ಚಿತ್ರದುರ್ಗ: ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ಒಂದೇ ಗ್ರಾಮದ ನಾಲ್ವರು ಕಾರ್ಮಿಕರು ಸಾವು – Kannada News | Chitradurga Bolero Accident: 4 Workers Dead Near Andanur

ಚಿತ್ರದುರ್ಗ, ಜನವರಿ 06: ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿದೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್​​ ಇಳಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ – Kannada News | DCM DK Shivakumar Wishes Siddaramaiah For Becoming Longest Serving CM of Karnataka

ಬೆಂಗಳೂರು, ಜನವರಿ 6: ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರು ದಾಖಲೆಯನ್ನು ಮುರಿದಿರುವ ಸಿದ್ದರಾಮಯ್ಯನವರಿಗೆ (Siddaramaiah) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರ ನಡುವೆ ಅಧಿಕಾರದ ವಿಷಯಕ್ಕೆ ಶೀತಲ ಸಮರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆ ಸಿದ್ದರಾಮಯ್ಯನವರ ಸಾಧನೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ‘ಶುಭವಾಗಲಿ,’ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಶುಭವಾಗಲಿ ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Photo: ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ? – Kannada News | Why Is The Big Eyed Mystery Woman photo hanging At Bengaluru Construction Sites Viral News

ಬೆಂಗಳೂರು, ಜನವರಿ 6: ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ನಿರ್ಮಾಣವಾಗುತ್ತಿರುವ ಕಟ್ಟಡವಿದ್ದರೆ ಅಥವಾ ಹೊಸದಾಗಿ ಕಟ್ಟಿದ ಮನೆಯಿದ್ದರೆ ಅದರ ಮುಂದೆ ನೀವು ಈ ದೊಡ್ಡ ಕಣ್ಣುಗಳ ಮಹಿಳೆಯ ಭಯಭೀತಗೊಳಿಸುವ ಫೋಟೋವನ್ನು ಖಂಡಿತ ನೋಡಿರುತ್ತೀರಿ. ಅದರಲ್ಲೂ ನೀವು ಬೆಂಗಳೂರಿನಲ್ಲಿ (Bengaluru) ಇರುವವರಾದರೆ ಈ ಫೋಟೋ ನೋಡದೆ ಇರಲು ಸಾಧ್ಯವೇ ಇಲ್ಲ. ಸೀರೆಯುಟ್ಟ ಮಹಿಳೆ ದೊಡ್ಡ ಬಟ್ಟಲುಕಂಗಳನ್ನು ಬಿಟ್ಟುಕೊಂಡು ಹೆದರಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.

ಸಾಮಾನ್ಯವಾಗಿ, ಯಾವುದಾದರೂ ಹೊಸ ಕಟ್ಟಡ ಕಟ್ಟುವಾಗ, ಅಥವಾ ಕಟ್ಟಿದ ಮನೆಯ ಗೃಹಪ್ರವೇಶಕ್ಕೂ ಮೊದಲು ಆ ಮನೆಗೆ ದೃಷ್ಟಿಯಾಗಬಾರದು ಎಂದು ವಿಕಾರವಾದ ಯಾವುದಾದರೂ ಮುಖವಾಡ ತಂದು ನೇತುಹಾಕುವುದು ವಾಡಿಕೆ. ಆದರೆ, ಆ ಮುಖವಾಡದ ಜಾಗವನ್ನು ಈಗ ಈ ಮಹಿಳೆ ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್

ಮಹಾರಾಷ್ಟ್ರದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಹಲವು ಮನೆಗಳ ಎದುರು ಈ ಮಹಿಳೆಯ ಫೋಟೋ ನೋಡಿದ್ದರು. ಯಾರೀಕೆ? ಎಂದು ತಲೆಕೆಡಿಸಿಕೊಂಡಿದ್ದರು. ಗೂಗಲ್ ಲೆನ್ಸ್​​ನಲ್ಲಿ ಈ ಫೋಟೋ ಹಾಕಿ ಹುಡುಕಿದರೂ ಮಾಹಿತಿ ಸಿಗಲಿಲ್ಲ ಎಂದು ಆ ಮಹಿಳೆ ಫೇಸ್​​​ಬುಕ್​ನಲ್ಲಿ ಬರೆದಿದ್ದರು. ಈ ಪೋಸ್ಟ್ ಕೂಡಲೆ ಎಲ್ಲರ ಗಮನ ಸೆಳೆಯಿತು. ಇದು 3.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಭಾರೀ ಚರ್ಚೆಗೆ ನಾಂದಿ ಹಾಡಿತು.

ಅನೇಕ ಬಳಕೆದಾರರು ಈ ಫೋಟೋ ಹಾಕುವ ಕಾರಣವನ್ನು ವಿವರಿಸಿದ್ದಾರೆ. ಕೆಟ್ಟ ದೃಷ್ಟಿ ತಗುಲದಂತೆ ಈ ರೀತಿಯ ಫೋಟೋಗಳನ್ನು ಹಾಕಲಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈ ರೀತಿ ಮಹಿಳೆಯ ಫೋಟೋ ಹಾಕಿದ್ದಕ್ಕೆ ಕೋಪವನ್ನೂ ಹೊರಹಾಕಿದ್ದಾರೆ. ಮೀಮ್​​ಗಳಿಂದ ಪ್ರಭಾವಿತರಾಗಿ ರೀಲ್ಸ್ ಮಾಡುವ ಮಹಿಳೆಯ ಫೋಟೋವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Video: ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್‌ ಆಯ್ತು ದೃಶ್ಯ

ಬಾಟ್ ಪ್ರಕಾರ, ಈ ಫೋಟೋದಲ್ಲಿರುವ ಮಹಿಳೆ ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್. ಅವರ ಈ ವಿಚಿತ್ರವಾದ ಮುಖಭಾವವು 2023ರ ವೈರಲ್ ವೀಡಿಯೊ ಕ್ಲಿಪ್‌ನಿಂದ ಹುಟ್ಟಿಕೊಂಡಿತು. ಅದು ನಂತರ ಜನಪ್ರಿಯ ಮೀಮ್ ಆಗಿ ವೈರಲ್ ಆಗಿತ್ತು. ಕ್ರಮೇಣ ಆಕೆಯ ಆ ಫೋಟೋವನ್ನು ದೃಷ್ಟಿಗೊಂಬೆಯ ಬದಲು ಹಲವರು ತಮ್ಮ ಮನೆಯೆದುರು ಹಾಕಲಾರಂಭಿಸಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

0,0,0,1,4,1.. ಕೊನೆಯ ಓವರ್​ನಲ್ಲಿ ತಂಡದ ಸೋಲಿಗೆ ಕಾರಣರಾದ ಡೇವಿಡ್ ವಾರ್ನರ್; ವಿಡಿಯೋ – Kannada News | BBL: David Warner’s Fifty Fails to Save Sydney Thunder from Another Loss

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ತಂಡದ ಅದೃಷ್ಟ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಡೇವಿಡ್ ವಾರ್ನರ್ ನಾಯಕತ್ವದ ತಂಡಕ್ಕೆ ಗೆಲುವಿನ ಸಿಹಿಗಿಂತ ಸೋಲಿನ ಕಹಿಯೇ ಎದುರಾಗುತ್ತಿದೆ. ಅದರಲ್ಲೂ ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುತ್ತಿರುವುದು ಸಿಡ್ನಿ ತಂಡದ ದುರಾದೃಷ್ಟವಾಗಿದೆ. ಇಂದು ನಡೆದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲೂ ಸ್ವತಃ ನಾಯಕ ಡೇವಿಡ್ ವಾರ್ನರ್ ಕೈನಿಂದಲೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಒಂದರರ್ಥದಲ್ಲಿ ತಂಡದ ಸೋಲಿಗೆ ನಾಯಕ ವಾರ್ನರ್ ಕಾರಣ ಎಂದರಲೂ ತಪ್ಪಾಗಲಾರದು.

ಜನವರಿ 6, ಮಂಗಳವಾರ ಅಡಿಲೇಡ್‌ನಲ್ಲಿ ನಡೆದ ಬಿಬಿಎಲ್‌ ಪಂದ್ಯದಲ್ಲಿ ಸಿಡ್ನಿ ಥಂಡರ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ಮುಖಾಮುಖಿಯಾಗಿದ್ದವು. ಅಡಿಲೇಡ್ ನೀಡಿದ 166 ರನ್‌ಗಳ ಗುರಿಗೆ ಪ್ರತಿಕ್ರಿಯೆಯಾಗಿ, ವಾರ್ನರ್ ಮತ್ತು ಮ್ಯಾಥ್ಯೂ ಜಿಲ್ಕ್ಸ್ 10 ಓವರ್‌ಗಳಲ್ಲಿ 73 ರನ್‌ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದಾಗ್ಯೂ, ಜಿಲ್ಕ್ಸ್ ಔಟಾದ ನಂತರ ತಂಡದ ಇನ್ನಿಂಗ್ಸ್ ಕುಸಿಯಲಾರಂಭಿಸಿ 77 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ವಾರ್ನರ್ ಮತ್ತು ನಿಕ್ ಮ್ಯಾಡಿನ್ಸನ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿ ತಂಡವನ್ನು 121 ರನ್‌ಗಳಿಗೆ ಕೊಂಡೊಯ್ದರು.

ಈ ಹೊತ್ತಿಗೆ, ನಾಯಕ ವಾರ್ನರ್ ಈಗಾಗಲೇ ಅರ್ಧಶತಕ ಪೂರೈಸಿದ್ದರು. ಆದರೆ ಇನ್ನು ತುದಿಯಲ್ಲಿ ವಿಕೆಟ್‌ಗಳ ಪತನ ಮುಂದುವರೆದಿತ್ತು. ಅಂತಿಮವಾಗಿ, ತಂಡದ ಗೆಲುವಿಗೆ 20 ನೇ ಓವರ್‌ನಲ್ಲಿ 13 ರನ್‌ಗಳು ಬೇಕಾಗಿದ್ದವು. ವಾರ್ನರ್ ಸ್ಟ್ರೈಕ್‌ನಲ್ಲಿದ್ದ ಕಾರಣ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಬಳಿಕ ನಡೆದಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.

ಇಂಗ್ಲಿಷ್ ವೇಗಿ ಲ್ಯೂಕ್ ವುಡ್ ಅವರ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ವಾರ್ನರ್ ಒಂದೇ ಒಂದು ರನ್ ಗಳಿಸಲಿಲ್ಲ. ಇದರಿಂದ ಪಂದ್ಯ ಸಿಡ್ನಿ ತಂಡದಿಂದ ಕೈನಿಂದ ಜಾರಲು ಪ್ರಾರಂಭಿಸಿತು. ನಾಲ್ಕನೇ ಎಸೆತದಲ್ಲಿ ವಾರ್ನರ್ ಕೇವಲ ಒಂದು ರನ್ ಗಳಿಸಿದಾಗ ಸೋಲು ಬಹುತೇಕ ಖಚಿತವಾಯಿತು. ಐದನೇ ಎಸೆತದಲ್ಲಿ ಬೌಂಡರಿ ಬಾರಿಸಲಾಯಿತ್ತಾದರೂ ಅದು ತುಂಬಾ ತಡವಾಗಿತ್ತು. ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕಿದ ಸಿಡ್ನಿ ಥಂಡರ್ ಪಂದ್ಯವನ್ನು ಆರು ರನ್‌ಗಳಿಂದ ಸೋತಿತು. ಕೊನೆಯವರೆಗೂ ಅಜೇಯರಾಗಿ ಉಳಿದ ವಾರ್ನರ್ 51 ಎಸೆತಗಳಲ್ಲಿ 67 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಥಂಡರ್ ಸತತ ನಾಲ್ಕನೇ ಮತ್ತು ಆವೃತ್ತಿಯ ಒಟ್ಟಾರೆ ಆರನೇ ಸೋಲನ್ನು ಅನುಭವಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು – Kannada News | Ballari Riot: Sriramulu Alleges Congress Activist Rajasekhar Body Burned for Evidence Destruction

ಬಳ್ಳಾರಿ, ಜನವರಿ 06: ಸಂಪ್ರದಾಯದ ಪ್ರಕಾರ ಕಾಂಗ್ರೆಸ್​​ ಕಾರ್ಯಕರ್ತ ರಾಜಶೇಖರ್​ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಆದರೆ ಸುಟ್ಟು ಹಾಕಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿ ಜನಾರ್ದನರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ್ ಮೃತದೇಹವನ್ನ ಮಣ್ಣು ಮಾಡಬೇಕಿತ್ತು. ಸಾಕ್ಷಿ ನಾಶ ಮಾಡಬೇಕು ಅಂತ ವ್ಯವಸ್ಥಿತವಾಗಿ ಸುಟ್ಟು ಹಾಕಲಾಗಿದೆ. ಅವರ ಕುಟುಂಬಸ್ಥರನ್ನ ಪೊಲೀಸರು ಹೆದರಿಸಿ, ಬೆದರಿಸಿದ್ದಾರೆ. ಬಹಳಷ್ಟು ಬುಲೆಟ್ ಆತನ ದೇಹ ಹೊಕ್ಕಿದೆ. ಏಕೆ ಸುಟ್ಟು ಹಾಕಿದರು. ಇಂದಲ್ಲಾ ನಾಳೆ ಸತ್ಯ ಹೊರಗೆ ಬರುತ್ತೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕನ್ನಡ, ತಮಿಳು ಮುಂತಾದ ಭಾಷೆಯ 55 ಹೊಸ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ – Kannada News | Union Minister Dharmendra Pradhan releases 55 new Classical Language Books

ನವದೆಹಲಿ, ಜನವರಿ 6: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶಾಸ್ತ್ರೀಯ ಭಾಷೆಗಳಾದ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾದ ಶ್ರೇಷ್ಠತಾ ಕೇಂದ್ರಗಳು ಅಭಿವೃದ್ಧಿಪಡಿಸಿದ 55 ಸಾಹಿತ್ಯ ಕೃತಿಗಳನ್ನು ಇಂದು ಬಿಡುಗಡೆ ಮಾಡಿದರು. ಕನ್ನಡ, ತೆಲುಗು, ಮಲಯಾಳಂ, ಒಡಿಯಾ, ತಮಿಳು ಮತ್ತು ಸೈನ್ ಭಾಷೆಯಲ್ಲಿ ಪ್ರಕಟವಾದ ಈ ಹೊಸ ಕೃತಿಗಳು ಭಾರತದ ಶ್ರೀಮಂತ ಭಾಷಾ ಸಂಪ್ರದಾಯಗಳ ಸುತ್ತ ಸಂಶೋಧನೆ ಮತ್ತು ಶಿಕ್ಷಣವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರವು ವಿಶಾಲವಾದ ರಾಷ್ಟ್ರೀಯ ಚಳವಳಿಯ ಭಾಗವಾಗಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.

“ಸೈನ್ ಭಾಷೆಯಲ್ಲಿ ತಿರುಕ್ಕುರಲ್‌ನ ವ್ಯಾಖ್ಯಾನ ಸೇರಿದಂತೆ ಶಾಸ್ತ್ರೀಯ ಭಾರತೀಯ ಭಾಷೆಗಳಲ್ಲಿ 55 ವಿದ್ವತ್ಪೂರ್ಣ ಸಂಪುಟಗಳನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ. ಕನ್ನಡ, ತೆಲುಗು, ಮಲಯಾಳಂ, ಒಡಿಯಾ, ತಮಿಳು ಮತ್ತು ಸಂಕೇತದ ಭಾಷೆಗಳಲ್ಲಿ ಈ ಸಾಹಿತ್ಯ ಕೃತಿಗಳು ಭಾರತದ ಭಾಷಾ ಪರಂಪರೆಯನ್ನು ಶಿಕ್ಷಣ, ಸಂಶೋಧನೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಕೇಂದ್ರದಲ್ಲಿ ಇರಿಸುವ ನಮ್ಮ ದೊಡ್ಡ ರಾಷ್ಟ್ರೀಯ ಪ್ರಯತ್ನದ ಒಂದು ಭಾಗವಾಗಿದೆ” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೋದಿಯ ಜೀವನ ರಾಷ್ಟ್ರಸೇವೆಯ ಸಂಕೇತ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣನೆ

“ದೇಶದ ವೈವಿಧ್ಯಮಯ ಜನಸಂಖ್ಯೆಯನ್ನು ಏಕೀಕರಿಸುವಲ್ಲಿ ಭಾರತೀಯ ಭಾಷೆಗಳು ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸಿವೆ. ಭಾರತದ ಸಾಹಿತ್ಯ ಪರಂಪರೆಯನ್ನು ಜನಪ್ರಿಯಗೊಳಿಸುವ ಮತ್ತು ಸಂರಕ್ಷಿಸುವ ಕಡೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಭಾರತೀಯ ಭಾಷೆಗಳು ಅಭಿವ್ಯಕ್ತಿಯ ಮಾಧ್ಯಮವಾಗಿದ್ದು, ಸರ್ಕಾರವು ಈ ಭಾಷೆಗಳ ರಕ್ಷಣೆಗೆ ಬದ್ಧವಾಗಿದೆ” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪ್ರತಿಯೊಂದು ಭಾರತೀಯ ಭಾಷೆಯನ್ನು ಮುಖ್ಯವೆಂದು ಪರಿಗಣಿಸಬೇಕು ಎಂಬ ಹೇಳಿಕೆಗಳೊಂದಿಗೆ ಸರ್ಕಾರ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಇತಿಹಾಸದಾದ್ಯಂತ ಸವಾಲುಗಳ ಹೊರತಾಗಿಯೂ, ಭಾರತೀಯ ಭಾಷೆಗಳು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡಿವೆ. ಈ ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಪದೇ ಪದೇ ಪ್ರಯತ್ನಗಳು ನಡೆದರೂ ಅವು ಗಟ್ಟಿಯಾಗಿ ನಿಂತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು; ಧರ್ಮೇಂದ್ರ ಪ್ರಧಾನ್ ಒತ್ತಾಯ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಭಾಷೆಗಳನ್ನು ನಿಗದಿತ ಪಟ್ಟಿಯಲ್ಲಿ ಸೇರಿಸಲು ಮತ್ತು ಶಾಸ್ತ್ರೀಯ ಪಠ್ಯಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ವಿಸ್ತೃತ ಪ್ರಯತ್ನಗಳು ನಡೆದಿವೆ. ಈ ಭಾಷೆಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುವತ್ತ ಸರ್ಕಾರ ಒತ್ತು ನೀಡಿದೆ. “ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಅಪಾರ ಭಾಷಾ ವೈವಿಧ್ಯತೆಯ ದೇಶ. ನಮ್ಮ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿರಬೇಕು” ಎಂದು ಧರ್ಮೇಂದ್ರ ಪ್ರಧಾನ್ ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶಿ ಪಂದ್ಯದಲ್ಲೂ ಗಿರ್ಕಿ ಹೊಡೆದ ಶುಭ್​ಮನ್ ಗಿಲ್; ಏಕದಿನ ಸರಣಿ ಕಥೆ ಏನು? – Kannada News | Shubman Gill’s Injury Return: Form Struggles Raise Team India Concerns

ಮೇಲೆ ಹೇಳಿದಂತೆ ಜನವರಿ 11 ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ, ಆದರೆ ಅವರ ಫಾರ್ಮ್ ಪ್ರಸ್ತುತ ಕಳಪೆಯಾಗಿದೆ. ಗಿಲ್ ಅವರ ದೊಡ್ಡ ಸಮಸ್ಯೆ ಎಂದರೆ ಟಿ20 ಮತ್ತು ಏಕದಿನ ಮಾದರಿಗಳಲ್ಲಿ ಅವರ ಕಳಪೆ ಪ್ರದರ್ಶನ. ಫೆಬ್ರವರಿ 20, 2025 ರಿಂದ ಗಿಲ್ ಏಕದಿನ ಪಂದ್ಯಗಳಲ್ಲಿ ಒಂದು ಅರ್ಧಶತಕವನ್ನೂ ಬಾರಿಸಿಲ್ಲ. ತಮ್ಮ ಕೊನೆಯ ಎಂಟು ಏಕದಿನ ಇನ್ನಿಂಗ್ಸ್‌ಗಳಲ್ಲಿ ರನ್ ಬರ ಎದುರಿಸಿರುವ ಗಿಲ್ ಅವರ ಅತ್ಯುತ್ತಮ ಸ್ಕೋರ್ ಕೇವಲ 46 ರನ್ ಆಗಿದೆ.

Source link

ಬಳ್ಳಾರಿಯಲ್ಲಿ ಶಾಂತಿಮಂತ್ರ ಜಪಿಸಿದ ಡಿಕೆ ಶಿವಕುಮಾರ್​: ರೆಡ್ಡಿ ಬ್ರದರ್ಸ್‌ ವಿರುದ್ಧ ವಾಗ್ದಾಳಿ – Kannada News | Ballari Violence: DK Shivakumar Peace Bid Amidst Firing, Political Blame

ಬೆಂಗಳೂರು, ಜನವರಿ 06: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಗಲಾಟೆ ಮತ್ತು ಫೈರಿಂಗ್ ಪ್ರಕರಣ (Ballari Banner Violence) ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಸಕ ಭರತ್‌ ರೆಡ್ಡಿ ಕಡೆಯವರು ಫೈರಿಂಗ್‌ ಮಾಡುತ್ತಿರುವ ದೃಶ್ಯಗಳನ್ನ ಬಿಜೆಪಿ ನಾಯಕರು ರಿಲೀಸ್‌ ಮಾಡಿದ್ದರು. ಇತ್ತ ಬಿಜೆಪಿ ಕಡೆಯವರು ಖಾರದಪುಡಿ ಎರಚಿರೋದು, ಬ್ಯಾನರ್‌ ಹರಿಯುತ್ತಿರುವ ದೃಶ್ಯಗಳನ್ನ ಕಾಂಗ್ರೆಸ್​ ಪಡೆ ಕೂಡ ರಿಲೀಸ್ ಮಾಡಿದೆ. ಇದರ ನಡುವೆ ಬಳ್ಳಾರಿಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಭೇಟಿ ನೀಡಿದ್ದು, ಶಾಂತಿಮಂತ್ರ ಜಪಿಸಿದ್ದಾರೆ.

ಬ್ಯಾನರ್‌ ಗಲಾಟೆಯಿಂದ ಧಗಧಗಿಸಿದ್ದ ಬಳ್ಳಾರಿ ಸದ್ಯ ಸಹಜಸ್ಥಿತಿಗೆ ಮರಳಿದೆ. ಅದೇ ಬಳ್ಳಾರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಎಂಟ್ರಿಕೊಟ್ಟಿದ್ದರು. ಗಲಾಟೆಯಲ್ಲಿ ಫೈರಿಂಗ್‌ಗೆ ಬಲಿ ಆಗಿರುವ ರಾಜಶೇಖರ್‌ ಮನೆಗೆ ಭೇಟಿ ನೀಡಿದ ಡಿಸಿಎಂ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಮಗನನ್ನ ನೆನೆದು ರಾಜಶೇಖರ್‌ ತಾಯಿ ತುಳಸಿ ಕಣ್ಣೀರು ಹಾಕಿದರು.

ಶಾಂತಿ ಕಾಪಾಡುವಂತೆ ಡಿಕೆ ಶಿವಕುಮಾರ್​ ಮನವಿ

ಜಿಲ್ಲೆಯ ಶಾಸಕರನ್ನು ಹೊರಗಿಟ್ಟು ಅಧಿಕಾರಿಗಳ ಸಭೆ ಕೂಡ ಮಾಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​, ನಮ್ಮ ಕಾಂಗ್ರೆಸ್​​ ಕಾರ್ಯಕರ್ತರು ಶಾಂತಿ ಕಾಪಾಡಬೇಕು. ಅಸೂಯೆಯಿಂದ ನಮ್ಮ ಕಾರ್ಯಕ್ರಮ ತಡೆಯಲು ಯತ್ನಿಸಿದ್ದಾರೆ. ಕಾರ್ಯಕ್ರಮದ ಬ್ಯಾನರ್ ಕಿತ್ತಾಕಿದ್ದಕ್ಕೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಮ್ಮ ಶಾಸಕ ತಡವಾಗಿ ಬಂದಿದ್ದಾರೆ. ಭರತ್​ ರೆಡ್ಡಿ ಹೊಸ ಶಾಸಕ, ಬಿಸಿ ರಕ್ತ ಮಾತಾಡಿರಬಹುದು. ಬಳ್ಳಾರಿಯಲ್ಲಿ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡಿದ್ದೇವೆ. ನಮ್ಮವರು ತಪ್ಪು ಮಾಡಿದರೆ ಖಂಡಿತ ತಪ್ಪು ಅಂತಾ ಹೇಳ್ಳುತ್ತೇವೆ. ಇಲ್ಲ ಅಂದರೆ ಅದನ್ನ ತಿದ್ದಲು ಆಗಲ್ಲ. ಮನೆಯಲ್ಲಿ ಬೈಯುವಂತೆ ನಮ್ಮ ಕಾರ್ಯಕರ್ತರಿಗೂ ಹೇಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ

ಜನಾರ್ದನರೆಡ್ಡಿಯನ್ನು ಕೊಲ್ಲಲು ಬಂದಿದ್ದರೆ ಮಹಜರು ಮಾಡಿಸಬೇಕಿತ್ತು. ಆ ಬುಲೆಟ್ ಎಲ್ಲಿತ್ತು?, ಹೊರಗಡೆ ಬಿದ್ದಿತ್ತು, ಮನೆಯಲ್ಲಿ ಬಿದ್ದಿರಲಿಲ್ಲ. ಜನಾರ್ದನರೆಡ್ಡಿ ಬುಲೆಟ್‌ ತೋರಿಸ್ತಿದ್ರು, ಅವರಿಗೆ ಹೊಡೆದಿತ್ತಾ ಅದು? ತಪ್ಪು ಮಾಹಿತಿ ನೀಡೋದು ಸರಿಯಲ್ಲ, ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲ್ಲ ಎಂದು ಡಿಕೆ ಶಿವಕುಮಾರ್​ ವಾಗ್ದಾಳಿ ಮಾಡಿದ್ದಾರೆ.

ಹೀಗಾದರೆ ನ್ಯಾಯ ಹೇಗೆ ಸಿಗುತ್ತೆ ಎಂದ ಶ್ರೀರಾಮುಲು 

ಇನ್ನು ಶಾಸಕ ಭರತ್‌ ರೆಡ್ಡಿ ಜತೆ ಕೂತು, ಡಿಸಿಎಂ ನಡೆಸಿದ ಸುದ್ದಿಗೋಷ್ಠಿ ಬಿಜೆಪಿ ನಾಯಕರನ್ನ ಕೆರಳಿಸಿದೆ. ಕೊಲೆ ಆರೋಪಿ ಜತೆ ಕೂತು ಮಾತನಾಡಿದ್ದಾರೆ. ಹೀಗಾದರೆ ನ್ಯಾಯ ಹೇಗೆ ಸಿಗುತ್ತೆ ಅಂತಾ ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದು ಹೇಗೆ ಗೊತ್ತಾ?

ಇದರ ನಡುವೆ ಶಾಸಕ ಜನಾರ್ದನರೆಡ್ಡಿ ಕರೆತಂದು ಇಂದು ಸ್ಥಳ ಪರಿಶೀಲನೆ ನಡೆಸಲಾಯ್ತು. ಜನಾರ್ದನ ರೆಡ್ಡಿ ದೂರು ಹಿನ್ನೆಲೆ ಅವರನ್ನೇ ಕರೆತಂದು ಮಹಜರು ನಡೆಸಿದರು. ಕೊಲೆ ಯತ್ನ, ಗುಂಪುಗಾರಿಕೆ ಬಗ್ಗೆ ತನಿಖಾಧಿಕಾರಿಗಳು ಸಾಕ್ಷ್ಯ ಕೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ – Kannada News | Rashmika Mandanna is the Number 1 Tax Payer in Kodagu District

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗು (Kodagu) ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. ದೇಶಾದ್ಯಂತ ಹೆಸರು ಹೊಂದಿರುವ ಅವರು ಕೊಡಗಿನ ಮೂಲಕವೇ ತೆರಿಗೆ ಪಾವತಿಸುತ್ತಿದ್ದಾರೆ. ‘ರಶ್ಮಿಕಾ ಮಂದಣ್ಣ ಎಲ್ಎಲ್​ಪಿ’ ಹೆಸರಿನಲ್ಲಿ ಆದಾಯ ತೆರಿಗೆ (Income Tax) ಪಾವತಿ ಮಾಡುತ್ತಿದ್ದಾರೆ. ಈವರೆಗೆ 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ 3 ಅವಧಿಯಲ್ಲಿ ತೆರಿಗೆ ಪಾವತಿ ಮಾಡಲಾಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಮಾರ್ಚ್ ತಿಂಗಳವರೆಗೆ 4ನೇ ತ್ರೈಮಾಸಿಕ ತೆರಿಗೆ ಪಾವತಿಸಲಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಬಲವಾಗಿದೆ. ವಿಜಯ್ ದೇವರಕೊಂಡ ಜೊತೆ ಅವರು ಮದುವೆ ಆಗಲಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಖಂಡಿಸುತ್ತಾರಾ? ಸಂಸದ ಲೆಹರ್ ಸಿಂಗ್ ಪ್ರಶ್ನೆ – Kannada News | BJP leader Lehar Singh reaction on Siddaramaiah Surpassing Devaraj Urs Record on Longest Serving CM

ಬೆಂಗಳೂರು, ಜನವರಿ 6: ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಮುರಿದಿದ್ದಾರೆ. ಕರ್ನಾಟಕದ ಅತ್ಯಂತ ಯಶಸ್ವಿ ರಾಜಕಾರಣಿಗಳಲ್ಲಿ ಒಬ್ಬರಾದ ಸಿದ್ದರಾಮಯ್ಯ 2 ಬಾರಿ ಉಪಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಜೆಡಿಎಸ್​​ನಿಂದ ಕಾಂಗ್ರೆಸ್​ ಪಕ್ಷಕ್ಕೆ ಬಂದ ನಂತರ ಮುಖ್ಯಮಂತ್ರಿ ಹುದ್ದೆಗೇರಿದ ಅವರು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವುದಕ್ಕೆ ಹಲವು ನಾಯಕರು ಅಭಿನಂದಿಸಿದ್ದಾರೆ. ಇದರ ನಡುವೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿಎಂ ಸಿದ್ದರಾಮಯ್ಯನವರ ಈ ಸಾಧನೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯ ಅವರು ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯ ಬಗ್ಗೆ ನನ್ನ ಗಮನಕ್ಕೆ ಬಂದಿತು. ಇಂದಿನ ಪತ್ರಿಕೆಗಳು ಡಿ. ದೇವರಾಜ ಅರಸ್ ಅವರ ದಾಖಲೆಯನ್ನು ಮೀರಿ ಸಿದ್ದರಾಮಯ್ಯ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದಾರೆ ಎಂದು ವರದಿ ಮಾಡಿವೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರಿಗೆ ಒಂದು ಸಣ್ಣ ಸಂಗತಿಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ ಎಂದು ಲೆಹರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸುದೀರ್ಘ ಜನಸೇವೆಯ ಸಾರ್ಥಕ ಕ್ಷಣ: ನಿಮ್ಮೆಲ್ಲರ ಸೇವೆಗೈಯ್ಯುವ ಈ ಅವಕಾಶಕ್ಕಾಗಿ ಚಿರಋಣಿ; ಸಿಎಂ ಸಿದ್ದರಾಮಯ್ಯ

ದೇವರಾಜ ಅರಸು ಮಾರ್ಚ್ 1972ರಿಂದ ಜನವರಿ 1980ರವರೆಗೆ ನಿರಂತರ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯನವರಂತೆ ದೇವರಾಜ ಅರಸು ಅವರ ಅಧಿಕಾರಾವಧಿ ಮಧ್ಯಕ್ಕೆ ಬ್ರೇಕ್ ಆಗಿರಲಿಲ್ಲ. ಸಿದ್ದರಾಮಯ್ಯ ಸ್ವತಃ ಮೈಸೂರಿನ ಚಾಮುಂಡೇಶ್ವರಿ ಸ್ಥಾನವನ್ನು ಕಳೆದುಕೊಂಡಿದ್ದರು. ಅವರು ಸ್ಪರ್ಧಿಸಿದ್ದ ಇನ್ನೊಂದು ಸ್ಥಾನವಾದ ಬಾದಾಮಿಯಲ್ಲಿ ಸಾವಿರ ಮತಗಳಿಂದ ಗೆದ್ದಿದ್ದು ಅವರ ಅದೃಷ್ಟ ಎಂದಿದ್ದಾರೆ.

ದೇವರಾಜ ಅರಸ್ ವಿಷಯಕ್ಕೆ ಬಂದರೂ 1976ರ ಚುನಾವಣೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಮುಂದೂಡಿದ್ದರಿಂದ ಅವರು ಬಹಳ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದ್ದರು. 1978ರ ಆರಂಭದಲ್ಲಿ ಕರ್ನಾಟಕದಲ್ಲಿ ಒಂದೆರಡು ತಿಂಗಳು ರಾಷ್ಟ್ರಪತಿ ಆಳ್ವಿಕೆ ಇತ್ತು. ಆದರೆ, ಮುಖ್ಯಮಂತ್ರಿಯಾಗಿ ಅರಸು ನಿರಂತರ ಅಧಿಕಾರಾವಧಿಯನ್ನು ಹೊಂದಿದ್ದರು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ಸಂತೋಷದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಖಂಡಿಸುತ್ತಾರೆಯೇ? ಇಂದಿರಾ ಗಾಂಧಿ ಅವರ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಅವರು ಖಂಡಿಸುತ್ತಾರೆಯೇ? ರಾಜಕೀಯದಲ್ಲಿ ಅವರಿಗೆ ಪುನರ್ಜನ್ಮ ನೀಡಿದ ಸಾಮಾಜಿಕ ನ್ಯಾಯದ ಪ್ರತಿಪಾದಕ ದೇವರಾಜ ಅರಸು ಅವರನ್ನು ಪದಚ್ಯುತಗೊಳಿಸಿದ್ದಕ್ಕಾಗಿ ಅವರು ಇಂದಿರಾ ಗಾಂಧಿಯನ್ನು ಖಂಡಿಸುತ್ತಾರೆಯೇ? ಎಂದು ಲೆಹರ್ ಸಿಂಗ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೇವರಾಜ ಅರಸು ದಾಖಲೆ ಬ್ರೇಕ್​​: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ

ದೇವರಾಜ ಅರಸು ಎಲ್ಲಾ ಕಾಂಗ್ರೆಸ್ಸಿಗರಿಂದ ಕೈಬಿಡಲ್ಪಟ್ಟ ದುಃಖಿತ ವ್ಯಕ್ತಿಯಾಗಿ ನಿಧನರಾದರು. ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಭಾರತದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗಳಾದ ಪವನ್ ಕುಮಾರ್ ಚಾಮ್ಲಿಂಗ್, ಒಡಿಶಾದ ನವೀನ್, ಜ್ಯೋತಿ ಬಸು, ಮೋಹನ್ ಲಾಲ್ ಸುಖಾಡಿಯಾ, ಮಾಣಿಕ್ ಸರ್ಕಾರ್, ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಅತಿ ದೀರ್ಘವಾದ ಅವಧಿಯ ಅಧಿಕಾರವನ್ನು ಅನುಭವಿಸಿದ್ದಾರೆ, ಅದೂ ಒಂದು ದಶಕಕ್ಕೂ ಹೆಚ್ಚು ಕಾಲ ಎಂಬುದು ವಿಶೇಷ.

ಆದರೂ ಸಿದ್ದರಾಮಯ್ಯ ಮತ್ತು ಅವರ ಅನುಯಾಯಿಗಳು ಈ ಅವಧಿಯಲ್ಲಿ ಯಾವುದೇ ಸಾಧನೆ ಮಾಡದ ಬಗ್ಗೆ ದಾಖಲೆ ನಿರ್ಮಿಸಿರುವುದಕ್ಕೆ ಖುಷಿಪಡಬೇಕು. ಇಷ್ಟು ದೀರ್ಘ ಅವಧಿಯಲ್ಲಿ ಅಧಿಕಾರದಲ್ಲಿದ್ದರೂ ಯಾವುದೇ ಉತ್ತಮ ಕೆಲಸ ಮಾಡದೆ ಇರುವುದಕ್ಕೆ ಅವರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅಥವಾ ಗಿನ್ನೆಸ್ ವಿಶ್ವ ದಾಖಲೆಗಳಿಗೆ ಸೇರಿಸಿದರೂ ತಪ್ಪಾಗದು ಎಂದು ಲೆಹರ್ ಸಿಂಗ್ ಲೇವಡಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version