ವೈಭವ್ ಸೂರ್ಯವಂಶಿಯ (Vaibhav Suryavanshi) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ರೆಕಾರ್ಡ್ ನಿರ್ಮಾಣವಾಗಿದ್ದು ಅಂಡರ್-19 ಪಂದ್ಯದಲ್ಲಿ. ಅದು ಸಹ ರಿಷಭ್ ಪಂತ್ ಅವರ ಭರ್ಜರಿ ದಾಖಲೆಯನ್ನು ಮುರಿದು ವೈಭವ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ವೈಭವ್ ಸೂರ್ಯವಂಶಿಯ (Vaibhav Suryavanshi) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ರೆಕಾರ್ಡ್ ನಿರ್ಮಾಣವಾಗಿದ್ದು ಅಂಡರ್-19 ಪಂದ್ಯದಲ್ಲಿ. ಅದು ಸಹ ರಿಷಭ್ ಪಂತ್ ಅವರ ಭರ್ಜರಿ ದಾಖಲೆಯನ್ನು ಮುರಿದು ವೈಭವ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 07, ಬುಧವಾರದ ದಿನಭವಿಷ್ಯವನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಚೌತಿ, ಮಖಾ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಬಾಲವಕರಣದಿಂದ ಕೂಡಿದೆ. ಬುಧವಾರದಂದು ವಿಷ್ಣು, ಕಾಲಭೈರವ ಮತ್ತು ವಿನಾಯಕರಿಗೆ ವಿಶೇಷ ದಿನವಾಗಿದೆ. ರವಿಯು ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರನು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರಾಹುಕಾಲ ಮಧ್ಯಾಹ್ನ 12:25 ರಿಂದ 1:50 ರವರೆಗೆ ಇರುತ್ತದೆ, ಆದರೆ ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಬೆಳಿಗ್ಗೆ 11:00 ರಿಂದ 12:24 ರವರೆಗೆ ಇರುತ್ತದೆ.
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿರಲಿದ್ದು, ಆರ್ಥಿಕವಾಗಿ ಉತ್ತಮ ದಿನವಾಗಿದೆ. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭ ಫಲ, ಸಾಹಿತ್ಯ ಮತ್ತು ಕಲೆಗೆ ಉತ್ತೇಜನವಿದೆ. ಮಿಥುನ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಆದಾಯದಲ್ಲಿ ಹೆಚ್ಚಳವಾಗಲಿದೆ. ಕರ್ಕಾಟಕ ರಾಶಿಯವರಿಗೆ ಮಾತಿನಲ್ಲಿ ಸೌಮ್ಯತೆ ಮತ್ತು ವ್ಯಾಪಾರದಲ್ಲಿ ಶುಭ. ಸಿಂಹ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭ ಮತ್ತು ಉದ್ಯೋಗದಲ್ಲಿ ಪ್ರಗತಿ ಆಗಲಿದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಬೆಂಗಳೂರು, ಜನವರಿ 07: 2026ರಲ್ಲಿ ನಾಲ್ಕು ನಿರ್ದಿಷ್ಟ ರಾಶಿಗಳ ಮಹಿಳೆಯರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಜೂನ್ 2ರಂದು ಗುರು ಬದಲಾವಣೆಯಾಗಲಿದ್ದು, ಶನಿ ಗ್ರಹವು ವರ್ಷಪೂರ್ತಿ ಮೀನ ರಾಶಿಯಲ್ಲಿ ಇರಲಿದೆ. ರಾಹು-ಕೇತು ಡಿಸೆಂಬರ್ 5ರಂದು ಬದಲಾದರೂ, ಬುಧ, ಮಂಗಳ, ಶುಕ್ರ, ಗುರು ಗ್ರಹಗಳ ಪ್ರಭಾವದಿಂದ ಈ ರಾಶಿಗಳ ಮಹಿಳೆಯರಿಗೆ ಉತ್ತಮ ಫಲಗಳು ಲಭಿಸಲಿವೆ.
ಈ ಅದೃಷ್ಟವಂತ ರಾಶಿಗಳಲ್ಲಿ ಕರ್ಕಾಟಕ, ಸಿಂಹ, ಕುಂಭ ಮತ್ತು ಮೀನ ರಾಶಿಗಳು ಸೇರಿವೆ. ಕರ್ಕಾಟಕ ರಾಶಿಯವರಿಗೆ ಕೀರ್ತಿ ಪ್ರತಿಷ್ಠೆ, ಆರೋಗ್ಯ ವೃದ್ಧಿ, ಉದ್ಯೋಗ-ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಸಿಂಹ ರಾಶಿಯವರಿಗೆ ರಾಜಕೀಯ ಪ್ರಗತಿ, ಬಡ್ತಿ, ಬಹುಕಾಲದ ನೋವುಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಕುಂಭ ರಾಶಿಯವರಿಗೆ ಗುರಿ ಸಾಧನೆ, ಆಸ್ತಿ ಕಲಹ ಇತ್ಯರ್ಥ, ಕೌಟುಂಬಿಕ ಸಾಮರಸ್ಯ ಹೆಚ್ಚಲಿದೆ. ಮೀನ ರಾಶಿಯವರಿಗೆ ನಿಧಾನವಾದರೂ ಸ್ಥಿರವಾದ ಪ್ರಗತಿ ಮತ್ತು ಉತ್ತಮ ಫಲಗಳು ದೊರೆಯಲಿವೆ. ಈ ವರ್ಷ ಈ ರಾಶಿಯ ಮಹಿಳೆಯರು ತಾಳ್ಮೆ ಮತ್ತು ಯೋಜನೆಗಳೊಂದಿಗೆ ಸಾಗಿದರೆ ಅದೃಷ್ಟವು ನಿಮ್ಮ ಕೈ ಹಿಡಿಯಲಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ತುಮಕೂರು, ಜನವರಿ 07: ಸಂಪ್ನಲ್ಲಿ ತಾಯಿ ಮತ್ತು ಮಕ್ಕಳ ಶವ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಸಿಂಗನಹಳ್ಳಿಯಲ್ಲಿ ನಡೆದಿದೆ. ವಿಜಯಲಕ್ಷ್ಮೀ ಹಾಗೂ ಅವರ ಇಬ್ಬರು ಮಕ್ಕಳಾದ ಚೇತನ ಮತ್ತು ಚೈತನ್ಯ ಮೃತ ದುರ್ದೈವಿಗಳಾಗಿದ್ದು, ಮನೆಯಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದೆ. ಹೀಗಾಗಿ ಮಾನಸಿಕ ಖಿನ್ನತೆಯಿಂದ ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮೀ ಪತಿ ಸಂಪತ್ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಅವರು ಮನೆಗೆ ಬಂದಾಗ ಪತ್ನಿ ಹಾಗೂ ಮಕ್ಕಳು ಕಾಣಿಸುತ್ತಿರಲಿಲ್ಲ. ಹೀಗಾಗಿ ಮನೆ ತುಂಬಾ ಹುಡುಕಾಡಿದ್ದಾರೆ. ಎಲ್ಲಿಯೂ ಸಿಗದಿದ್ದಾಗ ತನ್ನ ತಂದೆ ಹಾಗೂ ತಾಯಿಗೆ ಈ ವಿಚಾರ ತಿಳಿಸಿ ಮನೆಯ ಮುಂದೆ ನಿಂತಿದ್ದಾರೆ. ಈ ವೇಳೆ ಸಂಪ್ ತೆರೆದಿರೋದು ಅವರ ಕಣ್ಣಿಗೆ ಬಿದ್ದಿದೆ. ಇಣುಕಿ ನೋಡಿದಾಗ ಒಂದರನಂತರ ಒಂದರಂತೆ ಮೂರು ಶವಗಳು ಕಾಣಿಸಿವೆ. ಕೂಡಲೇ ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸರಿಗೆ ಸಂಪತ್ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ; ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣ
ಮೂಲತಃ ಶಿವಗಂಗೆಯವರಾದ ಸಂಪತ್ ಕುಟುಂಬ ಕಳೆದ 30 ವರ್ಷಗಳಿಂದ ಸಿಂಗನಹಳ್ಳಿಯಲ್ಲಿ ವಾಸವಿದ್ದು, ಇತ್ತೀಚಿನ ಕೆಲ ವರ್ಷಗಳಿಂದ ಈ ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಸಂಪತ್ ಜೊತೆ ಪತ್ನಿ ವಿಜಯಲಕ್ಷ್ಮೀ, ಇಬ್ಬರು ಮಕ್ಕಳು ಹಾಗೂ ಆತನ ತಂದೆ ಹನುಮಂತರಾಜು ಮತ್ತು ತಾಯಿ ರೇಣುಕಮ್ಮ ಸಹ ವಾಸವಿದ್ದರು. ಸಂಪತ್ ಹಾಗೂ ಆತನ ತಾಯಿ ರೇಣುಕಮ್ಮ ಕೆಲಸಕ್ಕೆ ಹೋದ್ರೆ, ಇತ್ತ ವಿಜಯಲಕ್ಷ್ಮೀ ಮನೆಯಲ್ಲಿದ್ದ ಮಾವನ ಉಪಚಾರ ಮಾಡಿಕೊಂಡು ಮಕ್ಕಳ ಜೊತೆ ಇರುತಿದ್ದರು. ಆದೇ ರೀತಿ ನಿನ್ನೆ ಸಹ ಸಂಪತ್ ಹಾಗೂ ಅವರ ತಾಯಿ ಕೆಲಸಕ್ಕೆ ತೆರಳಿದ್ದಾರೆ. ಈ ನಡುವೆ ಮಾವ ಕೂಡ ಕೆಲಸವಿದೆ ಎಂದು ನೆಲಮಂಗಲಕ್ಕೆ ತೆರಳಿದ್ದಾರೆ. ಆ ಬಳಿಕ ಮನೆಯಲ್ಲಿ ಇಬ್ಬರು ಮಕ್ಕಳ ಜೊತೆ ಇದ್ದ ವಿಜಯಲಕ್ಷ್ಮೀ ನಿಗೂಢವಾಗಿ ಸಾವನಪ್ಪಿದ್ದು, ಶವ ಸಂಪ್ನಲ್ಲಿ ಪತ್ತೆಯಾಗಿದೆ.
ಇನ್ನು ಮನೆಯಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹಾಗೂ ನಮ್ಮ ಸಾವಿಗೆ ಯಾರು ಕಾರಣವಲ್ಲ ಎಂದು ಅದರಲ್ಲಿ ವಿಜಯಲಕ್ಷ್ಮೀ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಯಿಂದ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದರೂ ಮಕ್ಕಳಿಬ್ಬರ ಸಾವು ಪೊಲೀಸರಿಗೆ ಗೊಂದಲ ಸೃಷ್ಟಿಸಿದೆ. ಹೀಗಾಗಿ ಮೃತಳ ಸಹೋದರನ ದೂರಿನ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ನಟ ಯಶ್ ಅವರಿಗೆ ಜನವರಿ 8 ಜನ್ಮದಿನ. ಹುಟ್ಟುಹಬ್ಬಕ್ಕೂ ಮೊದಲು ಅವರು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಅವರು ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿದ್ದಾರೆ. ಅವರ ಈ ಫೋಟೋಗಳಿಗೆ ಮಹಿಳಾ ಅಭಿಮಾನಿಗಳು ಮನಸೋತಿದ್ದಾರೆ.
ಯಶ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳನ್ನು ಹೆಚ್ಚಿಸಲು ಸೆಲೆಬ್ರಿಟಿಗಳು ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಯಶ್ ಕೂಡ ಇದಕ್ಕೆ ಹೊರತಾಗಿಲ್ಲ.
ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಇದಕ್ಕಾಗಿ ಯಶ್ ಬರ್ತ್ಡೇನ ಫ್ಯಾನ್ಸ್ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಮೆಟ್ರೋದಲ್ಲಿ ಯಶ್ ಅವರ ಫೋಟೋ ಹಾಗೂ ಟಾಕ್ಸಿಕ್ ಸಿನಿಮಾ ಪೋಸ್ಟರ್ ರಾರಾಜಿಸುತ್ತಿದೆ. ಅಭಿಮಾನಿಗಳು ಮೆಟ್ರೋಗೆ ಜಾಹೀರಾತು ನೀಡಿದ್ದಾರೆ.
ಯಶ್ ಅವರು ಸಮಯ ಸಿಕ್ಕಾಗ ಕುಟುಂಬದ ಜೊತೆ ಕಳೆಯಲು ಇಷ್ಟಪಡುತ್ತಾರೆ. ಆದರೆ, ‘ಟಾಕ್ಸಿಕ್’ ಕೆಲಸಗಳು ಹೆಚ್ಚಿರುವುದರಿಂದ ಅವರಿಗೆ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ರೀತಿಯಲ್ಲಿ ಸಿನಿಮಾ ತರುವ ಪ್ಲ್ಯಾನ್ ಅಲ್ಲಿ ತಂಡ ಇದೆ.
‘ಕೆಜಿಎಫ್ 2’ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ‘ಟಾಕ್ಸಿಕ್’. ಎರಡೂ ಸಿನಿಮಾ ಮಧ್ಯೆ 4 ವರ್ಷಗಳ ಅಂತರ ಇದೆ. ಈ ಚಿತ್ರವನ್ನು ‘ಕೆವಿಎನ್’ ನಿರ್ಮಾಣ ಮಾಡಿದೆ. ಯಶ್ ಅವರು ಕೂಡ ಈ ಚಿತ್ರಕ್ಕೆ ನಿರ್ಮಾಪಕರು. ಕನ್ನಡದ ಜೊತೆ ಇಂಗ್ಲಿಷ್ನಲ್ಲೂ ಸಿನಿಮಾ ಶೂಟ್ ಆಗಿದೆ.
ಪರ್ಯಾಯ ಮಾರ್ಗ ಆಲೋಚಿಸುವುದು ಬಹಳ ಮುಖ್ಯ ಎಂದೆನಿಸುತ್ತದೆ. ನಿಮಗಿರುವ ಹೆಸರು, ಗೊತ್ತಿರುವ ಕೆಲಸದಲ್ಲಿ ಇರುವಂಥ ಕಾಂಟ್ಯಾಕ್ಟ್, ಪ್ರಭಾವಿಗಳ ಸಂಪರ್ಕ ಈ ಎಲ್ಲವನ್ನೂ ಬಳಸಿಕೊಂಡು, ದೊಡ್ಡ ಮಟ್ಟದಲ್ಲಿ ಆದಾಯ ತರುವಂಥ ಕೆಲಸ- ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗಲಿದ್ದೀರಿ. ಗ್ರಂಥಿಗೆ ಮಳಿಗೆ ನಡೆಸುತ್ತಾ ಇರುವವರಿಗೆ ಹೊಸ ಹೊಸ ವಸ್ತುಗಳ ಮಾರಾಟದ ಅವಕಾಶ ತೆರೆದುಕೊಳ್ಳಲಿದೆ. ನಿಮ್ಮಲ್ಲಿ ಕೆಲವರಿಗೆ ಹೂಡಿಕೆಯಲ್ಲಿ ಅದೃಷ್ಟದ ಬೆಂಬಲ ದೊರೆಯಲಿದೆ.
ಕೆಲವು ವ್ಯಕ್ತಿಗಳನ್ನು ನೀವಾಗಿಯೇ ದೂರ ಇಡುವ ನಿರ್ಧಾರ ಮಾಡಲಿದ್ದೀರಿ. ನಂಬಿಕೆ, ಪ್ರೀತಿ- ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಆಕ್ಷೇಪದ ಕಾರಣ ಆಗಿರಬಹುದು. ಯಾವುದು ಚಿಕ್ಕ- ಪುಟ್ಟ ಸಂಗತಿಗಳು ಎಂದು ಇಷ್ಟು ಸಮಯ ಭಾವಿಸಿರುತ್ತೀರೋ ಅಂಥವುಗಳಿಗೆ ಸಿಕ್ಕಾಪಟ್ಟೆ ಪ್ರಾಮುಖ್ಯ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾಗಲಿಲ್ಲ ಎಂದು ನಿಮಗೇ ಅನಿಸುತ್ತದೆ. ಜೀರ್ಣಕ್ಕೆ ಸುಲಭವಾಗಿ ಬರುವಂಥ ಆಹಾರ ಪದಾರ್ಥಗಳ ಸೇವನೆಗೆ ನಿಮ್ಮ ಆದ್ಯತೆ ಇರಲಿ.
ಎಲ್ಲ ಸಮಯವೂ ಒಂದೇ ರೀತಿಯ ಪ್ರತಿಸ್ಪಂದನೆ ಸರಿಹೋಗುವುದಿಲ್ಲ ಎಂದು ಬಲವಾಗಿ ಅನಿಸಲಿದೆ. ಆರೋಗ್ಯ ವಿಚಾರಕ್ಕೆ ಆದ್ಯತೆ ನೀಡುತ್ತೀರಿ. ಸ್ವ ಉದ್ಯೋಗಿಗಳಿಗೆ ಆದಾಯದಲ್ಲಿ ಗಣನೀಯ ಇಳಿಕೆ ಅನುಭವ ಆಗಲಿದೆ. ಅಥವಾ ಅಂದುಕೊಂಡ ಸಮಯಕ್ಕೆ ಹಣ ಕೈ ಸೇರದ ಕಾರಣದಿಂದ ಬೇಸರ ಆಗಲಿದೆ. ಇತರರ ಆರ್ಥಿಕ ವಿಚಾರಗಳ ಬಗ್ಗೆ ವಿಪರೀತ ಆಸಕ್ತಿ ತೋರಿಸುವುದಕ್ಕೆ ಹೋಗಬೇಡಿ. ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಅಥವಾ ಗೋಲ್ಡ್ ಲೋನ್ ತೆಗೆದುಕೊಂಡವರು ಅದರ ಮರುಪಾವತಿಗೆ ಆಲೋಚಿಸಿ.
ಲೇಖನ- ಎನ್.ಕೆ.ಸ್ವಾತಿ
ವಸ್ತುನಿಷ್ಠವಾಗಿ ನಡೆದುಕೊಳ್ಳುವುದು ಮುಖ್ಯ. ವ್ಯಕ್ತಿಗತವಾಗಿ ಯಾವುದೇ ಅಭಿಪ್ರಾಯ ಇದ್ದರೆ ಗುಣಕ್ಕೆ ಸಂಬಂಧಿಸಿದಂತೆ ಮತ್ಸರ ಸಾಧಿಸುವುದಕ್ಕೆ ಹೋಗಬೇಡಿ. ಉನ್ನತ ಶಿಕ್ಷಣ ಪಡೆಯುತ್ತಾ ಇರುವವರಿಗೆ ವಿದ್ಯಾರ್ಥಿ ವೇತನ ದೊರೆಯುವ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಾ ಇರುವವರು ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಲಿದ್ದೀರಿ. ನಿಮ್ಮಲ್ಲಿ ಕೆಲವರು ಆತ್ಮಗೌರವಕ್ಕೆ ಪೆಟ್ಟಾಗುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.
ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸಂತೋಷವಾದ ದಿನ ಇದಾಗಿರುತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ಮುಖ್ಯ ವಿಚಾರಗಳನ್ನು ಸಂಗಾತಿ ಜೊತೆಗೆ ಹಂಚಿಕೊಳ್ಳಲಿದ್ದೀರಿ. ಕಾರು- ಸ್ಕೂಟರ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಾ ಇರುವವರು ಆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೀರಿ. ಬಡ್ತಿ- ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಮಿಶ್ರ ಫಲಿತಾಂಶ ಅನುಭವಕ್ಕೆ ಬರಲಿದೆ. ಸಿನಿಮಾ ಕಲಾವಿದರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶಗಳು ದೊರೆಯಲಿವೆ. ದೀರ್ಘ ಕಾಲದ ಆದಾಯದ ದಾರಿ ಆಗಲಿದೆ.
ಅಧ್ಯಾತ್ಮದ ಕಡೆಗೆ ಈ ದಿನ ನಿಮಗೆ ಸೆಳೆತ ಇರಲಿದೆ. ನಿಮ್ಮಲ್ಲಿ ಕೆಲವರು ಧ್ಯಾನ- ಯೋಗ ಶಿಬಿರ ಇಂಥವುಗಳಲ್ಲಿ ಭಾಗೀ ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮಗೆ ಕಿರಿಕಿರಿ ಮಾಡುತ್ತಾ ಇದ್ದ ವ್ಯಕ್ತಿ ಅಥವಾ ಗುಂಪು ಸಮಸ್ಯೆಗೆ ಸಿಲುಕಿಕೊಳ್ಳಲಿದ್ದು, ಇದರಿಂದ ಸಮಾಧಾನ ಮೂಡಲಿದೆ. ಸುಗಂಧ ದ್ರವ್ಯಗಳು, ಬೆಲೆಬಾಳುವ ರತ್ನಗಳ ವ್ಯಾಪಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದ್ದು, ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ. ಕಫ, ನೆಗಡಿ, ಕೆಮ್ಮು- ಜ್ವರದಂಥ ಸಮಸ್ಯೆಯಿಂದ ದೈಹಿಕವಾಗಿ ಸುಸ್ತು ಹಾಗೂ ನಿರಾಸಕ್ತಿ ಕಾಡಲಿದೆ.
ಲೇಖನ- ಎನ್.ಕೆ.ಸ್ವಾತಿ
ನೀವು ಇರುವಂಥ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ಇರಲಿದೆ. ಆಲೋಚನೆಗಳಲ್ಲೂ ಸ್ಪಷ್ಟ ಚಿಂತನೆ, ಸರಿಯಾದ ಮಾರ್ಗದಲ್ಲಿ ನಡೆಯುವುದು ಇತ್ಯಾದಿ ಶುಭ ವಿಚಾರಗಳು ಅನುಭವಕ್ಕೆ ಬರಲಿದೆ. ಲಾಭ ಬರುತ್ತದೆ ಎಂಬ ಕಾರಣಕ್ಕೆ ಈಗಾಗಲೇ ತೆಗೆದುಕೊಂಡಂಥ ನಿರ್ಧಾರವನ್ನು ಬದಲಾಯಿಸುವುದಕ್ಕೆ ಹೋಗಬೇಡಿ. ಸ್ನೇಹಿತರ ಬಳಿ ನೀವೇನಾದರು ಸಹಾಯ ಕೇಳಿದ್ದಲ್ಲಿ ಅದು ದೊರೆಯುವ ಎಲ್ಲ ಸಾಧ್ಯತೆ ಇದೆ. ದೀರ್ಘ ಕಾಲದ ಹೂಡಿಕೆಗೆ ಸಂಬಂಧಿಸಿದಂತೆ ಮಹತ್ತರ ಎನಿಸಿದ ಯೋಜನೆ ರೂಪಿಸಲಿದ್ದೀರಿ.
ಯಾವುದಕ್ಕೂ ಇರಲಿ ಅಂತ ಮುಂಜಾಗ್ರತೆಯಿಂದ ನೀವು ಸಂಗ್ರಹಿಸಿಟ್ಟು ಕೊಂಡಿದ್ದ ದಾಖಲೆಗಳು ಈ ದಿನ ನಿಮ್ಮ ಸಹಾಯಕ್ಕೆ ಬರಲಿವೆ. ಆರ್ಥಿಕವಾಗಿ ಕೂಡ ಸಕಾರಾತ್ಮಕ ಬೆಳವಣಿಗೆ ಆಗುವ ಸುಳಿವು ಸಿಗಲಿದೆ. ಊಟ- ತಿಂಡಿ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತಿನಿಂದ ನಡೆದುಕೊಳ್ಳಿ. ಒಂದು ವೇಳೆ ಈಗಾಗಲೇ ವೈದ್ಯರು ಆಹಾರ ಪಥ್ಯವನ್ನು ಸೂಚಿಸಿದ್ದಲ್ಲಿ ಕಡ್ಡಾಯವಾಗಿ ಪಾಲಿಸಿ. ಆಯುರ್ವೇದ ಅಥವಾ ಜ್ಯೋತಿಷ್ಯ ರೀತಿಯಾಗಿ ಅನುಕೂಲ ತರುವಂಥ ಕೆಲವು ವಸ್ತುಗಳನ್ನು ಮನೆಗೆ ತರುವ ಯೋಗ ಈ ದಿನ ಇದೆ.
ಮರೆವು ಈ ದಿನ ನಿಮಗೆ ಸಮಸ್ಯೆ ತರಬಹುದು. ಮುಖ್ಯವಾದ ಕೆಲಸಗಳನ್ನು ಒಪ್ಪಿಕೊಂಡಿದ್ದಲ್ಲಿ ಅದನ್ನು ನೆನಪಿಸುವ ರೀತಿಯಲ್ಲಿ ಮೊಬೈಲ್ ಫೋನ್ ನಲ್ಲಿ ರಿಮೈಂಡರ್ ಹಾಕಿಟ್ಟುಕೊಂಡು, ಅಥವಾ ಒಂದು ಪುಸ್ತಕದಲ್ಲಿ ಬರೆದಿಡುವುದೋ ಮಾಡಿ. ಸಣ್ಣ ಮಟ್ಟದಲ್ಲಿ ಶುರು ಮಾಡಿದ್ದ ವ್ಯಾಪಾರವೋ ವ್ಯವಹಾರವೋ ದೊಡ್ಡದಾಗಿ ಬೆಳೆಯುವ ಸೂಚನೆಯನ್ನು ನೀಡಲಿದೆ. ಭವಿಷ್ಯದಲ್ಲಿ ನಿಮಗೆ ಸಹಾಯ ಆಗಲಿರುವ ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯದಿಂದ ಆತ್ಮವಿಶ್ವಾಸ ಜಾಸ್ತಿ ಆಗಲಿದೆ.
ಇಂದಿನ ಮುಖ್ಯ ಕಾರ್ಯವನ್ನು ಮುಂದೂಡುವುದು ಬೇಡ. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿ. ಇಂದು ನಿಮ್ಮದೇ ಸ್ವಂತ ಕಾರ್ಯಗಳು ಇರಲಿದ್ದು, ಬೇರೆ ಕೆಲಸಕ್ಕೆ ಮನಸ್ಸು ಕೊಡುವುದು ಕಷ್ಟವಾದೀತು. ಒತ್ತಾಯದಿಂದ ಕೆಲಸವನ್ನು ಮಾಡಬೇಕಾದೀತು. ಹಂಚಿಕೆಯ ಬಗ್ಗೆಯೂ ಸರಿಯಾದ ಆಲೋಚನೆ ಮಾಡುವಿರಿ.
ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ನೌಕರರಿಲ್ಲದೇ ಉದ್ಯಮಕ್ಕೆ ಅಡ್ಡಿಯಾದೀತು. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ನಿಶ್ಚಿಂತೆಯಿಂದ ಇರಬೇಕೆಂದುಕೊಂಡರೂ ಕೆಲಸಗಳು ಬರುವುದು. ಮಾತಿನ ತಂತ್ರವು ಫಲಿಸುವುದು. ನಿಮ್ಮ ಕಾರ್ಯಗಳಲ್ಲಿ ಸಾವಧಾನತೆ ಇರಲಿದೆ.
ಬಿಂಬದಂತೆ ಪ್ರತಿಬಿಂಬ ಕಾಣಿಸುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ. ಬೆಂಬಲಕ್ಕೆ ನಿಂತವರನ್ನು ಮರೆಯುವುದು ಬೇಡ. ಕೈಲಾದ ಸಹಕಾರವನ್ನು ಮಾಡಿ. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಅಹಂಕಾರದಂತೆ ತೋರುವುದು. ಅಧಿಕಾರದ ಮಾತುಗಳನ್ನು ಕಡಿಮೆ ಮಾಡಿ.
ಸತತ ಸೋಲಿನಿಂದ ಉತ್ಸಾಹವೂ ಕುಗ್ಗಬಹುದು. ಗೆಳೆಯರ ಸಹಕಾರವು ನಿಮಗೆ ಬೇಕೆನಿಸುವುದು. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಟ್ಟು ಪ್ರಗತಿ ಕಾಣಬಹುದು. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ನಿಮಗೆ ಇದು ನಂಬಲಾಗದ ವಿಚಾರವೂ, ಸಹಿಸಲು ಅಸಾಧ್ಯವೂ ಆಗಬಹುದು. ಎಲ್ಲವುದನ್ನೂ ತಾನೇ ಮಾಡುವುದು ಎಂಬ ಮನೋಭಾವವಿರುವುದು.
ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು. ಸದ್ಯವಷ್ಟೇ ಸಾಲದಿಂದ ಮುಕ್ತರಾಗಿದ್ದರೂ ಅನಾರೋಗ್ಯದ ಕಾರಣಕ್ಕೆ ಪುನಃ ಸಾಲ ಮಾಡಬೇಕಾಗಿ ಬರಬಹುದು. ನಿಮಗೆ ಯಾರದ್ದಾದರೂ ಮಾತು ಅಧಿಕಾರದಂತೆ ತೋರೀತು.
ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಸಂಗಾತಿಯ ಪ್ರೀತಿಯನ್ನು ಹೋಲಿಸಿಕೊಳ್ಳುವುದು ಬೇಡ. ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು. ಇಂದು ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸುವುದು. ಮಕ್ಕಳಿಂದ ನೀವು ಅನಾದರಕ್ಕೆ ಒಳಗಾಗಬಹುದು. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.
ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವಿರಿ. ವಾಹನ ಓಡಾಡವು ಸುಖಕರವಲ್ಲ. ತಾಯಿಗೆ ಕೊಡುವ ಗೌರವವು ಕಡಿಮೆ ಆದೀತು. ಮೇಲಧಿಕಾರಿಗಳ ಮಾತಿನಿಂದ ಮನಸ್ಸು ತಲ್ಲಣಿಸಬಹುದು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೇ ಹೋದೀತು. ಇಂದು ವಾಸದ ಮನೆಯನ್ನು ಬದಲಿಸುವಿರಿ. ಆಹಾರವನ್ನು ಮಿತಿವಾಗಿಯೂ ಹಾಗೂ ಬದಲಾವಣೆಯನ್ನೂ ಮಾಡಿಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ನಿಮ್ಮ ಬಗ್ಗೆ ಸಹೋದ್ಯೋಗಿಗಳು ಆಡಿಕೊಳ್ಳುವರು. ಅನ್ಯರ ಹಂಗಿನಲ್ಲಿ ಇರುವಂತೆ ಭಾಸವಾಗಬಹುದು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದೀತು. ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ. ಹೊಗಳಿಕೆಯಿಂದ ನಿಮಗೆ ಬೇಕಾದುದನ್ನು ಪಡೆದುಕೊಳ್ಳುವಿರಿ. ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ ಬೇಡ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು. ನಿಮ್ಮ ಹಿಂದಿನ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ಹಣವು ಸಿಗದೇ ನಿಮಗೆ ನಿರಾಸೆಯಾಗುವುದು. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗುವಿರಿ. ವೃತ್ತಿಯನ್ನು ಸಂತೋಷದಿಂದ ಮಾಡುವುದನ್ನು ಕಲಿಯಬೇಕಾಗಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು.
ನಿಮ್ಮ ಸಂಬಂಧಗಳ ಬಗ್ಗೆ ಇಂದು ಹೆಚ್ಚು ಆಲೋಚಿಸುವಿರಿ. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸಿನಲ್ಲಿ ತಳಮಳವಾಗುವುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಆಗಬೇಕಾದ ಕಾರ್ಯಗಳ ಪರಿಶೀಲನೆ ಮಾಡುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಯೋಗ್ಯ ಚಿಕಿತ್ಸೆಯ ಅವಶ್ಯಕತೆ ಇರುಬುದು. ಎಲ್ಲ ಜವಾಬ್ದಾರಿಯನ್ನೂ ಮಕ್ಕಳಿಗೆ ವಹಿಸಿ ನೀವು ನಿಶ್ಚಿಂತರಾಗುವಿರಿ. ನಿಮ್ಮ ಕೆಲಸವು ಪೂರ್ಣವಾಗದೇ ಹೇಳಿಸಿಕೊಳ್ಳುವಿರಿ. ಸಿಟ್ಟಿನಿಂದ ನಿಮ್ಮ ಮನೋವಿಕಾರವು ಆಗಬಹುದು.
ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಯುವಿರಿ. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ಗಮನ ಇರಲಿ. ನೀವು ವೃತ್ತಿಯನ್ನು ಮಾಡುತ್ತಲೇ ಉನ್ನತ ಪದವಿಯನ್ನು ಪಡೆಯುವಿರಿ. ಯಶಸ್ಸು ನಿಮ್ಮ ಹಿಂದೆ ತಾನಾಗಿಯೇ ಬರುವುದು. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಸಹೋದರರು ನಿಮಗೆ ಧನ ಸಹಾಯವನ್ನು ಕೇಳಿದರೆ ಮಾಡಬಹುದು. ಸಾಧ್ಯವಾಗುವ ಕೆಲಸದ ಕಡೆ ನಿಮ್ಮ ಗಮನ ಹೆಚ್ಚಿರಲಿ. ಬಡ್ತಿಗಾಗಿ ಮೇಲಧಿಕಾರಿಗಳ ಜೊತೆ ಮಾತನಾಡುವಿರಿ. ನಿಮ್ಮ ಸಾಮರ್ಥ್ಯವನ್ನು ಇತರರಿಗೆ ನೀವೇ ತಿಳಿಸಬೇಕಾಗುವುದು. ಹಿರಿಯರ ಎದುರು ಅಹಂಕಾರವನ್ನು ತೋರಿಸುವುದು ಬೇಡ.
ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು. ಇನ್ನೊಬ್ಬರ ಮಾತುಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ. ನಿಮ್ಮ ಸಂಯಮ ಕೆಡಬಹುದು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಯಬಹುದು. ಆರೋಗ್ಯದ ಬಗ್ಗೆ ಆತಂಕ ಬೇಡ. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ಪಶ್ಚಾತ್ತಾಪವು ನಿಮ್ಮ ನೋವನ್ನು ಪರಿಹರಿಸೀತು. ನಿಮ್ಮ ಚಿಂತನೆಯು ಸಫಲವಾಗಲು ಅಧಿಕ ಸಮಯವು ಬೇಕಾದೀತು. ಸ್ನೇಹಿತರು ನಿಮ್ಮನ್ನು ಇಷ್ಟಪಡುವರು. ಮಾತು ನೇರವಾಗಿದ್ದರೂ ಇತರರು ಇಷ್ಟಪಡುವಂತೆ ಇರುವುದು.
ಸಾಮಾಜಿಕ ಜಾಲತಾಣದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ದುಷ್ಟ ಮಾನಸಿಕತೆಯು ನಿಮಗೆ ಶೋಭೆ ತರದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಅನಿರೀಕ್ಷಿತ ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ. ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆಯಾಗಬಹುದು. ತಿಳಿದವರ ಜೊತೆ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸಿ. ಯಾರಾದರೂ ಕರ್ತವ್ಯದ ಬಗ್ಗೆ ನಿಮ್ಮನ್ನು ಎಚ್ಚರಿಸಬಹುದು. ಏರುದನಿಯಲ್ಲಿ ಮಾತನಾಡುವುದು ಬೇಡ. ಆದಾಯದ ಮೂಲವನ್ನು ಸರಿಯಾಗಿ ಇಟ್ಟುಕೊಳ್ಳಿ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ / ಚತುರ್ಥೀ ನಿತ್ಯನಕ್ಷತ್ರ : ಆಶ್ಲೇಷಾ ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12-31 – 13:55, ಯಮಗಂಡ ಕಾಲ 08:17 – 09:41, ಗುಳಿಕ ಕಾಲ 11:06 – 12:31
-ಲೋಹಿತ ಹೆಬ್ಬಾರ್-8762924271 (what’s app only)