂರಿನ AQI ಗುಣಮಟ್ಟ 172 ಇದ್ದು, PM2.5 85 ಮತ್ತು PM10 120 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 103 ಆಗಿದ್ದು, PM10 144ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –172
  • ಮಂಗಳೂರು-170
  • ಮೈಸೂರು – 156
  • ಬೆಳಗಾವಿ – 150
  • ಕಲಬುರ್ಗಿ – 112
  • ಶಿವಮೊಗ್ಗ – 189
  • ಬಳ್ಳಾರಿ – 209
  • ಹುಬ್ಬಳ್ಳಿ- 154
  • ಉಡುಪಿ –168
  • ವಿಜಯಪುರ –66

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಫಿನಾಲೆ ಸಮೀಪಿಸುತ್ತಿದ್ದಂತೆ ಶಾಂತಮೂರ್ತಿಯಾದ ಅಶ್ವಿನಿ; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಸಮೀಪಿಸುತ್ತಿದ್ದಂತೆ ಅಶ್ವಿನಿ ಗೌಡ ಶಾಂತಮೂರ್ತಿ ಆಗಿದ್ದಾರೆ. ಎದುರಾಳಿಗಳ ಆಟ ಹಾಳು ಮಾಡಲು ಅಶ್ವಿನಿಗೆ ಅವಕಾಶ ನೀಡಲಾಯಿತು. ಈ ವೇಳೆ ಅವರು ಶಾಂತ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ. ‘ಅದು ನನ್ನ ವ್ಯಕ್ತಿತ್ವ ಅಲ್ಲ’ ಎಂದಿದ್ದಾರೆ ಅಶ್ವಿನಿ. ‘ಮುಖವಾಡ ಬದಲಿಸುತ್ತಾರೆ’ ಎಂಬ ಅಭಿಪ್ರಾಯವನ್ನು ರಕ್ಷಿತಾ ಹೊರಹಾಕಿದ್ದಾರೆ. ಫಿನಾಲೆ ಸಮೀಪಿಸಿದ್ದರಿಂದ ಅವರು ಮಾಡಿಕೊಂಡಿರುವ ತಂತ್ರ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ vs ನ್ಯೂಝಿಲೆಂಡ್ ಸರಣಿಗೆ 4 ತಂಡಗಳು ಹೀಗಿವೆ – Kannada News | India vs New Zealand Squad For IND vs NZ Series

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ! – Kannada News | Brother set himself on fire while attempting to burn down his elder brother’s house in Hoskote

ದೇವನಹಳ್ಳಿ, ಜನವರಿ 07: ಮಧ್ಯರಾತ್ರಿ ವೇಳೆ ಸಹೋದರನ ಮನೆ ಸುಡಲು ಹೋಗಿ ಆ ಬೆಂಕಿಯಲ್ಲಿ ತಾನೇ ಸುಟ್ಟು ವ್ಯಕ್ತಿಯೋರ್ವ ಆಸ್ಪತ್ರೆ ಸೇರಿರುವ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಗಾಯಗೊಂಡಿರುವ ಮುನಿರಾಜು ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಅಣ್ಣನ ಕುಟುಂಬವನ್ನೇ ಮುಗಿಸಲು ಸಂಚು

ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದ. ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ ಕಾರಣ ಸ್ವಲ್ಪ ಜಮೀನು ಮಾರಿ ಕುಟುಂಬಸ್ಥರು ಹಣ ನೀಡಿದ್ದರು. ಆದ್ರೆ ಆ ಹಣ ಸಾಕಾಗದ ಕಾರಣ ಉಳಿದ ಜಮೀನು ಸಹ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಆರೋಪಿ ಮುನಿರಾಜು ಕೇಳಿದ್ದ. ಆದ್ರೆ ಇರೋ ಅಲ್ಪ ಸ್ವಲ್ಪ ಜಮೀನು ಮಾರಲ್ಲ ಎಂದು ಅಣ್ಣ ಸ್ಪಷ್ಟವಾಗಿ ಹೇಳಿದ್ದ. ಹೀಗಾಗಿ ಸಹೋದರ ರಾಮಕೃಷ್ಣ ಕುಟುಂಬವನ್ನೇ ಮುಗಿಸುವ ಸಂಚುಮಾಡಿದ್ದ ಮುನಿರಾಜು, ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ರೂಂನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಇದನ್ನೂ ಓದಿ: ಸಂಪ್​​ನಲ್ಲಿ ತಾಯಿ-ಮಕ್ಕಳ ಶವ ಪತ್ತೆ; ನಿಗೂಢ ಸಾವಿಗೆ ಕಾರಣ ಏನು?

ಆದ್ರೆ ಅಣ್ಣನ ಕುಟುಂಬವನ್ನೇ ನಿರ್ನಾಮ ಮಾಡಲು ಹೋದ ಮುನಿರಾಜುವಿಗೆ ದೇವರು ಅಲ್ಲೇ ಶಿಕ್ಷೆ ಕೊಟ್ಟಿದ್ದಾನೆ. ಬೆಂಕಿ ಹಚ್ಚುವ ವೇಳೆ ಈತನ ಕೈನಲ್ಲಿ ಪೆಟ್ರೋಲ್​​ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನೇ ಸುಟ್ಟಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾಪಾಡಿ ಕಾಪಾಡಿ ಅಂತ ಮುನಿರಾಜು ಕಿರುಚಾಡಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಾಯಾಳುವಿಗೆ ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈ ಬಗ್ಗೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು – Kannada News | Amruthadhare: Gautam Bhoomika Reunion and Daughter Twist Revealed! Kannada Serial Updates

‘ಅಮೃತಧಾರೆ’ ಧಾರಾವಾಹಿ ನಾನಾ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ಈಗ ಧಾರಾವಾಹಿಯಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ. ಖದೀಮರಿಗೆ ಮಾರಿ ಹಬ್ಬ ಉಂಟಾಗೋದು ಫಿಕ್ಸ್ ಎನ್ನಲಾಗುತ್ತಿದೆ. ಇನ್ನು, ಮಗಳನ್ನು ಹುಡುಕುವ ಟಾಸ್ಕ್ ಕೂಡ ಆರಂಭ ಆಗಲಿದೆ. ಇದರ ಮಧ್ಯೆ ಮಿಂಚು ಕೂಡ ಗೌತಮ್ ಮಗಳು ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.

ಗೌತಮ್ ಹಾಗೂ ಭೂಮಿಕಾ ಇಷ್ಟು ದಿನ ಬೇರೆ ಆಗಿದ್ದರು. ಈ ಕಥೆ ತುಂಬಾ ದಿನಗಳಿಂದ ಸಾಗುತ್ತಾ ಇತ್ತು. ಆದರೆ, ಈಗ ಅದು ಬದಲಾಗಿದೆ. ಇಬ್ಬರೂ ಹತ್ತಿರ ಆಗಿದ್ದಾರೆ. ಇವರಿಬ್ಬರು ಪತಿ-ಪತ್ನಿ ಅನ್ನೋದು ಮಕ್ಕಳಿಗೂ ಗೊತ್ತಾಗಿದೆ. ‘ನೀವಿಬ್ಬರೂ ತಂದೆ ತಾಯಿ ಅನ್ನೋದು ನಮಗೆ ಗೊತ್ತಿತ್ತು’ ಎಂಬ ಅರ್ಥದಲ್ಲಿ ಇಬ್ಬರೂ ಮಾತನಾಡಿದ್ದಾರೆ.

ಈಗ ಮಗಳನ್ನು ಹುಡುಕುವ ಪಯಣದಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಗೌತಮ್ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾನೆ. ಅದುವೇ ಅವರಿಬ್ಬರ ಮಗಳಾಗಿರುವ ಎಲ್ಲಾ ಸಾಧ್ಯತೆ ಇದೆ ಎಂಬುದು ಪ್ರೇಕ್ಷಕರ ಊಹೆ ಆಗಿತ್ತು. ಅದು ನಿಜವಾಗಿದೆ. ‘ಟ್ವಿನ್ ಆದರೆ, ಒಬ್ಬರಿಗೆ ಆಗಿದ್ದೆ ಇನ್ನೊಬ್ಬರಿಗೂ ಆಗುತ್ತದೆ ಎಂದು ಆಕಾಶ್ ಬಳಿ ಹೇಳಿದಳು ಮಿಂಚು. ಆ ಸಮಯಕ್ಕೆ ಇಬ್ಬರಿಗೂ ಒಟ್ಟಿಗೆ ಸೀನು ಬಂದಿದೆ. ಇವರು ಒಂದೇ ಮಕ್ಕಳ ತಾಯಿ ಅನ್ನೋದು ಇದರಿಂದ ಗೊತ್ತಾಗಿದೆ.

ಮಲ್ಲಿಗೆ ಮತ್ತೆ ಲವ್ ಮಾಡಿಸಿ, ಅವಳ ಹಾರ್ಟ್​​ನ ಬ್ರೇಕ್ ಮಾಡೋದು ಜಯದೇವ್ ಉದ್ದೇಶ. ಆತನ ಹಿಂದೆ ಒಬ್ಬನ ಬಿಟ್ಟಿದ್ದಾರೆ. ಆದರೆ, ಫೇಕ್ ಬಾಯ್​ಫ್ರೆಂಡ್​ಗೆ ಈಗ ನಿಜವಾಗಲೂ ಪ್ರೀತಿ ಆದಂತೆ ಇದೆ. ಹೀಗಾಗಿ, ಕಥೆಯಲ್ಲಿ ಇದು ದೊಡ್ಡ ಟ್ವಿಸ್ಟ್ ತರಬಹುದು.

ಇದನ್ನೂ ಓದಿ: ಶಾಕ್​ನಿಂದ ಭಾಗ್ಯಾಳಿಗೆ ಬಂತು ಮಾತು; ‘ಅಮೃತಧಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್

ಇನ್ನು ಗೌತಮ್ ಮಲತಾಯಿ ಶಕುಂತಲಾ ಜಯದೇವ್ ಮನೆಯಲ್ಲಿ ಉಳಿದುಕೊಳ್ಳುತ್ತಿಲ್ಲ. ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಈಗಾಗಳೇ ಆಕೆಗೆ ಗೌತಮ್ ತಾಯಿಯಿಂದ ಎಚ್ಚರಿಕೆ ಬಂದಿದೆ. ‘ಯಾವಾಗ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾಳೋ ಆಗ ನಿನ್ನ ಅವನತಿ ಶುರು’ ಎಂದು ಎಚ್ಚರಿಕೆ ನೀಡಿದ್ದಾಳೆ. ಈಗ ಇಬ್ಬರೂ ಒಂದಾಗಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ರಾಮಲೀಲಾ ಮೈದಾನದ ಮಸೀದಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ – Kannada News | Tensions Flare During Demolition Drive Near Delhi Mosque

ನವದೆಹಲಿ, ಜನವರಿ 07: ದೆಹಲಿಯ ರಾಮಲೀಲಾ ಮೈದಾನದ ಮಸೀದಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಹಿಂಸಾತ್ಮಕವಾಗಿ ಮಾರ್ಪಟ್ಟಿದ್ದು, ಐವರು ಪೊಲೀಸರು ಗಾಯಗೊಂಡಿದ್ದಾರೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಫೈಜ್-ಎ-ಇಲಾಹಿ ದರ್ಗಾದ ಹೊರಗೆ ಅಕ್ರಮವಾಗಿ ಕಟ್ಟಿರುವ ಬ್ಯಾಂಕ್ವೆಟ್ ಹಾಲ್ ಮತ್ತು ಖಾಸಗಿ ಆರೋಗ್ಯ ಕೇಂದ್ರವನ್ನು ನೆಲಸಮ ಮಾಡಲಾಯಿತು. ಬೆಳಗ್ಗೆ 8 ಗಂಟೆಗೆ ನೆಲಸಮ ಕಾರ್ಯ ಆರಂಭವಾಗಬೇಕಿತ್ತು, ಆದರೆ ಬೆಳಗಿನ ಜಾವ 1.30 ರ ಸುಮಾರಿಗೆ ಇದನ್ನು ಆರಂಭಿಸಲಾಯಿತು.

ನ್ಯಾಯಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಮತ್ತು ಕಟ್ಟುನಿಟ್ಟಾದ ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಜಂಟಿ ಪೊಲೀಸ್ ಆಯುಕ್ತ (ಕೇಂದ್ರ ವಲಯ) ಮಧುರ್ ವರ್ಮಾ ಹೇಳಿದರು. ಪ್ರದೇಶವನ್ನು ಒಂಬತ್ತು ವಲಯಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ಹಿರಿಯ ಅಧಿಕಾರಿಯೊಬ್ಬರು ಮೇಲ್ವಿಚಾರಣೆ ಮಾಡುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಒಂದೇ ಸ್ಟೇಡಿಯಂ ಮೇಲೆ RCB ಮತ್ತು RR ಕಣ್ಣು..!

Source link

ಕರ್ನಾಟಕ ಹವಾಮಾನ ವರದಿ: ಇಂದೂ ರಾಜ್ಯದೆಲ್ಲೆಡೆ ಒಣ ಹವೆ, ಮಂಜು ಕವಿದ ವಾತಾವರಣ – Kannada News | Bengaluru temperature: Dry weather all over the state, misty weather in Bengaluru

ಇಂದೂ ರಾಜ್ಯದೆಲ್ಲೆಡೆ ಒಣ ಹವೆ, ಮಂಜು ಕವಿದ ವಾತಾವರಣ

ಬೆಂಗಳೂರು, ಜನವರಿ 07: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಶುಷ್ಕ ವಾತಾವರಣವಿದ್ದು, ಇಂದೂ ಸಹ ಅದೇ ಹವಾಮಾನ (Weather Forecast) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಚಳಿಗಾಲದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವೆಡೆ ಮಂಜು ಹಾಗೂ ಒಣ ಹವೆಯ ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಇನ್ನೆರಡು ದಿನ ಇದೇ ಹವಾಮಾನವಿರಲಿದ್ದು, ನಂತರ ಲಘು ಮಳೆಯಾಗುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳಿಲ್ಲದೆ ಒಣ ಹವೆಯ ವಾತಾವರಣವಿರಲಿದೆ.

ಇದೇ ವೇಳೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಕಳೆದ ಹಲವು ದಿನಗಳಿಂದ ಕಾಣಿಸಿಕೊಂಡಿರುವ ಒಣ ಹವೆಯ ವಾತಾವರಣ ಇಂದು ಸಹ ಮುಂದುವರಿಯಲಿದೆ.

ರಾಜಧಾನಿಯಲ್ಲಿ ಚಳಿ

ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅರುಣ್-ಪುಷ್ಪಾ ಯಶ್​​ನ ಬೆಳೆಸಿದ್ದು ಹೇಗೆ? ವಿವರಿಸಿದ್ದ ರಾಕಿಂಗ್​ ಸ್ಟಾರ್

ಯಶ್ (Yash) ಅವರ ತಂದೆಯ ಹೆಸರು ಅರುಣ್ ಕುಮಾರ್. ಯಾಯಿ ಹೆಸರು ಪುಷ್ಪಾ. ಇವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇವರು ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾಗಳ ನಿರ್ಮಾಣ ಕಾರ್ಯಕ್ಕೆ ಇಳಿದಿದ್ದಾರೆ. ಅರುಣ್ ಕುಮಾರ್ ಹಾಗೂ ಪುಷ್ಪಾ ಅವರ ಬಗ್ಗೆ ಯಶ್ ಈ ಮೊದಲು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಜನವರಿ 8 ಯಶ್ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಯಶ್ ಅವರು ತುಂಬಾನೇ ಕಷ್ಟಪಟ್ಟಿದ್ದರು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅದು ನಟನೆಗೆ ಬಂದಮೇಲೆ ಮಾತ್ರ. ಏಕೆಂದರೆ ಸಣ್ಣವರಿದ್ದಾಗ ಅವರಿಗೆ ಕಷ್ಟ ನೋಡಲು ಕುಟುಂಬದವರು ಅವಕಾಶ ನೀಡಿರಲೇ ಇಲ್ಲ. ಈ ಬಗ್ಗೆ ಹಲವು ವರ್ಷಗಳ ಹಿಂದೆ ಟಿವಿ9 ಕನ್ನಡದ ‘ನನ್ನ ಕಥೆ’ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

‘ನನ್ನ ತಂದೆ ತಾಯಿಗೆ ಕಷ್ಟ ಇದ್ದರೂ, ನಮಗೆ ಏನೂ ತೊಂದರೆ ಮಾಡಿಲ್ಲ. ಕಾನ್ಫಿಡೆನ್ಸ್ ನೀಡಿ ಬೆಳೆಸಿದ್ದರು. ನಾನು ಮೈಸೂರಿನ ಪಡವಾರಹಳ್ಳಿ ಎಂಬ ಏರಿಯಾದಲ್ಲಿ ಹುಟ್ಟಿ ಬೆಳೆದಿದ್ದೆ. ಪಾಶ್ ಏರಿಯಾ, ಹಳ್ಳಿಯ ವಾತಾವರಣನೂ ಇತ್ತು. ಎಲ್ಲಾ ರೀತಿಯ ವಾತಾವರಣ ನೋಡಿ ಬೆಳೆದಿದ್ದೆ’ ಎಂದರು ಯಶ್.

‘ನನ್ನ ತಂದೆ ತಾಯಿ ಶಿಕ್ಷಣಕ್ಕೆ ಕೊರತೆ ಮಾಡಿಲ್ಲ. ಡ್ರೈವರ್ ಮಕ್ಕಳಿಗೆ ಕಷ್ಟ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಬುದ್ಧಿ ಬಂದಮೇಲೆ ಬೇರೆ ಡ್ರೈವರ್ ಮಕ್ಕಳು ನೋಡಿದಾಗ ಕಷ್ಟ ಗೊತ್ತಾಯಿತು. ಮಹಾಜನ ಸ್ಕೂಲ್​​ನಲ್ಲಿ ನಾನು ಓದಿದ್ದೆ. ರಾಜಕಾರಣಿ, ಅಧಿಕಾರ ಮಕ್ಕಳು ಅಲ್ಲಿದ್ದರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬರ್ತ್​​ಡೇಗೂ ಮೊದಲು ಸ್ಟೈಲಿಶ್ ಆಗಿ ಫೋಟೋಶೂಟ್​ ಮಾಡಿಸಿದ ಯಶ್; ಇಲ್ಲಿವೆ ಚಿತ್ರಗಳು

‘ಸಣ್ಣ ವಯಸ್ಸಿನಲ್ಲಿ ನಾಟಕ ಮಾಡುತ್ತಿದ್ದೆ. ಅದು ನನಗೆ ಸ್ಫೂರ್ತಿ ಕೊಡ್ತು. ನಟನೆಗೆ ಸೇರಬೇಕು ಎಂದಿತ್ತು. ಸಿನಿಮಾದಲ್ಲಿ ರಾಜಕೀಯ ಇರುತ್ತದೆ ಎಂಬುದು ಗೊತ್ತಿತ್ತು. ಬೆಂಗಳೂರು ಎಂಬುದೇ ಗೊತ್ತಿಲ್ಲ. ಅಕೌಂಟ್​ ನಂಗೆ ಇಷ್ಟ ಇರಲಿಲ್ಲ. ನಟನೆ ಬಗ್ಗೆ ಆಸಕ್ತಿ ಇತ್ತು’ ಎಂದಿದ್ದಾರೆ ಅವರು. ಧಾರಾವಾಹಿಗಳಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಸ್ಟಾರ್ ಹೀರೋ ಆಗಿದ್ದಾರೆ. ‘ಟಾಕ್ಸಿಕ್’ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಿಂಗೆ ಒಂದೂ ಟಾಸ್ಕ್ ಆಡೋಕೆ ಬರಲ್ಲ’; ಸೋತ ಗಿಲ್ಲಿಯನ್ನು ಹಂಗಿಸಿದ ರಾಶಿಕಾ ಶೆಟ್ಟಿ – Kannada News | Rashika Shetty Taunts Gilli Over Task Loss: Reality Show Drama Unfolds

ರಾಶಿಕಾ ಶೆಟ್ಟಿ (Rashika Shetty) ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದ್ದು ಕಡಿಮೆ. ಇಡೀ ಸೀಸನ್ ಅಲ್ಲಿ ಒಮ್ಮೆ ಅಥವಾ ಎರಡು ಬಾರಿ ಇಬ್ಬರೂ ಒಟ್ಟಿಗೆ ಇದ್ದರು. ಒಬ್ಬರನ್ನೊಬ್ಬರು ಬೆಂಬಲಿಸಿದ್ದೂ ಬೆರಳೆಣಿಕೆ ಬಾರಿ ಮಾತ್ರ. ಇಬ್ಬರ ಮಧ್ಯೆ ಆಗಾಗ ವೈಮನಸ್ಸು ಮೂಡುತ್ತಲೇ ಇರುತ್ತದೆ. ಈಗ ಗಿಲ್ಲಿ ನಟ ಅವರನ್ನು ರಾಶಿಕಾ ಹಂಗಿಸಿದ್ದಾರೆ. ಟಾಸ್ಕ್ ವಿಷಯವಾಗಿ ಗಿಲ್ಲಿಗೆ ಅವರು ಟಾಂಟ್ ಕೊಟ್ಟಿದ್ದಾರೆ.

ಗಿಲ್ಲಿ ನಟ ಹಾಗೂ ಧ್ರುವಂತ್ ಮಧ್ಯೆ ಟಾಸ್ಕ್ ನಡೆಯಿತು. ಈ ಟಾಸ್ಕ್ ಆಡುವ ವೇಳೆ ಗಿಲ್ಲಿ ನಿಧಾನಗತಿ ತೋರಿದರು. ಬಾಲ್ ಎಸೆಯುವ ಟಾಸ್ಕ್ ಇದಾಗಿತ್ತು. ಗಿಲ್ಲಿ ಎಲ್ಲಿಯೂ ವೇಗ ತೋರಿಲ್ಲ. ಇದು ಅವರು ಟಾಸ್ಕ್ ಸೋಲಲು ಪ್ರಮುಖ ಕಾರಣ ಆಯಿತು.ಈ ವಿಷಯವನ್ನು ಇಟ್ಟುಕೊಂಡು ರಾಶಿಕಾ ಅವರು ಗಿಲ್ಲಿಯನ್ನು ಹಂಗಿಸಿದ್ದಾರೆ. ಆದರೆ, ಇದಕ್ಕೆ ಗಿಲ್ಲಿ ಅವರು ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸಿಲ್ಲ.

ಟಾಸ್ಕ್ ಸೋತು ತುಂಬಾ ಸಮಯ ಆಗಿತ್ತು. ಈ ವೇಳೆ ರಕ್ಷಿತಾ ಹಾಗೂ ರಾಶಿಕಾ ಮಧ್ಯೆ ಜಗಳ ನಡೆಯುತ್ತಿತ್ತು. ಇಬ್ಬರೂ ಒಂದೇ ತಂಡದಲ್ಲಿ (ರಘು ಜೊತೆ) ಆಡುವ ಪ್ರಯತ್ನದಲ್ಲಿ ಇದ್ದರು. ಆದರೆ, ರಕ್ಷಿತಾ ತಂಡ ಸೇರೋದು ರಾಶಿಕಾಗೆ ಇಷ್ಟ ಇರಲಿಲ್ಲ. ಹೀಗಾಗಿ, ಅವರು ಈ ಬಗ್ಗೆ ಅಪಸ್ವರ ತೆಗೆದರು. ಈ ಜಗಳದಲ್ಲಿ ಗಿಲ್ಲಿ ಎಂಟ್ರಿ ಆಗಿದೆ.

ಇದನ್ನೂ ಓದಿ: ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

ರಕ್ಷಿತಾ ಪರವಾಗಿ ಗಿಲ್ಲಿ ನಟ ಅನೇಕ ಬಾರಿ ನಿಂತಿದ್ದು ಇದೆ. ರಾಶಿಕಾ ಹಾಗೂ ರಕ್ಷಿತಾ ಫೈಟ್ ಮಧ್ಯೆ ಗಿಲ್ಲಿ ಮಧ್ಯ ಪ್ರವೇಶಿಸಲು ಕೂಡ ಇದೇ ಕಾರಣ. ಗಿಲ್ಲಿ ಮಧ್ಯೆ ಬಂದಿದ್ದು ರಾಶಿಕಾಗೆ ಇಷ್ಟ ಆಗಿಲ್ಲ. ಹೀಗಾಗಿ, ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಗಿಲ್ಲಿಯ ಟಾಸ್ಕ್ ವಿಷಯವನ್ನು ರಾಶಿಕಾ ಪ್ರಸ್ತಾಪಿಸಿದರು. ‘ಟಾಸ್ಕ್ ಆಡೋಕೆ ಬರಲ್ಲ ನಿಂಗೆ’ ಎಂದು ನೇರವಾಗಿ ಹೇಳಿದರು. ಆ ಬಳಿಕ ಗಿಲ್ಲಿ, ‘ಈ ಬಾರಿ ಗೆದ್ದು ತೋರಿಸು’ ಎಂದು ಸವಾಲು ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version