ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ? – Kannada News | Venezuela stock market rise 17pc in one day after US captures president Nicolas Maduro

ನ್ಯೂಯಾರ್ಕ್, ಜನವರಿ 6: ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮೆಡುರೊರನ್ನು (Nicolas Maduro) ಅಮೆರಿಕ ಸೆರೆ ಹಿಡಿದ ಬೆನ್ನಲ್ಲೇ ಆ ದೇಶದ ಮಾರುಕಟ್ಟೆ ಜಿಗಿಜಿಗಿದಾಡತೊಡಗಿದೆ. ವೆನೆಜುವೆಲಾದ ಕ್ಯಾರಕಾಸ್ ಸ್ಟಾಕ್ ಎಕ್ಸ್​ಚೇಂಜ್ ಜನವರಿ 5ರಂದು ಒಂದೇ ದಿನ ಶೇ. 17ರಷ್ಟು ಏರಿದೆ. ಅಧ್ಯಕ್ಷರ ನಿರ್ಗಮನದ ಸುದ್ದಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿದೆ. ಜನವರಿ 5ರಂದು ಕ್ಯಾರಕಾಸ್ ಸ್ಟಾಕ್ ಎಕ್ಸ್​ಚೇಂಜ್​ನ (Carcas stock exchange) ಸೂಚ್ಯಂಕವು 2,597.7 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿತು. ಒಂದು ದಿನದಲ್ಲಿ ಶೇ. 16.45ರಷ್ಟು ಏರಿಕೆ ಆಗಿದೆ. ಹಲವು ವರ್ಷಗಳಲ್ಲಿ ಒಂದು ದಿನದಲ್ಲಿ ಕಂಡ ಅತಿದೊಡ್ಡ ಹೆಚ್ಚಳ ಇದು.

ವೆನೆಜುವೆಲಾದ ಬಿವಿಸಿ (ಬೋಲ್ಸಾ ಡೀ ವೆಲೋರೆಸ್ ಡೀ ಕ್ಯಾರಕಾಸ್) ದಕ್ಷಿಣ ಅಮೆರಿಕದಲ್ಲೇ ಅತ್ಯಂತ ಚಿಕ್ಕ ಷೇರುಪೇಟೆ ಎನಿಸಿದೆ. ಇದರಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಸಂಖ್ಯೆ ಕೇವಲ 15 ಮಾತ್ರ. ಕಳೆದ ವರ್ಷದ ಅಂಕಿ ಅಂಶ ತೆಗೆದುಕೊಂಡರೆ ಇಲ್ಲಿ ದಿನಕ್ಕೆ ನಡೆಯುವ ಟ್ರೇಡಿಂಗ್ ಮೌಲ್ಯ 1 ಮಿಲಿಯನ್ ಡಾಲರ್ ಕೂಡ ಇಲ್ಲ. ಅಂದರೆ ಸುಮಾರು 9 ಕೋಟಿ ರೂನಷ್ಟು ಮಾತ್ರವೇ ಷೇರುಗಳ ಟ್ರೇಡಿಂಗ್ ಒಂದು ದಿನದಲ್ಲಿ ನಡೆಯುವುದು. ಆದರೂ ಕೂಡ ಒಂದು ದಿನದಲ್ಲಿ ಶೇ. 17ರಷ್ಟು ಏರಿಕೆ ಆಗಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ವೆನೆಜುವಲಾ ಮಾರುಕಟ್ಟೆ ಖುಷಿಯಾಗಿದೆಯಾ?

ಅಸಮರ್ಪಕ ಆಡಳಿತ ನಿರ್ವಹಣೆ ಸೇರಿದಂತೆ ವಿವಿಧ ಕಾರಣಗಳಿಗೆ ವೆನಿಜುವೆಲಾದ ಆರ್ಥಿಕತೆ ಬಹಳ ಹೀನಾಯ ಸ್ಥಿತಿಯಲ್ಲಿದೆ. ಆದಾಯ ಹರಿವು ಸಂಕುಚಿತಗೊಂಡು, ಸಾಲ ಸೋಲ ವಿಪರೀತ ಮಾಡಿಕೊಂಡಿದೆ. ಅಮೆರಿಕದ ನಿರ್ಬಂಧದಿಂದಾಗಿ ಆ ದೇಶಕ್ಕೆ ಹೊಸ ಹೂಡಿಕೆಗಳು ವಿರಳವಾಗಿವೆ. ಬಾಂಡ್​ಗಳ ಹಣ (ಸಾಲ) ಮರುಪಾವತಿಸಲೂ ಸರ್ಕಾರಕ್ಕೆ ಹಣ ಇಲ್ಲದಂತಾಗಿದೆ.

ಇಂಥ ಪರಿಸ್ಥಿತಿಯಲ್ಲಿ, ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮೆಡುರೊರನ್ನು ಅಮೆರಿಕ ಸೆರೆ ಹಿಡಿದು ಕರೆದೊಯ್ದಿರುವ ಬೆಳವಣಿಗೆಯನ್ನು ಅಲ್ಲಿಯ ವ್ಯಾಪಾರ ವಲಯ ಸಕಾರಾತ್ಮಕವಾಗಿ ಪರಿಗಣಿಸಿರಬಹುದು. ಬೇರೆ ಆಡಳಿತ ಬಂದು, ನಿರ್ಬಂಧಗಳು ತೆರವುಗೊಂಡು, ಹೊಸ ಹೂಡಿಕೆಗಳು ಹರಿದು ಬಂದರೆ ಆರ್ಥಿಕತೆಗೆ ಪುಷ್ಟಿ ಸಿಗಬಹುದು ಎನ್ನುವ ನಿರೀಕ್ಷೆ ಉದ್ಯಮ ವಲಯದಲ್ಲಿದೆ.

ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

ಅಪಾರ ತೈಲ ಸಂಪತ್ತಿದ್ದರೂ ವೆನೆಜುವೆಲಾಗೆ ಯಾಕೆ ಈ ದುಸ್ಥಿತಿ?

ವೆನೆಜುವೆಲಾದ ಆರ್ಥಿಕತೆಯು ತೈಲದಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿದೆ. ಪರ್ಯಾಯ ಉದ್ಯಮಗಳನ್ನು ಬೆಳೆಸಲಿಲ್ಲ. ಸರ್ಕಾರ ವಿಪರೀತ ಖರ್ಚು ಮಾಡಿತು. ನೋಟುಗಳನ್ನು ಮನಬಂದಂತೆ ಪ್ರಿಂಟ್ ಮಾಡಿತು. ಪರಿಣಾಮವಾಗಿ ವಿಪರೀತ ಹಣದುಬ್ಬರವಾಯಿತು. ಖಾಸಗಿ ಕಂಪನಿಗಳಿಗೆ ಕಡಿವಾಣ ಹಾಕಿ, ಸರ್ಕಾರವೇ ಅವುಗಳನ್ನು ನಡೆಸತೊಡಗಿತು. ಉತ್ಪಾದನೆ ಕುಂಠಿತಗೊಂಡಿತು.

ತೈಲದಿಂದ ಬಂದ ಹಣವನ್ನು ಹೊಸ ತಂತ್ರಜ್ಞಾನ ಅಭಿವೃದ್ಧಿಗೂ ತೊಡಗಿಸಲಿಲ್ಲ. ಸಬ್ಸಿಡಿ ಮತ್ತಿತರ ಯೋಜನೆಗಳಿಗೆ ಹೆಚ್ಚಿನ ಹಣ ಹೋಯಿತು. ತೈಲ ಬೆಲೆ ಕಡಿಮೆ ಆಗತೊಡಗಿದಂತೆ ಅದರ ಆರ್ಥಿಕತೆ ತೀರಾ ಚಿಂತಾಜನಕ ಸ್ಥಿತಿ ತಲುಪಿತು. ಜೊತೆಗೆ, ಅಮೆರಿಕದ ನಿಷೇಧದ ಬರೆಯೂ ವೆನೆಜುವೆಲಾವನ್ನು ಜರ್ಝರಿತಗೊಳಿಸಿದೆ. ಈಗ ಅಲ್ಲಿಯ ಪರಿಸ್ಥಿತಿ ಬದಲಾವಣೆ ಆಗುವ ಸಾಧ್ಯತೆ ಕಾಣುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪತಂಜಲಿ ದಿವ್ಯ ದಂತಮಂಜನ್ ಟೂತ್ ಪೇಸ್ಟ್; ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಉತ್ಪನ್ನ – Kannada News | Patanjali Divya Dantmanjan paste helps to overcome many dental problems

ಇತ್ತೀಚಿನ ದಿನಗಳಲ್ಲಿ ದಂತ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಕೆಟ್ಟ ಆಹಾರ ಪದ್ಧತಿ, ಅತಿಯಾದ ಸಕ್ಕರೆ ಸೇವನೆ, ತಂಬಾಕು ಸೇವನೆ ಮಾಡುವುದು, ಸರಿಯಾಗಿ ಹಲ್ಲುಜ್ಜದೇ ಇರುವುದು, ಮತ್ತು ಒತ್ತಡ ಇವೆಲ್ಲವೂ ಹಲ್ಲು ಮತ್ತು ಒಸಡುಗಳಿಗೆ ಹಾನಿ ಮಾಡುತ್ತವೆ. ಹಲ್ಲುನೋವು, ಒಸಡುಗಳಲ್ಲಿ ರಕ್ತಸ್ರಾವ, ಪಯೋರಿಯಾ ಮತ್ತು ಬಾಯಿಯ ದುರ್ವಾಸನೆಯಂತಹ ಸಮಸ್ಯೆಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲೂ ಸಾಮಾನ್ಯವಾಗುತ್ತಿವೆ. ಈ ಸಂದರ್ಭಗಳಲ್ಲಿ, ಆಯುರ್ವೇದ ಟೂತ್‌ಪೇಸ್ಟ್ ಉತ್ತಮ ಆಯ್ಕೆಯಾಗಿದೆ. ಪತಂಜಲಿಯ ದಿವ್ಯ ದಂತಮಂಜನ್ ಪೇಸ್ಟ್ (Patanjali Divya Dantmanjan toothpaste) ಹಲ್ಲು ಮತ್ತು ಒಸಡುಗಳ ಆರೈಕೆಗೆ ಸಹಾಯ ಮಾಡುವ ನೈಸರ್ಗಿಕ ಆಯುರ್ವೇದ ಉತ್ಪನ್ನವಾಗಿದೆ.

ಆಯುರ್ವೇದದಲ್ಲಿ, ದಂತ ಆರೋಗ್ಯವು ಒಟ್ಟಾರೆ ದೇಹದ ಆರೋಗ್ಯಕ್ಕೆ ಸಂಬಂಧಿಸಿದೆ. ದಿವ್ಯ ದಂತಮಂಜನ್ ಅನ್ನು ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಇದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ದಿವ್ಯ ದಂತಮಂಜನ್ ಎಂಥ ಹಲ್ಲಿನ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ, ಅದರಲ್ಲಿ ಯಾವ್ಯಾವ ಅಂಶಗಳಿವೆ, ಆ ಪೇಸ್ಟ್ ಅನ್ನು ಹೇಗೆ ಬಳಸಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚರ್ಮದ ಸಮಸ್ಯೆಗಳನ್ನು ನಿವಾರಿಸಬಲ್ಲುದು ಪತಂಜಲಿಯ ಈ ಆಯುರ್ವೇದ ತೈಲ

ದಿವ್ಯ ದಂತಮಂಜನವು ಯಾವ ದಂತ ಸಮಸ್ಯೆಗಳಿಗೆ ಪ್ರಯೋಜನಕಾರಿ?

ದಿವ್ಯ ದಂತಮಂಜನ್ ಅನ್ನು ಅನೇಕ ಸಾಮಾನ್ಯ ದಂತ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಹಲ್ಲುನೋವು, ಒಸಡು ಊತ ಮತ್ತು ಒಸಡು ರಕ್ತಸ್ರಾವ ನಿವಾರಿಸಲು ಸಹಾಯ ಮಾಡುತ್ತದೆ. ಪಯೋರಿಯಾ ಸಮಸ್ಯೆ ಇದ್ದರೆ, ಈ ದಂತಮಂಜನದ ನಿಯಮಿತ ಬಳಕೆಯಿಂದ ಒಸಡುಗಳನ್ನು ಬಲಪಡಿಸಬಹುದು. ಇದು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಲು ಮತ್ತು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದುರ್ಬಲ ಹಲ್ಲುಗಳನ್ನು ಬಲಪಡಿಸಲು ಮತ್ತು ಕುಳಿಗಳನ್ನು ತಡೆಗಟ್ಟಲು ಸಹ ಇದನ್ನು ಬಳಸಲಾಗುತ್ತದೆ. ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಇದನ್ನು ದೀರ್ಘಕಾಲೀನ ಬಳಕೆಗೆ ಸಹ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ದಿವ್ಯ ಟೂತ್‌ಪೇಸ್ಟ್‌ನಲ್ಲಿರುವ ಪದಾರ್ಥಗಳು ಯಾವುವು?

ಹಲ್ಲು ಮತ್ತು ಒಸಡುಗಳಿಗೆ ಪ್ರಯೋಜನಕಾರಿ ಎಂದು ಹೇಳಲಾಗುವ ಹಲವಾರು ಆಯುರ್ವೇದ ಪದಾರ್ಥಗಳನ್ನು ಈ ದಿವ್ಯ ದಂತಮಂಜನ್ ಒಳಗೊಂಡಿದೆ. ಬೇವು ಮತ್ತು ಬಾಬುಲ್ (ಅಗಸೆ) ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಹೆಸರುವಾಸಿಯಾಗಿದೆ. ಲವಂಗವು ಹಲ್ಲುನೋವುಗಳನ್ನು ನಿವಾರಿಸುತ್ತದೆ ಎಂದು ತಿಳಿದುಬಂದಿದೆ. ವಜ್ರದಂತಿ ಒಸಡುಗಳನ್ನು ಬಲಪಡಿಸುತ್ತದೆ . ಪುದೀನ ಬಾಯಿಯನ್ನು ತಾಜಾಗೊಳಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಒಟ್ಟಾಗಿ, ಈ ನೈಸರ್ಗಿಕ ಪದಾರ್ಥಗಳು ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು

ದಿವ್ಯ ದಂತಮಂಜನ್ ಟೂತ್ ಪೇಸ್ಟ್ ಹೇಗೆ ಬಳಸುವುದು?

ದಿವ್ಯ ದಂತಮಂಜನವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಬಳಸಬಹುದು. ಹಲ್ಲುಜ್ಜುವ ಬ್ರಷ್ ಅಥವಾ ಬೆರಳಿಗೆ ಸ್ವಲ್ಪ ಪೇಸ್ಟ್ ಹಚ್ಚಿ ಮತ್ತು ಅದನ್ನು ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ನಿಧಾನವಾಗಿ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳಿಗಾಗಿ, ನಿಯಮಿತವಾಗಿ ಬಳಸಿ. ಅತಿಯಾದ ಪೇಸ್ಟ್ ಹಾಕಿಕೊಂಡು ಉಜ್ಜುವುದನ್ನು ತಪ್ಪಿಸಿ. ನಿಮ್ಮ ಹಲ್ಲುಗಳು ಅಥವಾ ಒಸಡುಗಳ ಸಮಸ್ಯೆ ನಿವಾರಣೆ ಆಗದಿದ್ದರೆ ದಂತ ವೈದ್ಯರನ್ನು ಸಂಪರ್ಕಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

600 ಕ್ಕೂ ಹೆಚ್ಚು ರನ್‌ಗಳ ಹ್ಯಾಟ್ರಿಕ್; ಮಹಾ ದಾಖಲೆ ಬರೆದ ದೇವದತ್ ಪಡಿಕ್ಕಲ್

Source link

ಭಾರತದ ಪ್ರಧಾನಿಯನ್ನೂ ಟ್ರಂಪ್ ಕಿಡ್ನಾಪ್ ಮಾಡುತ್ತಾರಾ? ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ವಿವಾದ – Kannada News | Will Trump Kidnap India’s PM Modi? Congress Leader Prithviraj Chavan Remark Sparks Controversy

ಮುಂಬೈ, ಜನವರಿ 6: ಭಾರತ-ಅಮೆರಿಕಾ ದೇಶಗಳ ನಡುವಿನ ವ್ಯಾಪಾರ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಇಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪ್ರಸ್ತಾವಿತ ಶೇ. 50ರಷ್ಟು ಸುಂಕವು ಭಾರತ-ಅಮೆರಿಕಾ ನಡುವಿನ ವ್ಯಾಪಾರವನ್ನು ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ಭಾರತದ ರಫ್ತುಗಳನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸುತ್ತದೆ ಎಂದು ಎಚ್ಚರಿಸಿದ ಪೃಥ್ವಿರಾಜ್ ಚೌಹಾಣ್, ವೆನೆಜುವೆಲಾವನ್ನು (Venezuela) ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತದ ಪ್ರಧಾನಿಯನ್ನೂ ಅಪಹರಿಸುತ್ತಾರಾ? ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.

ಅವರ ಈ ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿದೆ. ಇಂದು ವರದಿಗಾರರೊಂದಿಗೆ ಮಾತನಾಡಿದ ಪೃಥ್ವಿರಾಜ್ ಚೌಹಾಣ್, “ಭಾರೀ ಸುಂಕವು ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ವಹಿವಾಟು ಸಾಧ್ಯವಾಗದಂತೆ ಮಾಡುತ್ತದೆ. ಇದು ಭಾರತವು ಪರ್ಯಾಯ ರಫ್ತು ಮಾರುಕಟ್ಟೆಗಳನ್ನು ಹುಡುಕುವಂತೆ ಮಾಡುತ್ತದೆ. ಹಾಗಾದರೆ, ಮುಂದೆ ಏನು? ವೆನೆಜುವೆಲಾದಲ್ಲಿ ನಡೆದಂತಹ ಘಟನೆಯೇ ಭಾರತದಲ್ಲಿ ನಡೆಯುತ್ತದೆಯೇ? ಟ್ರಂಪ್ ನಮ್ಮ ದೇಶದ ಪ್ರಧಾನಿಯನ್ನು ಕೂಡ ಅಪಹರಿಸುತ್ತಾರೆಯೇ?” ಎಂದು ಕೇಳಿದ್ದಾರೆ.

ಇದನ್ನೂ ಓದಿ: ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್​​ಗಿದೆ ಭಾರತದ ನಂಟು; ಇವರೂ ಕೂಡ ಸಾಯಿ ಬಾಬಾ ಭಕ್ತೆ!

ವೆನೆಜುವೆಲಾದ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಟ್ರಂಪ್ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಪರಿಸ್ಥಿತಿಯನ್ನು ಪೃಥ್ವಿರಾಜ್ ಚೌಹಾಣ್ ವೆನೆಜುವೆಲಾದ ಜೊತೆ ಹೋಲಿಕೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪೃಥ್ವಿರಾಜ್ ಚೌಹಾಣ್ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆಪರೇಷನ್ ಸಿಂಧೂರ್ ಬಗ್ಗೆ ಕೂಡ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನವೇ ಭಾರತ ಹಿನ್ನಡೆ ಅನುಭವಿಸಿತ್ತು ಎಂದು ಅವರು ಆರೋಪಿಸಿದ್ದರು. ಆ ಹೇಳಿಕೆಗೆ ರಕ್ಷಣಾ ತಜ್ಞರು ಮತ್ತು ಕೇಂದ್ರ ಸರ್ಕಾರದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅದು ಭಾರತೀಯ ಸೇನೆಗೆ ಮಾಡಿದ ಅವಮಾನ ಎಂದು ಟೀಕೆ ವ್ಯಕ್ತವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜೊತೆ ಸಲ್ಮಾನ್ ಖಾನ್ ಹೊಸ ಸಿನಿಮಾ? – Kannada News | Salman Khan likely to do action comedy movie with The Family Man director Raj DK

ನಟ ಸಲ್ಮಾನ್ ಖಾನ್ (Salman Khan) ಅವರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಕಂಡಿಲ್ಲ. ಬೇರೆ ಹೀರೋಗಳೆಲ್ಲ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದರೆ ಸಲ್ಮಾನ್ ಖಾನ್ ಅವರ ಸಿನಿಮಾಗಳು ಜಸ್ಟ್ ಪಾಸ್ ಆಗಲು ಕಷ್ಟಪಡುತ್ತಿವೆ. ಹಾಗಾಗಿ ಅವರು ಒಂದು ಗೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಅವರು ನಟಿಸಿರುವ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ನಡುವೆ ಅವರು ಹೊಸ ಸಿನಿಮಾದ ಮಾತುಕಥೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೇಳಿಬಂದಿರುವ ಸುದ್ದಿಯ ಪ್ರಕಾರ, ರಾಜ್-ಡಿಕೆ (Raj DK) ಜೊತೆಯಲ್ಲಿ ಸಿನಿಮಾ ಮಾಡಲು ಸಲ್ಮಾನ್ ಖಾನ್ ಆಲೋಚಿಸುತ್ತಿದ್ದಾರೆ.

ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರಿಗೆ ಚಿತ್ರರಂಗದಲ್ಲಿ ಮತ್ತು ವೆಬ್ ಸಿರೀಸ್ ಕ್ಷೇತ್ರದಲ್ಲಿ ಸಖತ್ ಬೇಡಿಕೆ ಇದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಮೂಲಕ ಅವರಿಬ್ಬರು ಅಪಾರ ಖ್ಯಾತಿ ಗಳಿಸಿದ್ದಾರೆ. ಅವರ ಜೊತೆ ಸಲ್ಮಾನ್ ಖಾನ್ ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಈಗಾಗಲೇ ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಅವರು ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಅವರು ಆ್ಯಕ್ಷನ್-ಕಾಮಿಡಿ ಶೈಲಿಯ ಸಿನಿಮಾ ಮಾಡುವ ನಿರೀಕ್ಷೆ ಇದೆ. ನಿರ್ದೇಶಕರು ಹೇಳಿರುವ ಬೇಸಿಕ್ ಐಡಿಯಾ ಕೇಳಿ ಸಲ್ಮಾನ್ ಖಾನ್ ಮೆಚ್ಚಿಕೊಂಡಿದ್ದಾರಂತೆ. ಆದರೆ ಈ ಸಿನಿಮಾ ಸೆಟ್ಟೇರಲು ಇನ್ನೂ ಹಲವು ಅಂಶಗಳು ಕೂಡಿಬರಬೇಕು. ಅಂತಿಮವಾಗಿ ಸಲ್ಮಾನ್ ಖಾನ್ ಅವರು ಗ್ರೀನ್ ಸಿಗ್ನಲ್ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

‘ಎಲ್ಲವೂ ಅಂದುಕೊಂಡಂತೆ ನಡೆದರೆ ಸಲ್ಮಾನ್ ಖಾನ್ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ. 2026ರ ಅಂತ್ಯದ ವೇಳೆ ಸಿನಿಮಾದ ಶೂಟಿಂಗ್ ಆರಂಭಿಸಲು ರಾಜ್ ಮತ್ತು ಡಿಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ’ ಎಂದು ಮೂಲಗಳು ಹೇಳಿರುವುದಾಗಿ ಪಿಂಕ್​ವಿಲ್ಲಾ ವರದಿ ಮಾಡಿದೆ. ಸದ್ಯಕ್ಕೆ ಎಲ್ಲವೂ ಅಂತೆ-ಕಂತೆಗಳ ಹಂತದಲ್ಲಿ ಇವೆ.

ಇದನ್ನೂ ಓದಿ: ‘ಗಲ್ವಾನ್’ ಟ್ರೇಲರ್ ಮೂಲಕ ಟ್ರೋಲ್ ಆದ ಸಲ್ಮಾನ್ ಖಾನ್; ನೆನಪಾಯ್ತು GOT ದೃಶ್ಯ

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ 2025ರಲ್ಲಿ ಬಿಡುಗಡೆ ಆಯಿತು. ಆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದರು. ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸೋತಿತು. ಈಗ ‘ಬ್ಯಾಟಲ್ ಆಫ್ ಗಲ್ಮಾನ್’ ಚಿತ್ರವಾದರೂ ಗೆಲ್ಲುತ್ತಾ ಎಂಬ ಕೌತುಕದೊಂದಿಗೆ ಸಿನಿಪ್ರಿಯರು ಈ ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುದೀರ್ಘ ಜನಸೇವೆಯ ಸಾರ್ಥಕ ಕ್ಷಣ: ನಿಮ್ಮೆಲ್ಲರ ಸೇವೆಗೈಯ್ಯುವ ಈ ಅವಕಾಶಕ್ಕಾಗಿ ಚಿರಋಣಿ; ಸಿಎಂ ಸಿದ್ದರಾಮಯ್ಯ – Kannada News | Siddaramaiah Breaks Devaraja Urs Record; CM Says, I Am Eternally Grateful for the Opportunity to Serve You All

ಬೆಂಗಳೂರು, ಜನವರಿ 06: ದೇವರಾಜ ಅರಸು (Devaraj Urs) ಅವರ ದಾಖಲೆಯನ್ನು ಮುರಿಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಆಪ್ತ ಬಳಗ ಸೇರಿದಂತೆ ರಾಜ್ಯಕೀಯ ಗಣ್ಯರು ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ: ಸಿದ್ದರಾಮಯ್ಯ

ದೀರ್ಘಾವಧಿ ಮುಖ್ಯಮಂತ್ರಿ ಆಗಿ ದಾಖಲೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​​

ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ಕೆಎನ್​​ ರಾಜಣ್ಣ ಖಡಕ್​​ ಮಾತು

ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ ಪ್ರಾರಂಭಗೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸು ವರೆಗೆ ಹಲವಾರು ಮಹನೀಯರು ಈ ಬಂಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಇದನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ದೇವರಾಜ ಅರಸು ದಾಖಲೆ ಬ್ರೇಕ್​​: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ

ಅಧಿಕಾರ, ಸಂಪತ್ತು ಮತ್ತು ಅವಕಾಶಗಳ ಹೆಬ್ಬಾಗಿಲನ್ನು ಸರ್ವರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಸುಸ್ಥಿರವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ ಇಲ್ಲ ಎನ್ನುವುದು ಅರಸರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಅವಕಾಶ ವಂಚಿತ ಸಮುದಾಯಗಳಿಗೆ ಸೇರಿರುವ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದರು. ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ‌ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸಿದರು. ಮೀಸಲಾತಿಯ ಮೂಲಕ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೂಡಾ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಜನಪ್ರತಿನಿಧಿಗಳೆಲ್ಲರಿಗೂ ಈ ಸಾಧನೆ ಪ್ರೇರಣೆಯಾಗಬೇಕು. ಇಂದಿನ ದಿನದ ವಿಶೇಷ ಸಂದರ್ಭದಲ್ಲಿ ನಮಗೆಲ್ಲ ಪ್ರೇರಣಾದಾಯಿಗಳು ಮತ್ತು ಪೂಜನೀಯರೂ ಆಗಿರುವ ಡಿ.ದೇವರಾಜ ಅರಸು ಅವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ? – Kannada News | This small finance bank offers repo level interest rates and daily compounding for savings accounts

ನವದೆಹಲಿ, ಜನವರಿ 6: ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Slice Small Finance Bank) ತನ್ನ ಸೇವಿಂಗ್ಸ್ ಅಕೌಂಟ್​ಗಳಿಗೆ ಫಿಕ್ಸೆಡ್ ಡೆಪಾಸಿಟ್​ನಷ್ಟು (Fixed Deposit) ಬಡ್ಡಿ ಆಫರ್ ಮಾಡುತ್ತಿದೆ. ಅಷ್ಟೇ ಅಲ್ಲ, ಕ್ವಾರ್ಟರ್ ಬದಲು ನಿತ್ಯವೂ ಚಕ್ರ ಬಡ್ಡಿ (interest compounding) ಜಮೆ ಮಾಡುತ್ತದೆ. ಸೇವಿಂಗ್​ ಅಕೌಂಟ್​ಗಳಿಗೆ ಸಾಮಾನ್ಯವಾಗಿ ಶೇ. 3ಕ್ಕಿಂತ ಹೆಚ್ಚು ಬಡ್ಡಿ ಸಿಗುವುದು ವಿರಳ. ಅಂಥದ್ದರಲ್ಲಿ ಸ್ಲೈಸ್ ಬ್ಯಾಂಕ್ ತನ್ನಲ್ಲಿರುವ ಸೇವಿಂಗ್ಸ್ ಅಕೌಂಟ್​ಗಳಿಗೆ ಶೇ. 5.25ರವಷ್ಟು ವಾರ್ಷಿಕ ಬಡ್ಡಿ ಕೊಡುತ್ತಿದೆ.

ನಿತ್ಯವೂ ಚಕ್ರಬಡ್ಡಿ ಸಿಗುತ್ತೆ…

ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ತೆರೆಯಲಾಗುವ ಉಳಿತಾಯ ಖಾತೆಗಳಿಗೆ ಶೇ. 5.25 ವಾರ್ಷಿಕ ಬಡ್ಡಿ ಜೊತೆಗೆ ನಿತ್ಯ ಚಕ್ರ ಬಡ್ಡಿ ಜಮೆ ಆಗುತ್ತದೆ. ಬೇರೆ ಬ್ಯಾಂಕುಗಳಲ್ಲಿ ತ್ರೈಮಾಸಿಕವಾಗಿ ಬಡ್ಡಿ ಕಾಂಪೌಂಡಿಂಗ್ ಆಗುತ್ತದೆ. ಈ ಸಣ್ಣ ಬ್ಯಾಂಕಲ್ಲಿ ನಿತ್ಯವೂ ಕಾಂಪೌಂಡಿಂಗ್ ಆಗುತ್ತದೆ. ಒಂದು ದಿನದಲ್ಲಿ ಸೇವಿಂಗ್ಸ್ ಅಕೌಂಟ್​ನಲ್ಲಿ ಎಷ್ಟೇ ಬ್ಯಾಲನ್ಸ್ ಇರಲಿ ಅಷ್ಟಕ್ಕೂ ಆ ದಿನದ ಬಡ್ಡಿ ಸೇರಿಸಲಾಗುತ್ತದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ದಿನವೂ ಚಕ್ರಬಡ್ಡಿ ಸೇರ್ಪಡೆಯಾದರೆ ಎಷ್ಟು ಲಾಭ?

ಬೇರೆ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಬಡ್ಡಿ ಮೂರು ತಿಂಗಳಿಗೊಮ್ಮೆ ಕಾಂಪೌಂಡಿಂಗ್ ಆಗುತ್ತದೆ. ಕಾಂಪೌಂಡಿಂಗ್ ಎಂದರೆ ಬಡ್ಡಿ ಹಣಕ್ಕೂ ಬಡ್ಡಿ ಸೇರಿಸುವ ಚಕ್ರಬಡ್ಡಿ. ನೀವು ವಾರ್ಷಿಕ ಶೇ. 7.75 ಬಡ್ಡಿ ಇರುವ ಫಿಕ್ಸೆಡ್ ಡೆಪಾಸಿಟ್​ನಲ್ಲಿ 1 ಲಕ್ಷ ರೂ ಠೇವಣಿ ಇಟ್ಟಾಗ, ತ್ರೈಮಾಸಿಕವಾಗಿ ಚಕ್ರಬಡ್ಡಿ ಜಮೆ ಆದರೆ ಒಂದು ವರ್ಷದಲ್ಲಿ 7,946 ರೂ ಬಡ್ಡಿ ಸಿಗುತ್ತದೆ.

ಅದೇ ದಿನದ ಚಕ್ರಬಡ್ಡಿಯಾದರೆ ಒಂದು ವರ್ಷದಲ್ಲಿ ಒಂದು ಲಕ್ಷ ರೂ ಹಣಕ್ಕೆ ಸಿಗುವ ಬಡ್ಡಿ ಹಣ 7,980 ರೂ ಆಗುತ್ತದೆ. ತ್ರೈಮಾಸಿಕ ಚಕ್ರಬಡ್ಡಿಗೆ ಹೋಲಿಸಿದರೆ ದಿನದ ಚಕ್ರಬಡ್ಡಿಯಿಂದ ಸಿಗುವ ಲಾಭ ಸಣ್ಣದಾದರೂ ಅದು ಲಾಭವೇ.

ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?

ವಾರ್ಷಿಕ ಬಡ್ಡಿದರ ಶೇ. 5.25 ಇದ್ದಲ್ಲಿ ಒಂದು ಲಕ್ಷ ರೂ ಹಣಕ್ಕೆ ಒಂದು ವರ್ಷದಲ್ಲಿ ನಿತ್ಯದ ಚಕ್ರಬಡ್ಡಿ ಹಾಕಿದಾಗ 22 ರೂ ಹೆಚ್ಚು ರಿಟರ್ನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಕೊನೆಯ ಸಿನಿಮಾ ಸೌದಿ ಅರೆಬಿಯಾನಲ್ಲಿ ಬ್ಯಾನ್: ಕಾರಣವೇನು? – Kannada News | Vijay starrer Jana Nayagan movie facing ban in Saudi Arabia

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಬೆಂಗಳೂರು ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದೆ. ರಾಜಕೀಯಕ್ಕೆ ಎಂಟ್ರಿ ನೀಡಿರುವ ದಳಪತಿ ವಿಜಯ್, ‘ಜನ ನಾಯಗನ್’ ಬಳಿಕ ತಾವು ಇನ್ಯಾವುದೇ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಹೀಗಾಗಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಜಯ್​ಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಮೆರಿಕ, ಮಲೇಷ್ಯಾ, ಸಿಂಗಪುರ, ಗಲ್ಫ್ ರಾಷ್ಟ್ರಗಳಲ್ಲೂ ಅಭಿಮಾನಿಗಳನ್ನು ವಿಜಯ್ ಹೊಂದಿದ್ದಾರೆ. ಆದರೆ ಇದೀಗ ಸೌದಿ ಅರೆಬಿಯಾನಲ್ಲಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆಯಂತೆ.

ಸೌದಿ ರಾಷ್ಟ್ರಗಳಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಸ್ವತಃ ಸೌದಿ ಜನರೂ ಸಹ ಭಾರತದ ಸಿನಿಮಾಗಳ ಅಭಿಮಾನಿಗಳಾಗಿದ್ದಾರೆ. ಆದರೆ ಆಗಾಗ್ಗೆ ಕೆಲವು ಭಾರತೀಯ ಸಿನಿಮಾಗಳ ಮೇಲೆ ನಿಷೇಧಗಳನ್ನು ಹೇರುತ್ತಲೇ ಬಂದಿವೆ ಗಲ್ಫ್ ರಾಷ್ಟ್ರಗಳು. ಇತ್ತೀಚೆಗಷ್ಟೆ ಬಿಡುಗಡೆ ಆಗಿ ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಧುರಂಧರ್’ ಸಿನಿಮಾಕ್ಕೂ ಸಹ ಸೌದಿ ರಾಷ್ಟ್ರ ನಿಷೇಧ ಹೇರಿದೆ. ಇದೀಗ ವಿಜಯ್ ಅವರ ಕೊನೆಯ ಸಿನಿಮಾಕ್ಕೂ ನಿಷೇಧ ಹೇರಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಸಾಮಾನ್ಯವಾಗಿ ಪಾಕಿಸ್ತಾನ ಅಥವಾ ಯಾವುದೇ ಮುಸ್ಲಿಂ ರಾಷ್ಟ್ರ ವಿರೋಧಿ ಅಂಶಗಳು ಅಥವಾ ಇಸ್ಲಾಂ ಧರ್ಮವನ್ನು ಟೀಕಿಸುವ, ಮುಸ್ಲಿಂ ರಾಷ್ಟ್ರಗಳನ್ನು ಖಳರಂತೆ ಬಿಂಬಿಸುವ ಸಿನಿಮಾಗಳನ್ನು ಸೌದಿ ರಾಷ್ಟ್ರಗಳು ನಿಷೇಧಿಸುತ್ತಾ ಬಂದಿವೆ. ‘ಧುರಂಧರ್’ ಸಿನಿಮಾ ನಿಷೇಧಕ್ಕೂ ಇದೇ ಕಾರಣವಾಗಿತ್ತು. ಇದೀಗ ‘ಜನ ನಾಯಗನ್’ ನಿಷೇಧಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾದ ವಿಲನ್ ಪಾಕಿಸ್ತಾನದ ವ್ಯಕ್ತಿಯಾಗಿದ್ದು, ಸಿನಿಮಾನಲ್ಲಿ ಸಹ ಪಾಕಿಸ್ತಾನದ ವಿರುದ್ಧ, ಪಾಕ್ ಸೈನ್ಯದ ವಿರುದ್ಧ ಸಂಭಾಷಣೆಗಳು, ದೃಶ್ಯಗಳು ಇವೆ. ಟ್ರೈಲರ್​​ನಲ್ಲಿ ಸಹ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಇದೇ ಕಾರಣಕ್ಕೆ ‘ಜನ ನಾಯಗನ್’ ಸಿನಿಮಾಕ್ಕೆ ಸೌದಿಯಲ್ಲಿ ಸೆನ್ಸಾರ್ ನಿರಾಕರಿಸಲಾಗಿದೆಯಂತೆ. ಆದರೆ ಚಿತ್ರತಂಡವು, ಕೆಲವು ಸಂಭಾಷಣೆಗಳನ್ನು ಬದಲಾಯಿಸಿ, ಮ್ಯೂಟ್ ಮಾಡಿ ಹಾಗೂ ಕೆಲವನ್ನು ಡಿಲೀಟ್ ಮಾಡುವ ಮೂಲಕ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಪಡೆಯಲು ಮುಂದಾಗಿದೆ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾನಲ್ಲಿ ವಿಜಯ್ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬಿಜು ನಟಿಸಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ಇದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ‘ಭಗವಂತ ಕೇಸರಿ’ ರೀಮೇಕ್ ಆದರೂ ಸಹ ಕೆಲವು ಹೆಚ್ಚುವರಿ ದೃಶ್ಯಗಳನ್ನು ಸಿನಿಮಾನಲ್ಲಿ ಸೇರಿಸಲಾಗಿದ್ದು, ವಿಜಯ್ ಅವರ ರಾಜಕೀಯಕ್ಕೆ ಸಹಾಯವಾಗುವಂಥ ದೃಶ್ಯಗಳು, ಸಂಭಾಷಣೆಗಳು ಸಿನಿಮಾನಲ್ಲಿ ಹೇರಳವಾಗಿ ಇರಲಿವೆಯಂತೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

600 ಕ್ಕೂ ಹೆಚ್ಚು ರನ್‌ಗಳ ಹ್ಯಾಟ್ರಿಕ್; ಮಹಾ ದಾಖಲೆ ಬರೆದ ದೇವದತ್ ಪಡಿಕ್ಕಲ್

Source link

ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ – Kannada News | Vijay Deverakonda and Rashmika Mandanna return to India from Italy vacation

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ (Vijay Deverakonda) ಜೊತೆ ಕ್ಲೋಸ್ ಆಗಿರುವುದು ಗೊತ್ತೇ ಇದೆ. ಶೀಘ್ರದಲ್ಲೇ ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಒಟ್ಟಿಗೆ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಇದನ್ನು ಅವರು ಜಗಜ್ಜಾಹೀರು ಮಾಡಿಲ್ಲ. ಬದಲಿಗೆ, ಸಾಧ್ಯವಾದಷ್ಟು ಗುಟ್ಟಾಗಿ ಕಾಲ ಕಳೆದು ಬಂದಿದ್ದಾರೆ. ಆದರೂ ಕೂಡ ಭಾರತಕ್ಕೆ ವಾಪಸ್ ಬಂದ ಕೂಡಲೇ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಎಲ್ಲವೂ ಗೊತ್ತಾಗಿದೆ.

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡಿದ್ದರು. ರಜೆಯ ಮಜಾ ಸವಿಯಲು ಅವರು ವಿದೇಶಕ್ಕೆ ತೆರಳಿದ್ದರು. ಇಟಲಿಯಲ್ಲಿ ಅವರಿಬ್ಬರು ಜೊತೆಯಾಗಿ ಕಾಲ ಕಳೆದಿದ್ದಾರೆ. ಆದರೆ ತಾವಿಬ್ಬರು ಒಟ್ಟಿಗೆ ಇರುವ ಯಾವುದೇ ಫೋಟೋವನ್ನು ಅವರು ಹಂಚಿಕೊಂಡಿಲ್ಲ.

ಜನವರಿ 5ರಂದು ಇಟಲಿಯಿಂದ ಭಾರತಕ್ಕೆ ಮರಳಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರಿಬ್ಬರು ಸಿಂಪಲ್ ಉಡುಗೆ ಧರಿಸಿದ್ದರು. ಇಬ್ಬರೂ ಕೂಡ ಮಾಸ್ಕ್ ಹಾಕಿಕೊಂಡಿದ್ದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

2025ರ ದಸರಾ ಹಬ್ಬದ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಅದನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ. ಎರಡೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಗೌಪ್ಯವಾಗಿ ಎಂಗೇಜ್​ಮೆಂಟ್ ನಡೆದಿತ್ತು. ಯಾವುದೇ ಫೋಟೋಗಳು ಹೊರಬಂದಿಲ್ಲ. ಈಗ ಮದುವೆಯ ತಯಾರಿ ನಡೆಯುತ್ತಿದೆ.

ಇದನ್ನೂ ಓದಿ: ರೋಮ್​​​ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್

ಮೂಲಗಳ ಪ್ರಕಾರ, ಫೆಬ್ರವರಿ 26ರಂದು ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ನಡೆಯಲಿದೆ. ಎಂಗೇಜ್​​ಮೆಂಟ್ ರೀತಿಯೇ ಮದುವೆಯನ್ನು ಕೂಡ ಕೆಲವೇ ಕೆಲವು ಅತಿಥಿಗಳ ಸಮ್ಮುಖದಲ್ಲಿ ಮಾಡಿಕೊಳ್ಳಲು ಈ ಜೋಡಿ ನಿರ್ಧರಿಸಿದೆ ಎನ್ನಲಾಗಿದೆ. ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version